lowborn Crime Incidents 12-09-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 12-09-17

ಹೊನ್ನವಳ್ಳಿ ಪೊಲೀಸ್ ಠಾಣೆ  ಮೊನಂ-109/2017 ಕಲಂ 323,324, 504,506,ರೆ/ವಿ 34 ಐಪಿಸಿ

ದಿನಾಂಕ-11/09/2017 ರಂದು ಮದ್ಯಾಹ್ನ 12-45 ರಿಂದ 1-15 ಗಂಟೆಗೆ ತಿಪಟೂರು ಸರ್ಕಾರಿ ಆಸ್ವತ್ರೆಯಲ್ಲಿ ಓಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ  ಶ್ರೀಮತಿ ಮಮತ ಜಿ ಎಂ ಕೋಂ ಧನಂಜಯನಾಯ್ಕ ಮಾಚುಕಟ್ಟೆ ತಾಂಡ್ಯ ರವರು ನೀಡಿದ ಹೇಳಿಕೆಯ ಅಂಶವೇನೆಂದರೆ ಪಿರ್ಯಾದಿಯು  ದಿನಾಂಕ:10/09/2017 ರಂದು ರಾತ್ರಿ 9-30  ಗಂಟೆ ಸಮಯದಲ್ಲಿ ಪಿರ್ಯಾದಿಯು ಮನೆಯ ಮುಂದೆ ಪಾತ್ರೆ ತೊಳೆಯುತ್ತಿದ್ದಾಗ ಮನೆಯ ಹಿಂಬಾಗ ಗಲಾಟೆ ಶಬ್ದ ಕೇಳಿಸಿತು ಆ ಸಮಯದಲ್ಲಿ ಪಿರ್ಯಾದಿಯ ಮಾವ ರಾಮಾನಾಯ್ಕನ ಮನೆಯ ಬಳಿ ಗೋಪಾಲನಾಯ್ಕ ವಿನಾ ಕಾರಣ ಆಟೋವನ್ನು ನಿಲ್ಲಿಸಿ ಶಬ್ದ ಮಾಡುತ್ತಿದ್ದವನನ್ನು ಈ ಶಬ್ದದಿಂದ ಮಕ್ಕಳಿಗೆ ಓದಲು ತೊಂದರೆ ಆಗುತ್ತಿದೆ, ಬೇರೆಡೆಗೆ ನಿಲ್ಲಿಸು  ಎಂದು ಗೋಪಾಲನಾಯ್ಕ ಮತ್ತು ದಿಲೀಪ ಎಂಬುವರಿಗೆ ಹೇಳಿದಕ್ಕೆ ಏಕಾಏಕಿ ಜಗಳ ತೆಗೆದು ಬೋಳಿಮಗನೆ ಸೂಳೇಮಗನೆ  ನೀನ್ಯಾರು ಕೇಳಕ್ಕೆ ಎಂದು ಬೈಯುತ್ತಿರುವಾಗ ಅಲ್ಲಿಗೆ ಪಿರ್ಯಾದಿಯ ಗಂಡ ಧನಂಜಯನಾಯ್ಕ ಬಿಡಿಸಲು ಬಂದಾಗ ಅಷ್ಟರಲ್ಲಿ ದಿಲೀಪ ಮತ್ತು  ಗೋಪಾಲನಾಯ್ಕರ ಪರವಾಗಿ  ನಾಗರಾಜನಾಯ್ಕ ಲಿಂಗಾನಾಯ್ಕ ಅಲ್ಲಿಗೆ ಬಂದು ಎಲ್ಲರು ಸೇರಿಕೊಂಡು ಪಿರ್ಯಾದಿಯ ಗಂಡನಿಗೆ ಕೈಗಳಿಂದ ಹೊಡೆದಿದ್ದು ಎಡಗೈ ಉಂಗುರ ಬೆರಳಿಗೆ ಪೆಟ್ಟುಬಿದ್ದಿರುತ್ತೆ ಪಿರ್ಯಾದಿಯು ಆ ಸಂದರ್ಭದಲ್ಲಿ ಜಗಳ ಬಿಡಿಸಲು  ಹೋದಾಗ ಅಲ್ಲಿಯೇ ಬಿದ್ದಿದ್ದ ಒಂದು ದೊಣ್ಣೆಯಿಂದ ಗೋಪಾಲನಾಯ್ಕ ಪಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಮತ್ತು ಅಲ್ಲಿಯೇ ಇದ್ದ ಪಿರ್ಯಾದಿಯ ಅತ್ತೆ ಪಾರ್ವತಮ್ಮರಿಗೂ ದಿಲೀಪ ಮತ್ತು ನಾಗಾನಾಯ್ಕ ಕೈಗಳಿಂದ ಹೊಡೆದಿರುತ್ತಾರೆ, ಯಾವುದೇ ಗಾಯಾವಾಗಿರುವುದಿಲ್ಲಾ ಅಷ್ಟರಲ್ಲಿ ಅಲ್ಲಿಗೆ ಬಂದ ನಮ್ಮ ಗ್ರಾಮದ ನಾಗಾಯ್ಕನ ಮಗ ಮಲ್ಲೇಶನಾಯ್ಕ ಜಗಳ ಬಿಡಿಸಿರುತ್ತಾರೆ, ಆಗ ಗೋಪಾಲನಾಯ್ಕ, ನಾಗಾನಾಯ್ಕ ರವರು ನಿಮ್ಮನ್ನು ಇಷ್ಟಕ್ಕೆ ಬಿಡಿವುದಿಲ್ಲಾ ನಿಮಗೆ ಒಂದು ಗತಿ ಕಾಣಿಸುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ನಂತರ ಗಾಯಾಗೊಂಡಿದ್ದ ಪಿರ್ಯಾದಿಯನ್ನು ಮತ್ತು ಪಿರ್ಯಾದಿಯ ಅತ್ತೆಯನ್ನು ಪಿರ್ಯಾದಿಯ ಗಂಡ ಧನಂಜಯನಾಯ್ಕ ಆಟೋದಲ್ಲಿ ತಿಪಟೂರು ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿ ಚಿಕಿತ್ಸೆ ಕೊಡಿಸಿರುತ್ತಾರೆ ಆದ್ದರಿಂದ ಮೇಲ್ಕಂಡವರುಗಳ  ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ನೀಡಿದ ಹೇಳಿಕೆಯನ್ನು ಪಡೆದು ಠಾಣೆಗೆ ಮದ್ಯಾಹ್ನ 2-00 ಗಂಟೆಗೆ ಬಂದು ಪ್ರಕರಣ ದಾಖಲು ಮಾಡಿರುತ್ತದೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 158/2017 ಕಲಂ 379 ಐಪಿಸಿ.

ದಿನಾಂಕ-11-09-2017 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿಯಾದ ನಾಗರಾಜ ಬಿನ್‌ ಲೇ|| ದ್ಯಾಮಯ್ಯ, 44 ವರ್ಷ, ಕುರುಬರು, ಹೆಬ್ಬೂರಿನ ನಯನ ಟ್ರೈಲರ್ಸ್‌ & ಇಂಜಿನಿಯರಿಂಗ್‌ ವರ್ಕ್ಸ್ ಮಾಲೀಕರು, ಕಾಡಿಪಾಳ್ಯ, ಸಿರಿವರ ಮಜಿರೆ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿದ ದೂರಿನ ಅಂಶವೇನೆಂಧರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಹೆಬ್ಬೂರಿನ ಬೋರೇಗೌಡ ರವರ ಪೆಟ್ರೋಲ್‌ಬಂಕ್‌ನ ಹತ್ತಿರ ನಯನ ಟ್ರೈಲರ್ಸ್‌ಎಂಬ ಹೆಸರಿನ ಇಂಜಿನಿಯರಿಂಗ್‌ವರ್ಕ್ಸ್ ಅನ್ನು ನಡೆಸಿಕೊಂಡಿರುತ್ತೇನೆ. ದಿನಾಂಕ:10-09-2017 ರಂದು ಎಂದಿನಂತೆ ಬೆಳಿಗ್ಗೆ 06-00 ಗಂಟೆಗೆ ನಾನು ಮೇಲ್ಕಂಡ ನನ್ನ ಬಾಬ್ತು ಇಂಜಿನಿಯರಿಂಗ್ ವರ್ಕ್ಸ್ ಅಂಗಡಿಗೆ ಬಂದು ಕೆಲಸ ಮಾಡಿಕೊಂಡು ನನ್ನ ಅಂಗಡಿಯ ಮುಂಭಾಗದಲ್ಲಿ ಒಂದು ಟ್ರೈಲರ್‌ ವಾಹನವನ್ನು ನಿಲ್ಲಿಸಿದ್ದೆನು. ನಂತರ ಅದೇ ದಿವಸ ಅಂದರೆ ದಿನಾಂಕ:10-09-2017 ರಂದು ರಾತ್ರಿ ಸುಮಾರು 08-00 ಗಂಟೆ ಸಮಯದಲ್ಲಿ ನನ್ನ ಅಂಗಡಿಯ ಬಾಗಿಲನ್ನು ಹಾಕಿಕೊಂಡು ನಮ್ಮ ಗ್ರಾಮಕ್ಕೆ ಹೋದೆನು. ನಂತರ ಈ ದಿವಸ ಅಂದರೆ ದಿನಾಂಕ:11-09-2017 ರಂದು ಬೆಳಿಗ್ಗೆ ಸುಮಾರು 06-00 ಗಂಟೆ ಸಮಯದಲ್ಲಿ ನಾನು ಹೆಬ್ಬೂರಿನ ನನ್ನ ಇಂಜಿನಿಯರಿಂಗ್‌ ವರ್ಕ್ಸ್ ನ ಅಂಗಡಿಯನ್ನು ತೆಗೆಯಲು ಬಂದು ನೋಡಲಾಗಿ, ನನ್ನ ಅಂಗಡಿಯ ಮುಂಭಾಗದಲ್ಲಿ ನಿಲ್ಲಿಸಿದ್ದ ಟ್ರೈಲರ್‌‌ನ ಎರಡು ಚಕ್ರಗಳನ್ನು ಹಾಗೂ ಅಂಗಡಿಯ ಮುಂಭಾಗದಲ್ಲೇ ಇಟ್ಟಿದ್ದ ಮಿನಿ ಟ್ರೈಲರ್‌ನ ಎರಡು ಚಕ್ರಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ನನ್ನ ಬಾಬ್ತು ಕಳುವಾಗಿರುವ 4 ಚಕ್ರಗಳ ಬೆಲೆಯನ್ನು ತಿಳಿಯಬೇಕಾಗಿರುತ್ತೆ. ಆದ್ದರಿಂದ ನನ್ನ ಬಾಬ್ತು ಟ್ರೈಲರ್‌ನ 4 ಚಕ್ರಗಳನ್ನು ಕಳವು ಮಾಡಿಕೊಂಡು ಹೋಗಿರುವ ಆಸಾಮಿಗಳನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್ .ನಂ- 13/2017 ಕಲಂ: 174 ಸಿ.ಆರ್.ಪಿ.ಸಿ

ದಿನಾಂಕ: 11/09/2017 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿ ಧರ್ಮಪಾಲ್ ಬಿನ್ ಶಿವನಂಜಪ್ಪ, 60 ವರ್ಷ, ನಿವೃತ್ತ ಸೈನಿಕರು, 6ನೇ ಕ್ರಾಸ್, ಶಾರದಾನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನಗೆ ಪ್ರೇಮಸಾಗರ್ ಎಂಬ 23 ವರ್ಷದ ಮಗನಿದ್ದು, ಈತನು ಡಿಪ್ಲಮೋ ವಿಧ್ಯಾಭ್ಯಾಸ ಮುಗಿಸಿ ಈಗ ಕಂಪ್ಯೂಟರ್ ತರಭೇತಿಗೆ ಹೋಗುತ್ತಿದ್ದನು. ಈತನು ಇತ್ತೀಚೆಗೆ ನನಗೆ ಲ್ಯಾಪ್ ಟಾಪ್ ಕೊಡಿಸಲು ಕೇಳಿದ್ದನು. ನಾನು ಅದಕ್ಕೆ ಈಗ ಮನೆ ಕಟ್ಟಿಸಿದ್ದೇವೆ ಸಾಲ ಇದೆ ನಂತರ ತೆಗೆದುಕೊಂಡರೆ ಆಗುತ್ತದೆಂದು ತಿಳಿಸಿದ್ದೆನು. ಈ ದಿನ ದಿನಾಂಕ: 11/09/2017 ರಂದು ನಾನು ಮತ್ತು ನನ್ನ ಪತ್ನಿ ಸುಮಿತ್ರಾ ಇಬ್ಬರು ಮಧ್ಯಾಹ್ನ 3-30 ಗಂಟೆಯಲ್ಲಿ ಕೆಲಸದ ನಿಮಿತ್ತ ಬ್ಯಾಂಕಿಗೆ ಹೋದೆವು. ಆಗ ನನ್ನ ಮಗ ಪ್ರೇಮಸಾಗರ್ ಮನೆಯ ರೂಮಿನಲ್ಲಿ ಕದ ಹಾಕಿಕೊಂಡು ಇದ್ದನು. ನಾವು ಬ್ಯಾಂಕಿಗೆ ಹೋಗಿ ವಾಪಸ್ ಸಂಜೆ 6-00 ಗಂಟೆಗೆ ಮನೆಗೆ ಬಂದು ನೋಡಿದೆವು. ಆತ ರೂಮಿನಲ್ಲಿದ್ದು ಕೂಗಿದರೆ ಮಾತನಾಡಲಿಲ್ಲ.  ನಂತರ ರೂಮಿನ ಕದ ತೆಗೆದು ನೋಡಿದಾಗ ನನ್ನ ಮಗ ಪ್ರೇಮಸಾಗರ್ ಹಗ್ಗದಿಂದ ಕಿಟಕಿಗೆ ನೇಣು ಹಾಕಿಕೊಂಡಿದ್ದು, ನಾವು ಇತರರ ಸಹಾಯದಿಂದ ಬದುಕಿರಬಹುದೆಂದು ನನ್ನ ಮಗನನ್ನು ಕೂಡಲೇ ನೇಣಿನಿಂದ ಇಳಿಸಿ ನೋಡಲಾಗಿ ಮೃತಪಟ್ಟಿದ್ದನು. ನನ್ನ ಮಗ ಯಾವುದೋ ಕಾರಣಕ್ಕೋ ಅಥವಾ ಲ್ಯಾಪ್ ಟಾಪನ್ನು ಸ್ವಲ್ಪ ದಿನ ಕಳೆದ ನಂತರ ತಂದು ಕೊಡುತ್ತೇವೆಂತಾ ಹೇಳಿದ್ದಕ್ಕೋ ತನ್ನ ಮನಸ್ಸಿಗೆ ಬೇಜಾರು ಮಾಡಿಕೊಂಡು ಮನೆಯಲ್ಲಿ ಒಬ್ಬನೆ ಇದ್ದಾಗ ಮಧ್ಯಾಹ್ನ 3-30 ರಿಂದ ಸಂಜೆ 6-00 ಗಂಟೆಯ ಮಧ್ಯೆ ರೂಮಿನಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನನ್ನ ಮಗನ ಶವವು ತಿಪಟೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತೆ.ಮುಂದಿನ ಕಾನೂನು ಕ್ರಮ ಜರುಗಿಸಿ ಎಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಜಯನಗರ ಪೊಲೀಸ್ ಠಾಣಾ ಯುಡಿಆರ್ ನಂ. 15/2017 ಕಲಂ 174 ಸಿಆರ್‌ಪಿಸಿ

ದಿನಾಂಕ 11-09-2017 ರಂದು ಮದ್ಯಾಹ್ನ 12-15 ಗಂಟೆಗೆ ಮಧುಗಿರಿ ತಾಲ್ಲೂಕು, ದೊಡ್ಡೇರಿ ಹೋಬಳಿ, ನಾಗೇನಹಳ್ಳಿ ಗ್ರಾಮದ ವಾಸಿ ಹೊನ್ನಪ್ಪ ಹೆಚ್‌ ಬಿನ್ ಲೇಟ್‌ ಚಿಕ್ಕಹೊನ್ನಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನನ್ನ ತಮ್ಮ ಕರಿಯಣ್ಣ ಹೆಚ್. ಇವರು ಬೆಂಗಳೂರು ಸರ್ವೆ ಆಫ್‌‌ ಇಂಡಿಯಾದಲ್ಲಿ ಜಿಯಾಲಜಿಸ್ಟ್‌‌‌ ಆಗಿ ಕರ್ತವ್ಯ ಮಾಡಿ ನಿವೃತ್ತಿ ಹೊಂದಿದ್ದು,  ತುಮಕೂರು ಟೌನ್ ಉಪ್ಪಾರಹಳ್ಳಿ ಸರ್ಕಾರಿ 4 ಗಾಲಿಯ ಬಾವಿಯ ಬಳಿ ಸ್ವಂತ ಮನೆಯನ್ನು ಕಟ್ಟಿಕೊಂಡು ವಾಸವಾಗಿದ್ದರು.   ನನ್ನ ತಮ್ಮ  ಕರಿಯಣ್ಣನಿಗೆ ಮಂಜುನಾಥ ಎಂಬ ಒಬ್ಬನೇ ಮಗನಿದ್ದು, ಆತನು ಅಮೇರಿಕಾದಲ್ಲಿ ಸಾಪ್ಟ್‌‌ವೇರ್‌‌ ಇಂಜಿನಿಯರ್‌‌ ಕೆಲಸ ಮಾಡಿಕೊಂಡು ಆತನ ಸಂಸಾರದೊಂದಿಗೆ ಅಲ್ಲಿಯೇ ಇರುತ್ತಾನೆ.   ನನ್ನ ತಮ್ಮ ಕರಿಯಣ್ಣನ ಹೆಂಡತಿ ಶಶಿಕಲಾ ರವರು ಈಗ್ಗೆ ಸುಮಾರು 20 ವರ್ಷಗಳ ಹಿಂದೆಯೇ ತನ್ನ ಗಂಡನನ್ನು ಬಿಟ್ಟು ಎಲ್ಲೋ ಧಾರವಾಡದ ಬಳಿ ತಲಕನಕೊಪ್ಪದಲ್ಲಿ ಯಾವುದೋ ಒಂದು ಬಸವೇಶ್ವರ ಆಶ್ರಮದಲ್ಲಿರುತ್ತಾರೆ.  ನನ್ನ ತಮ್ಮ ಕರಿಯಣ್ಣ ಒಬ್ಬನೇ ಅವರ ಮನೆಯಲ್ಲಿದ್ದನು.  ನನ್ನ ತಮ್ಮ ಕರಿಯಣ್ಣನಿಗೆ ಹೃದಯದ ಖಾಯಿಲೆ ಇದ್ದು,  ಬೆಂಗಳೂರು ಮಲ್ಲಿಗೆ ಮೆಡಿಕಲ್‌‌ ಸೆಂಟರ್‌‌ ಆಸ್ಪತ್ರೆಯಲ್ಲಿ ಈಗ್ಗೆ ಸುಮಾರು ಒಂದು ತಿಂಗಳ ಹಿಂದೆ ಹಾರ್ಟ್‌ ಆಫರೇಷನ್‌‌ ಸಹಾ ಮಾಡಿಸಿದ್ದು, ಅಂದಿನಿಂದ ನನ್ನ ಹೆಂಡತಿ ಸರೋಜಮ್ಮ ನನ್ನ ತಮ್ಮ ಕರಿಯಣ್ಣನ ಯೋಗಕ್ಷೇಮ ನೋಡಿಕೊಂಡು ಅವರ ಮನೆಯಲ್ಲಿಯೇ ಇದ್ದರು. ದಿನಾಂಕ: 08-09-2017 ರಂದು ನನ್ನ ಹೆಂಡತಿ ಸರೋಜಮ್ಮ ಊರಿಗೆ ಹೋಗಿ ಬರುತ್ತೇನೆಂತಾ ಹೇಳಿ ನಮ್ಮೂರಿಗೆ ಬಂದಿದ್ದರು.  ಈ ದಿನ ದಿನಾಂಕ: 11-09-2017 ರಂದು ಬೆಳಿಗ್ಗೆ ಸುಮಾರು 7-20 ಗಂಟೆ ಸಮಯದಲ್ಲಿ ನನ್ನ ತಮ್ಮನ ಸ್ನೇಹಿತರಾದ ಹನುಮಂತಪ್ಪ ಎಂಬುವರು ನನಗೆ ಪೋನ್ ಮಾಡಿ ನಿಮ್ಮ ತಮ್ಮ ಕರಿಯಣ್ಣ ಪ್ರತಿದಿನ ನನ್ನ ಜೊತೆ ವಾಕಿಂಗ್‌‌ ಬರುತ್ತಿದ್ದು, ಈ ದಿನ ಬೆಳಿಗ್ಗೆ 7-00 ಗಂಟೆಗೆ ವಾಕ್‌‌ಹೋಗಲು ಅವರ ಮನೆಯ ಬಳಿಗೆ ಬಂದಾಗ ಮನೆಯ ಬಾಗಿಲನ್ನು ಒಳಗಿನಿಂದ ಡೋರ್‌‌ಲಾಕ್‌‌‌ ಮಾಡಿಕೊಂಡು ಮಾಡಿಕೊಂಡು ಒಳಗಿನಿಂದ ಬಾಗಿಲ ಬೋಲ್ಟ್‌‌ ಸಹಾ ಹಾಕಿಕೊಂಡಿರುತ್ತಾರೆ.  ಎಷ್ಟು ಕೂಗಿದರೂ ಸಹಾ ತೆಗೆಯದ ಕಾರಣ ನಾನು ಕಿಟಿಕಿಯ ಸಂದಿನಿಂದ ನೋಡಲಾಗಿ ಮನೆಯ ಹಾಲ್‌‌ನಲ್ಲಿ ಮಕಾಡೆಯಾಗಿ ಬಿದ್ದಿರುವುದು ಕಂಡು ಬಂದಿದ್ದು, ನಂತರ ನಾನು ಹಾಲ್‌‌ನಲ್ಲಿರುವ ಕಿಟಕಿಯ ಗ್ಲಾಸನ್ನು ಹೊಡೆದು ನೋಡಲಾಗಿ, ಮಕಾಡೆಯಾಗಿ ಬಿದ್ದಿರುತ್ತಾರೆ.  ಎಷ್ಟು ಕೂಗಿಕೊಂಡರೂ ಸಹಾ ಬಾಗಿಲು ತೆಗೆಯುತ್ತಿಲ್ಲ ತಕ್ಷಣ ಬರುವಂತೆ ವಿಚಾರ ತಿಳಿಸಿದ್ದು,  ಆಗ ತಕ್ಷಣ ನಾನು ಹಾಗೂ ನಮ್ಮ ಮಕ್ಕಳು ನಮ್ಮೂರಿನಿಂದ ಹೊರಟು ಬೆಳಿಗ್ಗೆ ಸುಮಾರು 9-30 ಗಂಟೆಯ ಬಳಿಗೆ ತುಮಕೂರಿಗೆ ನಮ್ಮ ತಮ್ಮ ಕರಿಯಣ್ಣನ ಮನೆಯ ಬಳಿಗೆ ಬಂದು ನೋಡಲಾಗಿ ವಿಚಾರ ನಿಜವಾಗಿತ್ತು.   ನನ್ನ ತಮ್ಮ ಕರಿಯಣ್ಣನಿಗೆ ಹಾರ್ಟ್‌ ಆಪರೇಷನ್‌‌ ಮಾಡಿಸಿದ್ದು, ಮನೆಯಲ್ಲಿ ಒಬ್ಬನೇ ಇದ್ದನು.   ಈ ದಿನ ಬೆಳಗ್ಗೆಯೋ ಅಥವಾ ನಿನ್ನೆ ದಿನ ರಾತ್ರಿ ಯಾವಾಗಲೋ ಆತನಿಗೆ ಎದೆನೋವು ಕಾಣಿಸಿಕೊಂಡು ಕೆಳಕ್ಕೆ ಮಕಾಡೆಯಾಗಿ  ಬಿದ್ದು, ಹೃದಯಾಘಾತದಿಂದಲೋ ಅಥವಾ ತಲೆಗೋ ಏನೋ ಪೆಟ್ಟು ಬಿದ್ದು ಈ ರೀತಿ ಮೃತಪಟ್ಟಿರುವಂತೆ ಕಂಡು ಬಂದಿರುತ್ತೆ. ಈ ವಿಚಾರವನ್ನು ನಮ್ಮ ಸಂಬಂಧಿಕರಿಗೆಲ್ಲಾ ತಿಳಿಸಿ ಮುಂದಿನ ಕಾನೂನು ಕ್ರಮ ಜರುಗಿಸಿಕೊಡಲು ಕೋರಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

 

 

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 77 guests online
Content View Hits : 272942