lowborn CRIME INCIDENTS 13-05-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

CRIME INCIDENTS 13-05-17

ಹೊನ್ನವಳ್ಳಿ ಪೊಲೀಸ್ ಠಾಣೆ ಮೊನಂ- 57/2017 ಕಲಂ: 323. 324. 506  ರೆ/ವಿ 34 ಐಪಿಸಿ

ದಿನಾಂಕ:12/5/2017 ರಂದು ಸಂಜೆ 5-00 ಗಂಟೆಗೆ ಪಿರ್ಯಾದಿದಾರರಾದ ರಾಧಮ್ಮ ಕೊಂ ಮೂರ್ತಿ ಬಿದರೆಗುಡಿ ಕಾಲೋನಿರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಆಂಶವೆನೆಂದರೆ ಬಿದರೆಗುಡಿ ಕಾಲೋನಿಯ ಯೋಗಿಶ ಬಿನ್‌ ಜವರಪ್ಪ ಹಾಗೂ ಗಾರಮ್ಮ ಕೋಂ ರಾದಮ್ಮರವರುಗಳು ಜಮೀನಿನ ವಿಚಾರವಾಗಿ ಜಗಳವಿದ್ದು ದಿನಾಂಕ:5/5/2017 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಇದ್ದಕ್ಕಿದ್ದ ಹಾಗೇ ಪಿರ್ಯಾದಿ ಮೇಲೆ ಜಗಳ ತಗೆದು ಪಿರ್ಯಾದಿಯ ಮನೆಯ ಹತ್ತಿರ  ಯೋಗಿಶ  ದೊಣ್ಣೆಯಿಂದ ಪಿರ್ಯಾದಿಯ ಎಡರಟ್ಟೆಗೆ  ಹೊಡೆದಿದ್ದು ಮತ್ತು ಗೌರಮ್ಮ ಪಿರ್ಯಾದಿಯ ಜುಟ್ಟನ್ನು ಹಿಡಿದು ಎಳೆದಾಡಿ ಹೊಡೆದಿದ್ದು  ಜಗಳವನ್ನು ಬಿಡಿಸಲು ಬಂದ ಮಗನಾದ ಅನುರವರಿಗೂ ಕೂಡ ಯೋಗಿಶ ಹಲ್ಲಿನಿಂದ ಎಡಗೈ ರಟ್ಟೆಗೆ ಕಚ್ಚಿರುತ್ತಾನೆ ಹಾಗೂ ಮತ್ತೊಬ್ಬ ಮಗನಾದ ಅರುಣನಿಗೂ ಕೂಡ ದೊಣ್ಣೆಯಿಂದ ಹೊಡೆದಿರುತ್ತಾನೆ ಮತ್ತು ಜಮೀನಿನ ತಂಟೆಗೆ ಬಂದರೆ ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿರುತ್ತಾನೆ  ಘಟನೆ ನಡೆದ ದಿನದಿಂದ ಇಂದಿನವರೆಗೂ ಆರೋಪಿತರುಗಳ ಕಡೆಯವರುಗಳು ಕೂಡ ರಾಜಿಗೆ ಬಾರದೇ ಇದ್ದುದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ಮೇಲ್ಕಂಡ ಆರೋಪಿಗಳ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಠಾಣಾ ಮೊ ನಂ 57/2017 ಕಲಂ: 323. 324. 506  ರೆ/ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆನೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ.90/2017 ಕಲಂ. 380, 457 ಐಪಿಸಿ.

ದಿನಾಂಕ-12-05-2017 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಪಿರ್ಯಾದಿ ಸುರೇಶ್‌ @ ಹನುಮಂತಯ್ಯ ಬಿನ್‌ ಹನುಮಂತಯ್ಯ, 44 ವರ್ಷ, ವಕ್ಕಲಿಗರು, ಜಿರಾಯ್ತಿ, ಬೋರೇಗೌಡನಕೊಪ್ಪಲು, ಹುಲಿಯೂರುದುರ್ಗ ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-11-05-2017 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ ನಾನು ಕುಟುಂಬ ಸಮೇತವಾಗಿ ನಮ್ಮ ಮನೆಗೆ ಬೀಗ ಹಾಕಿಕೊಂಡು ನಮ್ಮ ಸಂಭಂದಿಕರ ಮನೆಗೆ ಬೆಂಗಳೂರಿಗೆ ಹೋಗಿದ್ದೆವು. ದಿನಾಂಕ-12-05-2017 ರಂದು ಬೆಳಿಗ್ಗೆ 6-30 ಗಂಟೆ ಸಮಯದಲ್ಲಿ ನಮ್ಮ ಅಕ್ಕನವರು ಕರೆಮಾಡಿ ಮನೆಯ ಬಾಗಿಲನ್ನು ಹೊಡೆದು ಮನೆಯ ಒಳಗೆ ಹೋಗಿ ಯಾರೋ ಕಳ್ಳತನ ಮಾಡಿರುತ್ತಾರೆಂದು ತಿಳಿಸಿ, ನೀನು ಕೂಡಲೇ ಊರಿಗೆ ಬಾ ಎಂದು ತಿಳಿಸಿದರು. ನಾನು ಬೆಂಗಳೂರಿನಿಂದ ಬೆಳಿಗ್ಗೆ 8-30 ಗಂಟೆಗೆ ಊರಿಗೆ ಬಂದು ಮನೆಯನ್ನು ನೋಡಲಾಗಿ ಮನೆಯ ಬಾಗಿಲು ತೆರೆದಿದ್ದು ಮನೆಯ ಬಾಗಿಲು ಮತ್ತು ಡೋರನ್ನು ಯಾವುದೋ ಆಯುಧದಿಂದ ಮೀಟಿ ಮನೆಯೊಳಗೆ ಹೋಗಿ ರೂಮಿನಲ್ಲಿದ್ದ ಬೀರುವಿನ ಬಾಗಿಲನ್ನು ತೆಗೆದು ಬೀರುವಿನ ಸೀಕ್ರೇಟ್‌ ಕಪಾರ್ಟ್‌ನ್ನು ಮುರಿದು ನನ್ನ 50,000/- ರೂ ನಗದು ಹಣ, ನಮ್ಮ ಪತ್ನಿಯ ಸ್ತ್ರೀ ಶಕ್ತಿ ಸಂಘದ 25,000/- ನಗದು ಹಣ ಒಟ್ಟು 75,000/- ಹಣ ಮತ್ತು ಚಿನ್ನದ ವಡವೆಗಳಾದ ಮಕ್ಕಳ ಕೊರಳ ಚೈನು – 15 ಗ್ರಾಂ, ಹ್ಯಾಂಗಿಂಗ್ಸ್‌ - 15 ಗ್ರಾಂ, ಮತ್ತು ಲಾಂಗ್‌ ಚೈನ್‌ - 42 ಗ್ರಾಂ, 03 ಉಂಗುರ - 13 ಗ್ರಾಂ, ಓಲೆ – 5 ಗ್ರಾಂ ಒಟ್ಟು 90 ಗ್ರಾಂ ಚಿನ್ನವನ್ನು ಮತ್ತು ಹಣವನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ತಾವುಗಳು ಸ್ಥಳಕ್ಕೆ ಬಂದು ಸ್ಥಳ ಪರಿಶೀಲಿಸಿ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ನೀಡಿದ ದೂರಿನ ಅಂಶವಾಗಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.48/2017, ಕಲಂ 166,167,419,447,465,467,427,471,341,504,506 IPC..

ದಿನಾಂಕ:12/05/2017 ರಂದು ಸಂಜೆ 05:30 ಗಂಟೆಗೆ ಮಧುಗಿರಿ ಡಿವೈಎಸ್‌ಪಿ ಸಾಹೇಬರವರ ಕಛೇರಿ ಸಂಖ್ಯೆ:ಎಂ.ಎಸ್.ಡಿ/ಸಿಸಿ/80/2017 ರ ಜ್ಞಾಪನ ಪತ್ರದೊಂದಿಗೆ ಬಂದ ಮಧುಗಿರಿ ಎ.ಸಿ.ಜೆ. & ಜೆ.ಎಂ.ಎಫ್.ಸಿ. ನ್ಯಾಯಾಲಯದ ಪಿ.ಸಿ.ಆರ್.ನಂ.18/2017 ರ ಸಾರಾಂಶವೇನೆಂದರೆ, ಮಧುಗಿರಿ ತಾಲ್ಲೂಕು ಮಿಡಿಗೇಶಿ ಹೋಬಳಿ ಸತ್ತಿಗಾನಹಳ್ಳಿ ಗ್ರಾಮದ ಸರ್ವೇ ನಂ:17/5 ರಲ್ಲಿ 0.07 ಗುಂಟೆ ಮತ್ತು ಸರ್ವೇ ನಂ:17/6 ರಲ್ಲಿ 0.02 ಗುಂಟೆ ಜಮೀನನನ್ನು 1)ತಿಮ್ಮಯ್ಯ 2) ಗೋವಿಂದಪ್ಪ 3) ಭೀಮಯ್ಯ @ ಸಣ್ಣಭೀಮಯ್ಯ 4) ರಂಗಶಾಮಯ್ಯ ರವರುಗಳು 1/4 ರಂತೆ ಸಮನಾಗಿ ಅನುಭವಿಸಿಕೊಂಡು ಹೋಗುತ್ತಿದ್ದು ನಂತರದ ದಿನಗಳಲ್ಲಿ ಈ ಕೇಸಿನ 1ನೇ ಆರೋಪಿಯಾದ ಹನುಮಂತಪ್ಪ ಬಿನ್ ಲೇಟ್ ಭೀಮಣ್ಣ ಸದರಿ ಜಮೀನುಗಳ ದಾಖಲಾತಿಗಳನ್ನು ಫೋರ್ಜರಿ ಮಾಡಿ ಸೃಷ್ಟಿಸಿಕೊಂಡು ಫಿರ್ಯಾದಿಗೆ ಮೊಸ ಮಾಡಿರುತ್ತಾರೆಂತಾ ಹಾಗೂ ಎಲ್ಲಾ ಅರೋಪಿತರುಗಳು ಫಿರ್ಯಾದಿಗೆ ಆವಾಚ್ಯ ಶಬ್ದಗಳಿಂದ ಬೈದು ಪ್ರಾಣಬೆದರಿಕೆ ಹಾಕಿ ತಡೆದು ಸದರಿ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿರುತ್ತಾರೆಂತಾ ಇತ್ಯಾದಿಯಾಗಿ ಪಿ.ಸಿ.ಆರ್.ದೂರಿನ ಅಂಶದ ಮೇರೆಗೆ ಕೇಸು ದಾಖಲು ಮಾಡಿರುತ್ತೆ..

Tumkur Town Cr No.81/2017 u/s 379 IPC

ದಿನಾಂಕ 12/05/2017 ರಂದು ಸಂಜೆ 04:00 ಗಂಟೆಯಲ್ಲಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಪಿರ್ಯಾದುದಾರರು ದಿನಾಂಕ 07/05/2017 ರಂದು ಬೆಳಿಗ್ಗೆ 11:00 ಗಂಟೆಯಲ್ಲಿ ಪಿರ್ಯಾದುದಾರರು ಬೆಳಗಾಂ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದಲ್ಲಿ ಹುಬ್ಬಳ್ಳಿ ನಾನ್‌ಸ್ಟಾಪ್‌‌ ಬಸ್‌ನ್ನು ಹತ್ತುವ ಸಮಯದಲ್ಲಿ ಇಬ್ಬರು ಹೆಂಗಸರು ಹಾಗೂ 7 - 8 ವರ್ಷದ  ಒಬ್ಬ ಹುಡುಗ ಪಿರ್ಯಾದಿ ಬಸ್‌ ಹತ್ತುವಾಗ ಗಡಿಬಿಡಿ ಮಾಡಿದ್ದು, ಪಿರ್ಯಾದಿಯವರು ಅವರನ್ನು ಯಾಕೆ ಈ ರೀತಿ ಗಡಿಬಿಡಿ ಮಾಡುತ್ತಿದ್ದಿರೆಂದು ಪ್ರಶ್ನಿಸಿದ್ದು, ಅವರು ಬಸ್‌ನಲ್ಲಿ ಸೀಟ್‌ ಇದೆಯೋ ಇಲ್ಲಯೋ ಎಂದು ನೋಡಲು ಹತ್ತುತ್ತಿದ್ದೇನೆಂದು ತಿಳಿಸಿ, ಆ ಮೂರು ಜನ  ಅಲ್ಲಿಯೇ ಬಸ್‌ನ್ನು ಇಳಿದು ಹೋಗಿದ್ದು, ಪಿರ್ಯಾದುದಾರರು ಬೆಳಗಾಂ ನಿಂದ ತುಮಕೂರಿಗೆ ಬಂದು ಬ್ಯಾಗಿನಲ್ಲಿದ್ದ ಪರ್ಸನ್ನು ಪರಿಶೀಲಿಸಿದಾಗ ಪರ್ಸ್‌ನಲ್ಲಿದ್ದ 100 ಗ್ರಾಂ ನಷ್ಟು ಚಿನ್ನದ ಮತ್ತು  ಬೆಳ್ಳಿಯ ಕಾಲ್ಚೇನು ಕಳುವಾಗಿರುವುದು ಪಿರ್ಯಾದಿಯವರು ಗಮನಕ್ಕೆ ಬಂದಿರುತ್ತೆ. ಪಿರ್ಯಾಧಿಯವರು ಬೆಳಗಾಂ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದಲ್ಲಿ ಬಸ್‌ ಹತ್ತುವ ಸಮಯದಲ್ಲಿ ಗಡಿಬಿಡಿ ಮಾಡಿದ ಇಬ್ಬರು ಹೆಂಗಸರು ಹಾಗೂ ಒಬ್ಬ ಹುಡುಗ  ಆಭರಣಗಳನ್ನು ಕಳವು ಮಾಡಿರುವುದು ಗಮನಕ್ಕೆ ಬಂದಿರುತ್ತದೆ. ಅವರನ್ನು ಪಿರ್ಯಾದಿಯವರು ನೋಡಿದ್ದು, ಮತ್ತೆ ನೋಡಿದರೆ ಗುರುತಿಸುತ್ತಾರೆ. ಅವರುಗಳ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ. ನಂ. 81/2017 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ಪ್ರ. ವ. ವರದಿಯನ್ನು ಘನ ನ್ಯಾಯಾಲಯಕ್ಕೆ ಹಾಗೂ ನಕಲನ್ನು ಇಲಾಖಾ ಮೇಲಾಧಿಕಾರಿಗಳಿಗೆ ತುರ್ತು ವರದಿಯೊಂದಿಗೆ ಈ ಮೇಲ್‌‌ ಮೂಲಕ ಕಳುಹಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಯುಡಿಆರ್ ನಂ 11/2017 ಕಲಂ 174 ಸಿಆರ್‌ಪಿಸಿ.

ದಿನಾಂಕ-12/05/2017 ರಂದು ರಾತ್ರಿ 7-45 ಗಂಟೆಗೆ ಪಿರ್ಯಾದಿಯಾದ ಶೋಭರಾಣಿ ಬಿ.ಆರ್ ಕೋಂ ಸೋಮಶೇಖರ್ ಎಂ, 24 ವರ್ಷ, ಒಕ್ಕಲಿಗರು, ಗೃಹಿಣಿ, ಪುಲ್ಲಸಂದ್ರ, ಗುಳೂರು ಹೋಬಳಿ, ತುಮಕೂರು ತಾಲ್ಲೋಕ & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿದ ದೂರಿನಾಂಶವೇನಂಧರೆ ನಾನು ಈಗ್ಗೆ ಸುಮಾರು 5 ವರ್ಷಗಳ ಹಿಂದೆ ಪುಲ್ಲಸಂದ್ರ ಗ್ರಾಮದ ವಾಸಿಯಾದ ಮಲ್ಲಯ್ಯ ರವರ ಮಗನಾದ ಸೋಮಶೇಖರ್,ಎಂ ರವರೊಂದಿಗೆ ಮದುವೆಯಾಗಿದ್ದು, ಸೋಮಶೇಖರ್,ಎಂ ರವರಿಗೆ ಸುಮಾರು 32 ವರ್ಷ ವಯಸ್ಸಾಗಿದ್ದು, ನಮಗೆ ಮನೋಜ್ ಎಂಬ ಎರಡು ವರ್ಷದ ಮಗ ಇರುತ್ತಾನೆ. ನನ್ನ ಗಂಡ ಸೋಮಶೇಖರ್,ಎಂ ರವರು ಈಗ್ಗೆ ಸುಮಾರು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಸಹ ಹೊಟ್ಟೆ ನೋವು ವಾಸಿಯಾಗಿರಲಿಲ್ಲ. ದಿನಾಂಕ:10-05-2017 ರಂದು ನಾನು ನಮ್ಮ ತವರು ಮನೆಯಾದ ಮಧುಗಿರಿ ತಾಲ್ಲೋಕಿನ ಬಸವನಹಳ್ಳಿ ಗ್ರಾಮಕ್ಕೆ ಹೋಗಿದ್ದು, ದಿನಾಂಕ-12-05-2017 ರಂದು ಅಂದರೆ ಇದೇ ದಿವಸ ಮಧ್ಯಾಹ್ನ  ಸುಮಾರು 2-00 ಗಂಟೆ ಸಮಯದಲ್ಲಿ ನಮ್ಮ ಭಾವರಾದ ನಾಗರಾಜು ಎಂ ರವರು ನನಗೆ ಫೋನ್ ಮಾಡಿ ನನ್ನ ಗಂಡ ಸೋಮಶೇಖರ್,ಎಂ ರವರು ಈ ದಿನ ನಿಮ್ಮ ಮಾಳಿಗೆ ಮನೆಯ ಮೇಲ್ಛಾವಣಿಗೆ ಹಾಕಿರುವ ಮರದ ತೀರಿಗೆ ಯಾವುದೋ ಒಂದು ಬಟ್ಟೆಯಿಂದ ನೇಣು ಬಿಗಿದುಕೊಂಡಿರುತ್ತಾನೆ. ಸೋಮಶೇಖರ್,ಎಂ ರವರು ನೇಣು ಬಿಗಿದುಕೊಂಡಿದ್ದನ್ನು ನೋಡಿದ ನಾನು ಸಂಬಂಧಿಕರಾದ ಕರೀಗೌಡ, ಮೋಹನ್ ಕುಮಾರ್ ರವರು ಸಹಾಯದಿಂದ ಸುಮಾರು 1-30 ಗಂಟೆಗೆ ಸೋಮಶೇಖರ್,ಎಂ ರವರಿಗೆ ಇನ್ನೂ ಜೀವವಿರಬಹುದೆಂದು ನೇಣಿನಿಂದ ಕೆಳಗೆ ಇಳಿಸಿ ಸ್ಥಳಕ್ಕೆ ಬಂದ ಆಂಬುಲೆನ್ಸ್ ವಾಹನದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರಿಶೀಲಿಸಿದ ವೈದ್ಯಾಧಿಕಾರಿಗಳು ಸೋಮಶೇಖರ್,ಎಂ ರವರು ಮೃತಪಟ್ಟಿರುತ್ತಾರೆಂತ ವೈದ್ಯರು ತಿಳಿಸಿದರೆಂತಾ ನನಗೆ ಪೋನ್ ಮಾಡಿ ತಿಳಿಸಿದರು, ನಂತರ ನಾನು ತುಮಕೂರಿಗೆ ಬಂದು ನೋಡಲಾಗಿ ನನ್ನ ಗಂಡ ಸೋಮಶೇಖರ್,ಎಂ ರವರು ಮೃತಪಟ್ಟಿರುವುದು ನಿಜವಾಗಿತ್ತು. ನನ್ನ ಗಂಡ ಸೋಮಶೇಖರ್‌,ಎಂ ರವರು ತನಗೆ ಬರುತ್ತಿದ್ದ ಹೊಟ್ಟೆ ನೋವಿನ ಬಾಧೆ ತಾಳಲಾರದೇ, ಹೊಟ್ಟೆ ನೋವು ವಾಸಿಯಾಗುವುದಿಲ್ಲವೆಂತಾ ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ಯಾವುದೋ ಒಂದು ಬಟ್ಟೆಯಿಂದ ನಮ್ಮ ಮನೆಯ ಮೇಲ್ಛಾವಣೆಗೆ ಅಳವಡಿಸಿರುವ ಮರದ ತೀರಿಗೆ ನೇಣು ಬಿಗಿದುಕೊಂಡು ಮೃತಪಟ್ಟಿರುತ್ತಾನೆಯೇ ವಿನಃ ಅವರ ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿರುವುದಿಲ್ಲ. ಆದ್ದರಿಂದ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನನ್ನ ಗಂಡ ಸೋಮಶೇಖರ್,ಎಂ ರವರ ಮೃತ ದೇಹವು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ ಎಂದು ನೀಡಿದ ದೂರನ್ನು ಪಡೆದು ಠಾಣಾ ಯುಡಿಆರ್ ನಂ 11/2017 ಕಲಂ 174 ಸಿಆರ್‌ಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 74 guests online
Content View Hits : 274884