lowborn Crime Incidents 15-07-17 | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ ದಿನಾಂಕ:19-11-2017. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ:17-11-2017. ಮೂರು ಜನ ಅಂತರ ರಾಜ್ಯ ಕಳ್ಳರ ಬಂಧನ : 8 ಲಕ್ಷದ 50 ಸಾವಿರ... >> ದಿನಾಂಕ.17.11.2017. ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಪೊಲೀಸ್... >> ಪತ್ರಿಕಾ ಪ್ರಕಟಣೆ. ದಿನಾಂಕ:16-11-2017 ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 261 /2017... >> ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಪತ್ರಿಕಾ ಪ್ರಕಟಣೆ. ದಿನಾಂಕ : 07/11/2017 ದಿನಾಂಕ:05-11-2017... >> ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಪತ್ರಿಕಾ ಪ್ರಕಟಣೆ. ದಿನಾಂಕ : 07/11/2017 ದಿನಾಂಕ :... >>   Date: 03-11-2017       ದಿನಾಂಕ : 03-11-2017 ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪತ್ತೆಯಾದ ಎರಡು... >>   ಪತ್ರಿಕಾ ಪ್ರಕಟಣೆ. DATE: 02-11-17 ವೃದ್ದೆಯರಿಂದ ಚಿನ್ನದ ಸರವನ್ನು ಕಳವು ಮಾಡಿದ ಆರೋಪಿ... >> ಪತ್ರಿಕಾ ಪ್ರಕಟಣೆ ದಿನಾಂಕ: 30/10/2017 ದಿನಾಂಕ/30/10/17 ರಂದು ತುಮಕೂರು ಜಿಲ್ಲಾ ಪೊಲೀಸ್ ಇಲಾಖಾ... >> ಪತ್ರಿಕಾ ಪ್ರಕಟಣೆ ದಿನಾಂಕ : 25/10/2017 ತುಮಕೂರು ನಗರದಲ್ಲಿ ಕೆ.ಎಸ್.ಅರ್.ಟಿ.ಸಿ.... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 15-07-17

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  78/2017   ಕಲಂ: 32(3)K E Act

ದಿನಾಂಕ:14/07/2017 ರಂದು ಮದ್ಯಾಹ್ನ 3:00  ಗಂಟೆ ಸಮಯದಲ್ಲಿ ನಾನು ಮತ್ತು ಠಾಣಾ ಪಿ.ಸಿ;672 ರವರೊಂದಿಗೆ  ಠಾಣಾ ಸರಹದ್ದು ಓಬಳಾಪುರ ಗ್ರಾಮದ ಬಳಿ ಗಸ್ತಿನಲ್ಲಿರುವಾಗ್ಗೆ ಓಬಳಾಪುರ ಗ್ರಾಮದ ಈಡಿಗ ಜನಾಂಗಕ್ಕೆ ಸೇರಿದ ನಾಗರಾಜ ಎಂಬುವವರ ಅಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ  ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅಕ್ರಮವಾಗಿ ಸ್ಥಳಾವಕಾಶ ಮಾಡಿಕೊಟ್ಟಿರುತ್ತಾನೆಂತ  ಮಾಹಿತಿ ಬಂದ ಮೇರೆಗೆ ಪಂಚಾಯ್ತುದಾರರನ್ನು ಬರಮಾಡಿಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಅಂಗಡಿಯ ಪಕ್ಕದಲ್ಲಿ 03 ಜನರು ಮದ್ಯತುಂಬಿದ 03  ಓಲ್ಡ್ ಟವರಿನ್ 180 ಎಂ.ಎಲ್ ನ ಟೆಟ್ರಾ ಪ್ಯಾಕೆಟ್ ಗಳು ಹಾಗೂ 03 ಪ್ಲಾಸ್ಟಿಕ್ ಲೋಟಗಳು ಇದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಇಬ್ಬರು ಆಸಾಮಿಗಳು ಸ್ಥಳದಿಂದ ಓಡಿ ಹೋಗಿದ್ದು ಅಂಗಡಿಯಲ್ಲಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ನಾಗರಾಜ ಬಿನ್ ಲೇ| ಓಬಳೇಶಪ್ಪ, 36 ವರ್ಷ, ಈಡಿಗ ಜನಾಂಗ ಎಂತ ತಿಳಿಸಿದ್ದು ಸ್ಥಳದಲ್ಲಿ   ಮದ್ಯ ತುಂಬಿದ್ದ 180 ಎಂ.ಎಲ್ ನ 03  ಓಲ್ಡ್ ಟವರಿನ್ ಟೆಟ್ರಾ ಪ್ಯಾಕೆಟ್ ಗಳು ಇವುಗಳ ಒಟ್ಟು ಬೆಲೆ  205 ರೂ ಆಗಿರುತ್ತೆ , 03 ಖಾಲಿ ಪ್ಲಾಸ್ಟಿಕ್ ಲೋಟಗಳಿದ್ದು ಆರೋಪಿಯನ್ನು ಮತ್ತು ಮಾಲನ್ನು ಪಂಚರ ಸಮಕ್ಷಮ ಮುಂದಿನ ತನಿಖೆ ಬಗ್ಗೆ ವಶಕ್ಕೆ ಪಡೆದುಕೊಂಡು ಮಾಲನ್ನು ಮತ್ತು  ಆಸಾಮಿಯನ್ನು ವಶಕ್ಕೆ ಪಡೆದು ವಾಪಸ್ ಠಾಣೆಗೆ 5:00 ಗಂಟೆಗೆ ಬಂದು ಆಸಾಮಿಯು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ  ಮದ್ಯಪಾನ ಮಾಡಲು ಅಕ್ರಮವಾಗಿ ಸ್ಥಳಾವಕಾಶ ಮಾಡಿಕೊಟ್ಟಿರುತ್ತಾನೆಂತ  ಆಸಾಮಿ ವಿರುದ್ದ ಪ್ರಕರಣ ದಾಖಲಿಸಿರುತ್ತದೆ

ಹುಳಿಯಾರು ಪೊಲೀಸ್ ಠಾಣೆ ಮೊ.ನಂ. 87/2017 ಕಲಂ  87 ಕೆ.ಪಿ ಆಕ್ಟ್.

ದಿನಾಂಕ:-14.07.2017 ರಂದು ಹುಳಿಯಾರು ಠಾಣಾ ಸರಹದ್ದು ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಸಮೀಪ ಇರುವ ಸ್ಮಶಾನದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಕಾನೂನು ಬಾಹಿರ ಅಂದರ್ - ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿ  ಮೇರೆಗೆ  ದಾಳಿ  ಮಾಡುವ  ಬಗ್ಗೆ  ನ್ಯಾಯಾಲಯದಿಂದ  ಅನುಮತಿ ಪಡೆದಿದ್ದು ಠಾಣೆಗೆ ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ಸಿಬ್ಬಂದಿಯವರನ್ನು ಕರೆದುಕೊಂಡು ಇಲಾಖಾ ಜೀಪಿನಲ್ಲಿ ಕೆಂಕೆರೆ ಗ್ರಾಮಕ್ಕೆ ಹೋಗಿ  ಬರದೆಲೆಪಾಳ್ಯ ಗ್ರಾಮದ ಕಡೆಗೆ ಹೋಗುವ ದಾರಿಯ ಪಕ್ಕದಲ್ಲಿ ಸ್ಮಶಾನದ ಸಮೀಪ ಹೋಗಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ನೋಡಲಾಗಿ  ಸ್ಮಶಾನದಲ್ಲಿ ಸಾರ್ವಜನಿಕ ಸ್ಥಳದಲ್ಲಿ 7 ಜನ ಅಸಾಮಿಗಳು ನೆಲದ ಮೇಲೆ ವೃತ್ತಾಕಾರವಾಗಿ ಕುಳಿತುಕೊಂಡು ಮದ್ಯದಲ್ಲಿ ಒಂದು ಪ್ಲಾಸ್ಟಿಕ್ ಚೀಲವನ್ನು ಹಾಕಿಕೊಂಡು  ಹಣವನ್ನು ಪಣಕ್ಕೆ ಕಟ್ಟಿಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ – ಬಾಹರ್ ಎಂತ ಹೇಳುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದು, ಸದರಿಯವರನ್ನು ಸುತ್ತುವರೆದು ದಾಳಿ ಮಾಡಿ ಮೇಲೆ ಹೇಳಿದಂತೆ ತಿಳಿಸಿ ಅಸಾಮಿಗಳ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ 1) ನಾಗರಾಜು ಬಿನ್ ಶಿವಶಂಕರಪ್ಪ, ಕಾಮಶೆಟ್ಟಿಪಾಳ್ಯ, ಹುಳಿಯಾರು ಹೋಬಳಿ, 2) ಪುಟ್ಟಯ್ಯ ಬಿನ್ ಲೇಟ್ ರಂಗಪ್ಪ, ದುರ್ಗದ ಸೀಮೆಪಾಳ್ಯ, ಕೆಂಕೆರೆ ಮಜುರೆ,  ಹುಳಿಯಾರು ಹೋಬಳಿ, 3) ಮರುಳಯ್ಯ ಬಿನ್ ಲೇಟ್ ಶಿವಣ್ಣ, ಬರದೆಲೆಪಾಳ್ಯ, ಹುಳಿಯಾರು ಹೋಬಳಿ, 4) ಕುಮಾರ ಬಿನ್ ಲೇಟ್ ಬಿ. ನಾಗರಾಜು, ಕೆಂಕೆರೆ, ಹುಳಿಯಾರು ಹೋಬಳಿ 5) ಗುರುಮೂರ್ತಿ ಬಿನ್ ಕೊಟ್ಟೂರಪ್ಪ, ಕಾಮಶೆಟ್ಟಿಪಾಳ್ಯ, ಹುಳಿಯಾರು ಹೋಬಳಿ 6) ಚನ್ನಬಸವಯ್ಯ ಬಿನ್ ಪುಟ್ಟಯ್ಯ, ಬರದೆಲೆಪಾಳ್ಯ, ಹುಳಿಯಾರು ಹೋಬಳಿ 7) ಮರುಳಯ್ಯ ಬಿನ್ ಚನ್ನಬಸವಯ್ಯ, ಬರದೆಲೆಪಾಳ್ಯ, ಹುಳಿಯಾರು ಹೋಬಳಿ ಎಂತ ತಿಳಿಸಿದ್ದು, ಸದರಿ ಆಸಾಮಿಗಳನ್ನು ಹಾಗೂ ಕಾನೂನು ಬಾಹಿರ ಇಸ್ಪೀಟ್ ಜೂಜಾಟಕ್ಕೆ ಪಣವಾಗಿ ಕಟ್ಟಿಕೊಂಡಿದ್ದ ಒಟ್ಟು 3950/- ರೂ ನಗದು ಹಣವನ್ನು ಇಸ್ಪೀಟ್ ಜೂಜಾಟಕ್ಕೆ ಬಳಿಸಿದ್ದ 52 ಇಸ್ಪೀಟ್ ಎಲೆಗಳನ್ನು ಹಾಗೂ ನೆಲಕ್ಕೆ ಹಾಸಿಕೊಂಡಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ಪಂಚರ ಸಮಕ್ಷಮ ಸಂಜೆ 05:30 ಗಂಟೆಯಿಂದ 06:30 ಗಂಟೆಯವರೆಗೆ ಲ್ಯಾಪ್ ಟಾಪ್ ಮೂಲಕ ಪಂಚನಾಮ ಕ್ರಮ ಜರುಗಿಸಿ ವಶಕ್ಕೆ ಪಡೆದು ಮೇಲ್ಕಂಡ ಆಸಾಮಿಗಳು ಮತ್ತು ಮಾಲಿನೊಂದಿಗೆ ವಾಪಸ್ ಠಾಣೆಗೆ ಬಂದು ಠಾಣಾಧಿಕಾರಿಯವರಿಗೆ ಮುಂದಿನ ಕ್ರಮ ಜರುಗಿಸಲು ಸೂಚಿಸಿ ನೀಡಿದ ಜ್ಞಾಪನದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಅಮೃತೂರು ಪೊಲೀಸ್‌ ಠಾಣಾ ಮೊನಂ-149/2017, ಕಲಂ- 279, 304(ಎ) ಐಪಿಸಿ

ದಿನಾಂಕ:-15-07-2017 ರಂದು ಬೆಳಗಿನ ಜಾವ 01-00 ಗಂಟೆಗೆ ಕುಣಿಗಲ್ ತಾಲೋಕ್, ಯಡಿಯೂರು ಹೋಬಳಿ, ಸಿದ್ದಾಪುರ ಗ್ರಾಮದ ಸುಮಾರು 20ವರ್ಷ, ವಯಸ್ಸುಳ್ಳ, ಸೈಪುಲ್ಲಾ ಬಿನ್ ನಸರುಲ್ಲಾರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ:-14-07-2017ರಂದು ಸಂಜೆ 07-30 ಗಂಟೆಯಲ್ಲಿ ನಾನು ಮತ್ತು ನನ್ನ ಅಜ್ಜನಾದ ಮುಸ್ತಫಾ ಖಾನ್ ಮತ್ತು ನನ್ನ ಅಜ್ಜಿಯಾದ ಮಕ್ ಬುಲ್ ಬಿ ರವರು ನಮ್ಮ ಮನೆಯ ಕಡೆಯಿಂದ ದಕ್ಷಿಣದ ಕಡೆ ಇರುವ ಮಸೀದಿ ಕಡೆ ಹೋಗಲು ಯಡಿಯೂರು ಕುಣಿಗಲ್ ಕಡೆಯ ರಸ್ತೆಯ ಎಡೆ ಬದಿಯಲ್ಲಿ ನಿಂತಿರಬೇಕಾದರೆ ಯಡಿಯೂರು ಕಡೆಯಿಂದ ಕುಣಿಗಲ್ ಕಡೆಗೆ ಹೋಗಲು ಇನ್ನೋವಾ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಪಕ್ಕದಲ್ಲಿ ಇದ್ದ ನನ್ನ ಅಜ್ಜನಾದ ಮುಸ್ತಫಾ ಖಾನ್ ಸುಮಾರು 50ವರ್ಷ ವಯಸ್ಸುಳ್ಳರವರಿಗೆ ರಸ್ತೆಯ ಎಡಕ್ಕೆ ಬಂದು ಡಿಕ್ಕಿ ಹೊಡೆದಾಗ ನನ್ನ ಅಜ್ಜರವರು ರಸ್ತೆಗೆ ಬಿದ್ದು, ಅವರಿಗೆ ತಲೆಗೆ, ಎರಡು ಕಾಲುಗಳು ಮುರಿದಿವೆ. ಮುಖದಲ್ಲಿ ರಕ್ತ ಬಂದಿರುತ್ತೆ. ಈ ಅಪಘಾತಪಡಿಸಿದ ಕಾರ್ ನೋಡಲಾಗಿ ಇನ್ನೋವಾ ಕಾರಾಗಿದ್ದು ಅದರ ನಂಬರ್. ಕೆಎ-05, ಎಂಜಿ-5705 ಆಗಿದೆ. ತಕ್ಷಣ ನನ್ನ ಅಜ್ಜನನ್ನು ಕಾರಿನಲ್ಲಿ ಹಾಕಿಕೊಂಡು ಆದಿಚುಂಚನಗಿರಿ ಆಸ್ಪತ್ರೆಗೆ ಹೋಗಿ ವೈದ್ಯರಿಗೆ ತೋರಿಸಿದಾಗ ನನ್ನ ಅಜ್ಜನವರು ತೀರಿಕೊಂಡಿದ್ದರು. ಆಗ ಶ್ರೀಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರದಲ್ಲಿ ಶವವನ್ನು ಇಟ್ಟು ಈಗ ಇಲ್ಲಿಗೆ ಬಂದು ಈ ದೂರು ನೀಡುತ್ತಿದ್ದೇನೆ. ಆದ್ದರಿಂದ ಈ ಅಪಘಾತಪಡಿಸಿದ ಇನ್ನೋವಾ ಕಾರ್ ನಂಬರ್ ಕೆಎ-05, ಎಂಜಿ-5705ನೇ ಕಾರ್ ನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯದೊರಕಿಸಿಕೊಡಬೇಕೆಂದು ಪ್ರಾರ್ಥನೆ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿ ತನಿಕೆ  ಕೈಗೊಂಡಿರುತ್ತೆ

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 106/2017 ಕಲಂ 279, 304(ಎ)  ಐಪಿಸಿ ರೆ/ವಿ 134(ಎ) &(ಬಿ), 187 ಐ.ಎಂ.ವಿ.ಆಕ್ಟ್

ದಿನಾಂಕ:14-07-17 ರಂದು  ಬೆಳಿಗ್ಗೆ 6-15  ಗಂಟೆಗೆ  ಈ ಕೇಸಿನ ಪಿರ್ಯಾದಿ  ಮಂಜುಳ ಕೋಂ ಮಹೇಶ್, 33 ವರ್ಷ, ಉಪ್ಪಾರರು, ಗೃಹಿಣಿ, ಹೊಗವನಘಟ್ಟ ತೋಟದ ಮನೆ, ನೋಣವಿನಕೆರೆ ಹೋಬಳಿ, ತಿಪಟೂರು ತಾ ರವರು ಠಾಣೆಗೆ   ಹಾಜರಾಗಿ ನೀಡಿದ  ದೂರಿನ ಅಂಶವೇನೆಂದರೆ,  ದಿ:13-07-17 ರಂದು   ನನ್ನ  ಗಂಡ  ಮಹೇಶ್ ರವರು ಕೂಲಿ ಕೆಲಸಕ್ಕೆ  ಹೋಗಿದ್ದ ರಾತ್ರಿ 8-30 ಗಂಟೆ ಸಮಯದಲ್ಲಿ ನಾನು ಮನೆಯಲ್ಲಿರುವಾಗ್ಗೆ  ನಮ್ಮ  ಗ್ರಾಮದ ಜಗದೀಶ್  ಬಿನ್ ದುರ್ಗಯ್ಯ, ರಾಮನಗರ  ರವರು  ನಮ್ಮ  ಮನೆ ಹತ್ತಿರ ಬಂದು ನಿಮ್ಮ ಗಂಡ ಮಹೇಶ್ ರವರಿಗೆ ಕೆಎ02,ಹೆಚ್.ಜಿ1562  ಟಿ.ವಿ ಎಸ್ ಎಕ್ಸ್ ಎಲ್  ವಾಹನವು ಅಪಘಾತಪಡಿಸಿ ಸ್ಥಳದಲ್ಲಿ  ನಿಲ್ಲಿಸದೆ   ಹೋಗಿರುತ್ತಾರೆ.  ನಾನು ತಕ್ಷಣ ಸದರಿ ಸ್ಥಳಕ್ಕೆ  ಹೋಗಿ ನೋಡಿದಾಗ   ಮಹೇಶ್  ರವರ  ತಲೆಯ ಹಿಂಭಾಗಕ್ಕೆ  ತೀವ್ರ ಪೆಟ್ಟು  ಬಿದ್ದಿದ್ದು ತಕ್ಷಣ ನಾನು  108 ಅಬ್ಯಂಲೆನ್ಸ್ ಗೆ  ಪೋನ್ ಮಾಡಿ  ಅಬ್ಯಂಲೆನ್ಸ್ ವಾಹನದಲ್ಲಿ   ತಿಪಟೂರು ಸರ್ಕಾರಿ ಆಸ್ಪತ್ರೆಗೆ  ಚಿಕಿತ್ಸೆಗಾಗಿ  ಕಳುಹಿಸಿಕೊಟ್ಟಿರುತ್ತೇನೆಂತಾ  ತಿಳಿಸಿದರು  ನಂತರ ನಾನು  ತಿಪಟೂರು ಸರ್ಕಾರಿ ಆಸ್ಪತ್ರೆಗೆ  ಬಂದು ನೋಡಲಾಗಿ  ನನ್ನ ಗಂಡ  ಮೃತ ಪಟ್ಟಿದ್ದು  ವಿಚಾರ ಮಾಡಲಾಗಿ  ತಿಪಟೂರು  ಸರ್ಕಾರಿ ಆಸ್ಪತ್ರೆಗೆ  ಕರೆತರುವಾಗ  ಮಾರ್ಗ ಮಧ್ಯ ಮೃತಪಟ್ಟಿರುತ್ತಾರೆಂತಾ  ತಿಳಿಯಿತು. ನನ್ನ ಗಂಡ ಮಹೇಶ್  ರವರ ಶವವು ತಿಪಟೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ . ನನ್ನ ಗಂಡ ಮಹೇಶ್ ರವರು  ಕೂಲಿ ಕೆಲಸ ಮುಗಿಸಿಕೊಂಡು  ವಾಫಸ್ ಮನೆಗೆ   ದಸರಿಘಟ್ಟ ದೊಡ್ಡ ಸೇತುವೆ ಹತ್ತಿರ    ರಸ್ತೆಯ  ಎಡಭಾಗದಲ್ಲಿ  ನಡೆದುಕೊಂಡು  ಬರುವಾಗ  ಹಿಂಭಾಗದಿಂದ  ಬಂದ ಮೇಲ್ಕಂಡ  ಕೆಎ02, ಹೆಚ್.ಜಿ 1562  ಟಿ.ವಿ ಎಸ್ ಎಕ್ಸ್ ಎಲ್  ವಾಹನದ ಸವಾರ  ಅತಿ ವೇಗ & ಆಜಾಗರೂಕತೆಯಿಂದ  ಓಡಿಸಿಕೊಂಡು  ಬಂದು ಡಿಕ್ಕಿ ಹೊಡೆಸಿದ ಪರಿಣಾಮ ನನ್ನ ಗಂಡ ಮಹೇಶ್ ರವರಿಗೆ  ತಲೆಗೆ ತೀವ್ರ ಪೆಟ್ಟು ಬಿದ್ದು ಚಿಕಿತ್ಸೆಗೆ ಕರೆತರುವಾಗ ಮಾರ್ಗಮಧ್ಯೆ  ಮೃತಪಟ್ಟಿರುತ್ತಾರೆ. ಕೆಎ02, ಹೆಚ್.ಜಿ 1562  ಟಿ.ವಿ ಎಸ್ ಎಕ್ಸ್ ಎಲ್  ಸದರಿ ದ್ವಿ ಚಕ್ರ ವಾಹನದ ಸವಾರ ಅಪಘಾತಪಡಿಸಿ ತನ್ನ ವಾಹನವನ್ನು ನಿಲ್ಲಿಸದೆ ಹೋಗಿರುತ್ತಾನೆ.  ಮೇಲ್ಕಂಡ ಟಿ.ವಿ ಎಸ್  ವಾಹನದ ಸವಾರನ ಹೆಸರು  ಜಗದೀಶ ಬಿನ್ ಮಲ್ಲಿಕಯ್ಯ, ಮಲ್ಲೇದೇವರಹಳ್ಳಿ ಎಂತಾ ತಿಳಿಯಿತು.  ಇವರ ಮೇಲೆ  ಕಾನೂನು  ರೀತ್ಯಾ  ಕ್ರಮ ಜರುಗಿಸಬೇಕೆಂತಾ ಕೋರುತ್ತೇನೆ  ನನ್ನ  ಗಂಡನ  ಸಾವಿನ ವಿಚಾರವನ್ನು ನಮ್ಮ ಸಂಬಂಧಿಕರಿಗೆ  ತಿಳಿಸಿ  ಈ ದಿನ ತಡವಾಗಿ ದೂರು ನೀಡಿರುತ್ತೇನೆ .  ಎಂತಾ ನೀಡಿದ  ದೂರಿನ ಮೇರೆಗೆ   ಪ್ರಕರಣ ದಾಖಲಿಸಿರುತ್ತೆ.

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ- 77/2017   ಕಲಂ: 379 IPC

ದಿನಾಂಕ:14/07/2017 ರಂದು ಬೆಳಗಿನ ಜಾವ 4:00 ಗಂಟೆ ಸಮಯದಲ್ಲಿ ಪಿರ್ಯಾದಿ ಡಿ.ಹೆಚ್ ರಮೇಶ ಬಿನ್ ಕೆ ಹನುಮಂತರಾಯಡು,42 ವರ್ಷ, ಕಮ್ಮ ವಕ್ಕಲಿಗ ಜನಾಂಗ, ವ್ಯವಸಾಯ ದೊಡ್ಡಹಳ್ಳಿ ಗ್ರಾಮ, ಪಾವಗಡ ತಾ|| ರವರು ನೀಡಿದ ದೂರಿನ ಅಂಶವೇನೆಂದರೆ ನನ್ನ ಹೆಸರಿನಲ್ಲಿ ಕೆ.ಎ-64 -2359 ಮತ್ತು ಕೆ.ಎ-64-0688 ನೇ ಎರಡು ಈಚರ್ ವಾಹನಗಳು ಇದ್ದು ದೊಡ್ಡಹಳ್ಳಿಯಲ್ಲಿ ನಮ್ಮ ಮನೆ ಪಕ್ಕ ಇರುವ ನಮ್ಮ ಮಾವನಾದ ಭೀಮಪ್ಪ ಎಂಬುವವರ ಮನೆ ಪಕ್ಕದಲ್ಲಿ ನಮ್ಮ ವಾಹನಗಳನ್ನು ರಾತ್ರಿ ವೇಳೆಯಲ್ಲಿ ನಿಲ್ಲಿಸುತ್ತಿದ್ದೆವು, ದಿನಾಂಕ;14/07/2017 ರಂದು ಬೆಳಿಗ್ಗೆ ಸುಮಾರು 3:00 ಗಂಟೆ ಸಮಯದಲ್ಲಿ ನಾನು ಎದ್ದು ಬಹಿರ್ದೆಸೆಗೆಂದು ಹೊರಗಡೆ ಬಂದಾಗ್ಗೆ ನಮ್ಮ ವಾಹನದ ಬಳಿ ಯಾವುದೋ ಕಾರು ನಿಂತಿದ್ದು ಡೀಸಲ್ ವಾಸನೆ ಬರುತ್ತಿದ್ದು, ನಾನು ನಿಧಾನಕ್ಕೆ ಹೋಗಿ ನೋಡಲಾಗಿ ಒಬ್ಬ ಆಸಾಮಿ ನನ್ನ ಬಾಬ್ತು ಕೆ.ಎ-64-2359 ವಾಹನದ ಟ್ಯಾಂಕರ್ ನಿಂದ ಡೀಸಲ್ ನ್ನು ಪೈಪ್ ಮುಖಾಂತರ ಕ್ಯಾನ್ ಗಳಿಗೆ ಕಳ್ಳತನದಿಂದ ತುಂಬಿಸುತ್ತಿದ್ದು ನಾನು ಕಿರುಚಿಕೊಂಡಾಗ ನಮ್ಮ ಗ್ರಾಮದ ವೀರಾಂಜನೇಯ ಬಿನ್ ನರಸಿಂಹಪ್ಪ, ನಾಯಕ ಜನಾಂಗ , ಸಂಜೀವಪ್ಪ ಬಿನ್ ವೆಂಕಟನ್ನ , ಕಮ್ಮ ವಕ್ಕಲಿಗ ಜನಾಂಗ, ನಾಗೇಂದ್ರ ಬಿನ್ ಪುಲ್ಲಾರೆಡ್ಡಿ  ಮತ್ತು ಇತರರು ಬಂದು ಡೀಸಲ್ ತುಂಬುತ್ತಿದ್ದವನನ್ನು ಹಿಡಿದುಕೊಂಡು ವಿಚಾರ ಮಾಡಲಾಗಿ ಆತನ ಹೆಸರು ಬಾಲರಾಜು ಬಿ.ವಿ ಬಿನ್ ವಿ.ವೆಂಕಟಸ್ವಾಮಿ ,28 ವರ್ಷ ಭೋವಿ ಜನಾಂಗ ಪೇರೂರು ಗ್ರಾಮ , ರಾಮಗಿರಿ ಮಂಡಲ್ ಅನಂತಪುರಂ ಜಿಲ್ಲೆ ಎಂತ ತಿಳಿಸಿದ್ದು ನಾನು ಡೀಸಲ್ನ್ನು ಕಳ್ಳತನ ಮಾಡಿ ಮಾರಾಟ ಮಾಡಿಕೊಂಡು ಜೀವನ ಮಾಡುತ್ತೇನೆ ಎಂದು ತಿಳಿಸಿದ್ದು ನನ್ನ ವಾಹನದಿಂದ ಸುಮಾರು ಮೂರು  ಕ್ಯಾನ್ ಗಳಲ್ಲಿ ಸುಮಾರು ತೊಂಬತ್ತು ಲೀಟರ್ ಅಂದಾಜು 4950 =00 ರೂ ಬೆಲೆ ಬಾಳುವ ಡೀಸಲ್ ಕಳ್ಳತನ ಮಾಡಿದ್ದು, ನಮ್ಮ ವಾಹನದ ಪಕ್ಕದಲ್ಲಿ ನಿಂತಿದ್ದ ಕಾರ್ ನಂಬರ್  ನೋಡಲಾಗಿ ಕೆ.ಎ-05 ಎ.ಬಿ 4054 ನೇ ಟಾಟಾ ಇಂಡಿಕಾ ಕಾರ್ ಆಗಿದ್ದು,  ಇದೇ ಕಾರ್ ನಲ್ಲಿ ಡೀಸಲ್ ತುಂಬಿಕೊಂಡು ಹೋಗುತ್ತೇನೆ, ಎಂದು ಬಾಲರಾಜು ತಿಳಿಸಿದ್ದು ನಾವು 03 ಕ್ಯಾನ್ ಗಳಲ್ಲಿ ಇದ್ದ ಡೀಸಲ್ ಮತ್ತು ಕಾರನ್ನು ಮತ್ತು ಈಚರ್ ವಾಹನದಿಂದ ಕ್ಯಾನ್ ಗೆ ಡೀಸಲ್ ತುಂಬಲು ಬಳಿಸಿದ್ದ ಒಂದು ಪ್ಲಾಸ್ಟಿಕ್ ಪೈಪ್ ನ್ನು ಹಾಗೂ ಬಾಲರಾಜು ನನ್ನು ಹಿಡಿದುಕೊಂಡು ಠಾಣೆಗೆ ಕರೆದುಕೊಂಡು ಬಂದು ದೂರು ನೀಡಿದ್ದು ಆರೋಪಿ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳ ಬೇಕೆಂತ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತದೆ

ಪಾವಗಡ ಪೊಲೀಸ್ ಠಾಣಾ ಮೊ,ನಂ-173/2017 ಕಲಂ 353, 323, 506 IPC

ದಿ:14/07/2017 ರಂದು 18-30 ಗಂಟೆಯಲ್ಲಿ ಪಾವಗಡ ತಾಲ್ಲೂಕ್ ಚಿಕ್ಕಹಳ್ಳಿ ಪಂಚಾಯ್ತಿ ಕಾರ್ಯದರ್ಶಿಯಾದ ಶ್ರೀ ಎಸ್,ಹನುಮಂತರಾಯಪ್ಪರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು 6 ತಿಂಗಳಿಂದ ಚಿಕ್ಕಹಳ್ಳಿ ಪಂಚಾಯ್ತಿಯಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯನಿರ್ವಹಿಸುತ್ತಿರುತ್ತೇನೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವವಿಲ್ಲದ್ದರಿಂದ ಯಾವುದೇ ಟ್ಯಾಂಕರ್ ನೀರು ಬಳಸಿರುವುದಿಲ್ಲ. ಈ ವಿಚಾರಕ್ಕೆ ಸಂಬಂದಿಸಿದಂತೆ ಪಂಚಾಯ್ತಿ ವ್ಯಾಪ್ತಿಯ ನಾಗಲಾಪುರ ಗ್ರಾಮದಲ್ಲಿ ಅದೇ ಗ್ರಾಮದ ಮಾಜಿ ತಾಲ್ಲೂಕ್ ಪಂಚಾಯ್ತಿ ಸದಸ್ಯರಾದ ಗೋವಿಂದಪ್ಪ ಬಿನ್ ವೆಂಕಟೇಶಪ್ಪ, 45 ವರ್ಷ, ಇವರು ಪಂಚಾಯ್ತಿ ಅನುಮತಿ ಪಡೆಯದೇ ನಾಗಲಾಪುರ ಗ್ರಾಮಕ್ಕೆ ಟ್ಯಾಂಕರ್ ನಲ್ಲಿ ನೀರು ಸರಬರಾಜು ಮಾಡಿರುತ್ತಾರೆ. ಪೂರೈಕೆ ಮಾಡಿದ ಹತ್ತು (10) ಟ್ಯಾಂಕರ್ ನೀರಿನ ಬದಲು ಇನ್ನೂರು (200) ಟ್ಯಾಂಕರ್ ಹಣ ಪಾವತಿ ಮಾಡುವಂತೆ ಒತ್ತಾಯಿಸಿರುತ್ತಾರೆ. ಇದೇ ವಿಚಾರವಾಗಿ ನಾನು ಪಂಚಾಯ್ತಿ ಸಭೆಗೆ ತಿಳಿಸಿ ಹಣ ಪಾವತಿ ಮಾಡುತ್ತೇವೆ ಎಂತ ತಿಳಿಸಿರುತ್ತೇನೆ. ಇದರಿಂದ ಕೋಪಿತನಾದ ಗೋವಿಂದಪ್ಪ ರವರು ಮಧ್ಯಾಹ್ನ 2-00 ಗಂಟೆಯಲ್ಲಿ ಪಾವಗಡ ಪಟ್ಟಣದ ಪೋಸ್ಟ್ ಆಫೀಸ್ ಬಳಿ ಇರುವ ಕಂಪ್ಯೂಟರ್ ಕಚೇರಿಗೆ ಬಂದು ನನ್ನ ಮೇಲೆ ಏಕಾಏಕಿ ಗಲಾಟೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೈ ಯಿಂದ ಕಪಾಳಕ್ಕೆ ಹೊಡೆದು ಸಾರ್ವಜನಿಕರ ಎದುರು ಚಪ್ಪಲಿಯಿಂದ ಹೊಡೆಯಲು ಮುಂದಾಗಿರುತ್ತಾನೆ. ನಂತರ ಬಾಕಿ ಹಣ ಪಾವತಿ ಮಾಡದಿದ್ದರೆ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲವೆಂತ ನಿನ್ನ ಕುಟುಂಬವನ್ನು ನಾಶ ಮಾಡುತ್ತೇನೆಂತ ಬೆದರಿಕೆ ಹಾಕಿರುತ್ತಾನೆ. ಆಗ ಅಲ್ಲೇ ಸ್ಥಳದಲ್ಲಿದ್ದ ನಾಗಲಾಪುರ ಗ್ರಾಮ ಪಂಚಾಯ್ತಿ ಸದಸ್ಯನಾದ ವೆಂಕಟರಮಣಪ್ಪ, ಗ್ರಾಮ ಸಹಾಕರಾದ ವೆಂಕಟೇಶ, ಕೆ, ರಾಂಪುರ ಗ್ರಾಮದ ಪಿ, ರಮೇಶ ದೊಡ್ಡಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರಾದ ಭೀಮಪ್ಪರವರು ಗಲಾಟೆಯನ್ನು ಬಿಡಿಸಿ ಮೇಲ್ಕಂಡವರಿಂದ ನನ್ನನ್ನು ರಕ್ಷಣೆ ಮಾಡಿರುತ್ತಾರೆ. ಆದ್ದರಿಂಧ ನನ್ನ ಮೇಲೆ ಹಲ್ಲೆ ಮಾಡಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಮೇಲ್ಕಂಡವರ ಮೇಲೆ ಕಾನೂನು ಕ್ರಮ  ಕೈಗೊಳ್ಳಬೇಕೆಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

 

 

 

 

 

 

 

 

 

 

Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 89 guests online
Content View Hits : 195392
Hackguard Security Enabled