Crime Incidents 19-04-17
ಹೆಬ್ಬೂರು ಪೊಲೀಸ್ ಠಾಣಾ ಮೊ ನಂ 62/2017 ಕಲಂ 279,304(ಎ) ಐಪಿಸಿ
ದಿನಾಂಕ-18/04/2017 ರಂದು ಬೆಳಿಗ್ಗೆ 9-00 ಗಂಟೆಗೆ ಪಿರ್ಯಾದಿಯಾದ ಹನುಮಂತಯ್ಯ ಬಿನ್ ಲೇ|| ಹುಲ್ಲೂರಯ್ಯ, 75 ವರ್ಷ, ತಿಗಳರು, ಜಿರಾಯ್ತಿ, ನಾಗವಲ್ಲಿ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿಸಿದ ನೀಡಿದ ದೂರಿನ ಅಂಶವೇನೇಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ನನಗೆ ಹುಲ್ಲೂರಯ್ಯ ಹಾಗೂ ಗೋವಿಂದರಾಜು ಎಂಬ ಇಬ್ಬರು ಗಂಡು ಮಕ್ಕಳಿದ್ದು, ನನ್ನ ಎರಡನೇ ಮಗನಾದ ಗೋವಿಂದರಾಜು ರವರು ದಿನಾಂಕ:23-03-2017 ರಂದು ತನ್ನ ಸ್ವಂತ ಕೆಲಸದ ಮೇಲೆ ತನ್ನ ಬಾಬ್ತು ಕೆಎ-06-ಎಲ್-7836 ನೇ ಟಿ,ವಿ,ಎಸ್ 50 ದ್ವಿಚಕ್ರ ವಾಹನದಲ್ಲಿ ತುಮಕೂರಿಗೆ ಹೋಗಿದ್ದು, ನಂತರ ವಾಪಸ್ ನಮ್ಮ ಗ್ರಾಮಕ್ಕೆ ಬರಲೆಂದು ರಾತ್ರಿ ಸುಮಾರು 11-00 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ಆನಂದ ರವರ ಮನೆಯ ಮುಂಭಾಗದ ತುಮಕೂರು-ಕುಣಿಗಲ್ ಟಾರ್ ರಸ್ತೆಯಲ್ಲಿ ಬರುತ್ತಿರುವಾಗ್ಗೆ, ಗೋವಿಂದರಾಜು ರವರು ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ಎಡಭಾಗದಿಂದ ರಸ್ತೆಯ ಮದ್ಯಕ್ಕೆ ಬಂದು ರಸ್ತೆ ಮದ್ಯದ ಡಿವೈಡರ್ಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ಗೋವಿಂದರಾಜು ರವರಿಗೆ ತಲೆಗೆ ಹಾಗೂ ಬಲಗೈಗೆ ಏಟು ಬಿದ್ದು ರಕ್ತಗಾಯಗಳಾಗಿದ್ದು, ಸದರಿ ಅಪಘಾತವನ್ನು ಕಣ್ಣಾರೆ ಕಂಡ ನಮ್ಮ ಗ್ರಾಮದ ವಾಸಿಯೇ ಆದ ರಾಮಮೂರ್ತಿ ರವರು ನನಗೆ ವಿಚಾರ ತಿಳಿಸಿದ್ದು, ನಂತರ ವಿಚಾರ ತಿಳಿದು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗ ಗೋವಿಂದರಾಜು ರವರು ಅಪಘಾತದಿಂದ ಗಾಯಗೊಂಡಿರುವುದು ನಿಜವಾಗಿತ್ತು. ನಂತರ ನಾನು ಮತ್ತು ರಾಮಮೂರ್ತಿ ಇಬ್ಬರೂ ಗಾಯಗೊಂಡಿದ್ದ ಗೋವಿಂದರಾಜು ರವರನ್ನು ಸ್ಥಳಕ್ಕೆ ಬಂದ ಯಾವುದೋ ಒಂದು ವಾಹನದಲ್ಲಿ ತುಮಕೂರಿನ ಮಾನ್ಯತಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಅಲ್ಲಿನ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಶ್ರೀ ಸಾಯಿ ಅಂಬಿಕಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಸೇರಿಸಿದ್ದು, ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಸೇರಿಸಿದ್ದು, ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ಸೇರಿಸಿದ್ದೆವು. ದಿನಾಂಕ: 18-04-2017 ರಂದು ಅಂದರೆ ಇದೇ ದಿವಸ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನನ್ನ ಮಗ ಗೋವಿಂದರಾಜು ರವರು ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ ಸುಮಾರು 05-00 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ. ಆದ್ದರಿಂದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನಾನು ನನ್ನ ಮಗ ಗೋವಿಂದರಾಜು ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ನನ್ನ ಮಗ ಗೋವಿಂದರಾಜು ರವರ ಮೃತ ದೇಹವು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.
ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ. 51/2017 ಕಲಂ 32, 34 ಕೆ.ಇ.ಆಕ್ಟ್
ದಿನಾಂಕ 18/04/17 ರಂದು 21-15 ಗಂಟೆಗೆ ಸಿ.ಪಿ.ಐ ಗ್ರಾಮಂತರ ವೃತ್ತ ತಿಪಟೂರು ರವರು ಅಮಾನತ್ತು ಪಂಚಾನಾಮೆ, ಮಾಲಿನೊಂದಿಗೆ ನೀಡಿದ ಜ್ಞಾಪನದ ಅಂಶವೇನೆಂದರೆ, ದಿನಾಂಕ:18/04/2017 ರಂದು ರಾತ್ರಿ 07-30 ಗಂಟೆ ಸಮಯದಲ್ಲಿ ನಾನು ಕಚೇರಿಯಲ್ಲಿ ಇದ್ದಾಗ ಕೊಪ್ಪ ಗೇಟ್ ನ ಮುಂದೆ ಇರುವ ಸನ್ ರೈಸ್ ಹೋಟಲ್ ನಲ್ಲಿ ಶಿವಣ್ಣ ಬಿನ್ ರಂಗೇಗೌಡ್ ಎಂಬುವರು ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ನಾನು ಮತ್ತು ಪಂಚರೊಂದಿಗೆ , ಸಿಬ್ಬಂದಿಗಳಾದ ಪಿಸಿ 1011 ಮಧುಸೂದನ್ , ಪಿಸಿ 306 ಗೋಪಾಲ್, ಜೀಪ್ ಚಾಲಾಕರಾದ ಎಪಿಸಿ 162, ನಾಗಬೂಷಣ್ ರವರೂಂದಿಗೆ KA-06 G-421 ಜೀಪಿನಲ್ಲಿ ಸನ್ ರೈಸ್ ಹೋಟಲ್ ಬಳಿ ರಾತ್ರಿ ಸುಮಾರು 08-00 ಗಂಟೆ ಸಮಯದಲ್ಲಿ ಹೋದಾಗ ಪೊಲೀಸ್ ಜೀಪ್ ನೋಡಿ ಹೋಟಲ್ ನಲ್ಲಿದ್ದ ಮದ್ಯ ಮಾರಾಟ ಮಾಡುತ್ತಿದ್ದ ವ್ಯೆಕ್ತಿ ಓಡಿ ಹೋಗಿರುತ್ತಾನೆ, ನಾವುಗಳು ಹತ್ತಿರ ಹೋಗಿ ನೋಡಲಾಗಿ ಅಕ್ರಮವಾಗಿ ಮಧ್ಯ ತುಂಬಿರುವ ಬಾಟೆಲ್ ಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಪಂಚಾಯ್ತುದಾರರ ಸಮಕ್ಷಮ ಚೆಕ್ ಮಾಡಲಾಗಿ 1) 8 PM ನ 90ML ಇರುವ 10 ಟೆಟ್ರಾ ಪ್ಯಾಕ್ ಗಳು 2) HAYYWADES Whisky ಯ 90ML ಇರುವ 04 ಟೆಟ್ರಾ ಪ್ಯಾಕ್ ಗಳು 3) OLD TAVERN ನ 180ML ಇರುವ 02 ಟೆಟ್ರಾ ಪ್ಯಾಕ್ ಗಳು 4) MC ಯ 90ML ನ 02 ಬಾಟಲ್ ಗಳು,5) WINDSOR Deluxe Whisky ಯ 90ML ಇರುವ 11 ಪ್ಯಾಕೇಟ್ ಗಳು 6) RAJA Whisky ಯ 90ML 02 ಪ್ಯಾಕೇಟ್ ಗಳು, 7) KNOCK OUT ನ 180MLಇರುವ 02 ಬಾಟಲ್ ಗಳು ಪತ್ತೆಯಾಗಿದ್ದು . 33 ಮಧ್ಯ ತುಂಬಿದ ಬಾಟೆಲ್ ಸಿಕ್ಕಿದ್ದು, ಒಟ್ಟು ಸುಮಾರು 830/- ರೂ ಬೆಲೆ ಆಗುತ್ತದೆ. ಒಡಿ ಹೋದವನ ಹೆಸರು ವಿಳಾಸ ತಿಳಿಯಲಾಗಿ ಶಿವಣ್ಣ ಬಿನ್ ರಂಗೇಗೌಡ 48 ವರ್ಷ, ಸನ್ ರೈಸ್ ಹೋಟಲ್ ನ ಮಾಲಿಕ, ಕೊಪ್ಪ ಗೇಟ್, ತಿಪಟೂರು ತಾ|| ಎಂತಾ ತಿಳಿಯಿತು,ಸದರಿ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮಧ್ಯದ ತುಂಬಿದ ಬಾಟೆಲ್ ಗಳನ್ನು ಮಾರಾಟ ಮಾಡುತ್ತಿದ್ದರಿಂದ, ಪಂಚರ ಸಮಕ್ಷಮ ಮೇಲ್ಕಂಡ ಮಾಲುಗಳನ್ನು ರಾತ್ರಿ 08-00 ಗಂಟೆಯಿಂದ ರಾತ್ರಿ 09:00 ಗಂಟೆಯವರೆಗೆ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿರುತ್ತೆ. ಯಾವುದೇ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದ ಶಿವಣ್ಣ ಬಿನ್ ರಂಗೇಗೌಡ್ ಎಂಬುವರು ವಿರುದ್ದ ಕಲಂ 32,34 KE ACT ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಸೂಚಿಸಿ ನೀಡಿದ ಜ್ಞಾಪನವನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.
ತುರ್ತು ಸಹಾಯವಾಣಿ
![]() 100 |
![]() 0816-2278000 |
![]() 108 |
![]() 101 |
![]() 1912 |
![]() 1090 |
![]() 1091 |
![]() 1098 |
![]() 0816-2275451 |
![]() 0816-2274130 |
![]() 0816-2272480 |
![]() 0816-2278377 |
![]() 0816-2278473 |
![]() |
ವಿಪಿನ್ ರಾಯ್ ಪ್ರಜ್ವಲ್ ಗುಂಡಪ್ಪ ತಿಲಕ್ ನಂದೀಶ್ ಪಾಷ ಹೈದರ್
|