lowborn Crime Incidents 07-10-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 07-10-17

ಮಧುಗಿರಿ ಪೊಲೀಸ್ ಠಾಣಾ CR :187/2017 u/s 36[B] KE ACT.

ಪಿರ್ಯಾದಿ ಶ್ರೀ ಪಾಲಾಕ್ಷ ಪ್ರಭು ಕೆ.ಎನ್,ಪಿಎಸ್‌ಐ, ಮಧುಗಿರಿ ಪೊಲೀಸ್ ಠಾಣೆರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶವೆನೆಂದರೆ ಪಿರ್ಯಾದಿಯು ಈ ದಿನ ದಿನಾಂಕ: 06-10-2017 ರಂದು ಬೆಳಿಗ್ಗೆ 09.00 ಗಂಟೆಗೆ ಮಧುಗಿರಿ ಟೌನ್ ನಲ್ಲಿ ಠಾಣಾ ಗುಪ್ತ ಮಾಹಿತಿ ಸಿಬ್ಬಂದಿ ಧರ್ಮಪಾಲನಾಯ್ಕ ಪಿಸಿ-125, ಮಲ್ಲಿಕಾರ್ಜುನ ಪಿಸಿ-461  ಮತ್ತು ಜೀಪ್ ಚಾಲಕ ಪುರುಷೋತ್ತಮ್ ರವರೊಂದಿಗೆ ಗಸ್ತು ಮಾಡುತ್ತಿರುವಾಗ್ಗೆ, ಬೆಳಿಗ್ಗೆ 09.15 ಗಂಟೆಯ ಸಮಯದಲ್ಲಿ ಠಾಣಾ ಸರಹದ್ದಿನ ಮಧುಗಿರಿ ಟೌನ್ ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಮಧುಗಿರಿ ವೈನ್ಸ್ ನಲ್ಲಿ ಅವಧಿಗೆ ಮುಂಚಿತವಾಗಿ ವೈನ್ಸ್ ಬಾಗಿಲು ತೆಗೆದು ನಿಯಮ ಉಲ್ಲಂಘಿಸಿ ಸಾರ್ವಜನಿಕರಿಗೆ ಮಧ್ಯವನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ವರ್ತಮಾನ ಬಂದ ಮೇರೆಗೆ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ವಿಚಾರ ತಿಳಿಸಿ ಅವರ ಜೊತೆ ಬೆಳಿಗ್ಗೆ 09.15 ಗಂಟೆಗೆ ವೈನ್ಸ್ ಸ್ಟೋರ್ ಮೇಲೆ ದಾಳಿ ಮಾಡಲಾಗಿ ಮಧುಗಿರಿ ವೈನ್ಸ್ ಬಾಗಿಲು ತೆರೆದಿದ್ದು, ನಮ್ಮನ್ನು ನೋಡಿದ ಕೂಡಲೇ ಅಲ್ಲಿ ಮದ್ಯ ಸೇವನೆ ಮಾಡುತ್ತಿದ್ದವರು ದಿಕ್ಕಾಪಾಲಾಗಿ ಓಡಿಹೋಗಿರುತ್ತಾರೆ. ವೈನ್ಸ್ ಸ್ಟೋರ್ ನ ಟೇಬಲ್ ನಲ್ಲಿ ವಿವಿದ ಬ್ರಾಂಡ್ ನ ಮಧ್ಯ, ಮದ್ಯ ತುಂಬಿದ ಪ್ಯಾಕೆಟ್ ಗಳು ಪ್ಲಾಸ್ಟಿಕ್ ಗ್ಲಾಸ್ ಗಳು ಮದ್ಯ ಅಳತೆ ಮಾಡುವ ಸಹಾಯಕ ಕ್ಯಾಷಿಯರ್ ಎಂದು ಪರಿಚಯಿಸಿಕೊಂಡ ಶರತ್ ಈತನನ್ನು ಪಂಚರ ಸಮಕ್ಷಮ ವಿಚಾರ ಮಾಡಲಾಗಿ ಈತನು ಮಾಲೀಕರ ಗಮನಕ್ಕೆ ಬಾರದಂತೆ ಹೆಚ್ಚಿನ ಹಣವನ್ನು ಸಂಪಾದಿಸುವ ಸಲುವಾಗಿ ಅವಧಿಗೆ ಮುಂಚೆ ವೈನ್ಸ್ ಸ್ಟೋರ್ ನ ಬಾಗಿಲು ತೆಗೆದು ಸಾರ್ವಜನಿಕರಿಗೆ ಮಧ್ಯ ಮಾರಾಟ ಮಾಡುತ್ತಿದ್ದು, ಸದರಿ ವೈನ್ಸ್ ಸ್ಟೋರ್ ನ ಲೈಸೆನ್ಸ್ ಕೇಳಲಾಗಿ ನೊಂದಣಿ ಸಂಖ್ಯೆ ಇಎಕ್ಸ್ಇ/ಐಎಂಎಲ್/ಎಂಜಿಐ/ಸಿಎಲ್-2/17/226/2017-18 ಅನ್ನು ಹಾಜರ್ ಪಡಿಸಿದ್ದು, ಲೈಸೆನ್ಸ್ ಕ್ರಮ ಸಂಖ್ಯೆ: 8 ಮತ್ತು 9 ರ ಉಲ್ಲಂಘನೆಯಾಗಿರುತ್ತದೆ. ಗಿರಾಕಿಗಳಿಗೆ ಮಧ್ಯ ಮಾರಾಟ ಮಾಡಿದ 1] ಅರ್ಧ ಉಪಯೋಗಿಸಿರುವ 90 ಎಂ.ಎಲ್ ನ ಬೆಂಗಳೂರು ಮಾಲ್ಟ್ ವಿಸ್ಕಿ, 2] ಅರ್ಧ ಉಪಯೋಗಿಸಿರುವ 180 ಎಂ.ಎಲ್ ನ ಓರಿಜಿನಲ್ ಚಾಯ್ಸ್ 3] 90 ಎಂ.ಎಲ್ ನ ಓರಿಜಿನಲ್ ಚಾಯ್ಸ್ 4] 04 ಪ್ಲಾಸ್ಟಿಕ್ ಗ್ಲಾಸ್‌ ಗಳು ಇವುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ವಶಪಡಿಸಿಕೊಂಡು ವೈನ್ಸ್ ಸ್ಟೋರ್ ನ ಸಹಾಯಕ ಕ್ಯಾಷಿಯರ್ ಶರತ್ ನನ್ನು ವಶಕ್ಕೆ ತೆಗೆದುಕೊಂಡು ಹಾಗೂ ವಶಪಡಿಸಿದ ವಸ್ತುಗಳ ಸಮೇತ ಠಾಣೆಗೆ ಹಾಜರಾಗಿ ಈ ಬಗ್ಗೆ ಮುಂದಿನ ಕ್ರಮ ಜರುಗಿಸಲು ಸೂಚಿಸಿ ನೀಡಿದ ಜ್ಞಾಪನ ಸ್ವೀಕರಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.89/2017, ಕಲಂ:15(ಎ), 32(3) ಕೆ.ಇ.ಆಕ್ಟ್.

ದಿನಾಂಕ:06/10/2017 ರಂದು 03:45 ಗಂಟೆಗೆ ರಾಣಾ ಸಿಪಿಸಿ-476 ವಿನಯ್ ಕುಮಾರ್ ರವರು ಠಾಣೆಗೆ ಹಾಜರಾಗಿ ನಾನು ಈ ದಿನ ಅಂದರೆ ದಿ:06/10/2017 ರಂದು ಠಾಣಾಧಿಕಾರಿಯವರ ನೇಮಕದಂತೆ ಮದ್ಯಾಹ್ನ 03:00 ಗಂಟೆಯಲ್ಲಿ ನಾನು ಮಿಡಿಗೇಶಿ ಗ್ರಾಮದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಮಿಡಿಗೇಶಿ ಗ್ರಾಮದ ಮಿಡಿಗೇಶಿ-ಐ.ಡಿ.ಹಳ್ಳಿ ರಸ್ತೆಯ ಪಕ್ಕದಲ್ಲಿರುವ ತಿರುಮಲ ವೈನ್ಸ್ ಅಂಗಡಿಯಲ್ಲಿ ಕ್ಯಾಷಿಯರ್ ರವರು ವೈನ್ಸ್ ಅಂಗಡಿಯ ಬಳಿ ಇದಕ್ಕೆ ಹೊಂದಿಕೊಂಡಂತಿರುವ ಒಂದು ಕೊಠಡಿಯಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾನೆಂದು ಬಾತ್ಮಿ ಬಂದಿದ್ದರಿಂದ ಕೂಡಲೇ ಮದ್ಯಾಹ್ನ 03:10 ಗಂಟೆಯಲ್ಲಿ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ ಸದರಿ ವೈನ್ಸ್ ಅಂಗಡಿಯ ಕ್ಯಾಷಿಯರ್ ರವರು ವೈನ್ಸ್ ಅಂಗಡಿಗೆ ಹೊಂದಿಕೊಂಡಿರುವ ಕೊಠಡಿಯ ಒಳಭಾಗ ಮದ್ಯವನ್ನು ಸೇವನೆ ಮಾಡಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವುದು ಕಂಡುಬಂದಿತು. ನಂತರ ಸದರಿ ಕ್ಯಾಷಿಯರ್ ನನ್ನು ವಿಚಾರ ಮಾಡಿ ಆತನ ಹೆಸರು ವಿಳಾಸ ತಿಳಿಯಲಾಗಿ ಮಂಜುನಾಥ ಬಿನ್ ಲೇ||ಓಬಳೇಶಪ್ಪ, 25 ವರ್ಷ, ಈಡಿಗ ಜನಾಂಗ, ಮಿಡಿಗೇಶಿ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ನಿಮ್ಮ ವೈನ್ಸ್ ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿ ಇದೆಯೇ ಎಂದು ಸದರಿ ಕ್ಯಾಷಿಯರ್ ನನ್ನು ಕೇಳಲಾಗಿ, ವೈನ್ಸ್ ಸ್ಟೋರ್ ಬಳಿ ಮಧ್ಯ ಸೇವನೆ ಮಾಡಲು ಸ್ಥಳಾವಾಕಾಶ ನೀಡುವ ಪರವಾನಗಿ ಇಲ್ಲವೆಂತ ತಿಳಿಸಿದ್ದರಿಂದ ಠಾಣೆಗೆ ವಾಪಸ್ಸ್ ಆಗಿ ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯ ಅಂಶವಾಗಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 173/2017 ಕಲಂ 283 ಐಪಿಸಿ ರೆ/ವಿ 181 ಐಎಂವಿ ಆಕ್ಟ್

ದಿನಾಂಕ-06/10/2017 ರಂದು ಸಂಜೆ 4-30 ಗಂಟೆಗೆ ಠಾಣಾ ಗುಪ್ತ ಮಾಹಿತಿ ಕರ್ತವ್ಯದ ಪಿಸಿ-220 ಮಂಜುನಾಥ ರವರು ಠಾಣೆಗೆ ಹಾಜರಾಗಿ ಪ್ಯಾಸೆಂಜರ್ ಆಟೋ ಮತ್ತು ಚಾಲಕನನ್ನು ಹಾಜರುಪಡಿಸಿ ನೀಡಿದ ವರಧಿಯ ಅಂಶವೇನೆಂದರೆ  ದಿನಾಂಕ 06/10/2017 ರಂದು ಬೆಳಿಗ್ಗೆ 8-00 ಗಂಟೆ  ಠಾಣಾ ಹಾಜರಾತಿಗೆ ಹಾಜರಾಗಿದ್ದು ಠಾಣಾಧಿಕಾರಿಯವರು ಠಾಣಾ ಸರಹದ್ದು ಗುಪ್ತ ಮಾಹಿತಿ ಕರ್ತವ್ಯಕ್ಕೆ ನೇಮಕ ಮಾಡಿದ್ದು ಅದರಂತೆ ಕೆಂಬಾಳಪುರ, ರಾಯವಾರ, ರಸ್ತೆಪಾಳ್ಯ ಕಡೆ ಗುಪ್ತ ಮಾಹಿತಿ ಪಡೆದುಕೊಂಡು ನಂತರ  ಸಿರವಾರಕ್ಕೆ ಹೋಗಲು ಸಾಯಿಂಕಾಲ 4-00 ಗಂಟೆಗೆ ಸಿರಿವರ ಹ್ಯಾಂಡ್‌ಪೋಸ್ಟ್ ಬಳಿ ಹೋಗುತ್ತಿರುವಾಗ್ಗೆ, ಹೆಬ್ಬೂರು-ಗುಬ್ಬಿ ರಸ್ತೆಯಲ್ಲಿ ಕೆಎ-06-ಡಿ-1456 ನೇ ಪ್ಯಾಸೇಂಜರ್ ಅಟೋ ಚಾಲಕನ್ನು ತನ್ನ ಅಟೋವನ್ನು ಗುಬ್ಬಿ ಕಡೆ ಹೋಗುವ ಟಾರ್ ರಸ್ತೆ ಮದ್ಯ ಭಾಗದಲ್ಲಿ ನಿಲ್ಲಿಸಿದ್ದು,ರಸ್ತೆಯಲ್ಲಿ ಸಾರ್ವಜನಿಕರ ವಾಹನಗಳಿಗೆ ಓಡಾಡಲು ಅಡಚಣೆಯಾಗುವಂತೆ  ಆಟೋವನ್ನು ನಿಲ್ಲಿಸಿಕೊಂಡಿದ್ದ ಅಟೋ ಚಾಲಕನ ಹೆಸರು ತಿಳಿಯಲಾಗಿ ಮರಿರೇವಯ್ಯ ಬಿನ್ ರೇವಣ್ಣ, 26 ವರ್ಷ, ಕುರುಬ ಜನಾಂಗ, ಕೆಎ-06-ಡಿ-1456 ನೇ ಆಟೋ ಚಾಲಕ, ಸಿದ್ದಣ್ಣನಪಾಳ್ಯ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೋಕು ಮತ್ತು ಜಿಲ್ಲೆ ಅಂತ ತಿಳಿಸಿದ್ದು, ಸದರಿ ಪ್ಯಾಸೇಂಜರ್ ಅಟೋ ಓಡಿಸಲು ಪರವಾನಿಗೆ ಕೇಳಲಾಗಿ ಈತನಿಗೆ ಚಾಲನೆ ಪರವಾನಿಗೆ ಇರುವುದಿಲ್ಲವೆಂತ ತಿಳಿಸಿದ್ದು, ರಸ್ತೆ ಮದ್ಯಭಾಗದಲ್ಲಿ ಜನರಿಗೆ ತೊಂದರೆಯಾಗುವಂತೆ ನಿಲ್ಲಿಸದ್ದರ ಬಗ್ಗೆ ಕೇಳಲಾಗಿ ಸಮಾಂಜಸ ಉತ್ತರ ನೀಡಲಿಲ್ಲ. ಅದ್ದರಿಂದ ಮುಂದಿನ ಕ್ರಮಕ್ಕಾಗಿ ಸದರಿ ಕೆಎ-06-ಡಿ-1456 ನೇ ಪ್ಯಾಸೇಂಜರ್ ಆಟೋವನ್ನು ಮತ್ತು ಚಾಲಕನನ್ನು ಮುಂದಿನ ನಡವಳಿಕೆಗಾಗಿ ಠಾಣೆಗೆ ತಂದು ಹಾಜರು ಪಡಿಸಿರುತ್ತೇನೆ ಎಂದು ನೀಡಿದ ವರಧಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್ ನಂ 18/17 ಕಲಂ 174 ಸಿ ಆರ್  ಪಿ ಸಿ

ದಿನಾಂಕ:06-10-2017 ರಂದು ಬೆಳಿಗ್ಗೆ 09:30 ಪಿರ್ಯಾದುದಾರರಾದ  ಬಿ ಎಸ್ ಮಹೇಶ್ ಬಿನ್ ಸಣ್ಣೀರಪ್ಪ, ಬೀರನಹಳ್ಳೀ ಗ್ರಾಮ, ಶಿರಾ ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪ್ರತಿದಿನದಂತೆ ಪಿರ್ಯಾದಿ  ಹಂಡತಿ  ಟಿ ಮಂಜುಳಾ 06-10-2017 ರಂದು ಬೆಳಿಗ್ಗೆ ಸುಮಾರು 06:30 ಗಂಟೆ ಸಮಯದಲ್ಲಿ ಶೆಡ್ ನ ಗೊಂತಿನಲ್ಲಿ ಕಟ್ಟಿದ್ದ  ಹಸುವಿನ ಹಾಲನ್ನು ಕರೆಯುತ್ತಿದ್ದು  ಇತ್ತೀಚಿಗೆ ಪ್ರತಿ ದಿನವು ಮಳೆ  ಬರುತ್ತಿದ್ದು  ಶೆಡ್ ಗಾಗಿ ನಿರ್ಮಿಸಿದ್ದ ಗೋಡೆಯು ನೆನದಿದ್ದು ಉತ್ತರದ ಕಡೆ ಇರುವ ಸುಮಾರು 10 ಅಡಿ ಎತ್ತರದ ಅರ್ದಗೋಡೆಯು ಪಿರ್ಯಾದಿ, ಪಿರ್ಯಾದಿ ಹೆಂಡತಿ ಮತ್ತು  ಹಸುವಿನ ಮೇಲೆ ಕುಸಿದು ಪಿರ್ಯಾದಿಗೆ ಮತ್ತು ಹಸು ಈ ಅಪಾಯದಿಂದ ಪರಾಗಿದ್ದು. ಪಿರ್ಯಾದಿ ಹೆಂಡತಿ ಮಂಜುಳಾ ರವರು  ಗೋಡೆ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದು ನರೆ-ಹೊರೆಯವರ ಸಹಾಯದಿಂದ ಗೋಡೆ ಇಟ್ಟಿಗೆಗಳನ್ನು ತೆಗೆದು ಮನೆಯ ಮುಂಭಾಗ ಮಲಗಿಸಿ ನೋಡಲಾಗಿ  ತುಟಿ, ಗಲ್ಲ, ಬೆನ್ನಿಗೆ ಮತ್ತು ಕೈಕಾಲುಗಳಿಗೆ ಪೆಟ್ಟುಗಳು ಬಿದ್ದಿದ್ದು  ನೀರು ಕುಡಿಸಿ ಉಪಚರಿಸಿದ ಸ್ವಲ್ಪ ಸಮಯದ ನಂತರ ಪಿರ್ಯಾದಿ ಹೆಂಡತಿ ಮೃತಪಟ್ಟಿರುತ್ತಾಳೆ. ಈ ಸಾವಿಗೆ ಮಳೆಯಿಂದ ನೆನದಿದ್ದ ಗೋಡೆ ಆಕಸ್ಮೀಕವಾಗಿ  ಮೇಲೆ ಬಿದ್ದು ಮೃತಪಟ್ಟಿರುತ್ತಾರೆಂತ  ಇತ್ಯಾದಿಯಾಗಿ   ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ  ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ

 

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 125/2017, ಕಲಂ 279, 337 ಐಪಿಸಿ.

ದಿನಾಂಕ 06-10-2017 ರಂದು ಸಾಯಂಕಾಲ 04-00 ಗಂಟೆಗೆ ಪಿರ್ಯಾದಿ  ಜಯದೇವಮೂರ್ತಿ  ಬಿನ್ ಪಂಚಾಕ್ಷರಯ್ಯ, 43 ವರ್ಷ, ಲಿಂಗಾಯತರು, ಶಿಕ್ಷಕರು, ಕಂದಿಕೆರೆ, ಚಿ.ನಾ ಹಳ್ಳಿ ತಾಲ್ಲೂಕು ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ,  ದಿನಾಂಕ 03-10-2017 ರಂದು ನನ್ನ ತಂದೆಯವರಾದ ಪಂಚಾಕ್ಷರಯ್ಯ (78 ವರ್ಷ) ರವರು ಕಂದಿಕೆರೆಯಿಂದ ಶೇಷಪ್ಪನಹಳ್ಳಿ ದೇವಸ್ಥಾನಕ್ಕೆ ಹೋಗಿ ಬರುವಾಗ ಬೆಳ್ಳಿಗ್ಗೆ 09-30 ಗಂಟೆ ಸಮಯದಲ್ಲಿ ಕಲ್ಲೇನಹಳ್ಳಿ ಬಳಿ  TVS XL, KA-44 J-5600 ದ್ವಿ ಚಕ್ರ ವಾಹನದಲ್ಲಿ ಬರುವಾಗ  ಬಡಕೆಗುಡ್ಲು ವಾಸಿ ಹನುಮಂತಪ್ಪ ಬಿನ್ ಈರಾಬೋವಿ ರವರು passion pro KA-44  S-9381 ನೇ ವಾಹನದಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದು ನಮ್ಮ ತಂದೆಯ ಗಾಡಿಗೆ ಗುದ್ದಿ ತೀರ್ವವಾಗಿ ಅಪಘಾತವುಂಟು ಮಾಡಿರುತ್ತಾರೆ. ಈ ವಿಚಾರವನ್ನು ಸ್ಥಳೀಯರಾದ ಆನಂದ ಹಾಗೂ ರಾಮಚಂದ್ರರಾವ್ ರವರು ನಮ್ಮ ತಂದೆಗೆ ಆದ ಅಪಘಾತದ ಬಗ್ಗೆ ತಿಳಿಸಿ ಹುಳಿಯಾರು ಆಸ್ಪತ್ರೆಗೆ  ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಬರುತ್ತಿದ್ದೇವೆ ಎಂದು ಪೋನ್ ಮೂಲಕ ತಿಳಿಸಿದರು. ನಾನು ತಕ್ಷಣ ಹುಳಿಯಾರು ಆಸ್ಪತ್ರೆಗೆ ಬಂದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಎಕ್ಸ್ ರೇ ತೆಗೆಸಿ ನೋಡಿದಾಗ ಬಲಗಾಲಿನ ಬೆರಳುಗಳ ಮೂಳೆ ಮುರಿದಿದ್ದು & ತಲೆಯ ಭಾಗಕ್ಕೆ ತೀವ್ರವಾದ ಪೆಟ್ಟು ಬಿದ್ದಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಹೋಗಿ ಚಿಕಿತ್ಸೆ ಕೊಡಿಸಿ, ನಂತರ ವೈದರ ಸಲಹೆ ಮೇರೆಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಸಂಜಯಗಾಂದಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ನಂತರ ಕಾಲು ಬೆರಳುಗಳ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿರುತ್ತೆ ಎಂದು ವೈದ್ಯರು ತಿಳಿಸಿರುತ್ತಾರೆ. ನಮ್ಮ ತಂದೆಯವರನ್ನು ಬೆಂಗಳೂರು ಅಸ್ಪತ್ರೆಯಲ್ಲಿ ನೋಡಿಕೊಳ್ಳುತ್ತಿದ್ದರಿಂದ ಈ ದಿನ ತಡವಾಗಿ ಬಂದು  ಮೇಲ್ಕಂಡ ಬೈಕ್ ಸವಾರನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ತಾವರೇಕರೆ ಪೊಲೀಸ್ ಠಾಣೆ ಮೊ.ಸಂ 139/2017 ಕಲಂ 279,337, 304 (ಎ ) ಐಪಿಸಿ

ದಿನಾಂಕ-06-10-2017ರಂದು ರಾತ್ರಿ 11-00 ಗಂಟೆಯಲ್ಲಿ ಪಿರ್ಯಾದಿ ಹರ್ಷ.ಕೆ.ಸಿ ಬಿನ್ ಚಿಕ್ಕತೋಪಯ್ಯ 27ವರ್ಷ ನಾಯಕರು ಕೋರಾ ಗ್ರಾಮ ತುಮಕೂರು ತಾಲೂಕ್ ಮೊ ನಂ-9972541611 ರವರು ಠಾಣೆಗೆ ಹಾಜರಾಗಿ ಕೊಟ್ಟ ಲಿಖಿತ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ-06-10-2017ರಂದು ಶಿರಾ ತಾಲೂಕ್ ಹೊಸೂರು ಗ್ರಾಮದ ವಾಸಿಯಾಧ ರಾಕೇಶ್ ಬಿನ್ ಮಂಜುನಾಥರವರು ಅವರ ಊರಿನಲ್ಲಿ ನಡೆಯುವ ಹಬ್ಬಕ್ಕೆ ಕರೆಯಲು ಅವರ ಮಾವನಾದ ನಾಗರಾಜುರವರ ಮನೆಗೆ ಬಂದಿದ್ದನು ನಾವುಗಳೆಲ್ಲರೂ ಸಂಬಂಧಿಕರಾಗಿದ್ದರಿಂದ ಹೊಸೂರಿಗೆ ಹೋಗಲು ಸಾಯಂಕಾಲ ಸುಮಾರು 04-00ಗಂಟೆಗೆ ಕೋರಾ ಗ್ರಾಮದಿಂದ ನಾನು & ಮನೋಜ್ ಕುಮಾರ್ ರವರು KA-64 L-2166ನೇ ದ್ವಿಚಕ್ರ ವಾಹನದಲ್ಲಿ ಹಾಗೂ ರಾಕೇಶ ರವರು KA-06 EX-0307 ನೇ ದ್ವಿ ಚಕ್ರ ವಾಹನದ ಹಿಂಬದಿಯಲ್ಲಿ ಅವರ ಮಾವನಾದ ನಾಗರಾಜುರವರನ್ನು ಕೂರಿಸಿಕೊಂಡು ರಾಕೇಶ್ ರವರು ದ್ವಿ ಚಕ್ರವಾಹನವನ್ನು ಚಾಲನೆ ಮಾಡುತ್ತಾ ನಾವು ಹಿಂದೆ ಮುಂದೆ ಹೋಗುತ್ತಿರಬೇಕಾದರೆ ಮಾರ್ಗ ಮದ್ಯೆ ಶಿರಾ ಚಂಗಾವರ ರಸ್ತೆಯಲ್ಲಿ ಬಿದರೆಕೆರೆ ಗೊಲ್ಲರಹಟ್ಟಿ ಸಮೀಪ ಸಂಜೆ ಸುಮಾರು 06-00ಗಂಟೆಗೆ ರಾಕೇಶ್ ಎಂಬುವವನು ದ್ವಿಚಕ್ರ ವಾಹನವನ್ನು ಅತೀವೇಗ & ಅಜಾಗರೂಕತೆಯಿಂದ ಓಡಿಸಿಕೊಂಡು ಹೋಗಿ ರಸ್ತೆಯ ಬದಿಯ ಸೇತುವೆಗೆ ಡಿಕ್ಕಿ ಹೊಡೆಸಿ ಅಪಘಾತ ಮಾಡಿದ್ದರಿಂದ ದ್ವಿ ಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ನಾಗರಾಜು & ಚಾಲನೆ ಮಾಡುತ್ತಿದ್ದ ರಾಕೇಶ್ ಇಬ್ಬರು ದ್ವಿ ಚಕ್ರ ವಾಹನದ ಸಮೇತ ಕೇಳಕ್ಕೆ ಬಿದ್ದರು.ಹಿಂದೆ ಹೋಗುತ್ತಿದ್ದ ನಾವುಗಳು ಕೂಡಲೇ ಸ್ಥಳಕ್ಕೆ ಹೋಗಿ ಗಾಯಾಳುಗಳನ್ನು ಎತ್ತಿ ಉಪಚರಿಸಿ ನೋಡಲಾಗಿ ನಾಗರಾಜು ಬಿನ್ ಚಿಕ್ಕಣ್ಣರವರ ತಲೆಗೆ ಕೈ ಕಾಲಿಗೆ ತೀವ್ರವಾದ ಪೆಟ್ಟು ಬಿದ್ದು ರಕ್ತಗಾಯಗಳಾಗಿತ್ತು.ದ್ವಿ ಚಕ್ರ ವಾಹನದ ಸವಾರ ರಾಕೇಶನಿಗೂ ಸಹ ಕೈ ಕಾಲಿಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿರುತ್ತೆ.ಕೂಡಲೇ ನಾವುಗಳು ಗಾಯಾಳುಗಳನ್ನು ಚಿಕೆತ್ಸೆಗಾಗಿ ಅಂಬ್ಯುಲೆನ್ಸನಲ್ಲಿ ಶಿರಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮದ್ಯೆ ತೀವ್ರವಾಗಿ ಗಾಯಗೊಂಡಿದ್ದ ನಾಗರಾಜು ರವರು ಸಂಜೆ ಸುಮಾರು 06-30ಗಂಟೆಯಲ್ಲಿ ಮೃತ ಪಟ್ಟಿರುತ್ತಾನೆ.ನಂತರ ಶವವನ್ನು ಶವಗಾರಕ್ಕೆ ಸಾಗಿಸಿ ಈ ಅಪಘಾತ ವಿಚಾರವನ್ನು ಅವರ ಸಂಬಂದಿಕರಿಗೆ ತಿಳಿಸಿ ಈಗ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. KA-06 EX-0307 ನೇ ದ್ವಿ ಚಕ್ರ ವಾಹನದ ಸವಾರನಾದ ರಾಕೇಶ ರವರ ಅತೀವೇಗ ಅಜಾಗರೂಕತೆಯಿಂದ ಈ ಅಪಘಾತ ಸಂಬವಿಸಿದ್ದು ಈತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಿ ಎಂತ ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.

ಹೊಸಬಡಾವಣೆ ಪೊಲೀಸ್ ಠಾಣಾ   ಮೊ.ಸಂ 122/2017 U/S 341, 323, 324, 504, 506 R/W 34 IPC

ದಿ: 06-10-2017 ರಂದು ಬೆಳಗ್ಗೆ 10-30 ಗಂಟೆಗೆ ಪಿರ್ಯಾದಿ ತರುಣ್ ಕುಮಾರ್ ಬಿನ್ ಕೃಷ್ಣಮೂರ್ತಿ (34) ಕೆ.ಹೆಚ್.ಬಿ ಕಾಲೋನಿ, ಶಿರಾಗೇಟ್, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಪಿರ್ಯಾದಿಯು ಬಜರಂಗದಳದ ಜಿಲ್ಲಾ ಸಂಚಾಲಕರು  ಆಗಿರುತ್ತಾರೆ ಎಸ್.ಎಸ್. ಪುರಂ, ಎಸ್.ಐ.ಟಿ ಅಶೋಕನಗರಗಳಲ್ಲಿ ಗಂಧರ್ವ ರಾಜ್, ಕಿರಣ್ ಹಾಗೂ ಚೇತನ್ ಎಂಬುವರುಗಳು ಗುಂಪುಕಟ್ಟಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದು ಪಿರ್ಯಾದಿಯು ಅವರಿಗೆ ಬುದ್ದಿವಾದ ಹೇಳಿ ಸದರಿ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದರಿಂದ  ಗಂಧರ್ವ ರಾಜ್, ಕಿರಣ್, ಚೇತನ್ ರವರುಗಳು ಪಿರ್ಯಾದಿ ಮೇಲೆ ದ್ವೇಷ ಸಾಧಿಸಿ ದಿ: 05-10-2017 ರಂದು ರಾತ್ರಿ ಸುಮಾರು 9-50 ಗಂಟೆ ಸಮಯದಲ್ಲಿ ಪಿರ್ಯಾದಿಯು ಕಚೇರಿಯ ಕೆಲಸ ಮುಗಿಸಿಕೊಂಡು ಸಂಬಂಧಿಕರ ದ್ವಿ ಚಕ್ರ ವಾಹನದಲ್ಲಿ ಹೋಗುತ್ತಿರುವಾಗ್ಗೆ ಮೇಲ್ಕಂಡ ಮೂವರು ಆರೋಪಿಗಳು ಪಿರ್ಯಾದಿಯನ್ನು ಅಡ್ಡಗಟ್ಟಿ ನಿಲ್ಲಿಸಿಕೊಂಡು ಅವ್ಯಾಚ್ಯ ಶಭ್ದಗಳಿಂದ ನಿಂದಿಸಿ ತಮ್ಮ ಕೈನಲ್ಲಿದ್ದ ಯಾವುದೋ ವಸ್ತುವಿನಿಂದ ಪಿರ್ಯಾದಿಯ ತಲೆ  ಹಿಂಭಾಗಕ್ಕೆ ಬಲವಾಗಿ ಗುದ್ದಿ ನಂತರ ಕಾಳುಗಳಿಂದ ಒದ್ದು ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರು

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 84/2017 - ಕಲಂ 279-337 ಐಪಿಸಿ ರೆ/ವಿ  134(ಎ)(ಬಿ)  ಐ ಎಂ ವಿ ಆಕ್ಟ್‌. .

ದಿನಾಂಕ:06/10/2017 ರಂದು ಮದ್ಯಾಹ್ನ 3-30 ಗಂಟೆಗೆ ಪಿರ್ಯಾದಿ ರಂಗನಾಥ ಬಿನ್ ಮಹಾಲಿಂಗಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿ:04/10/2017 ರಂದು  ಬೆಳಗ್ಗೆ 11-00 ಗಂಟೆಗೆ ನಾನು ಕೆಲಸದ ಮೇಲೆ  ಮಧುಗಿರಿಗೆ ಹೋಗಿ ಕೆಲಸ ಮುಗಿಸಿಕೊಂಡು ಊರಿಗೆ ಹೋಗಲು ಕೆಎ-64-ಜೆ-4729 ರ ಹೊಂಡಾ ಶೈನ್‌ ಬೈಕ್‌‌ ನ ಹಿಂಬದಿಯಲ್ಲಿ ನನ್ನ ಅಣ್ಣ  ದೇವರಾಜನನ್ನು ಕೂರಿಸಿಕೊಂಡು  ಬೈಕ್‌‌ ಅನ್ನು ನಾನು ಓಡಿಸಿಕೊಂಡು  ಮದ್ಯಾಹ್ನ 3-00 ಗಂಟೆಯಲ್ಲಿ  ದೊಡ್ಡೇರಿ ಹತ್ತಿರ ಬರುತ್ತಿದ್ದಾಗ ಕೆಎ-16-ಸಿ-7793 ನೇ ಕ್ಯಾಂಟರ್‌ ಗಾಡಿಯನ್ನು ನಿಲ್ಲಿಸಿದ್ದು, ನಂತರ ಚಾಲಕ ವಾಹನವನ್ನು  ಸ್ಟಾರ್ಟ್ ಮಾಡಿಕೊಂಡು ಅಜಾಗರೂಕತೆಯಿಂದ ಮತ್ತು ಅತಿವೇಗ ದಿಂದ ನಮ್ಮನ್ನು ನೋಡದೆ ಹಾಗೂ ಯಾವುದೇ ತರಹದ ಸಿಗ್ನಲ್‌ ಕೊಡದೆ ಬಲಗಡೆಗೆ ತಿರುಗಿಸಿದ್ದರಿಂದ  ಬೈಕ್‌‌ ನ ಹಿಂಬದಿಯಲ್ಲಿ ಕುಳಿತಿದ್ದ ನನ್ನ ಅಣ್ಣನ ಎಡಗಾಲಿಗೆ  ಕ್ಯಾಂಟರ್‌ ಲಾರಿಯ ಬಂಪರ್‌ ತಗುಲಿ ಮೂಳೆ ಮುರಿದು ರಕ್ತಗಾಯವಾಗಿರುತ್ತೆ. ತಕ್ಷಣ ನಾನು ನನ್ನ ಅಣ್ಣ ಗಾಯಾಳುವನ್ನು ದೊಡ್ಡೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದೆ, ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ನಾನು ನನ್ನ ಅಣ್ಣನನ್ನು ತುಮಕೂರಿನಲ್ಲಿರುವ ಆದಿತ್ಯ ಆಸ್ಪತ್ರೆಗೆ  ದಾಖಲಿಸಿ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು,  ಕ್ಯಾಂಟರ್‌ ಕೆಎ-16-ಸಿ-7793 ರ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದು ಅಂಶವಾಗಿರುತ್ತೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 48 guests online
Content View Hits : 304474