lowborn Crime Incidents 12-08-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >> ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ ದಿನಾಂಕ 13/1/2018           >> -:  ಪತ್ರಿಕಾ ಪ್ರಕಟಣೆ.  :-   ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380... >> >> -: ದಿನಾಂಕ : 19 -12 -17  :- :  ಪತ್ರಿಕಾ ಪ್ರಕಟಣೆ : ಕೋಮು ಪ್ರಚೋದನಕಾರಿ ಹೇಳಿಕೆಗಳ... >> ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 12-08-17

ಹಂದನಕೆರೆ ಠಾಣಾ ಮೊನಂ.61/2017 ಕಲಂ 379 ಐಪಿಸಿ ಜೊ 21 ಎಂಎಂಡಿಆರ್ ಆಕ್ಟ್ & 44 ಕೆಎಂಎಂಸಿಆರ್ ಆಕ್ಟ್

 

ದಿನಾಂಕ:11/08/2017 ರಂದು ಬೆಳಿಗ್ಗೆ  11.00 ಗಂಟೆಗೆ ಠಾಣೆಗೆ ಬಂದು ಪಂಚನಾಮೆ ಮೂಲಕ ವಶಪಡಿಸಿಕೊಂಡಿದ್ದ ಮರಳು ತುಂಬಿದ ಟ್ರಾಕ್ಟರ್ ಹಾಗು ಟ್ರೈಲರ್ ಹಾಗು ಇಬ್ಬರು ಆಸಾಮಿಗಳನ್ನು  ಠಾಣೆಗೆ ಕರೆತಂದು  ಪ್ರಕರಣ ದಾಖಲಿಸಿದ್ದ ಪ್ರಕರಣದ ಸಾರಾಂಶವೇನೆಂದರೆ ಈ ದಿನ ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಚಿ ನಾ ಹಳ್ಳಿಯಲ್ಲಿ  ಪೆರೇಡ್‌ಗೆ ಭಾಗವಹಿಸಿ ಪೆರೇಡ್‌ ಮುಗಿಸಿಕೊಂಡು ವಾಪಸ್ಸು ಹಂದನಕೆರೆ ಪೊಲೀಸ್‌ ಠಾಣೆಗೆ ಬರುವಾಗ ಬಾತ್ಮಿದಾರರಿಂದ ಠಾಣಾ ಸರಹದ್ದಿನ ಮಾದಾಪುರ ಗ್ರಾಮದ ಬಳಿ ಇರುವ ಕೆರೆಯಲ್ಲಿ ಯಾರೋ ಒಂದು ಟ್ರಾಕ್ಟರ್‌ ಮತ್ತು ಟ್ರೈಲರ್‌ ಗೆ ಅಕ್ರಮವಾಗಿ ಕಳ್ಳತನದಿಂದ ಯಾವುದೇ ಪರವಾನಗಿ ಪಡೆಯದೇ ಮರಳನ್ನು ತುಂಬುತ್ತಿರುತ್ತಾರೆಂತ ಬಂದ ಮಾಹಿತಿ ಮೇರೆಗೆ ನಾನು ಜೀಪ್ ನಲ್ಲಿ ಬೆಳಿಗ್ಗೆ ಸುಮಾರು 9-00 ಗಂಟೆ ಸಮಯದಲ್ಲಿ ಮಾದಾಪುರದ ಕೆರೆಯ ಬಳಿಗೆ ಹೋಗಿ ಕೆರೆಯ ಒಳಗೆ ಒಂದು ಟ್ರಾಕ್ಟರ್‌ ಮತ್ತು ಟ್ರೈಲರ್‌ ಗೆ ಮರಳನ್ನು ಇಬ್ಬರು ಅಸಾಮಿಗಳು ತುಂಬುತ್ತಿದ್ದವರನ್ನು  ಮತ್ತು ಅರ್ಧಭಾಗದಷ್ಟು ಮರಳು ತುಂಬಿದ್ದ ಟ್ರೈಲರ್ ನನ್ನು ಹಿಡಿದುಕೊಂಡು ಪಂಚಾಯ್ತಿದಾರರ ಸಮಕ್ಷಮದಲ್ಲಿ ಪಂಚನಾಮೆ ಮೂಲಕ ಅಕ್ರಮವಾಗಿ ಕಳ್ಳತನದಿಂದ ಯಾವುದೇ ಪರವಾನಗಿ ಪಡೆಯದೆ ಮರಳು ಹುಂಬಿತ್ತಿದ್ದ ಇಬ್ಬರು ಆಸಾಮಿಗಳು ಹಾಗು ಅರ್ದ ಭಾಗ ಮರಳು ತುಂಬಿದ್ದ ಟ್ರಾಕ್ಟರ್ ಹಾಗು ಟ್ರೈಲರ್ ಅನ್ನು ವಶಕ್ಕೆ ಪಡೆದು ನಂತರ ಠಾಣೆಗೆ ಬಂದು ಪ್ರಕರಣ ದಾಖಲು ಮಾಡಿರುತ್ತೆ.

 

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.76/2017, ಕಲಂ: 41(ಡಿ),102 ಸಿ.ಆರ್.ಪಿ.ಸಿ ರೆ/ವಿ 379 ಐಪಿಸಿ.

ದಿನಾಂಕ:11/08/2017 ರಂದು ಬೆಳಿಗ್ಗೆ 10:30 ಗಂಟೆಗೆ ಠಾಣಾ ಹೆಚ್.ಸಿ-159 ಮೆಹಬೂಬ್ ಖಾನ್ ರವರು ಆರೋಪಿ ಮತ್ತು ಮಾಲು ಸಮೇತ ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ಈ ದಿನ ಅಂದರೆ ದಿನಾಂಕ:11/08/2017 ರಂದು ನನಗೆ ಮತ್ತು ಠಾಣಾ ಹೆಚ್.ಸಿ-96 ಬಸವರಾಜು.ಎಂ.ಎಲ್. ರವರಿಗೆ ಠಾಣಾ ಸರಹದ್ದು ಗ್ರಾಮಗಳಲ್ಲಿ ಗಸ್ತು ಕರ್ತವ್ಯಕ್ಕೆ ಠಾಣಾ ಪಿ.ಎಸ್.ಐ.ರವರು ನೇಮಕ ಮಾಡಿದ್ದು, ನೇಮಕದಂತೆ ನಾನು ಮತ್ತು ಹೆಚ್.ಸಿ-96 ಬಸವರಾಜು.ಎಂ.ಎಲ್. ಇಬ್ಬರೂ ಸಮವಸ್ತ್ರದಲ್ಲಿ ನನ್ನ ಬಾಬ್ತು ದ್ವಿ ಚಕ್ರ ವಾಹನದಲ್ಲಿ ಹೊರಟು ಮಿಡಿಗೇಶಿ, ಕಸಾಪುರ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ರೆಡ್ಡಿಹಳ್ಳಿ ಗ್ರಾಮಕ್ಕೆ ಹೋಗಲು ರೆಡ್ಡಿಹಳ್ಳಿ-ಮಿಡಿಗೇಶಿ ರಸ್ತೆಯಲ್ಲಿ ಕಸಾಪುರ ಬಿಟ್ಟು ಸತ್ತಿಗಾನಹಳ್ಳಿ ಕ್ರಾಸ್ ಹತ್ತಿರ ಇದೇ ದಿನ ಬೆಳಿಗ್ಗೆ ಸುಮಾರು 09:30 ಗಂಟೆಯ ಸಮಯದಲ್ಲಿ ರೆಡ್ಡಿಹಳ್ಳಿ ಕಡೆಗೆ ಹೋಗುತ್ತಿರುವಾಗ್ಗೆ ರೆಡ್ಡಿಹಳ್ಳಿ ಕಡೆಯಿಂದ ಎರಡು ದ್ವಿ ಚಕ್ರ ವಾಹನಗಳಲ್ಲಿ ಬಂದ ಇಬ್ಬರು ಆಸಾಮಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಮಿಡಿಗೇಶಿ ಕಡೆಗೆ ಬರುತ್ತಿದ್ದವರು ಸಡನ್ನಾಗಿ ಅವರು ಬರುತ್ತಿದ್ದ ದ್ವಿ ಚಕ್ರ ವಾಹನಗಳನ್ನು  ಹಿಂದಕ್ಕೆ ತಿರುಗಿಸಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದರು, ಆಗ ನಮಗೆ ಅನುಮಾನ ಬಂದು ನಾವು ಸಹ ನಮ್ಮ ದ್ವಿ ಚಕ್ರ ವಾಹನವನ್ನು ನಿಲ್ಲಿಸಿ ಆಸಾಮಿಗಳ ಬಳಿಗೆ ಹೋಗುವಷ್ಟರಲ್ಲಿ ಒಂದು ದ್ವಿ ಚಕ್ರ ವಾಹನದಲ್ಲಿದ್ದ ಆಸಾಮಿಯು ದ್ವಿ ಚಕ್ರ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋದನು, ಇನ್ನೊಂದು ದ್ವಿ ಚಕ್ರ ವಾಹನದಲ್ಲಿದ್ದ ಇನ್ನೊಬ್ಬ ಆಸಾಮಿಯು ಸಹ ದ್ವಿ ಚಕ್ರ ವಾಹನವನ್ನು ಬಿಟ್ಟು ಓಡಿ ಹೋಗಲು ಯತ್ನಿಸಿದವನನ್ನು ನಾನು ಮತ್ತು ಬಸವರಾಜು ಇಬ್ಬರು ಬೆನ್ನಟ್ಟಿ ಹಿಡಿದುಕೊಂಡಾಗ ಆತನು ಗಾಬರಿಗೊಂಡಿದ್ದನು. ನಂತರ ಸದರಿ ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಆತನು ತನ್ನ ಹೆಸರು ನಾಗರಾಜ @ ಯರ್ರೋಡ್ ನಾಗರಾಜ ಬಿನ್ ಧರ್ಮವರಂ ನಾರಾಯಣ, 25 ವರ್ಷ, ಬೊಮ್ಮಲಾಟಿ ಜನಾಂಗ, ಟ್ರ್ಯಾಕ್ಟರ್ ಡ್ರೈವರ್, 02 ನೇ ಅಡ್ಡ ರಸ್ತೆ, ಫೈಲ್ವಾನ್ ಕಾಲೋನಿ, ಕಮಲಾಪುರಂ ಗ್ರಾಮ, ಕಮಲಾಪುರಂ ಮಂಡಲ್, ಕಡಪ ಜಿಲ್ಲೆ, ಆಂಧ್ರ ಪ್ರದೇಶ ರಾಜ್ಯ ಎಂತ ಗಾಬರಿಯಲ್ಲಿ ತಿಳಿಸಿದನು. ನಂತರ ಆತನ ವಶದಲ್ಲಿದ್ದ ಕೆಎ-06-ಇ.ಜಿ-4704 ನೇ ನಂಬರಿನ ಹಿರೊ ಹೊಂಡ ಸ್ಪ್ಲೆಂಡರ್ ಪ್ರೋ ದ್ವಿ ಚಕ್ರ ವಾಹನ ಯಾರದು, ಅದರ ದಾಖಲಾತಿಗಳನ್ನು ತೋರಿಸುವಂತೆ ಕೇಳಿದಾಗ ಆತನು ನನ್ನ ಬಳಿ ಯಾವುದೇ ದಾಖಲಾತಿಗಳು ಇರುವುದಿಲ್ಲಾವೆಂತ ತಿಳಿಸಿದನು, ನಂತರ ಸದರಿ ದ್ವಿ ಚಕ್ರ ವಾಹನಕ್ಕೆ ಸಂಬಂಧಿಸಿದಂತೆ ವಿಚಾರ ಮಾಡಲಾಗಿ ಆಸಾಮಿಯು ಯಾವುದೇ ರೀತಿ ಸಮಂಜಸವಾದ ಉತ್ತರ ನೀಡಲಿಲ್ಲ. ನಂತರ ಆಸಾಮಿಯ ಜೊತೆಯಲ್ಲಿ ಬಂದು ದ್ವಿ ಚಕ್ರ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದ ಆಸಾಮಿಯ ಬಗ್ಗೆ ವಿಚಾರ ಮಾಡಲಾಗಿ ಆತನ ನನ್ನ ಬಾವನಾಗಿದ್ದು ಆತನ ಹೆಸರು ಪ್ರಕಾಶ ಬಿನ್ ಕುಕ್ಕದಾಸಿ, 26 ವರ್ಷ, ಬೊಮ್ಮಲಾಟಿ ಜನಾಂಗ, ಪಳವಳ್ಳಿ ಗ್ರಾಮ, ಪಾವಗಡ ತಾಲ್ಲೋಕು ಎಂತ ತಿಳಿಸಿದನು, ನಂತರ ಸದರಿ ಆಸಾಮಿಯ ಭಾವನಾದ ಪ್ರಕಾಶ ಬಿಟ್ಟು ಹೋಗಿರುವ ದ್ವಿ ಚಕ್ರ ವಾಹನ ಯಾರದು, ಅದರ ದಾಖಲಾತಿಗಳನ್ನು ತೋರಿಸುವಂತೆ ಆಸಾಮಿಯನ್ನು ಕೇಳಲಾಗಿ ಆಸಾಮಿಯು ದ್ವಿ ಚಕ್ರ ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿಗಳನ್ನು ತೋರಿಸದೇ ಸಮಂಜಸವಾದ ಉತ್ತರ ನೀಡದಿದ್ದರಿಂದ, ನಮಗೆ ಸದರಿ ಆಸಾಮಿಯ ಮೇಲೆ ಅನುಮಾನ ಬಂದಿದ್ದರಿಂದ, ಸದರಿ ಆಸಾಮಿ ನಾಗರಾಜನನ್ನು  ಮತ್ತು ಆತನು ವಶದಲ್ಲಿದ್ದ   ಕೆಎ-06-ಇ.ಜಿ-4704 ನೇ ದ್ವಿ ಚಕ್ರ ವಾಹನವನ್ನು ಹಾಗೂ ಸದರಿ ಆಸಾಮಿಯ ಬಾವ ಓಡಿಸಿಕೊಂಡು ಬಂದು ಸ್ಥಳದಲ್ಲಿ ಬಿಟ್ಟು ಹೋಗಿದ್ದ ಕೆಎ-40-ಯು-5844 ಹಿರೊ ಸ್ಪ್ಲೆಂಡರ್ ದ್ವಿ ಚಕ್ರ ವಾಹನದೊಂದಿಗೆ ಬೆಳಿಗ್ಗೆ 10:30 ಗಂಟೆಗೆ ಠಾಣೆಗೆ ಕರೆದುಕೊಂಡು ಠಾಣಾ ಪಿ.ಎಸ್.ಐ.ರವರ ಮುಂದೆ ಹಾಜರುಪಡಿಸಿ ಮುಂದಿನ ನಡವಳಿಕೆ ಬಗ್ಗೆ ನೀಡಿದ ವರದಿಯ ಅಂಶವಾಗಿರುತ್ತೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 67 guests online
Content View Hits : 229982