lowborn Crime Incidents 04-11-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ.16/08/2018 ತುಂಬೆ (ತುಮಕೂರು ಬೈಸಿಕಲ್ ಪೊಲೀಸ್)     ಜನಸ್ನೇಹಿ... >> :: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 04-11-17

ಜಯನಗರ ಪೊಲೀಸ್ ಠಾಣಾ ಯುಡಿಆರ್ ನಂ. 20/2017 ಕಲಂ 174 ಸಿಆರ್‌ಪಿಸಿ

ದಿನಾಂಕ: 03-11-2017 ರಂದು ಮದ್ಯಾಹ್ನ 1-00 ಗಂಟೆಗೆ ತುಮಕೂರು ಟೌನ್‌, ಸದಾಶಿವನಗರ ವಾಸಿ ಮಧುಶಿವು ಕೋಂ ಪರಮಶಿವಯ್ಯ ರವರು ನೀಡಿರುವ ಲಿಖಿತ ದೂರಿನ ಅಂಶವೇನೆಂದರೆ, ನಾವು ತುಮಕೂರು ಟೌನ್ ಕುಮುಟಯ್ಯ ಬಡಾವಣೆಯಲ್ಲಿ ಹೊಸದಾಗಿ ಮನೆಯನ್ನು ಕಟ್ಟಿಸುತ್ತಿದ್ದೆವು.  ಈ ದಿನ ದಿನಾಂಕ: 03-11-2017 ರಂದು ಬೆಳಿಗ್ಗೆ 9-00 ಗಂಟೆಯಲ್ಲಿ ಹೊಸದಾಗಿ ಕಟ್ಟಿಸುತ್ತಿರುವ ಮನೆಗೆ ಮೋಲ್ಡ್ ಹಾಕಿಸಿದ್ದರಿಂದ ನೀರು ಹಾಕಿ ಕ್ಯೂರಿಂಗ್ ಮಾಡಿ ಬರುತ್ತೇನೆ ಎಂದು ನಮ್ಮ ಯಜಮಾನರಾದ ಪರಮಶಿವಯ್ಯ ನನ್ನ ಬಳಿ ತಿಳಿಸಿ ಕುಮುಟಯ್ಯ ಬಡಾವಣೆಯಲ್ಲಿ  ನಾವು ಹೊಸದಾಗಿ ಕಟ್ಟಿಸಿದ್ದ ಮನೆಯ ಬಳಿಗೆ ಹೋಗಿದ್ದರು.  ಬೆಳಿಗ್ಗೆ ಸುಮಾರು 11-30 ಗಂಟೆಯಲ್ಲಿ ನಮ್ಮ ಹೊಸಮನೆ ಕಟ್ಟುತ್ತಿರುವ ಮೇಸ್ತ್ರಿ ರಂಗಯ್ಯ ಎಂಬುವರು ನನಗೆ ಪೋನ್ ಮಾಡಿ ನಿಮ್ಮ ಯಜಮಾನರು ಬಿಲ್ಡಿಂಗ್ ಗೆ ಹಾಗೂ ಮೋಲ್ಡ್‌ ಗೆ ನೀರು ಹಾಯಿಸಿ ಕ್ಯೂರಿಂಗ್ ಮಾಡಿ ಸಂಪು ಬಳಿ ವಿದ್ಯುತ್‌ ಸಂಪರ್ಕ ತೆಗೆಯಲು ಹೋಗಿದ್ದವರು ಇದ್ದಕ್ಕಿದ್ದ ಹಾಗೆ ಆಕಸ್ಮಿಕವಾಗಿ ವಿದ್ಯುತ್‌ ಸ್ಪರ್ಶವಾಗಿ ಕಿರುಚಿಕೊಂಡು ಕೆಳಕ್ಕೆ ಬಿದ್ದರು.  ಅಲ್ಲೆ ಕೆಲಸ ಮಾಡುತ್ತಿದ್ದ ನಾನು ಹಾಗೂ ನಮ್ಮ ಕೆಲಸಗಾರರು ಹೋಗಿ ನೋಡಲಾಗಿ ಅವರ ಕೈಯಲ್ಲಿ ನೀರೆತ್ತುವ ಮೋಟಾರ್ ಗೆ ಅಳವಡಿಸಿದ್ದ ಕೇಬಲ್ ವೈರ್‌ ಹಿಡಿದುಕೊಂಡಿದ್ದು ವಿದ್ಯುತ್‌ ಸ್ಪರ್ಶವಾಗಿ ಒದ್ದಾಡುತ್ತಿದ್ದರು. ತಕ್ಷಣ ಕರೆಂಟ್ ಸ್ವಿಚ್ ಆಫ್ ಮಾಡಿ ನಿಮ್ಮ ಯಜಮಾನರನ್ನು ಚಿಕಿತ್ಸೆಗೆ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದೇವೆ ಎಂದು ವಿಚಾರ ತಿಳಿಸಿದರು.  ತಕ್ಷಣ ನಾನು ತುಮಕೂರು ಜಿಲ್ಲಾ ಆಸ್ಪತ್ರೆ ಬಳಿ ಬಂದಿದ್ದು ಅಷ್ಟರಲ್ಲಿ ಮೇಸ್ತ್ರಿ ರಂಗಯ್ಯ ಹಾಗೂ ಇತರರು ನಮ್ಮ ಯಜಮಾನರನ್ನು ಯಾವುದೋ ಆಟೋದಲ್ಲಿ ಆಸ್ಪತ್ರೆಗೆ ಬಂದರು.  ಆಸ್ಪತ್ರೆಯಲ್ಲಿ ನಮ್ಮ ಯಜಮಾನರನ್ನು ವೈದ್ಯರು ತಪಾಸಣೆ ಮಾಡಿ ಮೃತಪಟ್ಟಿರುತ್ತಾರೆಂತ ತಿಳಿಸಿದರು.  ನಮ್ಮ ಯಜಮಾನರಾದ ಪರಮಶಿವಯ್ಯ ರವರು ಹೊಸದಾಗಿ ಕಟ್ಟುತ್ತಿರುವ ಬಿಲ್ಡಿಂಗ್ ಗೆ ನೀರನ್ನು ಹಾಕಿ ವಿದ್ಯುತ್ ನೀರು ಎತ್ತುವ ಮೋಟರ್ ಗೆ ವಿದ್ಯುತ್‌ ಸಂಪರ್ಕ ತೆಗೆಯುವ ವೇಳೆ ಈ ರೀತಿ ಅಕಸ್ಮಿಕವಾಗಿ ವಿದ್ಯುತ್‌ ಸ್ಪರ್ಶವಾಗಿ ಮೃತಪಟ್ಟಿರುತ್ತಾರೆ.  ಸಾವಿನಲ್ಲಿ ಯಾವುದೇ ಅನುಮಾನ ಇರುವುದಿಲ್ಲ. ಮುಂದಿನ ಕ್ರಮ ಜರುಗಿಸಿ ಶವ ಸಂಸ್ಕಾರ ಮಾಡಲು ಅನುವು ಮಾಡಿಕೊಡಬೇಕೆಂದು ಕೋರಿ ನೀಡಿರುವ ಪಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-194/2017 ಕಲಂ 279,337 ಐಪಿಸಿ ರೆ/ವಿ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ:03-11-2017 ರಂದು ಸಂಜೆ 6-00 ಗಂಟೆಗೆ ಪಿರ್ಯಾದಿಯಾದ ಕುಮಾರ್‌,ಆರ್ ಬಿನ್ ರಾಘವೇಂದ್ರ, 28 ವರ್ಷ, ಒಕ್ಕಲಿಗರು, ಡ್ರೈವರ್ ಕೆಲಸ, ಶಿವಗಂಗೆ ರಸ್ತೆ, ಹೊನ್ನುಡಿಕೆ, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ಲಿಖಿತ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನ್ನ ತಾಯಿಯಾದ ಸಿದ್ದಗಂಗಮ್ಮ ರವರು ಅಂಗಡಿ ಸಾಮಾನುಗಳನ್ನು ತರಲೆಂದು ಈ ದಿವಸ ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ನಮ್ಮ ಮನೆಯಿಂದ ನಡೆದುಕೊಂಡು ಹೋಗಿದ್ದು, ನಂತರ ಬೆಳಿಗ್ಗೆ 11-15 ಗಂಟೆ ಸಮಯದಲ್ಲಿ ಹೊನ್ನುಡಿಕೆ ಗ್ರಾಮದ ವಾಸಿಯೇ ಆದ ಶ್ರೀಮಾರುತಿ ಎಂಟರ್‌ ಪ್ರೈಸಸ್‌ ಅಂಗಡಿಯ ಮಾಲೀಕರಾದ ಶಶಿಧರ್‌ ರವರು ನನಗೆ ಪೋನ್‌ ಮಾಡಿ ಇದೇ ದಿವಸ ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ನಿಮ್ಮ ತಾಯಿಯಾದ ಸಿದ್ದಗಂಗಮ್ಮ ರವರು ಹೊನ್ನುಡಿಕೆ ಕಡೆಯಿಂದ ಶಿವಗಂಗೆ ಕಡೆಗೆ ನಮ್ಮ ಅಂಗಡಿಯ ಮುಂಭಾಗದ ಟಾರ್ ರಸ್ತೆಯನ್ನು ನನ್ನ ಅಂಗಡಿಯ ಕಡೆಯಿಂದ ಶ್ರೀ ಮಂಜುನಾಥ ಎಲೆಕ್ಟ್ರಿಕಲ್ಸ್‌ ಅಂಗಡಿಯ ಕಡೆಗೆ ರಸ್ತೆಯನ್ನು ದಾಟುತ್ತಿರುವಾಗ್ಗೆ, ಎದುರಿಗೆ ಶಿವಗಂಗೆ ಕಡೆಯಿಂದ ಹೊನ್ನುಡಿಕೆ ಕಡೆಗೆ ಹೋಗಲು ಬಂದ ಕೆಎ-17-ಕೆ-2954 ನೇ ದ್ವಿಚಕ್ರ ವಾಹನದ ಸವಾರನಾದ ಮಹಮದ್ ಶಬ್ಬೀರ್ ಬಿನ್‌ ಮಹಮದ್ ಅಲಿ, ಹೊನ್ನುಡಿಕೆ ಗ್ರಾಮದ ರವರು ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯನ್ನು ದಾಟುತ್ತಿದ್ದ ನಿಮ್ಮ ತಾಯಿ ಸಿದ್ದಗಂಗಮ್ಮ ರವರಿಗೆ ಡಿಕ್ಕಿ ಹೊಡೆಸಿ ಅಫಘಾತಪಡಿಸಿದನೆಂತಲೂ, ನಂತರ ದ್ವಿಚಕ್ರ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋದನೆಂತಾ ಪೋನ್ ಮಾಡಿ ತಿಳಿಸಿದರು. ನಂತರ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಅಫಘಾತವಾಗಿರುವುದು ನಿಜವಾಗಿತ್ತು. ನನ್ನ ತಾಯಿ ಸಿದ್ದಗಂಗಮ್ಮ ರವರಿಗೆ ಎಡಗಾಲಿಗೆ, ಎಡಪಕ್ಕೆಗೆ, ಮುಖಕ್ಕೆ ಹಾಗೂ ದೇಹದ ಇತರೆ ಭಾಗಗಳಿಗೆ ಏಟು ಬಿದ್ದು ರಕ್ತಗಾಯಗಳಾಗಿದ್ದು, ನಂತರ ನನ್ನ ತಾಯಿ ಸಿದ್ದಗಂಗಮ್ಮ ರವರನ್ನು ನಾನು ಹಾಗೂ ಶಶಿಧರ್‌ ಇಬ್ಬರೂ ಸೇರಿಕೊಂಡು ಸ್ಥಳಕ್ಕೆ ಬಂದ 108 ಆಂಬುಲೆನ್ಸ್‌ ವಾಹನದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದೆವು. ಆದ್ದರಿಂದ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿ ಈ ಅಘಫಾತಕ್ಕೆ ಕಾರಣನಾದ ಕೆಎ-17-ಕೆ-2954 ನೇ ದ್ವಿಚಕ್ರ ವಾಹನದ ಸವಾರನಾದ ಮಹಮದ್‌ ಶಬ್ಬೀರ್‌ ಬಿನ್ ಮಹಮದ್‌ ಅಲಿ ರವರ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಅಘಫಾತಪಡಿಸಿದ ದ್ವಿಚಕ್ರ ವಾಹನ ಶಶಿಧರ್ ರವರ ಶ್ರೀಮಾರುತಿ ಎಂಟರ್‌ ಪ್ರೈಸಸ್‌ ಅಂಗಡಿಯ ಬಳಿ ನಿಲ್ಲಿಸಿರುತ್ತೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಕೊಡಿಗೇನಹಳ್ಳಿ ಪೊಲೀಸ್ ಠಾಣೆ ಮೊ.ನಂ.126/2017  ಕಲಂ:279,304(ಎ) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್

ದಿನಾಂಕ: 03/11/2017 ರಂದು ಮಧ್ಯಾಹ್ನ 02-30 ಗಂಟೆಯಲ್ಲಿ ಪಿರ್ಯಾದಿ ಮಧುಗಿರಿ ತಾಲ್ಲೂಕ್, ಪುರವರ ಹೋಬಳಿ, ಉಪ್ಪಾರಪಾಳ್ಯ ಗ್ರಾಮದ ವಾಸಿಯಾದ ನ್ಯಾತಪ್ಪನ ಮಗಳು ತಿಮ್ಮಕ್ಕ, 20 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ಆದ ನಾನು ಬರೆಸಿಕೊಟ್ಟ ಕಂಪ್ಲೆಂಟ್ ಏನೆಂದರೆ, ನನ್ನ ತಾಯಿ ಮಲ್ಲಕ್ಕ ರವರಿಗೆ ಲಕ್ವ ಹೊಡೆದು ಕಾಲು ಸ್ವಾದೀನದಲ್ಲಿರುವುದಿಲ್ಲ ನಾನು ನಮ್ಮ ತಾಯಿ ಮತ್ತು ತಂದೆ ನಮ್ಮ ಗ್ರಾಮದಲ್ಲಿ ವಾಸವಾಗಿರುತ್ತೇವೆ. ನನ್ನ ಅಣ್ಣನಾದ ಅಶ್ವಥನಾರಾಯಣ ರವರು ದೊಡ್ಡಬಳ್ಳಾಪುರದಲ್ಲಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದು, ದಿನಾಂಕ: 03/11/2017 ರಂದು ಬೆಳಿಗ್ಗೆ ಸುಮಾರು 07-30 ಗಂಟೆಗೆ ನಮ್ಮ ಗ್ರಾಮಕ್ಕೆ ಬಂದು ನಮ್ಮ ತಂದೆ ನ್ಯಾತಪ್ಪ ರವರನ್ನು ದೊಡ್ಡಬಳ್ಳಾಪುರಕ್ಕೆ ಕರೆದುಕೊಂಡು ಹೋಗಲು ನಮ್ಮ ಬಾಬ್ತು ಕೆ.ಎ- 06 ಇಎಂ-0802 ನೇ ಹಿರೋ ಸ್ಪೆಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ನಮ್ಮ ಅಣ್ಣ ಅಶ್ವಥನಾರಾಯಣ ರವರು ದ್ವಿಚಕ್ರ ವಾಹನದ ಹಿಂಬದಿಯಲ್ಲಿ ನಮ್ಮ ತಂದೆಯವರನ್ನು ಕೂರಿಸಿಕೊಂಡು ಇದೇ ದಿವಸ ದೊಡ್ಡಬಳ್ಳಾಪುರಕ್ಕೆ ಹೋಗಲು ಮಧುಗಿರಿ-ಗೌರಿಬಿದನೂರು ರಸ್ತೆಯ ಎಡಬದಿಯಲ್ಲಿ ಕೋಡಗದಾಲ ಸಮೀಪವಿರುವ ಜಯಮಂಗಲಿ ನದಿ ಸೇತುವೆ ಸಮೀಪ ಇದೇ ದಿವಸ ಬೆಳಿಗ್ಗೆ ಸುಮಾರು 11-30 ಗಂಟೆಯಲ್ಲಿ ಗೌರಿಬಿದನೂರು ಕಡೆಗೆ ಹೋಗುತ್ತಿದ್ದಾಗ ಅದೇ ಸಮಯದಲ್ಲಿ ಗೌರಿಬಿದನೂರು ಕಡೆಯಿಂದ ಮಧುಗಿರಿ ಕಡೆಗೆ ಹೋಗಲು ಬರುತ್ತಿದ್ದ ಕೆ.ಎ-40 ಎ-5693 ನೇ ಲಾರಿಯನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ನಮ್ಮ ಅಣ್ಣ ಮತ್ತು ತಂದೆಯವರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ನಮ್ಮ ಅಣ್ಣನಿಗೆ ತಲೆಗೆ ಹಾಗೂ ದೇಹದ ಇತರ ಭಾಗಗಳಿಗೆ ತೀವ್ರವಾಗಿ ರಕ್ತಗಾಯಗಳಾಗಿ ಮತ್ತು ನಮ್ಮ ತಂದೆಯವರಿಗೆ ಬಲಗಾಲಿನ ಮಂಡಿ ಬಳಿ ಹಾಗೂ ಇತರ ಭಾಗಗಳಿಗೆ ರಕ್ತಗಾಯಗಳಾಗಿರುತ್ತವೆ. ಅಪಘಾತಪಡಿಸಿದ ಲಾರಿಯನ್ನು ಅದರ ಚಾಲಕನು ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ. ಗಾಯಗೊಂಡವರನ್ನು ಆಂಬುಲೆನ್ಸ್ ವಾಹನದಲ್ಲಿ ಹಾಕಿಕೊಂಡು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದು, ನಮಗೆ ಆಸ್ಪತ್ರೆಗೆ ಬರುವಂತೆ ಯಾರೋ ಸಾರ್ವಜನಿಕರು ನಮಗೆ ಫೋನ್ ಮಾಡಿ ವಿಚಾರ ತಿಳಿಸಿದಾಗ ನಾವು ಕೂಡಲೇ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು, ನಮ್ಮ ಅಣ್ಣ ತೀವ್ರವಾದ ರಕ್ತಸ್ರಾವವಾಗಿದ್ದರಿಂದ ಆಸ್ಪತ್ರೆಗೆ ಹಾಕಿಕೊಂಡು ಬರುವ ಮಾರ್ಗ ಮಧ್ಯೆದಲ್ಲಿ ಮಧ್ಯಾಹ್ನ ಸುಮಾರು 12-00 ಗಂಟೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿರುತ್ತೆ. ಶವವು ಮಧುಗಿರಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ. ಆದ್ದರಿಂದ ತಾವುಗಳು ಮೇಲ್ಕಂಡ ಲಾರಿ ಮತ್ತು ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂತಾ ನೀಡಿದ ಪಿರ್ಯಾದು ಸ್ವೀಕರಿಸಿ ಠಾಣಾ ಮೊ.ನಂ.126/2017 ಕಲಂ:279,304(ಎ) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಪ್ರ,ವ,ವರದಿಯನ್ನು ಘನ ನ್ಯಾಯಾಲಯಕ್ಕೆ ಹಾಗೂ ತುರ್ತು ವರದಿಯೊಂದಿಗೆ ನಕಲುಗಳನ್ನು ಇಲಾಖಾ ಮೇಲಾಧಿಕಾರಿಗಳಿಗೆ ನಿವೇದಿಸಿಕೊಂಡಿರುತ್ತೇನೆ.

 

ಹೊಸಬಡಾವಣೆ ಪೊಲೀಸ್ ಠಾಣಾ 134/2017 U/S 341, 504, 506 IPC

ದಿ: 03-11-2017 ರಂದು ಮಧ್ಯಾಹ್ನ 12-30 ಗಂಟೆಗೆ ಪಿರ್ಯಾದಿ ಹನುಮದಾಸ್ ಬಿನ್ ಮುದ್ದಹನುಮಯ್ಯ (68) 6ನೇ ಕ್ರಾಸ್, ವಿದ್ಯಾನಗರ, ತುಮಕೂರು ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಪಿರ್ಯಾದಿ ಮನೆಯ ಪಕ್ಕದಲ್ಲಿ ವಾಸವಿರುವ ಪಿರ್ಯಾದಿ ಸಂಬಂಧಿಯಾದ ಟಿ.ಎ. ಹನುಮರಾಜು ರವರು ಪ್ರತಿನ ದಿವಸ ಪಿರ್ಯಾದಿ ಹಾಗೂ ಅವರ ಮನೆಯವರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸುವುದು, ಕೆಕ್ಕರಿಸಿಕೊಂಡು ನೋಡುವುದು ಮಾಡುತ್ತಿದ್ದು ಈ ಬಗ್ಗೆ ಹಲವಾರು ಬಾರಿ ಬುದ್ದಿ ಹೇಳಿದ್ದರೂ ಸಹಾ ಕೇಳದೆ ದಿ: 03-11-2017 ರಂದು ಬೆಳಗ್ಗೆ ಸುಮಾರು 9-00 ಗಂಟೆಯಲ್ಲಿ ಪಿರ್ಯಾದಿಯು ತಮ್ಮ ಹೆಂಡತಿಯ ಮನೆಯಿಂದ ಹೊರಟಾಗ ಆರೋಪಿ ಹನುಮರಾಜು ರವರು ಮನೆಯ ಬಳಿ ದಾರಿಯಲ್ಲಿ ಪಿರ್ಯಾದಿಯನ್ನು ಅಡ್ಡಗಟ್ಟಿ ನಿಲ್ಲಿಸಿಕೊಂಡು ಏನೋ ಸೂಳೆ ಮಗನೇ ಮನೆ ಖಾಲಿ ಮಾಡಿಕೊಂಡು ಹೋಗು ಎಂದು ಹೇಳಿದ್ದರೂ ಸಹಾ ಇಲ್ಲಿಯೇ ಇದ್ದೀಯಾ ಎಂದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದವನೇ ಮನೆ ಖಾಲಿ ಮಾಡದೇ ಇದ್ದಲ್ಲಿ  ನಿನಗೂ ನಿನ್ನ ಕುಟುಂಬಕ್ಕೂ ಒಂದು ಗತಿ ಕಾಣಿಸುತ್ತೇನೆಂದು ಬೆದರಿಕೆ ಹಾಕಿ  ಹೋಗಿರುತ್ತಾನೆ. ಈ ಬಗ್ಗೆ ಕ್ರಮ ಕೋರಿ ನೀಡಿದ ದೂರು

ಅಮೃತೂರು ಪೊಲೀಸ್‌ ಠಾಣಾ ಮೊನಂ-203/2017, ಕಲಂ-279, 337, 304(ಎ) ಐಪಿಸಿ ಜೊತೆಗೆ 134(ಎ&ಬಿ), 187 ಐಎಂವಿ ಆಕ್ಟ್

ದಿನಾಂಕ: 03-11-2017 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿ ಎಸ್. ವೇಣುಗೋಪಾಲ್ ಬಿನ್ ಲೇಟ್ ಶ್ರೀನಿವಾಸನ್.ಆರ್, 29 ವರ್ಷ, ಬಲಿಜ, ನಂ-133, ಎಲ್.ವಿ.ಎಸ್ ಶಾಲೆಯ ಬಳಿ, ರಾಮಪುರ, ವಿರ್ಗೋನಗರ ಪೋಸ್ಟ್, ಬಿದರೆಹಳ್ಳಿ ಹೋಬಳಿ, ಬೆಂಗಳೂರು ಪೂರ್ವ ತಾಲೋಕ್, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ: 03-11-2017 ರಂದು ನಾನು ನಮ್ಮ ಮನೆಯಲ್ಲಿ ಮಲಗಿದ್ದಾಗ, ಬೆಳಗಿನ ಜಾವ ಸುಮಾರು 3-45 ಗಂಟೆ ಸಮಯದಲ್ಲಿ ನಮ್ಮ ಮನೆಯ ಬಳಿ ಇರುವ ನನ್ನ ಸ್ನೇಹಿತನಾದ ದಿಲೀಪ್ ಕುಮಾರ್ ಬಿನ್ ಲೇಟ್ ಸತ್ಯನಾರಾಯಣ ಶೆಟ್ಟಿ ರವರು ನನಗೆ ಪೋನ್ ಮಾಡಿ, ಈ ದಿನ ಬೆಳಗಿನ ಜಾವ ಸುಮಾರು 3-00 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಹೆಂಡತಿ ಪುಷ್ಪ, ನನ್ನ ಮಗ ಹೃಷೀಕೇಶ್, ನನ್ನ ತಾಯಿ ಸರಸ್ವತಿ, ನನ್ನ ಅಕ್ಕ ಲಾವಣ್ಯ, ನಮ್ಮ ಬಾವ ಶ್ರೀಧರ್, ಅಕ್ಕನ ಮಕ್ಕಳಾದ ಹೇಮಶ್ರೀ, ಶ್ರೀವಾಸ್ತವ್, ನಮ್ಮ ಅಣ್ಣನ ಮಗಳು ಕೃತಿಕಾ ರವರುಗಳು ಕೆ.ಎ-02 ಎಂ.ಎಸ್-504 ರ ಇನೋವಾ ಕಾರಿನಲ್ಲಿ ಚನ್ನರಾಯಪಟ್ಟಣದಲ್ಲಿರುವ ನಮ್ಮ ಸಂಬಂಧಿಕರ ಮನೆಯ ಗೃಹ ಪ್ರವೇಶದ ಕಾರ್ಯವನ್ನು ಮುಗಿಸಿಕೊಂಡು ವಾಪಸ್ ಬೆಂಗಳೂರಿಗೆ ಬರಲು ನಾನು ಚಾಲಕನಾಗಿ ಎನ್‌.ಹೆಚ್-75 ರಸ್ತೆಯಲ್ಲಿ ಕಾರನ್ನು ಚಾಲಾಯಿಸಿಕೊಂಡು ಬರುವಾಗ್ಗೆ ಕುಣಿಗಲ್ ತಾಲ್ಲೂಕ್, ಎಡೆಯೂರು ಹೋಬಳಿ, ಚಾಕೇನಹಳ್ಳಿ ಗ್ರಾಮದ ಬಳಿ ನಮ್ಮ ಮುಂದೆ ಅಂದರೆ ಬೆಂಗಳೂರು ಕಡೆಗೆ ಹೋಗುತ್ತಿದ್ದ ಯಾವುದೋ ಒಂದು ಲಾಂಗ್ ಟ್ರಕ್ ಲಾರಿಗೆ ಬಲಭಾಗದಿಂದ ನಾನು ಸೈಡ್ ಹೊಡೆಯಲು ಹೋದಾಗ, ಆ ಲಾಂಗ್‌ ಟ್ರಕ್‌ ಲಾರಿಯ ಚಾಲಕ ಯಾವುದೇ ಸಿಗ್ನಲ್ ನೀಡದೇ ಏಕಾ ಏಕಿ ಅಜಾಗರೂಕತೆಯಿಂದ ತನ್ನ ಟ್ರಕ್ ಲಾರಿಯನ್ನು ಬಲಭಾಗಕ್ಕೆ ತೆಗೆದುಕೊಂಡಿದ್ದರಿಂದ ನನಗೆ ನಮ್ಮ ಕಾರನ್ನು ನಿಯಂತ್ರಿಸಲಾಗದೆ ಆ ಟ್ರಕ್ ಲಾರಿಯ ಹಿಂಭಾಗಕ್ಕೆ ನಮ್ಮ ಕಾರು ಅಪಘಾತವಾಗಿ ಕಾರಿನ ಮುಂಭಾಗ ಜಖಂ ಆಗಿದ್ದು, ಕಾರಿನಲ್ಲಿದ್ದ  ನನಗೆ ಮತ್ತು ನನ್ನ ಹೆಂಡತಿ ಪುಷ್ಪ, ನನ್ನ ಮಗ ಹೃಷೀಕೇಶ್, ನನ್ನ ಅಕ್ಕನ ಮಗಳು ಹೇಮಶ್ರೀ, ನಮ್ಮ ಅಣ್ಣನ ಮಗಳು ಕೃತಿಕಾ ರವರಿಗೆ ಸಣ್ಣ ಪುಟ್ಟ ಮೂಗೇಟುಗಳಾಗಿದ್ದು, ನನ್ನ ತಾಯಿ ಸರಸ್ವತಿ ರವರಿಗೆ ಎಡಗಾಲಿಗೆ ಹೆಚ್ಚಿನ ಪಟ್ಟು ಬಿದ್ದು ರಕ್ತಗಾಯವಾಗಿತ್ತು, ನನ್ನ ಅಕ್ಕ ಲಾವಣ್ಯ ರವರಿಗೆ, ನಮ್ಮ ಬಾವ ಶ್ರೀಧರ್ ರವರಿಗೆ, ನನ್ನ ಅಕ್ಕನ ಮಗ ಶ್ರೀವಾಸ್ತವ್ ಗೆ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿದ್ದು, ಅಪಘಾತಪಡಿಸಿದ ಆ ಟ್ರಕ್ ಲಾರಿಯನ್ನು ಅದರ ಚಾಲಕ ನಿಲ್ಲಿಸದೇ ಬೆಂಗಳೂರು ಕಡೆಗೆ ಹೊರಟು ಹೋಗಿದ್ದು, ಕತ್ತಲೆಯಲ್ಲಿ ಆ ಟ್ರಕ್‌ ಲಾರಿಯ ನಂಬರ್ ನೋಡಲಾಗಲಿಲ್ಲ. ನಾವೆಲ್ಲರೂ ಯಾವುದೋ ಆಟೋ ರಿಕ್ಷಾಗಳಲ್ಲಿ ಬೆಳ್ಳೂರಿನ ಎ.ಸಿ.ಗಿರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗುತ್ತಿದ್ದೆವೆ. ನೀನು ನಮ್ಮ ಸ್ನೇಹಿತರನ್ನು ಕರೆದುಕೊಂಡು ಬಾ ಎಂದು ಪೋನ್ ಮೂಲಕ ತಿಳಿಸಿದನು. ಆಗ ಕೂಡಲೇ ನಾನು ನನ್ನ ಸ್ನೇಹಿತರೊಂದಿಗೆ ಬೆಳಗಿನ ಜಾವ ಸುಮಾರು 5-30 ಗಂಟೆಗೆ ಎ.ಸಿ.ಗಿರಿ ಆಸ್ಪತ್ರೆಗೆ ಬಂದು ನೋಡಲಾಗಿ ಅಪಘಾತವಾಗಿರುವುದು ನಿಜವಾಗಿತ್ತು. ನಂತರ ಹೆಚ್ಚಿನ ರಕ್ತಗಾಯವಾಗಿದ್ದ ಸರಸ್ವತಿ ಎಂಬುವವರನ್ನು ಅಲ್ಲಿಯ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅಂಬ್ಯೂಲೆನ್ಸ್ ನಲ್ಲಿ ಬೆಂಗಳೂರಿನ ಸ್ಪರ್ಷ ಆಸ್ಪತ್ರೆಗೆ ನಾವು ಕರೆದುಕೊಂಡು ಹೋಗುವಾಗ್ಗೆ ಬೆಳಿಗ್ಗೆ ಸುಮಾರು 7-30 ಗಂಟೆಗೆ ಬೆಂಗಳೂರಿನ ಸ್ಪರ್ಷ ಆಸ್ಪತ್ರೆಯ ಮುಂಭಾಗ ಸರಸ್ವತಿ ರವರು ಮೃತಪಟ್ಟರು. ನಂತರ ಅವರ ಶವವನ್ನು ವಾಪಸ್ ತೆಗೆದುಕೊಂಡು ಬಂದು ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರಸಲ್ಲಿಟ್ಟು, ಈಗ ಬಂದು ದೂರು ನೀಡುತ್ತಿದ್ದೇನೆ. ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಲಾಂಗ್ ಟ್ರಕ್ ಲಾರಿಯನ್ನು ಮತ್ತು ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 41 guests online
Content View Hits : 322810