lowborn Crime incidents 11-05-2017 | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ಜಯನಗರ ಪೊಲೀಸ್ ಠಾಣಾ ಮೊ.ನಂ. 156/2017 ಕಲಂ 20 (ಬಿ) ಎನ್‌.ಡಿ.ಪಿ.ಎಸ್ ಆಕ್ಟ್‌ ದಿನಾಂಕ: 25-11-2017 ರಂದು... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >> NEW BEAT BEST STAFF AND BEST CRIME DETECTION STAFF >> ಶಿರಾ ಗೇಟ್ ರಸ್ತೆಯ ಆಗಲೀಕರಣ ಹಿನ್ನಲೆ ಸಂಚಾರ ಮಾರ್ಗದಲ್ಲಿ ಬದಲಾವಣೆ. >> ಪತ್ರಿಕಾ ಪ್ರಕಟಣೆ ದಿನಾಂಕ:19-11-2017. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ:17-11-2017. ಮೂರು ಜನ ಅಂತರ ರಾಜ್ಯ ಕಳ್ಳರ ಬಂಧನ : 8 ಲಕ್ಷದ 50 ಸಾವಿರ... >> ದಿನಾಂಕ.17.11.2017. ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಪೊಲೀಸ್... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime incidents 11-05-2017

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 65/2017 ಕಲಂ 379 ಐಪಿಸಿ ಮತ್ತು 2(ಬಿ) ಕೆ.ಪಿ.ಡಿ ಮತ್ತು ಎಲ್.ಪಿ. ಆಕ್ಟ್   1981

ದಿನಾಂಕ:10/05/2017 ರಂದು ಸಂಜೆ 6-15 ಗಂಟೆಗೆ ಪಿರ್ಯಾದಿ ಶ್ರೀ ರೇಣುಕಾರಾಧ್ಯ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ನಂ2, ಕಾವೇರಿ ನೀರಾವರಿ ನಿಗಮ ನಿಯಮಿತ ಉಪವಿಭಾಗ, ಹೆಡಗರಹಳ್ಳಿ, ತಿಪಟೂರು ತಾಲ್ಲೋಕ್  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ  ತಿಪಟೂರು ತಾಲ್ಲೋಕಿನ ಕಸಬಾ ಹೋಬಳಿ ಮತ್ತು ಹೊನ್ನವಳ್ಳಿ ಹೋಬಳೀಯ ಆಯ್ದ ಗ್ರಾಮಗಳ ಕೆರೆಗಳಿಗೆ ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯ ಸರಪಳಿ 9.90 ಕಿ.ಮೀ.ನಿಂದ ನೀರನ್ನು ಎತ್ತಿ ತಿಪಟೂರು ತಾಲ್ಲೋಕಿನ ಹೊಗವನಘಟ್ಟ  ಗ್ರಾಮದ ಹತ್ತಿರ ಪಂಪ್ ಹೌಸ್ ಮತ್ತು ಜಾಕ್ ವೆಲ್ ನಿರ್ಮಿಸಿ ಅಲ್ಲಿಂದ ಪಂಪ್ ಮಾಡಿ ಪೈಪ್ ಲೈನ್ ಮೂಲಕ ಕೆರೆಗಳಿಗೆ ಕುಡಿಯುವ ನೀರೊದಗಿಸಲು ಯೋಜಿಸಲಾಗಿದೆ. ಅದರಂತೆ ಯೋಜನೆ ಪೂರ್ಣಗೊಂಡಿದ್ದು, 2016-17 ನೇ ಸಾಲಿನಲ್ಲಿ ಸದರಿ ಪಂಪ್ ಹೌಸ್ ನಿಂದ ನೀರನ್ನು ಪಂಪ್ ಮಾಡಿ ಗುರುಗದಹಳ್ಳಿ ಮತ್ತು ಮತ್ತಿಹಳ್ಳಿ ಕೆರೆಗಳಿಗೆ ಸರತಿಯ ಮೇಲೆ ಕುಡಿಯುವ ನೀರನ್ನು ಅಕ್ಟೋಬರ್ ಮಾಹೆಯವರೆಗೆ ನೀರೊದಗಿಸಿರುತ್ತದೆ. ಈ ಅವಧಿಯಲ್ಲಿ ಈ ಎಲ್ಲಾ ಏರ್ ವಾಲ್ವ್ ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿರುತ್ತವೆ. ಆನಂತರದ ಅವಧಿಯಲ್ಲಿ ಮಾರ್ಚ್ವರೆಗೂ ವಾಲ್ವ ಗಳಿದ್ದು, ಆನಂತರ ಅವಧಿಯಲ್ಲಿ ವಾಲ್ವ ಗಳನ್ನು ಪರಿಶೀಲಿಸಿದಾಗ ಕಳ್ಳತನವಾಗಿದ್ದು, ಕಂಡುಬಂದಿರುತ್ತದೆ. 2017-18 ಸಾಲಿನಲ್ಲಿ ಸದರಿ ಪಂಪ್ ಹೌಸ್ ನಿಂದ ನೀರನ್ನು ಪಂಪ್ ಮಾಡಿ ಕೆರೆಗಳಿಗೆ ನಿಗದಿ ಪಡಿಸುವ ವೇಳಾಪಟ್ಟಿಯಂತೆ ಸರತಿಯ ಮೇಲೆ ಕುಡಿಯುವ ನೀರನ್ನು ಮೇಲ್ಕಂಡ ಕೆರೆಗಳಿಗೆ  ನೀರೊದಗಿಸುವ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗಿರುತ್ತದೆ. ಅದರಂತೆ ಮತ್ತಿಹಳ್ಳಿ ಪಂಕ್ತೀಕರಣದ ಪೈಪ್ ಲೈನ್ ಮುಖಾಂತರ ಗುರುಗದಹಳ್ಳಿ ಮತ್ತಿಹಳ್ಳಿ ಹಾಗೂ ಚಿಕ್ಕಬಿದರೆ ಕೆರೆಗಳಿಗೆ ನೀರನ್ನು ಹರಿಸುವ ಅವಶ್ಯಕತೆಯಿದ್ದು, ಸದರಿ ಪಂಕ್ತೀಕರಣದ ಪೈಪ್ ಲೈನ್ ಗಳಲ್ಲಿ ಏರ್ ಔಟ್ ಆಗಲು ಏರ್ ವಾಲ್ವ್ ಗಳನ್ನು ಅಳವಡಿಸಿದ್ದದು, ಮಡೆನೂರು ಮತ್ತು ಮತ್ತಿಹಳ್ಳಿಗೆ ನೀರು ಹಂಚಿಕೆ ಯಾಗುವ ಛೇಂಬರ್ ನಿಂದ ಮತ್ತಿಹಳ್ಳಿ ಹಾಗೂ ಚಿಕ್ಕಬಿದರೆ ಕೆರೆಗಳ ಕಡೆ ಹೋಗಿರುವ ಪೈಪ್ ಲೈನ್ ನಿಂದ ಸರಪಳಿ 800 ಮೀ. ನಲ್ಲಿರುವ ಏರ್ ವಾಲ್ವ್ ನ್ನು ಕಿಡಿಗೇಡಿಗಳು ಕಳವು ಮಾಡಿರುತ್ತಾರೆ. ಇದರಿಂದ ಸರ್ಕಾರಿ ಆಸ್ತಿಯನ್ನು ಕಳವು ಮಾಡಿರುವ ಕಿಡಿಗೇಡಿಗಳ ಮೇಲೆ ದೂರನ್ನು ದಾಖಲಿಸಿಕೊಂಡು ನಿಯಮಾನುಸಾರ ಸೂಕ್ತ ಕ್ರಮವನ್ನು ಜರುಗಿಸಬೇಕೆಂದು ಹಾಗು ಸರ್ಕಾರಿ ಆಸ್ತಿಗೆ ರಕ್ಷಣೆ ನೀಡಬೇಕೆಂದು ತಮ್ಮಲ್ಲಿ ಕೋರಲಾಗಿದೆ. ವಾಲ್ವ ನ ಬೆಲೆ ಸುಮಾರು 10,000/- ರೂ ಗಳಾಗಿರುತ್ತೇಂತ ಇತ್ಯಾದಿ.

Badavanahally PS Cr.39/2017 u/s 392 IPC

ದಿನಾಂಕ-10/05/2017 ರಂದು ಮದ್ಯಾಹ್ನ 2-00 ಗಂಟೆಗೆ ಪಿರ್ಯಾದಿ ವಿಶಾಲಮ್ಮ ಕೊಂ ಸಾಂಬಶಿವ ಎಸ್ ಪಿ , ಶಂಕರಾಪುರ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ  ಪಿರ್ಯಾದು  ಅಂಶವೇನೆಂದರೆ ದಿ:09/05/2017 ರಂದು  ನಾನು ಮತ್ತು ನಮ್ಮೂರಿನ  ರುಕ್ಮಿಣಮ್ಮ ರವರು ನಮ್ಮೂರಿನ  ಶ್ರೀ ಗಂಗಾಂಭಿಕ  ಸ್ತ್ರೀ ಶಕ್ತಿ  ಸಂಘಕ್ಕೆ ಸೇರಿದ ಹಣವನ್ನು   ಡಿ ಕೈಮರದಲ್ಲಿರುವ ಕಾವೇರಿ ಕಲ್ಪತರು  ಗ್ರಾಮೀಣ ಬ್ಯಾಂಕ್‌ನಲ್ಲಿ ‌ ಡ್ರಾ ಮಾಡಲು  ಹೋಗಿದ್ದು,  ನಾನು  30,000/- ರೂ ಹಣ ಡ್ರಾ ಮಾಡಿದ್ದು, ನಂತರ ರುಕ್ಮಿಣಮ್ಮ ರವರು ಸಹ ಸಂಘಕ್ಕೆ ಸೇರಿದ 30,000/- ರೂ ಹಣವನ್ನು ಡ್ರಾ ಮಾಡಿ,  ಒಟ್ಟು 60,000/- ರೂ ಹಣವನ್ನು ನಾನೇ ನನ್ನ ವ್ಯಾನಿಟಿ ಬ್ಯಾಗ್‌ ನಲ್ಲಿ ಇಟ್ಟುಕೊಂಡು ವಾಪಾಸ್‌ ನಮ್ಮ ಊರಿಗೆ ಹೋಗಲು ಡಿ ಕೈಮರ ಬಸ್‌ ನಿಲ್ದಾಣದಿಂದ ಖಾಸಗಿ ಬಸ್‌ ನಲ್ಲಿ  ಹತ್ತಿ  ಬಳೇಹಳ್ಳಿ ಗ್ರಾಮದ ಬಸ್‌ ನಿಲ್ದಾಣದಲ್ಲಿ ಮದ್ಯಾಹ್ನ 12-00 ಗಂಟೆ ಸಮಯದಲ್ಲಿ  ಇಳಿದು ನಮ್ಮಗ್ರಾಮಕ್ಕೆ ನಾವಿಬ್ಬರು ನೆಡೆದುಕೊಂಡು ಹೋಗುತ್ತಿರುವಾಗ್ಗೆ ದಾರಿ ಮದ್ಯೆ ಸುಮಾರು 25 ವರ್ಷದ  ಒಬ್ಬ ಅಪರಿಚಿತ ವ್ಯಕ್ತಿ ಹಣವಿದ್ದ ನನ್ನ ವ್ಯಾನಿಟಿ ಬ್ಯಾಗ್‌ ಅನ್ನು ಕಸಿದುಕೊಂಡು ಓಡಿ ಹೋದನು ನನಗೆ ಗಾಬರಿಯಾಗಿ ಸುತ್ತಮುತ್ತಲು ಯಾರೂ ಜನರಿಲ್ಲದ ಕಾರಣ ನಾವು ಊರಿಗೆ ಹೋಗಿ ನನ್ನ ಮಗ ನಾಗಭೂಷಣ್‌‌ ರವರು ಚಂದ್ರಗಿರಿ ಗ್ರಾಮ ಪಂಚಾಯ್ತಿಗೆ ಮಿಟಿಂಗ್‌ ಗೆ ಹೋಗಿ ರಾತ್ರಿ ಬಂದ ನಂತರ ನಡೆದ ವಿಚಾರ ತಿಳಿಸಿ , ಈ ಕೃತ್ಯವನ್ನು ಮಾಡಿರುವ ಅಪರಿಚಿತ ವ್ಯಕ್ತಿ ಪತ್ತೆ  ಮಾಡಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು  ಈ ದಿನ ತಡವಾಗಿ ಬಂದು  ನೀಡಿದ ಪಿರ್ಯಾದು ಅಂಶ

 

ಹೊಸಬಡಾವಣೆ ಪೊಲೀಸ್ ಠಾಣಾ CR 55/2017 u/s 323, 324, 341, 504, 506, R/W 34 IPC

ಪಿರ್ಯಾದಿಯಾದ ಶ್ರೀ ಶ್ರೀಕಾಂತ್ ಬಿನ್ ಗೋಪಾಲಕೃಷ್ಣ (32) ಸಿ ಕ್ರಾಸ್, ನೃಪತುಂಗ ಬಡಾವಣೆ, ತುಮಕೂರು ರವರು ದಿನಾಂಕ:- 09/05/2017 ರಂದು  ರಾತ್ರಿ 10-00 ಗಂಟೆ ಸಮಯದಲ್ಲಿ  ಬಟವಾಡಿಯ ರಾಮ್ ಶ್ರೀ ಹೋಟೆಲ್ ಪಕ್ಕದ  ಮೆಡಿಕಲ್ ಸ್ಟೋರ್ ಪಕ್ಕದಲ್ಲಿ ನಿಂತಿದ್ದಾಗ  ಅಲ್ಲಿಗೆ ಬಂದ ಆರೋಪಿತರಾದ  ಯತೀಶ ಮತ್ತು ಪುನೀತ ಎಂಬುವವರು ಪಿರ್ಯಾದಿ ಮೇಲೆ  ಏಕಾಏಕಿ ಗಲಾಟೆ ಮಾಡಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಮರದ ದೊಣ್ಣೆಯಿಂದ  ಪಿರ್ಯಾದಿ ಎಡಭಾಗದ ಕಿವಿಗೆ ಮತ್ತು ಎಡಭಾಗದ ಕಣ್ಣಿನ ಕೆಳಭಾಗಕ್ಕೆ ಹೊಡೆದು ನೋವುಂಟು ಮಾಡಿ ಪುನೀತ್ ಪಿರ್ಯಾದಿ  ಮರ್ಮಾಂಗಕ್ಕೆ ಒದ್ದು ನೋವು ಪಡಿಸಿ ಪ್ರಾಣಬೆದರಿಕೆ ಹಾಕಿರುತ್ತಾರೆಂದು ಪಿರ್ಯಾದಿಯು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ.

 

ಹೊಸಬಡಾವಣೆ ಪೊಲೀಸ್ ಠಾಣಾ CR 56/2017 u/s 110 E & G CrPC

ಆರೋಪಿಯಾದ ಪುಟ್ಟರಾಜು @ ಪುಟ್ಟ ಬಿನ್ ರಾಮಯ್ಯ (35) ಆಟೋ ಚಾಲಕ, ಜ್ಯೋತಿಪುರ, ಶೆಟ್ಟಿಹಳ್ಳಿ, ತುಮಕೂರು ಈತನ ವಿರುದ್ಧ ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ರೌಡಿಶೀಟನ್ನು ತೆರೆದಿದ್ದು, ಹಾಗೂ ಈತನ ವಿರುದ್ಧ ಹೊಸ ಬಡಾವಣೆ ಠಾಣೆ ಯಲ್ಲಿ ಮೊ.ನಂ : 251/2012 ಕಲಂ :- 143,147,148, 363, 511, 504, 506, 114, ರೆ/ವಿ 149 ಐಪಿಸಿ ಮತ್ತು 117/2016 ಕಲಂ:- 110 E & G  CRPC ರೀತ್ಯಾ ಪ್ರಕರಣ ದಾಖಲಾಗಿರುತ್ತದೆ ರೌಡಿ ಆಸಾಮಿಯು ಮುಂಬರುವ ದಿವಸಗಳಲ್ಲಿ ಕಾನೂನು ಬಾಹಿರ ಕೃತ್ಯಗಳಲ್ಲ್ಲಿ ತೊಡಗುವ ಸಂಭವ ಇರುವ ಬಗ್ಗೆ ಖಚಿತ ಭಾತ್ಮಿಬಂದಿರುತ್ತದೆ ಹಾಗೂ  ಈತನು ಅಪರಾಧಗಳನ್ನು ಎಸಗುವ ಸ್ವಭಾವದವನಾಗಿದ್ದು ಹಾಗೂ ಶಾಂತಿಭಂಗವನ್ನೊಳಗೊಂಡ ಅಪರಾಧಗಳನ್ನು ಸಮುದಾಯಗಳ ಮಧ್ಯೆ ಘರ್ಷಣೆಗೆ ಪ್ರೇರಪಣೆ ನೀಡಿ ಸಾರ್ವಜನಿಕ ಶಾಂತಿಗೆ ಹಾಗೂ ನೆಮ್ಮದಿಗೆ ಭಂಗವನ್ನುಂಟು ಮಾಡುವ ಸಾದ್ಯತೆ ಇರುವ ಕಾರಣ ಈ ದಿವಸ ಮಧ್ಯಾಹ್ನ 1-00 ಗಂಟೆಯಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ ಸ್ವಯಂ ಪ್ರಕರಣ ದಾಖಲಿಸಿಕೊಂಡಿರುತ್ತದೆ

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 40/2017 ಕಲಂ ಹೆಂಗಸು ಕಾಣೆ

ದಿನಾಂಕ:- 10/05/2017 ರಂದು ಸಂಜೆ 4-30 ಗಂಟೆಗೆ ಪಿರ್ಯಾದಿ ಹೊನ್ನೇಶ್ ಬಿನ್‌ ರಾಮಪ್ಪ ಹೆಚ್‌ , ಹೊನ್ನಾಪುರ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ಅರ್ಜಿಯ ಅಂಶವೇನೆಂದರೆ, ನಾನು ಈಗ್ಗೆ  4 ವರ್ಷಗಳ ಹಿಂದೆ ರೊಳ್ಳ ಮಂಡಲ್‌ ಮಲ್ಲಿನಮಡಗು ಗ್ರಾಮದ ನಾಗರಾಜು ರವರ ಮಗಳು ಅಂಬಿಕಾ ರವರನ್ನು ಮದುವೆಯಾಗಿದ್ದು, ಗಂಡ ಹೆಂಡತಿ ಇಬ್ಬರು ಅನ್ಯೋನ್ಯವಾಗಿದ್ದೆವು.  ದಿನಾಂಕ;07/05/2017 ರಂದು  ರಾತ್ರಿ ಮನೆಯಲ್ಲಿ ನಾನು ನನ್ನ ತಂದೆ ರಾಮಣ್ಣ ಮತ್ತು ನನ್ನ ಹೆಂಡತಿ ಅಂಬಿಕಾ ಊಟಮಾಡಿ ನಂತರ  10-00 ಗಂಟೆಯವರೆಗೆ ಟಿ ವಿ ನೋಡಿದೆವು. ನಂತರ ನಾನು ಮತ್ತು ನನ್ನ ತಂದೆ ಮಲಗಲು ಹೋದೆವು. ಅಂಬಿಕಾ ಟಿ ವಿ ನೋಡುತ್ತಿದ್ದಳು. ರಾತ್ರಿ ಸುಮಾರು 12-30 ಗಂಟೆಗೆ ನನ್ನ ತಂದೆ ರಾಮಪ್ಪ ಎದ್ದು ನೋಡಲಾಗಿ ಟಿ ವಿ ಆಡುತ್ತಿರುವುದು ಕೇಳಿ ನೋಡಲಾಗಿ ನನ್ನ ಹೆಂಡತಿ ಅಂಬಿಕಾ ಮನೆಯಲ್ಲಿ ಕಾಣದ ಕಾರಣ ನನ್ನನ್ನು ಏಳಿಸಿದರು. ನಾವು ಹುಡುಕಾಡಿದೆವು. ಮನೆಯ ಬಾಗಿಲು ತೆರೆದಿತ್ತು. ನನ್ನ ಹೆಂಡತಿ ಅಂಬಿಕಾ ತನ್ನ ಕೊರಳಿದ್ದ 30 ಗ್ರಾಂ ಬಂಗಾರದ ಮಾಂಗಲ್ಯದ ಸರ, 1 ಜೊತೆ ಬಂಗಾರದ  ಕಿವಿಯೋಲೆ  ಬೀರುವಿನಲ್ಲಿದ್ದ  25,000/- ರೂ ಹಣ  ತೆಗೆದುಕೊಂಡು ಹೋಗಿರುತ್ತಾಳೆ. ತಕ್ಷಣ ಆಕೆಯ ತವರು ಮನೆಗೆ ವಿಚಾರ ತಿಳಿಸಿ, ಇದುವರೆವಿಗೂ ಸಂಬಂದಿಕರ ಮನೆಗಳಲ್ಲಿ ಹುಡುಕಾಡಿ ಸಿಗದ ಕಾರಣ ತಡವಾಗಿ ಬಂದು  ನನ್ನ ಹೆಂಡತಿ ಅಂಬಿಕಾರವರನ್ನು ಹುಡುಕಿ ಕೊಡಿ ಎಂತಾ ದೂರು ನೀಡಿರುತ್ತೆ.

ಆಂಬಿಕಾ ರವರ ಚಹರೆ   25 ವರ್ಷ ವಯಸ್ಸಾಗಿದ್ದು, ಸುಮಾರು 5 ಅಡಿ ಎತ್ತರವಿದ್ದು,  ಎಣ್ಣೆಗೆಂಪುಬಣ್ಣ , ಕೋಲುಮುಖ ಮತ್ತು ಮನೆಯಿಂದ ಹೋಗುವಾಗ ನೀಲಿ ಬಣ್ಣದ ಟಾಪ್‌ ಮತ್ತು ಕೆಂಪು ಬಣ್ಣದ  ಪ್ಯಾಂಟ್‌ ಧರಿಸಿರುತ್ತಾಳೆ

 

ಹೊನ್ನವಳ್ಳಿ ಪೊಲೀಸ್ ಠಾಣೆ  ಮೊನಂ- 56/2017 ಕಲಂ:324,114 ರೆ/ವಿ 34 ಐಪಿಸಿ

ದಿನಾಂಕ:10/5/2017 ರಂದು ತಿಪಟೂರು ಸರ್ಕಾರಿ ಆಸ್ವತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಹರೀಶ್‌ ಬಿನ್ ರಂಗಪ್ಪ ಬಿದರೆಗುಡಿಕಾವಲ್‌ರವರು  ನೀಡಿದ ಹೇಳಿಕೆಯ ಆಂಶವೆನೆಂದರೆ ದಿನಾಂಕ:8/5/2017 ರಂದು ರಾತ್ರಿ 8-30 ಗಂಟೆ ಸಮಯದಲ್ಲಿ ಬಿದರಗುಡಿ ಕಾವಲ್‌ನಲ್ಲಿ ಕೋಮಲಾ ಮತ್ತು ಅವರ ತಾಯಿ ಶಾಂತಮ್ಮನವರು ವೈಯಕ್ತಿಕ ವಿಚಾರವಾಗಿ ಬಿದಿಯಲ್ಲಿ ವಿನಾಕಾರಣವಾಗಿ ಪಿರ್ಯಾದಿದಾರರನ್ನು ಬೈಯುತ್ತಿದ್ದು ಅದಕ್ಕೆ ಪಿರ್ಯಾದಿ ಶಾಂತಮ್ಮ ಮತ್ತು ಕೊಮಲಾರವರನ್ನು ಕೇಳಿದ್ದಕ್ಕೆ ಪಿರ್ಯಾದಿಯನ್ನು ಮತ್ತೆ ಬೈಯ್ದಿದ್ದಕ್ಕೆ ಪಿರ್ಯಾದಿದಾರರು ಸುಮ್ಮನಿದ್ದು ನಂತರ ಮಾರನೇಯ ದಿನ ದಿನಾಂಕ:9/5/2017 ರಂದು ರಾತ್ರಿ ಸುಮಾರು 8-15 ಗಂಟೆ ಸಮಯದಲ್ಲಿ ಪಿರ್ಯಾದಿದಾರರು ಅವರ ಮನೆಯ ಬಳಿ ನಿಂತುಕೊಂಡಿರುವಾಗ ಬಿದರೆಗುಡಿ ಕಾವಲ್‌ನ ಸಂಜಯ್‌ ಬಿನ್ ಹರೀಶ್‌ 20 ವರ್ಷ ರವರು ಪಿರ್ಯಾದಿಯ ಬಳಿ ಬಂದು ಮಾತನಾಡಲು ಕರೆದು ತನ್ನ ಕೈಯಲ್ಲಿದ್ದ ಚಾಕುವಿನಿಂದ ಪಿರ್ಯಾದಿಯ ಎಡಬಾಗಕ್ಕೆ ಹೊಟ್ಟೆಗೆ ತಿವಿದು ಗಾಯಪಡಿಸಿ ಚಾಕುವನ್ನು ಅಲ್ಲೆ ಬಿಸಾಡಿ ಹೊರಟು ಹೋಗಿದ್ದು ಸ್ಥಳದಲ್ಲಿ ಇದ್ದ ಸಂಜಯ್‌ರವರ ಮಾವನಾದ ಸುದರ್ಶನ್ ಬಿನ್ ಗಂಗಾಧರಪ್ಪನವರು ಸಂಜಯ್‌ರವಿಗೆ ಕುಮ್ಮಕ್ಕು ನೀಡಿರುತ್ತಾರೆ ಗಾಯಗೊಂಡ ಪಿರ್ಯಾದಿಯನ್ನು ಅನಿಲ್‌ ಮತ್ತು ಮಂಜುರವರು ಬೈಕಿನಲ್ಲಿ ತಿಪಟೂರು ಸರ್ಕಾರಿ ಆಸ್ವತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ಸಂಜಯ್‌ ಮತ್ತು ಸುದರ್ಶನ್‌ರವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ನೀಡಿದ ಹೇಳಿಕೆಯನ್ನು ಪಡೆದು ಸಂಜೆ 6-00 ಗಂಟೆಗೆ ಠಾಣೆಗೆ ಬಂದು ಠಾಣಾ ಮೊ ನಂ 56/2017 ಕಲಂ:324. 114 ರೆ/ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆನೆ.

ಚೇಳೂರು  ಪೊಲೀಸ್  ಠಾಣಾ ಮೊ.ನಂ: 73 /2017  ಕಲಂ. 279.304(ಎ) ಐ.ಪಿ.ಸಿ ಪ್ರಕರಣ

ದಿನಾಂಕ:10-05-2017 ರಂದು ರಾತ್ರಿ 8-15 ಗಂಟೆಗೆ ಪಿರ್ಯಾದಿ ಶಿವಕುಮಾರ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಅಂಶವೇನೆಂದರೆ, “ದಿನಾಂಕ:09-05-2017  ರಂದು ನಮ್ಮ ತಂದೆ ಗಿರಿಯಣ್ಣ ನವರು ಮನೆಯಲ್ಲಿ ಊಟ ಮಾಡಿಕೊಂಡು ಸಾತೇನಹಳ್ಳಿ  ಗೇಟ್ ಗೆ  ಹೋಗಿ ಬರುತ್ತೇನೆಂದು  ನಮ್ಮ  ಬಾಬ್ತು ಕೆಎ-06-ಇಜಿ-0698ನೇ  ಹೀರೊ ಸ್ಪ್ಲೆಂಡರ್ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋದರು.  ಅವರು ಹೋದ 5 ನಿಮಿಷಗಳ ನಂತರ ಸಾತೇನಹಳ್ಳಿ  ಗೇಟ್ ವಾಸಿ ಸುರೇಶ  ಬಿನ್  ಲೇ.ಮಲ್ಲಯ್ಯ  ನವರು ಫೋನ್ ಮಾಡಿ ರಾತ್ರಿ 8-20 ಗಂಟೆ ಸಮಯದಲ್ಲಿ ಸಾತೇನಹಳ್ಳಿ-ಇರಕಸಂದ್ರ ಮಧ್ಯೆ ನಿಮ್ಮ ತಂದೆ ಗಿರಿಯಣ್ಣ ನವರು ಬೈಕ್ ಎತ್ತಿ ಹಾಕಿಕೊಂಡು ಬಿದ್ದಿದ್ದಾರೆ ಅವರ ತಲೆಗೆ ತುಂಬಾ ಪೆಟ್ಟಾಗಿ ರಕ್ತ ಬರುತ್ತಿದೆ ಎಂದು ತಿಳಿಸಿದರು.  ಆಗ ನಾನು ನಮ್ಮ ಅಣ್ಣನಾದ ನಟರಾಜು ಇಬ್ಬರೂ ಓಡಿ ಹೋಗಿ ನೋಡಿದೆವು.  ನಮ್ಮ ತಂದೆಯವರು ನಮ್ಮ ಬಾಬ್ತು  ಕೆಎ-06-ಇಜಿ-0698ನೇ  ಮೋಟಾರ್ ಸೈಕಲ್ ನಲ್ಲಿ ಸಾತೇನಹಳ್ಳಿ ಗೇಟ್ ಗೆ ಬರಲೆಂದು ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಹೋಗಿ ಸ್ವತ: ಮೋಟಾರ್ ಸೈಕಲ್ ಅನ್ನು ಅಪಘಾತ ಮಾಡಿಕೊಂಡು ಬಿದ್ದಿದ್ದು ಅವರ ತಲೆಗೆ ಏಟಾಗಿ ರಕ್ತ ಬರುತ್ತಿತ್ತು.    ತಕ್ಷಣ  ನಾವು 108 ಆಂಬುಲೆನ್ಸ್ ಗೆ ಫೋನ್ ಮಾಡಿ ಕರೆಸಿಕೊಂಡು  ಅದರಲ್ಲಿ ನಮ್ಮ ತಂದೆಯವರನ್ನು ಹಾಕಿಕೊಂಡು ತುಮಕೂರು ಜಿಲ್ಲಾ ಆಸ್ಪತ್ರೆಗೆ ಹೋದಾಗ ವೈದ್ಯರು ಬೆಂಗಳೂರು ನಿಮಾನ್ಸ್  ಆಸ್ಪತ್ರೆಗೆ  ತೆಗೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ ಬೇರೆ ವಾಹನದಲ್ಲಿ  ನಿಮಾನ್ಸ್  ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದೆವು.  ದಿನಾಂಕ:10-05-2017 ರಂದು ಮಧ್ಯಾಹ್ನ 2-30 ಗಂಟೆ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಮ್ಮ ತಂದೆ  ಗಿರಿಯಣ್ಣ ನವರು  ಮೃತಪಟ್ಟಿರುತ್ತಾರೆ.   ಶವವನ್ನು ನಿಮಾನ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತಾರೆ.    ಆದ್ದರಿಂದ ತಾವುಗಳು ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ.  ನಮ್ಮ ತಂದೆಯವರನ್ನು ಚಿಕಿತ್ಸೆಗೆ  ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ದೂರು ನೀಡುತ್ತಿದ್ದೇನೆ ಎಂತಾ  ಇತ್ಯಾದಿ ಪಿರ್ಯಾದು  ಅಂಶ.

 

 

Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 30 guests online
Content View Hits : 211006