lowborn Crime Incidents 08-08-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >> ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ ದಿನಾಂಕ 13/1/2018           >> -:  ಪತ್ರಿಕಾ ಪ್ರಕಟಣೆ.  :-   ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380... >> >> -: ದಿನಾಂಕ : 19 -12 -17  :- :  ಪತ್ರಿಕಾ ಪ್ರಕಟಣೆ : ಕೋಮು ಪ್ರಚೋದನಕಾರಿ ಹೇಳಿಕೆಗಳ... >> ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 08-08-17

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 144/2017 ಕಲಂ 457,380 ಐಪಿಸಿ

ದಿನಾಂಕ-07/08/2017 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿಯಾದ ಎ ಗಂಗಯ್ಯ ಬಿನ್ ಅಂದನಾಯ್ಯ, ಅರೆಹಳ್ಳಿ, ಹೊನ್ನುಡಿಕೆ ಅಂಚೆ, ತುಮಕೂರು ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾವು ಮೂಲದಿಂದಲೂ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ನಾವು ಹಿಂದಿನಿಂದಲೂ ಹೆಚ್,ಆಫ್, ಹಸುಗಳನ್ನು ಸಾಕುತ್ತಿದ್ದು, ಸುಮಾರು 8 ವರ್ಷದ ಎರಡು ಹಸು ಹಾಗೂ 5 ತಿಂಗಳ ಕರು ಇದ್ದು, ಎಂದಿನಂತೆ ದಿನಾಂಕ-05/08/2017 ರಂದು ಹಗಲು ಹಸುಗಳನ್ನು ಹಾಲು ಕರೆದು ಡೈರಿಗೆ ಹಾಕಿ ರಾತ್ರಿ 9-00 ಗಂಟೆಗೆ ನಮ್ಮ ಮನೆಯ ಪಕ್ಕ ದನಗಳ ಶೆಂಡ್ ನಲ್ಲಿ 2 ಹಸು ಮತ್ತು ಕರುವನ್ನು ಕಟ್ಟಿ ಸೈಡಿಗೆ ಬೀಗವನ್ನು ಹಾಕಿಕೊಂಡು ಬಂದು ಮನೆಯಲ್ಲಿ ಮಲಗಿದ್ದೇವು. ಬೆಳಿಗಿನ ಜಾವ 3-00 ಗಂಟೆಗೆ ಹೆಚ್ಚರವಾಗಿ ಹೊರಗೆ ಬಂದು ನೋಡಲಾಗಿ ನಾವು ಕಟ್ಟಿದ್ದ ಹಸುಗಳ ಶೆಂಡಿನ ಬಾಗಿಲು ತೆರೆದಿದ್ದು, ಗಾಬರಿಯಾಗಿ ಒಳಗೆ ಹೋಗಿ ನೋಡಲಾಗಿ ನಾವು ರಾತ್ರಿ ಕಟ್ಟಿದ್ದ 2 ಹಸು ಮತ್ತು ಕರು ಇರಲಿಲ್ಲ ರಾತ್ರಿ 9-00 ಗಂಟೆಯಿಂದ ಬೆಳಗಿನಜಾವ 3-00 ಗಂಟೆ ಸಮಯದ ಮಧ್ಯೆ ಯಾರೋ ಕಳ್ಳರು ಕಳವು ಮಾಡಿದ್ದು, ನಾವು ಇದುವರೆವಿಗೂ ಸುಗ್ಗನಹಳ್ಳಿ, ಕೆ.ಜಿ.ಟೆಂಪಲ್, ಅಕ್ಕಪಕ್ಕ ಹಾಗೂ ದೂರದ ಊರುಗಳಲ್ಲಿ ಹುಡುಕಿದರೂ ಪತ್ತೆಯಾಗಿವುದಿಲ್ಲ, ಕಳೆದು ಹೋದ ನಮ್ಮ ಹಸುಗಳ ಕಪ್ಪು ಮತ್ತು ಬಿಳಿ ಬಣ್ಣದವಾಗಿದ್ದು, 8 ವರ್ಷದ ಹಸುಗಳಾಗಿರುತ್ತವೆ, ಕೊಂಬುಗಳು ಇರುವುದಿಲ್ಲ ಕರು ಸಹ ಕಪ್ಪು ಮತ್ತು ಬಿಳಿ ಬಣ್ಣದಾಗಿದ್ದು, 5 ತಿಂಗಳ ಕರುವಾಗಿರುತ್ತೆ. ಇವುಗಳ ಬೆಲೆ ತಿಳಿಯಬೇಕಾಗಿರುತ್ತೆ. ಆದ್ದರಿಂದ ನಮ್ಮ ಹಸು ಮತ್ತು ಕರುವನ್ನು ಕಳವು ಮಾಡಿದವರ ಮೇಲೆ ಕಾನೂನು ಕ್ರಮ ಜರೂಗಿಸಬೇಕೆಂದು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ 144/2017 ಕಲಂ 457,380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 165/2017 ಕಲಂ. 279, 337 ಐ.ಪಿ.ಸಿ ರೆವಿ 187 ಐ ಎಂ ವಿ ಆಕ್ಟ್

ದಿನಾಂಕ 07-08-2017 ರಂದು ಸಂಜೆ 05-30 ಗಂಟೆಗೆ ಕುಣಿಗಲ್ ತಾಲ್ಲೋಕು ಹುಲಿಯೂರದುರ್ಗ ಹೋಬಳಿ ನಾಗತಿಹಳ್ಳಿ ವಾಸಿಯಾದ ವೆಂಕಟಯ್ಯನ ಮಗನಾದ ತಿಮಯ್ಯ ಎಂಬುವವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೇಂದರ  ನಾನು ಮತ್ತು ನನ್ನ ಮಗ  ನನ್ನ ಮಗನ ಹೆಂಡತಿ ಹಾಗೂ ಮೊಮ್ಮಗಳು ಜಾನವಿಯೊಂದಿಗೆ  ನಮ್ಮ ಗ್ರಾಮವಾದ ನಾಗತಿಹಳ್ಳಿಯಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಮಾಡುತ್ತಿರುತ್ತೇವೆ.  ದಿನಾಂಕ 06-07-2017  ರಂದು ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ನಮ್ಮ ಮನೆಯ ಎದುರಿಗೆ ಇರುವ ನೀರಿನ ಟ್ಯಾಂಕ ಹತ್ತಿರ ನೀರು ಕುಡಿಯಲು ಹೋಗಿದ್ದ ನನ್ನ ಮೊಮ್ಮಗಳು ಜಾನವಿ ನೀರು ಕುಢಿದು ವಾಪಸು ಮನೆಗೆ ಬರುತ್ತಿರುವಾಗ್ಗೆ ಮಾದಪ್ಪನಹಳ್ಳಿ ಕಡೆಯಿಂದ ಕೆ ಎ, 06-ಇ ಎಸ್ -3647 ನೇ ದ್ವಿಚಕ್ರ ವಾಹನದ ಚಾಲಕನು ತನ್ನ ದ್ವಿಚಕ್ರ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯೀಂದ ಓಡಿಸಿ ಕೊಂಡು  ಬಂದು ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದನು, ಅಗ ನನ್ನ ಮೊಮ್ಮಗಳು ಕೂಗಿಕೊಂಡಾಗ ನಾನು ಓಡಿ ಬಂದು ನೋಡಲಾಗಿ ನನ್ನ ಮೊಮ್ಮಗಳ ಎಡಕಾಲು ಮುರಿದಿದ್ದು ಮತ್ತು ಎಡಕಣ್ಣಿನ ಹತ್ತಿರ ಹಾಗೂ ಎಡಕೈಗೆ ತರಚಿದ ಗಾಯಗಳಾಗಿದ್ದವು, ಇದೆ ವೇಳೆಗೆ ನಮ್ಮ ಗ್ರಾಮದ ರಾಜಣ್ಣ ಮತ್ತು ಮಾದಪ್ಪನಹಳ್ಳಿಯ ವಾಸಿಯಾದ ಶ್ರೀಧರ ಎ0.ಜಿ ರವರು ಬಂದರು. ನಾನು ಮತ್ತು ರಾಜಣ್ನ ಮತ್ತು ಶ್ರೀಧರ ಸೇರಿಕೊಂಡು ಯಾವುದೂ ಒಂದು ಕಾರಿನಲ್ಲಿ ಚಿಕಿತ್ಸೆಗಾಗಿ ಕುಣಿಗಲ್ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲು ಮಾಡಿದೆವು.  ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕೃಷ್ಣ ನರ್ಸಿಂಗ್ ಹೋಂ ಗೆ ಕರೆದು ಕೊಂಡು ಹೋಗುವಂತೆ ತಿಳಿಸಿದರಿಂದ ಅಲ್ಲಿಗೆ ಕರೆದು ಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲು ಮಾಡಿರುತ್ತೇನೆ. ನನ್ನ ಮೊಮ್ಮಗಳಿಗೆ ಅಪಘಾತ ಪಡಿಸಿದ ಕೆ ಎ,06-ಇ ಎಸ್-3647 ನೇ ದ್ವಿಚಕ್ರ ವಾಹನದ ಚಾಲಕನ ಮೇಲೆ ಕಾನೊನು ಕ್ರಮ ಕೈಗೊಳ್ಳಬೇಕಂತ ಕೇಳಿಕೊಳ್ಳುತ್ತೆನೆ. ಅಪಘಾತಪಡಿಸಿದ ದ್ವಿಚಕ್ರ ವಾಹನದ ಚಾಲಕನು ದ್ವಿಚಕ್ರ ವಾಹನವನ್ನು ನಿಲ್ಲಿಸಿದೆ ಹೋಗಿರುತ್ತಾನೆ. ಅಸ್ರತ್ರೆಯಲ್ಲಿ ಇದ್ದುದ್ದರಿಂದ ತಡವಾಗಿ ದಿನಾಂಕ 07-08-2017 ರಂದು ತಡವಾಗಿ ಬಂದು ದೂರು ನೀಡಿರುತ್ತೆನೆಂತ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 166/2017 ಕಲಂ 504, 324 ರೆವಿ 34 ಐ.ಪಿ.ಸಿ

ದಿನಾಂಕ 07-08-2017 ರಂದು ಸಂಜೆ 06-30 ಗಂಟೆಗೆ ಕುಣಿಗಲ್ ತಾಲ್ಲೋಕು ಅಮೃತೂರು ಹೋಬಳಿ ಕೀಲಾರ ಗ್ರಾಮದ ವಾಸಿಯಾದ ಹುಚ್ಚೆಗೌಡನ ಮಗನಾದ ಮರಿಯಪ್ಪ ಎಂಬುವವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೇಂದರೆ ದಿನಾಂಕ 07-08-2017 ರಂದು ಮದ್ಯಾಹ್ನ 3.30  ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ವಾಸಿಯಾದ ಕೆಂಗಯ್ಯ ಎಂಬುವವನ್ನು ನನ್ನ ಮೊಮ್ಮಗಳ ವಿಷಯವಾಗಿ ಯಾವನ್ನೊ ಕರೆದುಕೊಂಡು ಹೋಗಿರುತ್ತಾನೆ. ಎಂದು ಇಡೀ ಗ್ರಾಮದಲ್ಲಿ ವಿಷಯವಾಗಿ ಕೇಳಲು ಹೋದಾಗ ನನ್ನಗೆ ಹೀನಮಾನವಾಗಿ ಬೈದು ನಿಂದಿಸಿದಲ್ಲದೆ ಚನ್ನಯ್ಯ ಎಂಬುವವನ ಜೊತೆ ಇರುತ್ತಾರೆ ,ನಾನು ನನ್ನ ಮಕ್ಕಳನ್ನು ಪೋನ ಮಾಡಿ ವಿಷಯ ತಿಳಿಸಲು ಹೋದಾಗ ಕೆಂಗಯ್ಯ ಎಂಬುವವನು ಅಲ್ಲೆ ಬಿದ್ದಿದ್ದ ದೊಣ್ಣೆಯಿಂದ ಹಿಂಬದಿಯಿಂದ ಬಂದು ನನ್ನ ತಲೆಗೆ ಹಾಗೂ ಮುಖದ ಬಲಗಣ್ಣಿನ  ಮೇಲ್ಬಾಗಕ್ಕೆ ಹೊಡೆದು ರಕ್ತಗಾಯ ಮಾಡಿರುತ್ತಾನೆ ಹಾಗೂ ಇವನ ಅಣ್ಣನ  ಹೆಂಡತಿ ಬಾಗ್ಯಮ್ಮ ಕೋ0 ಹುಚ್ಚಯ್ಯ ಕೆಬ್ಬಳ್ಳಿ ತಿಮ್ಮಯ್ಯನ ಸೊಸೆ ಚಿಕ್ಕಮ್ಮ ಕೋ0 ಲೇಟ  ಶಂಕರ, ಅರೆಪಾಳ್ಯದ ವೆಂಕಟೇಶನ ಹೆಂಡತಿ ಇವರೆಲ್ಲರೂ ಸೇರಿಕೊಂಡು ನನ್ನ ಮೇಲೆ ಗಲಾಟೆ ಮಾಡಿರುತ್ತಾರೆ ಈ ಗಲಾಟೆಯನ್ನು ಜಗ ಬಿನ್ ವೆಂಕಟಪ್ಪ, ಮರಿ ಬಿನ್ ಗಂಗಪ್ಪ ಇಬ್ಬರೂ ಸೇರಿ ಕೊಂಡು ಗಲಾಟೆಯನ್ನು ಬಿಡಿಸಿದರುಅದ್ದರಿಂದ ನನ್ನ ಮೇಲೆ ಗಲಾಟೆ ಮಾಡಿದ ವರ ಮೇಲೆ ಕಾನೊನು ರೀತಿ ಕ್ರಮ ಜರುಗಿಸಬೇಕಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

 

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 66 guests online
Content View Hits : 229976