lowborn Crime Incidents 13-09-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 13-09-17

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ: 183/2017 ಕಲಂ: ಕಲಂ: 3, 42, 43 ಕೆ.ಎಂ.ಎಂ.ಸಿ.ಆರ್-1994 ಮತ್ತು ಕಲಂ: 4, 4(1ಎ), 21 (1 ರಿಂದ 5) ಎಂ.ಎಂ..ಆರ್.ಡಿ ಆಕ್ಟ್ -1957

ದಿನಾಂಕ: 12-09-2017 ರಂದು ಮಧ್ಯಾಹ್ನ 03-30 ಗಂಟೆಗೆ ನವೀನ್ ಪಿ.ಎಸ್, ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ: 11-08-2017 ಮತ್ತು ದಿನಾಂಕ: 22-08-2017 ರಂದು ಮೋದೂರು ಮತ್ತು ಕಲ್ಲನಾಯ್ಕನಹಳ್ಳಿ ಗ್ರಾಮಸ್ಥರು ನೀಡಿದ ಮನವಿಯ ಮೇರೆಗೆ ಕಛೇರಿಯ ಶ್ರೀ ಲೋಕೇಶ್ ಕುಮಾರ್ ಜಿ ಎನ್, ಹಿರಿಯ ಭೂ ವಿಜ್ಞಾನಿ ರವರೊಂದಿಗೆ ಕೆಎ-04-ಜಿ-865 ನೇ ಇಲಾಖಾ ಜೀಪಿನಲ್ಲಿ ಕುಣಿಗಲ್ ತಾಲ್ಲೋಕು ಕಲ್ಲನಾಯ್ಕನಹಳ್ಳಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶಕ್ಕೆ ಮಧ್ಯಾಹ್ನ 01-30 ಗಂಟೆಗೆ ಭೇಟಿ ನೀಡಿದಾಗ ಸದರಿ ಪ್ರದೇಶದಲ್ಲಿ ಅಕ್ರಮವಾಗಿ ಒಂದು ಟ್ರಾಕ್ಟರ್ ನಿಲ್ಲಿಸಿಕೊಂಡು ಅದರ ಚಾಲಕ ಹಾಗೂ ಕೂಲಿ ಕಾರ್ಮಿಕರು ಕಟ್ಟಡಕಲ್ಲನ್ನು ತುಂಬುತ್ತಿದ್ದು, ಸಿಬ್ಬಂದಿಯನ್ನು ಕಂಡು ಓಡಿ ಹೋದರು. ಟ್ರಾಕ್ಟರ್ ನಲ್ಲಿ ಮುಕ್ಕಾಲು ಟನ್ ನಷ್ಟು ಕಟ್ಟಡ ಕಲ್ಲನ್ನು ತುಂಬಿರುತ್ತೆ. ಟ್ರಾಕ್ಟರ್ ನಂಬರ್ ನೋಡಲಾಗಿ ಕೆಎ-06-ಬಿ-6033/ಬಿ-6034 ಆಗಿರುತ್ತೆ. ಸದರಿ ಸ್ಥಳದಲ್ಲಿ ಹಾಜರಿದ್ದ ಗ್ರಾಮಸ್ಥರನ್ನು ವಿಚಾರಿಸಲಾಗಿ ಪ್ರಕಾಶ ಬಿನ್ ಮುದ್ದಹನುಮಯ್ಯ, ಮೋದೂರು ಗ್ರಾಮ ರವರು ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುತ್ತಾರೆಂತ ತಿಳಿಸಿರುತ್ತಾರೆ. ಮೇಲ್ಕಂಡ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದು ಕಲಂ: 3, 42, 43 ಕೆ.ಎಂ.ಎಂ.ಸಿ.ಆರ್-1994 ಮತ್ತು ಕಲಂ: 4, 4(1ಎ), 21 (1 ರಿಂದ 5) ಎಂ.ಎಂ..ಆರ್.ಡಿ ಆಕ್ಟ್ -1957 ರ ರೀತ್ಯಾ ಅಪರಾಧವಾದ್ದರಿಂದ ಸದರಿ ಟ್ರಾಕ್ಟರ್ ನ್ನು ವಶಕ್ಕೆ ಪಡೆದು ಬೇರೆ ಚಾಲಕನ ಸಹಾಯದಿಂದ ಠಾಣೆಯ ಬಳಿಗೆ ತಂದು ಹಾಜರುಪಡಿಸಿರುತ್ತೆ.

ಆದ್ದರಿಂದ ಸದರಿ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ  ಪ್ರಕಾಶ ಬಿನ್ ಮುದ್ದಹನುಮಯ್ಯ, ಮೋದೂರು ಗ್ರಾಮ, ಮತ್ತು ಟ್ರಾಕ್ಟರ್ ನ ಚಾಲಕ ಹಾಗೂ ಮಾಲೀಕರ ವಿರುದ್ದ ಮೇಲ್ಕಂಡ ನಿಯಮಗಳನ್ವಯ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದನ್ನು ಪಡೆದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 159/2017 ಕಲಂ 427,448,511 ಐಪಿಸಿ.

ದಿನಾಂಕ-12-09-2017 ರಂದು ಸಂಜೆ 6-15 ಗಂಟೆಗೆ ಪಿರ್ಯಾದಿಯಾದ ಬಸವರಾಜು,ಕೆ,ಜೆ ಬಿನ್ ಜಯಪ್ರಕಾಶ್‌, 27 ವರ್ಷ, ಲಿಂಗಾಯಿತರು, ಪ್ರೈವೇಟ್‌ ಕಂಪನಿಯಲ್ಲಿ ಕೆಲಸ ಹಾಗೂ ಅರ್ಚಕ ವೃತ್ತಿ, ಕೋಡಿಹಳ್ಳಿ, ಮುಳುಕುಂಟೆ ಪೋಸ್ಟ್‌, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿದ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದುಕೊಂಡು ಒಂದು ಪ್ರೈವೇಟ್‌ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುತ್ತೇನೆ ಹಾಗೂ ನಮ್ಮ ಕುಟುಂಬದವರು ಹಿಂದಿನಿಂದ ಪೂಜೆ ಮಾಡಿಕೊಂಡು ಬಂದಿರುವ ಮುದ್ದಹನುಮಯ್ಯನಪಾಳ್ಯ ಗ್ರಾಮಕ್ಕೆ ಸೇರಿದ ರಾಗಿಬೆಟ್ಟ( ಕೋವೆ ಬೆಟ್ಟ)ದಲ್ಲಿರುವ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕನಾಗಿ ಕೆಲಸ ಮಾಡಿಕೊಂಡಿರುತ್ತೇನೆ. ಸದರಿ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿರುತ್ತೆ. ನಾನು ಪ್ರತಿ ಸೋಮವಾರದಂದು ಅಥವಾ ಮಂಗಳವಾರದಂದು ವಾರಕ್ಕೆ ಒಂದು ದಿವಸ ಸದರಿ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಕೊಂಡು ಬರುತ್ತಿರುತ್ತೇನೆ. ಹೀಗಿರುವಾಗ್ಗೆ ನಾನು ದಿನಾಂಕ:03-09-2017 ರಂದು ನಾನು ಸದರಿ ಮೇಲ್ಕಂಡ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಕೊಂಡು, ನಂತರ ಸಾಯಂಕಾಲ ಸುಮಾರು 05-00 ಗಂಟೆಗೆ ದೇವಸ್ಥಾನದ ಬಾಗಿಲಿಗೆ ಬೀಗ ಹಾಕಿಕೊಂಡು ವಾಪಸ್‌ ಬಂದೆನು. ನಂತರ ನಾನು ದಿನಾಂಕ:12-09-2017 ರಂದು ಬೆಳಿಗ್ಗೆ ಸುಮಾರು 09-00 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಸ್ನೇಹಿತನಾದ ಬಸವರಾಜು ಬಿನ್ ಚಿಕ್ಕತಿಮ್ಮಯ್ಯ ಇಬ್ಬರೂ ಸದರಿ ಬೆಟ್ಟಕ್ಕೆ ಪೂಜೆ ಮಾಡಲೆಂದು ಹೋಗಿದ್ದು, ದೇವಸ್ಥಾನದ ಬಳಿ ಹೋಗಿ ನೋಡಲಾಗಿ ಯಾರೋ ದೇವಸ್ಥಾನದ ಬೀಗವನ್ನು ಹೊಡೆದಿದ್ದರು. ನಂತರ ನಾನು ಒಳಗೆ ಹೋಗಿ ನೋಡಲಾಗಿ ದೇವಸ್ಥಾನದ ಒಳಗೆ ಗರ್ಭಗುಡಿಯಲ್ಲಿ ಇರುವ ಬಸವಣ್ಣನ ಕಲ್ಲಿನ ವಿಗ್ರಹವನ್ನು ಹಾಳು ಮಾಡಿರುವುದು ಕಂಡು ಬಂತು ಹಾಗೂ ಅದರ ಎದುರುಗಡೆಯೇ ಇರುವ ರಾಮಲಿಂಗೇಶ್ವರ ಸ್ವಾಮಿ ಲಿಂಗವನ್ನು ನಾಶ ಮಾಡಿರುತ್ತಾರೆ. ಸದರಿ ದೇವಸ್ಥಾನದಲ್ಲಿ ಹುಂಡಿಯನ್ನಾಗಲೀ, ಬೆಲೆ ಬಾಳುವ ಆಭರಣಗಳನ್ನಾಗಲೀ ಇಟ್ಟಿರಲಿಲ್ಲ. ಸದರಿ ಮೇಲ್ಕಂಡ ದೇವಸ್ಥಾನಕ್ಕೆ ದಿನಾಂಕ:03-09-2017 ರ ಸಾಯಂಕಾಲ 05-00 ಗಂಟೆಯಿಂದ ದಿನಾಂಕ:12-09-2017 ರ ಬೆಳಿಗ್ಗೆ 09-00 ಗಂಟೆಯ ಮದ್ಯೆ ಯಾರೋ ದುಷ್ಕರ್ಮಿಗಳು ನಿಧಿ ಇರಬಹುದೆಂತಲೋ ಅಥವ ಇನ್ಯಾವುದೋ ಉದ್ದೇಶಕ್ಕೋ ದೇವಸ್ಥಾನದ ಗರ್ಭಗುಡಿಗೆ ಅತಿಕ್ರಮ ಪ್ರವೇಶ ಮಾಡಿ ದೇವಸ್ಥಾನದ ಕಲ್ಲಿನ ವಿಗ್ರಹಗಳನ್ನು ಹಾಳುಗೆಡವಿರುತ್ತಾರೆ. ಆದ್ದರಿಂದ ಆಸಾಮಿಗಳನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ನಮ್ಮ ಗ್ರಾಮದ ಪ್ರಮುಖರೊಂದಿಗೆ ಚರ್ಚಿಸಿ ಈ ವೇಳೆಗೆ ತಡವಾಗಿ ಬಂದು ದೂರನ್ನು ನೀಡುತ್ತಿದ್ದೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಮೊ ನಂ 100/2017 ಕಲಂ 323,324,354(ಎ),504,506 ಐಪಿಸಿ

ದಿನಾಂಕ:12-09-2017 ರಂದು ರಾತ್ರಿ 08:30 ಗಂಟೆಗೆ ಪಿರ್ಯಾದಿ ಲಕ್ಷ್ಮಕ್ಕ ಕೊಂ ಲೇಟ್  ರಾಮದಾಸಪ್ಪ, ಬಂದಕುಂಟೆ ಗ್ರಾಮ,  ಶಿರಾ ತಾಲ್ಲೋಕ್ ರವರು ಠಾಣೆಗೆ  ಹಾಜರಾಗಿ  ನೀಡಿದ ಲಿಖಿತ ದೂರಿನ ಸಾರಾಂಶವೇನಂದರೆ,  ದಿನಾಂಕ:11-09-17 ರಂದು ಸಾಯಂಕಾಲ ಸುಮಾರು 05:00 ಗಂಟೆ  ಸಮಯದಲ್ಲಿ  ಬಂದಕುಂಟೆ ಸರ್ವೆ ನಂ 34 ರ  ಪಿರ್ಯಾದಿ  ಬಾಬ್ತು ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಪಕ್ಕದ ಜಮೀನಿನವರಾದ  ಬಂದಕುಂಟೆ ಗ್ರಾಮದ ಜುಂಜಣ್ಣ ಬಿನ್ ರಾಮಣ್ಣ  ರವರು ಪಿರ್ಯಾದಿಯ ಜಮೀನಿಗೆ ಅಡಿಕೆಮಟ್ಟೆ, ತೆಂಗಿನ ಗರಿಯನ್ನು  ಹಾಕಿದ್ದು, ಇವುಗಳನ್ನು ಎತ್ತಿಕೊಳ್ಳಿ ಎಂದು ಪಿರ್ಯಾದಿ ಜುಂಜಣ್ಣ ರವರಿಗೆ ಹೇಳಿದ್ದಕ್ಕೆ ಯಾವುದೊ ದುರುದ್ದೇಶದಿಂದ ಪಿರ್ಯಾದಿ ರವರ ಜಮೀನಿಗೆ ಬಂದು ಕೆಟ್ಟ ಕೆಟ್ಟ  ಮಾತುಗಳನ್ನಾಡಿ  ಬೋಸುಡಿ ಎಂದು  ಬೈಯ್ದು ಎಳೆದಾಡಿ ಯಾವುದೊ ದೊಣ್ಣೆಯಿಂದ ಬಲಮೊಣಕಾಲಿಗೆ, ಬೆನ್ನಿಗೆ, ಕಿವಿಗೆ, ಹೊಟ್ಟೆಗೆ , ಎಡಕೈಗೆ  ಬೆನ್ನಿಗೆ  ಒದ್ದು ಕೆಳಕ್ಕೆ ಬಿದ್ದಾಗ ಕಾಲಿನಿಂದ  ಹೊಡೆದಿದ್ದು , ಈ ಜಗಳವನ್ನು ಜುಂಜಣ್ಣನ ಮಗನಾದ  ನರಸಿಂಹರಾಜು ಬಿಡಿಸಿದ್ದು ಜುಂಜಣ್ಣ ದೊಣ್ಣೆಯನ್ನು ಅಲ್ಲಿಯೇ  ಬಿಸಾಡಿ ಮತ್ತೆ ಜಮೀನಿನ ತಂಟೆಗೆ ಬಂದರೆ ನಿನ್ನನ್ನು ಇಲ್ಲಿಯೇ ಊತು ಬಿಡುತ್ತೇನೆಂದು ಪ್ರಾಣ  ಭೆದರಿಕೆ  ಹಾಕಿದನು ನಂತರ  ಮನೆಯಲ್ಲಿದ್ದ ಪಿರ್ಯಾದಿ ಮಗ ಶಿವಕುಮಾರ ಮತ್ತು ಮಗಳು  ಭಾಗ್ಯಮ್ಮ  ವಿಷಯ ತಿಳಿದು  ಹೊಲದ ಬಳಿ ಬಂದು  ಶಿರಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು  ಈ ದಿನ ತಡವಾಗಿ ಠಾಣೆಗೆ ಬಂದು ಹಲ್ಲೇ ಮಾಡಿದ ಜುಂಜಣ್ಣ ಬಿನ್ ರಾಮಣ್ಣ ರವರ ಮೇಲೆ ಕಾನೂನು  ರೀತ್ಯಾ ಕ್ರಮ  ಜರುಗಿಸಲು ನೀಡಿದ ಲಿಖಿತ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ.  128/2017 ಕಲಂ 457, 380 ಐಪಿಸಿ.

ದಿನಾಂಕ:-12/09/2017 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿ ಡಿ.ಎಸ್ ರಾಮೇಗೌಡ ಬಿನ್ ಲೇಟ್ ಸಣ್ಣನಂಜೇಗೌಡ ಚಿಕ್ಕರಂಗಾಫುರ ತೋಟದ ಮನೆ , ತಿಪಟೂರು ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ, ನಮ್ಮ ಮನೆ ಚಿಕ್ಕರಂಗಾಪುರ ರಸ್ತೆಯ ತೋಟದಲ್ಲಿರುತ್ತದೆ. ನಾನು ಕೊಬ್ಬರಿ ವ್ಯಾಪಾರ ಮಾಡಿಕೊಂಡಿರುತ್ತೇನೆ, ನಮ್ಮ ಮನೆಯಲ್ಲಿ ನಾನು ಮತ್ತು ಶ್ರೀ ಮತಿ ಸುಜಾತರವರು ಇರುತ್ತೇವೆ, ಪ್ರತಿದಿನದಂತೆ ದಿ:-11/09/2017 ರಂದು ರಾತ್ರಿ ಊಟ ಮಾಡಿ 11:00 ಗಂಟೆಯಲ್ಲಿ ಮಲಗಿದವು. ಆದರೆ ಮಧ್ಯರಾತ್ರಿ 01:15 ಗಂಟೆ ಸಮಯದಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಹಿಂಬಾಗಿಲಿನ ಬೀಗವನ್ನು ಮೀಟಿ ಒಳಗಡೆ ಬಂದಿದ್ದು ಏನೋ ಶಬ್ದವಾದಾಗ ನಾನು ನನ್ನ ಹೆಂಡತಿ ಎದ್ದು ನೋಡಿದಾಗ ಯಾರೋ ಮೂರು ಜನರು ಒಳಗಡೆ ಇದ್ದರೂ ನಾನು ಲೈಟ್‌ ಹಾಕಿ ಯಾರು ಯಾರು ಎಂದು ಕೂಗಾಡಿದಾಗ ಮೂರು ಜನರು ಸುಮಾರು 25 ರಿಂದ 30 ವರ್ಷದ ವಯಸ್ಸಿನವರಾಗಿದ್ದು, ಟೀಷರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ದರು ನಮಗೆ ಬಾಯಿಮುಚ್ಚಿ ಎಂದರು ನಾವು ಜೋರು ಮಾಡಿದಾಗ ಹಿಂಬಾಗಿಲಿನ ಮುಖಾಂತರ ಓಡಿಹೋದರು ನಂತರ ನಾವುಗಳು ಮಾಹಿತಿಯನ್ನು ಕೆಲವರಿಗೆ ಹೇಳಿದೆವು ನಂತರ ಮನೆಯಲ್ಲಿ ಪರಿಶೀಲಿಸಲಾಗಿ ಸ್ಯಾಮ್‌ಸಾಂಗ್ ಕಂಪನಿಯ ಮೊಬೈಲ್ ಸೆಟ್‌ ‌ನಂ 9242237545 ಆಗಿರುತ್ತದೆ. ಅದರ ಬೆಲೆ ಸುಮಾರು 2000/- ರೂಗಳಾಗಬಹುದು ಇದನ್ನು ಆ ಕಳ್ಳರು ತೆಗೆದುಕೊಂಡು ಹೋಗಿರುತ್ತಾರೆ, ಅವರು ಕಳ್ಳತನ ಮಾಡುವ ಉದ್ದೇಶದಿಂದ ನಮ್ಮ ಮನೆಯ ಹಿಂಬಾಗಿಲನ್ನು ರಾಡಿನಿಂದ ಮೀಟಿ ಒಳನುಗ್ಗಿ ಮೊಬೈಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅವರುಗಳನ್ನು ನೋಡಿದರೆ ಗುರುತಿಸುತ್ತೇವೆ ತಾವು ದಯಾಮಾಡಿ ಕಳ್ಳರನ್ನು ಪತ್ತೆಮಾಡಿ  ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತೇನೆ, ಮಾಹಿತಿ ತಿಳಿಸಿ ಈಗ ಠಾಣೆಗೆ ಬಂದು ದೂರು ನೀಡಿರುತ್ತೇನೆ ಎಂತಾ ಪಿರ್ಯಾದು.

ಮಿಡಿಗೇಶಿ ಪೊಲೀಸ್ ಠಾಣಾ ಸಿ.ಆರ್.ನಂ.81/2017, ಕಲಂ:279,337 ಐ.ಪಿ.ಸಿ

ದಿನಾಂಕ:12/09/2017 ರಂದು 04:00 ಗಂಟೆ ಸಮಯದಲ್ಲಿ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ 03 ನೇ ಮಗಳಾದ ಸುದಾವತಿ ಎಂಬುವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಮಧುಗಿರಿ ತಾಲ್ಲೋಕಿನ ನೀರಕಲ್ಲು ಗ್ರಾಮದಲ್ಲಿರುವ  ನಾಟಿ ವೈಧ್ಯರಿಗೆ ತೋರಿಸುವ ಸಲುವಾಗಿ ಈ ದಿನ ಅಂದರೆ ದಿನಾಂಕ:12/09/2017 ರಂದು ಬೆಳಿಗ್ಗೆ ನಮ್ಮ ಗ್ರಾಮವಾದ ಐನೂರಹಳ್ಳಿ ಗ್ರಾಮದಿಂದ ಎಪಿ-02-ವೈ-5027 ನೇ ನಂಬರಿನ ಬಾಡಿಗೆ ಆಟೋರಿಕ್ಷಾದಲ್ಲಿ  ನಾನು, ನನ್ನ ಹೆಣ್ಣು ಮಕ್ಕಳಾದ ಸುದಾವತಿ, ವೇದಾವತಿ ಮತ್ತು ನನ್ನ ಸೊಸೆಯರಾದ ರತ್ಮಮ್ಮ ಹಾಗೂ ಶ್ಯಾಮಲಮ್ಮ  ಎಲ್ಲರೂ ಒಟ್ಟಿಗೆ ಬಂದು ನೀರಕಲ್ಲಿನಲ್ಲಿರುವ ನಾಟಿ ವೈದ್ಯರನ್ನು ಕಂಡು ನನ್ನ ಮಗಳಾದ ಸುದಾವತಿಗೆ ಚಿಕಿತ್ಸೆ ಕೊಡಿಸಿಕೊಂಡು ವಾಪಾಸ್ ಊರಿಗೆ ಹೋಗಲು ಇದೇ ದಿನ ಅದೇ ಆಟೋದಲ್ಲಿ ಮದ್ಯಾಹ್ನ ಸುಮಾರು 03-00 ಗಂಟೆ ಸಮಯದಲ್ಲಿ ಮಧುಗಿರಿ ಪಾವಗಡ ಮುಖ್ಯ ರಸ್ತೆಯಲ್ಲಿ ಮಿಡಿಗೇಶಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ  ಹೋಗುತ್ತಿರುವಾಗ್ಗೆ ಅದೇ ರಸ್ತೆಯಲ್ಲಿ ಪಾವಗಡ ಕಡೆಯಿಂದ ಎದುರಿಗೆ ಬಂದ ಕೆಎ-06-ಸಿ-4557 ನೇ ನಂಬರಿನ ಆಂಬ್ಯೂಲೇನ್ಸ್ ವಾಹನದ ಚಾಲಕ ತನ್ನ ವಾಹನವನ್ನು  ಅತಿ ಜೋರಾಗಿ ಮತ್ತು ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿಕೊಂಡು ಬಂದು ನಾವುಗಳು ಹೋಗುತ್ತಿದ್ದ ಎಪಿ-02-ವೈ-5027 ನೇ ನಂಬರಿನ ಆಟೋರಿಕ್ಷಾಗೆ  ಎದುರಿನಿಂದ ಡಿಕ್ಕಿ ಹೊಡೆಸಿ ಅಪಘಾತವುಂಟು ಮಾಡಿದ್ದರಿಂದ ಆಟೋದಲ್ಲಿದ್ದ ನನ್ನ  ತಲೆಗೆ,ಹಣೆಗೆ, ಎಡ ಕೆನ್ನೆಗೆ  ಪೆಟ್ಟು ಬಿದ್ದು  ರಕ್ತಗಾಯವಾಗಿರುತ್ತೆ. ನನ್ನ ಸೊಸೆ ರತ್ನಮ್ಮ ಎಂಬುವರಿಗೆ  ಹಣೆಗೆ ಮೂಗಿಗೆ ಪೆಟ್ಟು ಬಿದ್ದು ರಕ್ತಗಾಯವಾಗಿರುತ್ತೆ. ನನ್ನ ಮಗಳಾದ ವೇದಾವತಿಗೆ ಎಡ ಮೊಣಕೈಗೆ ಪೆಟ್ಟು ಬಿದ್ದ್ದಿರುತ್ತೆ. ನನ್ನ ಇನ್ನೋಬ್ಬ ಮಗಳಾದ ಸುದಾವತಿಗೆ ಎಡ ಮೊಣಕೈಗೆ ಹಾಗೂ ಎಡ ಬಾಗದ ಎದೆಗೆ   ಪೆಟ್ಟು  ಬಿದ್ದಿರುತ್ತೆ. ಹಾಗೂ ನನ್ನ ಇನ್ನೋಬ್ಬ ಸೊಸೆ  ಶ್ಯಾಮಲಮ್ಮ ಎಂಬುವರಿಗೆ ಬಲ ಕೈಗೆ ಮತ್ತು ಎಡಕಾಲಿಗೆ  ಪೆಟ್ಟು ಬಿದ್ದಿರುತ್ತೆ. ಸದರಿ  ಆಟೋವನ್ನು ಚಾಲನೆ ಮಾಡುತ್ತಿದ್ದ ಆನಂದಪ್ಪ ಎಂಬುವನಿಗೆ ಮೂಗಿನ ಹತ್ತಿರ ಮತ್ತು ಬಲ ಮೊಣಕಾಲಿನ ಚಿಪ್ಪಿನ ಹತ್ತಿರ ಪೆಟ್ಟು ಬಿದ್ದು ರಕ್ತಗಾಯವಾಗಿರುತ್ತೆ. ನಮಗೆ ಅಪಘಾತ ಪಡಿಸಿದ ಆಂಬ್ಯೂಲೆನ್ಸ್ ಚಾಲಕನಿಗೂ ಸಹ ಬಲ ಕಾಲಿನ ತೊಡೆಗೆ ಮತ್ತು ಬಲ ಮೊಣಕಾಲಿಗೆ ಪೆಟ್ಟು ಬಿದ್ದ್ದಿರುತ್ತೆ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟು ಅಪಘಾತವುಂಟು ಮಾಡಿದ ಕೆಎ-06-ಸಿ-4557 ನೇ ನಂಬರಿನ ಆಂಬ್ಯೂಲೇನ್ಸ್  ಚಾಲಕನ ಮೇಲೆ ಕಾನೂನು ರಿತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿ ದೂರಿನ  ಅಂಶ

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 76/2017  -  ಕಲಂ 279-337 ಐಪಿಸಿ ರೆ/ವಿ  134(ಎ)(ಬಿ)  ಐ ಎಂ ವಿ ಆಕ್ಟ್‌. .

ದಿನಾಂಕ:- 12/09/2017 ರಂದು ಮದ್ಯಾಹ್ನ 2-15 ಗಂಟೆಗೆ ಪಿರ್ಯಾದಿ ಹನುಮಂತರಾಯಪ್ಪ ಬಿನ್‌ ಮೂಸಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿ:07/09/2017 ರಂದು ನಾನು ಮತ್ತು ನಮ್ಮ ಗ್ರಾಮದ ತಿಮ್ಮಯ್ಯ ಬಿನ್ ಸಣ್ಣ ತಿಮ್ಮಯ್ಯ  ನರಸಿಂಹಮೂರ್ತಿ ಬಿನ್‌ ಬೀಮಣ್ಣ ರವರನ್ನು ಗ್ರಾಮದ ಹನುಮಂತರಾಯಪ್ಪ ಎಂಬುವವರು ಅಡಿಕೆ ಕೊಯ್ಯಲು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗಿದ್ದು, ಜವರನಾಯಕನಪಾಳ್ಯ ಗ್ರಾಮದ ಒಂದು ತೋಟದಲ್ಲಿ ಅಡಿಕೆಕಾಯಿ  ಕಿತ್ತು  ಕೆಎ-64-1352 ರ ಟಾಟಾ ಎ ಸಿ ವಾಹನಕ್ಕೆ  ಅಡಿಕೆ ಕಾಯಿ ಲೋಡ್‌ ಮಾಡಿದೆವು. ನಂತರ  ವಾಹನವನ್ನು ಹನುಮಂತರಾಜು ಬಿನ್‌ ಚಿಕ್ಕತಿಮ್ಮಯ್ಯ ಎಂಬುವರು ಚಾಲನೆ ಮಾಡುತ್ತಿದ್ದು ಚಾಲಕನ ಪಕ್ಕದಲ್ಲಿ ರವಿ ಎಂಬುವನು ಕುಳಿತಿದ್ದ ನಾನು  ತಿಮ್ಮಯ್ಯ ಮತ್ತು ನರಸಿಂಹಮೂರ್ತಿ ಮೂರು ಜನ ಹಿಂಭಾಗದಲ್ಲಿ ಅಡಿಕೆ ಕಾಯಿ ಮೇಲೆ ಕುಳಿತಿದ್ದೆವು.  ಬೆಲ್ಲದಮಡಗು ಮಾರ್ಗವಾಗಿ  ಶಿರಾ- ಮಧುಗಿರಿ ಮುಖ್ಯ ರಸ್ತೆಗೆ ಬಂದು ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ  ನ್ಯೂಟ್ರಲ್‌ ಮಾಡಿಕೊಂಡು ಓಡಿಸುತ್ತಾ ಬರುವಾಗ ದಬ್ಬೆಘಟ್ಟ ಗ್ರಾಮದ ಬಸ್‌‌ ನಿಲ್ದಾಣದಲ್ಲಿ ಸಂಜೆ 4-30 ಗಂಟೆ ಸಮಯದಲ್ಲಿ ವಾಹನ ಆಯ ತಪ್ಪಿ ಬಲಗಡೆಗೆ ತಿರುಗಿ ಎಡಬದಿಗೆ  ಬಿದ್ದಿದ್ದರಿಂದ ನನಗೆ, ನರಸಿಂಹಮೂರ್ತಿ , ತಿಮ್ಮಯ್ಯ ನಿಗೆ ಮೈ ಕೈಗೆ  ಪೆಟ್ಟುಗಳು ಬಿದ್ದು ರಕ್ತಗಾಯವಾಗಿರುತ್ತವೆ.  ಮುಂದೆ ಕುಳಿತಿದ್ದ ರವಿ ಎಂಬುವವರಿಗೆ ಕೈ ಗೆ ಪೆಟ್ಟುಗಳಾಗಿರುತ್ತವೆ. ನಮ್ಮನ್ನು ಸ್ಥಳೀಯರು ಯಾವುದೋ ವಾಹನದಲ್ಲಿ ಮಧುಗಿರಿ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತೇನೆ.  ತಿಮ್ಮಯ್ಯ ಮತ್ತು ನರಸಿಂಹಮೂರ್ತಿ ಇನ್ನು ಚಿಕಿತ್ಸೆ ಪಡೆಯುತ್ತಿರುತ್ತಾರೆ.  ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಬಡವನಹಳ್ಳಿ  ಪೊಲೀಸ್ ಠಾಣೆ  ಮೊ.ಸಂ 75/2017   ಕಲಂ: 87 ಕೆ.ಪಿ ಆಕ್ಟ್

ದಿ;12/09/2017 ರಂದು ಬೆಳಗ್ಗೆ 10-30 ಗಂಟೆಯಲ್ಲಿ  ಗಂಗಾಧರ್‌ ಪಿ ಐ ಬಡವನಹಳ್ಳಿ ಪೊಲೀಸ್   ಠಾಣೆ  ರವರು ಠಾಣೆಗೆ ಹಾಜರಾಗಿ   ನೀಡಿದ ವರದಿ ಅಂಶವೇನೆಂದರೆ ನಾನು ಬೆಳಗ್ಗೆ 8-30 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ  ಪುಲಮಘಟ್ಟ ಕೆರೆ ಅಂಗಳದಲ್ಲಿ ಇಸ್ಟೀಟ್‌ ಜೂಜಾಟ ನಡೆಯುತ್ತಿರುವ ಬಗ್ಗೆ  ಠಾಣಾ ಗುಪ್ತ ಮಾಹಿತಿ ಸಿಬ್ಬಂದಿ ರಂಗನಾಥ್ ಸಿಪಿಸಿ-949 ರವರು ನೀಡಿದ ಮಾಹಿತಿ ಮೇರೆಗೆ ನಾನು ಸಿಬ್ಬಂದಿಯೊಂದಿಗೆ  ಬೆಳಗ್ಗೆ 9.30 ಗಂಟೆಯಲ್ಲಿ ಜೂಜುಕಟ್ಟೆಯ ಸಮೀಪ ಹೋಗಿ ನೋಡಲಾಗಿ, ಸುಮಾರು  ಜನರು ದುಂಡಾಕಾರವಾಗಿ ಕುಳಿತುಕೊಂಡು ಒಳಗೆ – ಹೊರಗೆ ಎಂದು ಹೇಳುತ್ತಾ ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಟೀಟ್‌ ಎಲೆಗಳಿಂದ ಜೂಜಾಟ ಆಡುತ್ತಿದ್ದವರನ್ನು, ಸುತ್ತುವರೆದು ,  10 ಜನ ಜೂಜಾಟಗಾರರನ್ನು ಹಿಡಿದು   ಹೆಸರು ವಿಳಾಸ ಕೇಳಲಾಗಿ 1] ಜಗನ್ನಾಥ ಬಿನ್‌ ಲೇಟ್‌ ತಿಪ್ಪೆರಂಗಯ್ಯ, 40 ವರ್ಷ, ವಕ್ಕಲಿಗರು,  ರಂಗನಾಥ ಶಾಮಿಯಾನ ಅಂಗಡಿ ( ಹೊಸಕೆರೆ) ವಾಸ ಗಾಳಿಹಳ್ಳಿ, ಮಿಡಿಗೇಸಿ ಹೋಬಳಿ, ಮಧುಗಿರಿ ತಾಲ್ಲೂಕು  2]  ರಾಮಣ್ಣ ಬಿನ್‌‌ ಗಿರಿಯಪ್ಪ, 50 ವರ್ಷ, ಸಾದರು, ಕೂಲಿ ಕೆಲಸ, ಬೊಮ್ಮರಸನಹಳ್ಳಿ ಗ್ರಾಮ, ಅಗಳಿ ಮಂಡಲ್‌, ಮಡಕಶಿರಾ ತಾಲ್ಲೂಕು,  ಎ ಪಿ    3] ಶಿವಣ್ಣ ಬಿನ್‌‌ ಲೇಟ್‌‌‌‌ ಸಣ್ಣಪ್ಪ, 45 ವರ್ಷ, ವಕ್ಕಲಿಗರು, ಜಿರಾಯ್ತಿ,  ಬಾಣಗಾರ್ಲಹಳ್ಳಿ, ದೊಡ್ಡೇರಿ ಹೋಬಳಿ, ಮದುಗಿರಿ ತಾಲ್ಲೂಕು  4] ಚಂದ್ರಣ್ಣ ಬಿನ್‌ ಲೇಟ್‌ ದೊಡ್ಡತಿಮ್ಮಪ್ಪ, 45 ವರ್ಷ,  ತಿಗಳರು,  ಜಿರಾಯ್ತಿ, ಗಂಜಲಗುಂಟೆ, ಕಸಬಾ ಹೋಬಳಿ, ಮಧುಗಿರಿ ತಾಲ್ಲೂಕು  5] ರಾಜಣ್ಣ ಬಿನ್‌ ಲೇಟ್‌ ನಾಗಣ್ಣ, 48 ವರ್ಷ, ವಕ್ಕಲಿಗರು, ಜಿರಾಯ್ತಿ,  ಕೋಡಿಹಳ್ಳಿ, ಮಡಕಶಿರಾ ತಾಲ್ಲೂಕು , ಎ ಪಿ  6]  ರಾಮಣ್ಣ ಬಿನ್‌‌‌  ಲೇಟ್‌ ಕದರಪ್ಪ, 50 ವರ್ಷ,  ಅದಿ ಕರ್ನಾಟಕ ಜನಾಂಗ, ಜಿರಾಯ್ತಿ, ರಂಟವಾಳ ಗ್ರಾಮ,  ದೊಡ್ಡೇರಿ ಹೋಬಳಿ, ಮಧುಗಿರಿ ತಾಲ್ಲೂಕು  7] ನಾಗರಾಜು  ಬಿನ್‌‌ ಪುಟ್ಟಶಾಮಪ್ಪ, 48 ವರ್ಷ,  ಸಾದರು,  ಜಿರಾಯ್ತಿ, ಕಾಖಿ ಬ್ಯಾಡಗೆರೆ, ರೊಳ್ಳೆ ಮಂಡಲ್‌‌, ಮಡಕಶಿರಾ ತಾಲ್ಲೂಕು ಎ ಪಿ  8]  ಅಂಜಿನಪ್ಪ ಬಿನ್‌‌ ಲೇಟ್‌ ಕೊಂಡಪ್ಪ, 45  ವರ್ಷ, ತಿಗಳರು, ಜಿರಾಯ್ತಿ, ಗುಟ್ಟೆ ಗ್ರಾಮ,  ದೊಡ್ಡೇರಿ ಹೋಬಳಿ, ಮಧುಗಿರಿ ತಾಲ್ಲೂಕು 9]   ಗುರು ಸಿದ್ದಪ್ಪ ಬಿನ್‌‌‌‌‌ ಲೇಟ್‌‌  ರಾಮಪ್ಪ, 50 ವರ್ಷ, ಸಾದರು, ಜಿರಾಯ್ತಿ,  ಹೂವಿನಹಳ್ಳಿ  ಗ್ರಾಮ,ರೊಳ್ಳೆ ಮಂಡಲ್‌, ಮಡಕಶಿರಾ ತಾಲ್ಲೂಕು ಎ ಪಿ  10]  ಸಣ್ಣ ಪ್ಪ ಬಿನ್‌ ಲೇಟ್‌ ಗೋವಿಂದಪ್ಪ , 65 ವರ್ಷ, ವಕ್ಕಲಿಗರು,  ಜಿರಾಯ್ತಿ,  ಮುಕ್ಕಡಮ್ಮನಹಳ್ಳಿ,  ಅಗಳಿ ಮಂಡಲ್‌‌,  ಮಡಕಶಿರಾ ತಾಲ್ಲೂಕು   ಎಂತಾ  ತಿಳಿಸಿದ್ದು, ಜೂಜಾಟಗಾರರು  ಜೂಜಾಟಕ್ಕೆ ಪಣವಾಗಿ ಕಟ್ಟಿ ಅಖಾಡದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದದ್ದ ಹಣವನ್ನು ಸಂಗ್ರಹಿಸಿ ಎಣಿಸಿ ನೋಡಲಾಗಿ 6.640/- ರೂಗಳು ನಗದು ಹಣ  , 52 ಇಸ್ಟೀಟ್‌ ಎಲೆಗಳು ಹಾಗೂ ಒಂದು ಹಳೆಯ ನ್ಯೂಸ್ ಪೇಪರ್‌ ರನ್ನು ವಶಕ್ಕೆ ಪಡೆದು, ಸದರಿ ಮಾಲು ಮತ್ತು ಆರೋಪಿಗಳೊಂದಿಗೆ ಠಾಣೆಗೆ ಬಂದು, ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿ  ನೀಡಿದ ವರದಿ ಮೇರೆಗೆ  ಪ್ರಕರಣ  ದಾಖಲಿಸಿರುತ್ತೆ.

ವೈ ಎನ್ ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ- 87/2017  ಕಲಂ: 78 Cls 3 KP Act

ದಿನಾಂಕ:11/09/2017 ರಂದು ಸಂಜೆ  6:15 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿರುವಾಗ್ಗ ವೈ ನ್ ಹೊಸಕೋಟೆ ಪೋಳಿಸ್ ಠಾಣಾ ಸರಹದ್ದು ವೈ ಎನ್ ಹೊಸಕೋಟೆ ಗ್ರಾಮದ ಎಂ.ಜಿ ಸರ್ಕಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜೂಜಾಟ ನಡೆಯುತ್ತಿದೆ ಎಂತ ಮಾಹಿತಿ ಬಂದ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯೊಂದಿಗೆ  ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ  ವೈ.ಎನ್.ಹೊಸಕೋಟೆ ಗ್ರಾಮದ ಎಂ.ಜಿ ಸರ್ಕಲ್ ಬಳಿ   ಒಬ್ಬ ಆಸಾಮಿಯು  ಜನರನ್ನು ಕುರಿತು ಬನ್ನಿ ಮಟ್ಕಾ ಚೀಟಿ ಬರೆಸಿಕೊಳ್ಳಿ 1 ರೂಗೆ 70 ರೂ ಕೊಡುತ್ತೇನೆಂತ ಕೂಗೂತ್ತಾ ಜನರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಮಟ್ಕಾ ಚೀಟಿ ಬರೆದು ಕೊಡುತ್ತಾ  ಮಟ್ಕಾ ಜೂಜಾಟದಲ್ಲಿ  ತೊಡಗಿದ್ದವನನ್ನು   ನಾನು ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ನಡೆಸಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಲ್ಲಿ ನೆರೆದಿದ್ದ ಜನರು ಓಡಿ ಹೋಗಿದ್ದು ,ಸಾರ್ವಜನಿಕರಿಂದ ಹಣವನ್ನು ಪಣಕ್ಕೆ ಕಟ್ಟಿಸಿಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿದ್ದ   ಆಸಾಮಿಯನ್ನು   ಹಿಡಿದು ಆತನ  ಹೆಸರು ವಿಳಾಸ ಕೇಳಲಾಗಿ 1]   ನಾರಾಯಣಪ್ಪ, ಬಿನ್ ಚೌಡಪ್ಪ, 68 ವರ್ಷ, ತೊಗಟ ಜನಾಂಗ, ಜಿರಾಯ್ತಿ ಕೆಲಸ,  ವೈ ಎನ್ ಹೊಸಕೋಟೆ ಟೌನ್   ಎಂತ ತಿಳಿಸಿದ್ದು,  ಒಂದು ಮಟ್ಕಾ ನಂಬರ್ ಬರೆದಿರುವ ಒಂದು  ಚೀಟಿ, ಒಂದು ಲೆಡ್ ಪೆನ್ ಹಾಗೂ ಪಣಕ್ಕೆ ಕಟ್ಟಿಸಿಕೊಂಡಿದ್ದ 1950=00 ರೂ ನಗದು ಹಣ ಇದ್ದು,   ಪಂಚರ ಸಮಕ್ಷಮ ಪಂಚನಾಮೆ ಮುಖೇನ ವಶಪಡಿಸಿಕೊಂಡು   ಸ್ಥಳದಲ್ಲಿ ಸಿಕ್ಕ    ಆಸಾಮಿಯನ್ನು ಸ್ಥಳದಿಂದ ಕಳುಹಿಸಲಾಗಿರುತ್ತದೆಂತ ,ನಂತರ ಠಾಣೆಗೆ ರಾತ್ರಿ 7:35 ಗಂಟೆಗೆ  ವಾಪಸ್ ಬಂದು ಠಾಣಾ ಎನ್ ಸಿ ಆರ್ :118/2017 ರಲ್ಲಿ ನೊಂದಾಯಿಸಿ ನ್ಯಾಯಾಲಯದ ಅನುಮತಿ ಪಡೆದು  ಪ್ರಕರಣ ದಾಖಲಿಸಿರುತ್ತದೆ

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 159/2017 ಕಲಂ 427,448,511 ಐಪಿಸಿ.

ದಿನಾಂಕ-12-09-2017 ರಂದು ಸಂಜೆ 6-15 ಗಂಟೆಗೆ ಪಿರ್ಯಾದಿಯಾದ ಬಸವರಾಜು,ಕೆ,ಜೆ ಬಿನ್ ಜಯಪ್ರಕಾಶ್‌, 27 ವರ್ಷ, ಲಿಂಗಾಯಿತರು, ಪ್ರೈವೇಟ್‌ ಕಂಪನಿಯಲ್ಲಿ ಕೆಲಸ ಹಾಗೂ ಅರ್ಚಕ ವೃತ್ತಿ, ಕೋಡಿಹಳ್ಳಿ, ಮುಳುಕುಂಟೆ ಪೋಸ್ಟ್‌, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿದ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದುಕೊಂಡು ಒಂದು ಪ್ರೈವೇಟ್‌ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುತ್ತೇನೆ ಹಾಗೂ ನಮ್ಮ ಕುಟುಂಬದವರು ಹಿಂದಿನಿಂದ ಪೂಜೆ ಮಾಡಿಕೊಂಡು ಬಂದಿರುವ ಮುದ್ದಹನುಮಯ್ಯನಪಾಳ್ಯ ಗ್ರಾಮಕ್ಕೆ ಸೇರಿದ ರಾಗಿಬೆಟ್ಟ( ಕೋವೆ ಬೆಟ್ಟ)ದಲ್ಲಿರುವ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕನಾಗಿ ಕೆಲಸ ಮಾಡಿಕೊಂಡಿರುತ್ತೇನೆ. ಸದರಿ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿರುತ್ತೆ. ನಾನು ಪ್ರತಿ ಸೋಮವಾರದಂದು ಅಥವಾ ಮಂಗಳವಾರದಂದು ವಾರಕ್ಕೆ ಒಂದು ದಿವಸ ಸದರಿ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಕೊಂಡು ಬರುತ್ತಿರುತ್ತೇನೆ. ಹೀಗಿರುವಾಗ್ಗೆ ನಾನು ದಿನಾಂಕ:03-09-2017 ರಂದು ನಾನು ಸದರಿ ಮೇಲ್ಕಂಡ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಕೊಂಡು, ನಂತರ ಸಾಯಂಕಾಲ ಸುಮಾರು 05-00 ಗಂಟೆಗೆ ದೇವಸ್ಥಾನದ ಬಾಗಿಲಿಗೆ ಬೀಗ ಹಾಕಿಕೊಂಡು ವಾಪಸ್‌ ಬಂದೆನು. ನಂತರ ನಾನು ದಿನಾಂಕ:12-09-2017 ರಂದು ಬೆಳಿಗ್ಗೆ ಸುಮಾರು 09-00 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಸ್ನೇಹಿತನಾದ ಬಸವರಾಜು ಬಿನ್ ಚಿಕ್ಕತಿಮ್ಮಯ್ಯ ಇಬ್ಬರೂ ಸದರಿ ಬೆಟ್ಟಕ್ಕೆ ಪೂಜೆ ಮಾಡಲೆಂದು ಹೋಗಿದ್ದು, ದೇವಸ್ಥಾನದ ಬಳಿ ಹೋಗಿ ನೋಡಲಾಗಿ ಯಾರೋ ದೇವಸ್ಥಾನದ ಬೀಗವನ್ನು ಹೊಡೆದಿದ್ದರು. ನಂತರ ನಾನು ಒಳಗೆ ಹೋಗಿ ನೋಡಲಾಗಿ ದೇವಸ್ಥಾನದ ಒಳಗೆ ಗರ್ಭಗುಡಿಯಲ್ಲಿ ಇರುವ ಬಸವಣ್ಣನ ಕಲ್ಲಿನ ವಿಗ್ರಹವನ್ನು ಹಾಳು ಮಾಡಿರುವುದು ಕಂಡು ಬಂತು ಹಾಗೂ ಅದರ ಎದುರುಗಡೆಯೇ ಇರುವ ರಾಮಲಿಂಗೇಶ್ವರ ಸ್ವಾಮಿ ಲಿಂಗವನ್ನು ನಾಶ ಮಾಡಿರುತ್ತಾರೆ. ಸದರಿ ದೇವಸ್ಥಾನದಲ್ಲಿ ಹುಂಡಿಯನ್ನಾಗಲೀ, ಬೆಲೆ ಬಾಳುವ ಆಭರಣಗಳನ್ನಾಗಲೀ ಇಟ್ಟಿರಲಿಲ್ಲ. ಸದರಿ ಮೇಲ್ಕಂಡ ದೇವಸ್ಥಾನಕ್ಕೆ ದಿನಾಂಕ:03-09-2017 ರ ಸಾಯಂಕಾಲ 05-00 ಗಂಟೆಯಿಂದ ದಿನಾಂಕ:12-09-2017 ರ ಬೆಳಿಗ್ಗೆ 09-00 ಗಂಟೆಯ ಮದ್ಯೆ ಯಾರೋ ದುಷ್ಕರ್ಮಿಗಳು ನಿಧಿ ಇರಬಹುದೆಂತಲೋ ಅಥವ ಇನ್ಯಾವುದೋ ಉದ್ದೇಶಕ್ಕೋ ದೇವಸ್ಥಾನದ ಗರ್ಭಗುಡಿಗೆ ಅತಿಕ್ರಮ ಪ್ರವೇಶ ಮಾಡಿ ದೇವಸ್ಥಾನದ ಕಲ್ಲಿನ ವಿಗ್ರಹಗಳನ್ನು ಹಾಳುಗೆಡವಿರುತ್ತಾರೆ. ಆದ್ದರಿಂದ ಆಸಾಮಿಗಳನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ನಮ್ಮ ಗ್ರಾಮದ ಪ್ರಮುಖರೊಂದಿಗೆ ಚರ್ಚಿಸಿ ಈ ವೇಳೆಗೆ ತಡವಾಗಿ ಬಂದು ದೂರನ್ನು ನೀಡುತ್ತಿದ್ದೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 74 guests online
Content View Hits : 272940