lowborn Crime Incidents 06-11-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ.16/08/2018 ತುಂಬೆ (ತುಮಕೂರು ಬೈಸಿಕಲ್ ಪೊಲೀಸ್)     ಜನಸ್ನೇಹಿ... >> :: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 06-11-17

ಅಮೃತೂರು ಪೊಲೀಸ್‌ ಠಾಣಾ ಮೊನಂ-204/2017, ಕಲಂ-279, 337, 304(ಎ) ಐಪಿಸಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ: 06-11-2017 ರಂದು ಬೆಳಿಗ್ಗೆ 9-20 ಗಂಟೆಗೆ ಪಿರ್ಯಾದಿ ಕೆ.ವಿ ನಾಗರಾಜು ಬಿನ್ ವೆಂಕಟಪ್ಪ, 32 ವರ್ಷ, ಒಕ್ಕಲಿಗರು, ವ್ಯವಸಾಯ, ಕಗ್ಗೆರೆ ಗ್ರಾಮ, ಎಡೆಯೂರು ಹೋಬಳಿ, ಕುಣಿಗಲ್ ತಾಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ: 05-11-2017 ರಂದು ರಾತ್ರಿ 9-35 ಗಂಟೆ ಸಮಯದಲ್ಲಿ ನಾಗೇಗೌಡನಪಾಳ್ಯದ ಗೇಟ್ ನಲ್ಲಿರುವ ಇರುವ ನನ್ನ ಆಪೀಸ್ ಯಶಸ್ ಅರ್ಥ್ ಮೂವರ್ಸ್ ಆಪೀಸ್ ಮುಂಭಾಗ ನಾನು ಹಾಗೂ ನನ್ನ ಸ್ನೇಹಿತ ಲಕ್ಷ್ಮಣ್ ಗೌಡ ನಿಂತಿರುವ ಸಮಯದಲ್ಲಿ ನನ್ನ ಸ್ನೇಹಿತರುಗಳಾದ ನಾಗರಾಜು ಬಿನ್ ಗಿರಿಯಪ್ಪ  ಮತ್ತು ಟಿ.ಎಂ ವೆಂಕಟೇಶ ಬಿನ್ ಲೇಟ್ ಮನವಳ್ಳಯ್ಯ ಇವರುಗಳು ಕೆಎ-05, ಇಎಸ್-95 ಟಿವಿಎಸ್ ವಿಕ್ಟರ್ ವಾಹನದಲ್ಲಿ ತಮ್ಮ ಊರಾದ ತುವ್ವೇಕೆರೆಗೆ ಹೋಗಲು ನಾಗೇಗೌಡನಪಾಳ್ಯದ ಗೇಟ್ ಬಳಿ ರಸ್ತೆ ಕ್ರಾಸ್ ಮಾಡಲು ಎನ್.ಹೆಚ್-75 ರಸ್ತೆಯ ಪುಟ್ ಪಾತ್ ನಲ್ಲಿ ನಿಂತಿರುವಾಗ ಅದೇ ಸಮಯದಲ್ಲಿ ಬೆಂಗಳೂರು ಕಡೆಯಿಂದ ಹಾಸನ ಕಡೆಗೆ ಹೋಗಲು ಬಂದಂತಹ ಒಂದು ಕಾರು ಅದರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಾಗೇಗೌಡನಪಾಳ್ಯ ಗೇಟ್ ಬಳಿ ರಸ್ತೆ ಕ್ರಾಸ್ ಮಾಡಲು ಪುಟ್ ಪಾತ್ ನಲ್ಲಿ ನಿಂತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ನಾನು ಮತ್ತು ಲಕ್ಷ್ಮಣ್ ಗೌಡ ಇಬ್ಬರೂ ಹೋಗಿ ನೋಡಲಾಗಿ ಕಾರು ಚಾಲಕ ತನ್ನ ವಾಹನವನ್ನು  ನಿಲ್ಲಿಸದೇ ಹೋಗುತ್ತಿದ್ದನು. ಆಗ ನನಗೆ ಸೇರಿದ ಬೈಕ್ ನಲ್ಲಿ ನಾನು ಮತ್ತು ಲಕ್ಷ್ಮಣ್ ಗೌಡ ಹಿಂಬಾಲಿಸಿಕೊಂಡು ಹೋದಾಗ ಹೇಮಾವತಿ ಕ್ರಾಸ್ ಬಳಿ ಆತನನ್ನು ತಡೆದು ನಿಲ್ಲಿಸಿದಾಗ ಸದರಿ ಕಾರ್ ಚಾಲಕ ತನ್ನ ಕಾರನ್ನು ಹೇಮಾವತಿ ಕ್ರಾಸ್ ಬಳಿ ಬಿಟ್ಟು ಓಡಿ ಹೋದನು. ಆಗ ನಾವು ಸದರಿ ವಾಹನದ ನಂಬರ್ ನೋಡಲಾಗಿ ಕೆಎ-52, ಎ-2564 ಹುಂಡೈ ಎಕ್ಸೆಂಟ್ ಕಾರೆಂದು ತಿಳಿದಿರುತ್ತದೆ. ನಂತರ ಅದೇ ಬೈಕ್ ನಲ್ಲಿ ಸ್ಥಳಕ್ಕೆ ಬಂದು ನೋಡಲಾಗಿ ಹಿಂಬದಿ ಸವಾರನಾದ  ಟಿ.ಎಂ ವೆಂಕಟೇಶ ಬಿನ್ ಮನವಳ್ಳಯ್ಯರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಬೈಕ್ ನ ಚಾಲಕರಾದ ನಾಗರಾಜುರವರಿಗೆ ಸೊಂಟಕ್ಕೆ ಮತ್ತು ತಲೆಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು ಆತನನ್ನು ಅಂಬ್ಯುಲೆನ್ಸ್ ನಲ್ಲಿ ಎಸಿ ಗಿರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಾಖಲು ಮಾಡಿ ನನ್ನ ಸ್ನೇಹಿತನಾದ ಲಕ್ಷ್ಮಣ್ ಗೌಡನು ಮೃತ ವೆಂಕಟೇಶನ ಶವವನ್ನು ಅಂಬ್ಯುಲೆನ್ಸ್ ನಲ್ಲಿ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅವರ ಸಂಬಂದಿಕರಿಗೆ ತಿಳಿಸಿ ಈಗ ಬಂದು ತಡವಾಗಿ ಕಂಪ್ಲೇಂಟ್ ನೀಡುತ್ತಿದ್ದೇನೆ. ಮೇಲ್ಕಂಡ ಅಪಘಾತವು ಕಾರಿನ ನಂಬರ್ ಕೆಎ-52, ಎ-2564 ನೇ ಕಾರಿನ ಚಾಲಕನ ಅಜಾಗರೂಕತೆಯಿಂದ ಆಗಿರುತ್ತದೆ. ಆದ್ದರಿಂದ ಮೇಲ್ಕಂಡ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿ ಸೂಕ್ತ ನ್ಯಾಯ ಒದಗಿಸಿಕೊಡಬೇಕೆಂದು ಕೋರುತ್ತಿದ್ದೇನೆ ಎಂದು ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-195/2017 ಕಲಂ 279,337 ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ  05-11-2017 ರಂದು ಮಧ್ಯಾಹ್ನ 12-30 ಗಂಟೆಗೆ ಪಿರ್ಯಾದುದಾರರಾದ ಜಿ,ಬೊಮ್ಮೇಗೌಡ ಬಿನ್ ಗೌಡಪ್ಪ, 47 ವರ್ಷ, ಒಕ್ಕಲಿಗರು, ಇಂಜಿನಿಯರ್‌, ಅಂಜನಾದ್ರಿ ನಿಲಯ, 1 ನೆ ಮೈನ್‌, 5 ನೇ ‘ಎ’ ಕ್ರಾಸ್‌, ಹನುಮಂತಪುರ, ತುಮಕೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಹಾಲಿ ಕುಣಿಗಲ್‌ನಲ್ಲಿ ಬಿಲ್ಡಿಂಗ್‌ ಕೆಲಸ ಮಾಡಿಸುತ್ತಿರುತ್ತೇನೆ. ದಿನಾಂಕ:04-11-2017 ರಂದು ನಾನು ನನ್ನ ಬಾಬ್ತು ದ್ವಿಚಕ್ರ ವಾಹನದಲ್ಲಿ ಹಾಗೂ ನನ್ನ ತಮ್ಮನಾದ ಚಂದ್ರಶೇಖರ್,ಜಿ ರವರು ತಮ್ಮ ಬಾಬ್ತು ಕೆಎ-06-ಸಿ-3693 ನೇ ನಂಬರ್‌ನ ಮಹೀಂದ್ರ ಮ್ಯಾಕ್ಸಿಮೋ ವಾಹನದಲ್ಲಿ ಫಕ್ರುದ್ದೀನ್‌ ರವರ ಜೊತೆಗೆ ತುಮಕೂರಿನಿಂದ ಮಿನಿ ಗೂಡ್ಸ್‌ ವಾಹನದಲ್ಲಿ ಬಿಲ್ಡಿಂಗ್‌ಗೆ ಸಂಬಂದಪಟ್ಟ ಸಾಮಗ್ರಿಗಳನ್ನು ಹಾಕಿಕೊಂಡು ಕುಣಿಗಲ್‌ಗೆ ಹೋಗಲೆಂದು ಬೆಳಿಗ್ಗೆ ಸುಮಾರು 10-15 ಗಂಟೆ ಸಮಯದಲ್ಲಿ ನಾಗವಲ್ಲಿಯ ಪೆಟ್ರೋಲ್‌ ಬಂಕ್‌ನ ಬಳಿ ಹೋಗುತ್ತಿರುವಾಗ್ಗೆ, ನಾನು ಹಿಂಭಾಗದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದೆನು. ನನ್ನ ಮುಂಭಾಗದಲ್ಲಿ ನನ್ನ ತಮ್ಮ ಚಂದ್ರಶೇಖರ್‌,ಜಿ ರವರು ಮಿನಿ ಲಗೇಜು ವಾಹನವನ್ನು ತುಮಕೂರು ಕಡೆಯಿಂದ ಕುಣಿಗಲ್‌ ಕಡೆಗೆ ರಸ್ತೆಯ ಎಡಭಾಗದಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ್ಗೆ, ಅದೇ ಸಮಯಕ್ಕೆ ನಮ್ಮ ಎದುರಿಗೆ ಕುಣಿಗಲ್‌ ಕಡೆಯಿಂದ ತುಮಕೂರು ಕಡೆಗೆ ಬರುತ್ತಿದ್ದ ಒಂದು ಮಹೀಂದ್ರಾ ಬೊಲೆರೋ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಎಡಭಾಗದಿಂದ ಬಲಭಾಗಕ್ಕೆ ಬಂದು ನನ್ನ ಮುಂಭಾಗದಲ್ಲಿ ನನ್ನ ತಮ್ಮ ಚಂದ್ರಶೇಖರ್,ಜಿ ರವರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಮಿನಿ ಲಗೇಜು ವಾಹನಕ್ಕೆ ಡಿಕ್ಕಿ ಹೊಡೆಸಿ ಅಫಘಾತಪಡಿಸಿದನು. ಅಫಘಾತಪಡಿಸಿದ ಬೊಲೇರೋ ವಾಹನದ ಚಾಲಕ ತನ್ನ ವಾಹನವನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋದನು. ನಂತರ ನಾನು ಹತ್ತಿರ ಹೋಗಿ ಅಪಘಾತಪಡಿಸಿದ ಬೊಲೇರೋ ವಾಹನದ ನಂಬರ್ ನೋಡಲಾಗಿ ಕೆಎ-43-ಎಂ-6507 ಆಗಿತ್ತು. ಮಿನಿ ಗೂಡ್ಸ್‌ ವಾಹನದ ಚಾಲಕನಾದ ನನ್ನ ತಮ್ಮ ಚಂದ್ರಶೇಖರ್,ಜಿ ರವರಿಗೆ ಬಲ ಕೈಗೆ, ಎಡಗಾಲಿಗೆ ಹಾಗೂ ದೇಹದ ಇತರೆ ಭಾಗಗಳಿಗೆ ಏಟು ಬಿದ್ದು ರಕ್ತಗಾಯಗಳಾಗಿದ್ದವು. ಹಾಗೂ ಸದರಿ ಮಿನಿ ಗೂಡ್ಸ್‌ ವಾಹನದ ಮುಂಭಾಗದ ಎಡಭಾಗದಲ್ಲಿ ಕುಳಿತ್ತಿದ್ದ ಫಕ್ರುದ್ದೀನ್‌ ರವರಿಗೆ ಬಲಭುಜಕ್ಕೆ ಹಾಗೂ ದೇಹದ ಇತರೆ ಭಾಗಗಳಿಗೆ ಏಟು ಬಿದ್ದು ರಕ್ತಗಾಯಗಳಾಗಿದ್ದವು. ನಂತರ ಗಾಯಗೊಂಡಿದ್ದ ನನ್ನ ತಮ್ಮ ಚಂದ್ರಶೇಖರ್‌,ಜಿ ಹಾಗೂ ಫಕ್ರುದ್ದೀನ್‌ ರವರುಗಳನ್ನು ಸಾರ್ವಜನಿಕರ ಸಹಾಯದಿಂದ ಸ್ಥಳಕ್ಕೆ ಬಂದ ಯಾವುದೋ ಒಂದು ವಾಹನದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಹೇಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದೆನು. ಆದ್ದರಿಂದ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-43-ಎಂ-6507 ನೇ ಬೊಲೆರೋ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಾನು ಗಾಯಗೊಂಡಿದ್ದ ಚಂದ್ರಶೇಖರ್,ಜಿ ಮತ್ತು ಫಕ್ರುದ್ದೀನ್‌ ರವರುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಮೇಲ್ಕಂಡ ಎರಡೂ ವಾಹನಗಳು ಕೃತ್ಯ ನಡೆದ ಸ್ಥಳದ ರಸ್ತೆಯ ಬದಿಯಲ್ಲಿ ಇರುತ್ತವೆ, ಎಂತಾ ನೀಡಿದ ದೂರನ್ನು ಪಡೆದು ಠಾಣಾ ಮೊ.ನಂ-195/2017 ಕಲಂ 279, 337 ಐ,ಪಿ,ಸಿ ರೆ/ವಿ 134(ಎ)&(ಬಿ), 187 ಐ,ಎಂ,ವಿ ಆ್ಯಕ್ಟ್‌ ರೀತ್ಯಾ ಕೇಸು ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ; ಮೊ ನಂ: 215/2017 ಕಲಂ: 143 148 326 506 ರೆವಿ 149 ಐಪಿಸಿ

ದಿನಾಂಕ 05-11-2017 ರಂದು ಮಧ್ಯಾಹ್ನ 15;30 ಸಮಯದಲ್ಲಿ  ಬೆಂಗಳೂರು ಗೊಲ್ಲರಹಟ್ಟಿ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಕೆ ಆರ್ ಶಿವರಾಮಯ್ಯ ಬಿನ್ ಲೇ ರಾಮಲಿಂಗಯ್ಯ ರವರು ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಬಂದು ಹೆಚ್ ಸಿ-248, ಕುಮಾರ್ ರವರು  ಠಾಣೆಗೆ ಹಾಜರುಪಡಿಸಿದ್ದರ ಅಂಶವೇನೆಂದರೆ  ಪಿರ್ಯಾದಿಯು ಕೊಡವತ್ತಿ ಗ್ರಾಮದ ಸರ್ವೆ ನಂಬರ್ 262 ರಲ್ಲಿನ 4 ಎಕರೆ 38 ಗುಂಟೆ ಜಮೀನನ್ನು ಅವರ ಗ್ರಾಮದ ಟಿ.ಆರ್ ಶಿವಲಿಂಗಯ್ಯ ಬಿನ್ ರಾಮಣ್ಣ ರವರಿಂದ ಜಿ ಪಿ ಎ ಮಾಡಿಸಿಕೊಂಡು ತಾನೇ ಆ ಜಮೀನಿನಲ್ಲಿ ಅನುಭವದಲ್ಲಿದ್ದು, ದಿನಾಂಕ: 02-11-2017 ರಂದು ಸದರಿ ಜಮೀನಿನಲ್ಲಿ ಕೆಲಸಕ್ಕೆಂದು ಬೆಸಗರಹಳ್ಳಿಯ ಮಹೇಶ, ಮತ್ತು ನಲ್ಲಹಳ್ಳಿಯ ವಿಜಯೇಂದ್ರ ರವರನ್ನು ಕರೆದುಕೊಂಡು ಬಂದು ಕೆಲಸ ಮಾಡಿಸುತ್ತಿದ್ದಾಗ ಸಂಜೆ 05-00 ಗಂಟೆಯಲ್ಲಿ ಪಿರ್ಯಾದಿಯ ಗ್ರಾಮದ ಸಿದ್ದಯ್ಯ ಬಿನ್ ನಂಜಯ್ಯ, ಜಗದೀಶ ಬಿನ್ ಸಿದ್ದಯ್ಯ, ರತ್ನಮ್ಮ ಕೋಂ ಜಗದೀಶ, ಪವನ್ ಬಿನ ಜಗದೀಶ,  ಅರ್ಪಿತ ಬಿನ್ ಜಗದೀಶ ರವರು ಪಿರ್ಯಾದುದಾರರು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದು “ಈ ಜಾಗ ನಮ್ಮದು ಎಂತ ಏಕಾಏಕಿ ಬಾಯಿಗೆ ಬಂದಂತೆ ಮೇಲ್ಕಂಡ ಎಲ್ಲರೂ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಪಿರ್ಯಾದಿಯನ್ನು ಕೆಳಕ್ಕೆ ಕೆಡವಿಕೊಂಡು ಜಗದೀಶ ಮತ್ತು ಸಿದ್ದಯ್ಯ ರವರು ಕಲ್ಲಿನಿಂದ ಪಿರ್ಯಾದಿಯ ಎಡಪಕ್ಕೆ, ಬಲಪಕ್ಕೆಗೆ, ಹೊಟ್ಟೆ ಭಾಗಕ್ಕೆ, ಬಲವಾಗಿ ಹೊಡೆದಿದ್ದರಿಂದ ಪಿರ್ಯಾದಿಯ ಎಡಭಾಗದ ಪಕ್ಕೆಯ ಮೂಳೆ ಮುರಿದಿದ್ದು, ನಂತರ ಜಗದೀಶನ ಮಗ ಪವನ್ ಎಂಬಾತನು ಅಲ್ಲೇ ಬಿದ್ದಿದ್ದ ದೊಣ್ನೆಯಿಂದ ಪಿರ್ಯಾದಿಯ ಬೆನ್ನಿಗೆ ಹೊಡೆದಿದ್ದು, ಅಷ್ಟರಲ್ಲಿ ಪಿರ್ಯಾದಿಯ ಜಮೀನಿಗೆ ಕೆಲಸಕ್ಕೆ ಬಂದಿದ್ದ ಮಹೇಶ ಮತ್ತು ವಿಜಯೇಂದ್ರ ರವರು ಬಂದು ಜಗಳ ಬಿಡಿಸಿದರು. ಮೇಲ್ಕಂಡವರು ಅಷ್ಟಕ್ಕೂ ಸುಮ್ಮನಾಗದೇ ಪಿರ್ಯಾದಿಯನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ. ನಂತರ ಪಿರ್ಯಾದಿಯ ಜಮೀನಿಗೆ ಕೆಲಸಕ್ಕೆ ಬಂದಿದ್ದವರು ಪಿರ್ಯಾದಿಯ ತಮ್ಮ ಶಿವರಾಜು ರವರಿಗೆ ಪೋನ್ ಮಾಡಿ ವಿಚಾರವನ್ನು ತಿಳಿಸಿದ್ದು ನಂತರ ಯಾವುದೋ ಒಂದು ಬೈಕಿನಲ್ಲಿ ಹುಲಿಯೂರುದುರ್ಗ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು. ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿ ನ ಚಿಕಿತ್ಸೆಗೆ ದಿನಾಂಕ: 03-11-2017 ರಂದು ಬೆಂಗಳೂರಿನ ಗೊಲ್ಲರಹಟ್ಟಿಯ ಶ್ರೀಕೃಷ್ಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಮೇಲ್ಕಂಡ 05 ಜನರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿ ಅಂಶವಾಗಿದ್ದನ್ನು ಪಡೆದು  ಠಾಣಾ ಮೊ ನಂ 215 ಕಲಂ 143 148 326 506 ರೆವಿ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 42 guests online
Content View Hits : 322811