lowborn Crime Incidents 17-07-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 17-07-17

ಸಂಚಾರಿ ಪೂರ್ವ ಪೊಲೀಸ್ ಠಾಣೆ ಮೊ.ನಂ:135/2017, ಕಲಂ:279, 304(A) ಐಪಿಸಿ 134(ಎ&ಬಿ) 187 ಐಎಂವಿ ಆಕ್ಟ್

ದಿನಾಂಕ  16-17/07/2017 ರಂದು ರಾತ್ರಿ 00-30 ಗಂಟೆಗೆ ಈ ಕೇಸಿನ ಪಿರ್ಯಾದಿ ಫಯಾಜ್ ಬಿನ್ ದಾದಾಪೀರ್, 36 ವರ್ಷ, 1 ನೇ ಕ್ರಾಸ್, ಫಕೀರ್ ಪಾಕೀಪಾಳ್ಯ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ:16/07/2017 ರಂದು ರಾತ್ರಿ 10-30 ಗಂಟೆಯಲ್ಲಿ ನಾನು ಮನೆಯಲ್ಲಿರುವಾಗ್ಗೆ ಯಾರೋ ಒಬ್ಬ ವ್ಯಕ್ತಿ ನಮ್ಮ ಏರಿಯಾಗೆ ಬಂದು ಮೆಕಾನಿಕ್ ದಾದಾಫೀರ್ ರವರಿಗೆ ಬಟವಾಡಿ ಹತ್ತಿರ ವೆಂಕಟರಮಣಸ್ವಾಮಿ ದೇವಸ್ಥಾನದ ಬಟವಾಡಿ ಹತ್ತಿರದ ಎದುರು ಶಿರಾ ಕಡೆಗೆ ಹೋಗುವ ಎನ್ .ಹೆಚ್ 48 ರಸ್ತೆಯಲ್ಲಿ ಅಪಘಾತವಾಗಿ ಮೃತಪಟ್ಟಿರುತ್ತಾರೆ ಅಂತ ತಿಳಿಸಿದ್ದರಿಂದ ತಕ್ಷಣ ನಾನು ನಮ್ಮ ಸಂಬಂಧಿಕರ ಎಲ್ಲರು ಬಟವಾಡಿ ಹತ್ತಿರ ಹೋಗಿ ನೋಡಲಾಗಿ ಅಪಘಾತದಿಂದ ಮೃತಪಟ್ಟಿದ್ದ ಶವವನ್ನು ಪೊಲೀಸ್ ರವರು ಸಾರ್ವಜನಿಕರ ಸಹಾಯದಿಂದ ಜಿಲ್ಲಾ ಆಸ್ಫತ್ರೆಗೆ ಕಳುಹಿಸಿದ್ದರು, ತಕ್ಷಣ ಆಸ್ಫತ್ರೆ ಹತ್ತಿರ ಬಂದು ಶವವನ್ನು ನೋಡಲಾಗಿ ನನ್ನ ತಂದೆ 65 ವರ್ಷದ ದಾದಾಪೀರ್ ರವರ ಶವವಾಗಿತ್ತು. ನಂತರ ಅಲ್ಲಿದ್ದ ಸಾರ್ವಜನಿಕರಿಂದ ಅಪಘಾತದ ಬಗ್ಗೆ ವಿಚಾರ ತಿಳಿಯಲಾಗಿ ಇದೇ ರಾತ್ರಿ ಸುಮಾರು 10-00 ಗಂಟೆ ಸಮಯದ್ಲಲಿ ನನ್ನ ತಂದೆ ವೆಂಕಟರಮಣಸ್ವಾಮಿ ದೇವಸ್ಥಾನದ ರಸ್ತೆಯ ಎದುರಿನ ಶಿರಾ ಕಡೆಗೆ ಹೋಗುವ ಎನ್ .ಹೆಚ್ 48 ರಸ್ತೆಯಲ್ಲಿ ರಸ್ತೆಯನ್ನು ದಾಟುತ್ತಿರುವಾಗ ಅದೇ ಸಮಯಕ್ಕೆ ಯಾವುದೋ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನನ್ನ ತಂದೆಯವರಿಗೆ ಅಪಘಾತ ಪಡಿಸಿದ್ದರಿಂದ ನನ್ನ ತಂದೆ ದಾದಾಪೀರ್ ರವರಿಗೆ ತಲೆಗೆ, ಮೈ ಕೈ ಗಳಿಗೆ ಬಲವಾದ ಪೆಟ್ಟುಬಿದ್ದು ತೀವ್ರವಾಗಿ ರಕ್ತ ಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ವಿಷಯ ತಿಳಿಯಿತು. ನಂತರ ಶವವನ್ನು ಶವಾಗಾರದಲ್ಲಿ ಇರಿಸಿ ಠಾಣೆಗೆ ಬಂದು ಈ ನನ್ನ ದೂರನ್ನು ನೀಡುತ್ತಿದ್ದೇನೆ, ನನ್ನ ತಂದೆಯವರ ಸಾವಿಗೆ ಕಾರಣವಾಗಿರುವ ಅಪಘಾತ ಪಡಿಸಿ ನಿಲ್ಲಿಸದೇ ಹೊರಟು ಹೋಗಿರುವ ಯಾವುದೋ ವಾಹನವನ್ನು ಪತ್ತೆಮಾಡಿ ಕ್ರಮ ಕೈಗೊಳ್ಳಿ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಜಯನಗರ ಪೊಲೀಸ್ ಠಾಣಾ ಮೊ.ನಂ 106/2017 ಕಲಂ 323, 324, 504, 506 ರೆ/ವಿ 34 ಐಪಿಸಿ

ದಿನಾಂಕ: 16-07-2017 ರಂದು ರಾತ್ರಿ 9-15 ಗಂಟೆ ಸಮಯದಲ್ಲಿ ತುಮಕೂರು ಟೌನ್ ಶೆಟ್ಟಿಹಳ್ಳಿ ವಾಸಿ ಚಿರಂಜೀವಿ ಬಿನ್. ತೇಜ್‌‌ಕುಮಾರ್‌‌ ಎಂಬುವರು ಠಾಣೆಗೆ ಹಾಜರಾಗಿ, ನಾನು ತುಮಕೂರು ಶೆಟ್ಟಿಹಳ್ಳಿ ನಾಯಕರಬೀದಿಯಲ್ಲಿರುವ ನಮ್ಮ ಸೋದರ ಮಾವ ಸೋಮಶೇಖರ್‌‌‌ ರವರ ಮನೆಯಲ್ಲಿದ್ದುಕೊಂಡು, ತುಮಕೂರು ರಿಂಗ್‌‌ರಸ್ತೆ, ಶೆಟ್ಟಿಹಳ್ಳಿ ಸರ್ಕಲ್‌‌ನಲ್ಲಿ ತೆಳ್ಳುವಗಾಡಿಯಲ್ಲಿ ಪಾನಿಪುರಿ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುತ್ತೇನೆ.  ದಿನಾಂಕ: 14-07-2017 ರಂದು ಸಾಯಂಕಾಲ ಸುಮಾರು 5-00 ಗಂಟೆ ಸಮಯದಲ್ಲಿ ನಾನು ರಿಂಗ್‌ರಸ್ತೆಯ ಶೆಟ್ಟಿಹಳ್ಳಿ ಸರ್ಕಲ್‌‌ನಲ್ಲಿ ಪಾನಿಪೂರಿ ವ್ಯಾಪಾರ ಮಾಡುತ್ತಿದ್ದಾಗ, ನಮ್ಮ ಅಂಗಡಿಯ ಬಳಿಗೆ ಆಟೋ ಡ್ರೈವರ್‌‌ ಚೇತನ್‌‌ಕುಮಾರ್‌‌, ಆತನ ಸಂಗಡಿಗರಾದ ಸುರೇಶ ಮತ್ತು ಅಜೇಯ್‌‌ ಎಂಬುವರು ಬಂದವರೇ ನನಗೆ 3 ಪ್ಲೇಟ್‌‌ ಪಾನಿಪೂರಿಯನ್ನು ಕೊಡಲು ಕೇಳಿದರು.  ನಾನು ಅವರಿಗೆ 3 ಪ್ಲೇಟ್‌‌ ಪಾನಿಪೂರಿಯನ್ನು ಕೊಟ್ಟೆ.  ಪಾನಿಪೂರಿ ತಿಂದ ನಂತರ ಮೂರೂ ಜನರು ಹಣ ಕೊಡದೇ ಹಾಗೇಯೇ ಹೋಗುತ್ತಿದ್ದರು. ನಾನು ಅವರಿಗೆ ಪಾನಿಪೂರಿಯ ಹಣ ಕೊಡಲು ಕೇಳಿದ್ದಕ್ಕೆ ಮೂರೂ ಜನರು ನನ್ನನ್ನು ಕುರಿತು ಏನೋ ಬೋಳಿ ಮಗನೇ, ಸೂಳೇ ಮಗನೇ ನಮ್ಮ ಹತ್ತಿರ ದುಡ್ಡು ಕೇಳುತ್ತೀಯೇನೋ ಎಂತಾ ಹೇಳಿದರು.  ಅದಕ್ಕೆ ನಾನು ನೀವು ಯಾರಾದರೇನು ಮೊದಲು ಪಾನಿಪೂರಿಯ ಹಣ ಕೊಟ್ಟು ಹೋಗಿ ಎಂತಾ ಹೇಳಿದ್ದಕ್ಕೆ ಚೇತನ್‌‌ಕುಮಾರನು ಅಲ್ಲೇ ಸರ್ಕಲ್‌‌ನಲ್ಲಿ ಹೊಸದಾಗಿ ನೆಟ್ಟಿರುವ ಗಿಡಗಳಿಗೆ ಸಪೋರ್ಟ್ ಆಗಿ ಕೊಟ್ಟಿದ್ದ ಒಂದು ದೊಣ್ಣೆಯನ್ನು ಕಿತ್ತುಕೊಂಡು  ನನ್ನ ತಲೆಯ ಮೇಲೆ  ಹೊಡೆದು ರಕ್ತಗಾಯಪಡಿಸಿದನು.  ಸುರೇಶನು ಕೈನಿಂದ ನನ್ನ ಮೂಗಿಗೆ ಗುದ್ದಿ ನೋವುಂಟು ಮಾಡಿದನು.  ಅಜೇಯ್‌ ಎಂಬುವನು  ಕೈನಿಂದ ನನ್ನ ಬಲಗಡೆ ಕೆನ್ನೆಗೆ ಗುದ್ದಿ ನೋವುಂಟು ಮಾಡಿದನು.  ಅಷ್ಟರಲ್ಲಿ ಅಲ್ಲಿಯೇ ಪ್ಲೇಟ್‌‌‌ಗಳನ್ನು ತೊಳೆಯುತ್ತಿದ್ದ ನಮ್ಮ ಅಜ್ಜಿ ರಂಗಮ್ಮ ಹಾಗೂ ನಮ್ಮ ಅಂಗಡಿಯ ಬಳಿಯಲ್ಲಿಯೇ ಗೋಬಿ ಅಂಗಡಿಯನ್ನು ಇಟ್ಟುಕೊಂಡಿರುವ ಯೋಗೇಶ ಹಾಗೂ ಅಲ್ಲೇ ಇದ್ದ ಆಟೋ ಡ್ರೈವರ್‌‌‌ ಸಲ್ಮಾನ್‌‌ ಎಂಬುವರು ಬಂದು ಆರೋಪಿ ಚೇತನ್‌‌ಕುಮಾರನ ಕೈಯ್ಯಲ್ಲಿದ್ದ ದೊಣ್ಣೆಯನ್ನು ಕಿತ್ತು ಬಿಸಾಕಿ ಜಗಳ ಬಿಡಿಸಿ ಕಳುಹಿಸಿದ್ದರು.  ಆದರೂ ಮೇಲ್ಕಂಡ ಮೂರೂ ಜನರು ಹೋಗುವಾಗ ನನ್ನನ್ನು ಕುರಿತು ನಿನ್ನನ್ನು ಇಷ್ಟಕ್ಕೇ ಬಿಡುವುದಿಲ್ಲ, ಒಂದು ಗತಿ ಕಾಣಿಸುತ್ತೇವೆಂತಾ ಕೊಲೆ ಬೆದರಿಕೆ ಹಾಕಿ ಹೊರಟು ಹೋದರು.  ನಂತರ ಗಾಯಗೊಂಡಿದ್ದ ನನ್ನನ್ನು ನಮ್ಮ ಅಜ್ಜಿ ರಂಗಮ್ಮ, ಹಾಗೂ ಆಟೋ ಡ್ರೈವರ್‌‌ ಸಲ್ಮಾನ್‌‌‌ ರವರುಗಳು  ಆಟೋದಲ್ಲಿ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ನಾನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆ ಪಡೆದು ದಿನಾಂಕ: 15-07-2017 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ನಂತರ ನಮ್ಮ ಸೊದರ ಮಾವ ಸೋಮಶೇಖರ್‌ ರವರ ಮನೆಯಲ್ಲಿ ವಿಶ್ರಾಂತಿ ಪಡೆದು, ನಮ್ಮ ಸ್ವಂತ ಊರಿನಿಂದ ನಮ್ಮ  ತಂದೆ ತೇಜ್‌‌ಕುಮಾರ್‌, ತಾಯಿ ದೀಪಾ ರವರುಗಳನ್ನು ಕರೆಸಿಕೊಂಡು ನಮ್ಮ ತಂದೆ-ತಾಯಿಗೆ ಗಲಾಟೆಯ ವಿಚಾರವನ್ನು ತಿಳಿಸಿ ಈ ದಿನ ತಡವಾಗಿ ಪೊಲೀಸ್ ಠಾಣೆಗೆ ಬಂದು ಈ ದೂರು ನೀಡಿರುತ್ತೇನೆ.  ಆದ್ದರಿಂದ ತಾವು ದಯಮಾಡಿ ನನಗೆ ಕೈಗಳಿಂದ ಹಾಗೂ ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿರುವ ಮೇಲ್ಕಂಡ ಮೂರು ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂತಾ ಇತ್ಯಾದಿ ಪಿರ್ಯಾದು ಅಂಶವಾಗಿರುತ್ತೆ.

 

ಹೊನ್ನವಳ್ಳಿ ಪೊಲೀಸ್ ಠಾಣೆ      ಮೊ. ನಂ 91/2017 ಕಲಂ 457,511 ಐಪಿಸಿ

ದಿನಾಂಕ:16/7/2017 ರಂದು ಬೆಳಿಗ್ಗೆ  7-30 ಗಂಟೆಗೆ ಕೇಸಿನ ಪಿರ್ಯಾದಿದಾರರಾದ ಸದಾಶಿವಯ್ಯ ಬಿನ್‌ ರಾಮಯ್ಯ ಬಿದರೆಗುಡಿ ಗ್ರಾಮ ತಿಪಟೂರು ತಾಲ್ಲೂಕು ರವರು ಕೃತ್ಯನಡೆದ ಸ್ಥಳದಲ್ಲಿ ಪಡೆದ ಲಿಖಿತ ದೂರಿನ ಅಂಶವೇನೆಂದರೆ ಬಿದರೆಗುಡಿ ಗ್ರಾಮ ದೇವತೆಯಾದ ಬಿದಿರಮ್ಮದೇವಿಯ ನೂತನ ದೇವಾಲಯ ನಿರ್ಮಾಣ ಕೆಲಸ ಮಾಡುತ್ತಿದ್ದು, ರಾತ್ರಿ ವೇಳೆ ಸುತ್ತಾಮುತ್ತಲಿನ ಗ್ರಾಮಸ್ಥರು ದೇವಾಲಯದ ಬಳಿ ಮಲಗುತ್ತಿದ್ದು, ಎಂದಿನಂತೆ ದಿನಾಂಕ 15/07/2017 ರಂದು ರಾತ್ರಿ ಪಿರ್ಯಾದಿ, ಪೂಜಾರು ಕಾಳಪ್ಪ ನಾಗರಾಜು ಬಿನ್‌ ದೇವಯ್ಯ ಪಿರ್ಯಾದಿಯ ಮಗ ಲೋಹಿತ್‌‌ ಕುಮಾರ, ನಂಜೆಶಯ್ಯ ಬಿನ್‌ ದೇವಯ್ಯ, ಮತ್ತಿಹಳ್ಳಿ ಗ್ರಾಮದ ಹರೀಶ ಬಿನ್‌ ನಿಂಗಪ್ಪ ರವರು ಮಲಗಿದ್ದು, ದೇವಸ್ಥಾನದ ಮುಂಭಾಗಿಲನ್ನು ಯಾರೋ ಹೊಡೆಯುವ ಶಬ್ದ ದಿನಾಂಕ 16/07/2017 ರಂದು ಬೆಳಗ್ಗೆ ಜಾವ 2-00 ಗಂಟೆಯಲ್ಲಿ ಕೇಳಿದ್ದು ಎಚ್ಚರವಾಗಿ ನೋಡಲಾಗಿ ಯಾರೋ ಇಬ್ಬರು ಅಸಾಮಿಗಳು ದೇವಾಲಯದ ಬಾಗಿಲನ್ನು ಹೊಡೆಯುತ್ತಿದ್ದು ನಮ್ಮನ್ನು ನೋಡಿ ಓಡಿಹೋಗಲು ಪ್ರಯತ್ನಿಸಿದವರನ್ನು ನಾವುಗಳು ಸುತ್ತುವರೆದು ಹಿಡಿದು ಹೆಸರು ವಿಳಾಸ ಕೇಳಲಾಗಿ ಒಬ್ಬನು ನಿಖಿಲ್‌ ಹಿರಿಸಾವೆ ಚನ್ನರಾಯಪಟ್ಟಣ ತಾ, ಮತ್ತೊಬ್ಬ ಲಯನ್ ಹಿರಿಸಾವೆ ಅಂತ ತಿಳಿಸಿದ್ದು ಅವರ ಕೈಯಲ್ಲಿ ಅಕ್ಸಲ್‌ ಬ್ಲೇಡ್ ಕಟಿಂಗ್‌ಪ್ಲೇಯರ್‌ಗಳಿದ್ದು, ವಿಚಾರಮಾಡಲಾಗಿ ನಾವುಗಳು ಬಸ್ಸಿನಲ್ಲಿ ಬಂದು ದೇವಾಲಯದ ಬೀಗ ಹೊಡೆದು ಕಳ್ಳತನ ಮಾಡಲು ಪ್ರಯತ್ನ ಪಟ್ಟಿರುತ್ತೇವೆ ಅಂತ ತಿಳಿಸಿದ್ದು, ನಂತರ ನಾವುಗಳು ಗುಡಿಗೌಡರನ್ನು ಕರೆಯಿಸಿ ವಿಚಾರವನ್ನು ತಿಳಿಸಿ ಈ ದಿನ 16/07/2017 ರಂದು ಬೆಳಗ್ಗೆ ಹೊನ್ನವಳ್ಳಿ ಪೊಲೀಸರಿಗೆ ರಾತ್ರಿ ಕಳ್ಳತನ ಮಾಡಲು ಪ್ರಯತ್ನ ಪಟ್ಟ ನಿಖಿಲ್ ಮತ್ತು ಲಯನ ರವರುಗಳ ಮೇಲೆ  ಕಾನೂನು ಕ್ರಮ ಕೈಗೊಳ್ಳಲು ಕಳ್ಳರನ್ನು ಹಾಜರುಪಡಿಸಿ  ನೀಡಿದ ದೂರನ್ನು ಕೃತ್ಯನಡೆದ ಸ್ಥಳದಲ್ಲಿ ಬೆಳಗ್ಗೆ 7-30ಕ್ಕೆ ಪಡೆದು ನಂತರ ಠಾಣೆಗೆ ಬೆಳಗ್ಗೆ 8-30ಕ್ಕೆ ಪ್ರಕರಣ ದಾಖಲು ಮಾಡಿರುತ್ತದೆ

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 109 guests online
Content View Hits : 289615