lowborn Crime Incidents 17-04-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >> ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ ದಿನಾಂಕ 13/1/2018           >> -:  ಪತ್ರಿಕಾ ಪ್ರಕಟಣೆ.  :-   ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380... >> >> -: ದಿನಾಂಕ : 19 -12 -17  :- :  ಪತ್ರಿಕಾ ಪ್ರಕಟಣೆ : ಕೋಮು ಪ್ರಚೋದನಕಾರಿ ಹೇಳಿಕೆಗಳ... >> ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 17-04-17

ಹೊನ್ನವಳ್ಳಿ ಪೊಲೀಸ್ ಠಾಣೆ   ಮೊ,ನಂ-43/2017 ಕಲಂ- 279.337. ಐಪಿಸಿ

ದಿನಾಂಕ:16/04/2017 ರಂದು ಮದ್ಯಾಹ್ನ 12-10 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಎಂ.ಎನ್‌ ಅರುಣ್‌ಕುಮಾರ್‌ ಬಿನ್ ನಂಜುಂಡಸ್ವಾಮಿ, ಶ್ರೀನಿದಿ ಲೇಔಟ್‌ ಬೆಂಗಳೂರು ನಗರ, ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ:15/04/2017 ರಂದು ಬೆಳಿಗ್ಗೆ 11-20 ಗಂಟೆಗೆ ಪಿರ್ಯಾದಿಯವರ ಅಣ್ಣ ನವರಾದ 51 ವರ್ಷದ ಎಂ.ಎನ್‌ ಶೇಷಾದ್ರಿಯವರು ಕೆಎ-13-ಇಬಿ-6127 ನೇ ಟಿ.ವಿ.ಎಸ್‌.ವಿಗಾ ಬೈಕ್‌ನ್ನು ಎನ್‌.ಹೆಚ್‌ 206 ರಸ್ತೆಯ ತಿಮ್ಲಾಪುರ ಗೇಟ್‌ ಬಳಿ ಅರಸೀಕೆರೆಯಿಂದ ತಿಪಟೂರು ಕಡೆಗೆ  ಚಾಲನೆ ಮಾಡಿಕೊಂಡು  ಹೋಗುತ್ತಿರುವಾಗ ಹಿಂಬದಿಯಿಂದ ಅಂದರೆ ಅರಸೀಕೆರೆ ಕಡೆಯಿಂದ ಕೆಎ-18—ಎಫ್‌ 594 ನೇ ಕೆ.ಎಸ್‌.ಆರ್‌.ಟಿ.ಸಿ ಬಸ್ಸಿನ ಚಾಲಕ ಶೇಖ್ ರಿಯಾಜ್‌ ಬಿನ್ ಶೇಖ್‌ ಆಲಿ ಬೇಲೂರು ಡಿಪೋ   ರವರು ಬಸ್‌ ನ್ನು ಅತೀವೇಗವಾಗಿ ಚಾಲನೆ ಮಾಡಿಕೊಂಡು ಬಂದು ಶೇಷಾದ್ರಿಯವರ ಬೈಕ್‌ ಗೆ ಢಿಕ್ಕಿ ಹೊಡೆಸಿದ ಪರಿಣಾಮ ಅವರ ಬಲಭುಜ, ಬಲದವಡೆ, ಮತ್ತು ಹಣೆಗೆ ಪೆಟ್ಟು ಬಿದ್ದಿದ್ದು ಇವರನ್ನು ಅರಸೀಕೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಹಾಸನದ ಜನಪ್ರೀಯ ಆಸ್ಪತ್ರೆಗೆ ಗಾಯಾಳುವನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಈ ದಿನ ಬಂದು ಕೆಎ-18-ಎಫ್‌-594 ನೇ ಬಸ್‌ನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತದೆ.

ಸಿ.ಎಸ್.ಪುರ ಠಾಣಾ ಮೊ.ನಂ:43/2017. ಕಲಂ: 324. 498(ಎ) ಐಪಿಸಿ

ದಿನಾಂಕ:16.04.2017 ರಂದು ಸಂಜೆ 5.30 ಗಂಟೆಗೆ  ಪಿರ್ಯಾದುದಾರರಾದ ಮೀರಜ್  ಬಿನ್ ಲೇಟ್ ಗೌಸ್ ಮೊಹಿದ್ದೀನ್, 38 ವರ್ಷ, ಮುಸ್ಲಿಂ ಜನಾಂಗ, ಕೆಂಚನಹಳ್ಳಿ, ಸಿ.ಎಸ್.ಪುರ ಹೋಬಳಿ, ಗುಬ್ಬಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆಂದರೆ, ನನ್ನ  ತಂದೆ ತಾಯಿಗೆ 4 ಜನ ಹೆಣ್ಣು ಮಕ್ಕಳಿದ್ದು, ಮೂರನೇಯ ಮಗಳಾದ  ಸಬೀನಾಬಾನುಳನ್ನು ಈಗ್ಗೆ 9 ವರ್ಷಗಳ ಹಿಂದೆ ರೆಹಮತ್ ನಗರದ ವಾಸಿ ಲೇಟ್ ಸಮೀಉಲ್ಲಾರವರ ಮಗನಾದ ಅಜೀಮ್ ಗೆ ಕೊಟ್ಟು ಮದುವೆ ಮಾಡಿದ್ದು, ಇವರಿಗೆ ಇಬ್ಬರು ಗಂಡು ಮಕ್ಕಳಿರುತ್ತಾರೆ. ಅಜೀಮನು ಮಧ್ಯಪಾನ ವ್ಯಸನಿಯಾಗಿದ್ದು, ಆಟೋ ಓಡಿಸಿಕೊಂಡು ಜೀವನಮಾಡಿಕೊಂಡಿರುತ್ತಾನೆ, ಸಂಸಾರದಲ್ಲಿ  ಸಣ್ಣ ಪುಟ್ಟ ವಿಚಾರದಲ್ಲಿ ಆಗಾಗ್ಗೆ ಗಲಾಟೆ ಮಾಡಿಕೊಳ್ಳುತಿದ್ದು, ಈ ಬಗ್ಗೆ ಹಲವು ಬಾರಿ ನನ್ನ ತಂಗಿ ಸಬೀನಾ ಬಾನು ಪೋನಿನಲ್ಲಿ ಕರೆ ಮಾಡಿ ವಿಚಾರ ತಿಳಿಸುತ್ತಿದ್ದಳು, ದಿನಾಂಕ:16.04.2017 ರಂದು  ಬೆಳಗ್ಗೆ 11.00 ಗಂಟೆ ಸಮಯದಲ್ಲಿ  ನನ್ನ ತಂಗಿಯು  ದವಸ ದಾನ್ಯ ತರಲು ಬಿಪಿಎಲ್ ಕಾರ್ಡನ್ನು  ಅವರ ಅತ್ತೆಯ ಮನೆಯ ಹತ್ತಿರ  ತೆಗೆದುಕೊಂಡು ಬರಲು ಹೋಗಿರುವಾಗ್ಗೆ ಅದೇ ಸಮಯಕ್ಕೆ  ಅಜೀಮ್  ಬಂದು  ನನ್ನ ತಾಯಿಯನ್ನು  ಏತಕ್ಕೆ ಮಾತನಾಡಿಸಿದ್ದು ಅಂತ  ನನ್ನ ತಂಗಿಯ ಮೇಲೆ ಜಗಳ ತೆಗೆದು  ಅಲ್ಲಿಯೇ ಬಿದ್ದಿದ್ದ  ದೊಣ್ಣೆಯಿಂದ  ತಲೆಗೆ, ಬಲಕಿವಿಯ ಹತ್ತಿರ ಮತ್ತು ಬಲರೆಟ್ಟೆಯ ಹತ್ತಿರ ಹೊಡೆದು ರಕ್ತಗಾಯಗೊಳಿಸಿರುತ್ತಾನೆ, ಈ ವಿಚಾರವನ್ನು  ನನ್ನ ಅಕ್ಕ ನೂರ್ ಜಾನ್ ರವರು ಪೋನ್ ಮಾಡಿ ತಿಳಿಸಿದಾಗ , ನಾನು ಕೂಡಲೇ ರೆಹಮತ್ ನಗರಕ್ಕೆ ಹೋಗಿ ನೋಡಲಾಗಿ ನನ್ನ ತಂಗಿ ಸಬೀನಾ ಬಾನುಳಿಗೆ ರಕ್ತಗಾಯವಾಗಿ  ರಕ್ತಸ್ರಾವವಾಗಿತ್ತು, ಆಗ ಅಲ್ಲಿಯೇ ಇದ್ದ  ಅಸ್ಲಂ & ನನ್ನ ತಾಯಿಯಾದ ಅಖಿಲಾಬಿ ರವರುಗಳು ಗಲಾಟೆ ಬಿಡಿಸಿದರು ಇತ್ಯಾದಿಯಾಗಿ ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ನಂ-35/2017 ಕಲಂ: 379 ಐ.ಪಿ.ಸಿ.

ದಿನಾಂಕ:16-04-2017 ರಂದು ಮಧ್ಯಾಹ್ನ 12-15 ಗಂಟೆ ಸಮಯದಲ್ಲಿ ಪಿರ್ಯಾದಿ ನಾಗಭೂಷಣ ಬಿನ್ ಈರಣ್ಣ, 24 ವರ್ಷ, ಗೊಲ್ಲರು, ಜಿರಾಯ್ತಿ, ಮಲ್ಲೇನಹಳ್ಳಿಗೊಲ್ಲರಹಟ್ಟಿ, ದೊಡ್ಡೇರಿ ಹೋಬಳಿ, ಮಧುಗಿರಿ ತಾಲ್ಲೋಕು, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ  ದಿ:09-03-2017 ರಂದು ಬೆಳಿಗ್ಗೆ   ಹೊಸಕೆರೆಯಲ್ಲಿರುವ  ನಾಗಪ್ಪ ಸಮುದಾಯ ಭವನದಲ್ಲಿ ನಡೆದ ನಮ್ಮ ಸಂಬಂದಿಕರ ಮದುವೆಗಾಗಿ ನನ್ನ ಬಾಬ್ತು KA-06-EK-9527 ನೇ ನಂಬರಿನ ಹೀರೋ ಹೊಂಡಾ ಸ್ಪ್ಲೆಂಡರ್  ಬೈಕಿನಲ್ಲಿ ಹೊಸಕೆರೆಗೆ ಬಂದು  ನಾಗಪ್ಪ ಸಮುದಾಯ ಭವನದ ಮುಂಭಾಗ ಅದೇ ದಿನ ಬೆಳಿಗ್ಗೆ ಸುಮಾರು 09-30 ಗಂಟೆ ಸಮಯದಲ್ಲಿ ನನ್ನ ಬಾಬ್ತು ಮೇಲ್ಕಂಡ ಬೈಕನ್ನು ನಿಲ್ಲಿಸಿ ಛತ್ರದೊಳಗೆ ಹೋಗಿ  ಮಧುವೆ ಕಾರ್ಯಕ್ರಮ ಮುಗಿಸಿಕೊಂಡು ಊಟ ಮಾಡಿ  ನಂತರ ಅದೇ ದಿನ  ಬೆಳಿಗ್ಗೆ ಸುಮಾರು 10-30 ಗಂಟೆ ಸಮಯಕ್ಕೆ ನನ್ನ ಬೈಕನ್ನು ನಿಲ್ಲಿಸಿದ್ದ ಸ್ಥಳಕ್ಕೆ ಬಂದಾಗ  ನಾನು ನಿಲ್ಲಿಸಿ ಹೋಗಿದ್ದ ಮೇಲ್ಕಂಡ ನನ್ನ ಬಾಬ್ತು ಬೈಕು ಇರಲಿಲ್ಲ. ನಾನು ಅಕ್ಕ ಪಕ್ಕದಲ್ಲಿ ಹುಡುಕಾಡಿ ನೋಡಿದೆನು ನನ್ನ ಬೈಕು ಎಲ್ಲೂ  ಸಿಗಲಿಲ್ಲ. ನನ್ನ ಬಾಬ್ತು KA-06-EK-9527 ನೇ ನಂಬರಿನ  ಸುಮಾರು 30 ಸಾವಿರ ರೂ ಬೆಲೆ ಬಾಳುವ  ಹೀರೋ ಹೊಂಡಾ ಸ್ಪ್ಲೆಂಡರ್  ಬೈಕನ್ನು ಅದೇ ದಿನ ಬೆಳಿಗ್ಗೆ ಸುಮಾರು 09-30 ರಿಂದ 10-30 ಗಂಟೆಯ ಮದ್ಯೆ ಯಾವುದೋ ಸಮಯದಲ್ಲಿ ಯಾರೋ ಕಳ್ಳರು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನ ಬೈಕಿಗೆ ಇನ್ಸೂರೆನ್ಸ್ ಇಲ್ಲದ್ದರಿಂದ ಹಾಗೂ ನನಗೆ ಕಾನೂನಿನ ಅರಿವು ಇಲ್ಲದ್ದರಿಂದ ನನ್ನ ಬೈಕು ಕಳ್ಳತನವಾದ ಬಗ್ಗೆ ನಾನು ಪೊಲೀಸ್ ಠಾಣೆಗೆ ದೂರು ಕೊಟ್ಟಿರಲಿಲ್ಲ.  ಆದ್ದರಿಂದ ದಿನಾಂಕ:09-03-2017 ರಂದು ಬೆಳಿಗ್ಗೆ ಸುಮಾರು 09-30 ರಿಂದ 10-30 ಗಂಟೆಯ ಮದ್ಯೆ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಮೇಲ್ಕಂಡ ನನ್ನ ಬಾಬ್ತು ಬೈಕನ್ನು ಪತ್ತೆ ಮಾಡಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ  ದೂರಿನ ಅಂಶವಾಗಿರುತ್ತೆ.

ಕಳ್ಳಂಬೆಳ್ಳ ಪೊಲೀಸ್ ಠಾಣಾ ಮೊ.ನಂ. 93/2017  ಕಲಂ 279,337 304(J) ಐ.ಪಿ.ಸಿ

ದಿನಾಂಕ: 16/4/2017 ರಂದು ಬೆಳಿಗ್ಗೆ 9-00 ಗಂಟೆಗೆ ಪಿರ್ಯಾದಿ ಹಿಜ್ರಾಹಿಲ್ .ಡಿ ವಣವಕಲ್‌ ಕೂಡ್ಲಿಗಿ ತಾ||    ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಕೆ.ಎ -16-¹-0239 ಲಾರಿಗೆ ಚಾಲಕನಾಗಿದ್ದು ಈ ಲಾರಿಯಲ್ಲಿ ಸಂಡೂರ್ ನಿಂದ ಮೈನ್ಸ್ ತುಂಬಿಕೊಂಡು ದೊಡ್ಡಾಲದಮರ ಹತ್ತಿರ ಇರುವ ಸನ್ವಿಕ್ ಪ್ಯಾಕ್ಟರಿಗೆ ಅನ್ಲೋಡ್ ಮಾಡುತ್ತಿರುತ್ತೇನೆ.  ಇದರಂತೆ ದಿನಾಂಕ: 15/04/2017 ರಂದು ಮದ್ಯಾಹ್ನ ಸಂಡೂರು ನಲ್ಲಿ KA-16-C-0239 ನೇ ಲಾರಿಗೆ ಮೈನ್ಸ್ ಲೋಡ್ ಮಾಡಿಕೊಂಡು ನಾನು ಚಾಲಕನಾಗಿ ಸನ್ವಿಕ್ ಪ್ಯಾಕ್ಟರಿಗೆ ಅನ್ ಲೋಡ್ ಮಾಡಲು ಹೊರಟು, ಬಳ್ಳಾರಿ ಚಿತ್ರದುರ್ಗ, ಹಿರಿಯೂರು , ಸಿರಾ ಮಾರ್ಗವಾಗಿ ಹೊರಟು ದಿನಾಂಕ: 16/04/2017  ರಂದು  ಸುಮಾರು 1-30 ಎ.ಎಂ. ಗಂಟೆಯಲ್ಲಿ  ಕಳ್ಳಂಬೆಳ್ಳ ಸರ್ಕಾರಿ ಆಸ್ಪತೆಯ ಮುಂಭಾಗದಲ್ಲಿ ಸಿರಾ-ತುಮಕೂರು ಎನ್,ಹೆಚ್-48 ರಸ್ತೆಯಲ್ಲಿ 2ನೇ ಟ್ರಾಕ್ ನಲ್ಲಿ ದೊಡ್ಡಾಲದಮರದ ಕಡೆ ನನ್ನ ಲಾರಿಯನ್ನು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ್ಗೆ  ಇದೇ ವೇಳೆಯಲ್ಲಿ ನನ್ನ ಲಾರಿಯ ಹಿಂಭಾಗದಲ್ಲಿ ಬರುತ್ತಿದ್ದ  ಒಂದು ಕಾರನ್ನು  ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ.  ತಕ್ಷಣ ನಾನು ನನ್ನ ಲಾರಿಯನ್ನು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿ ನೋಡಲಾಗಿ ಅಪಘಾತಕ್ಕೀಡಾದ ಕಾರು ನನ್ನ ಲಾರಿಯ ಹಿಂಬದಿಗೆ ಸಿಕ್ಕಿ ಹಾಕಿಕೊಂಡಿತ್ತು.  ಅದರಲ್ಲಿ ಕಾರಿನ ಚಾಲಕ, ಕಾರಿನ ಪಕ್ಕದಲ್ಲಿ ಒಬ್ಬರು ಹೆಂಗಸು ಮತ್ತು ಕಾರಿನ ಹಿಂಭಾಗದ ಸೀಟಿನಲ್ಲಿ ಒಬ್ಬರು ವಯಸ್ಸಾದವರು ಇದ್ದರು.  ಕಾರಿನ ಚಾಲಕನ ತಲೆಗೆ ಮತ್ತು ಮುಖಕ್ಕೆ ಬಲವಾದ ಪೆಟ್ಟುಬಿದ್ದು ರಕ್ತಗಾಯವಾಗಿತ್ತು.  ಹೆಂಗಸಿಗೆ ತಲೆಗೆ ಮತ್ತು ಮುಖಕ್ಕೆ ಪೆಟ್ಟಾಗಿ ರಕ್ತಗಾಯವಾಗಿತ್ತು.  ಹಿಂಬದಿಯಲ್ಲಿ ಕುಳಿತಿದ್ದವರಿಗೆ ತಲೆಗೆ ಪೆಟ್ಟಾಗಿತ್ತು.  ಈ ಅಪಘಾತವನ್ನು ನೋಡಿ ಹತ್ತಿರ ಬಂದ ಸಾರ್ವಜನಿಕರ ಸಹಾಯದಿಂದ ಕಾರಿನಿಂದ ಎಲ್ಲರನ್ನೂ ಹೊರಕ್ಕೆ ಎಳೆದು ಬಿಟ್ಟು ತಕ್ಷಣ ಹೈವೇ ಆಂಬ್ಯುಲೆನ್ಸ್ ಗೆ ಮತ್ತು ಪೊಲೀಸರಿಗೆ ಪೋನ್ ಮಾಡಿಸಿದೆನು.  ತಕ್ಷಣ ಅಪಘಾತದ ಸ್ಥಳಕ್ಕೆ ಬಂದ ಹೈವೆ ಆಂಬ್ಯುಲೆನ್ಸ್ ಮತ್ತು ಪೊಲೀಸರು ಬಂದರು.  ಆಗ ನಾನು ಮತ್ತು ಪೊಲೀಸಿನವರು ಮತ್ತು ಸಾರ್ವಜನಿಕರು ಹೈವೆಆಂಬ್ಯುಲೆನ್ಸ್ ನಲ್ಲಿ ಕಳ್ಳಂಬೆಳ್ಳ ಆಸ್ಪತ್ರೆಗೆ ಕಳುಹಿಸಿದ್ದು ನಂತರ ಅಲ್ಲಿನ ವೈದ್ಯರು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಟ್ಟರು.  ಅಪಘಾತಕ್ಕೀಡಾದ ಕಾರಿನ ನಂಬರ್ ನೋಡಲಾಗಿ TS-07-EH-7731  ನೇ ಮಾರುತಿ ಸುಜುಕಿ ರಿಡ್ಜ್ ಕಾರಾಗಿತ್ತು.  ನಂತರ ಸದರಿ ಕಾರಿನ ಚಾಲಕನ ಹೆಸರು  ಮೋಹಿನುದ್ದಿನ್, ಹೆಂಗಸಿನ ಹೆಸರು ಆಸ್ಪಿಯಾ ಖಾನಂ, ಮತ್ತು ವಯಸ್ಸಾದವರ ಹೆಸರು ರೊನದ್   ಎಲ್ಲರೂ ಸಹ ಯಶವಂತಪುರ, ಬೆಂಗಳೂರು ವಾಸಿಗಳು ಅಂತ ಹಾಗೂ ಕಾರಿನ ಚಾಲಕ ಮೊಹಿನುದ್ದಿನ್ ಮತ್ತು ಇನ್ನಿಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಯಿಂದ ನೆಲಮಂಗಲ ಹರ್ಷ ಆಸ್ಪತ್ರೆಗೆ  ಕರೆದುಕೊಂಡು ಹೋಗುತ್ತಿರುವಾಗ್ಗೆ ಮಾರ್ಗಮದ್ಯೆ  ಮೊಹಿನುದ್ದಿನ್  ಹೆಚ್ಚಿನ ರಕ್ತಶ್ರಾವವಾಗಿ  ಮರಣ ಹೊಂದಿರುವುದಾಗಿ ತಿಳಿದುಬಂತು.  ಗಾಯಾಳುಗಳು ನೆಲಮಂಗಲ ಹರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೊಹಿನುದ್ದಿನ್ ರವರ ಶವವನ್ನು ತುಮಕೂರು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿಟ್ಟಿರುವುದಾಗಿ ತಿಳಿದುಬಂದಿರುತ್ತದೆ.  ಈ ಅಪಘಾತಕ್ಕೆ ಖಿಖ-07-ಇಊ-7731 ನೇ ಮಾರುತಿ ಸುಜುಕಿ ರಿಡ್ಜ್ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾನು ಚಾಲನೆ ಮಾಡಿಕೊಂಡು ಹೋಗುತ್ತಿದ್ದ KA-16-C-0239 ನೇ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದೆ ಕಾರಣವಾಗಿರುತ್ತೆ.   ಈ ಅಪಘಾತಪಡಿಸಿದ TS-07-EH-7731 ನೇ ಮಾರುತಿ ಸುಜುಕಿ ರಿಡ್ಜ್ ಕಾರಿನ ಚಾಲಕ ಮೊಹಿನುದ್ದೀನ್ ರವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೇಳಿಕೊಳ್ಳುತ್ತೇನೆ.  ಈ ವಿಚಾರವನ್ನು ಮಾಲೀಕರಿಗೆ ತಿಳಿಸಿ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆಂದು ನೀಡಿದ ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ

ಚೇಳೂರು  ಪೊಲೀಸ್   ಠಾಣಾ  ಮೊ.ನಂ.63/2017  ಕಲಂ 323.324. 504.506. 307 ರೆ/ವಿ 34  ಐ.ಪಿ.ಸಿ

ದಿನಾಂಕ; 15/04/2017  ರಂದು ಗುಬ್ಬಿ  ಸರ್ಕಾರಿ  ಆಸ್ಪತ್ರೆಯಲ್ಲಿ  ರಾತ್ರಿ 8-30  ಗಂಟೆಗೆ  ಗಾಯಾಳು  ನವೀನ್  ಕುಮಾರ ರವರ ಹೇಳಿಕೆ  ಪಡೆದು  ಠಾಣೆಗೆ  ರಾತ್ರಿ 9-20  ಗಂಟೆ  ಹಾಜರಾಗಿ  ಪ್ರಕರಣ ದಾಖಲಿಸಿದ   ಹೇಳಿಕೆ  ಪಿರ್ಯಾದುವಿನ  ಅಂಶವೇನಂದರೆ,    ಈ  ದಿನ  ಮದ್ಯಾಹ್ನ 12-00  ಗಂಟೆ  ಸಮಯದಲ್ಲಿ  ನನ್ನ ಮಾತುಕತೆ ( ನಿಶ್ಚಿತಾರ್ಥ)  ವಿಚಾರವನ್ನು  ನಮ್ಮ  ಚಿಕ್ಕಪ್ಪ  ಲಕ್ಷ್ಮಯ್ಯ ರವರಿಗೆ  ಹೇಳಿ  ನಂತರ  ಮತ್ತೊಬ್ಬ  ಚಿಕ್ಕಪ್ಪ  ಶಿವರಾಜಯ್ಯರವರಿಗೆ ಹೇಳಲು  ಹೋಗುವಾಗ  ನಮ್ಮ  ಗ್ರಾಮದ  ಕರಿಯಪ್ಪ  @ ತೀನಗಪ್ಪ ರವರ  ಮಗ  ರವೀಶನು   ಏನಲೇ  ನಮ್ಮ ತೋಟದಲ್ಲಿ ಯಾಕೆ  ಬಂದಿದ್ದೀಯಾ  ಎಂದು  ಗಲಾಟೆ  ಮಾಡಿದನು.  ನಾನು  ಈ  ವಿಚಾರವಾಗಿ  ಚೇಳೂರು  ಪೊಲಿಸ್  ಠಾಣೆಗೆ  ಹೋಗಿ  ವಿಚಾರ  ತಿಳಿಸಿ ಬಂದಿದ್ದೆನು.  ಇದೇ  ದಿನ  ಸಂಜೆ 6-00  ಗಂಟೆಗೆ  ಸಮಯದಲ್ಲಿ  ನಾನು  ಎಮ್ಮೆ  ಹಿಡಿದುಕೊಂಡು  ಬರಲು ನಮ್ಮ ಗ್ರಾಮದ ಅಂಬೆಡ್ಕರ್  ಭವನದ  ಮುಂದೆ  ಹೋಗುತ್ತಿರುವಾಗ  ರವೀಶ  ಬಿನ್  ಕರಿಯಪ್ಪ @ ತೀನಗಪ್ಪ  ಇವರ ಅಣ್ಣಂದಿರಾದ  ಬಸವರಾಜು , ಕೆಂಚ ಕುಮಾರ ಮೂವರೂ  ಏಕಾ  ಏಕಿ ಬಂದವರೇ  ಏನೋ  ಬೋಳಿಗನೇ ಪೊಲೀಸ್  ಸ್ಟೇಷನ್ ಗೆ  ಹೋಗಿ ಕಂಪ್ಲೇಂಟ್  ಕೊಟ್ಟು  ಬಂದಿದ್ದೀಯಾ  ಎಂದು  ನನ್ನನೊಂದಿಗೆ  ಜಗಳ  ತೆಗೆದು  ರವೀಶನು ಕೈನಲ್ಲಿ  ಹೊಡೆದು ನಿನಗೆ ಒಂದು  ಗತಿ ಕಾಣಿಸುತ್ತೇನೆ.  ಎಂದು  ಮನೆಯಿಂದ  ಚೂರಿ ತಂದು  ತಲೆಯ  ಹಿಂಭಾಗಕ್ಕೆ  ಹೊಡೆದನು.  ನಾನು  ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ  ನನ್ನ  ಕುತ್ತಿಗೆಯ ಎಡ  ಭಾಗಕ್ಕೆ  ಗೀಚಿ ಎಡ ಕೈ ತೋರು ಬೆರಳಿಗೆ ಹೊಡೆದನು.  ರಕ್ತಗಾಯ ಪಡಿಸಿದನು.  ನಾನು ಅಯ್ಯೋ ಎಂದು ಕೂಗಿಕೊಂಡಾಗ  ನನ್ನನ್ನು ಬಿಡಿಸಿಕೊಳ್ಳಲು  ಬಂದ ನಮ್ಮ  ತಂದೆ  ಕರಿಯಪ್ಪ , ಚಿಕ್ಕಪ್ಪ ಚಂದ್ರಯ್ಯ, ಮತ್ತು ನಮ್ಮ  ಅಣ್ಣ ಕಾಂತರಾಜು ರವರಿಗೆ  ರವೀಶನ  ಅಣ್ಣಂದಿರಾದ  ಬಸವರಾಜು  ಮತ್ತು ಕೆಂಚಕುಮಾರರವರು  ಕೈಗಳಿಂದ ಗುದ್ದಿ  ನಿಮ್ಮನ್ನು  ಇಷ್ಟಕ್ಕೆ  ಬಿಡುವುದಿಲ್ಲ  ಎಂದು ಬಸವರಾಜು  ಒಂದು  ಕುಡುಗೋಲನ್ನು  ತಂದು ನಮ್ಮ  ತಂದೆ  ಕರಿಯಪ್ಪನಿಗೆ ಎಡ ಸೊಂಟಕ್ಕೆ  ಹೊಡೆದು ರಕ್ತಗಾಯ  ಪಡಿಸಿದನು. ನಂತರ  ಅಲ್ಲೇ  ಬಿದ್ದಿದ್ದ  ಎಡ ಮಟ್ಟೆಯಿಂದ  ನಮ್ಮ ತಂದೆಯ  ಬಲ ಭುಜಕ್ಕೆ  ಹೊಡೆದನು.   ಕೆಂಚ ಕುಮಾರನು  ರವೀಶನ  ಕೈಲಿದ್ದ  ಚಾಕುವನ್ನು ಕಿತ್ತುಕೊಂಡು  ನಮ್ಮ  ಚಿಕ್ಕಪ್ಪ ಚಂದ್ರಯ್ಯನಿಗೆ  ಬಲಗೈಗೆ  ಗೀಚಿ  ರಕ್ತಗಾಯ  ಪಡಿಸಿದನು.  ರವೀಶನು  ಬಸವರಾಜು ಕೈಲಿದ್ದ  ಕುಡುಗೋಲನ್ನು  ಕಿತ್ತುಕೊಂಡು  ನಮ್ಮ ಅಣ್ಣ  ಕಾಂತರಾಜುಗೆ  ತಲೆಗೆ ಎಡ ಮುಂಗೈಗೆ  ಎಡ ಗೈ ಕಿರುಬೆರಳಿಗೆ  ಎಡ ಭುಜಕ್ಕೆ  ಬಲ  ಗೈ ತೋರು ಬೆರಳಿಗೆ  ಹೊಡೆದು ರಕ್ತಗಾಯ ಪಡಿಸಿದನು.  ಆಗ ನಾವುಗಳು ಯಾರಾದರೂ  ಬಿಡಿಸಿರಪ್ಪೋ  ಎಂದು  ಕೂಗಿಕೊಂಡಾಗ  ನಮ್ಮ ಗ್ರಾಮದ  ಗಂಗಯ್ಯರವರ  ಮಗ  ಹರೀಶ, ದೊಡ್ಡಕರಿಯಪ್ಪರವರ  ಮಗ  ಶಿವರಾಜು  ಹಾಗೂ ಕೆಂಚಯ್ಯನ  ಮಗ   ಕೇಶವ ರವರುಗಳು  ಬಂದು  ಜಗಳ  ಬಿಡಿಸಿ ಸಮಾಧಾನ  ಮಾಡಿದರು,  ಮೇಲ್ಕಂಡವರು ಅಲ್ಲಿಂದ  ಹೋಗುವಾಗ  ಕುಡಗೋಲು  ಮತ್ತು  ಚೂರಿಯನ್ನು  ಅಲ್ಲೇ  ಬಿಸಾಡಿ  ಈ  ಬಾರಿ ತಪ್ಪಿಸಿಕೊಂಡಿದ್ದೀರಾ  ಮುಂದೆ ನಿಮಗೆ  ಗತಿ ಕಾಣಿಸುತ್ತೇವೆ.  ಎಂದು  ಪ್ರಾಣ  ಬೆದರಿಕೆ  ಹಾಕಿ  ಹೋದರು,  ಗಾಯಗೊಂಡ ನಮ್ಮನ್ನು  ಹರೀಶ ಮತ್ತು ಶಿವರಾಜುರವರು  ಯಾವುದೋ  ವಾಹನದಲ್ಲಿ  ಗುಬ್ಬಿ  ಆಸ್ಪತ್ರೆಗೆ  ಕರೆದುಕೊಂಡು  ಬಂದು  ಚಿಕಿತ್ಸೆಗೆ  ಸೇರಿಸಿದರು.  ಆದ್ದರಿಂದ  ನಮ್ಮ ಮೇಲೆ ಮಾರಣಾಂತಿಕವಾಗಿ ಹಲ್ಲೆ  ನಡೆಸಿದ ಮೇಲ್ಕಂಡವರ ಮೇಲೆ ಕಾನೂನು  ರೀತ್ಯ ಕ್ರಮ ಜರುಗಿಸಲು ಕೋರಿ ಇತ್ಯಾದಿಯಾದ  ಹೇಳಿಕೆ  ಅಂಶ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 75 guests online
Content View Hits : 231887