lowborn Crime Incidents 05-09-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 05-09-17

ಅಮೃತೂರು ಪೊಲೀಸ್‌ ಠಾಣಾ ಮೊನಂ-168/2017, ಕಲಂ- 279, 304(ಎ) ಐಪಿಸಿ.

 

ದಿನಾಂಕ: 04-09-2017 ರಂದು ಮದ್ಯಾಹ್ನ 02-00 ಗಂಟೆಗೆ ವೆಂಕಟೇಶ್ ಬಿನ್ ಲೇಟ್ ಜಯರಾಮಯ್ಯ, 52 ವರ್ಷ, ಆದಿದ್ರಾವಿಡ ಜನಾಂಗ, ಜಿರಾಯ್ತಿ, ಬೀರಗಾನಹಳ್ಳಿ, ಎಡೆಯೂರು ಹೋಬಳಿ, ಕುಣಿಗಲ್ ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ        ದಿನಾಂಕ: 04-09-2017 ರಂದು ಮದ್ಯಾಹ್ನ ಸುಮಾರು 12-30 ಗಂಟೆ ಸಮಯದಲ್ಲಿ ನಾನು ಎಡೆಯೂರು ಬಸ್ಸ್ ನಿಲ್ದಾಣದಲ್ಲಿರುವ ದೇವರಾಜ ರವರ ಅಂಗಡಿಯ ಬಳಿ ಅವರೊಂದಿಗೆ ಮಾತನಾಡಿಕೊಂಡು ನಿಂತಿದ್ದಾಗ, ಅದೇ ಸಮಯಕ್ಕೆ ಬಿ.ಹೆಚ್.ಶಿವಶಂಕರಪ್ಪ ರವರ ಕಾಂಪ್ಲೇಕ್ಸ್ ಹಿಂಭಾಗದಲ್ಲಿ ಎಡೆಯೂರು ಬಸ್ಸ್ ನಿಲ್ದಾಣದಿಂದ ಸಂಗೀತ ವೈನ್ಸ್ ಸ್ಟೋರ್‌ ಗೆ ಹೋಗಲು ಹೊಸದಾಗಿ ನಿರ್ಮಿಸಿರುವ ಮಣ್ಣಿನ ರಸ್ತೆಯ ಪಕ್ಕದ ಗುಂಡಿಗಳಿಗೆ ಟ್ರಾಕ್ಟರ್-ಟ್ರೈಲರ್ ಗಳಲ್ಲಿ ಮಣ್ಣನ್ನು ಹೊಡೆಯುತ್ತಿದ್ದು, ಅದರ ಲೆಕ್ಕವನ್ನು ತೆಗೆದುಕೊಳ್ಳಲು ನಮ್ಮ ಸಂಬಂಧಿಕರಾದ ವರದರಾಜು ಬಿನ್ ಲೇಟ್ ಕಂಚಯ್ಯ ರವರು ಕೂಲಿ ಕೆಲಸಕ್ಕೆ ಹೋಗಿ ರಸ್ತೆಯ ಎಡಪಕ್ಕದಲ್ಲಿ ನಿಂತಿದ್ದಾಗ, ಒಂದು ಮಣ್ಣು ತುಂಬಿದ ಟ್ರಾಕ್ಟರ್-ಟ್ರೈಲರ್ ನ ಚಾಲಕ ತನ್ನ ಟ್ರಾಕ್ಟರ್–ಟ್ರೈಲರನ್ನು ಎಡೆಯೂರು ಬಸ್ಸ್ ನಿಲ್ದಾಣದ ಕಡೆಯಿಂದ ಸಂಗೀತ ವೈನ್ಸ್ ಸ್ಟೋರ್‌ ಕಡೆಗೆ ಹೋಗಲು ಮಣ್ಣಿನ ರಸ್ತೆಯಲ್ಲಿ ಅತಿವೇಗವಾಗಿ ಓಡಿಸಿಕೊಂಡು ಹೋದವನೇ ಏಕಾಏಕಿ ತನ್ನ ಟ್ರಾಕ್ಟರ್-ಟ್ರೈಲರನ್ನು ಬಲಕ್ಕೆ ತಿರುಗಿಸಿದ್ದರಿಂದ ರಸ್ತೆಯ ಎಡಪಕ್ಕದಲ್ಲಿ ನಿಂತಿದ್ದ ವರದರಾಜು ರವರಿಗೆ ಟ್ರಾಕ್ಟರ್ ಇಂಜಿನ್ ತಗುಲಿ ಅಪಘಾತವಾಗಿ ಕೆಳಗೆ ಬಿದ್ದ ವರದರಾಜು ರವರ ಮೇಲೆ ಇಂಜಿನ್‌ನ  ಎಡಭಾಗದ ಮುಂದಿನ ಚಕ್ರ ಹತ್ತಿತು. ಆಗ ನಾನು ಮತ್ತು ದೇವರಾಜು ರವರು ಕೂಡಲೇ ಸ್ಥಳಕ್ಕೆ ಓಡಿ ಹೋಗಿ ನೋಡಲಾಗಿ, ವರದರಾಜು ರವರಿಗೆ ತಲೆಗೆ ಮತ್ತು ಮೈಕೈಗೆ ಪೆಟ್ಟುಗಳು ಬಿದ್ದು ಮೂಗು, ಬಾಯಿಯಲ್ಲಿ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ನಂತರ ಈ ಅಪಘಾತಪಡಿಸಿದ ಟ್ರಾಕ್ಟರ್-ಟ್ರೈಲರ್ ನಂಬರ್ ನೋಡಲಾಗಿ ಕೆಎ-44 ಟಿ-4031-4032 ರ ಟ್ರಾಕ್ಟರ್-ಟ್ರೈಲರ್ ಆಗಿತ್ತು. ನಂತರ ಯಾವುದೋ ಒಂದು ಆಟೋದಲ್ಲಿ ಮೃತ ವರದರಾಜು ರವರ ಶವವನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತೆಗೆದುಕೊಂಡು ಹೋಗಿ ಇಟ್ಟು, ಈಗ ಬಂದು ದೂರು ನೀಡುತ್ತಿದ್ದೇನೆ. ಆದ್ದರಿಂದ  ವರದರಾಜು ವಿನ ಸಾವಿಗೆ ಕಾರಣನಾದ ಕೆಎ-44 ಟಿ-4031-4032 ರ ಟ್ರಾಕ್ಟರ್-ಟ್ರೈಲರ್ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ಕುಣಿಗಲ್ ಪೊಲೀಸ್ ಠಾಣಾ ಮೊ.ನಂ: 457/2017 ಕಲಂ; 279. 337.304 (ಎ) ಐ.ಪಿ.ಸಿ

ದಿನಾಂಕ 04/08/17  ರಂದು ಮದ್ಯಾಹ್ನ 01-30 ಗಂಟೆಗೆ ಈ ಕೆಸಿನ ಪಿರ್ಯಾದಿ  ಕೆಂಪಣ್ಣ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ 03/09/2017 ರಂದು ಕಿರಿಯ ಮಗನಾದ  ಹೇಮಂತ್ ಕುಮಾರ್ ರವರು ಅವರ ಸ್ನೇಹಿತನಾದ ಗಂಗರಾಜು  ಬಿನ್ ಚಂದ್ರಯ್ಯ  ಇವರಿಬ್ಬರು ಕಾರ್ಯನಿಮಿತ್ತ  ಅವರ ಬಾಬ್ತು ಕೆ.ಎ. 02-ಹೆಚ್.ಡಬ್ಲ್ಯೂ 475 ರಲ್ಲಿ ಕುಣೀಗಲ್ ಗೆ ಹೋಗಿದ್ದು ಕೆಲಸಮುಗಿಸಿಕೊಂಡು ವಾಪಸ್ಸು ಅವರ ಊರಿಗೆ ಬರಲೆಂದು  ರಾತ್ರಿ ಸುಮಾರು 09-30 ಗಂಟೆ ಸಮಯದಲ್ಲಿ ವಡ್ಡರಕುಪ್ಪೆ-ಗಿಡದಪಾಳ್ಯ  ಮುಖ್ಯ ರಸ್ತೆಯ ಕೆಂಪಶಾನೆ ಗೌಡನಪಾಳ್ಯದ ಗಿರಿತಿಮ್ಮಯ್ಯರವರ ಮನೆ ಮುಂಭಾಗ ಬರುತ್ತಿರಬೇಕಾದರೆ ಅದೇ ಸಮಯಕ್ಕೆ ತೆರೆದಕುಪ್ಪೆ ಕಡೆಯಿಂದ ವಡ್ಡರಕುಪ್ಪೆ ಕಡೆಗೆ ಹೋಗಲು ಬಂದ ಕೆ.ಎ. 02-ಹೆಚ್.ಆರ್. 0028 ರ ಬೈಕ್ ಚಾಲಕ ತನ್ನ ಬೈಕಿನಲ್ಲಿ ಮತ್ತೊಬ್ಬ ಹಿಂಬದಿ ಸವಾರನನ್ನು ಕೂರಿಸಿಕೊಂಡು ತನ್ನ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಅವನ ಮುಂದೆ ಹೋಗುತ್ತಿದ್ದ ಯಾವುದೋ ಒಂದು ವಾಹನವನ್ನು ಹಿಂದಿಕ್ಕಲು ಹೋಗಿ ರಸ್ತೆಯ  ಪೂರಾ ಬಲಬಾಗಕ್ಕೆ ಬೈಕನ್ನು ಚಲಿಸಿ ಅಲ್ಲೆ ಎಡರಸ್ತೆಯಲ್ಲಿ ಬರುತ್ತಿದ್ದ ಪಿರ್ಯಾದಿ ಮಗನ  ಬೈಕಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದು  ಸದರಿ ಅಪಘಾತದಿಂದ 4 ಬೈಕ್ ಸವಾರರಿಗೂ ಪೆಟ್ಟು ಬಿದ್ದಿದ್ದು  ನಂತರ  ಅಲ್ಲಿಯೇ ಸ್ಥಳದಲ್ಲಿದ್ದ ತೆರೆದಕುಪ್ಪೆ ಗ್ರಾಮದ ವಾಸಿಗಳಾದ  ನಾಗರಾಜ ಮತ್ತು ಚಂದ್ರಶೇಖರ್ ರವರುಗಳು ಗಾಯಾಳುಗಳನ್ನು ಉಪಚರಿಸಿ ಯಾವುದೋ ಒಂದು ವಾಹನದಲ್ಲಿ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟು ನಂತರ ನನಗೆ ವಿಚಾರ ತಿಳಿಸಿದ್ದು ಪಿರ್ಯಾದಿ ತನ್ನ ಮಗನನ್ನು ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ಕರೆದುಕೊಂಡು ಒಳರೋಗಿಯಾಗಿ ದಾಖಲಿಸಿದ್ದು ಚಿಕಿತ್ಸೆ ಪಲಕಾರಿಯಾಗದೇ ಪಿರ್ಯಾದಿ ಮಗ ಹೇಮಂತ್ ಕುಮಾರ್  ರವರು ಇಂದು ಮದ್ಯಾಹ್ನ 12-20   ಗಂಟೆಯಲ್ಲಿ ಸ್ಪರ್ಶ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ನಂತರ ಪಿರ್ಯಾದಿ ಅಪಘಾತಪಡಿಸಿದ ಬೈಕ್ ಚಾಲಕನ ಹೆಸರು ತಿಳಿಯಲಾಗಿ ರವಿಕುಮಾರ್ ವಾಸಿ ಹಾಗೂ ಹಿಂಬದಿ ಸವಾರ ಲೋಕೇಶ ಮಂಡನಪಾಳ್ಯ ವಾಸಿಗಳು ಎಂದು ತಿಳಿದು ಹಾಗೂ ಗಾಯಾಳುಗಳು  ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಹಾಗೂ ಸದರಿ ಅಪಘಾತ ಪಡಿಸಿದ ಕೆ.ಎ.02-ಹೆಚ್.ಆರ್.‍ 0028 ರ ಬೈಕ್ ಚಾಲಕ ರವಿಕುಮಾರ್ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂತ ನೀಡಿದ ಪಿರ್ಯಾದನ್ನು ಪಡೆದು ಪ್ರಕರಣದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.79/2017, ಕಲಂ:323,324,504,506, ರೆ/ವಿ 34 ಐಪಿಸಿ

ದಿನಾಂಕ:04/09/2017 ರಂದು ಮದ್ಯಾಹ್ನ 12:30 ಗಂಟೆಗೆ ಫಿರ್ಯಾದಿ ಶಿವಶಂಕರ ಬಿನ್ ಸಿದ್ದಲಿಂಗಪ್ಪ  ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿ:01/09/2017 ರಂದು  ಸಂಜೆ ಸುಮಾರು 6:30 ಗಂಟೆ ಸಮಯದಲ್ಲಿ ಹಳೇಗೊಲ್ಲರಹಟ್ಟಿ ಗ್ರಾಮದ ವಾಸಿಗಳಾದ 1) ಶಿವಣ್ಣ ಬಿನ್ ಲೇ|| ಕೋನಪ್ಪ 2) ರಂಗಪ್ಪ ಬಿನ್ ಲೇ|| ಕೋನಪ್ಪ 3) ಗೋವಿಂದರಾಜು ಬಿನ್ ಲೇ|| ಕೋನಪ್ಪ ರವರುಗಳು ನಮ್ಮ ಬಾಬ್ತು ಜಮೀನಿನಲ್ಲಿರುವ ಕಡಲೆ ಗಿಡಗಳಿಗೆ ಹಾಗೂ ಹುರಳಿ ಗಿಡಗಳಿಗೆ ಕುರಿಗಳನ್ನು ಬಿಟ್ಟು ಮೇಯಿಸುತ್ತಿದ್ದರು. ಆಗ ಜಮೀನಿನ ಬಳಿ ಇದ್ದ ನಾನು ಮತ್ತು ನಮ್ಮ ತಂದೆ ಸಿದ್ದಲಿಂಗಪ್ಪ ಇಬ್ಬರೂ ಹೋಗಿ ಏಕೆ ಈ ರೀತಿ ಕುರಿಗಳನ್ನು ಬಿಟ್ಟು ಕಡಲೆ ಗಿಡಗಳನ್ನು ಹಾಗೂ ಹುರಳಿ ಗಿಡಗಳನ್ನು ಮೇಯಿಸುತ್ತಿದ್ದಿರಾ ಎಂತ ಕೇಳಿದ್ದಕ್ಕೆ ಮೇಲ್ಕಂಡ ಮೂರು ಜನರು ನೀವು ಯಾರೋ ಕೇಳೋಕೆ ಎಂತ  ನಮ್ಮ ಮೇಲೆ ಗಲಾಟೆ ಮಾಡಿ ಬಾಯಿಗೆ ಬಂದಂತೆ ಕೆಟ್ಟ ಕೆಟ್ಟ ಮಾತುಗಳಿಂದ ಬೈಯುತ್ತಾ ಶಿವಣ್ಣ ಎಂಬುವನು ಏಕಾಏಕಿ ತನ್ನ ಕೈಯಲ್ಲಿದ್ದ ಬಿದಿರು ದೊಣ್ಣೆಯಿಂದ  ನಮ್ಮ ತಂದೆ ಸಿದ್ದಲಿಂಗಪ್ಪನವರ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ನಂತರ ರಂಗಪ್ಪ ಮತ್ತು ಗೋವಿಂದರಾಜು ಎಂಬುವರು ತಮ್ಮ ಕೈಗಳಿಂದ ನಮ್ಮ ತಂದೆ ಸಿದ್ದಲಿಂಗಪ್ಪನವರ ಮೈ ಕೈಗೆ ಗುದ್ದಿ ನೋವುಂಟು ಮಾಡಿರುತ್ತಾರೆ. ಅಷ್ಠರಲ್ಲಿ ಅಲ್ಲೆ ಜಮೀನಿನ ಬಳಿ ಇದ್ದ ನಮ್ಮ ಗ್ರಾಮದ ಈರಕರಿಯಪ್ಪ  ಎಂಬುವರು ಬಂದು ಜಗಳ ಬಿಡಿಸಿ ಸಮಾದಾನ ಪಡಿಸಿದರು. ಅಷ್ಠಕ್ಕೂ ಸುಮ್ಮನಾಗದ ಮೇಲ್ಕಂಡ ಮೂರು ಜನರು ಇಷ್ಠಕ್ಕೆ ನಿಮ್ಮನ್ನು ಬಿಡುವುದಿಲ್ಲ ನಮ್ಮ ತಂಟೆಗೆ ಬಂದರೆ ನಿಮಗೊಂದು ಗತಿ ಕಾಣಿಸುತ್ತೇವೆಂತ ಪ್ರಾಣ ಬೆದರಿಕೆ ಹಾಕಿದರು.ನಂತರ ಶಿವಣ್ಣನು  ತನ್ನ ಕೈಯಲ್ಲಿದ್ದ ಬಿದಿರು ದೊಣ್ಣೆಯನ್ನು ಸ್ಥಳದಲ್ಲಿಯೇ ಬಿಸಾಕಿ ಮೂರು ಜನರು ತಮ್ಮ ಕುರಿಗಳನ್ನು ಹೊಡೆದುಕೊಂಡು ಹೋದರು. ಆದ್ದರಿಂದ ನಮ್ಮ ಮೇಲೆ ಗಲಾಟೆ ಮಾಡಿದ ಮೇಲ್ಕಂಡ ಮೂರು ಜನರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ಫಿರ್ಯಾದುವಿನ ಅಂಶವಾಗಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.80/2017, ಕಲಂ:324,504,506, ಐಪಿಸಿ

ದಿನಾಂಕ:04/09/2017 ರಂದು ರಾತ್ರಿ 09-30 ಗಂಟೆ ಸಮಯದಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ರಂಗನಾಥ ರವರು ನೀಡಿದ ಹೇಳಿಕೆ ಅಂಶವೆನೆಂದರೆ ತಮ್ಮ ಬಾಬ್ತು ಜಮೀನನಲ್ಲಿ ಈ ಕೇಸಿನ ಆರೋಪಿ ರಾಮಕೃಷ್ಣನು ಪೈಪು ಹಾಕಿಕೊಂಡು ನೀರುಬಿಟ್ಟುಕೊಂಡಿದ್ದ ವಿಚಾರವಾಗಿ ಕೇಳಿದ್ದಕ್ಕೆ ಆರೋಪಿಯು ಈ ದಿನ ಸಂಜೆ 06-30 ಗಂಟೆ ಸಮಯದಲ್ಲಿ ತಮ್ಮ ಮನೆಯ ಬಳಿ ಇದ್ದ ರಂಗನಾಥ ತಿಮ್ಮಯ್ಯ,ನಾಗರತ್ನರವರಿಗೆ ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಫಿರ್ಯಾದಿ ರಂಗನಾಥ ಆತನ ತಂದೆ ತಿಮ್ಮಯ್ಯನಿಗೆ ಹಾಗೂ ಆತನ ಹೆಂಡತಿ ನಾಗರತ್ನಮ್ಮಳಿಗೆ ಊರುಗೋಲಿನಿಂದ (ದೊಣ್ಣೆಯಿಂದ) ಹೊಡೆದು ರಕ್ತಗಾಯಪಡಸಿ ಪ್ರಾಣಬೆದರಿಕೆ ಹಾಕಿರುತ್ತಾನೆಂತಾ ಸದರಿ ಆರೋಪಿತನ ವಿರುಧ್ದ ಕಾನೂನು ರೀತ್ಯಾಕ್ರಮಕೈಗೊಳ್ಳಿ ಎಂತಾ ಇತ್ಯಾದಿ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 76 guests online
Content View Hits : 272944