lowborn Crime Incidents 18-04-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ.16/08/2018 ತುಂಬೆ (ತುಮಕೂರು ಬೈಸಿಕಲ್ ಪೊಲೀಸ್)     ಜನಸ್ನೇಹಿ... >> :: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 18-04-17

ಚೇಳೂರು  ಪೊಲೀಸ್   ಠಾಣಾ  ಮೊ.ನಂ.64/2017  ಕಲಂ143.147.148.  323.324. 504.506. 307 114 ರೆ/ವಿ 34  ಐ.ಪಿ.ಸಿ

ದಿನಾಂಕ;17/04/2017 ರಂದು  ಬೆಳಗ್ಗೆ 10-00  ಗಂಟೆಗೆ  ಪಿರ್ಯಾದಿ.  ನರಸಮ್ಮನವರು  ಠಾಣೆಗೆ  ಹಾಜರಾಗಿ  ನೀಡಿದ  ಪಿರ್ಯಾದು ಅಂಶವೇನಂದರೆ, ನನಗೆ   ಒಟ್ಟು  05  ಜನ ಮಕ್ಕಳಿದ್ದು,   ಎಲ್ಲಾರೂ  ಒಂದೇ  ಅವಿಭಕ್ತ  ಕುಟುಂಬದಲ್ಲಿ  ವಾಸವಾಗಿರುತ್ತೇವೆ.   ನಮಗೂ  ಮತ್ತು  ನಮ್ಮ  ಗ್ರಾಮದ  ಬುಡ್ಡಯ್ಯ  @  ಕೆಂಚಯ್ಯ  ಮತ್ತು  ಅವರ ಮಕ್ಕಳಿಗೆ  ಜಮೀನಿಗೆ  ಹೋಗುವ   ದಾರಿಯ  ವಿಚಾರದಲ್ಲಿ  ನಮಗೂ  ಮತ್ತು  ಅವರಿಗೆ  ವಿವಾದಇರುತ್ತೆ.  ದಿನಾಂಕ; 15/04/2017  ರಂದು  ಸಂಜೆ 6-00  ಗಂಟೆ  ಸಮಯದಲ್ಲಿ   ನಾನು  ಮತ್ತು   ನನ್ನ  ಮಕ್ಕಳಾದ  ರವೀಶ  ಮತ್ತು  ಕೆಂಚ ಕುಮಾರ  ಮೂರು  ಜನರು  ನಮ್ಮ  ಮನೆಯ   ಮುಂಭಾಗದಲ್ಲಿ ಮಾಡನಾಡಿಕೊಂಡು  ಕುಳಿತ್ತಿದ್ದಾಗ  ನಮ್ಮ  ಗ್ರಾಮದ   ಬುಡ್ಡಯ್ಯ  @  ಕೆಂಚಯ್ಯನ   ಹಾಗೂ   ಈತನ  ಮಕ್ಕಳಾದ   ನವೀನ್  ಕುಮಾರ,  ಕಾಂತರಾಜು ,  ಕೆಂಚಯ್ಯನ  ತಮ್ಮ   ಶಿವರಾಜು,   ಹಾಗೂ  ನಮ್ಮ   ಗ್ರಾಮದ   ಗಂಗಣ್ಣ  ಮತ್ತು  ಕೇಶವ  @  ಕೆಂಚರಾಯ   ಬಿನ್  ದೊಡ್ಡಮನೆ  ಕೆಂಚಯ್ಯ,  ಇವರುಗಳು  ಕೈಯಲ್ಲಿ   ಚೂರಿ , ದೊಣ್ಣೆ,  ಕುಡಗೋಲು,  ಹಾಗೂ  ಇಟ್ಟಿಗೆಗಳನ್ನು   ಹಿಡಿದು  ಅಕ್ರಮ  ಗುಂಪು  ಕಟ್ಟಿಕೊಂಡು   ನಮ್ಮ  ಮನೆಯ  ಬಳಿಗೆ  ಬಂದು   ನನ್ನ  ಮಕ್ಕಳಾದ  ರವಿಶ  ಮತ್ತು  ಕೆಂಚಕುಮಾರನನ್ನು   ಕುರಿತು  ಎಲ್ಲಾರೂ  ಸೇರಿಕೊಂಡು  ಸೂಳೆ  ಮಗನೇ  ಬೋಳಿ  ಮಗನೇ  ಎಂದು  ಅವ್ಯಾಚ್ಯ  ಶಬ್ದಗಳಿಂದ  ಬೈದು   ನವೀನ್  ಕುಮಾರ  ಎಂಬುವನು,   ನಿಮ್ಮ  ಜಮೀನಿಗೆ  ಹೋಗಿ  ಬರಲು  ನಮ್ಮ  ಜಮೀನೇ   ಬೇಕೇನೋ  ಈ  ದಿನ  ನಿಮ್ಮನ್ನು   ಇದೇ  ಚೂರಿಯಿಂದ   ಚುಚ್ಚಿ  ಕೊಲೆ  ಮಾಡುತ್ತೇನೆಂದು  ತನ್ನ  ಕೈಯಲ್ಲಿ  ಇದ್ದ   ಚೂರಿಯಿಂದ   ನನ್ನ  ಮಗ  ರವೀಶನಿಗೆ  ಸಾಯಿ  ನನ್ನ  ಮಗನೇ  ಎಂದು ಕೊಲೆ ಪ್ರಯತ್ನ  ಮಾಡಿ  ತಿವಿಯಲು   ಹೋದಾಗ  ನನ್ನ ಮಗ  ರವೀಶ  ಕೈ  ಅಡ್ಡ ಹಿಡಿದಾಗ   ಬಲ  ಮೊಣ ಕೈ  ಭಾಗಕ್ಕೆ  ತಗುಲಿ    ಸೀಳಿದ   ರಕ್ತ   ಗಾಯವಾಯಿತು,   ನನ್ನ    ಹಿರಿಯ  ಮಗ  ಕೆಂಚ ಕುಮಾರನಿಗೆ ಕಾಂತರಾಜು ಎಂಬುವನು.  ತನ್ನ  ಕೈಯಲ್ಲಿ  ಇದ್ದ  ಕುಡಗೋಲಿನಿಂದ    ನನ್ನ  ಮಗ  ಕೆಂಚ  ಕುಮಾರನ ಎಡ ಕೈಗೆ ಹೊಡೆದು  ರಕ್ತ ಗಾಯ  ಮಾಡಿದನು.  ಗಂಗಣ್ಣ  ಬಿನ್  ರಂಗಯ್ಯ  ಎಂಬುವರು  ತನ್ನ  ಕೈಯಲ್ಲಿದ್ದ  ದೊಣ್ಣೆಯಿಂದ  ನನ್ನ  ಮಗ   ರವೀಶನಿಗೆ  ಮತ್ತು  ಕೆಂಚ ಕುಮಾರನಿಗೆ  ಮೈ   ಕೈಗೆ  ಹೊಡೆದು   ನೋವುಂಟು ಮಾಡಿದರು.  ಕೇಶವ  @ ಕೆಂಚಯ್ಯ  ಎಂಬುವರು  ತನ್ನ  ಕೈ ಯಲ್ಲಿ  ಇದ್ದ  ಇಟ್ಟಿಗೆಯಿಂದ  ನನ್ನ  ಮಗ  ಕೆಂಚ  ಕುಮಾರನ  ಬೆನ್ನಿಗೆ  ಹಾಗೂ  ಮೈ  ಕೈಗೆ  ಹೊಡೆದು  ನೋವುಂಟು  ಮಾಡಿದನು.  ಹಾಗೂ ಅಲ್ಲಿಯೇ  ಇದ್ದ  ಶಿವರಾಜು  ನನ್ನ ಮಕ್ಕಳಿಬ್ಬರಿಗೂ    ತನ್ನ  ಕೈಯಿಂದ  ಹೊಡೆದು  ಕಾಲಿನಿಂದ   ಒದ್ದು,  ನೋವುಂಟು  ಮಾಡಿದನು.   ಆಗ  ನೋವು  ತಾಳಲಾರದೇ  ನನ್ನ  ಮಕ್ಕಳು  ಮನೆಯ   ಒಳಗೆ  ಬಂದಾಗ   ನಾನು  ಮತ್ತು    ಮತ್ತು  ನನ್ನ  ಸೊಸೆ  ನಿರ್ಮಲ  ಗಲಾಟೆಯಿಂದ   ಬಿಡಿಸಿಕೊಳ್ಳಲು  ಹೋದಾಗ    ಎಲ್ಲಾರೂ  ಮನೆ ಒಳಗೆ ನುಗ್ಗಿ  ಶಿವರಾಜು  ಎಂಬುವನು ನಮಗೆ  ಕೈಗಳಿಂದ   ಹೊಡೆದರು   ಆಗ  ನಾವು    ಕಿರಿಚಿಕೊಂಡಾಗ   ನಮ್ಮ  ಗ್ರಾಮದ  ಕರಿಯ  ಬಿನ್  ಕೆಂಚಯ್ಯ ಮತ್ತು  ಕೆಂಪಯ್ಯ  ಬಿನ್  ದಾಸಪ್ಪ  ಎಂಬುವರು  ಜಗಳ  ಬಿಡಿಸಿ  ಸಮಾಧಾನ  ಮಾಡಿದರು,   ಆಗ   ಮೇಲ್ಕಂಡ  ಆಸಾಮಿಗಳು   ಈ  ಬಾರಿ  ನೀವು   ಬಚಾವ್  ಆಗಿದ್ದೀರಿ  ಮತ್ತೆ  ನಮ್ಮ  ತಂಟೆಗೆ  ಬಂದರೆ  ಕೊಲೆ  ಮಾಡುವುದಾಗಿ  ಪ್ರಾಣ   ಬೆದರಿಕೆ  ಹಾಕಿ  ತಮ್ಮ  ಕೈಯಲ್ಲಿ   ಇದ್ದ  ಚೂರಿ,  ಕುಡಗೋಲು ,  ದೊಣ್ಣೆ,  ಹಾಗೂ  ಇಟ್ಟಿಗೆಯನ್ನು  ನಮ್ಮ  ಮನೆಯ  ಮುಂದೆ  ಬಿಸಾಕಿ  ಹೊರಟು  ಹೋದರು. ಈ  ಗಲಾಟೆಯನ್ನು  ನಮ್ಮ  ಗ್ರಾಮದ  ದಿವಾಕರ  ಬಿನ್ ಸಣ್ಣ ಕರಿಯಪ್ಪ  ಎಂಬುವರ  ಕುಮ್ಮಕಿನಿಂದ   ಮಾಡಿರುತ್ತಾರೆ. .  ಆಗ  ಈ  ವಿಚಾರವನ್ನು  ನನ್ನ  ಮತ್ತೊಬ್ಬ  ಮಗ  ಮಹದೇವಯ್ಯನಿಗೆ  ಪೋನ್  ಮೂಲಕ  ವಿಚಾರ   ತಿಳಿಸಿ  ಕರೆಸಿಕೊಂಡು    ಗಾಯಾಳುಗಳನ್ನು  ಯಾವುದೋ  ವಾಹನದಲ್ಲಿ ಕೂರಿಸಿಕೊಂಡು  ತುಮಕೂರು  ಜಿಲ್ಲಾ  ಆಸ್ಪತ್ರೆಗೆ   ಕರೆದುಕೊಂಡು  ಹೋಗಿ  ಚಿಕಿತ್ಸೆ ಕೊಡಿಸಿರುತ್ತಾನೆ.  ಈ ಗಲಾಟೆಯಲ್ಲಿ  ನನಗೆ ಮತ್ತು ನನ್ನ ಸೊಸೆ ನಿರ್ಮಲಳಿಗೆ   ಚಿಕಿತ್ಸೆ  ಪಡೆಯುವಂತ  ಪೆಟ್ಟುಗಳೇನು  ಆಗದ  ಕಾರಣ  ನಾವು  ಚಿಕಿತ್ಸೆ  ಪಡೆದಿರುವುದಿಲ್ಲ. ನನ್ನ  ಮಕ್ಕಳು   ಆಸ್ಪತ್ರೆಯಲ್ಲಿ  ಇದುದ್ದರಿಂದ  ನನ್ನ  ಮಕ್ಕಳು  ದೂರು  ನೀಡದ  ಕಾರಣ  ನಾನು  ಈ  ದಿನ  ತಡವಾಗಿ  ಬಂದು  ದೂರು  ನೀಡಿರುತ್ತೇನೆ. ಮೇಲ್ಕಂಡವರ   ಮೇಲೆ  ಕಾನೂನು  ರೀತ್ಯ  ಕ್ರಮ  ಜರುಗಿಸಲು ಕೋರಿ  ಇತ್ಯಾದಿಯಾದ  ಪಿರ್ಯಾದು ಅಂಶ.

ಚೇಳೂರು  ಪೊಲೀಸ್   ಠಾಣಾ  ಮೊ.ನಂ.65/2017  ಕಲಂ 279. 337  ಐ.ಪಿ.ಸಿ

ದಿನಾಂಕ:15-04-2017 ರಂದು ಪಿರ್ಯಾದಿ ಹೆಚ್.ಎಂ.ಕಿರಣ್ ಕುಮಾರ್ ರವರು  ತುಮಕೂರಿನಿಂದ  ಅವರ ಊರಾದ ಹೊಸಕೆರೆಗೆ  ಅವರ ಬಾಬ್ತು ಕೆಎ-06-ಇವೈ-0769ನೇ ಹೋಂಡಾ ಶೈನ್ ದ್ವಿಚಕ್ರ ವಾಹನದಲ್ಲಿ ಬರುತ್ತಿರುವಾಗ್ಗೆ  ಮಧ್ಯಾಹ್ನ 2-30 ಗಂಟೆ ಸಮಯದಲ್ಲಿ ತುಮಕೂರು ರಸ್ತೆ  ನಂದಿಹಳ್ಳಿ ಸಾತೇನಹಳ್ಳಿ ಗೇಟ್ ಮಧ್ಯೆ ಗದ್ದೆ ಬಯಲು ಸಮೀಪ ಪಿರ್ಯಾದಿಯ ಹಿಂದಿ ಒಂದು ಕಾರಿನ ಚಾಲಕ ಕಾರನ್ನು ಅತೀ  ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯ ಬೈಕಿಗೆ ಡಿಕ್ಕಿ ಹೊಡೆಸಿ ರಸ್ತೆ ಎಡಭಾಗಕ್ಕೆ ಪಲ್ಟಿಯಾಗಿ ಬೀಳಿಸಿ ಅಪಘಾತ ಮಾಡಿದರು. ಅಪಘಾತದಲ್ಲಿ ದ್ವಿ ಚಕ್ರ ವಾಹನದ ಮುಂಭಾಗ ಹಿಂಭಾಗ ಜಖಂ ಆಗಿರುತ್ತೆ   ಕಾರಿನ ನಂಬರ್ ನೋಡಲಾಗಿ ಕೆಎ-04-ಎಂಎಸ್-7451 ನೇ ಸ್ವಿಪ್ಟ್ ಕಾರಾಗಿದ್ದು ಚಾಲಕನಿಗಾಗಲೀ ಕಾರಿನಲ್ಲಿದ್ದವರಿಗಾಗಲೀ ಯಾವುದೇ ಗಾಯಗಳಾಗಿರುವುದಿಲ್ಲ ಚಾಲಕನ ಹೆಸರು ವಿಳಾಸ ಕೇಳಲಾಗಿ ಲೋಕೇಶ್ ಬಿನ್ ಕೃಷ್ಣಾಜಿರಾವ್ ಎಂದು ತಿಳಿಸಿರುತ್ತಾರೆ.  ಅಪಘಾತ ಪಡಿಸಿದ ಕಾರಿನ ಚಾಲಕ ಲೋಕೇಶ್ ರವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಇತ್ಯಾದಿ ಪಿರ್ಯಾದಿ ಆಂಶವಾಗಿರುತ್ತೆ

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.36/2017,ಕಲಂ: 279 ಐ.ಪಿ.ಸಿ.

ದಿನಾಂಕ:17/04/2017 ರಂದು ಸಂಜೆ 05:00 ಗಂಟೆಗೆ ಪಿರ್ಯಾದಿ ಮೋಹನ್ ಬಿನ್ ಕೆ.ವೆಂಕಟೇಶ್ವರಯ್ಯ, 26 ವರ್ಷ, ಭೋವಿ ಜನಾಂಗ, ವ್ಯಾಪಾರ, ಬಂಡೇಪಾಳ್ಯ ಗ್ರಾಮ, ತುಮಕೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಕೆಎ-06-ಎಂ-5449 ನೇ ನಂಬರಿನ ಟಾಟಾ ಇಂಡಿಕಾ ಕಾರನ್ನು ಸ್ವಂತಕ್ಕೆ ಇಟ್ಟುಕೊಂಡಿದ್ದು, ಸದರಿ ಕಾರಿಗೆ ಚಾಲಕನನ್ನಾಗಿ ನಮ್ಮ ಗ್ರಾಮದ ಶ್ರೀನಿವಾಸ.ವಿ. ಬಿನ್ ವೆಂಕಟೇಶ್, 23 ವರ್ಷ, ಡ್ರೈವರ್ ಕೆಲಸ ರವರನ್ನು ನೇಮಿಸಿಕೊಂಡಿರುತ್ತೇವೆ. ನಾನು ಮತ್ತು ನಮ್ಮ ಕಾರಿನ ಚಾಲಕ ಶ್ರೀನಿವಾಸ ಇಬ್ಬರು ಕೆಲಸ ನಿಮಿತ್ತ ಆಂಧ್ರ ಪ್ರದೇಶದ ಮಡಕಶಿರಾಕ್ಕೆ ಹೋಗುವ ಸಲುವಾಗಿ ದಿನಾಂಕ:15/04/2017 ರಂದು ರಾತ್ರಿ ತುಮಕೂರಿನಿಂದ ನಮ್ಮ ಬಾಬ್ತು ಕೆಎ-06-ಎಂ-5449 ನೇ ನಂಬರಿನ ಟಾಟಾ ಇಂಡಿಕಾ ಕಾರಿನಲ್ಲಿ ಹೊರಟು, ಮಧುಗಿರಿ ಮಾರ್ಗವಾಗಿ ಮಧುಗಿರಿ-ಪಾವಗಡ ಮುಖ್ಯ ರಸ್ತೆಯಲ್ಲಿ ಮಧುಗಿರಿ ಕಡೆಯಿಂದ ಮಡಕಶಿರಾದ ಕಡೆಗೆ ಹೊಸಕೆರೆ ಗ್ರಾಮದ ಕೆರೆಯ ಕೋಡಿಯ ಹತ್ತಿರ ರಸ್ತೆಯಲ್ಲಿ ಅದೇ ದಿನ ರಾತ್ರಿ ಸುಮಾರು 11:45 ಗಂಟೆಯ ಸಮಯದಲ್ಲಿ ಬರುತ್ತಿರುವಾಗ್ಗೆ, ಮೇಲ್ಕಂಡ ಕಾರನ್ನು ಚಾಲನೆ ಮಾಡುತ್ತಿದ್ದ ಶ್ರೀನಿವಾಸ.ವಿ. ರವರು ಕಾರನ್ನು ತುಂಬಾ ಸ್ಪೀಡಾಗಿ ಮತ್ತು ಅಡ್ಡದಿಡ್ಡಿಯಾಗಿ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಎಡ ಬದಿಯಲ್ಲಿರುವ ಹಳ್ಳಕ್ಕೆ ಕಾರನ್ನು ಬೀಳಿಸಿದ್ದರಿಂದ ನಮ್ಮ ಬಾಬ್ತು ಕೆಎ-06-ಎಂ-5449 ನೇ ಟಾಟಾ ಇಂಡಿಕಾ ಕಾರು ಜಖಂ ಆಗಿರುತ್ತದೆ. ಸದರಿ ಕಾರಿನಲ್ಲಿದ್ದ ನನಗಾಗಲಿ ಮತ್ತು ಸದರಿ ಕಾರನ್ನು ಚಾಲನೆ ಮಾಡುತ್ತಿದ್ದ ಶ್ರೀನಿವಾಸನಿಗಾಗಲಿ ಯಾವುದೇ ತರಹದ ಪೆಟ್ಟುಗಳು ಬಿದ್ದು ಗಾಯಗಳಾಗಿರುವುದಿಲ್ಲ. ಅಪಘಾತವಾಗಿರುವ ಕಾರು ತುಂಬಾ ಜಖಂ ಆಗಿರುವುದರಿಂದ ಸ್ಥಳದಲ್ಲಿಯೇ ಇರುತ್ತದೆ. ಈ ಅಪಘಾತದ ವಿಚಾರವನ್ನು ನಮ್ಮ ಮನೆಯವರಿಗೆ ತಿಳಿಸಿದ ನಂತರ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ನಮ್ಮ ಬಾಬ್ತು ಕೆಎ-06-ಎಂ-5449 ನೇ ಟಾಟಾ ಇಂಡಿಕಾ ಕಾರಿನ ಚಾಲಕ ಶ್ರೀನಿವಾಸನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆ

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಯು.ಡಿ.ಆರ್ .ನಂ. 10/2017 ಕಲಂ 174 ಸಿಆರ್‌ಪಿಸಿ

ದಿನಾಂಕ:17/04/2017 ರಂದು ಬೆಳಿಗ್ಗೆ 10-30 ಗಂಟೆಗೆ ಬೆಂಗಳೂರಿನ ಪೀಣ್ಯಾ ವಾಸಿ ಮೋಹನ್. ಸಿ ಬಿನ್ ಚೆಲ್ಲಪ್ಪನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನಗೆ ಇರುವ ಮೂರು ಜನ ಮಕ್ಕಳಲ್ಲಿ ಶೆಲ್ವರಾಜು ಮದುವೆಯಾಗಿದ್ದು ತನ್ನ ಸಂಸಾರ ಸಮೇತ ತುಮಕೂರು ಲಿಂಗಾಪುರ ಬಳಿ ವಾಸವಿದ್ದನು. ನನ್ನ ಮಗಳು ಮಮತಾ ಮತ್ತು ಆಕೆ ಗಂಡ ಬಸವರಾಜು ಚೀಟಿ ವ್ಯವಹಾರ ಮಾಡುತ್ತಿದ್ದು, ಚೀಟಿವ್ಯವಹಾರ ನಷ್ಟವಾಗಿದ್ದು ಈ ಬಗ್ಗೆ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಅಳಿಯ ಮತ್ತು ಮಗಳು ಪೊಲೀಸರಿಗೆ ಸಿಗದೇ ಇದ್ದುದರಿಂದ ಪೊಲೀಸರು ದಿ:16/04/17 ರಂದು ಈತನ ಮನೆಯ ಬಳಿ ಬಂದು ಹೋಗಿದ್ದರಿಂದ ಶೆಲ್ವರಾಜ ಮುಂದೆ ನಮಗೆ ತೊಂದರೆಯಾಗುತ್ತದೆಂತಲೋ ಅಥವಾ ಚೀಟಿದಾರರಿಗೆ ಹಣವೇನಾದರೂ ನಾನು ಕೊಡಬೇಕಾಗುತ್ತದೆಂತಲೋ ಎಂದು ಜಿಗುಪ್ಸೆ ಹೊಂದಿ ವಿಷವನ್ನು ಕುಡಿದು ಆತ್ಮಹತ್ಯೆ ಮಾಡಿರುತ್ತಾರೆ ಮುದಿನ ಕ್ರಮ ಜರುಗಿಸಿ ಎಂಧು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಯು.ಡಿ.ಆರ್ .ನಂ. 11/2017 ಕಲಂ 174 ಸಿಆರ್‌ಪಿಸಿ

ದಿನಾಂಕ:17/04/2017 ರಂದು ಮದ್ಯಾಹ್ನ 1-30 ಗಂಟೆಗೆ ತುಮಕೂರು ತಾಲ್ಲೋಕ್ ಗೂಳೂರು ಹೋಬಳಿ ಬಾಣಾವರ ಗ್ರಾಮದ ಲಿಂಗಪ್ಪ.ಬಿ.ಸಿ ಬಿನ್ ಲೇಟ್ ಚನ್ನಬಸವಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ ಮೂರನೇ ಮಗಳು ಶೈಲಜಾಳನ್ನು ಗೂಳೂರು ಗ್ರಾಮದ ಸಿದ್ದರಾಜುರವರಿಗೆ ಮೂರು ವರ್ಷದ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಈಗ್ಗೆ ಎರಡು ದಿನಗಳ ಹಿಂದೆ ಶೈಲಜಾ ನಮ್ಮ ಊರಿಗೆ ಬಂದಾಗ ಬೆಂಗಳೂರಿಗೆ ನರ್ಸಿಂಗ್ ಉದ್ಯೋಗ ಮಾಡಲು ಹೋಗಬೇಕೆಂದು ಕೇಳಿದ್ದಳು. ಸದ್ಯಕ್ಕೆ ಎಲ್ಲಿಗೂ ಹೋಗುವುದು ಬೇಡ ಎಂದಿದ್ದಕ್ಕೆ ಬೆಂಗಳೂರಿಗೆ ಕಳುಹಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹಠ ಮಾಡಿದ್ದಳು. ನಾನು ನಿನ್ನ ಗಂಡನ ಜೊತೆ ಮಾತನಾಡಿ ಹೇಳುತ್ತೇನೆ ಎಂದು ಸಮಾಧಾನ ಮಾಡಿ ಗಂಡನ ಮನೆಗೆ ಕಳುಹಿಸಿದ್ದೆ. ಆದರೂ ಸಹ ಅವಳ ಹಠಮಾರಿತನದಿಂದ ದಿ:16/04/17ರಂದು ರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ, ಈ ಸಾವಿನ ಬಗ್ಗೆ ಯಾವುದೇ ಅನುಮಾನ ಇರುವುದಿಲ್ಲ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

ವೈ ಎನ್ ಹೊಸಕೋಟೆ  ಪೊಲೀಸ್ ಠಾಣಾ ಯು.ಡಿ.ಆರ್. ನಂ:09/2017  .ಕಲಂ:174  ಸಿ.ಆರ್.ಪಿ.ಸಿ

ದಿನಾಂಕ:17/04/2017 ರಂದು  ಮದ್ಯಾಹ್ನ 12:30 ಗಂಟೆಗೆ ಪಿರ್ಯಾದಿ ಸರಿತ ಕೋಂ ರಾಮಕೃಷ್ಣಾರೆಡ್ಡಿ , 35 ವರ್ಷ, ರೆಡ್ಡಿ ವಕ್ಕಲಿಗ ಜನಾಂಗ, ಮನೆಕೆಲಸ ಬಿ. ಹೊಸಹಳ್ಳಿ ಗ್ರಾಮ,ಪಾವಗಡ ತಾ|| ರವರು ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ     ನನ್ನನ್ನು ಈಗ್ಗೆ 08-09 ವರ್ಷಗಳ ಹಿಂದೆ ಬಿ ಹೊಸಹಳ್ಳಿ ಗ್ರಾಮದ ರಾಮಕೃಷ್ಣಾರೆಡ್ಡಿ ಬಿನ್ ರೆಡ್ಡಪ್ಪ ಎಂಬುವವರಿಗೆ ಕೊಟ್ಟು ಮದುವೆ ಮಾಡಿದ್ದು  , ನಮ್ಮದು ಒಟ್ಟು ಕುಟುಂಬದ ಹೆಸರಿನಲ್ಲಿ ಬಿ ಹೊಸಹಳ್ಳಿ ಗ್ರಾಮ ಸ.ನಂ:38/1  ಮತ್ತು 39ರಲ್ಲಿ ಒಟ್ಟು 09 ಎಕರೆ ಜಮೀನಿದ್ದು , ಇದರಲ್ಲಿ ನಮಗೆ 01 ಎಕರೆ 20 ಗುಂಟೆ ಬಂದಿದ್ದು , ಸದರಿ ಜಮೀನಿನಲ್ಲಿ ಅಡಿಕೆ ತೋಟ ಇತ್ತು, ಈ ಜಮೀನಿನಲ್ಲಿ ನಾವುಗಳು ಎರಡು ಬೋರ್ ವೆಲ್ ಕೊರೆಸಿದ್ದು 02 ಫೇಲ್ ಆಗಿದ್ದು, ನಮ್ಮ ಯಜಮಾನರು ನಮ್ಮೂರಿನ ಮಾರುತಿ ಸ್ವ ಸಹಾಯ ಸಂಘದಿಂದ 25.000=00 ರೂ ಸಾಲ ಪಡೆದಿದ್ದು ಇದನ್ನು ಸದರಿ ಸಂಘಕ್ಕೆ ವೈ ಎನ್ ಹೊಸಕೋಟೆ ಡಿ.ಸಿ.ಸಿ ಬ್ಯಾಂಕ್ ವತಿಯಿಂದ ನೀಡಿದ ಸಾಲವಾಗಿರುತ್ತದೆ, ಉಳಿದಂತೆ ಸುಮಾರು 05 ಲಕ್ಷ ರೂಗಳನ್ನು ಕೈ ಸಾಲ ಮಾಡಿಕೊಂಡಿರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಮಳೆ ಕೈಕೊಟ್ಟು ಬೆಳೆ ಇಲ್ಲದ್ದರಿಂದ ಅಡಿಕೆ ತೋಟ ಒಣಗುವ ಸ್ಥಿತಿಗೆ ಬಂದಿದ್ದನ್ನು ನೋಡಿದ ನನ್ನ ಗಂಡ ಅಡಿಕೆ ತೋಟ ಉಳಿಸಿಕೊಳ್ಳಲು   ಇಷ್ಟೆಲ್ಲಾ ಸಾಲ ಮಾಡಿದರೂ ಪ್ರಯೋಜನ ವಾಗಲಿಲ್ಲ ತೋಟ ಉಳಿಸಿಕೊಳ್ಳದ ಮೇಲೆ ಇರುವುದಕ್ಕಿಂತ ಸಾಯುವುದು ಮೇಲೂ,  ಸಾಲ ದಿನೇ ದಿನೇ ಜಾಸ್ತಿಯಾಗುತ್ತಿದೆ ಎಂತ ಕೊರುಗುತ್ತಿದ್ದು, ಹೀಗಿರುವಾಗ ಮಕ್ಕಳಿಗೆ ಬೇಸಿಗೆ ರಜೆ ಇದ್ದುದ್ದರಿಂದ ನಾನು ಮತ್ತು ನನ್ನ ಮಕ್ಕಳು ಕಳೆದ ಶುಕ್ರವಾರ ನನ್ನ ತವರು ಮನೆಗೆ ಹೋಗಿದ್ದೆವು ಈ ದಿನ ದಿನಾಂಕ:17/04/2017 ರಂದು ಬೆಳಿಗ್ಗೆ 08:15 ಗಂಟೆಯಲ್ಲಿ ನಿನ್ನ ಗಂಡ ನಿಮ್ಮ ಮನೆಯ ಹಾಲ್ ನಲ್ಲಿ ಪ್ಯಾನ್ ಗೆ ದಿ:16/07/2017 ರಾತ್ರಿ ಯಾವಗಲೋ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ , ನಾವು ಬೆಳಿಗ್ಗೆ ಅದನ್ನು ಬಾಗಿಲ ಸಂದಿಯಿಂದ ನೋಡಿ ಬಾಗಿಲು ಹೊಡೆದು ನೋಡಲಾಗಿ ಮೃತಪಟ್ಟಿರುತ್ತಾರೆ ಬೇಗ ಬನ್ನಿ ಎಂತ ಮಾವ ಕೃಷ್ಣಾರೆಡ್ಡಿ ಪೋನ್ ಮಾಡಿ ತಿಳಿಸಿರುತ್ತಾರೆ, ನಾವು ಬಂದು ನೋಡಲಾಗಿ ವಿಷಯ ನಿಜವಾಗಿತ್ತು, ನನ್ನ ಗಂಡ ನಮ್ಮ ಅಡಿಕೆ ತೋಟ ಒಣಗಿದ್ದರಿಂದ ಮತ್ತು ಅಡಿಕೆ ತೋಟ ಉಳಿಸಿಕೊಳ್ಳಲು ಮಾಡಿದ ಬೆಳೆ ಸಾಲದ ಬಾಧೆಯಿಂದ ಮನನೊಂದು ತನ್ನಷ್ಟಕ್ಕೆ ತಾನೇ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಯೇ ವಿನಾಃ ನನ್ನ ಗಂಡನ ಸಾವಿನಲ್ಲಿ ಬೇರೆಯಾವ ಅನುಮಾನವಿಲ್ಲ, ಆದರೂ ಸಹ ತಾವುಗಳು ಕಾನೂನುಕ್ರಮ ಜರುಗಿಸ ಬೇಕೆಂದು ಕೋರುತ್ತೇನೆಂತ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಠಾಣಾ ಯು,.ಡಿ.ಆರ್ ನಂ: 09/2017 ಕಲಂ:174 ಸಿ.ಆರ್,ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತದೆ.

ಹೊನ್ನವಳ್ಳಿ  ಪೊಲೀಸ್‌ ಠಾಣೆ ಮೊ,ನಂ-44/2017 ಕಲಂ- 279.304 (ಎ). ಐಪಿಸಿ ರೆ/ವಿ 187 ಐಎಂವಿ ಆಕ್ಟ್‌

ದಿನಾಂಕ:17/04/2017 ರಂದು ಬೆಳಗ್ಗೆ  8-45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರಾಮಕೃಷ್ಣಪ್ಪ  ಬಿನ್ ಗಂಜಿಗಪ್ಪ ಸೋಮನಹಳ್ಳಿ ಕಡೂರ ||ತಾ|| ಚಿಕ್ಕಮಂಗಳೂರು ಜಿಲ್ಲೆ , ರವರು ಕೃತ್ಯ ನಡೆದ ಸ್ಥಳದಲ್ಲಿ  ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ಪಿರ್ಯಾದಿಯ ಮಗ ರಘು ಎಸ್‌ಆರ್‌ ಎಂಬುವನು ಬೆಂಗಳೂರಿನಲ್ಲಿ ಹೋಂಗಾರ್ಡ್ ಕೆಲಸಮಾಡಿಕೊಂಡಿದ್ದು, ಅಲ್ಲಿಯೇ ವಾಸವಾಗಿದ್ದು,   ದಿನಾಂಕ:16/04/2017 ರಂದು ಪಿರ್ಯಾದಿಯವರ ಸಂಭಂದಿಗಳ ಮದುವೆಗೆ ಬೆಂಗಳೂರಿನಿಂದ  ಊರಿಗೆ ಬಂದು ಮದುವೆ ಮಗಿಸಿಕೊಂಡು ವಾಪಸ್‌ ಕೆಎ 18.ಇಡಿ.6954 ನೇ ಡಿಸ್ಕವರಿ ಬೈಕ್‌ನಲ್ಲಿ ದಿನಾಂಕ 17/04/2017 ರಂದು ಬೆಳಗ್ಗೆ 5 ಗಂಟೆಗೆ ಹೊರಟು ಹೋದ ನಂತರ ಸುಮಾರು 7-00 ಗಂಟೆಯಲ್ಲಿ ಚಿಕ್ಕಬಿದರೆ ವಾಸಿ ಭಾರತಮ್ಮ ಕೋಂ ಉಮೇಶ ಮತ್ತು  ಅವರ ಮಗ ರಾಕೇಶ್‌ ಫೋನ್‌ ಮಾಡಿ ಮತ್ತಿಹಳ್ಳಿ ಗೇಟ್‌ ಬಳಿ ಲಾರಿ ಗುದ್ದಿ ನಿಮ್ಮ  ಮಗ ಮೃತ ಪಟ್ಟಿರುತ್ತಾನೆ ಎಂದು ತಿಳಿಸಿದ ಮೇಲೆ ನಾನು ಕೂಡಲೆ ನಮ್ಮವರ ಜೊತೆ ಸ್ಥಳಕ್ಕೆ ಬಂದು ನೋಡಲಾಗಿ  ಮತ್ತಿಹಳ್ಳಿ ಗೇಟ್‌ ಎನ್‌ಹೆಚ್‌ 206 ರಸ್ತೆ ಯ ತೀರುವಿನಲ್ಲಿ ಮೃತನಾಗಿದ್ದು ಅಪಘಾತದಿಂದ ಮರಣ ಹೊಂದಿದ್ದು ಸ್ಥಳದಲ್ಲಿ ಅಪಘಾತ ಪಡಿಸಿದ ಆರ್‌ಜೆ -14-ಜಿಡಿ-4235 ವಾಹನವಿದ್ದು ಮತ್ತೆ ನನ್ನ ಮಗ ಓಡಿಸಿಕೊಂಡು ಬಂದ ಕೆಎ-18 ಇಡಿ -6954 ಬೈಕ್‌‌ ಜಕಂ ಗೊಂಡಿದ್ದು ಸ್ಥಳದಲ್ಲಿ ಬಿದ್ದಿದ್ದು ಸ್ಥಳವನ್ನು ನೋಡಲಾಗಿ   ಈ ದಿನ ದಿನಾಂಕ 17-04-2017 ರಂದು ಬೆಳಗ್ಗೆ ಸುಮಾರು 6-15 ಗಂಟೆ ಸಮಯದಲ್ಲಿ ನನ್ನ ಮಗ ರಘು ಎಸ್‌.ಆರ್‌ ಮತ್ತಿಹಳ್ಳಿ  ತೀರುವಿನಲ್ಲಿ ಬೆಂಗಳೂರು ಕಡೆಗೆ ಕೆಎ-18 ಇಡಿ -6954 ನೇಬೈಕ್‌ನಲ್ಲಿ ರಸ್ತೆಯ ಎಡ ಬದಿಯಲ್ಲಿ ಹೋಗುತ್ತಿರುವಾಗ ತಿಪಟೂರು ಕಡೆಯಿಂದ  ಆರ್‌ಜೆ -14-ಜಿಡಿ-4235 ನೇ ಲಾರಿಯ ಚಾಲಕ  ಅತೀವೇಗ ಮತ್ತು ಅಜಾಗರುಕತೆಯಿಂದ  ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯ ಮಗನ ಬೈಕ್‌ ಗೆ ಢಿಕ್ಕಿ ಹೊಡೆಸಿದ ಪರಿಣಾಮ ಆತನ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಲಾರಿ ಚಾಲಕ ಅಪಘಾತ ಮಾಡಿದ ನಂತರ ಲಾರಿ ನಿಲ್ಲಿಸಿ ಓಡಿ ಹೋಗಿರುತ್ತಾನೆ ಆದ್ದರಿಂದ ಲಾರಿಯ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 84 guests online
Content View Hits : 322833