lowborn Crime Incidents 19-05-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 19-05-17

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-86/2017 ಕಲಂ-323, 324, 504, 506 ರೆ/ವಿ 34 ಐ,ಪಿ,ಸಿ

ದಿನಾಂಕ:18-05-2017 ರಂದು ನಾನು ಬೆಳಿಗ್ಗೆ 10-00 ಗಂಟೆಯಿಂದ 10-45 ಗಂಟೆಯವರೆಗೆ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಚ್,ಬೀರೇಶ್‌ ರವರ ಹೇಳಿಕೆಯನ್ನು ಪಡೆದು ವಾಪಸ್‌ ಠಾಣೆಗೆ ಬಂದು ಮದ್ಯಾಹ್ಯ 12-00 ಗಂಟೆಗೆ ದಾಖಲಿಸಿದ ಹೇಳಿಕೆ ದೂರಿನ ಅಂಶವೇನೆಂದರೆ, ನಾನು ಮೇಲೆ ಹೇಳಿ ಬರೆಸಿದ ವಿಳಾಸದಲ್ಲಿ ವಾಸವಾಗಿದ್ದು, ಸುಮಾರು 04 ವರ್ಷಗಳಿಂದ ಆಟೋ ಓಡಿಸಿ ಜೀವನ ಸಾಗಿಸುತ್ತಿರುತ್ತೇನೆ. ನಾನು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು ಕೊಟ್ಟ ಹೇಳಿಕೆ ಏನೆಂದರೆ, ಈಗ್ಗೆ ಸುಮಾರು 05 ವರ್ಷಗಳ ಹಿಂದೆ ನಮ್ಮ ಊರಿನ ಪಕ್ಕ ಇರುವ ಸಿರಿವರ ಊರಿನ ಬ್ಯಾಟರಾಯಪ್ಪ @ ಬ್ಯಾಟ ಮತ್ತು ಚಂದ್ರಪ್ಪ ಎಂಬುವರಿಗೆ ಗಲಾಟೆಯಾಗಿದ್ದು ಅಂದಿನಿಂದ ಅವರು ನನ್ನ ಮೇಲೆ ದ್ವೇಷ ಇಟ್ಟುಕೊಂಡು ಎಲ್ಲಿಯಾದರೂ ಎದುರಿಗೆ ಸಿಕ್ಕಾಗಲೆಲ್ಲಾ ಗುರಾಯಿಸಿ ಹೊಡೆಯಲು ಮೇಲೆ ಬರುತ್ತಿದ್ದರು. ನಾನು ಇವರ ಬಳಿ ಗಲಾಟೆ ಏಕೆ ಎಂದು ಸುಮ್ಮನೆ ಹೋಗುತ್ತಿದ್ದೆ. ದಿನಾಂಕ:17-05-2017 ರಂದು ಸಾಯಂಕಾಲ ಹೆಬ್ಬೂರಿನಲ್ಲಿ ಜಾತ್ರೆ ಇದ್ದ ಪ್ರಯುಕ್ತ ನನ್ನ ಆಟೋದಲ್ಲಿ ಹೋಗಿ ನಂತರ ರಾತ್ರಿ 09-00 ಗಂಟೆಗೆ ಪ್ಯಾಸೆಂಜರ್ ಅನ್ನು ಆಟೋದಲ್ಲಿ ಹತ್ತಿಸಿಕೊಂಡು ಸಿರಿವರದಲ್ಲಿ ಬಿಟ್ಟು ವಾಪಸ್‌ ನಮ್ಮ ಊರಿಗೆ ಹೋಗಲೆಂದು ರಾತ್ರಿ 10-30 ಗಂಟೆಯಲ್ಲಿ ಪಟ್ಟೇಗೌಡನಪಾಳ್ಯ ರಸ್ತೆಯಲ್ಲಿ ಈರಮಾಸ್ತಮ್ಮನ ದೇವಸ್ಥಾನದ ಬಳಿ ಬರುವಾಗ್ಗೆ, ಸಿರಿವರ ಬಸ್‌ ಸ್ಟ್ಯಾಂಡಿನಿಂದ ಒಂದು ಬೈಕಲ್ಲಿ ನನ್ನ ಎದುರಿಗೆ ಬರುತ್ತಿದ್ದ ಸದರಿಯವರು ನನ್ನ ಆಟೋದ ಮೇಲೆ ಬರುವಂತೆ ಕಂಡು ಬಂತು ನಾನು ರಸ್ತೆ ಎಡಭಾಗಕ್ಕೆ ಎಳೆದುಕೊಂಡೆ ಆಗ ಆಟೋ ಮಗ್ಗಲಿಗೆ ವಾಲಿಕೊಂಡಿತು. ಬೈಕ್‌ನಲ್ಲಿದ್ದ ಸಿರಿವರ ಗ್ರಾಮದ ಬ್ಯಾಟರಾಯಪ್ಪ @ ಬ್ಯಾಟ ಮತ್ತು ಚಂದ್ರಪ್ಪ ಎಂಬುವರು ನನ್ನನ್ನು ನೋಡಿ ಈ ಲೋಪರ್‌ ನನ್ನ ಮಗ ಇಲ್ಲೇ ಇದ್ದಾನೆ, ಬೋಳಿ ಮಗನ್ನ ಹೊಡಿಬೇಕೆಲೇ ಎಂತಾ ಅವಾಚ್ಯ ಶಬ್ದಗಳಿಂದ ಬೈದುಕೊಂಡು ಆಟೋದಲ್ಲಿದ್ದ ನನಗೆ ಬ್ಯಾಟರಾಯಪ್ಪ @ ಬ್ಯಾಟ ಎಳೆದುಕೊಂಡು ಕೈಯಲ್ಲಿದ್ದ ಮರದ ರೀಪರ್‌‌ನಿಂದ ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿದ. ಅಷ್ಟರಲ್ಲಿ ಅವನ ಜೊತೆ ಇದ್ದ ಚಂದ್ರಪ್ಪ ಕೈಗಳಿಂದ ನನ್ನ ಮೈಮೇಲೆ ಹೊಡೆದು ನೋವುಂಟು ಮಾಡಿದ. ಆಗ ನಾನು ಕಿರುಚಾಡಿದೆ. ಕಿರುಚಾಟದ ಶಬ್ದ ಕೇಳಿ ಸಿರಿವರದ ರಮೇಶ್‌ ಬಂದು ಗಲಾಟೆ ಬಿಡಿಸಿ ಸಮಾಧಾನ  ಪಡಿಸಿದರು. ಆಗ ಅವರು ನನಗೆ ಹೊಡೆದ ರೀಪರ್‌ ಅನ್ನು ಅಲ್ಲೇ ಬಿಸಾಡಿ ಇಷ್ಟಕ್ಕೇ ನಿನ್ನನ್ನು ಬಿಡುವುದಿಲ್ಲ ಕೊಲೆ ಮಾಡಿ ಸಾಯಿಸುತ್ತೇನೆಂತಾ ಪ್ರಾಣ ಬೆದರಿಕೆ ಹಾಕಿ ಹೊರಟು ಹೋದರು. ನಂತರ ರಮೇಶ್‌ 108 ಆಂಬುಲೆನ್ಸ್‌ಗೆ ಪೋನ್‌ ಮಾಡಿ ಕರೆಸಿ ಆಂಬುಲೆನ್ಸ್‌‌ನಲ್ಲಿ ಗುಬ್ಬಿ ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿ, ವೈದ್ಯರ ಆದೇಶದಂತೆ ತುಮಕೂರು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿರುತ್ತೇನೆ. ನನಗೆ ಮರದ ರೀಪರ್‌‌ನಿಂದ ಹಾಗೂ ಕೈಯಿಂದ ಹೊಡೆದು ರಕ್ತಗಾಯ ಮಾಡಿದ ಮೇಲ್ಕಂಡವರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂತಾ ಕೋರಿಕೊಳ್ಳುತ್ತೇನೆ ಎಂತಾ ನೀಡಿದ ಹೇಳಿಕೆ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಹೆಬ್ಬೂರು  ಪೊಲೀಸ್ ಠಾಣಾ ಮೊ.ನಂ. 88/2017 ಕಲಂ 279,337 ಐಪಿಸಿ ರೆ/ವಿ 134(ಎ)(ಬಿ) 187 ಐ ಎಂ. ವಿ ಆಕ್ಟ್

ದಿನಾಂಕ 18/05/2017 ರಂದು ಸಾಯಿಂಕಾಲ 4-00 ಗಂಟೆಗೆ ಪಿರ್ಯಾದಿ ರೇಣುಕಪ್ಪವರು ಠಾಣೆಗೆ ಹಾಜರಾಗಿ ನೀಡದ ದೂರಿನಾಂಶವೇನೆಂದರೆ, ದಿನಾಂಕ:07-05-2017 ರಂದು ನಾನು ಎಂದಿನಂತೆ ಅಂಗಡಿ ವ್ಯಾಪಾರವನ್ನು ಮುಗಿಸಿಕೊಂಡು ಎಸ್,ಎನ್‌,ಪಾಳ್ಯದಲ್ಲಿರುವ ನನ್ನ ಮನೆಗೆ ಹೋಗಲೆಂದು ನಮ್ಮ ಬಾಬ್ತು ಕೆಎ-06-ಇ.ಜಿ-7040 ನೇ ಟಿ,ವಿ,ಎಸ್ ಎಕ್ಸ್‌,ಎಲ್‌ ಸೂಪರ್‌ ಹೆವಿ ಡ್ಯೂಟಿ ದ್ವಿಚಕ್ರ ವಾಹನದಲ್ಲಿ ನಾನು ಹಿಂಬದಿಯಲ್ಲಿ ಕುಳಿತುಕೊಂಡು ನನ್ನ ಅಂಗಡಿಯಲ್ಲಿ ಕೆಲಸ ಮಾಡುವ ಲಕ್ಷ್ಮೀನಾರಾಯಣ ರವರು ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ಹೆಬ್ಬೂರಿನಿಂದ ಎಸ್‌,ಎನ್‌ ಪಾಳ್ಯದ ಕಡೆಗೆ ರಾತ್ರಿ ಸುಮಾರು 09-00 ಗಂಟೆ ಸಮಯದಲ್ಲಿ ಚನ್ನಮ್ಮ ರವರ ಮನೆ ಬಳಿ ತುಮಕೂರು-ಕುಣಿಗಲ್‌ ಟಾರ್‌ ರಸ್ತೆಯಲ್ಲಿ ಹೋಗುತ್ತಿರುವಾಗ್ಗೆ, ನಮ್ಮ ಹಿಂಬದಿಯಿಂದ ಅಂದರೆ ತುಮಕೂರು ಕಡೆಯಿಂದ ಕುಣಿಗಲ್‌‌ ಕಡೆಗೆ ಹೋಗಲು ಬಂದ ಕೆಎ-51-ಎನ್‌-4992 ನೇ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ನಾವು ಹೋಗುತ್ತಿದ್ದ ದ್ವಿಚಕ್ರ ವಾಹನವನ್ನು ಓವರ್‌ಟೇಕ್‌ ಮಾಡಲು ಹೋಗಿ ನಾವು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆಸಿ ಅಪಘಾತಪಡಿಸಿದನು. ಪರಿಣಾಮವಾಗಿ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತ್ತಿದ್ದ ನನಗೆ ಎಡಗೈ, ಎಡಭುಜಕ್ಕೆ ಏಟು ಬಿದ್ದು, ತಲೆಗೆ ರಕ್ತಗಾಯವಾಯಿತು. ದ್ವಿಚಕ್ರ ವಾಹನವನ್ನು ಸವಾರಿ ಮಾಡುತ್ತಿದ್ದ ಲಕ್ಷ್ಮೀನಾರಾಯಣ ರವರಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾದವು. ಅಫಘಾತಪಡಿಸಿದ ಕಾರಿನ ಚಾಲಕ ತನ್ನ ಕಾರನ್ನು ಸ್ಥಳದಲ್ಲಿ ನಿಲ್ಲಿಸಿದವನು ನಂತರ ತೆಗೆದುಕೊಂಡು ಹೊರಟು ಹೋದನು. ನಂತರ ಗಾಯಗೊಂಡಿದ್ದ ನನ್ನನ್ನು ಲಕ್ಷ್ಮೀನಾರಾಯಣ ಹಾಗೂ ನನ್ನ ಮಗ ಮಲ್ಲಿಕಾರ್ಜುನಸ್ವಾಮಿ ರವರುಗಳು ಸ್ಥಳಕ್ಕೆ ಬಂದ ಯಾವುದೋ ಒಂದು ಕಾರಿನಲ್ಲಿ ತುಮಕೂರಿನ ವಿನಾಯಕ ನರ್ಸಿಂಗ್‌ ಹೋಮ್‌ಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದರು. ಲಕ್ಷ್ಮೀನಾರಾಯಣ ರವರಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದರಿಂದ ಯಾವುದೇ ರೀತಿಯ ಚಿಕಿತ್ಸೆಯನ್ನು ಪಡೆಯಲಿಲ್ಲ. ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ನಮಗೆ ಅಪಘಾತಪಡಿಸಿದ ಕೆಎ-51-ಎನ್‌-4992 ನೇ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ದೂರಿನಾಂಶದ ಮೇರೆಗೆ ಪ್ರಕರಣ ನೊಂದಾಯಿಸಿಕೊಂಡಿರುತ್ತೇನೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 76 guests online
Content View Hits : 274885