lowborn Crime Incidents 11-09-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 11-09-17

ಹೆಬ್ಬೂರು  ಪೊಲೀಸ್ ಠಾಣಾ ಯು,ಡಿ,ಆರ್ ನಂ-23/2017 ಕಲಂ 174 ಸಿ,ಆರ್,ಪಿ,ಸಿ

ದಿನಾಂಕ: 10-09-2017 ರಂದು ಮದ್ಯಾಹ್ನ 01-30 ಗಂಟೆಗೆ ಪಿರ್ಯಾದುದಾರರಾದ ಧನಲಕ್ಷ್ಮಮ್ಮ ಕೋಂ ಕುಮಾರ್‌, 35 ವರ್ಷ, ವಕ್ಕಲಿಗರು, ಗಾಮೇಂಟ್ಸ್ ನಲ್ಲಿ ಕೆಲಸ, ಬಿದರಕಟ್ಟೆ, ಗೂಳೂರು ಹೋಬಳಿ, ತುಮಕೂರು ತಾಲ್ಲೋಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್‌ ಮಾಡಿಸಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ, ನನಗೆ ಸುಮಾರು 15 ವರ್ಷಗಳ ಹಿಂದೆ ಬಿದರಕಟ್ಟೆ ಗ್ರಾಮದ ಕುಮಾರ್‌‌ ಬಿನ್‌ ಕೆಂಪಗಿರಯ್ಯ ರವರೊಂದಿಗೆ ಮದುವೆಯಾಗಿದ್ದು, ನನಗೆ ಒಂದು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು, ನಾನು ಮತ್ತು ನನ್ನ ಗಂಡ ಸಂಸಾರದಲ್ಲಿ ಅನ್ಯೂನ್ಯವಾಗಿದ್ದು, ನಾವಿಬ್ಬರು ಗಾರ್ಮೆಟ್ಸ್‌ನಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿದ್ದೇವು. ನನ್ನ ಗಂಡನಾದ ಕುಮಾರ್‌ ರವರಿಗೆ ಈಗ್ಗೆ ಸುಮಾರು 3 ರಿಂದ 4 ವರ್ಷಗಳಿಂದ ಹೊಟ್ಟೆ ನೋವು ಬರುತ್ತಿದ್ದು, ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಸಹ ಗುಣಮುಖರಾಗಿರಲಿಲ್ಲ. ಸದರಿ ವಿಚಾರವಾಗಿ ನನ್ನ ಗಂಡ ಕುಮಾರ್ ರವರು ನನಗೆ ಹೊಟ್ಟೆ ನೋವು ವಾಸಿಯಾಗಲಿಲ್ಲವೆಂತ ಯಾವಾಗಲೂ ಯೋಚಿಸುತ್ತಾ ಜಿಗುಪ್ಸೆ ಹೊಂದಿದ್ದರು. ಈಗಿರುವಾಗ್ಗೆ, ಇದೇ ದಿವಸ ಅಂದರೆ ದಿನಾಂಕ 10/08/2017 ರಂದು ಬೆಳಿಗ್ಗೆ 8-00 ಗಂಟೆಯಿಂದ ನಾನು ಹಾಗೂ ನನ್ನ ಗಂಡನಾದ ಕುಮಾರ್‌‌ ರವರು ನಮ್ಮ ಹಳೆಯ ಮನೆಯ ಹತ್ತಿರ ಹೆಂಚನ್ನು ಕೆಳಗಿಳಿಸುತ್ತಿದ್ದು, ಬೆಳಿಗ್ಗೆ ಸುಮಾರು 11-00 ಗಂಟೆಗೆ ಹೆಂಚನ್ನು ಕೆಳಗಿಳಿಸುವಾಗ ನನ್ನ ಗಂಡ ಕುಮಾರ್ ರವರು ಹೊಟ್ಟೆ ನೋವು ಎಂತ ನನಗೆ ತಿಳಿಸಿದರು. ನಂತರ ಅವರು ನಮ್ಮ ಹಳೆಯ ಮನೆಯ ಪಕ್ಕದಲ್ಲಿಯೇ ಇರುವ ಹೊಸ ಮನೆಯ ಹತ್ತಿರ ಮಲಗುವುದಾಗಿ ಹೇಳಿ ಹೋದರು. ನಂತರ ನಾನು ಮದ್ಯಾಹ್ನ ಸುಮಾರು 12-30 ಗಂಟೆ ಸಮಯದಲ್ಲಿ ನಮ್ಮ ಹೊಸ ಮನೆಯ ಹತ್ತಿರ ಹೋಗಿ ನೋಡಲಾಗಿ ನನ್ನ ಗಂಡ ಕುಮಾರ್ ರವರು ನಮ್ಮ ಹೊಸ ಮನೆಯ ರೂಮ್‌ನಲ್ಲಿ ಒಂದು ಸೀರೆಯಿಂದ ಮನೆಯ ಮೇಲ್ಛಾವಣಿಗೆ ಶೀಟ್‌ಗಳನ್ನು ಹಾಕಲು ಅಳವಡಿಸಿರುವ ಕಬ್ಬಿಣದ ಪೈಪ್‌ಗೆ ನೇಣು ಬಿಗಿದುಕೊಂಡು ಮೃತಪಟ್ಟಿರುತ್ತಾರೆ. ನನ್ನ ಗಂಡ ಕುಮಾರ್‌ ರವರು ತಮಗೆ ಬರುತ್ತಿದ್ದ ಹೊಟ್ಟೆ ನೋವಿನ ಬಾಧೆ ತಾಳಲಾರದೇ ಜೀವನದಲ್ಲಿ ಜಿಗುಪ್ಸೆ ಹೊಂದಿ ತಮ್ಮಷ್ಟಕ್ಕೆ ತಾವೇ ಸೀರೆಯಿಂದ ಮನೆಯ ಮೇಲ್ಛಾವಣಿಯ ಕಬ್ಬಿಣದ ಪೈಪ್‌ಗೆ ಇದೇ ದಿವಸ ಬೆಳಿಗ್ಗೆ 11-00 ಗಂಟೆಯಿಂದ ಮದ್ಯಾಹ್ನ 12-30 ಗಂಟೆ ಸಮಯದ ಮದ್ಯೆ ನೇಣು ಬಿಗಿದುಕೊಂಡು ಮೃತಪಟ್ಟಿರುತ್ತಾರೆಯೇ ವಿನಃ ಅವರ ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿರುವುದಿಲ್ಲ. ಆದ್ದರಿಂದ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನನ್ನ ಗಂಡ ಕುಮಾರ್‌ ರವರ ಮೃತ ದೇಹವು ನಮ್ಮ ಹೊಸ ಮನೆಯಲ್ಲಿ ನೇಣು ಬಿಗಿದುಕೊಂಡಂತಹ ಸ್ಥಿತಿಯಲ್ಲಿರುತ್ತೆ ಎಂತಾ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ

ಹೊಸಬಡಾವಣೆ ಪೊಲೀಸ್ ಠಾಣಾ ಮೊ ನಂ 107/2017 U/S 454, 457, 380 IPC

ದಿನಾಂಕ:-10/09/2017 ರಂದು  ಮದ್ಯಾಹ್ನ  01-30 ಗಂಟೆಗೆ ಪಿರ್ಯಾದಿ ಹೆಚ್,ಬಿ. ಶಿವದೇವ್ ಬಿನ್ ಲೇಟ್ ಬಸಪ್ಪ. ವಾಸ :- ಪಾರ್ವತಿ ನಿಲಯ, 4ನೇ ಮೈನ್, 2ನೇ ಬ್ಲಾಕ್, ಕುವೆಂಪುನಗರ, ತುಮಕೂರು ರವರು ನೀಡಿದ  ದೂರಿನ ಸಾರಾಂಶವೆನೆಂದರೆ  ಪಿರ್ಯಾದಿಯು  ದಿನಾಂಕ:- 08/09/2017 ರಂದು  ಸಂಜೆ ಸುಮಾರು 05-00 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದು  ಈ ದಿವಸ ಬೆಳಗ್ಗೆ ಪಿರ್ಯಾದಿ ಮನೆ ಹತ್ತಿರ ವಾಸವಾಗಿರುವ ಲಕ್ಷ್ಮಣ ರವರು ಪಿರ್ಯಾದಿಗೆ ಫೋನ್ ಮಾಡಿ  ಮನೆಯ ಕೊಲಾಪ್ಸಬಲ್ ಗೇಟ್ ಗೆ ಹಾಕಲಾಗಿದ್ದ ಬೀಗಗಳು ಕೆಳಗೆ ಬಿದ್ದಿರುತ್ತವೆ ಎಂದು ತಿಳಿಸಿದ ಮೇರೆಗೆ ಪಿರ್ಯಾದಿಯು ತಿಪಟೂರಿನಿಂದ ಬಂದು  ನೋಡಲಾಗಿ ಮನೆಯ ಕೊಲಾಪ್ಸಬಲ್ ಗೇಟ್ ಮತ್ತು ಮುಖ್ಯ ದ್ವಾರಕ್ಕೆ ಹಾಕಲಾಗಿದ್ದ ಬೀಗಗಳನ್ನ ಯಾರೋ ಕಳ್ಳರು ಜಖಂ ಮಾಡಿ  ಒಳಪ್ರವೇಶಿಸಿ ಮನೆಯ ಬೀರುವಿನಲ್ಲಿದ್ದ ಬೀರು ಮತ್ತು ವಾಲ್ ಡ್ರಾಬ್ ಗಳಲ್ಲಿದ್ದ  277 ಗ್ರಾಂ ತೂಕದ ಚಿನ್ನದ ಒಡೆವೆಗಳು  ಹಾಗೂ ಅರ್ದ ಕೆ,ಜಿ. ತೂಕದ ಬೆಳ್ಳಿ ಚೆಂಬು. ಅರ್ದ ಕೆಜಿ ತೂಕದ ಬೆಳ್ಳಿ ತಟ್ಟೆ,  04 ಜೊತೆ  ಬೆಳ್ಳಿ ಕುಂಕುಮದ ಬಟ್ಟಲುಗಳು,  04 ಜೊತೆ ಬೆಳ್ಳಿ ದೀಪಗಳು,  02 ಜೊತೆ ಸುಮಾರು 400 ಗ್ರಾಂ ತೂಕದ ಬೆಳ್ಳಿ ಲೋಟಗಳು, ಒಂದು ಸುಮಾರು 200 ಗ್ರಾಂ ತೂಕದ ಬೆಳ್ಳಿ ಪಂಚಪಾತ್ರೆ,  ಸುಮಾರು 25 ಗ್ರಾಂ ತೂಕದ ಬೆಳ್ಳಿ ಉದ್ದರಣಿ, 02 ಜೊತೆ ಬೆಳ್ಳಿ ಕಾಲುಚೈನುಗಳು, ಮತ್ತು 02 ಟೈಟಾನ್ ಲೇಡಿಸ್ ವಾಚುಗಳು ಮತ್ತು ಒಂದು ಹೆಚ್ ಎಂ ಟಿ ವಾಚು ಮತ್ತು 8,000/- ರೂ ನಗದು ಹಣವನ್ನ ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನವಾಗಿರುವ ಚಿನ್ನಾಭರಣಗಳು  ಸುಮಾರು 4,00,000/- ( ನಾಲ್ಕು ಲಕ್ಷ ) ರೂ, ಬೆಳ್ಳಿ ಸಾಮಾನುಗಳು ಸುಮಾರು 50,000/- ( ಐವತ್ತು ಸಾವಿರ ) ರೂ , ವಾಚುಗಳು ಸುಮಾರು 5000/- ಮತ್ತು 8000/- ರೂ ನಗದು ಹಣವಾಗಿರುತ್ತದೆ.  ಈ ಬಗ್ಗೆ ಕ್ರಮಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ

 

ಮಿಡಿಗೇಶಿ ಪೊಲೀಸ್ ಠಾಣಾ ಯು.ಡಿ.ಆರ್.ನಂ.17/2017, ಕಲಂ:174 ಸಿ.ಆರ್.ಪಿ.ಸಿ

ದಿನಾಂಕ:10/09/2017 ರಂದು ಬೆಳಿಗ್ಗೆ 08:10 ಗಂಟೆಗೆ ಪಿರ್ಯಾದಿ ವೆಂಕಟೇಶ ನಾಯ್ಕ ಬಿನ್ ಗೋವಿಂದ ನಾಯ್ಕ, 45 ವರ್ಷ, ಲಂಬಾಣಿ ಜನಾಂಗ, ಚಿಕ್ಕಯಲ್ಕೂರು ಗ್ರಾಮ, ಐ.ಡಿ.ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನಗೆ 01 ಗಂಡು, 01 ಹೆಣ್ಣು ಮಗಳಿರುತ್ತಾಳೆ, ನನ್ನ ಮಗಳಾದ 20 ವರ್ಷದ ಸವಿತ.ವಿ. ಎಂಬುವರು ಮಧುಗಿರಿಯಲ್ಲಿ 03 ನೇ ವರ್ಷದ ಬಿ.ಎ.ವ್ಯಾಸಂಗ ಮಾಡುತ್ತಿರುತ್ತಾಳೆ, ನನ್ನ ಮಗಳು ಸವಿತಾಳು ದಿನಾಂಕ:09/09/2017 ರಂದು ಸಂಜೆ ಸುಮಾರು 05:30 ಗಂಟೆ ಸಮಯದಲ್ಲಿ ನಮ್ಮ ಹೊಲದಲ್ಲಿ ಸಾರಿಗೆ ಸೊಪ್ಪನ್ನು ಕಿಳುತ್ತಿರುವಾಗ ನನ್ನ ಮಗಳ ಬಲಗಾಲಿನ ತೊಡೆಗೆ ಯಾವುದೋ ವಿಷ ಪೂರಿತ ಹಾವು ಕಚ್ಚಿದಾಗ ನನ್ನ ಮಗಳು ಕಿರುಚಿಕೊಂಡಳು, ಕಿರುಚಿಕೊಂಡ ಶಬ್ದ ಕೇಳಿ ಅಲ್ಲೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಾನು ನನ್ನ ಮಗಳ ಬಳಿ ಹೋಗಿ ತಕ್ಷಣ ಆಕೆಯನ್ನು ಮನೆ ಹತ್ತಿರ ಕರೆದುಕೊಂಡು ಬಂದು ಹಾವು ಕಚ್ಚಿದಕ್ಕೆ ನನ್ನ ಮಗಳಿಗೆ ಗ್ರಾಮದಲ್ಲಿ ನಾಟಿ ಔಷಧಿಯನ್ನು ಕೊಡಿಸಿದೆನು. ನಂತರ ಅದೇ ದಿನ ರಾತ್ರಿ ಸುಮಾರು 01:30 ಗಂಟೆಗೆ ನನ್ನ ಮಗಳಿಗೆ ತಲೆ ಸುತ್ತು ಮತ್ತು ಉರಿ ಜಾಸ್ತಿಯಾಗಿದ್ದರಿಂದ ತಕ್ಷಣ ಆಕೆಯನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಯಾವುದೋ ವಾಹನದಲ್ಲಿ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ, ನಂತರ ವೈದ್ಯರು ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಸರ್ಕಾರಿ ಆಸ್ಪತ್ರೆಗೆ  ಕರೆತಂದಾಗ ವೈದ್ಯರು ನನ್ನ ಮಗಳನ್ನು ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುತ್ತಾಳೆ ಅಂತ ತಿಳಿಸಿದರು(ದಿ:10/09/2017 ರಂದು ಬೆಳಿಗ್ಗೆ ಸುಮಾರು 05:30 ಗಂಟೆಗೆ) ಆದ್ದರಿಂದ ಹಾವು ಕಚ್ಚಿ ಮೃತ ಪಟ್ಟಿರುವ ನನ್ನ ಮಗಳ ಶವವು ತುಮಕೂರು ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇದ್ದು ತಾವುಗಳು ಕಾನೂನು ರೀತಿಯ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದು ಅಂಶ.

ಹೊಸ ಬಡಾವಣೆ  ಪೊಲೀಸ್ ಠಾಣೆ ಮೊ.ಸಂ 107/2017 ಕಲಂ 454,457, 380 ಐಪಿಸಿ

ದಿನಾಂಕ:-10/09/2017 ರಂದು  ಮದ್ಯಾಹ್ನ  01-30 ಗಂಟೆಗೆ ಪಿರ್ಯಾದಿ ಹೆಚ್,ಬಿ. ಶಿವದೇವ್ ಬಿನ್ ಲೇಟ್ ಬಸಪ್ಪ. ವಾಸ :- ಪಾರ್ವತಿ ನಿಲಯ, 4ನೇ ಮೈನ್, 2ನೇ ಬ್ಲಾಕ್, ಕುವೆಂಪುನಗರ, ತುಮಕೂರು ವಾಸಿರವರು ಠಾಣೆಗೆ ಹಾಜರಾಗಿ ನೀಡಿದ  ದೂರಿನ ಸಾರಾಂಶವೆನೆಂದರೆ ನಾನು ಈಗ್ಗೆ ಸುಮಾರು 14 ವರ್ಷಗಳಿಂದ ಸಂಸಾರಸಹಿತವಾಗಿ  ವಾಸವಾಗಿರುತ್ತೇವೆ. ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಶ್ರೀಮತಿ ಮಂಜುಳ ರವರು ವಾಸವಾಗಿದ್ದು ಮಕ್ಕಳಿಗೆ ಮಧುವೆ ಮಾಡಿದ್ದು ಪ್ರತ್ಯೇಕವಾಗಿ ವಾಸವಾಗಿರುತ್ತಾರೆ. ನನ್ನ ಸ್ವಂತ ಊರು ತಿಪಟೂರು ತಾಲ್ಲೂಕು ಈಚನೂರು ಗ್ರಾಮವಾಗಿದ್ದು ಅಲ್ಲಿ ನನ್ನ ಬಾಬ್ತು ತೋಟ ಮತ್ತು ಜಮೀನು ಇರುತ್ತೆ  ನಾನು ಬಿಡುವಿನ ವೇಳೆಯಲ್ಲಿ ಹೋಗಿ ನೋಡಿಕೊಂಡು ಬರುತ್ತಿರುತ್ತೇನೆ.

ಹೀಗಿರುವಾಗ್ಗೆ  ದಿನಾಂಕ:- 08/09/2017 ರಂದು  ಸಂಜೆ ಸುಮಾರು 05-00 ಗಂಟೆಗೆ ನಾನು ಮನೆಗೆ ಬೀಗ ಹಾಕಿಕೊಂಡು  ಊರಿಗೆ ಹೋಗಿದ್ದು  ಈ ದಿನ ದಿನಾಂಕ:- 10/09/2017 ರಂದು ಬೆಳಿಗ್ಗೆ ಸುಮಾರು 07-30 ಗಂಟೆಗೆ ನಮ್ಮ ಮನೆ ಹತ್ತಿರ ವಾಸವಾಗಿರುವ ಲಕ್ಷ್ಮಣ ರವರು ನನಗೆ ಫೋನ್ ಮಾಡಿ ನಿಮ್ಮ ಮನೆಯ ಕೊಲಾಪ್ಸಬಲ್ ಗೇಟ್ ಗೆ ಹಾಕಲಾಗಿದ್ದ ಬೀಗಗಳು ಕೆಳಗೆ ಬಿದ್ದಿರುತ್ತವೆ ಎಂದು ತಿಳಿಸಿದರು ತಕ್ಷಣ ನಾನು ನನ್ನ ಸ್ನೇಹಿತರಾದ ಕೆ,ಎಸ್. ಮಹೇಶ್ ಮತ್ತು ಗಂಗಾಧರ್ ರವರಿಗೆ ಮನೆಯ ಹತ್ತಿರ ಹೋಗಿ ನೋಡಲು ಹೇಳಿದ್ದು ಮೇಲ್ಕಂಡವರುಗಳು ನಮ್ಮ ಮನೆಯ ಹತ್ತಿರ ಹೋಗಿ  ನೋಡಿ ಮನೆಯ ಬೀಗಗಳನ್ನ ಯಾರೋ ಹೊಡೆದು ಹಾಕಿರುತ್ತಾರೆಂದು ತಿಳಿಸಿದರು. ತಕ್ಷಣ ನಾನು ಮತ್ತು ನಮ್ಮ ಮನೆಯವರು  ತಿಪಟೂರಿನಿಂದ ಬಂದು ನೋಡಲಾಗಿ ಮನೆಯ ಕೊಲಾಪ್ಸಬಲ್ ಗೇಟ್ ಮತ್ತು ಮುಖ್ಯ ದ್ವಾರಕ್ಕೆ ಹಾಕಲಾಗಿದ್ದ ಬೀಗಗಳನ್ನ ಜಖಂ ಮಾಡಿ ತೆಗೆದಿದ್ದು ಒಳಗೆ ಪ್ರವೇಶಿಸಿ ನೋಡಲಾಗಿ ನಮ್ಮ ಮನೆಯ ಬೀರುವಿನಲ್ಲಿದ್ದ ಬೀರು ಮತ್ತು ವಾಲ್ ಡ್ರಾಬ್ ಗಳಲ್ಲಿದ್ದ  01)  ಸುಮಾರು 80 ಗ್ರಾಂ ತೂಕವಿರುವ ಎರಡು ಎಳೆ ಮುತ್ತಿನ ಸರ ಮತ್ತು ಡಾಲರ್, 02) ಒಂದು ಸುಮಾರು 70 ಗ್ರಾಂ ತೂಕವಿರುವ ಜೇಡಸಹಿತ ಚಿನ್ನದ ಸರ, 03) ಒಂದು ಸುಮಾರು 40 ಗ್ರಾಂ ತೂಕದ ಹವಳದ ಚಿನ್ನದ ಸರ, 04) ಒಂದು ಜೊತೆ ಸುಮಾರು 12 ಗ್ರಾಂ ತೂಕದ ಚಿನ್ನ ಮತ್ತು ಬಿಳಿ ಕಲ್ಲಿನ ಓಲೆಗಳು, 05) ಒಂದು ಜೊತೆ ಸುಮಾರು 08 ಗ್ರಾಂ ತೂಕವಿರುವ ಚಿನ್ನ ಮತ್ತು ಹವಳದ ಓಲೆಗಳು, 06)  ಸುಮಾರು 15 ಗ್ರಾಂ ತೂಕದ ಒಂದು ಜೊತೆ ಚಿನ್ನದ ಓಲೆ ಮತ್ತು ಜುಮುಕಿಗಳು 07) ಒಂದು ಜೊತೆ  ಸುಮಾರು  08 ಗ್ರಾಂ ತೂಕದ ಕೆಂಪು ಕಲ್ಲಿನ ಓಲೆಗಳು, 08) ಒಂದು ಜೊತೆ ಸುಮಾರು 08 ಗ್ರಾಂ ತೂಕದ ಮುತ್ತಿನ ಓಲೆಗಳು. 09) ಒಂದು ಸುಮಾರು 10 ಗ್ರಾಂ ತೂಕದ ಚಿನ್ನದ ಜೇಡದ ಉಂಗುರ, 10) ಒಂದು ಸುಮಾರು 12 ಗ್ರಾಂ ತೂಕದ ಚಿನ್ನದ ಹವಳದ ಉಂಗುರ, 11) ಒಂದು ಸುಮಾರು 12 ಗ್ರಾಂ ತೂಕದ ಕೆಂಪು ಕಲ್ಲಿನ ಚಿನ್ನದ ಉಂಗುರ, 12) ಒಂದು ಸುಮಾರು 02 ಗ್ರಾಂ ತೂಕದ ಮಗುವಿನ ಚಿನ್ನದ ಉಂಗುರ  ಮತ್ತು ಬೆಳ್ಳಿ ಸಾಮಾನುಗಳಾದ ಅರ್ದ ಕೆ,ಜಿ. ತೂಕದ ಬೆಳ್ಳಿ ಚೆಂಬು. ಸುಮಾರು ಅರ್ದ ಕೆಜಿ ತೂಕದ ಬೆಳ್ಳಿ ತಟ್ಟೆ,  04 ಜೊತೆ  ಬೆಳ್ಳಿ ಕುಂಕುಮದ ಬಟ್ಟಲುಗಳು,  04 ಜೊತೆ ಬೆಳ್ಳಿ ದೀಪಗಳು,  02 ಜೊತೆ ಸುಮಾರು 400 ಗ್ರಾಂ ತೂಕದ ಬೆಳ್ಳಿ ಲೋಟಗಳು, ಒಂದು ಸುಮಾರು 200 ಗ್ರಾಂ ತೂಕದ ಬೆಳ್ಳಿ ಪಂಚಪಾತ್ರೆ,  ಒಂದು ಸುಮಾರು 25 ಗ್ರಾಂ ತೂಕದ ಬೆಳ್ಳಿ ಉದ್ದರಣಿ, 02 ಜೊತೆ ಬೆಳ್ಳಿ ಕಾಲುಚೈನುಗಳು,  ಮತ್ತು 02 ಟೈಟಾನ್ ಲೇಡಿಸ್ ವಾಚುಗಳು ಮತ್ತು ಒಂದು ಹೆಚ್ ಎಂ ಟಿ ವಾಚು ಮತ್ತು 8,000/- ರೂ ನಗದು ಹಣವನ್ನ ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡು ಬಂದಿತು. ಕಳ್ಳತನವಾಗಿರುವ ಚಿನ್ನಾಭರಣಗಳು  ಸುಮಾರು 4,00,000/- ( ನಾಲ್ಕು ಲಕ್ಷ ) ರೂ, ಬೆಳ್ಳಿ ಸಾಮಾನುಗಳು ಸುಮಾರು 50,000/- ( ಐವತ್ತು ಸಾವಿರ ) ರೂ , ವಾಚುಗಳು ಸುಮಾರು 5000/- ಮತ್ತು 8000/- ರೂ ನಗದು ಹಣವಾಗಿರುತ್ತದೆ.  ಆದ್ದರಿಂದ ನಮ್ಮ ಮನೆಯಲ್ಲಿ ಕಳ್ಳತನ ಮಾಡಿರುವ ಕಳ್ಳರನ್ನ ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆಂದು ಇತ್ಯಾದಿ ನೀಡಿದ  ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈ ಗೊಂಡಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 151/2017 ಕಲಂ: 457,380 ಐ.ಪಿ.ಸಿ.

ದಿನಾಂಕ: 10/09/2017 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿ ಕೃಷ್ಣಪ್ಪನಾಯಕ ಬಿನ್ ಲೇಟ್ ದೇವನಾಯ್ಕ, ದೇವ ಸೆರೆಮಿಕ್ಸ್ ಮಾಲೀಕರು, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ತಿಪಟೂರು ಟೌನ್ ಬಿ.ಹೆಚ್ ರಸ್ತೆಯ ನಕ್ಷತ್ರ ಬಾರ್ ಪಕ್ಕ ದೇವ ಸೆರೆಮಿಕ್ಸ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು, ದಿನಾಂಕ: 09/09/2017 ರಂದು ಸಂಜೆ 5-00 ಗಂಟೆಯಲ್ಲಿ ಅಂಗಡಿಗೆ ಬಾಗಿಲು ಹಾಕಿಕೊಂಡು ಮನೆಗೆ ಹೋಗಿದ್ದು, ಈ ದಿನ ದಿನಾಂಕ: 10/09/2017 ರಂದು ಬೆಳಿಗ್ಗೆ 8-30 ಗಂಟೆಯಲ್ಲಿ ನಮ್ಮ ಅಂಗಡಿಯ ಬಾಗಿಲು ತೆರೆದು ಒಳಗಡೆ ಹೋದಾಗ ರಾತ್ರಿ ಮಳೆ ಬಂದು ಅಂಗಡಿಯಲ್ಲಿ ಸೋರಿದ್ದು, ಹಿಂಭಾಗದಲ್ಲಿ ಇಟ್ಟಿದ್ದ ಸಿ.ಪಿ ಪಿಟಿಂಗ್ಸ್ ನಲ್ಲಿ ಪಿಟಿಂಗ್ಸ್ ಹಾಗೂ ಇತರೆ ಬಿಡಿ ಭಾಗಗಳು ಚಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು. ನಂತರ ನೋಡಲಾಗಿ ಅಂಗಡಿಯ ಹಿಂಭಾಗದಲ್ಲಿ ಹಾಕಿದ್ದ ತಗಡಿನ ಶೀಟನ್ನು ಕಿತ್ತುಹಾಕಿ ದಿನಾಂಕ: 09/09/2017 ರಂದು ರಾತ್ರಿ ಯಾವುದೋ ವೇಳೆಯಲ್ಲಿ ಯಾರೋ ಕಳ್ಳರು ಒಳಗೆ ನುಗ್ಗಿ ನಮ್ಮ ಅಂಗಡಿಯಲ್ಲಿ ಇಟ್ಟಿದ್ದ ನಲ್ಲಿ ಬಿಡಿ ಭಾಗಗಳು, ಸಿ.ಪಿ ಪಿಟಿಂಗ್ಸ್ ಹಾಗೂ ಪ್ಲಂಬಿಂಗ್ ಬಿಡಿ ಭಾಗಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ವಸ್ತುಗಳು ಬೆಲೆ ಸುಮಾರು 25000/- ರೂಗಳಾಗಬಹುದು. ಆದ್ದರಿಂದ ಕಳವು ಆಗಿರುವ ಮೇಲ್ಕಂಡ ವಸ್ತುಗಳನ್ನು ಹಾಗೂ ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ದೂರು ನೀಡಿದ್ದು ಪ್ರಕರಣ ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 76 guests online
Content View Hits : 272941