lowborn Crime Incidents 09-10-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 09-10-17

ಕಳ್ಳಂಬೆಳ್ಳ  ಪೊಲೀಸ್‌ ಠಾಣಾ ಮೊ.ನಂ: 228/2017 ಕಲಂ-279, 304(ಎ) ಐಪಿಸಿ ರೆ/ವಿ 187 ಐ.ಎಂ.ವಿ ಆಕ್ಟ್

ದಿನಾಂಕ: 08/10/2017 ರಂದು ರಾತ್ರಿ 9-30 ಗಂಟೆಯಲ್ಲಿ ಕಳ್ಳಂಬೆಳ್ಳ ಹೋಬಳಿ, ಕಡವಿ ಗ್ರಾಮದ ನಿವಾಸಿ ಮುದ್ದಮ್ಮ ಕೋಂ ಲಿಂಗರಾಜು,ಸುಮಾರು 50 ವರ್ಷ,ನಾಯಕ ಜನಾಂಗ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಮ್ಮ ಮನೆಯಲ್ಲಿ ಹಿರಿಯರ ಹಬ್ಬವನ್ನು ಆಚರಿಸುವ ವೇಳೆಯಲ್ಲಿ ಸಮಯ ರಾತ್ರಿ7 ಗಂಟೆಯಲ್ಲಿ ಕೆಳಕಂಡ ತಿಗಳ ಜನಾಂಗದವರಾದ ಹನುಮಂತ ಬಿನ್ ಭೀಮಯ್ಯ, ಕುಮಾರ ಬಿನ್ ದೇವರಾಜು, ನವೀನ ಬಿನ್ ಲಕ್ಷ್ಮಯ್ಯ, ಭೀಮಯ್ಯ ಬಿನ್ ಚಿಕ್ಕಹನುಮಯ್ಯ, ದೇವರಾಜು ಬಿನ್ ಲೇಟ್ ಸಣ್ಣಪ್ಪ, ಮೂರ್ತಿ ಬಿನ್ ಲೇಟ್ ಕರಿಯಣ್ಣ, ಚಂದ್ರಶೇಖರ್ ಬಿನ್ ಲಕ್ಷ್ಮಯ್ಯ, ಪ್ರತಾಪ ಬಿನ್ ಲೇಟ್ ಕರೇಲಿಂಗಯ್ಯ(ಮಡಿವಾಳರು), ಸಿದ್ದರಾಜು ಬಿನ್ ರಾಜಣ್ಣ, ಮಧು ಬಿನ್ ತಿಮ್ಮರಾಜು ಹಾಗೂ ಇನ್ನು ಇತರೆ ತಿಗಳ ಜನಾಂಗದವರು ನಮ್ಮ ಮೇಲೆ ಕಲ್ಲುಗಳನ್ನು ಮತ್ತು ದೊಣ್ಣೆಗಳಿಂದ ಹಲ್ಲೆ ಮಾಡಿದರು. ಪ್ರಾಣಾಪಾಯದಿಂದ ಮತ್ತು ಭಯದಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದೇವೆ.  ಇಲ್ಲದಿದ್ದರೆ ನಮ್ಮ ಮೇಲೆ ಕಲ್ಲುಗಳನ್ನು ಹಾಕಿ ಸಾಯಿಸಲು ಪ್ರಯತ್ನಿಸಿದರು. ದೊಣ್ಣೆ ಮತ್ತು ಕೈಗಳಿಂದ ಹೊಡೆದು ನನ್ನ ಜಾಕೆಟನ್ನು ಸಹ ಹರಿದು ನೀವು ನಾಯಕ ಸೂಳೆಮುಂಡೆಯವರು ನಿಮಗೆ ಕಾರಿನಲ್ಲಿ ಓಡಾಡುವ ಶಕ್ತಿ ಇದೆಯಾ, ಸೂಳೆಮಕ್ಕಳ, ವಾಲ್ಮಿಕಿ ಸೂಳೆ ಮಕ್ಕಳ ಎಂದು ನನಗೆ ಮತ್ತು ಅಕ್ಕನಾದ ತಾಯಮ್ಮನ ಮೇಲೆ  ತುಂಬಾ ಹಲ್ಲೆಮಾಡಿರುತ್ತಾರೆ.  ಕಾರಣವೇನೆಂದರೆ ನಮ್ಮ ಮನೆಯಲ್ಲಿ ಹಿರಿಯರ ಹಬ್ಬವನ್ನು ಆಚರಿಸುವ ಸಂದರ್ಬದಲ್ಲಿ ನಮ್ಮ ಎರಡು ಕಾರುಗಳನ್ನು ಪೂಜೆ ಮಾಡಲು ನಿಲ್ಲಿಸಿಕೊಂಡಿದ್ದೆವು, ನನ್ನ ಮಕ್ಕಳ,  ನಾಯಕ ಸೂಳೆಮಕ್ಕಳ ನಿಮಗೆ ಕಾರು ಬೇರೆ ಬೇಕೇನ್ರೋ ಎಂದು ಇದೇ ರೀತಿಯಾಗಿ ಜೀವಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಮತ್ತು ರಕ್ಷಣೆ ನೀಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈ ಗೊಂಡಿರುತ್ತೆ

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-174/2017 ಕಲಂ-279,337,ಐಪಿಸಿ ರೆ/ವಿ 134 (ಎ & ಬಿ), 187 ಐ ಎಂ ವಿ ಆಕ್ಟ್‌

ದಿನಾಂಕ-08/10/2017 ರಂದು ಬೆಳಗ್ಗೆ 11-00 ಗಂಟೆಗೆ ಪಿರ್ಯಾದುದಾರರಾದ   ಸೈಯದ್ ಮೆಹಬೂಬ್ ಪಾಷ ಬಿನ್ ಲೇಟ್ ಸೈಯದ್ ಮೆಹಮೂದ್ ಷಾ, ಸುಮಾರು 46 ವರ್ಷ, ಮುಸ್ಲಿಂ ಜನಾಂಗ, ಆಟೋ ಚಾಲಕ, ಬಡೇ ಸಾಬರ ಪಾಳ್ಯ, ಗೂಳೂರು ಹೋಬಳಿ, ತುಮಕೂರು ತಾಲ್ಲೋಕು &ಜಿಲ್ಲೆರವರು ಠಾಣೆಗೆ ಹಾಜರಾಗಿ ಟೈಪ್ ಮಾಡಿಸಿ ನೀಡಿದ ದೂರಿನ ಅಂಶವೇನೆಂದರೆ ಸ್ವಾಮಿ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ, ನನೆಗೆ ಎರಡು ಹೆಣ್ಣು ಮೂರು ಜನ ಗಂಡು ಮಕ್ಕಳಿದ್ದು  2ನೇಯ ಮಗನಾದ ಸುಮಾರು 16 ವರ್ಷ ವಯಸ್ಸಿನ ಸೈಯದ್ ನಾಸೀರ್ ಎಂಬುವನು  ನಮ್ಮೂರಿನಿಂದ ಹೊನ್ನುಡಿಕೆ ಹ್ಯಾಂಡ್‌ ಪೋಸ್ಟ್‌ನಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ 10ನೇ ತರಗತಿಗೆ ದಿನಾಲೂ ಹೋಗಿ ಬರುತ್ತಿದ್ದು ಅದರಂತೆ ದಿನಾಂಕ 04/10/2017 ರಂದು ಬೆಳಿಗ್ಗೆ ಸುಮಾರು 9-00 ಗಂಟೆಗೆ ನನ್ನ ಮಗ ಶಾಲೆಗೆ ಹೋಗುತ್ತೇನೆಂತ ಹೇಳಿ ಹೋದನು. ಇದೇ ದಿನ ಸಾಯಿಂಕಾಲ ಸುಮಾರು 5-00 ಗಂಟೆ ಸಮಯದಲ್ಲಿ  ನಾನು ನಮ್ಮ ಮನೆಯ ಬಳಿ ಇರುವಾಗ್ಗೆ ತುಮಕೂರಿನ ಆರೀಫ್ ಎಂಬುವರು ನನ್ನ ಮೊಬೈಲ್‌ಗೆ ಪೋನ್ ಮಾಡಿ  ನಿನ್ನ ಮಗ ಸೈಯದ್ ನಾಸೀರ್ ಎಂಬುವನು ಶಾಲೆ ಬಿಟ್ಟ ನಂತರ  ಊರಿಗೆ ಬರಲು ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಕಡೆ ನಡೆದುಕೊಂಡು ಬರುತ್ತಿರುವಾಗ್ಗೆ ಕೆಎ-02-ಎಂಎ-2160 ನೇ ಕಾರು ಅಪಘಾತ ಮಾಡಿ ನಿಲ್ಲಿಸದೆ ಹೊರಟು ಹೋಗಿತ್ತಾನೆ ನಿನ್ನ ಮಗನನ್ನು ತುಮಕೂರು ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆಂತ ತಿಳಿಸಿದರು. ನಾನು ಕೂಡಲೇ ತುಮಕೂರು ಜಿಲ್ಲಾ ಸರ್ಕಾರಿ ಅಸ್ಪತ್ರೆಗೆ ಹೋಗಿ ನನ್ನ ಮಗನನ್ನು ನೋಡಲಾಗಿ ಮುಖಕ್ಕೆ ಬಲಗಾಲಿಗೆ ರಕ್ತಗಾಯವಾಗಿ  ಅಪಘಾತವಾಗಿರುವುದು ನಿಜವಾಗಿದ್ದು, ವಿಷಯ ತಿಳಿಯಲಾಗಿ ಅರೀಪ್‌ ಎಂಬುವರು ನಾಗವಲ್ಲಿಯಿಂದ ತುಮಕೂರಿಗೆ ತನ್ನ ಕಾರಿನಲ್ಲಿ ಹೊನ್ನುಡಿಕೆ ಸರ್ಕಾರಿ ಪ್ರೌಡಶಾಲೆಯ ಹತ್ತಿರ ಸಾಯಂಕಾಲ ಸುಮಾರು 4-50 ಗಂಟೆಯಲ್ಲಿ  ಬರುತ್ತಿರುವಾಗ್ಗೆ  ಕುಣಿಗಲ್ ಕಡೆಯಿಂದ ಒಂದು ಕಾರನ್ನು ಅದರ ಚಾಲಕ ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು  ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ನಿನ್ನ ಮಗನಿಗೆ  ಕೆಎ-02-ಎಂಎ-2160 ನೇ ಕಾರು ಡಿಕ್ಕಿ ಹೊಡೆಸಿ ಅಪಘಾತ ಉಂಟು ಮಾಡಿದ ನಿಲ್ಲಿಸದೇ ಹೊರಟು ಹೋದ ನಂತರ ನಾನು ನಿನ್ನ ಮಗನನ್ನು ಚಿಕಿತ್ಸೆಗಾಗಿ ತುಮಕೂರು ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಬಂದೆ ಅಂತ ತಿಳಿಸಿದರು.ನಾನು ನನ್ನ ಮಗನನ್ನು ಆಸ್ಪತ್ರೆಯಲ್ಲಿ ಚಿಕಿತ್ಸ ಕೊಡಿಸಿ ಈ ದಿನ ಠಾಣೆಗೆ ಬಂದು  ದಿನಾಂಕ 04/10/2017 ರಂದು ಸಾಯಿಂಕಾಲ 4-50 ಗಂಟೆ ಸಮಯದಲ್ಲಿ ಶಾಲೆ ಬಿಟ್ಟ ನಂತರ ರಸ್ತೆ ಎಡಭಾಗದಲ್ಲಿ  ನಡೆದುಕೊಂಡು ಬರುತ್ತಿದ್ದ ನನ್ನ ಮಗ ಸೈಯದ್ ನಾಸೀರ್ ಗೆ ಕುಣಿಗಲ್ ಕಡೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಹೊಡೆಸಿ ನಿಲ್ಲಿಸದೇ ಹೊರಟು ಹೋದ ಕೆಎ-02-ಎಂಎ-2160 ನೇ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಎಂದು ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ.ನಂ. 175/2017 ಕಲಂ 323,324,504 ರೆ/ವಿ 149 ಐ ಪಿ ಸಿ

ದಿನಾಂಕ-08/10/2017 ರಂದು  ಸಾಯಂಕಾಲ 5-30 ಗಂಟೆಗೆ ಪಿರ್ಯಾದಿ ಗಿರೀಶ್ ಬಿನ್ ತಿರುಮಲಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಅಂಶವೇನೆಂದರೆ, ದಿನಾಂಕ 07/10/2017 ರಂದು ರಾತ್ರಿ ಸುಮಾರು 8-00 ಗಂಟೆಗೆ ತುಮಕೂರು ಕುಣಿಗಲ್ ರಸ್ತೆಯ ಹೆಬ್ಬೂರು ಬಳಿ ಇರುವ ಪ್ರಧುಕು ಪ್ಯಾಮಿಲಿ ಡಾಬಕ್ಕೆ ಊಟ ಮಾಡಲು ನಾನು  ಮತ್ತು ನಮ್ಮ ಗ್ರಾಮದವರೇ ಆದಸ ರಾಮಣ್ಣ ಬಿನ್ ಗೋವಿಂದಯ್ಯ ಮತ್ತು ನಾರಾಯಣ್ಪ ಬಿನ್  ತಮ್ಮಯ್ಯ ನಾವುಗಳು ಡಾಬದಲ್ಲಿ ಊಟ ಮಾಡಲು ಹೋಗಿದ್ದೆವು. ಊಟ ಮುಗಿದ ನಂತರ ನಾವುಗಳು ಊಟದ ಬಿಲ್ಲು  ನೀಡಿ ಊರಿಗೆ ಹೋಗಲು ಅಚೆ ಬರುತ್ತಿದ್ದಾಗ ನಮ್ಮ ಜೊತೆ ಇದ್ದ ರಾಮಣ್ಣನವರು ಕಲ್ಲಿಗೆ ಎಡವಿ ಡಾಬದ ಅವರಣದಲ್ಲಿರುವ ಗಿಡದ ಕುಂಡದ ಮೇಲೆ ಬಿದ್ದರು. ಇದನ್ನು ನೋಡಿದ ಡಾಬದ ಹುಡುಗರು ಗಲಾಟೆ ಮಾಡಲು ಬಂದರು ಆ ಸಮಯದಲ್ಲಿ ನಾನು ಮತ್ತು ನಮ್ಮ ಜೊತೆ ಇದ್ದ ನಾರಾಯಣಪ್ಪ ಡಾಬದ ಹುಡುಗರನ್ನು ಸಮಾದಾನ ಪಡಿಸಿಸ ರಾಮಣ್ಣನನ್ನು ಕರೆದುಕೊಂಡು ಹೋಗಲು ಹೊರಟಾಗ ಡಾಬಾದಲ್ಲಿ ಇದ್ದ ಕ್ಯಾಷಿಯರ್ ಕಾಂತ ನನ್ನ ಕೊರಳು ಪಟ್ಟಿ ಹಿಡಿದು ಅವ್ಯಾಚ್ಚ ಶಬ್ದಗಳಿಂದ ಬೈದು ನನ್ನನ್ನು ಕೈಯಿಂದ ಹೊಡದನು. ತದನಂತರ ಡಾಬ ಮಾಲೀಕ ನರಸಿಂಹಮೂರ್ತಿ ಹಾಗೂ ಆತನ ಜೊತೆ ಇದ್ದ ನಾಲ್ಕು ಜನ ಏಕ ಎಕಿ ನನ್ನನ್ನು ನನ್ನ ಜೊತೆ ಇದ್ದ ರಾಮಣ್ಣ ಮತ್ತು ನಾರಾಯಣಪ್ಪನ ಮೇಲೆ ದೊಣ್ಣೆ ಮತ್ತು ಇಟ್ಟಿಗೆಗಳಿಂದ ಹೊಡೆಯಲು ಪ್ರಾರಂಬಿಸಿದರು. ಆ ಸಮಯದಲ್ಲಿ ಡಾಬ ಮಾಲೀಕ ನರಸಿಂಹಮೂರ್ತಿ ದೊಣ್ಣೆಯಿಂದ ನನಗೆ ಹೊಡೆದು ಕಾಲಿನಿಂದ ತುಳಿದು ಗಾಯಗೊಳಿಸಿದನು. ದೊಣ್ಣೆಯಿಂದ ಹೊಡೆದ ಏಟಿಗೆ ನನ್ನ ಕಣ್ಣಿನ ಬಲಭಾಗದ ಕಣ್ಣು ಮತ್ತು ಕೆನ್ನೆಗೆ ರಕ್ತಸ್ರಾವ ಆಗುವಂತೆ ಹೊಡೆದರು. ಆಗ ನಾನು ಮತ್ತು ನನ್ನ ಜೊತೆಯಲ್ಲಿದ್ದ ರಾಮಣ್ಣನಿಗೆ ಎಡಬಾಗದ ಕಿವಿ ಗದ್ದ ಮತ್ತು ಬೆನ್ನಿಗೆ  ಗಾಯಗಳಾದವು. ಇವರ ಏಟಿನಿಂದ ತಪ್ಪಿಸಿಕೊಳ್ಳಲು ನಾವು ಅಗದೆ ಇದ್ದಾಗ ಡಾಬದ ಹಿಂದಕ್ಕೆ ಓಡಿ ಹೋಗಿ ನಮ್ಮ ಸ್ನೇಹಿತರಾದ ಟಿ.ಕೆ. ಚೌಡೇಗೌಡರಿಗೆ ಪೋನ್ ಮಾಡಿ ನಡೆದ ವಿಷಯ ತಿಳಿಸಿದೆವು. ತಕ್ಷಣವೇ ಸ್ಥಳಕ್ಕೆ ಬಂದ ಸ್ನೇಹಿತರು ನಮ್ಮನ್ನು ನೋಡಿ ತೀವ್ರ ರಕ್ತಸ್ರಾವದಿಂದ ಬಟ್ಟೆ ಮತ್ತು ಮುಖ ರಕ್ತವಾಗಿತ್ತು. ತಕ್ಷಣ ಅವರ ಕಾರಿನಲ್ಲಿಯೇ ತುಮಕೂರು ಜಿಲ್ಲಾ ಆಸ್ಪತ್ರೆಗೆ ಹೋಗಿ ಒಳರೋಗಿಯಾಗಿ ಚಿಕಿತ್ಸೆ ಪಡೆದು ಕಣ್ಣಿನ ಕೆಳಭಾಗದಲ್ಲಿ 5 ವಲಿಗೆಗಳನ್ನು ಹಾಕಿ ಚಿಕಿತ್ಸೆ ಪಡೆದು ಇವರುಗಳ ಮೇಲೆ  ಕಾನೂನು ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ನಂ. 175/2017 ಕಲಂ 323,324,504 ರೆ/ವಿ 149 ಐ ಪಿ ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಪ್ರ.ವ.ವರದಿಯನ್ನು ಘನ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿರುತ್ತೇನೆ.

ಹೊಸಬಡಾವಣೆ ಪೊಲೀಸ್ ಠಾಣಾ ಮೊ.ಸಂ 124/2017 U/S 380  IPC

ದಿನಾಂಕ:- 08/10/2017 ರಂದು ಸಾಯಂಕಾಲ 05-30 ಗಂಟೆಗೆ  ಪಿರ್ಯಾದಿ ಕಾಮಯ್ಯ ಬಿನ್  ಲೇಟ್ ನರಸಯ್ಯ, ವಾಸ :-ಸುಮಧುರ, 1ನೇ ಕ್ರಾಸ್, ಆರ್ ವಿ ಕಾಲೋನಿ, ತುಮಕೂರು ರವರು ಠಾಣೆಗೆ  ಹಾಜರಾಗಿ ನೀಡಿದ  ದೂರಿನ ಅಂಶವೆನೆಂದರೆ ಪಿರ್ಯಾದಿಗೆ  2ನೇ ಮಗಳಾದ ಮಧು ರವರನ್ನ ಆರೋಪಿ  ತುಮಕೂರು ತಾಲ್ಲೂಕು, ಕೋರಾ ಹೋಬಳಿ, ಚಿನಿವಾರನ ಹಳ್ಳಿ, ನಟರಾಜು, ಕೆ., ಬಿನ್ ಕುಂಟಯ್ಯ, ಎಂಬುವವರಿಗೆ ಮಧುವೆ ಮಾಡಿಕೊಟ್ಟಿದ್ದು  ನಟರಾಜು ರವರು ಕಿರುಕುಳ ಕೊಟ್ಟಿದ್ದರಿಂದ ಹೆಂಡತಿಯು ತವರು ಮನೆಯಲ್ಲಿದ್ದು ಸ್ವಲ್ಪ ದಿವಸಗಳ ಹಿಂದೆ ಹೆಂಡತಿಯ ಮನೆಗೆ ನಟರಾಜು ರವರು ಬಂದು ಹೆಂಡತಿಯನ್ನು ಇನ್ನು ಮುಂದೆ ಅನ್ಯೋನ್ಯವಾಗಿ ನೋಡಿಕೊಳ್ಳುತ್ತೇನೆಂದು ಹೇಳಿ ಹೆಂಡತಿ ಮನೆಯಲ್ಲಿ ಯೇ ಇದ್ದುಕೊಂಡು 20 ದಿಸವಗಳ ಹಿಂದೆ ತಮ್ಮ ಹೆಂಡತಿಯ ಬಾಬ್ತು ಸುಮಾರು 90 ಗ್ರಾಂ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಕ್ರಮ ಕೋರಿ ನೀಡಿದ ದೂರು.

 

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-174/2017 ಕಲಂ-279,337,ಐಪಿಸಿ ರೆ/ವಿ 134 (ಎ & ಬಿ), 187 ಐ ಎಂ ವಿ ಆಕ್ಟ್‌

ದಿನಾಂಕ-08/10/2017 ರಂದು ಬೆಳಗ್ಗೆ 11-00 ಗಂಟೆಗೆ ಪಿರ್ಯಾದುದಾರರಾದ   ಸೈಯದ್ ಮೆಹಬೂಬ್ ಪಾಷ ಬಿನ್ ಲೇಟ್ ಸೈಯದ್ ಮೆಹಮೂದ್ ಷಾ, ಸುಮಾರು 46 ವರ್ಷ, ಮುಸ್ಲಿಂ ಜನಾಂಗ, ಆಟೋ ಚಾಲಕ, ಬಡೇ ಸಾಬರ ಪಾಳ್ಯ, ಗೂಳೂರು ಹೋಬಳಿ, ತುಮಕೂರು ತಾಲ್ಲೋಕು &ಜಿಲ್ಲೆರವರು ಠಾಣೆಗೆ ಹಾಜರಾಗಿ ಟೈಪ್ ಮಾಡಿಸಿ ನೀಡಿದ ದೂರಿನ ಅಂಶವೇನೆಂದರೆ ಸ್ವಾಮಿ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ, ನನೆಗೆ ಎರಡು ಹೆಣ್ಣು ಮೂರು ಜನ ಗಂಡು ಮಕ್ಕಳಿದ್ದು  2ನೇಯ ಮಗನಾದ ಸುಮಾರು 16 ವರ್ಷ ವಯಸ್ಸಿನ ಸೈಯದ್ ನಾಸೀರ್ ಎಂಬುವನು  ನಮ್ಮೂರಿನಿಂದ ಹೊನ್ನುಡಿಕೆ ಹ್ಯಾಂಡ್‌ ಪೋಸ್ಟ್‌ನಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ 10ನೇ ತರಗತಿಗೆ ದಿನಾಲೂ ಹೋಗಿ ಬರುತ್ತಿದ್ದು ಅದರಂತೆ ದಿನಾಂಕ 04/10/2017 ರಂದು ಬೆಳಿಗ್ಗೆ ಸುಮಾರು 9-00 ಗಂಟೆಗೆ ನನ್ನ ಮಗ ಶಾಲೆಗೆ ಹೋಗುತ್ತೇನೆಂತ ಹೇಳಿ ಹೋದನು. ಇದೇ ದಿನ ಸಾಯಿಂಕಾಲ ಸುಮಾರು 5-00 ಗಂಟೆ ಸಮಯದಲ್ಲಿ  ನಾನು ನಮ್ಮ ಮನೆಯ ಬಳಿ ಇರುವಾಗ್ಗೆ ತುಮಕೂರಿನ ಆರೀಫ್ ಎಂಬುವರು ನನ್ನ ಮೊಬೈಲ್‌ಗೆ ಪೋನ್ ಮಾಡಿ  ನಿನ್ನ ಮಗ ಸೈಯದ್ ನಾಸೀರ್ ಎಂಬುವನು ಶಾಲೆ ಬಿಟ್ಟ ನಂತರ  ಊರಿಗೆ ಬರಲು ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಕಡೆ ನಡೆದುಕೊಂಡು ಬರುತ್ತಿರುವಾಗ್ಗೆ ಕೆಎ-02-ಎಂಎ-2160 ನೇ ಕಾರು ಅಪಘಾತ ಮಾಡಿ ನಿಲ್ಲಿಸದೆ ಹೊರಟು ಹೋಗಿತ್ತಾನೆ ನಿನ್ನ ಮಗನನ್ನು ತುಮಕೂರು ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆಂತ ತಿಳಿಸಿದರು. ನಾನು ಕೂಡಲೇ ತುಮಕೂರು ಜಿಲ್ಲಾ ಸರ್ಕಾರಿ ಅಸ್ಪತ್ರೆಗೆ ಹೋಗಿ ನನ್ನ ಮಗನನ್ನು ನೋಡಲಾಗಿ ಮುಖಕ್ಕೆ ಬಲಗಾಲಿಗೆ ರಕ್ತಗಾಯವಾಗಿ  ಅಪಘಾತವಾಗಿರುವುದು ನಿಜವಾಗಿದ್ದು, ವಿಷಯ ತಿಳಿಯಲಾಗಿ ಅರೀಪ್‌ ಎಂಬುವರು ನಾಗವಲ್ಲಿಯಿಂದ ತುಮಕೂರಿಗೆ ತನ್ನ ಕಾರಿನಲ್ಲಿ ಹೊನ್ನುಡಿಕೆ ಸರ್ಕಾರಿ ಪ್ರೌಡಶಾಲೆಯ ಹತ್ತಿರ ಸಾಯಂಕಾಲ ಸುಮಾರು 4-50 ಗಂಟೆಯಲ್ಲಿ  ಬರುತ್ತಿರುವಾಗ್ಗೆ  ಕುಣಿಗಲ್ ಕಡೆಯಿಂದ ಒಂದು ಕಾರನ್ನು ಅದರ ಚಾಲಕ ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು  ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ನಿನ್ನ ಮಗನಿಗೆ  ಕೆಎ-02-ಎಂಎ-2160 ನೇ ಕಾರು ಡಿಕ್ಕಿ ಹೊಡೆಸಿ ಅಪಘಾತ ಉಂಟು ಮಾಡಿದ ನಿಲ್ಲಿಸದೇ ಹೊರಟು ಹೋದ ನಂತರ ನಾನು ನಿನ್ನ ಮಗನನ್ನು ಚಿಕಿತ್ಸೆಗಾಗಿ ತುಮಕೂರು ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಬಂದೆ ಅಂತ ತಿಳಿಸಿದರು.ನಾನು ನನ್ನ ಮಗನನ್ನು ಆಸ್ಪತ್ರೆಯಲ್ಲಿ ಚಿಕಿತ್ಸ ಕೊಡಿಸಿ ಈ ದಿನ ಠಾಣೆಗೆ ಬಂದು  ದಿನಾಂಕ 04/10/2017 ರಂದು ಸಾಯಿಂಕಾಲ 4-50 ಗಂಟೆ ಸಮಯದಲ್ಲಿ ಶಾಲೆ ಬಿಟ್ಟ ನಂತರ ರಸ್ತೆ ಎಡಭಾಗದಲ್ಲಿ  ನಡೆದುಕೊಂಡು ಬರುತ್ತಿದ್ದ ನನ್ನ ಮಗ ಸೈಯದ್ ನಾಸೀರ್ ಗೆ ಕುಣಿಗಲ್ ಕಡೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಹೊಡೆಸಿ ನಿಲ್ಲಿಸದೇ ಹೊರಟು ಹೋದ ಕೆಎ-02-ಎಂಎ-2160 ನೇ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಎಂದು ನೀಡಿದ ದೂರನ್ನು ಪ್ರಕರಣ ದಾಖಲಿಸಿರುತ್ತೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 63 guests online
Content View Hits : 304479