lowborn Crime Incidents 12-07-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 12-07-17

 

ಹೊಸಬಡಾವಣೆ ಪೊಲೀಸ್ ಠಾಣಾ ಮೊ.ಸಂ  83/2017 U/S 420 IPC

ದಿನಾಂಕ : 11-07-2017 ರಂದು ರಾತ್ರಿ 8-00 ಗಂಟೆಗೆ ಪಿರ್ಯಾದಿ ವಿನೋದ್ ಕುಮಾರ್ ಬಿನ್ ಲೇಟ್ ಸುಕುಮಾರನ್, 35 ವರ್ಷ, ಉಪ ಪ್ರಾಚಾರ್ಯರು, ಕಾರ್ಡಿಯಲ್ ಇಂಟರ್ ನ್ಯಾಷನಲ್ ಸ್ಕೂಲ್, ಮಧುಗಿರಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯು OLX ನಲ್ಲಿ 2014ನೇ ಮಾಡೆಲ್‌ನ ಡಿಸೈರ್ ಕಾರು ಮಾರಾಟಕ್ಕಿರುವ ಜಾಹಿರಾತನ್ನು ನೋಡಿ ಅದರಲ್ಲಿದ್ದ ಮೊಬೈಲ್ ನಂ 9538292320 ನೇ ಮೊಬೈಲ್‌ಗೆ ಸಂಪರ್ಕಿಸಿದಾಗ ಪಿರ್ಯಾದಿಗೆ ಷಬ್ಬೀರ್ ಎಂಬ ಹೆಸರಿನ ವ್ಯಕ್ತಿಯು ಪರಿಚಯಿಸಿಕೊಂಡು ಸದರಿ ಕಾರು ತನ್ನದಾಗಿದ್ದು ನಾಲ್ಕು ಲಕ್ಷರೂಗಳಿಗೆ ಮಾರಾಟಕ್ಕಿರುತ್ತದೆ. ಕಾರು ಹಾಲಿ ದೇವನಹಳ್ಳಿ ಇಂಟರ್ ನ್ಯಾಷನಲ್ ಏರ್ ಪೋರ್ಟ್‌ ನಲ್ಲಿ ಕಾರು ನಿಂತಿರುತ್ತದೆ ಅಲ್ಲಿ ಕೆಲಸ ಮಾಡುವ ಸುರೇಶ್ ಎಂಬುವರ ನಂಬರ್ ನೀಡುತ್ತೇನೆ ಮಾತನಾಡಿ ಎಂದು 9892118875ನೇ ನಂಬರ್ ನೀಡಿದ್ದು ಪಿರ್ಯಾದಿಯು ಸದರಿ ನಂಬರ್‌ಗೆ ಕರೆ ಮಾಡಿ ಮಾತನಾಡಿದಾಗ  ಆ ವ್ಯಕ್ತಿಯು ಪಾರ್ಕಿಂಗ್ ಶುಲ್ಕ 1,92,800/-ರೂಗಳನ್ನು ಪಾವತಿಸಬೇಕೆಂದು ಸದರಿ ಹಣವನ್ನು ಕಾರಿನ ನಾಲ್ಕು ಲಕ್ಷರೂಗಳಲ್ಲಿ ಕಡಿತಗೊಳಿಸಲಾಗುವುದು ಎಂದು ಎಂದು ತಿಳಿಸಿ ಮೂರು ವಿವಿಧ ಬ್ಯಾಂಕ್‌‌ಗಳ ಖಾತೆ ಸಂಖ್ಯೆಗಳನ್ನು ತಿಳಿಸಿದ್ದು ಅದನ್ನು ನಂಬಿ ಪಿರ್ಯಾದಿಯು ದಿನಾಂಕ :  30/06/2017 ರಂದು ತುಮಕೂರಿನ ಐಸಿಐಸಿಐ ಬ್ಯಾಂಕ್, ಎಸ್.ಬಿ.ಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಗಳ 1,92,800/-ರೂಗಳನ್ನು ಆರೋಪಿಗಳ ಖಾತೆಗೆ ಜಮಾ ಮಾಡಿ ನಂತರ ದೇವನಹಳ್ಳಿ ಏರ್ ಪೋರ್ಟ್‌ಗೆ ಹೋಗಿ ಕಾರಿನ ಬಗ್ಗೆ ವಿಚಾರ ಮಾಡಲಾಗಿ ಆರೋಪಿಗಳು ತಮ್ಮನ್ನು ನಂಬಿಸಿ ಹಣ ವನ್ನು ತಮ್ಮ ಖಾತೆಗೆ ಹಾಕಿಸಿಕೊಂಡು ಮೋಸ ಮಾಡಿರುವುದು ಕಂಡು ಬಂದಿರುತ್ತದೆ ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ.

 

ಪಾವಗಡ ಪೊಲೀಸ್ ಠಾಣಾ ಮೊ,ನಂ 170/2017 ಕಲಂ 420 IPC

ದಿ:11/07/2017 ರಂದು ಬೆಳಿಗ್ಗೆ 11-15 ಗಂಟೆಯಲ್ಲಿ ಪಿರ್ಯಾದುದಾರರಾದ ಪಾವಗಡ ತಾಲ್ಲೂಕ್ ಕೆ,ಟಿ ಹಳ್ಳಿ ವಾಸಿಯಾದ ತಿಪ್ಪೇಸ್ವಾಮಿ ಬಿನ್ ಲೇಟ್, ನರಸಿಂಹಪ್ಪರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು ಪಾವಗಡ ಕೆನರಾ ಬ್ಯಾಂಕ್ ಶಾಖೆಯಲ್ಲಿ ಖಾತೆ ನಂ-5882101002415 ನ್ನು ಹೊಂದಿದ್ದು, ಈ ಖಾತೆಗೆ ATM ಸೌಲಭ್ಯವಿತ್ತು. ದಿನಾಂಕ:25/06/2017 ರಂದು ನನಗೆ ಹಣದ ಅವಶ್ಯಕತೆ ಇದ್ದುದ್ದರಿಂದ ಬೆಳಿಗ್ಗೆ 9-00 ಗಂಟೆಯಲ್ಲಿ ಪಾವಗಡ ಟೌನ್ ಗೆ ಬಂದು ಕರ್ನಾಟಕ ಬ್ಯಾಂಕ್ ಬಳಿ ಇರುವ ATM ಹತ್ತಿರ ಹೋಗಿ ಹಣ ಡ್ರಾ ಮಾಡಲು ಪ್ರಯತ್ನಿಸಿದ್ದು, ATM ನಲ್ಲಿ ಹಣ ಬರಲಿಲ್ಲ. ATM ರೂಂ ನಲ್ಲಿದ್ದ ಒಬ್ಬ ವ್ಯಕ್ತಿಯು ನನ್ನನ್ನು ಮಾತನಾಡಿಸಿ ಹಣ ಡ್ರಾ ಮಾಡಿಕೊಡಬೇಕಾ ಎಂತ ಕೇಳಿದನು. ಆಗ ನಾನು ನನ್ನ ATM ಕಾರ್ಡ್ ನ್ನು ಕೊಟ್ಟು ನನ್ನ ATM ಕಾರ್ಡ್ ಪಾಸ್ ವರ್ಡ್ ನ್ನು ಹೇಳಿದೆನು. ಆಗ ಆತನು ATM ಮೆಷಿನ್ ನಲ್ಲಿ ಹಣ ಡ್ರಾ ಮಾಡಲು ಪ್ರಯತ್ನಿಸಿ ಈ ATM ನಲ್ಲಿ ಹಣವಿಲ್ಲ ಎಂತ ತಿಳಿಸಿ ನನಗೆ ಕಾರ್ಡ್ ವಾಪಾಸ್ ನೀಡಿದ. ಅದೇ ದಿನ ಬೆಳಿಗ್ಗೆ 9-45 ಗಂಟೆಯಲ್ಲಿ ನನ್ನ ಮೊಬೈಲ್ ಗೆ ರೂ 25,000/- ರೂ ಡ್ರಾ ಮಾಡಿರುವ ಬಗ್ಗೆ ಮೆಸೇಜ್ ಬಂದವು. ನಾನು ಕೂಡಲೇ ಪಾವಗಡ ಬ್ಯಾಂಕ್ ಬಳಿ ಹೋಗಿ ವಿಚಾರ ಮಾಡಿದಾಗ ನನ್ನ ಖಾತೆಯಿಂದ ಹಣ ಡ್ರಾ ಆಗಿರುವ ವಿಚಾರ ಬ್ಯಾಂಕ್ ರವರಿಂದ ತಿಳಿದೆನು. ದಿನಾಂಕ:25/06/2017 ರಂದು ಬೆಳಿಗ್ಗೆ ಕರ್ನಾಟಕ ಬ್ಯಾಂಕ್ ATM ಹತ್ತಿರ ಹಣ ಡ್ರಾ ಮಾಡಿಕೊಡಲು ಸಹಾಯಕ್ಕೆ ಬಂದ ವ್ಯಕ್ತಿಯು ನನ್ನ ATM ಕಾರ್ಡ್ ಪಡೆದು ನಂತರ ನನಗೆ ಬೇರೆ ATM ಕಾರ್ಡ್ ನೀಡಿ ಮಡಕಶಿರಾ ಟೌನ್ ನ ATM ನಲ್ಲಿ ನನ್ನ ಖಾತೆಯಿಂದ ರೂ 25,000/- ಹಣ ಡ್ರಾ ಮಾಡಿಕೊಂಡು ಮೋಸ ಮಾಡಿರುತ್ತಾನೆ. ನನ್ನಂತಯೇ ಮೋಸ ಹೋಗಿರುವ ಬೊಮ್ಮತನಹಳ್ಳಿ ಗ್ರಾಮದ ವಸಂತಕುಮಾರ್ ರವರ ಪಾವಗಡ SBM ಖಾತೆ ಸಂಖ್ಯೆ-64137866915 ಯ ATM ಕಾರ್ಡ್ ನ್ನು ಬದಲಾಯಿಸಿ ದಿ:05/06/2017 ರಂದು ರಾತ್ರಿ 60,000=00 ಡ್ರಾ ಮಾಡಿ ಮೋಸ ಮಾಡಿರುತ್ತಾರೆ. ಹಾಗೂ ಪಾವಗಡ ತಾಲ್ಲೂಕ್ ಗುಜ್ಜನೋಡು ಗ್ರಾಮದ ವಾಸಿ ರಮೇಶ ಬಿನ್ ಹನುಮಂತರಾಯಪ್ಪ ರವರ ಕೆನರಾ ಬ್ಯಾಂಕ್ ಪಾವಗಡ ಖಾತೆ ಸಂಖ್ಯೆ-6032500103841101 ಯ ATM ಕಾರ್ಡ್ ನ್ನು ಬದಲಾಯಿಸಿ  ದಿ:10/06/2017 ರಂದು 23,700=00 ರೂ ಹಣ ವನ್ನು ಡ್ರಾ ಮಾಡಿ ಮೋಸ ಮಾಡಿರುತ್ತಾರೆಂತ ನನ್ನ ಬಳಿ ಈ ದಿನ ತಿಳಿಸಿದರು. ನಮಗೆ ಹಣ ಡ್ರಾ ಮಾಡುವ ನೆಪದಲ್ಲಿ ನಮ್ಮಗಳ ATM ಕಾರ್ಡ್ ಗಳನ್ನು ಪಡೆದು ನಮ್ಮ ಖಾತೆಗಳಿಂದ ಹಣ ಡ್ರಾ ಮಾಡಿ ನಮಗೆ ಮೋಸ ಮಾಡಿರುವ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

 

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 134/2017 ಕಲಂ: 279.337 ಐ.ಪಿ.ಸಿ

ದಿನಾಂಕ:11-07-2017 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾಧಿ ಕವಿತಾ ಕೋಂ ದೊಡ್ಡರಂಗಯ್ಯ, 1ನೇ ಕ್ರಾಸ್, ಬಸವೇಶ್ವರನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಪಿರ್ಯಾಧಿ ರವರ ತಾಯಿ ಮಣ್ಣಮ್ಮ ರವರು ದಿನಾಂಕ:03-07-2017 ರಂದು ಮುಂಜಾನೆ 5-30 ಗಂಟೆ ಸಮಯದಲ್ಲಿ ತಿಪಟೂರು ರೈಲ್ವೆ ನಿಲ್ದಾಣ ರಸ್ತೆಯ ತೋಂಟಾರಾದ್ಯ ಜ್ಯೂಯಲರಿ ಅಂಗಡಿ ಮುಂಭಾಗ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಕೆ ಎ 44 ಕ್ಯೂ 8597 ನೇ ಸ್ಕೂಟಿಯಲ್ಲಿ ಮಂಜುನಾಥ ರವರ ಧರ್ಮಪತ್ನಿ ಸ್ಕೂಟಿಯನ್ನು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಮಣ್ಣಮ್ಮ ರವರಿಗೆ ಢಿಕ್ಕಿ ಹೊಡೆಸಿ ಅಪಘಾತ ಪಡಿಸಿದ ಪರಿಣಾಮ ಮಣ್ಣಮ್ಮ ರವರಿಗೆ ತಲೆಗೆ, ಕೈಕಾಲಿಗೆ ಪೆಟ್ಟು ಬಿದ್ದಿರುತ್ತದೆ. ಇವರಿಗೆ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದೇವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಂಜುನಾಥ ರವರ ಧರ್ಮಪತ್ನಿ ರವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ತಡವಾಗಿ ಬಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 110 guests online
Content View Hits : 289617