Crime Incidents 16-04-17
ಹೊಸಬಡಾವಣೆ ಪೊಲೀಸ್ ಠಾಣಾ ಮೊ.ಸಂ 37/2017 u/s 420, 468, 471 IPC
ದಿನಾಂಕ : 15-04-2017 ರಂದು ಸಂಜೆ 5-00 ಗಂಟೆಗೆ ಪಿರ್ಯಾದಿ ಪ್ರೋ|| ಪರಮಶಿವಮೂರ್ತಿ .ಡಿ.ವಿ. ಕುಲಸಚಿವರು, ತುಮಕೂರು ವಿಶ್ವ ವಿದ್ಯಾನಿಲಯ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ : 25-03-2017 ರಂದು ಶ್ರೀ ಕೃಷ್ಣ ಬಿನ್ ಕಾಳೇಗೌಡ, ಹುಲಿಕೆರೆ ಗ್ರಾಮ, ಮಂಡ್ಯ ಜಿಲ್ಲೆ ಎಂಬುವರು ತುಮಕೂರು ವಿವಿಯಿಂದ ನೀಡಿರುವಂತೆ ಇರುವ ಮೊಹಮದ್ ಅಜರ್ ಎಂಬುವರಿಗೆ ಸಂಬಂಧಪಟ್ಟ ಅಂಕಪಟ್ಟಿಗಳು ಹಾಗೂ ಪದವಿ ಪ್ರಮಾಣಪತ್ರಗಳನ್ನು ಲಗತ್ತಿಸಿ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಸದರಿ ಪ್ರಮಾಣ ಪತ್ರಗಳ ನೈಜತೆಯ ಬಗ್ಗೆ ಮಾಹಿತಿ ನೀಡಲು ತುಮಕೂರು ವಿವಿಗೆ ಕೋರಿಕೊಂಡಿದ್ದು ತುಮಕೂರು ವಿವಿ ವತಿಯಿಂದ ಮಹಮದ್ ಅಜರ್ ಬಿನ್ ಅಬ್ದುಲ್ ಮತೀನ್ ಎಂಬುವರ ಹೆಸರಿನಲ್ಲಿದ್ದ ಅಂಕಪಟ್ಟಿಗಳು ಹಾಗೂ ಪದವಿ ಪ್ರಮಾಣಪತ್ರಗಳನ್ನು ಪರಿಶೀಲಿಸಿ ನೋಡಲಾಗಿ ಸದರಿ ದಾಖಲಾತಿಗಳು ನಕಲಿಯಾಗಿರುತ್ತವೆ.. ಆರೋಪಿ ಮಹಮದ್ ಅಜರ್ ಬಿನ್ ಅಬ್ದುಲ್ ಮತೀನ್ ರವರು ಕಾಲೇಜಿನಲ್ಲಿ ಕಾಲೇಜಿನಲ್ಲಿ ವ್ಯಾಸಾಂಗ ಮಾಡದೇ ಇದ್ದರು ಸಹಾ ಎಲ್ಲಿಯೋ ಅಂಕಪಟ್ಟಿಗಳು ಹಾಗೂ ಪದವಿ ಪ್ರಮಾಣ ಪತ್ರವನ್ನು ನಕಲಿಯಾಗಿ ಸೃಷ್ಠಿಸಿಕೊಂಡು ವಂಚಿಸಿರುತ್ತಾರೆ. ಸದರಿ ಕೃತ್ಯದ ಹಿಂದೆ ಬೇರೆಯವರೂ ಸಹಾ ಭಾಗಿಯಾಗಿರಬಹುದಾದ ಸಾದ್ಯತೆ ಇದ್ದು ಈ ಬಗ್ಗೆ ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ .
ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 50/2017 ಕಲಂ 393 ಐಪಿಸಿ
ದಿನಾಂಕ:15/04/2017 ರಂದು ಬೆಳಿಗ್ಗೆ 10-40 ಗಂಟೆಗೆ ಲೋಕಮ್ಮ ಕೋಂ ಚಂದ್ರಯ್ಯ, 57 ವರ್ಷ, ಲಿಂಗಾಯಿತರು, ಗೃಹಿಣಿ, ಕೊಪ್ಪ ಗ್ರಾಮ, ಕಸಬಾ ಹೋಬಳಿ, ತಿಪಟೂರು ತಾ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾವು ಕೊಪ್ಪ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ನಮ್ಮ ಜಮೀನಿನಲ್ಲಿ ಮನೆ ಕಟ್ಟಿಕೊಂಡು ನಮ್ಮ ಮಕ್ಕಳು ಸಂಸಾರದೊಂದಿಗೆ ವಾಸವಾಗಿರುತ್ತೇನೆ.ನಾವು ಮಾರುತಿ ಕೋಕೋ ಫ್ಯಾಕ್ಟರಿಯನ್ನೂ ಸಹಾ ನೆಡೆಸುತಿರುತ್ತೇವೆ. ನಾನು ಪ್ರತಿದಿನ ಬೆಳಿಗ್ಗೆ 06-00 ಗಂಟೆಗೆ ಕೊಪ್ಪ ರಸ್ತೆಯಿಂದ ವೈ-ಟಿ ರಸ್ತೆಯವರೆಗೂ ವಾಕ್ ಮಾಡುತ್ತಿರುತ್ತೇನೆ ನಮ್ಮ ಮನೆಯಿಂದ ವೈ-ಟಿ ರಸ್ತೆಯು ಸುಮಾರು 1, 1/2 ಕಿಮೀ. ದೂರವಿರುತ್ತದೆ. ಪ್ರತಿದಿನದಂತೆ ಈ ದಿನ ದಿನಾಂಕ 15/04/2017 ರಂದು ನಾನು ವೈ-ಟಿ ರಸ್ತೆಯವರೆಗೂ ವಾಕ್ ಬಂದು, ವಾಪಸ್ ಮನೆಗೆ ಬರುತ್ತಿರುವಾಗ ನಮ್ಮ ಮಾರುತಿ ಕೋಕೋ ಫ್ಯಾಕ್ಟರಿಯ ಹತ್ತಿರ ಬರುತ್ತಿರುವಾಗ ಒಂದು ಮೋಟಾರ್ ಸೈಕಲ್ ನಲ್ಲಿ ಇಬ್ಬರು ವ್ಯಕ್ತಿಗಳು ಕೊಪ್ಪ ಗ್ರಾಮದ ಕಡೆಗೆ ಹೋದರು. ಸ್ವಲ್ಪ ಸಮಯದ ನಂತರ ಕೊಪ್ಪಗ್ರಾಮದ ಕಡೆಯಿಂದ ವಾಪಸ್ ಬಂದು ನನ್ನ ಬಳಿ ಬೈಕ್ ನಿಲ್ಲಿಸಿ, ಗ್ರಾನೈಟ್ ಫ್ಯಾಕ್ಟರಿ ಎಲ್ಲಿದೆ ಎಂತಾ ಕೇಳಿದರು. ನಾನು ಇಲ್ಲಿ ಯಾವ ಗ್ರಾನೈಟ್ ಫ್ಯಾಕ್ಟರಿ ಇಲ್ಲವೆಂತ ಹೇಳಿದೆ. ಆಗ ಮೋಟಾರ್ ಸೈಕಲ್ ನ ಹಿಂಬದಿ ಕುಳಿತಿದ್ದ ಹುಡುಗನು ಬೈಕಿನಿಂದ ಕೆಳಕ್ಕೆ ಇಳಿದು ಇದು ಯಾವ ಫ್ಯಾಕ್ಟರಿ ಎಂತಾ ಕೇಳುತ್ತಾ, ನನ್ನ ಹತ್ತಿರ ಬಂದನು. ನಾನು ಇದು ಕಾಯಿ ಫ್ಯಾಕ್ಟರಿ. ನಮ್ಮದೇ ಎಂತಾ ಹೇಳಿದೆ. ಆಗ ತಕ್ಷಣ ಆತ ನನ್ನ ಕೊರಳಿಗೆ ಕೈ ಹಾಕಿ ನನ್ನ ಮಾಂಗಲ್ಯದ ಸರ ಕಿತ್ತುಕೊಳ್ಳಲು ಬಂದನು. ಆಗ ನಾನು ನನ್ನ ಎರಡೂ ಕೈಗಳಿಂದ ಮಾಂಗಲ್ಯದ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡು ಆತನಿಗೆ ಸಿಗದಂತೆ ಕೆಳಕ್ಕೆ ಕುಳಿತುಕೊಂಡು, ಕಳ್ಳ ಕಳ್ಳಾ ಎಂತಾ ಕಿರುಚಿಕೊಂಡೆನು. ಆಗ ಮೋಟಾರ್ ಸೈಕಲ್ ನಲ್ಲಿದ್ದ ಹುಡುಗನು ಬಿಟ್ಟು ಬೇಗ ಬಾರೋ ಯಾರಾದರೂ ಬರುತ್ತಾರೆ ಎಂತಾ ಹೇಳಿ ಬೈಕ್ ಸ್ಟಾರ್ಟ್ ಮಾಡಿದನು. ಅದೇ ವೇಳೆಗೆ ವೈ-ಟಿ ರಸ್ತೆ ಕಡೆಯಿಂದ ಒಂದು ಬೈಕ್ ಬರುವುದನ್ನು ನೋಡಿ, ನನ್ನ ಸರಕ್ಕೆ ಕೈ ಹಾಕಿದ್ದ ವ್ಯಕ್ತಿಯು ಸರವನ್ನು ಬಿಟ್ಟು ಓಡಿ ಹೋಗಿ ಬೈಕ್ ಗೆ ಹತ್ತಿಕೊಂಡು ಪರಾರಿಯಾದರು. ವೈ-ಟಿ ರಸ್ತೆ ಕಡೆಯಿಂದ ಬೈಕಿನಲ್ಲಿ ಬಂದ ನಮ್ಮ ಲಾರಿ ಡ್ರೈವರ್ ಪರಮೇಶನಿಗೆ ನಾನು ನೆಡೆದ ವಿಚಾರವನ್ನು ಹೇಳಿದ್ದರಿಂದ, ಆತ ಬೈಕಿನಲ್ಲಿ ಅವರನ್ನು ಹಿಡಿಯಲು ಬೈಕ್ ನ್ನು ಹಿಂಬಾಲಿಸಿಕೊಂಡು ಹೋದನು. ನನ್ನ ಸರವನ್ನು ಕಿತ್ತುಕೊಳ್ಳಲು ಪ್ರಯತ್ನ ಮಾಡಿದ್ದರಿಂದ ನನ್ನ ಸರವು ತುಂಡಾಗಿರುತ್ತದೆ. ನನ್ನ ಸರವನ್ನು ಕಿತ್ತುಕೊಳ್ಳಲು ಬಂದ ವ್ಯಕ್ತಿಗಳು ಇಬ್ಬರೂ ಸುಮಾರು 25 ರಿಂದ 35 ವರ್ಷದವರಾಗಿರುತ್ತಾರೆ. ಧೃಡಕಾಯರಾಗಿರುತ್ತಾರೆ. ಬೈಕ್ ಓಡಿಸುತ್ತಿದ್ದವನು ಕುಳ್ಳಗಿದ್ದು, ಹಸಿರು ಚೆಕ್ಸ್ ನ ಟೀ ಷರ್ಟ್, ಪ್ಯಾಂಟ್ ಹಾಕಿದ್ದನು. ನನ್ನ ಸರ ಕಿತ್ತುಕೊಳ್ಳಲು ಬಂದ ವ್ಯಕ್ತಿಯು ಎತ್ತರವಾಗಿದ್ದು, ನೇರಳೇ ಬಣ್ಣದ ಟೀ-ಷರ್ಟ್ ಮತ್ತು ನೀಲಿ ಜೀನ್ಸ್ ಪ್ಯಾಂಟ್ ಹಾಕಿದ್ದನು. ಅವರು ಕನ್ನಡ ಭಾಷೆಯನ್ನು ಮಾತನಾಡುತ್ತಿದ್ದರು. ಬೈಕ್ ನಲ್ಲಿ ನಂಬರ್ ಪ್ಲೇಟ್ ಇರಲಿಲ್ಲ. ಹೊಸ ಬೈಕ್ ರೀತಿ ಇತ್ತು. ಅವರನ್ನು ನಾನು ಯಾವತ್ತೂ ಈ ಏರಿಯಾದಲ್ಲಿ ನೋಡಿರುವುದಿಲ್ಲ. ಆದ್ದರಿಂದ ನನ್ನ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ ಇಬ್ಬರು ಅಪರಿಚಿತ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ. ಇತ್ಯಾದಿಯಾಗಿ ನೀಡಿದ ದೂರನ್ನು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ
ತುರ್ತು ಸಹಾಯವಾಣಿ
![]() 100 |
![]() 0816-2278000 |
![]() 108 |
![]() 101 |
![]() 1912 |
![]() 1090 |
![]() 1091 |
![]() 1098 |
![]() 0816-2275451 |
![]() 0816-2274130 |
![]() 0816-2272480 |
![]() 0816-2278377 |
![]() 0816-2278473 |
![]() |
ವಿಪಿನ್ ರಾಯ್ ಪ್ರಜ್ವಲ್ ಗುಂಡಪ್ಪ ತಿಲಕ್ ನಂದೀಶ್ ಪಾಷ ಹೈದರ್
|