lowborn Crime Incidents 14-07-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 14-07-17

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  76/2017   ಕಲಂ: 32(3)K E Act

ದಿನಾಂಕ:13/07/2017 ರಂದು ರಾತ್ರಿ   7:30 ಗಂಟೆಯಲ್ಲಿ  ಶ್ರೀ ಜಿ.ಟಿ ಶ್ರೀಶೈಲಮೂರ್ತಿ ಸಿ.ಪಿ.ಐ ತಿರುಮಣಿ ವೃತ್ತ ರವರು ನೀಡಿದ ವರದಿ ಅಂಶವೇನೆಂದರೆ  ಠಾಣಾ ವ್ಯಾಪ್ತಿ  ಕೋಟಗುಡ್ಡ  ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಂಭಾಗ  ಪೆಟ್ಟಿಗೆ ಅಂಗಡಿ ಬಳಿ ವ್ಯಕ್ತಿಯೋರ್ವ ಸಾರ್ವಜನಿಕರಿಗೆ ಮದ್ಯಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿದ್ದಾನೆಂತ ಮಾಹಿತಿ ಇದ್ದು ಸ್ಥಳಕ್ಕೆ ಸಿಬ್ಬಂದಿಯಾದ ಎ. ಹೆಚ್ ಸಿ:135 ಸೈಯ್ಯದ್ ಶಾಹೆ ಆಲಂ  ಮತ್ತು ಪಿ.ಸಿ:672 ಶ್ರೀನಿವಾಸ್ ರವರೊಂದಿಗೆ ಹೋಗಿ ನೋಡಲಾಗಿ ಕೆಲವು ಗಿರಾಕಿಗಳು ಪೆಟ್ಟಿಗೆ ಅಂಗಡಿ ಬಳಿ ಮದ್ಯ ಕುಡಿಯಲು ಕುಳಿತಿದ್ದು ನಮ್ಮನ್ನು ಕಂಡು ಓಡಿ ಹೋದರು, ನಂತರ ಸ್ಥಳದಲ್ಲಿ ಮದ್ಯ ಕುಡಿಯಲು ಸ್ಥಳ ಅವಕಾಶ ಮಾಡಿಕೊಟ್ಟಿದ್ದ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ  ,ಹನುಮಂತರಾಯಪ್ಪ ಬಿನ್ ವೆಂಕಟರವಣಪ್ಪ, 45  ವರ್ಷ ಭೋವಿ ಜನಾಂಗ, ಅಂಗಡಿ ವ್ಯಾಪಾರ, ಕೋಟಗುಡ್ಡ  ಪಾವಗಡತಾ|| ಎಂತ ತಿಳಿಸಿದ್ದು ಸ್ಥಳದಲ್ಲಿ ಇದ್ದ ಮದ್ಯದ ಪ್ಯಾಕೆಟ್ ಗಳನ್ನು ಪರಿಶೀಲಿಸಲಾಗಿ ಮದ್ಯ ತುಂಬಿದ್ದ  07  ರಾಜಾ ವಿಸ್ಕಿ  90 ಎಂ.ಎಲ್ ನ ಟೆಟ್ರಾ ಪ್ಯಾಕೆಟ್ ಹಾಗೂ   180 ಎಂ.ಎಲ್  ನ  01 ಓಲ್ಡ್ ಟವರಿನ್  ಪ್ಯಾಕೆಟ್ ಇದ್ದು ಇವುಗಳ ಒಟ್ಟು ಬೆಲೆ  264=00 ರೂ ಗಳಾಗಿರುತ್ತದೆ , ಇವುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮುಖೇನ ಮುಂದಿನ ನಡುವಳಿಕೆಗಾಗಿ ಅಮಾನತ್ತು ಪಡಿಸಿಕೊಂಡು ಠಾಣೆಗೆ ಆರೋಪಿ , ಮಾಲು ಮತ್ತು ಪಂಚನಾಮೆ ಸಹಿತ ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದನ್ನು ಪಡೆದು ಕೊಂಡು  ಪ್ರಕರಣ ದಾಖಲಿಸಿರುತ್ತದೆ .

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 135/2017 ಕಲಂ: 78 (3) ಕೆ.ಪಿ ಆಕ್ಟ್‌

ದಿನಾಂಕ : 13/07/2017 ರಂದು ರಾತ್ರಿ 07-30 ಗಂಟೆಗೆ ಮಾನ್ಯ ಪಿ.ಐ ಸಾಹೇಬರವರು ಠಾಣಾ ಪಿ.ಸಿ-968 ರವರ ಮೂಲಕ ಕಳುಹಿಸಿದ ಜ್ಞಾಪನದ ಅಂಶವೇನೆಂದರೆ, ದಿನಾಂಕ: 13/07/2017 ರಂದು ಸಂಜೆ 05-30 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ನಮ್ಮ ಗಾಂಧಿನಗರದ ಉಪಠಾಣೆಯ ಹೆಚ್.ಸಿ-32 ಉಸ್ಮಾನ್ ಸಾಬ್ ಹಾಗೂ ಬೀಟ್ ಸಿಬ್ಬಂದಿಯಾದ ಪಿ.ಸಿ-968 ಮಂಜುನಾಥ್ ರವರಿಂದ ತಿಪಟೂರು ಟೌನ್ ಗಾಂದಿನಗರದ 9ನೇ ಕ್ರಾಸ್ ಗುರಪ್ಪನಕಟ್ಟೆ ಮಸೀದಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಷಫಿಯುಲ್ಲಾಖಾನ್ ಬಿನ್ ಇನಾಯತುಲ್ಲಾ ಖಾನ್ ರವರು ಸಾರ್ವಜನಿಕರನ್ನು ಸೇರಿಸಿಕೊಂಡು ಅವರಿಂದ ಹಣ ಪಡೆದು, ಮಟ್ಕಾ ಜೂಜಾಟ ಆಡುತ್ತಿದ್ದಾರೆಂತ ಖಚಿತ ವರ್ತಮಾನ ಬಂದಿದ್ದು, ಈತನನ್ನು ದಾಳಿ ಮಾಡಿ ಬಂಧಿಸಲು ಘನ ನ್ಯಾಯಾಲಯದಿಂದ ಅನುಮತಿ ಪಡೆದು, ಹೆಚ್.ಸಿ-32 ಉಸ್ಮಾನ್ ಸಾಬ್, ಪಿ.ಸಿ-968 ಮಂಜುನಾಥ್ ಮತ್ತು ಪಂಚರುಗಳೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಷಫಿಯುಲ್ಲಾಖಾನ್ ರವರು ಮೇಲ್ಕಂಡ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದು ಅವರು ಹೇಳುತ್ತಿದ್ದ ನಂಬರ್ ಗಳನ್ನು ಒಂದು ಚೀಟಿಗೆ ಪೆನ್ನಿನಿಂದ ಬರೆದುಕೊಳ್ಳುತ್ತಿದ್ದು, ಈತನನ್ನು ಸಿಬ್ಬಂದಿಯರೊಂದಿಗೆ ಹಿಡಿದು, ಹೆಸರು ವಿಳಾಸ ಕೇಳಲಾಗಿ ಷಫಿಯುಲ್ಲಾಖಾನ್ ಬಿನ್ ಇನಾಯತುಲ್ಲಾ ಖಾನ್, 42 ವರ್ಷ, ಮುಸ್ಲೀಂ ಜನಾಂಗ, ಬಟ್ಟೆವ್ಯಾಪಾರ, 10ನೇ ಕ್ರಾಸ್  ಗುರಪ್ಪನಕಟ್ಟೆ, ಗಾಂಧಿನಗರ, ತಿಪಟೂರು ಟೌನ್ ಎಂತ ತಿಳಿಸಿದ್ದು, ಈತನನ್ನು ಸಂಜೆ 06-15 ಗಂಟೆಗೆ ವಶಕ್ಕೆ ಪಡೆದಿದ್ದು, ಈತನ ಬಳಿ ಇದ್ದ 1] 590/- ರೂ  ನಗದು ಹಣ 2]  ಮಟ್ಕಾ ನಂಬರ್ ಬರೆದಿರುವ ಎರಡು ಚೀಟಿಗಳು ಮತ್ತು 3] ಒಂದು ಲೆಡ್ ಪೆನ್ನನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡಿರುತ್ತೆ. ಈತನ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾಧಿಯಾಗಿ ನೀಡಿದ ಜ್ಞಾಪನವನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 153/2017 ಕಲಂ.279, 337 ಐಪಿಸಿ

ದಿನಾಂಕ-13-07-2017 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಪಿರ್ಯಾದಿ ಎಸ್‌.ಎನ್‌ ನಾರಾಯಣಪ್ಪ ಬಿನ್‌ ಲೇಟ್‌ ನರಸಯ್ಯ, 74 ವರ್ಷ, ವಕ್ಕಲಿಗರು, ಜಿರಾಯ್ತಿ, ಸಂತೆಮಾವತ್ತೂರು ಗ್ರಾಮ, ಕಸಬಾ ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-13-07-2017 ರಂದು ನಮ್ಮ ಗ್ರಾಮದ ನಮ್ಮ ಸಂಭಂದಿಕರಾದ ಬಸವರಾಜು ಬಿನ್‌ ಚನ್ನಿಗಪ್ಪ ರವರು ಅವರ ಮಗಳಾದ ಪರಿಣತಳನ್ನು ಕರೆದುಕೊಂಡು ನನ್ನನ್ನು ಬೇಟಿಮಾಡಲು ನಮ್ಮ ಮನೆಗೆ ಮಧ್ಯಾಹ್ನ ಸುಮಾರು 2-30 ರಿಂದ 3-00 ಗಂಟೆ ಸಮಯದಲ್ಲಿ ಕುಣಿಗಲ್‌ - ಮದ್ದೂರು ರಸ್ತೆಯಲ್ಲಿ ರಸ್ತೆಯ ಎಡಭಾಗದಲ್ಲಿ ಅವರ ಮನೆಯ ಮುಂಭಾಗದಲ್ಲಿ ಬರುತ್ತಿರುವಾಗ್ಗೆ ಅದೇ ಸಮಯಕ್ಕೆ ಕುಣಿಗಲ್‌ ಕಡೆಯಿಂದ ಮದ್ದೂರು ಕಡೆಗೆ ಹೋಗಲುಬಂದ ಗೂಡ್ಸ್‌ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ರಸ್ತೆ ಎಡಭಾದದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪರಿಣಿತಳಿಗೆ ಹಿಂದಿನಿಂದ ಡಿಕ್ಕಿಪಡಿಸಿದ ಪರಿಣಾಮವಾಗಿ ಪರಿಣಿತಳು ಅಲ್ಲೇ ಬಿದ್ದುಹೋಗಿ ಎಡಗಾಲಿಗೆ ಏಟು ಬಿದ್ದು, ತೊಡೆಯ ಚರ್ಮ ಸಂಪೂರ್ಣವಾಗಿ ಕಿತ್ತುಹೋಗಿರುತ್ತೆ. ಬಲಗಾಲಿಗೂ ಸಹ ಏಟು ಬಿದ್ದಿರುತ್ತದೆ. ನಂತರ ಗೂಡ್ಸ್‌ ವಾಹನ ನಂಬರ್‌ ನೋಡಲಾಗಿ ಕೆಎ-11-ಎ-8399 ಆಗಿರುತ್ತೆ. ತಕ್ಷಣ ನಾನು ಮತ್ತು ಬಸವರಾಜು ರವರು ಸಾರ್ವಜನಿಕರ ಸಹಾಯದಿಂದ ಯಾವುದೋ ಒಂದು ವಾಹನದಲ್ಲಿ ಪರಿಣಿತಳನ್ನು ಕರೆದುಕೊಂಡು ಕುಣಿಗಲ್‌ನ ಎಂ.ಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಿರುತ್ತೇವೆ. ಆದ್ದರಿಂದ ತಾವುಗಳು ಪರಿಣಿತಳಿಗೆ ಅಪಘಾತಪಡಿಸಿದ ಕೆಎ-11-ಎ-8399 ನೇ ಗೂಡ್ಸ್‌ ವಾಹನ ಚಾಲಕನ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ನೀಡಿದ ದೂರಿನ ಅಂಶವಾಗಿರುತ್ತೆ.

 

ಹೊನ್ನವಳ್ಳಿ ಪೊಲೀಸ್ ಠಾಣೆ     ಮೊನಂ-89/2017 ಕಲಂ, 324,504,506, ಐಪಿಸಿ

 

ದಿನಾಂಕ:13/07/2017  ರಂದು ಕೇಸಿನ ಪಿರ್ಯಾದುದಾರರಾದ ಸಂತೋಷಕುಮಾರ ಬಿನ್‌ ಪಂಚಲಿಂಗಯ್ಯ ಕಂಚುಗಾರನಹಳ್ಳಿ ರವರು ಠಾಣೆಗೆ ಸಂಜೆ 5-00 ಗಂಟೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೆಂನೆಂದರೆ ದಿನಾಂಕ 12/07/2017 ರಂದು ರಾತ್ರಿ ಸುಮಾರು 9-30 ಗಂಟೆಯಲ್ಲಿ ಪಿರ್ಯಾದಿದಾರರು ಕಂಚುಗಾರನಹಳ್ಳಿ ಗ್ರಾಮದ ತಮ್ಮ ವಾಸದ ಮನೆಯ ಮುಂದೆ ನಿಂತ್ತಿರುವಾಗ ಆರೋಪಿತನಾ ನವೀನ ಬಿನ್‌ ರಾಮಚಂದ್ರಯ್ಯನವರು ಪಿರ್ಯಾದಿಯ ಬಳಿ ಬಂದು ಪಿರ್ಯಾದಿಗೆ ಏಕಾಏಕಿ ಜಗಳ ತೆಗೆದು ಬೋಳಿ ಮಗನೆ ಅಲ್ಕ ಮಗನೆ ಎಂದು ಅವ್ಯಾಚ್ಯ ಶಬ್ದಗಳಿಂದ ಬೈದು ತನ್ನ ಕೈಯಲ್ಲಿದ್ದ ಸ್ಕೂಡ್ರೈವರ್‌ನಿಂದ ಪಿರ್ಯಾದಿಯ ತಲೆಗೆ ಹೊಡೆದು ರಕ್ತ ಗಾಯ ಪಡಿಸಿದ್ದು ಅಷ್ಟರಲ್ಲಿ ಸ್ಥಳಕ್ಕೆ ಬಂದ ರಾಕೇಶ ಮತ್ತು ವಸಂತ ಬಿಡಿಸುವಾಗ ಆರೋಪಿತನು ಪಿರ್ಯಾದಿಗೆ ಜೀವಂತವಾಗಿ ಬಿಡುವುದಿಲ್ಲಾ ಕೊಲೆ ಮಾಡುತ್ತೇನೆ, ಎಂದು ಕೊಲೆ ಬೆದರಿಕೆ ಹಾಕಿ ಸ್ಕೂಡ್ರೈವರ್‌ ಅನ್ನು ಸ್ಥಳದಲ್ಲಿ ಬಿಟ್ಟು ಹೋಗಿರುತ್ತಾನೆ. ನಂತರ  ಪಿರ್ಯಾದಿ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಡವಾಗಿ ಈ ದಿನ ಠಾಣೆಗೆ ಬಂದು ನವೀನನ  ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ನೀಡಿದ ದೂರನ್ನು  ಪಡೆದು ಪ್ರಕರಣ ದಾಖಲು ಮಾಡಿರುತ್ತದೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 103 guests online
Content View Hits : 289611