lowborn Crime incidents 12-05-2017 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime incidents 12-05-2017

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  53/2017   ಕಲಂ: 78 Cls 3 Kp Act

ದಿನಾಂಕ:10/05/2017 ರಂದು ಸಂಜೆ 5:30 ಗಂಟೆ ಸಮಯದಲ್ಲಿ ವೈ ಎನ್ ಹೊಸಕೋಟೆ ಠಾಣಾ ಸರಹದ್ದು ಓಬಳಾಪುರ ಗ್ರಾಮದ ಅರಳೀಕಟ್ಟೆ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಯುತ್ತಿದೆ ಎಂತ ಬಂದ ಖಚಿತ ವರ್ತಮಾನದ ಮೇರೆಗೆ ಪಂಚಾಯ್ತರನ್ನು ಬರಮಾಡಿಕೊಂಡು ಸಿಬ್ಬಂದಿಯೊಂದಿಗೆ  ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ  ಓಬಳಾಪುರ ಗ್ರಾಮದ ಅರಳೀಕಟ್ಟೆ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಒಬ್ಬ  ಆಸಾಮಿಯು  ಸಾರ್ವಜನಿಕರನ್ನು ಗುಂಪು ಸೇರಿಸಿಕೊಂಡು ಬನ್ನಿ 1 ರೂಗೆ 70 ರೂ ಕೊಡುತ್ತೇವೆ ನಿಮ್ಮ ಅದೃಷ್ಟದ  ನಂಬರ್ ಅನ್ನು ಬರೆಸಿಕೊಳ್ಳಿ ಎಂತ ಕೂಗುತ್ತಾ  ಸಾರ್ವಜನಿಕರಿಂದ ಹಣವನ್ನು ಪಣಕ್ಕೆ ಕಟ್ಟಿಸಿಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿದ್ದು   ನಂತರ ನಾನು ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ನಡೆಸಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಲ್ಲಿ ನೆರೆದಿದ್ದ ಜನರು ಜನರು ಓಡಿ ಹೋಗಿದ್ದು ,ಸಾರ್ವಜನಿಕರಿಂದ ಹಣವನ್ನು ಪಣಕ್ಕೆ ಕಟ್ಟಿಸಿಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿದ್ದ   ಆಸಾಮಿಯನ್ನು ಹಿಡಿದು  ಸದರಿ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಹರೀಶ ಬಿನ್ ಹನುಮಂತರಾಯಪ್ಪ, 22 ವರ್ಷ, ನಾಯಕ ಜನಾಂಗ, ಕೂಲಿಕೆಲಸ, ಓಬಳಾಪುರ ಪಾವಗಡ ತಾ||ಎಂತ ತಿಳಿಸಿದ್ದು ಆತನ ಬಳಿ ಇದ್ದ ಮಟ್ಕಾ ಜೂಜಾಟಕ್ಕೆ ಕಟ್ಟಿಸಿಕೊಂಡಿದ್ದ  1050-00 ರೂ ನಗದು ಹಣ, ಮಟ್ಕಾ ನಂಬರ್ ಗಳನ್ನು ಬರೆದಿರುವ ಒಂದು  ಮಟ್ಕಾ ನಂಬರ್ ಬರೆದಿರುವ  ಚೀಟಿಗಳನ್ನು  ಹಾಗೂ ಒಂದು ಲೆಡ್ ಪೆನ್ ನ್ನು ಪಂಚರ ಸಮಕ್ಷಮ ಪಂಚನಾಮೆ ಮುಖೇನ ವಶಪಡಿಸಿಕೊಂಡು   ಸ್ಥಳದಲ್ಲಿ ಸಿಕ್ಕ  ಆಸಾಮಿಯನ್ನು ಸ್ಥಳದಿಂದ ಕಳುಹಿಸಲಾಗಿರುತ್ತದೆ ,ನಂತರ ಠಾಣೆಗೆ ಸಂಜೆ 6-15  ಗಂಟೆಗೆ ವಾಪಾಸ್ ಬಂದು ಠಾಣಾ ಎನ್ ಸಿ ಆರ್ :56/2017 ರಲ್ಲಿ ನೊಂದಾಯಿಸಿ ಈ ಪ್ರಕರಣವು ಅಸಂಜ್ಞೇಯ ಅಪರಾಧವಾಗಿರುವುದರಿಂದ ಮುಂದಿನ ತನಿಖೆ ಕೈಗೊಳ್ಳಲು ಘನ ನ್ಯಾಯಾಲಯವು ಸಂಜ್ಞೇಯ ಅಪರಾಧವಾಗಿ ಪರಿಗಣಿಸಿ ಕಲಂ:78 ಕ್ಲಾಸ್ 3  ಕೆ.ಪಿ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಅನುಮತಿ ನೀಡಲು ಘನ ನ್ಯಾಯಾಲಯದಲ್ಲಿ ಕೋರಿದ್ದು ದಿನಾಂಕ:11/05/2017  ರಂದು ನ್ಯಾಯಲಯವು ಅನುಮತಿ ಆದೇಶ ನೀಡಿದ್ದರಿಂದ ದಿನಾಂಕ:11/05/2017 ರಂದು ಬೆಳಿಗ್ಗೆ  11 :30 ಗಂಟೆಗೆ ಆಸಾಮಿ  ವಿರುದ್ದ ಠಾಣಾ ಮೊ.ನಂ:53/2017 ಕಲಂ:78 ಕ್ಲಾಸ್ 3 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ  ದಾಖಲಿಸಿರುತ್ತದೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 92/2017 ಕಲಂ;379 ಐಪಿಸಿ.

ದಿನಾಂಕ-11-05-2017 ರಂದು ಸಂಜೆ 4-30 ಗಂಟೆ ಸಮಯದಲ್ಲಿ ಪಿರ್ಯಾದಿ ದೇವರಾಜು ಬಿನ್‌ ಲೇಟ್‌ ಹನುಮಯ್ಯ, 55 ವರ್ಷ, ವಕ್ಕಲಿಗರು, ಜಿರಾಯ್ತಿ, ಕೆ.ಹೊನ್ನಮಾಚನಹಳ್ಳಿ, ಅಮೃತೂರು ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-07-05-2017 ರಂದು ರಾತ್ರಿ ನಾನು ನಮ್ಮ 04 ಮೇಕೆಗಳನ್ನು ನಮ್ಮ ಮನೆಯ ಪಕ್ಕ ಕಟ್ಟಿಹಾಕಿ ಮಲಗಿದ್ದೆನು. ಮಧ್ಯರಾತ್ರಿ ಯಾವುದೋ ವೇಳೆಯಲ್ಲಿ ಯಾರೋ ಕಳ್ಳರು 40,000/- ರೂ ಬೆಲೆ ಬಾಳುವ ನಮ್ಮ 04 ಮೇಕೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ನಾನು ಇಲ್ಲಿಯ ವರೆವಿಗೆ ಮೇಕೆಗಳಿಗಾಗಿ ಹುಡುಕಾಡಿ ಎಲ್ಲಿಯೂ ಸಿಗದ ಕಾರಣದಿಂದಾಗಿ ಈ ದಿವಸ ಠಾಣೆಗೆ ತಡವಾಗಿ ಬಂದು ದೂರು ನೀಡುತ್ತಿದ್ದು, ಕಳವಾಗಿರುವ ನಮ್ಮ 04 ಮೇಕೆಗಳನ್ನು ಮತ್ತು ಕಳ್ಳರನ್ನು ಪತ್ತೆಮಾಡಿಕೊಡಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ

ಹೆಬ್ಬೂರು  ಪೊಲೀಸ್ ಠಾಣಾ ಮೊ.ನಂ. 78/2017 ಕಲಂ 420,408,406 ರೆ/ವಿ 34 ಐಪಿಸಿ.

ದಿನಾಂಕ-11/05/2017 ರಂದು ಸಾಯಿಂಕಾಲ 6-30 ಗಂಟೆಗೆ ಪಿರ್ಯಾದಿಯಾದ ಮಧುಸೂದನ, ಮೇಲ್ವಿಚಾರಕರು, ಡಿ.ಸಿ.ಸಿ.ಬ್ಯಾಂಕ್ (ನಿ) ಎಸ್.ಎಸ್. ಪುರಂ ಶಾಖೆ, ತುಮಕೂರು ಪೋನ್ ನಂ 9900040892 ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿದ ದೂರಿನಾಂಶವೇನೆಂದರೆ,  ಡಿ.ಸಿ.ಸಿ. ಬ್ಯಾಂಕ್‌ನ ನಾಗವಲ್ಲಿ ಶಾಖೆಯಲ್ಲಿ ಡಿ. ಮೋಹನ್ ಕುಮಾರ್ ಬಿನ್ ಬಿ.ಎಸ್. ಧನಂಜಯ್ಯಚಾರ್ ಬಳ್ಳಗೆರೆ ಗ್ರಾಮ,ತುಮಕೂರು ತಾಲ್ಲೋಕ್, ಆದ ಇವರನ್ನು ಚಿನ್ನಾಭರಣ ಮೌಲಾಂಕಿದರರಾಗಿ ನಿಯೋಜಿಸಿದ್ದು, ಸದರಿಯವರು ಬ್ಯಾಂಕಿಗೆ ಬರುವ ಚಿನ್ನಾಭರಣ ಸಾಲಗಾರರ ಆಭರಣಗಳನ್ನು ಪರೀಕ್ಷಿಸಿ ದೃಢೀಕರಿಸಿದ ನಂತರ ಸದರಿ ಚಿನ್ನಾಭರಣಗಳನ್ನು ಇಟ್ಟಿಕೊಂಡು ಶಾಖಾಧಿಕಾರಿಯವರು ಚಿನ್ನಾಭರಣ ಸಾಲ ನೀಡುವುದು ವಾಡಿಕೆಯಾಗಿರುತ್ತದೆ. ಅದರೆ ದಿನಾಂಕ-15/06/2015 ರಂದು ಚಿನ್ನಾಭರಣ ಮೌಲಾಂಕಿದರರಾಗಿಡಿ. ಮೋಹನ್ ಕುಮಾರ್ ರವರು, ನೂರುಲ್ಲಾಖಾನ್ ಬ್ಯಾಂಕಿನ ಸಹಾಯಕರು, ಮತ್ತು ರಾಜಶೇಖರ್ (ಗ್ರಾಹಕರು) ಇವರುಗಳ ಹೆಸರುನಲ್ಲಿ ನಕಲಿ ಚಿನ್ನಾಭರಣಗಳನ್ನು  ಅಸಲು ಚಿನ್ನಾಭರಣಗಳೆಂತ ದೃಡೀಕರಿಸಿ ಬ್ಯಾಂಕಿನಲ್ಲಿ ಈ ಕೆಳಕಂಡವರುಗಳಿಂದ  ಅಡವಿರಿಸಿ  ಒಟ್ಟು ರೂ 4.65 ಲಕ್ಷ  ಗ್ರಾಹಕರಿಗೆ ಚಿನ್ನಾಭರಣ ಸಾಲ ಮಂಜೂರು ಮಾಡಿಸಿ  ಬ್ಯಾಂಕಿಗೆ ವಂಚಿಸಿರುತ್ತಾರೆ. ಅದ್ದರಿಂದ  ಉಲ್ಲೇಖದ ಅದೇಶದ ರೀತ್ಯಾ ಸದರಿಯವರುಗಳ ವಿರುದ್ದ  ಕ್ರಮ ಜರುಗಿಸುವಂತೆ ಸೂಚಿಸಿರುವ ಹಿನ್ನಲೆಯಲ್ಲಿ ಚಿನ್ನಾಭರಣ ಮೌಲಾಂಕಿದಾರರು  ಇವರಿಗೆ ಕುಮ್ಮಕು ನೀಡಿ ಈ ಕೃತ್ಯ ವೆಸಗಲು ಸಹಾಯ ಮಾಡಿದಂತಹ  ಇತರೆ ಇಬ್ಬರು ವ್ಯಕ್ತಿಗಳು ಒಟ್ಟು ಮೂವರುಗಳ ಮೇಲೆ  ಕ್ರಿಮಿನಲ್ ಮೊಕದ್ದಮೆಯನ್ನು ಸಂಬಂದಿಸಿದ ಠಾಣೆಯಲ್ಲಿ ದಾಖಲಿಸಲು ಬ್ಯಾಂಕಿನ ಅಡಳಿತ ವಿಭಾಗದ ಪತ್ರದ ಸಂಖ್ಯೆ 177/178/179/2017-18 ದಿನಾಂಕ 20/04/2017 ರಂದು ಅಧಿಕಾರ ನೀಡಿಲಾಗಿದೆ. ಅದ್ದರಿಂದ  ನೂರುಲ್ಲಾ ಖಾನ್, ಹೆಚ್, ಬಿನ್ ಆಬೀಬುಲ್ಲಾ ಖಾನ್, ಕೃಷ್ಣಾ ನಗರ, ತುಮಕೂರು, ಇವರು 1) ಖಾತೆ ನಂ 2096-47,000=00 2) 2108- 55,000=00, 3) 2120 – 45,000=00, 4) 2067- 60,000=00 5) 2057- 44,000=00 6) 2011- 40,000=00 7) 1945 – 42,000=00 8) 1928-45,000=00 9) 1917- 32,000=00 ಮತ್ತು ಎಸ್.ಹೆಚ್. ರಾಜಶೇಖರ ಬಿನ್ ಹುಚ್ಚಪ್ಪ, ಶಿರಾ ಗೇಟ್, ತುಮಕೂರು ಇವರು ಖಾತೆ ನಂ 2090-55,000=00 ರೂ ಒಟ್ಟು 4,65,000=00 ರೂ. ಗಳನ್ನು ದಿ: 27/03/2017 ರಂದು  ಬ್ಯಾಂಕಿಗೆ ಅಸಲು ಮತ್ತು ಬಡ್ಡಿ ಸಮೇತ ಹಣವನ್ನು  ಪಾವತಿಸಿರುತ್ತಾರೆ. ಅದ್ದರಿಂದ ನಾಗವಲ್ಲಿ ಶಾಖೆಯ ಚಿನ್ನಾಭರಣ ಮೌಲಾಂಕಿದಾರರಾದ  ಶ್ರೀ ಮೋಹನ್ ಕುಮಾರ್ ಮತ್ತು ಎಸ್.ಹೆಚ್. ರಾಜಶೇಖರ್ ಮತ್ತು ಬ್ಯಾಂಕಿನ ಸಿಬ್ಬಂದಿಯಾದ  ಹೆಚ್. ನೂರುಲ್ಲಾ ಖಾನ್ ಇವರ ವಿರುದ್ದ  ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಮತ್ತು ದಾಖಲೆಗಳನ್ನು ಪಡೆದು ತಡವಾಗಿ ಬಂದು ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಠಾಣಾ ಮೊ.ನಂ. 78/2017 ಕಲಂ 420,408,406 ರೆ/ವಿ 34 ಐಪಿಸಿ ರೀತ್ಯಾ ಪ್ರಕರಣ ನೊಂದಾಯಿಸಿಕೊಂಡಿರುತ್ತೆ

ಚೇಳೂರು  ಪೊಲೀಸ್  ಠಾಣಾ ಮೊ.ನಂ:74 /2017 ಕಲಂ. 323.504.506. 354. ರೆ/ವಿ 34  ಐ.ಪಿ.ಸಿ ಪ್ರಕರಣ

ಸಾರಾಂಶ: ದಿನಾಂಕ; 11/05/2017  ರಂದು    ಮಧ್ಯಾಹ್ನ  1-00  ಗಂಟೆಗೆ  ಪಿರ್ಯಾದಿ  ಕರಿಬಸಮ್ಮ ನವರು  ಠಾಣೆಗೆ  ಹಾಜರಾಗಿ   ನೀಡಿದ  ಪಿರ್ಯಾದು   ಅಂಶವೇನಂದರೆ,   ದಿನಾಂಕ; 10/05/2017  ರಂದು  ನಮ್ಮ  ಗ್ರಾಮದ  ಶ್ರೀ  ಕರಿಯಮ್ಮ  ಮತ್ತು ಶ್ರೀ  ಕೊಲ್ಲಾಪುರದಮ್ಮ  ದೇವರನ್ನು  ನಮ್ಮ  ಗ್ರಾಮದ   ಕರಿಬಸವಯ್ಯ  ಎಂಬುವರು  ಅವರ  ಮನೆಗೆ  ಕರೆದುಕೊಂಡು   ಹೋಗುದ್ದು,    ಈ ದೇವರುಗಳನ್ನು  ಸಂಜೆ  ವಾಪಸ್ಸು  ದೇವಸ್ಥಾನಕ್ಕೆ   ಕರೆದುಕೊಂಡು   ಹೋಗುತ್ತಿದ್ದರು.  ಆಗ  ನಾನು  ದೇವರು  ನಮ್ಮ  ಮನೆಯ  ಮುಂದೆ  ಹೋಗುತ್ತದೆ  ಎಂದು  ನಮ್ಮ  ಮನೆಯ   ಮುಂಭಾಗ  ಇರುವ  ಟಾರ್  ರಸ್ತೆಗೆ  ನೀರು  ಹಾಕಿದ್ದಾಗ   ನಾನು  ಹಾಕಿದ  ನೀರು  ಟಾರ್  ರಸ್ತೆಯಲ್ಲಿ   ಮೇಲೆ  ನಮ್ಮ ಪಕ್ಕದ  ಮನೆಯವರಾದ    ಸಿದ್ದಯ್ಯ  ಬಿನ್  ಲೇ  ಸಿದ್ದಲಿಂಗಯ್ಯನವರ   ಮನೆಯ  ಮುಂಭಾಗದ   ಟಾರ್  ರಸ್ತೆಯಲ್ಲಿ  ನೀರು ಹರಿದುಕೊಂಡು   ಹೋಯಿತು.  ಆಗ  ನಮ್ಮ ಪಕ್ಕದ   ಮನೆಯವರಾದ ಸಿದ್ದಯ್ಯ  ಬಿನ್  ಲೇ  ಸಿದ್ದಲಿಂಗಯ್ಯ, ಹಾಗೂ  ಆತನ  ಮಗ  ಯತೀಶ ಇಬ್ಬರೂ   ಮನೆಯ  ಮುಂದೆ  ನೀರು  ಹಾಕುತ್ತಿದ್ದ   ನನ್ನ  ಬಳಿಗೆ   ಬಂದು   ನನ್ನ  ಮೇಲೆ   ಜಗಳ  ತೆಗೆದು  ಅವ್ಯಾಚ್ಯ  ಶಬ್ದಗಳಿಂದ   ಸೂಳೆ  ಮುಂಡೆ, ಬೋಳಿ ಮುಂಡೆ  ನಿನ್ನ  ತಾಯಿನಾ  ಕ್ಯಾಯ  ನಮ್ಮ  ಮನೆಯ  ಮುಂದಿನ  ರಸ್ತೆಗೆ    ಏಕೆ  ನೀರನ್ನು  ಹರಿಯಲು  ಬಿಟ್ಟೆ   ಎಂದು  ಅವ್ಯಾಚ್ಯ  ಶಬ್ದಗಳಿಂದ   ಬೈದು  ಸಿದ್ದಯ್ಯ  ಎಂಬುವರು  ತನ್ನ  ಕೈ ಗಳಿಂದ   ನನ್ನ  ಮುಖಕ್ಕೆ  ಹಾಗೂ  ಮೂಗಿಗೆ   ಹೊಡೆದು  ನೋವುಂಟು  ಮಾಡಿದನು,  ಯತೀಶ  ಎಂಬುವನು   ನಾನು  ನನ್ನ  ಕೂದಲು  ಹಿಡಿದು  ಎಳೆದಾಡಿ   ತೊಟ್ಟಿದ್ದ  ಜಾಕೀಟನ್ನು   ಹರಿದು  ಹಾಕಿ   ತನ್ನ  ಎರಡು ಕೈಗಳಿಂದ  ನನ್ನ  ಎರಡೂ  ಎದೆಗಳನ್ನು  ಹಿಚುಕಿದನು.   ನಂತರ  ಇಬ್ಬರೂ   ಸೇರಿಕೊಂಡು  ನನ್ನನ್ನು   ಕೆಳಕ್ಕೆ   ಕೆಡವಿಕೊಂಡು  ಕಾಲುಗಳಿಂದ   ನನ್ನ  ಮೈ  ಕೈಗೆ  ಒದ್ದು,  ನೋವುಂಟು   ಮಾಡಿದರು.  ಆಗ  ನಾನು  ನೋವು  ತಾಳಲಾರದೇ   ಕಿರುಚಿಕೊಂಡಾಗ    ನಮ್ಮ  ಗ್ರಾಮದ   ಹೆಚ್.ಕೆ  ನಾಗರಾಜು  ಬಿನ್  ಕೃಷ್ಣಪ್ಪ,  ಮತ್ತು   ಕೇಶವ  ಮೂರ್ತಿ  ಬಿನ್ ಹನುಮಂತಯ್ಯ,  ಎಂಬುವರು   ಜಗಳ  ಬಿಡಿಸಿದರು.   ಆಗ  ಮೇಲ್ಕಂಡವರು  ನನ್ನನ್ನು  ಕುರಿತು   ಸೂಳೆ  ಮುಂಡೆ  ಈ  ದಿನ  ನೀನು  ತಪ್ಪಿಸಿಕೊಂಡೆ  ಇನ್ನು  ಮುಂದೆ  ನಮ್ಮ  ತಂಟೆಗೆ   ಬಂದರೆ  ಕೊಲೆ  ಮಾಡುವುದಾಗಿ  ಕೊಲೆ  ಬೆದರಿಕೆ  ಹಾಕಿದರು.   ಈ  ಗಲಾಟೆಯಲ್ಲಿ   ನನ್ನ  ಮೈ ಕೈಗೆ  ಪೆಟ್ಟುಗಳಾಗಿದ್ದು,  ಹೆಚ್.ಕೆ  ನಾಗರಾಜು   ಮತ್ತು  ಕೇಶವ  ಮೂರ್ತಿ  ಉಪಚರಿಸಿದರು .ಅಷ್ಟರಲ್ಲಿ    ಎಲ್ಲಿಯೋ   ಹೋಗಿದ್ದ  ನನ್ನ  ಗಂಡ  ಪುಟ್ಟಶಾಮಯ್ಯನವರು   ಅಲ್ಲಿಗೆ   ಬಂದು   ನನ್ನನ್ನು    ಹಾಗಲವಾಡಿ  ಸರ್ಕಾರಿ  ಆಸ್ಪತ್ರೆಗೆ  ಕರೆದುಕೊಂಡು   ಹೋಗಿ  ಚಿಕಿತ್ಸೆ  ಕೊಡಿಸಿರುತ್ತಾರೆ.    ಬಸ್ಸಿನ  ಸೌಕರ್ಯ  ಇಲ್ಲದೇ  ಇರುವುದರಿಂದ   ಈ  ದಿನ   ಪೊಲೀಸ್  ಠಾಣೆಗೆ  ತಡವಾಗಿ  ಬಂದು   ದೂರು  ನೀಡಿರುತ್ತೇನೆ.   ನನ್ನ ಅವ್ಯಾಚ್ಯ  ಶಬ್ದಗಳಿಂದ   ಬೈದು  ಕೈಗಳಿಂದ   ಹೊಡೆದು  ಮಾನಭಂಗ ಮಾಡಲು  ಪ್ರಯತ್ನಿಸಿದ  ಮೇಲ್ಕಂಡವರ   ಮೇಲೆ  ಕಾನೂನು  ರೀತ್ಯ  ಕ್ರಮ  ಜರುಗಿಸಲು  ಕೋರಿ ಇತ್ಯಾದಿಯಾದ  ಪಿರ್ಯಾದು  ಅಂಶ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ.  67/2017 ಕಲಂ 279, 337 ಐಪಿಸಿ

ದಿನಾಂಕ: 11-05-2017 ರಂದು  ಮದ್ಯಾಹ್ನ 1-00 ಗಂಟೆಗೆ ಈ ಕೇಸಿನ ಪಿರ್ಯಾದಿ ಬಿ.ಎಂ.ನಾಗರಾಜು ಬಿನ್ ಮಾಳೇಗೌಡ, 65ವರ್ಷ, ಲಿಂಗಾಯ್ತರು, ಜಿರಾಯ್ತಿ, ಬೊಮ್ಮಲಾಪುರ, ಕಸಬಾ ಹೋ,  ತಿಪಟೂರು ತಾ. ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ   ನನ್ನ ತಮ್ಮನಾದ ಉಮಾಪತಿ ಬಿನ್ ಲೇಟ್ ಮಾಳೇಗೌಡ ರವರು ಮಡೆನೂರು ಅಯ್ಯನಬಾವಿ ಬಳಿ ಇರುವ ಗೋಶಾಲೆಯಲ್ಲಿ ಹಸುಗಳನ್ನು ಕಟ್ಟಿಕೊಂಡು ಸುಮಾರು 2 ತಿಂಗಳಿನಿಂದ ಅಲ್ಲಿಯೇ ಇದ್ದರು. ದಿನಾಂಕ:11/05/2017 ರಂದು ಬೆಳಗ್ಗೆ 11-25 ರ ಸಮಯದಲ್ಲಿ ಅಯ್ಯನಬಾವಿ ಗೋಶಾಲೆ ಬಳಿ ಅರಸೀಕೆರೆ ತಿಪಟೂರು ಬಿ.ಹೆಚ್.ರಸ್ತೆಯಲ್ಲಿ ಅರಸೀಕೆರೆ ಕಡೆ ಹಾದು ಹೋಗುವ ಎಡಬದಿಯಲ್ಲಿ ನಿಂತಿರುವಾಗ ಅರಸೀಕೆರೆ ಘಟಕಕ್ಕೆ ಸೇರಿದ ಕೆ.ಎಸ್.ಆರ್.ಟಿ.ಸಿ. ಬಸ್ ಸಂಖ್ಯೆ ಕೆ.ಎ.18-ಎಫ್-833 ರ ಬಸ್ಸಿನ ಚಾಲಕನು ಬೆಂಗಳೂರಿನಿಂದ ಅರಸೀಕೆರೆ ಕಡೆಗೆ ಚಲಾಯಿಸಿಕೊಂಡು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ಎಡಬದಿಯಲ್ಲಿ ನಿಂತಿದ್ದ ನನ್ನ ಸಹೋದರ ಉಮಾಪತಿರವರಿಗೆ ಗುದ್ದಿಸಿ ಬಲಭಾಗದ ಕಾಲಿಗೆ ರಕ್ತಗಾಯವಾಗಿದ್ದು, ಹಾಗೂ ತಲೆಯ ಬಲಭಾಗಕ್ಕೆ ತೀವ್ರ ಸ್ವರೂಪದ ರಕ್ತಗಾಯಗಳಾಗಿರುತ್ತವೆ, ನನ್ನ ಸಹೋದರನಾದ ಉಮಾಪತಿರವರು ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ್ಕ್ಯಾನಿಂಗ್ ಮಾಡಿಸಲು ಖಾಸಗಿ ಆಸ್ಪತ್ರೆಗೆ ವೈದ್ಯರು ಸಲಹೆ ನೀಡಿರುತ್ತಾರೆ, ಆದುದರಿಂದ ತಾವುಗಳು ದಯಮಾಡಿ ನನ್ನ ಸಹೋದರ ಉಮಾಪತಿರವರಿಗೆ ಅಪಘಾತಪಡಿಸಿ ತೀವ್ರ ಸ್ವರೂಪದ ರಕ್ತಗಾಯಗೊಳಿಸಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಂ ಕೆ.ಎ.18-ಎಫ್-833 ರ ಚಾಲಕನ ವಿರುದ್ದ   ಕಾನೂನು ರೀತ್ಯಾ  ಕ್ರಮ ಜರುಗಿಸಿ  ಎಂತಾ ನೀಡಿದ  ದೂರಿನ ಅಂಶವಾಗಿರುತ್ತೆ

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 78 guests online
Content View Hits : 274886