lowborn Crime Incidents 17-05-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ.16/08/2018 ತುಂಬೆ (ತುಮಕೂರು ಬೈಸಿಕಲ್ ಪೊಲೀಸ್)     ಜನಸ್ನೇಹಿ... >> :: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 17-05-17

ಕಳ್ಳಂಬೆಳ್ಳ ಪೊಲೀಸ್ ಠಾಣಾ ಮೊ.ನಂ. 112/2017  ಕಲಂ: 323, 498(ಎ), 504 ಐ.ಪಿ.ಸಿ  ರೆ/ವಿ 3 & 4 ಡಿ.ಪಿ.ಆಕ್ಟ್

 

ದಿನಾಂಕ: 16/5/2017 ರಂದು ರಾತ್ರಿ 11-00 ಗಂಟೆಯಲ್ಲಿ ಪಿರ್ಯಾದಿ ಪುಷ್ಪಲತಾ ಕೋಂ ಮೋಹನ್ ಕುಮಾರ್, ಗೊಲ್ಲರ ಜನಾಂಗ, ತರೂರು ಗ್ರಾಮ, ಕಳ್ಳಂಬೆಳ್ಳ ಹೋಬಳಿ , ಸಿರಾ ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖತಿ ದೂರಿನ ಅಂಶವೇನೆಂದರೆ, ದಿನಾಂಖ: 16/5/2017 ರಂದು ರಾತ್ರಿ ಸುಮಾರು 10-00 ಗಂಟೆಯಲ್ಲಿ ನಾನು ನಮ್ಮ ಮನೆಯ ಹತ್ತಿರ ಇದ್ದಾಗ ನನ್ನ ಗಂಡನಾದ ಮೋಹನ್‌‌ಕುಮಾರ್, ಮಾವ ನರಸಿಂಹಯ್ಯ ಬಿನ್ ಈರಣ್ಣ,  ಅತ್ತೆಯಾದ ರಂಗಮ್ಮ ಅವರ ಸಂಬಂದಕರೊಂದಿಗೆ ನಮ್ಮ ಮನೆಯೊಳಗೆ ನುಗ್ಗಿ ಕೈಗಳಿಂದ ಒಡೆದು ಬಟ್ಟೆ ಹರಿದು ತಾಳಿ ಕಿತ್ತುಕೊಂಡು ನಮ್ಮ ಚಿಕ್ಕಮ್ಮನಾದ ಜಯಮ್ಮ ಕೋಂ ನಾಗಣ್ಣ ರವರನ್ನು ಹೊಡೆದು ಹೀನಾಮಾನವಾಗಿ ಬೈದು ಈ ಹಿಂದೆ ಗಲಾಟೆಯಾಗಿ ಹೊಡೆದು ವರದಕ್ಷಿಣೆ ತರಬೇಕೆಂದು ಪೀಡಿಸುತ್ತಾನೆ. ವಾಲೆ, ಯಾಂಗೀಸ್ ಹಡ ಇಟ್ಟುಕೊಂಡಿದ್ದಾರೆ. ಒಂದು 10 ಗ್ರಾಂ ಉಂಗುರ ಕೊಟ್ಟಿದ್ದೆವೆ, ಕಾಲು ಚೈನ್ ಕಿತ್ತುಕೊಂಡಿದ್ದಾರೆ.  ಇವರುಗಳ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ ಹಾಗೂ ಪದೆ ಪದೆ ಗಲಾಟೆ ಮಾಡಿ ಮಾನಸಿಕ ಹಿಂಸೆ ಮಾಡಿ ವರದಕ್ಷಿಣೆ ತರಲು ಪೀಡಿಸುತ್ತಾನೆ.  ಆದ್ದರಿಂದ ಈ ಮೇಲ್ಕಂಡವರುಗಳ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕಾಗಿ ಹಾಗೂ ನಮಗೆ ರಕ್ಷಣೆ ನೀಡಬೇಕಾಗಿ ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆಂದು ನೀಡಿದ ಪಿರ್ಯಾದು ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

 

ಕ್ಯಾತ್ಸಂದ್ರ ಪೊಲೀಸ್ ಠಾಣಾ ಮೊ.ನಂ: 114/2017, ಕಲಂ: 454.380 ಐ.ಪಿ.ಸಿ.

ದಿನಾಂಕ.16/05/2017 ರಂದು ಸಂಜೆ 5.45 ಗಂಟೆಗೆ ಪಿರ್ಯಾದಿ  ಪುಪ್ಪಾಪತಿ ಕೋ ಲೇಟ್  ಗಂಗಣ್ಣ ಬಿ ಪಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದೇವರಾಯಪಟ್ಟಣ ಮುಖ್ಯರಸ್ತೆಯ. ಬಟವಾಡಿಯಲ್ಲಿರುವ ಅಂಜನಾದ್ರಿ ನಿಲಯದಲ್ಲಿ ದಿನಾಂಕ.22/04/2017 ರಂದು ನನ್ನ ಗಂಡನಾದ ಗಂಗಣ್ಣ ರವರು ಮರಣ ಹೊಂದಿರುತ್ತಾರೆ. ಆದಾದ ಮೂರನೇ ದಿನ ದಿನಾಂಕ.25/04/2017 ರಂದು ಹಾಲುತುಪ್ಪದ ಕಾರ್ಯಕ್ರಮಕ್ಕೆ ಮನೆಯಲ್ಲಿ ಸಂಬಂಧಿಕರು ಸೇಹ್ನಿತರು ಇನ್ನೂ ಮುಂತಾದವರೆಲ್ಲರೂ ಸೇರಿ ನಮ್ಮ ತೋಟದಲ್ಲಿ ಕಾರ್ಯಕ್ಕೆ ಹೋಗಿದ್ದಾಗ. ಮಧ್ಯಾಹ್ನ 3.30 ರ ಸಮಯದಲ್ಲಿ ನಮ್ಮ ಮನೆಯ ಬೀಗ ಹೊಡೆದು ಮನೆಯಲ್ಲಿದ್ದಂತಹ ಬೆಲೆಬಾಳುವ ಒಡೆವೆಗಳು ಅಂದರೆ ಕುತ್ತಿಗೆ ಸರ, ಕೈ ಸರ. 2 ಉಂಗುರಗಳು, ಕೈ ಗಡಿಯಾರ ಮೊಬೈಲ್. ಬ್ಯಾಂಕ್ ಪಾಸ್ ಬುಕ್, ಎ.ಟಿ.ಎಂ. ಕಾರ್ಡು. ಸೈಟುಗಳ ದಾಖಲೆ ಪತ್ರಗಳು ಮನೆ ಮತ್ತು ಜಮೀನಿನ ಪತ್ರಗಳು ಮನೆಯಲಿದ್ದ 3.00.000 ರಿಂದ 3.50.000 ದವರೆಗೂ ಇದ್ದಂತಹ ನಗದು ಹಣ ಕೆಎ06.ಇಯು.3216 ನಂಬರಿನ ಆಕ್ಟೀವಾ ಹೊಂಡಾ ವಾಹನ ಹಾಗೂ ದಾಖಲಾತಿ ಪತ್ರವನ್ನು ಹಾಗೂ ಇನ್ನೂ ಮುಂತಾದ ವಸ್ತುಗಳೆಲ್ಲವೂ ಕಳ್ಳತನವಾಗಿರುತ್ತದೆ. ನಾನು ಈ ವಿಚಾರವನ್ನು ನನ್ನ ಸಂಬಂದಿಕರಿಗೆ ತಿಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ನಮ್ಮ ಮನೆಯಲ್ಲಿ ಎಲ್ಲಾ ವಸ್ತುಗಳನ್ನು ಒಡೆವೆಗಳು ದಾಖಲೆ ಪತ್ರಗಳು ನಗದು ಹಣ ಎಲ್ಲವನ್ನು ಕಳವು ಮಾಡಿಕೊಂಡು ಹೋಗಿರುವವರವರನ್ನು ಪತ್ತೆ ಮಾಡಿ ಅವರ ವಿರುದ್ದ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂತಾ ನೀಡಿದ ದೂರು. ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಜಯನಗರ ಪೊಲೀಸ್ ಠಾಣಾ ಯುಡಿಆರ್ ನಂ. 11/2017 ಕಲಂ 174 (ಸಿ) ಸಿ.ಆರ್‌.ಪಿ.ಸಿ

ದಿನಾಂಕ: 16-05-2017 ರಂದು ಮದ್ಯಾಹ್ನ 14-30 ಗಂಟೆಗೆ ತುಮಕೂರು ಟೌನ್‌, ಶಾಂತಿನಗರ ವಾಸಿ ಶಂಕರಮ್ಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಈಗ್ಗೆ ಸುಮಾರು 30 ರಿಂದ 35 ವರ್ಷಗಳ ಹಿಂದೆ ಶಿರಾ ವಾಸಿ ಶಿವಲಿಂಗಯ್ಯ ಎನ್ನುವವರನ್ನು ಮದುವೆಯಾಗಿದ್ದು, ನಮಗೆ ಇಬ್ಬರು ಮಕ್ಕಳಿದ್ದು ನನ್ನ ಮಗಳನ್ನು 10 ವರ್ಷಗಳ ಹಿಂದೆ ಮದುವೆ ಮಾಡಿರುತ್ತೇನೆ.  ಹಾಗೂ ನನ್ನ ಮಗನಿಗು ಸಹ ಮದುವೆ ಮಾಡಿ ಬೇರೆ ವಾಸ ಮಾಡಿಕೊಂಡು ಹಾಲಿ ಭೀಮಸಂದ್ರದಲ್ಲಿ ಮನೆ ಮಾಡಿಕೊಂಡು ಇರುತ್ತಾನೆ. ನಾವು ಈಗ್ಗೆ 3 ವರ್ಷಗಳ ಹಿಂದೆ ತುಮಕೂರಿಗೆ ಬಂದು ಅಮರಜ್ಯೋತಿನಗರದಲ್ಲಿ ವಾಸವಾಗಿದ್ದು, ಈ 8 ತಿಂಗಳಿನಿಂದ ಶಾಂತಿನಗರದಲ್ಲಿ ಬಾಡಿಗೆಗೆ ವಾಸವಿರುತ್ತೇವೆ.  ಜೀವನಕ್ಕಾಗಿ ಹೋಟೆಲ್ ನ್ನು ನಡೆಸುತ್ತಿದ್ದು, ಈಗ್ಗೆ 8-9 ತಿಂಗಳಿನಿಂದ ನಮ್ಮ ಸಂಸಾರದಲ್ಲಿ ಮನಸ್ಥಾಪ ಉಂಟಾಗಿ ನಾನು ನನ್ನ ಮಗಳಾದ ತಾರೇಶ್ವರಿ ಅವರ ಮನೆಯಲ್ಲಿ ವಾಸವಿದ್ದು, ನಮ್ಮ ಮನೆಯಲ್ಲಿ ನನ್ನ ಗಂಡ ಶಿವಲಿಂಗಯ್ಯ ನವರು ವಾಸವಿದ್ದರು.  ನಾನು ಆಗಾಗ್ಗೆ ಬಂದು ಹೋಗುತ್ತಿರುತ್ತೇನೆ.  ಅದರಂತೆ ನಾನು ಈ ದಿನ ಮದ್ಯಾಹ್ನ ಸುಮಾರು 1-00 ಗಂಟೆ ಸಮಯದಲ್ಲಿ ಮಾವಿನ ಹಣ್ಣ ಕೊಡಲು ಬಂದಾಗ ನಮ್ಮ ಮನೆಯ ಬಾಗಿಲು ತೆಗೆದಿದ್ದು ನನ್ನ ಗಂಡ ಒಳಗಡೆ ಇರಬಹುದೆಂದು ಮನೆಯ ಒಳಗೆ ಹುಡುಕಾಡಿ ನಂತರ ರೂಮ್ ನ ಒಳಗೆ ಹೋದಾಗ ನನ್ನ ಗಂಡ ಶಿವಲಿಂಗಯ್ಯ ನವರು ಫ್ಯಾನ್ ನೇತು ಹಾಕುವ ಕಬ್ಬಿಣದ ಕೊಕ್ಕೆಗೆ ಹಸಿರು ನೀಲಿ ಬಣ್ಣದ ಪ್ಲಾಸ್ಟಿಕ್ ಹಗ್ಗದಿಂದ ಕುತ್ತಿಗೆಗೆ ಜೀರಿಕೊಂಡು ನೇಣು ಹಾಕಿಕೊಂಡಿರುವುದು ಕಂಡು ಬಂದಿದ್ದು, ನೋಡಿದ ತಕ್ಷಣ ಕೂಗಿಕೊಂಡಾಗ ನಮ್ಮ ಮನೆಯ ಮೇಲೆ ವಾಸವಿರುವ ರವಿ ಮತ್ತು ಆತನ ಹೆಂಡತಿ ರಾಧರವರುಗಳು ಒಳಗೆ ಬಂದು ಅಷ್ಟರಲ್ಲಿ ಅಕ್ಕಪಕ್ಕದ ಜನಗಳು ಬಂದು ನನ್ನ ಗಂಡನು ಸತ್ತಿರುವ ಬಗ್ಗೆ ಪರಿಶೀಲಿಸಿದ್ದಾಗ ಅವರ ಸತ್ತು ಹೋಗಿರುತ್ತಾರೆ ಎಂದು ತಿಳಿಸಿರುತ್ತಾರೆ.  ನಂತರ ಈ ವಿಚಾರವನ್ನು ನನ್ನ ಮಗ ಮತ್ತು ಮಗಳಿಗೆ ಪೋನ್ ಮುಖಾಂತರ ತಿಳಿಸಿರುತ್ತೇನೆ.  ನನ್ನ ಗಂಡನ ಸಾವು ಅನುಮಾನಸ್ಪದವಾಗಿ ಕಂಡು ಬರುತ್ತಿದ್ದು, ಸ್ಥಳಕ್ಕೆ ಬಂದು ಪರಿಶೀಲಿಸಿ ನನ್ನ ಗಂಡನ ಸಾವಿನ ನಿಜವಾದ ಕಾರಣ ಏನೆಂಬುದನ್ನು ತಿಳಿಸಿಕೊಡಬೇಕೆಂದು ಕೊರಿ ಇತ್ಯಾದಿಯಾಗಿ ನೀಡಿರುವ ದೂರು.

 

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 82/2017 ಕಲಂ 143,147,148, 323,324,504,506 ರೆ/ವಿ 149 ಐಪಿಸಿ

ದಿನಾಂಕ-16/05/2017 ರಂದು ಬೆಳಿಗ್ಗೆ 8-00 ಗಂಟೆಗೆ ಠಾಣಾ ಎ ಎಸ್ ಐ ಶ್ರೀ ನರಸಿಂಹರಾಜು ಆದ ನಾನು ಠಾಣೆಗೆ ಹಾಜರಾಗಿ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಓಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಗಯಾಳು ಬೈರಪ್ಪ @ ಬಾಗಪ್ಪ ಬಿನ್ ಲೇಟ್ ಗೆಡ್ಡೆಬೋರಯ್ಯ, 70 ವರ್ಷ, ವಕ್ಕಲಿಗರು,ಜಿರಾಯ್ತಿ, ಬೊಮ್ಮನಹಳ್ಳಿ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೊಕು (ಮೊ ನಂ 7996762029) ರವರ ಹೇಳೀಕೆಯ ಅಂಶವೇನೇಂಧರೆ ನಾನು ಮೇಲೆ ಹೇಳಿ ಬರೆಯಿಸಿದ ವಿಳಾಸದಲ್ಲಿ ವಾಸವಾಗಿದ್ದು, ದಿನಾಂಕ-14/05/2017 ರಂದು ಸಾಯಾಂಕಾಲ 3-00 ಗಂಟೆ ಸಮಯದಲ್ಲಿ ನಮ್ಮ ಊರಿನ ರಾಗಿಮುದ್ದನಹಳ್ಳಿ ರಸ್ತೆಯ ಪಕ್ಕದಲ್ಲಿರುವ ಜಮೀನಿನಲ್ಲಿ ತೆಂಗಿನ ಕಾಯಿ ಕೀಳುವ ವಿಚಾರವಾಗಿ ನಮಗೂ ನಮ್ಮ ಊರಿನ ರಂಗಶಾಮಯ್ಯ ರವರಿಗೆ ಜಗಳವಾಗಿ ಬಡಿದಾಟವಾಗಿದ್ದು, ಈ ಬಗ್ಗೆ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ನಮ್ಮ ಮೇಲೆ ಕೇಸು ದಾಖಲಾಗಿದ್ದು, ನನ್ನನ್ನು ಈ ದಿವಸ ಬೆಳಿಗ್ಗೆ ಹೆಬ್ಬೂರು ಪೊಲೀಸರು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಅರೆಸ್ಟ್ ಮಾಡಿದ್ದು, ನಂತರ ಸಾಯಾಂಕಾಲ ನಮ್ಮೂರಿನ ಜಯಮ್ಮ ಎಂಬುವವರು ಪೊಲೀಸ್ ಠಾಣೆಗೆ ಬಂದು ಜಾಮೀನು ನೀಡಿ ನನ್ನನ್ನು ಬಿಡಿಸಿದರು, ನಾನು ಈ ದಿವಸ ಅಂದರೆ ದಿನಾಂಕ-15/05/2017 ರಂದು ಸಂಜೆ ಪೊಲೀಸ್ ಠಾಣೆ ಬಿಟ್ಟು ನನ್ನ ಅಳಿಯ ಗಂಗಬೈರಯ್ಯನ ಜೊತೆ ಟಿವಿಎಸ್ ಎಕ್ಷ್‌ಎಲ್ ಸೂಪರ್ ನಲ್ಲಿ ನಮ್ಮ ಊರಿಗೆ ಹೋಗುವಾಗ್ಗೆ ವಡ್ಡರಹಳ್ಳಿಗೂ ನಮ್ಮೂರಿಗೂ ಮಧ್ಯ ಗುಡಿಕಾವಲ್ ಸೇರಿದ ರಸ್ತೆಯಲ್ಲಿ ಸಂಜೆ ಸುಮಾರು 7-00 ಗಂಟೆ ಸಮಯದಲ್ಲಿ ನಮ್ಮ ಊರಿನ ಕಡೆಯಿಂದ ಹೆಬ್ಬೂರಿಗೆ ಬರುತ್ತಿದ್ದ, ನನ್ನನ್ನು ನೋಡಿ ಟ್ರ್ಯಾಕ್ಟರ್‌ನಲ್ಲಿದ್ದ ಸಜ್ಜಮ್ಮ, ಲಕ್ಕಮ್ಮ, ಲಕ್ಷ್ಮಮ್ಮ, ಸಾಕಮ್ಮ, ತಾಯಮ್ಮ, ಮಂಜ, ಬೆಟ್ಟಸ್ವಾಮಿ, ರಂಗಶಾಮಯ್ಯರವರ ತಾಯಿ ಮತ್ತು ಶಾರದಮ್ಮ ಟ್ರ್ಯಾಕ್ಟರ್‌ನಿಂದ ಇಳಿದು ಬಂದು ಎಲ್ಲರೂ ಸಮಾನ ಉದ್ದೇಶದಿಂದ ನನ್ನನ್ನು ಕುರಿತು ಬೋಳಿಮಗನೇ, ಸೂಳೆ ಮಗನೆ, ನಿನ್ನ ಮೇಲೆ ಕೇಸು ಹಾಕಿಸಿದರೂ ನೀನು ಬೇಗ ಬೇಲ್ ತೆಗೆದುಕೊಂಡು ಬಂದಿದ್ದೀಯಾ ಎಂತಾ ಎಲ್ಲರೂ ಬೈದು, ಕೈ ಮತ್ತು ಕಾಲುಗಳಿಂದ ನನ್ನ ಮೈಕೈಗೆ ಹೊಡೆದು ನೋವುಂಟು ಮಾಡಿದರು, ಅದರಲ್ಲಿದ್ದ ತಾಯಮ್ಮ ಮತ್ತು ಸಾಕಮ್ಮ ಅಲ್ಲೇ ಬಿದಿದ್ದ ಕಲ್ಲಿನಿಂದ ಎದೆಯ ಬಾಗಕ್ಕೆ ಗುದ್ದಿ ನೋವುಂಟು ಮಾಡಿದರು, ನನ್ನ ಜೊತೆಯಲ್ಲಿದ್ದ ನನ್ನ ಅಳಿಯ ಗಂಗಬೈರಯ್ಯ ಗಲಾಟೆ ಬಿಡಿಸಿದರು, ಆಗ ಕೈಯಲ್ಲಿದ್ದ ಕಲ್ಲನ್ನು ಅಲ್ಲೇ ಬಿಸಾಡಿ ಹೊರಟರು, ಹೋಗುವಾಗ ಎಲ್ಲರೂ ನಿನ್ನನ್ನು ಇಷ್ಣಕ್ಕೆ ಬಿಡುವುದಿಲ್ಲ ಕೊಲೆ ಮಾಡಿ ಸಾಯಿಸುತ್ತೇವೆಂತಾ ಪ್ರಾಣ ಬೆದರಿಕೆ ಹಾಕಿ ಹೋದರು, ನಂತರ ಅನ್ನ ಅಳಿಯ ಯಾವುದೋ ಆಟೋದಲ್ಲಿ ನನ್ನನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ತಂದು ಸೇರಿಸಿದ್ದು ನಾನು ಅಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ, ನನ್ನನ್ನು ಕೈಗಳಿಂದ ಮತ್ತು ಕಾಲುಗಳಂದ ಹೊಡೆದು, ಕಲ್ಲಿನಿಂದ ಎದೆಗೆ ಗುದ್ದಿ ನೋವುಂಟು ಮಾಡಿರುವ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಿಬೇಕೆಂಧು  ಕೋರಿಕೊಂಡು ಹೇಳಿಕೆಯನ್ನು ನೀಡಿರುತ್ತೇನೆ ಎಂದು ರಾತ್ರಿ 12-30 ಗಂಟೆಯಿಂದ 1-15 ಗಂಟೆ ವರೆಗೆ ನೀಡಿದ ಹೇಳಿಕೆಯನ್ನು ಮಾಡಿಕೊಂಡು, ಬಸ್ಸಿನ ಸೌಕರ್ಯ ಇಲ್ಲದ ಕಾರಣ ನಂತರ ಬೆಳಿಗ್ಗೆ 8-00 ಗಂಟೆಗೆ ಠಾಣೆಗೆ ಬಂದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್.ನಂ-6/2017 ಕಲಂ: 174 ಸಿ.ಅರ್.ಪಿ.ಸಿ

ದಿನಾಂಕ: 16/05/2017 ರಂದು ಬೆಳಿಗ್ಗೆ 09-30 ಗಂಟೆಗೆ ಪಿರ್ಯಾದಿ ಪಂಚಾಕ್ಷರಿ.ಬಿ ಬಿನ್ ಬಸವರಾಜು, 30 ವರ್ಷ, ಲಿಂಗಾಯಿತರು, ಮಾದಿಹಳ್ಳಿ, ಕಸಬಾ ಹೋಬಳಿ, ತಿಪಟೂರು ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,ನಾನು ದಿನಾಂಕ: 16/05/2017 ರಂದು ಬೆಳಿಗ್ಗೆ 08-00 ಗಂಟೆಯಲ್ಲಿ ತಿಪಟೂರು ಟೌನ್ ಹಾಸನ ಸರ್ಕಲ್ ನಲ್ಲಿರುವ ನಮ್ಮ ಅಂಗಡಿಯ ಬಳಿ ಇರುವಾಗ ನಮ್ಮ ಗ್ರಾಮದ ಅರುಣಾ ಎಂಬುವರು ನನಗೆ ಫೊನ್ ಮಾಡಿ ನಿಮ್ಮ ದೊಡ್ಡಪ್ಪನ ಮಗ ಸೋಮಶೇಖರ್ ತಿಪಟೂರು ಟೌನ್ ವಿದ್ಯಾನಗರದ ವಿಷ್ಣುಪ್ರಿಯಾ ಕಾಂಪ್ಲೆಕ್ಸ್ ಹಿಂಭಾಗದಲ್ಲಿ ಬಿದ್ದಿದ್ದು, ನಾವು ಹತ್ತಿರ ಹೋಗಿ ನೋಡಲಾಗಿ ಆತನು ಮೃತಪಟ್ಟಿರುತ್ತಾನೆ ಎಂದು ತಿಳಿಸಿದ್ದು, ನಾನು ನಮ್ಮ ಊರಿಗೆ ವಿಚಾರ ತಿಳಿಸಿ, ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ದೊಡ್ಡಪ್ಪನ ಮಗ ಸೋಮಶೇಖರ್ ರವರು ಮೃತಪಟ್ಟಿದ್ದು ಅವರಿಗೆ 50 ವರ್ಷ ವಯಸ್ಸಾಗಿದ್ದು, ಕಲ್ಪತರು ವಿಜ್ಞಾನ ಕಾಲೇಜಿನಲ್ಲಿ ಸೈಕಲ್ ಸ್ಟ್ಯಾಂಡ್ ನಲ್ಲಿ ಕೆಲಸ ಮಾಡಿಕೊಂಡಿದ್ದು ಮಾದಿಹಳ್ಳಿಯಲ್ಲಿ ವಾಸವಾಗಿರುತ್ತಾರೆ. ಪತ್ನಿ ಮತ್ತು ಮಕ್ಕಳು ಅವರ ತಾಯಿಯ ಊರಾದ ಮೈಸೂರು ಬಳಿ ಇರುವ ಮೂಗೂರಿನಲ್ಲಿದ್ದು, ಈ ವಿಚಾರವನ್ನು ಅವರಿಗೆ ತಿಳಿಸಿ ಮೃತಪಟ್ಟಿರುವ ಸ್ಥಳವನ್ನು ನೋಡಲಾಗಿ ಸೋಮಶೇಖರ್ ದಿನಾಂಕ:15/05/2017 ರಂದು ರಾತ್ರಿ ಯಾವುದೋ ವೇಳೆಯಲ್ಲಿ ಯಾವುದೋ ಕಾರಣಕ್ಕೋ ವಿಷದ ಔಷಧಿಯನ್ನು ಕುಡಿದು ಮೃತಪಟ್ಟಿರುತ್ತಾನೆ. ಆದ್ದರಿಂದ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಅವರ ಮನೆಯವರು ಮೈಸೂರಿನಲ್ಲಿರುವುದರಿಂದ ನಾನೇ ದೂರು ನೀಡಿರುತ್ತೇನೆ ಎಂದು ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 80/2017 ಕಲಂ 323,324,447,506, ಐಪಿಸಿ

ದಿನಾಂಕ-15/05/2017 ರಂದು ರಾತ್ರಿ 9-00 ಗಂಟೆಗೆ ಪಿರ್ಯಾದಿಯಾದ ಲಕ್ಷ್ಮಮ್ಮ ಕೋಂ ರಂಗಸ್ವಾಮಯ್ಯ, ಬೊಮ್ಮನಹಳ್ಳಿ, ಸಿರಿವಾರ ಅಂಚೆ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೋಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂಧರೆ ಬೊಮ್ಮನಹಳ್ಳಿ ಗ್ರಾಮದ ನಮ್ಮ ಜಮೀನಿನಲ್ಲಿ ನನ್ನ ಮತ್ತು ನನ್ನ ಗಂಡ ಹಾಗೂ ನನ್ನ ಮಾವನವರ ಮೇಲೆ ಇದೇ ಬೊಮ್ಮನಹಳ್ಳಿ ವಾಸಿ ರಂಗಸ್ವಾಮಯ್ಯ ಬಿನ್ ಲೇಟ್ ಸಿದ್ದಯ್ಯ ರವರು ಮಾರಾಣಾಂತಿಕ ಹಲ್ಲೆಯನ್ನು ನೆಡೆದಿರುತ್ತಾರೆ, ದಿನಾಂಕ-14/05/2017 ರ ಬಾನುವಾರದಂದು ಸಂಜೆ ಸುಮಾರು 5-00 ಗಂಟೆ ಸಮಯದಲ್ಲಿ ನನ್ನ ಜಮೀನಿನಲ್ಲಿ ನಾನು ಮತ್ತು ನನ್ನ ಪತಿಯವರಾದ  ರಂಗಸ್ವಾಮಯ್ಯ ಹಾಗೂ ಮಾವನವರಾದ ಬೈರಪ್ಪ ಉರುಫ್ ಬಾಗಪ್ಪನವರುಗಳು ನಮ್ಮ ತೋಟದ ತೆಂಗಿನ ಮರದಲ್ಲಿ ತೆಂಗಿನ ಕಾಯಿಗಳನ್ನು ಕೀಳಲು ಹೋಗಿದ್ದು ನಮ್ಮ ಮಾವನವರು ತೆಂಗಿನ ಕಾಯಿಗಳನ್ನು ಕೀಳುತ್ತಿರುವಾಗ ರಂಗಸ್ವಾಮಯ್ಯ ಬಿನ್ ಲೇಟ್ ಸಿದ್ದಯ್ಯ ರವರು ಏಕಾ ಏಕಿ ನಮ್ಮ ಜಮೀನಿನ ತೋಟಕ್ಕೆ ನುಗ್ಗಿ ನಮ್ಮ ಮಾವನವರಿಗೆ ದೊಣ್ಣೆಯಿಂದ ಹೊಡೆದರು, ನಂತರ ಅದನ್ನು ಕೇಳಲು ನನ್ನ ಯಜಮಾನರು ಹೋದಾಗ ರಂಗಸ್ವಾಮಯ್ಯನವರು ನನ್ನ ಯಜಮಾನರನ್ನು ಕೆಳಗೆ ತಳ್ಳಿ ಅವರ ಎದೆ ಮೇಲೆ ಕುಳಿತುಕೊಂಡು ಅವರ ಎದೆಯನ್ನು ಗುದ್ದಿ, ನಂತರ ಅವರ ಕತ್ತಿನ ಮೇಲೆ ಕುಳಿತು ನೀನು ಸಾಯಿ ಎಂದು ಹೇಳುತ್ತಿದ್ದರು, ಆದ್ದರಿಂದ ನಮ್ಮ ಯಜಮಾನರಿಗೆ ಉಸಿರಾಡಲು ತುಂಬ ತೊಂದರೆಯಾಗುತಿತ್ತು, ಆಗ ನಮ್ಮ ಯಜಮಾನರು ರಂಗಸ್ವಾಮಯ್ಯರವರನ್ನು ತಳ್ಳಿ ಅಲ್ಲಿಂದ ನಾವುಗಳು ಮನೆಯ ಕಡೆಗೆ ಓಡಿಹೋದೆವು, ನಮ್ಮ ಗ್ರಾಮದವಾರ ಗಂಗಬೈರಯ್ಯ ಬಿನ್ ಬೈರಪ್ಪ, ನಂಜಮ್ಮ ಕೋಂ ಬೈರಪ್ಪ ಉರುಫ್ ಬಾಗಪ್ಪನವರುಗಳು ಈ ಜಗಳವನ್ನು ನೋಡಿರುತ್ತಾರೆ, ನಂತರ ನಮ್ಮ ಗ್ರಾಮಸ್ಥರ ಸಲಹೆ ಮೇರೆಗೆ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದೇನೆ, ಇದೇ ರೀತಿ ಹಿಂದೆ ನಮ್ಮ ಜಮೀನಿಗೆ ಬಂದು ಗಲಾಟೆ ಮಾಡಿರುತ್ತಾರೆ, ದಿನಾಂಕ-21/02/2017 ರಂದು ನಾವು ನಿಮ್ಮ ಠಾಣೆಗೆ ಬಂದು ದೂರನ್ನು ಸಹ ನೀಡಿರುತ್ತೇವೆ, ಉಲ್ಲೇಖ ಸಂಖ್ಯೆ-38/2017 ರಲ್ಲಿ ನೊಂದಣಿಯಾಗಿರುತ್ತದೆ, ಅದರಂತೆ ಇದು ನಮಗೆ ಸಿವಿಲ್ ವಿಷಯವಾದ್ದರಿಂದ ನ್ಯಾಯಾಲಯದಲ್ಲಿ ಹೋಗಿ ಇಥ್ಯರ್ತ ಪಡಿಸಿಕೊಳ್ಳಿ ಎಂದು ಸಲಹೆ ನೀಡಿರುವ ಮೇರೆಗೆ ನಾನು ತುಮಕೂರಿನ ಸಿವಿಲ್ ನ್ಯಾಯಾಲಯದಲ್ಲಿ ದಾವೆಯನ್ನು ಊಡಿದ್ದು, ದಾವಾ ಸಂಖ್ಯೆ ಓಎಸ್ ನಂ-194/2017 ಆಗಿದ್ದು, ನ್ಯಾಯಾಲಯದಲ್ಲಿ ಪ್ರಕರಣವು ವಿಚಾರಣೆಯ ಹಂತದಲ್ಲಿ ಇರುತ್ತದೆ, ಆದರೂ ಸಹ ರಂಗಸ್ವಾಮಯ್ಯನವರು ಪದೇ ಪದೇ ಬಂದು ಈರೀತಿ ಗಲಾಟೆ ಮಾಡುತ್ತಿರುತ್ತಾರೆ, ಆದರೆ ಅವರು ನಮ್ಮನ್ನು ಮರಾಣಾಂತಿಕ ಹಲ್ಲೆ ಮಾಡಿ ಸಾಯಿಸುವ ಉದ್ದೇಶದಿಂದ ಬಂದಿರುತ್ತಾರೆ, ಆದ್ದರಿಂದ ರಂಗಸ್ವಾಮಯ್ಯ ರವರು ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ತಮ್ಮಲ್ಲಿ ಕೋರಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ 80/2017 ಕಲಂ 323,324,447,506, ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

.ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 81/2017 ಕಲಂ 354,504,ರೆ/ವಿ 34 ಐಪಿಸಿ

ದಿನಾಂಕ-15/05/2017 ರಂದು ರಾತ್ರಿ 9-45 ಗಂಟೆಗೆ ಪಿರ್ಯಾದಿಯಾದ ವೆಂಕಟಮ್ಮ ಕೋಂ ಲೇಟ್ ಸಿದ್ದಯ್ಯ, ಬೊಮ್ಮನಹಳ್ಳಿ, ಸಿರಿವಾರ ಅಂಚೆ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೊಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೇಂದರೆ ದಿನಾಂಕ-15/05/2017 ರಂದು ಸಂಜೆ 6-30 ರ ಸಮಯದಲ್ಲಿ ನಾನು ಮನೆಯ ಹತ್ತಿರ ಇದ್ದಾಗ ಬೈರಪ್ಪ @ ಬಾಗಪ್ಪನವರನ್ನು ಟೇಷನ್‌ ನಿಂದ ನಿಂಗೇಗೌಡ ಬಿನ್ ಲೇಟ್ ಬೈರಪ್ಪ ಮತ್ತು ಗಂಗಬೈರಯ್ಯ (ಗೌಡ) ಬಿನ್ ಬೈರಪ್ಪನವರು ಕರೆ ತಂದು ನನ್ನ ಮೇಲೆ ಅವ್ಯಾಚ್ಯಶಬ್ದಗಳಿಂದ ಸೂಳೆ ಮುಂಡೆ ಎಂದು ಬೈಯುತ್ತಾ ಇದ್ದರು, ನಾನು ಕೇಳಲು ಮುಂದದಾಗ ನನ್ನ ತಲೆ ಕೂದಲನ್ನು ಹಿಡಿದು, ನನಗೆ ಹೊಡೆದು, ನನ್ನ ಬಟ್ಟೆಯನ್ನು ಹರಿದು, ನನ್ನ ಹತ್ತಿರ ಏನನ್ನು ಕಿತ್ತುಕೊಳ್ಳಲು ಹಾಗುವುದಿಲ್ಲ ಎಂದು ಹೇಳುತ್ತಾ ಬಾಗಪ್ಪ ಅವನ ನಿಕ್ಕರ್‌ನ್ನು ಬಿಚ್ಚಿ ತೋರಿಸಲು ಮುಂದದಾಗ ಅಲ್ಲಿರುವ ಅಕ್ಕ-ಪಕ್ಕದ ಮಹಿಳೆರು ಬಂದು ನನ್ನನ್ನು ಅವರಿಂದ ರಕ್ಷಣೆ ಮಾಡಿ ಠಾಣೆಗೆ ಕರೆ ತಂದಿರುತ್ತಾರೆ, ಮತ್ತು ಎಲ್ಲಾ ಗಲಾಟೆಗೆ ಮುಖ್ಯ ಕಾರಣ ನಿಂಗೇಗೌಡ ಎಂದುವವನು ಮುಖ್ಯ ಕಾರಣವಾಗಿರುತ್ತಾನೆ, ಆದ್ದರಿಂದ ಈ ಮೂರು ಜನರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 55 guests online
Content View Hits : 322817