lowborn Crime Incidents 07-11-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >> ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ ದಿನಾಂಕ 13/1/2018           >> -:  ಪತ್ರಿಕಾ ಪ್ರಕಟಣೆ.  :-   ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380... >> >> -: ದಿನಾಂಕ : 19 -12 -17  :- :  ಪತ್ರಿಕಾ ಪ್ರಕಟಣೆ : ಕೋಮು ಪ್ರಚೋದನಕಾರಿ ಹೇಳಿಕೆಗಳ... >> ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 07-11-17

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-197/2017 ಕಲಂ 279,337 ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ:06-11-2017 ರಂದು ಸಾಯಂಕಾಲ 4-00 ಗಂಟೆಗೆ ಪಿರ್ಯಾದಿಯಾದ ಮಹಮದ್‌ ಇಸಾಕ್‌ ಬಿನ್ ಲೇ|| ಅಬ್ದುಲ್‌ ಸತ್ತಾರ್‌ ಸಾಬ್‌, 48 ವರ್ಷ, ಮುಸ್ಲಿಂ, ಕಾರ್ಪೆಂಟರ್‌ ಕೆಲಸ, ಮೊಹಮದ್ದಿಯಾ ಮಸ್ಜಿದ್‌ ಹತ್ತಿರ, 2 ನೇ ಕ್ರಾಸ್, ವಿನೋಬ ನಗರ, ತುಮಕೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಲಖಿತ ದೂರನ ಅಂಶವೇನೆಂದರೆ ನನಗೆ ಮಹಮದ್‌ ಸಲ್ಮಾನ್‌ ಎಂಬ ಮಗನಿದ್ದು, ವರ್ಕ್ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ:05-11-2017 ರಂದು ನನ್ನ ಮಗನಾದ ಮಹಮದ್‌ ಸಲ್ಮಾನ್‌ ರವರು ನನ್ನ ಬಾಬ್ತು ಕೆಎ-06-ಇ.ಝಡ್‌-0088 ನೇ ಹೋಂಡಾ ಡಿಯೋ ದ್ವಿಚಕ್ರ ವಾಹನದಲ್ಲಿ ತುಮಕೂರಿನಿಂದ ಸಿ,ಎಸ್,ಪುರ ಹೋಬಳಿಯ ನೆಟ್ಟೆಕೆರೆ ಗ್ರಾಮದಲ್ಲಿರುವ ದರ್ಗಾಕ್ಕೆ ಹೋಗಲೆಂದು ತನ್ನ ಸ್ನೇಹಿತನಾದ ಮಹಮದ್‌ ಖತೀಭ್‌ ರವರ ಜೊತೆ ಹೋಗಿದ್ದು, ನಂತರ ಅದೇ ದಿವಸ ವಾಪಸ್‌ ತುಮಕೂರಿಗೆ ಬರಲೆಂದು ನನ್ನ ಮಗ ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ಮಹಮದ್ ಖತೀಭ್‌ ರವರು ಹಿಂಬದಿ ಸವಾರನಾಗಿ ಕುಳಿತುಕೊಂಡು ಸಾಯಂಕಾಲ ಸುಮಾರು 06-00 ಗಂಟೆ ಸಮಯದಲ್ಲಿ ಹೆಬ್ಬೂರಿನ ಬಳಿ ಇರುವ ದೊಡ್ಡಯ್ಯನಕಟ್ಟೆ ಪಾಳ್ಯದಲ್ಲಿ ತುಮಕೂರು-ಕುಣಿಗಲ್ ಟಾರ್ ರಸ್ತೆಯಲ್ಲಿ ತುಮಕೂರಿನ ಕಡೆಗೆ ಬರುತ್ತಿರುವಾಗ್ಗೆ, ಎದುರಿಗೆ ತುಮಕೂರು ಕಡೆಯಿಂದ ಕುಣಿಗಲ್‌ ಕಡೆಗೆ ಹೋಗಲು ಬಂದ ಕೆಎ-13-ಎನ್‌-5910 ನೇ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಎಡಭಾಗದಿಂದ ಬಲಭಾಗಕ್ಕೆ ಬಂದು ನನ್ನ ಮಗ ಮಹಮದ್‌ ಸಲ್ಮಾನ್‌ ಹಾಗೂ ಆತನ ಸ್ನೇಹಿತ ಮಹಮದ್‌ ಖತೀಭ್‌ ರವರು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾದ ನನ್ನ ಮಗನಿಗೆ ತಲೆಗೆ ಹಾಗೂ ಕಾಲುಗಳಿಗೆ ಏಟು ಬಿದ್ದು ಗಾಯಗಳಾಗಿದ್ದು, ಮಹಮದ್ ಖತೀಭ್‌ ರವರಿಗೆ ಎರಡೂ ತೊಡೆಗಳು ಮುರಿದಿದ್ದು, ತಲೆಗೆ ಹಾಗೂ ದೇಹದ ಇತರೆ ಭಾಗಗಳಿಗೆ ಏಟು ಬಿದ್ದಿದ್ದು, ಅಘಫಾತಪಡಿಸಿದ ಕಾರಿನ ಚಾಲಕನು ತನ್ನ ಕಾರನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿದ್ದು, ನಂತರ ಸ್ಥಳದಲ್ಲಿದ್ದ ಸಾರ್ವಜನಿಕರು ಗಾಯಗೊಂಡಿದ್ದ ನನ್ನ ಮಗ ಹಾಗೂ ಮಹಮದ್ ಖತೀಭ್‌ ರವರುಗಳನ್ನು ಸ್ಥಳಕ್ಕೆ ಬಂದ 108 ಆಂಬುಲೆನ್ಸ್‌ ವಾಹನದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಸದರಿ ಅಘಫಾತದ ವಿಚಾರವನ್ನು ಗಾಯಗೊಂಡಿದ್ದ ನನ್ನ ಮಗ ಮಹಮದ್‌ ಸಲ್ಮಾನ್ ರವರು ನನಗೆ ಪೋನ್ ಮಾಡಿ ತಿಳಿಸಿದನು. ನಂತರ ನಾನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಬಳಿ ಹೋಗಿ ನೋಡಗಾಗಿ ಅಫಘಾತದಿಂದ ನನ್ನ ಮಗ ಮಹಮದ್ ಸಲ್ಮಾನ್ ಹಾಗೂ ಮಹಮದ್‌ ಖತೀಭ್‌ ರವರುಗಳು ಗಾಯಗೊಂಡಿರುವುದು ನಿಜವಾಗಿತ್ತು. ನಾನು ನನ್ನ ಮಗನನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿದೆನು. ಅಘಫಾತದ ವಿಚಾರ ತಿಳಿದ ಗಾಯಗೊಂಡಿದ್ದ ಮಹಮದ್‌ ಖತೀಭ್ ರವರ ಕುಟುಂಬದವರು ಜಿಲ್ಲಾಸ್ಪತ್ರೆಯ ಬಳಿ ಬಂದು ಮಹಮದ್‌ ಖತೀಫ್‌ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಬೆಂಗಳೂರಿನ ಹೆಗ್ಗಡೆ ನಗರದಲ್ಲಿರುವ ರೀಗಲ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಆದ್ದರಿಂದ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-13-ಎನ್‌-5910 ನೇ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-196/2017 ಕಲಂ 279,337 ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ:06-11-2017 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿಯಾದ ಗಂಗಾಧರಯ್ಯ ಬಿನ್ ಗಂಗಣ್ಣ, 35 ವರ್ಷ, ಒಕ್ಕಲಿಗರು, ವ್ಯವಸಾಯ, ಕುಡುವನಕುಂಟೆ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನನ್ನ ತಂದೆಯವರಾದ ಗಂಗಣ್ಣ ರವರು ದಿನಾಂಕ:31-10-2017 ರಂದು ಬೆಳಿಗ್ಗೆ ಸುಮಾರು 11-00 ಗಂಟೆ ಸಮಯದಲ್ಲಿ ತಮ್ಮ ಬಾಬ್ತು ಕೆಎ-06-ಇ,ಕ್ಯು-4216 ನೇ ಟಿ,ವಿ,ಎಸ್‌ ಎಕ್ಸ್‌ ಎಲ್‌ ಸೂಪರ್‌ ಹೆವಿ ಡ್ಯೂಟಿ ದ್ವಿಚಕ್ರ ವಾಹನದಲ್ಲಿ ನಮ್ಮ ಗ್ರಾಮದಿಂದ ಚಿಕ್ಕಣ್ಣ ಸ್ವಾಮಿ ದೇವಸ್ಥಾನಕ್ಕೆ ಹೋಗಲೆಂದು ಹೋಗಿದ್ದು, ನಂತರ ಮದ್ಯಾಹ್ನ ಸುಮಾರು 12-15 ಗಂಟೆ ಸಮಯದಲ್ಲಿ ಕುರಿ ಬೋರಯ್ಯನಪಾಳ್ಯದ ರಾಜಣ್ಣ ರವರು ನನಗೆ ಪೋನ್‌ ಮಾಡಿ ಇದೇ ದಿವಸ ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ನಿಮ್ಮ ತಂದೆ ಗಂಗಣ್ಣ ರವರು ಹೆಬ್ಬೂರಿನ ಕಡೆಯಿಂದ ಕುಣಿಗಲ್‌ ಕಡೆಗೆ ಕೆಎ-06-ಇ,ಕ್ಯು-4216 ನೇ ಟಿ,ವಿ,ಎಸ್‌ ಎಕ್ಸ್‌ ಎಲ್‌ ಸೂಪರ್‌ ಹೆವಿ ಡ್ಯೂಟಿ ದ್ವಿಚಕ್ರ ವಾಹನದಲ್ಲಿ ಹೆಬ್ಬೂರಿನ ಫ್ರೆಂಡ್ಸ್‌ ಮೆಕಾನಿಕ್ ಗ್ಯಾರೇಜ್‌ನ ಬಳಿ ತುಮಕೂರು-ಕುಣಿಗಲ್ ಟಾರ್ ರಸ್ತೆಯಲ್ಲಿ, ರಸ್ತೆಯ ಎಡಭಾಗದಲ್ಲಿ ಹೋಗುತ್ತಿರುವಾಗ್ಗೆ, ಎದುರುಗಡೆಯಿಂದ ಅಂದರೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೋಗಲು ಬಂದ ಕೆಎ-06-ಪಿ-1875 ನೇ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಎಡಭಾಗದಿಂದ ಬಲಭಾಗಕ್ಕೆ ಬಂದು ನಿಮ್ಮ ತಂದೆ ಗಂಗಣ್ಣ ರವರು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ನಿಮ್ಮ ತಂದೆ ಗಂಗಣ್ಣ ರವರಿಗೆ ಗಾಯಗಳಾಗಿರುತ್ತೇಂತಾ ಪೋನ್ ಮಾಡಿ ತಿಳಿಸಿದರು. ನಂತರ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಅಫಘಾತದಲ್ಲಿ ನನ್ನ ತಂದೆ ಗಂಗಣ್ಣ ರವರಿಗೆ ಗಾಯಗಳಾಗಿರುವುದು ನಿಜವಾಗಿತ್ತು. ನನ್ನ ತಂದೆ ಗಂಗಣ್ಣ ರವರಿಗೆ ಬಲಗಾಲಿಗೆ, ಎಡ ಸೊಂಟಕ್ಕೆ, ತಲೆಗೆ ಹಾಗೂ ದೇಹದ ಇತರೆ ಭಾಗಗಳಿಗೆ ಏಟು ಬಿದ್ದು ರಕ್ತಗಾಯಗಳಾಗಿದ್ದು, ನಂತರ ಗಾಯಗೊಂಡಿದ್ದ ನನ್ನ ತಂದೆ ಗಂಗಣ್ಣ ರವರನ್ನು ನಾನು ಹಾಗೂ ರಾಜಣ್ಣ ಇಬ್ಬರೂ ಸೇರಿಕೊಂಡು ಯಾವುದೋ ಒಂದು ವಾಹನದಲ್ಲಿ ಹೆಬ್ಬೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ನಿಮಾನ್ಸ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುತ್ತೇವೆ. ಅಫಘಾತಪಡಿಸಿದ ಕಾರು ಹಾಗೂ ಅಪಘಾತಕ್ಕೊಳಗಾದ ದ್ವಿಚಕ್ರ ವಾಹನ ಫ್ರೆಂಡ್ಸ್‌ ಗ್ಯಾರೇಜ್‌ನ ಬಳಿ ಇರುತ್ತವೆ. ಆದ್ದರಿಂದ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-06-ಪಿ-1875 ನೇ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಾನು ನನ್ನ ತಂದೆ ಗಂಗಣ್ಣ ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ಕೊಡುತ್ತಿದ್ದೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೊಸಬಡಾವಣೆ ಪೊಲೀಸ್ ಠಾಣಾ ಮೊ,ನಂ-139/2017 U/S 392 R/W 34 IPC

ದಿನಾಂಕ : 06-11-2017 ರಂದು ಮಧ್ಯಾಹ್ನ  2-10  ಗಂಟೆಗೆ ಪಿರ್ಯಾದಿ ಸಾಗರ್ ಬಿನ್ ರಂಗರಾಜು (19) ಕಸ್ತೂರ್ಬಾ ಆಸ್ಪತ್ರೆ ಹತ್ತಿರ, ಎಸ್.ಎಸ್. ಪುರಂ ಮುಖ್ಯ ರಸ್ತೆ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿ: 22-10-2017 ರಂದು ಪಿರ್ಯಾದಿಯು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಬಾಸ್ಕೆಟ್ ಬಾಲ್ ಟೂರ್ನಿಮೆಂಟ್ ಮುಗಿಸಿಕೊಂಡು ರೈಲಿನಲ್ಲಿ  ತುಮಕೂರಿಗೆ ಬಂದು ಬೆಳಗಿನ ಜಾವ 00-50 ಗಂಟೆ ಸಮಯದಲ್ಲಿ ಉಪ್ಪಾರಹಳ್ಳಿ ಪ್ಲೈ ಓವರ್ ಬಳಿ ನಡೆದುಕೊಂಡು ಹೋಗುತ್ತಿರುವಾಗ್ಗೆ ನಾಲ್ಕು ಜನ ಆಸಾಮಿಗಳು  ದ್ವಿ ಚಕ್ರ ವಾಹನದಲ್ಲಿ ಬಂದು ಪಿರ್ಯಾದಿಯನ್ನು ಹೆದರಿಸಿ ಪಿರ್ಯಾದಿ ಬಳಿ ಇದ್ದ ಯುಫೋರಿಯಾ ಮೊಬೈಲ್ ಫೋನ್ ಮತ್ತು ಎಸ್ ಎಸ್ ಪುರಂ, ಕರ್ನಾಟಕ ಬ್ಯಾಂಕ್ ಶಾಖೆಯ ಎಟಿಎಂ ಕಾರ್ಡ್ ಮತ್ತು 1830/- ರೂ ನಗದು ಹಣವಿದ್ದ ಪರ್ಸನ್ನು ಕಿತ್ತುಕೊಂಡು ಹೋಗಿದ್ದು ಈ ಬಗ್ಗೆ ಕ್ರಮ ಕೋರಿ ನೀಡಿದ ದೂರು.

ಹೊಸಬಡಾವಣೆ ಪೊಲೀಸ್ ಠಾಣಾ ಮೊ,ನಂ 140/2017 U/S 341, 323, 504, 506 IPC

ದಿನಾಂಕ : 06-11-2017 ರಂದು ಸಂಜೆ 5-45  ಗಂಟೆಗೆ ಪಿರ್ಯಾದಿ ಪಿರ್ಯಾದಿ ಜಗದೀಶ್ ಬಿನ್ ಲೇಟ್ ಸಣ್ಣಪ್ಪ (36) ಸಹಾಯಕ ಕಂದಾಯಾಧಿಕಾರಿಗಳು ಮಹಾನಗರ ಪಾಲಿಕೆ, ತುಮಕೂರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಪಿರ್ಯಾದಿರವರು   ದಿ: 04-11-02017 ರಂದು ಬೆಳಗ್ಗೆ 7-15  ರಿಂದ 7-45 ಗಂಟೆ ಸಮಯದಲ್ಲಿ ಪಿರ್ಯಾದಿಯು  ಉಡುಪಿ ಡಿಲಕ್ಸ್ ಹೋಟೆಲ್‌ ನಲ್ಲಿ ತಿಂಡಿ ತಿನ್ನುತ್ತಿರುವಾಗ್ಗೆ ಅಲ್ಲಿಗೆ ಬಂದ ಆರೋಪಿ ವಿಶ್ವನಾಥ್ ರವರು ಪಿರ್ಯಾದಿಯನ್ನು ನೋಡಿದವರೇ ನಿನ್ನಿಂದ ನಾನು ಕೋರ್ಟಿಗೆ ಅಲೆಯುವಂತಾಯಿತು ಎಂದು ಹೇಳಿದ್ದು ಪಿರ್ಯಾದಿಯು ತಾನು ಸರ್ಕಾರಿ ಕೆಲಸ ನಿರ್ವಹಿಸಿರುತ್ತೇನೆಂದು ಹೇಳಿದಾಗ ಬೋಳಿಮಗ ನೀನೊಬ್ಬನೇ ಸರ್ಕಾರಿ ಕೆಲಸ ಮಾಡುವುದು, ನಿನ್ನಂತವರನ್ನು ಮುಗಿಸಿದರೆ ಸರಿಹೋಗುತ್ತೆ ಎಂದು ಹೇಳಿದವರೇ ಗಲಾಟೆ ಮಾಡಿದ್ದು ಪಿರ್ಯಾದಿಯು ಅಲ್ಲಿಂದ ಹೊರಡುವಾಗ್ಗೆ ಅವರನ್ನು ಮುಂದೆ ಹೋಗದಂತೆ ಅಡ್ಡಗಟ್ಟಿ ನಿಲ್ಲಿಸಿಕೊಂಡು ಪಿರ್ಯಾದಿ ಕೊರಳಪಟ್ಟಿಯನ್ನು ಹಿಡಿದು ಎಳೆದಾಡಿ, ಕುತ್ತಿಗೆಯನ್ನು ಹಿಸುಕಿ ನೋವು ಪಡಿಸಿರುತ್ತಾರೆ ಈ ಬಗ್ಗೆ ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 49 guests online
Content View Hits : 231878