lowborn Press Note 21-09-17 | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ಜಯನಗರ ಪೊಲೀಸ್ ಠಾಣಾ ಮೊ.ನಂ. 156/2017 ಕಲಂ 20 (ಬಿ) ಎನ್‌.ಡಿ.ಪಿ.ಎಸ್ ಆಕ್ಟ್‌ ದಿನಾಂಕ: 25-11-2017 ರಂದು... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >> NEW BEAT BEST STAFF AND BEST CRIME DETECTION STAFF >> ಶಿರಾ ಗೇಟ್ ರಸ್ತೆಯ ಆಗಲೀಕರಣ ಹಿನ್ನಲೆ ಸಂಚಾರ ಮಾರ್ಗದಲ್ಲಿ ಬದಲಾವಣೆ. >> ಪತ್ರಿಕಾ ಪ್ರಕಟಣೆ ದಿನಾಂಕ:19-11-2017. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ:17-11-2017. ಮೂರು ಜನ ಅಂತರ ರಾಜ್ಯ ಕಳ್ಳರ ಬಂಧನ : 8 ಲಕ್ಷದ 50 ಸಾವಿರ... >> ದಿನಾಂಕ.17.11.2017. ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಪೊಲೀಸ್... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Press Note 21-09-17

 

: : ಪತ್ರಿಕಾ ಪ್ರಕಟಣೆ : :

::   ದಿನಾಂಕ: 21-09-2017 : :

ದಿನಾಂಕ: 20-09-2017 ರಂದು ಕಳವು ಪ್ರಕರಣಗಳಲ್ಲಿ ಮಾಲು ಮತ್ತು ಆರೋಪಿಗಳ ಪತ್ತೆಗಾಗಿ ಸಿಬ್ಬಂದಿಯವರಾದ ಮುನಾವರ್ ಪಾಷ, ಸೈಮನ್‌‌ ವಿಕ್ಟರ್, ಲೋಕೇಶ, ಪರಶುರಾಮ ರವರುಗಳಿಗೆ ನೇಮಕ ಮಾಡಿದ್ದು, ಸದರಿ ಸಿಬ್ಬಂದಿಯವರು ಗಸ್ತಿನಲ್ಲಿರುವಾಗ್ಗೆ ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ  ಉಪ್ಪಾರಹಳ್ಳಿ ರೈಲ್ವೆ ಬ್ರಿಡ್ಜ್‌ ಪಕ್ಕ ಗೂಡ್‌‌‌ಶೆಡ್‌‌ ಕಾಲೋನಿ‌ ಕಡೆಗೆ ಹೋಗುವ ರಸ್ತೆಯಲ್ಲಿ ಉಪ್ಪಾರಹಳ್ಳಿ ಕಡೆಯಿಂದ ಒಬ್ಬ ವ್ಯಕ್ತಿ ಬರುತ್ತಿದ್ದವನು ಪೊಲೀಸರನ್ನು ನೋಡಿ ಮುಖ ಮರೆಮಾಚುತ್ತಾ ಓಡಲು ಪ್ರತ್ನಿಸಿದವನನ್ನು ಸಿಬ್ಬಂದಿಯವರು ಬೆನ್ನಟ್ಟಿ ಹಿಡಿದುಕೊಂಡಾಗ ಸದರಿ ಆಸಾಮಿಯು ಜಯನಗರ ಪೊಲೀಸ್ ಠಾಣೆಯ ಹಾಲಿ ಎಂ.ಓ.ಬಿ. ಆಸಾಮಿಯಾದ ಸಿಖಂದರ್‌ @ ಭೇಟ ಬಿನ್ ಏಜಾಸ್ @ ಮೈಸೂರಿ, 20 ವರ್ಷ, ವೆಲ್ಡಿಂಗ್‌‌ ಕೆಲಸ, ವಾಸ ಹಬೀಬಿಯಾ ಮಸೀದಿ ಹಿಂಭಾಗ, 17 ನೇ ಕ್ರಾಸ್‌, ಶಾಂತಿನಗರ, ತುಮಕೂರು ಆಗಿದ್ದು, ಆತನ ಪ್ಯಾಂಟಿನ ಬಲಭಾಗದ ಜೇಬಿನಲ್ಲಿ ಚಿನ್ನದಂತಿರುವ ಒಂದು ಸರ ಹಾಗೂ ಒಂದು ಉಂಗುರ ಇದ್ದು, ಸದರಿ ವಡವೆಗಳ ಬಗ್ಗೆ ಸಮಂಜಸವಾದ ಉತ್ತರ ನೀಡದ ಕಾರಣ ಸದರಿ ವಡವೆಗಳನ್ನು ಕಳವು ಮಾಡಿಕೊಂಡು ತಂದಿರಬಹುದೆಂಬ ಅನುಮಾನದ ಮೇರೆಗೆ ಆಸಾಮಿಯನ್ನು ಮಾಲಿನ ಸಮೇತ ಜಯನಗರ ಪೊಲೀಸ್ ಠಾಣೆಗೆ ರಾತ್ರಿ 8-30 ಗಂಟೆಗೆ ತಂದು ಹಾಜರ್ಪಡಿಸಿದ್ದು, ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಡಾ:ದಿವ್ಯಾ ವಿ.ಗೋಪಿನಾಥ್, ಐ.ಪಿ.ಎಸ್,  ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಡಾ: ಶೋಭಾರಾಣಿ ಕೆ.ಎಸ್.ಪಿ.ಎಸ್, ರವರ ಮಾರ್ಗದರ್ಶನದಲ್ಲಿ ತುಮಕೂರು ಉಪವಿಭಾಗದ ಪ್ರಭಾರ ಡಿ.ವೈ.ಎಸ್.ಪಿ. ಸಾಹೇಬರಾದ ಶ್ರೀ ಧರ್ಮೇಂಧ್ರ ಹೆಚ್.ಎನ್. ಹಾಗೂ ತಿಲಕ್‌‌ಪಾರ್ಕ್‌ ವೃತ್ತದ ಸಿ.ಪಿ.ಐ. ಶ್ರೀ ಟಿ.ಎಸ್. ರಾಧಕೃಷ್ಣ ರವರ ನೇತೃತ್ವದಲ್ಲಿ ಜಯನಗರ ಪೊಲೀಸ್ ಠಾಣಾ ಪಿ.ಎಸ್.ಐ ಶ್ರೀ ನವೀನ್‌‌ ಹೆಚ್.ಎಸ್. ಹಾಗೂ ಸಿಬ್ಬಂದಿಯವರು ಸಿಖಂದರ್‌ @ ಭೇಟ ಬಿನ್ ಏಜಾಸ್ @ ಮೈಸೂರಿಯನ್ನು ವಿಚಾರಣೆಗೊಳಪಡಿಸಿದ್ದು, ವಿಚಾರಣಾ ಕಾಲದಲ್ಲಿ ತಾನು ಹಾಗೂ ಶಾಂತಿನಗರ ವಾಸಿ ರಾಖೇಶ ಬಿನ್. ನಾರಾಯಣಪ್ಪ ಇಬ್ಬರೂ ಸೇರಿ ಈಗ್ಗೆ ಸುಮಾರು ಒಂದು ತಿಂಗಳ ಹಿಂದೆ ತುಮಕೂರು ರೈಲ್ವೆ ನಿಲ್ದಾಣದಲ್ಲಿ ರೈಲಿನಲ್ಲಿ ಸ್ಲೀಪರ್‌‌ಕೋಚ್‌‌ನಲ್ಲಿ ಮಲಗಿದ್ದ ಒಂದು ಹೆಂಗಸಿನ ಬಳಿ ಇದ್ದ ವ್ಯಾನಿಟಿ ಬ್ಯಾಗನ್ನು ಕಳವು ಮಾಡಿಕೊಂಡು ಹೋಗಿದ್ದು, ವ್ಯಾನಿಟಿ ಬ್ಯಾಗಿನಲ್ಲಿ ಚಿನ್ನದ ವಡವೆಗಳು ಹಾಗೂ ಹಣ ಇತ್ತೆಂದು  ಸುಳಿವು ನೀಡಿದ್ದರ ಮೇರೆಗೆ ಮತ್ತೊಬ್ಬ ಆರೋಪಿ ರಾಖೇಶ @ ರಾಕಿ ಬಿನ್. ನಾರಾಯಣಪ್ಪ, 19 ವರ್ಷ, ವಕ್ಕಲಿಗರು, ಪ್ರೈವೇಟ್‌‌ ಪ್ಯಾಕ್ಟರಿಯಲ್ಲಿ ಕೆಲಸ, ಕಾವೇರಿ ಸ್ಕೂಲ್‌‌ ಹತ್ತಿರ, ಶಾಂತಿನಗರ, ತುಮಕೂರು ಈತನನ್ನು ದಸ್ತಗಿರಿ ಮಾಡಿಕೊಂಡು ಇವರುಗಳ ಬಳಿ ದೊರೆತ ಸುಮಾರು 9, 14, 500  ಲಕ್ಷ ರೂಪಾಯಿ ಬೆಲೆಬಾಳುವ ಸುಮಾರು 357 ಗ್ರಾಂ ತೂಕದ ಚಿನ್ನದ ವಡವೆಗಳಾದ 1) ಒಂದು ಕರಿಯಮಣಿಯ ಚಿನ್ನದ ಸರ,  2) ಎರಡು ಚಿನ್ನದ ಕೊರಳ ಚೈನು 3) ಒಂದು ಚಿನ್ನದ ರೂಬಿ ಚೈನ್ 4) ನಾಲ್ಕು ಚಿನ್ನದ ಬಳೆಗಳು  5) ಎರಡು ಚಿನ್ನದ ಜೊತೆ ಓಲೆ-ಜುಂಕಿ  6) 3 ಚಿನ್ನದ ಉಂಗುರಗಳು  ಹಾಗೂ ಸುಮಾರು 82 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದ್ದು, ಈ ಬಗ್ಗೆ ತುಮಕೂರು ಜಯನಗರ ಪೊಲೀಸ್ ಠಾಣೆಯಲ್ಲಿ ಮೊ.ನಂ. 128/2017 ಕಲಂ 41 ಕ್ಲಾಸ್(ಡಿ) 102 ಸಿ.ಆರ್.ಪಿ.ಸಿ.  ರೆ/ವಿತ್ 379 ಐ.ಪಿ.ಸಿ. ರೀತ್ಯಾ ಪ್ರಕರಣವು ದಾಖಲಾಗಿರುತ್ತೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ತುಮಕೂರು ಜಿಲ್ಲಾ ಎಸ್.ಪಿ.ಸಾಹೇಬರವರು ಅಭಿನಂದಿಸಿರುತ್ತಾರೆ.

 

Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 45 guests online
Content View Hits : 211018