lowborn Crime Incidents 09-07-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 09-07-17

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 133/2017 ಕಲಂ: 279.337 ಐ.ಪಿ.ಸಿ

ದಿನಾಂಕ; 08/07/2017 ರಂದು ಸಂಜೆ 05-30 ಗಂಟೆಗೆ ಪಿರ್ಯಾದಿ ವಶೀಮ್ ಪಾಷಾ, 1ನೇ ಕ್ರಾಸ್, ಭೋವಿ ಕಾಲೋನಿ, ಗಾಂಧಿನಗರ, ತಿಪಟೂರು ಟೌನ್ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ದಿನಾಂಕ: 07/07/2017 ರಂದು ಕೆ.ಎ-18 ಎ-5483 ನೇ ಐಷರ್ ಲಾರಿಯಲ್ಲಿ ದನದ ಫೀಡ್ಸ್ ನ್ನು ಲೋಡ್ ಮಾಡಿಕೊಂಡು ರಾಮನಗರದಿಂದ ಹೊರಟು ಈ ದಿನ ದಿನಾಂಕ: 08/07/2017 ರಂದು ತಿಪಟೂರಿಗೆ ಬಂದು ತಿಪಟೂರು ಟೌನ್ ಸಂತೇಪೇಟೆಯಲ್ಲಿ ಅನ್‌ಲೋಡ್ ಮಾಡಿ ನಂತರ ಬೇರೆ ಬೇರೆ ಅಂಗಡಿಗಳಿಗೆ ಅನ್‌ಲೋಡ್ ಮಾಡಲು ತಿಪಟೂರಿನ ಅಮಾಲಿಗಳಾದ ಶೌಕತ್, ಇಬ್ರಾಹಿಂ, ಕಲೀಂಉಲ್ಲಾ ಹಾಗೂ ಹಬೀಬ್ ರವರುಗಳನ್ನು ಕ್ಯಾಬೀನ್ ನಲ್ಲಿ ಇಬ್ಬರು ಹಾಗೂ ಹಿಂಭಾಗದಲ್ಲಿ ಇಬ್ಬರನ್ನು ಹತ್ತಿಸಿಕೊಂಡು ಬೆಳಿಗ್ಗೆ 08-30 ಗಂಟೆಯ ಸಮಯದಲ್ಲಿ ಬಿ.ಹೆಚ್ ರಸ್ತೆಯ ಮೋರ್ ಮುಂಭಾಗ ಸಿಗ್ನಲ್ ಹಾಕಿಕೊಂಡು ಬಲಭಾಗಕ್ಕೆ ನಮ್ಮ ವಾಹನವನ್ನು ತಿರುಗಿಸಿಕೊಳ್ಳುತ್ತಿರುವಾಗ ನಮ್ಮ ಹಿಂಭಾಗದಿಂದ ಒಂದು ಟಿಪ್ಪರ್ ಲಾರಿ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಮ್ಮ ಲಾರಿಯ ಬಲಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನಮ್ಮ ಲಾರಿ ಬಲಕ್ಕೆ ಪಲ್ಟಿಯಾಗಿ ಬಿದ್ದು, ಲಾರಿಯಲ್ಲಿ ಇದ್ದ ಅಬೀಬ್ ಬಿನ್ ಮಹಮದ್, ಕಲೀಮ್‌ಉಲ್ಲಾ, ಇಬ್ರಾಹಿಂ ಹಾಗೂ ಶೌಕತ್ ರವರುಗಳಿಗೆ ಪೆಟ್ಟು ಬಿದ್ದು ಗಾಯಗಳಾಗಿರುತ್ತವೆ. ಹಾಗೂ ಡಿವೈಡರ್ ನಲ್ಲಿದ್ದ ವಿದ್ಯುತ್ ಕಂಬ ಹಾಗೂ ಅದರಲ್ಲಿ ಅಳವಡಿಸಿದ್ದ ಸಿ.ಸಿ ಕ್ಯಾಮರಾಗಳು ಸಹ ಜಖಂಗೊಂಡಿರುತ್ತವೆ. ನಮ್ಮ ಲಾರಿಗೆ ಡಿಕ್ಕಿ ಹೊಡೆಸಿದ ಲಾರಿಯ ನಂಬರ್ ನೋಡಲಾಗಿ ಕೆ.ಎ-44 -455 ಟಿಪ್ಪರ್ ಲಾರಿಯಾಗಿದ್ದು, ಚಾಲಕನ ಹೆಸರು ಕೃಷ್ಣಮೂರ್ತಿ ಎಂದು ತಿಳಿದು ಬಂದಿರುತ್ತೆ. ಈ ಅಪಘಾತದಲ್ಲಿ ಎರಡೂ ವಾಹನಗಳು ಜಖಂಗೊಂಡಿದ್ದು,  ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಲಾರಿ ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಈಗ ಠಾಣೆಗೆ ಬಂದು ದೂರು ನೀಡಿರುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 103/2017 ಕಲಂ 279, 337 ಐಪಿಸಿ

ದಿನಾಂಕ:08-07-17 ರಂದು ಈ ಕೇಸಿನ ಪಿರ್ಯಾದಿ  ಜಯಣ್ಣ  ಕೆ.ಎಸ್. ಬಿನ್ ಶಿವಣ್ಣ ಕೆ.ಎಸ್. 48  ವರ್ಷ, ವ್ಯವಸಾಯ,  ಕುಂದರನಹಳ್ಳಿ, ನಿಟ್ಟೂರು  ಹೋಬಳಿ, ತಿಪಟೂರು ತಾ ರವರು ಠಾಣೆಗೆ ಹಾಜರಾಗಿ ನೀಡಿದ  ದೂರಿನ ಅಂಶವೇನೆಂದರೆ  ದಿ:05-07-17 ರಂದು  ನಾನು ನನ್ನ ಮಾವನ ಮನೆಯಾದ  ಜಕ್ಕನಹಳ್ಳಿಗೆ  ಬಂದು ಕೆಲಸದ ನಿಮಿತ್ತ  ನಾನು & ನನ್ನ ಭಾಮೈದ ಬೇರೆ ಬೇರೆ  ದ್ವಿ ಚಕ್ರ ವಾಹನದಲ್ಲಿ  ತಿಪಟೂರಿಗೆ  ಬರುತ್ತಿದ್ದು  ಮಧ್ಯಾಹ್ನ ಸುಮಾರು 2-30 ಗಂಟೆ ಸಮಯದಲ್ಲಿ ಎನ್. ಹೆಚ್ 206 ರಸ್ತೆಯಲ್ಲಿ ಹಿಂಡಿಸ್ಕೆರೆ  ಗೇಟ್ ಬಳಿ  ಬರುತ್ತಿರುವಾಗ ತಿಪಟೂರು  ಕಡೆಯಿಂದ  ಕೆಎ-44,ಕ್ಯೂ-9924 ದ್ವಿ ಚಕ್ರ ವಾಹನದ ಚಾಲಕ ಚಾಲಕ ತನ್ನ ವಾಹನವನ್ನು ಅತಿ ವೇಗ & ಆಜಾಗರೂಕತೆಯಿಂದ  ಓಡಿಸಿ ರಸ್ತೆಯ ಎಡಭಾಗದಲ್ಲಿ  ಹೋಗುತ್ತಿದ್ದ ನನ್ನ ಭಾಮೈದ ಪಂಚಾಕ್ಷರಿ ಚಲಾಯಿಸುತ್ತಿದ್ದ   ಕೆಎ-06, ಇಡಿ-9068 ದ್ವಿ ಚಕ್ರ ವಾಹನಕ್ಕೆ  ಡಿಕ್ಕಿ ಹೊಡೆಸಿದ  ಪರಿಣಾಮ  ನನ್ನ ಭಾಮೈದ  ವಾಹನದಿಂದ ಕೆಳಕ್ಕೆ  ಬಿದ್ದು ಮುಖದ ಬಲಭಾಗ, ಹಣೆ, ತಲೆ ಹಾಗೂ ಕೈಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾದವು ಸದರಿ ಅಪಘಾತ ಉಂಟುಮಾಡಿದ ಚಾಲನ ಹೆಸರು ತಿಳಿಯಲಾಗಿ ಕೆಎ-44 ಕ್ಯೂ-9924 ನೇ ದ್ವಿ ಚಕ್ರ ವಾಹನವಾಗಿದ್ದು ಆತನ ಹೆಸರು ರಮೇಶ್  ಎಂತಾ ತಿಳಿಯಿತು  ಆತನಿಗೂ ಸಹ ಸಣ್ಣ ಪುಟ್ಟ  ಗಾಯಗಳಾಗಿರುತ್ತವೆ  ನಾನು   & ಅಲ್ಲಿಯೇ ಇದ್ದ  ಗೌರೀಶ್ ರವರ  ಸಹಾಯದಿಂದ ನನ್ನ ಭಾಮೈದನನ್ನು ತಿಪಟೂರಿನ  ಹಾಸನ ಸರ್ಕಲ್ ನ ಎಸ್.ಎಸ್. ಆಸ್ಪತ್ರೆಗೆ  ಸೇರಿಸಿ ವೈದ್ಯರ  ಸಲಹೆ ಮೇರೆಗೆ  ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ದಾಖಲಿಸಿ  ಈ ದಿನ ತಡವಾಗಿ ಬಂದು ದೂರು ನೀಡುತ್ತಿರುತ್ತೇನೆ  ನನ್ ಭಾಮೈದ ನಿಗೆ ಅಪಘಾಪಡಿಸಿದ ರಮೇಶ್ ಮೇಲೆ ಕಾನೂನು  ರೀತ್ಯಾ  ಕ್ರಮ ಕೈಗೊಳ್ಳಿ ಎಂತಾ  ನೀಡಿದ ದೂರಿನ ಮೇರೆಗೆ  ಕೇಸು ದಾಖಲಿಸಿರುತ್ತೆ

ಹೊಸಬಡಾವಣೆ ಪೊಲೀಸ್ ಠಾಣಾ ಮೊ.ಸಂ 81/2017 U/S 379 IPC

ದಿನಾಂಕ : 08-07-2017 ರಂದು ಸಂಜೆ 5-00 ಗಂಟೆಗೆ ಪಿರ್ಯಾದಿ ಶ್ರೀ ನಾಭಿರಾಜ್ ಬಿನ್ ಟಿ.ಪಿ. ಪದ್ಮರಾಜು, ಹೆಚ್.ಹೆಚ್. ರಾವ್ ಬೀದಿ, ಚಿಕ್ಕಪೇಟೆ, ತುಮಕೂರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ : 27-06-2017 ರಂದು ಮಧ್ಯಾಹ್ನ 3-30 ಗಂಟೆಯಲ್ಲಿ ಪಿರ್ಯಾದಿಯು ತಮ್ಮ ಬಾಬ್ತು ಸುಮಾರು 30,000/-ರೂ ಬೆಲೆ ಬಾಳುವ KA06 EJ 6208 Suzuki Access  ದ್ವಿ ಚಕ್ರ  ವಾಹನವನ್ನು  ತಮ್ಮ ಅಂಗಡಿಯ ಮುಂಭಾಗ ನಿಲ್ಲಿಸಿ ಹೋಗಿದ್ದು ರಾತ್ರಿ 9-30 ಗಂಟೆ ಸಮಯದಲ್ಲಿ ಮನೆಗೆ ಹೋಗಲು ಬಂದಾಗ ಸದರಿ ವಾಹನವು ಇರದೆ ಅದನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ., ಈ ಬಗ್ಗೆ ಕ್ರಮ ಕೋರಿ ನೀಡಿದ ದೂರು

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ- 75/2017   ಕಲಂ: 279.337.IPC  Rw 134(a)&(b) 187 IMV Act

ದಿನಾಂಕ:08/07/2017 ರಂದು ಮದ್ಯಾಹ್ನ 2:00 ಗಂಟೆಗೆ ಪಿರ್ಯಾದಿ ಸೀನಾನಾಯ್ಕ ಬಿನ್ ವೆಂಕಟನಾಯ್ಕ, 40ವರ್ಷ, ಲಂಬಾಣಿ ಜನಾಂಗ, ಕೂಲಿ ಕೆಲಸ ಭೂಪುರ ತಾಂಡಾ ಗ್ರಾಮ ನಾಗಲಮಡಿಕೆ ಹೋ. ಪಾವಗಡ ತಾ|| ರವರು ನೀಡಿದ ಲಿಖಿತ ದೂರಿನ ಅಂಶವೇನೆಂದರೆ  ದಿನಾಂಕ 07/07/2017 ರಂದು ಮದ್ಯಾಹ್ನ ಸುಮಾರು 3: 15 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ರಾಜುನಾಯ್ಕ ಬಿನ್ ನಂದ್ಯಾನಾಯ್ಕ ರವರು  ಪೊನ್ ಮಾಡಿ ನೀಲಮ್ಮನಹಳ್ಳಿ ಗೇಟ್ ಬಳಿ ನಾನು ಓಡಿಸುತ್ತಿದ್ದ ಕೆ.ಎ.06- ಈಎಲ್ -4628 ಬೈಕ್ ಗೆ  ಎಪಿ- 02 ಎಂ -3366 ಕಾರಿನ ಚಾಲಕ ರಿವರ್ಸ ಬಂದು ಗುದ್ದಿ ಅಪಘಾತ ಮಾಡಿರುತ್ತಾನಂತ ತಿಳಿಸಿದ್ದು ನಾನು ಕೂಡಲೇ ನೀಲಮ್ಮನಹಳ್ಳಿ ಗೇಟ್ ಗೆ  ಹೋಗಿ ಗಾಯಳುಗಳಾದ ರಾಜುನಾಯ್ಕ ಬಿನ್ ನಂದ್ಯಾ ನಾಯ್ಕ ಮತ್ತು ಲಲಿತಮ್ಮ ಕೋಂ ನಾರಾಯಣನಾಯ್ಕ ರವರನ್ನು  ಅಪಘಾತ ಉಂಟು ಮಾಡಿದ ಎಪಿ 02 ಎಂ 3366 ಕಾರಿನಲ್ಲಿ ಪಾವಗಡ ಆಸ್ಪತ್ರೆಗೆ ಕರೆದುಕೊಂಡು  ಹೋಗಿ ಚಿಕಿತ್ಸೆಗೆ ಸೇರಿಸುತ್ತಿರುವಾಗ್ಗೆ ಕಾರಿನ ಚಾಲಕ ಕಾರನ್ನು  ತೆಗೆದುಕೊಡು ಪರಾರಿಯಾಗಿರುತ್ತಾನೆ ರಾಜುನಾಯ್ಕನಿಗೆ ಬಲಗೈ ಮತು ಎಡಗಾಲಿಗೆ ಗಾಯವಾಗಿರುತ್ತೆ  ಮತ್ತು ಲಲಿತಮ್ಮನಿಗೆ ಬಲಕುಂಡಿಗೆ ಬಲಭುಜಕ್ಕೆ , ಬಲ ಕಾಲಿಗೆ ಏಟು ಬಿದ್ದಿರುತ್ತೆ ರಾಜುನಾಯ್ಕನನ್ನು ವಿಚಾರ ಮಾಡಲಾಗಿ ದಿ:07/07/2017 ರಂದು ನೀಲಮ್ಮನಹಳ್ಳಿ  ಪಂಚಾಯತಿ ಆಫೀಸ್ಗೆ ಹೋಗುವ ಸಲುವಾಗಿ ಕೆ ಎ 06 ಇ ಎಲ್ 4628 ಬೈಕ್ನಲ್ಲಿ ಲಲಿತಮ್ಮಳನ್ನು ಹಿಂಬದಿಯಲ್ಲಿ ಕೂರಿಸಿಕೊಡು ಬುಡ್ಡಾರೆಡ್ಡಿಹಳ್ಳಿಗೆ ಬಂದು ಪಾವಗಡ ಕಲ್ಯಾಣದುರ್ಗ ರಸ್ತೆಯಲ್ಲಿ ನೀಲಮ್ಮನಹಳ್ಳಿ ಗೇಟ್ಗೆ ಹೋಗಿ ನೀಲಮ್ಮನಹಳ್ಳಿ ಕಡೆಗೆ ತಿರುಗಿಸಿಕೊಂಡಾಗ್ಗೆ ಎಪಿ 02 ಎಂ 3366 ಕಾರನ್ನು ಅದರ ಚಾಲಕ ಅತಿವೇಗ ಅಜಾಗರೂಕತೆಯಿಂದ  ರಿವರ್ಸ ಬಂದು ನನ್ನ ಬೈಕ್ ಗೆ  ಗುದ್ದಿ ಅಪಘಾತವನ್ನುಂಟು ಮಾಡಿದ್ದು ಈ ಅಪಘಾತ ಮಧ್ಯಾಹ್ನ ಸುಮಾರು 3 : 00 ಗಂಟೆ ಸಮಯದಲ್ಲಿ ನಡೆದಿದೆ ತಿಳಿಸಿರುತ್ತಾನೆ ಮತ್ತು ಗೇಟನಲ್ಲಿರುವ ಕೆಲವರು ಅಪಘಾತವನ್ನು ನೋಡಿರುತ್ತಾರಂತ ತಿಳಿಸಿರುತ್ತಾನೆ ನಾನು ಗಾಬರಿಯಲ್ಲಿ ಅಪಘಾತ ಉಂಟು ಮಾಡಿ ಚಾಲಕನ ಹೆಸರು ವಿಳಾಸ ತಿಳಿಯಲಾಗಿಲ್ಲ, ಅಪಘಾತ ಉಂಟು ಮಾಡಿದ ಚಾಲಕನನ್ನು ಮತ್ತು ಕಾರನ್ನು ನೋಡಿರುತ್ತೇನೆ ನಾನು ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ಅಪಘಾತ ಉಂಟು ಮಾಡಿದ ಎ.ಪಿ-02 -ಎಂ-3366 ಕಾರನ್ನು ಮತ್ತು ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂತ ಇತ್ಯಾದಿಯಾಗಿ  ನೀಡಿದ ದೂರನ್ನು ಪಡೆದು ಕ್ರಮ ಕೈಗೊಂಡಿರುತ್ತದೆ

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 113 guests online
Content View Hits : 289619