lowborn Crime Incidents 4-04-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

:: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 4-04-17

ವೈ.ಎನ್‌ ಹೊಸಕೊಟೆ ಪೊಲೀಸ್‌ ಠಾಣಾ ಯು.ಡಿ.ಆರ್.ನಂ:07/2017 ಕಲಂ:174 ಸಿ.ಆರ್.ಪಿ.ಸಿ

ದಿನಾಂಕ:03/04/2017 ರಂದು ರಾತ್ರಿ 7:30 ಗಂಟೆಗೆ ಪಿರ್ಯಾದಿ ಪ್ರಮೀಳಮ್ಮ ಕೋಂ ಶನಿವಾರಪ್ಪ, 42 ವರ್ಷ, ನಾಯಕ ಜನಾಂಗ, ಎತ್ತಿನಹಳ್ಳಿ ಗ್ರಾಮ,ಪಾವಗಡ ತಾ|| ರವರು ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನನಗೆ ಇಬ್ಬರು ಮಕ್ಕಳಿದ್ದು ,ಇಬ್ಬರಿಗೂ ಮದುವೆಯಾಗಿರುವುದಿಲ್ಲ, ನನ್ನ ಮೈದುನ ರಾಮಾಂಜಿನಪ್ಪ ನಾವುಗಳು ಒಟ್ಟಾಗಿ ಸಂಸಾರ ಮಾಡಿಕೊಂಡಿದ್ದು ನನ್ನ ಗಂಡ ಮೃತ ಶನಿವಾರಪ್ಪ ರವರ ಹೆಸರಿನಲ್ಲಿ ಸುಮಾರು 8-9 ವರ್ಷಗಳ ಹಿಂದೆ ಪಾವಗಡ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ನಲ್ಲಿ ಸುಮಾರು ಎರಡು ಲಕ್ಷ ರೂ ಬೆಳೆಸಾಲ ಪಡೆದಿದ್ದನು ಹಾಗೂ ಜನರಿಂದ ಕೈ ಸಾಲವಾಗಿ ಒಂದು ಲಕ್ಷ ರೂ ಸಾಲಪಡೆದಿದ್ದು ,ನಮ್ಮ ಜಮೀನಿನಲ್ಲಿ ಇತ್ತೀಚೆಗೆ ಕೊಳವೆ ಬಾವಿ ಕೊರೆಸಿದ್ದು ಅದರಲ್ಲಿ ನೀರು ಬಂದಿರುವುದಿಲ್ಲ ಹಾಗೂ ಜಮೀನಿನಲ್ಲಿ ಇಟ್ಟಿದ್ದ ಹೂವಿನ ಗಿಡಗಳಿಗೆ ನೀರಿಲ್ಲದೇ ಒಣಗಿ ಹೋಗಿದ್ದು ನನ್ನ ಗಂಡ ಬ್ಯಾಂಕ್ ನಲ್ಲಿ ಮತ್ತು ಕೈ ಸಾಲ ಮಾಡಿದ್ದು ತೀರಿಸಲಾಗದೇ ಬೆಳೆಯು ನೀರಿಲ್ಲದೇ ನಾಶವಾಗಿದ್ದನ್ನು ಕಂಡು ಜೀವನದಲ್ಲಿ ಜಿಗುಪ್ಸೆ ಗೊಂಡು ದಿ:03/04/2017 ರಂದು ಮದ್ಯಾಹ್ನ 3:00 ಗಂಟೆ ಸಮಯದಲ್ಲಿ ನಮ್ಮ ಮನೆಯಲ್ಲಿ ನನ್ನ ಗಂಡ ಯಾವುದೋ ಕ್ರಿಮಿನಾಶಕ ಔಷಧಿ ಸೇವಿಸಿ ಒದ್ದಾಡುತ್ತಾ ಕೂಗಿ ಕೊಂಡಾಗ ನಾನು ಹೋಗಿ ನೋಡಿ ತಕ್ಷಣ ನನ್ನ ಗಂಡನನ್ನು ನಾನು ಮತ್ತು ನನ್ನ ಮೈದುನ ರಾಮಾಂಜಿನಪ್ಪ 108 ಆಂಬ್ಯೂಲನ್ಸ್ ನಲ್ಲಿ ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ವೈದ್ಯರು ಹೆಚ್ಚಿನ ಚಿಕಿತ್ಸೆ ಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದು ಅಂಬ್ಯೂಲನ್ಸ್ ನಲ್ಲಿ ಬೆಂಗಳೂರಿಗೆ ಹೋಗುವಾಗ್ಗೆ ಮಾರ್ಗ ಮದ್ಯೆ ಸಂಜೆ 5:30 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾನೆ,ನನ್ನ ಗಂಡ ರೈತನಾಗಿದ್ದು ನಮ್ಮ ಅತ್ತೆ ಲಕ್ಷ್ಮಮ್ಮ ಕೋಂ ಲೇ|| ಸಣ್ಣ ಸಂಜೀವಪ್ಪ ರವರ ಹೆಸರಿನಲ್ಲಿ  ಬ್ಯಾಂಕ್ ನಲ್ಲಿ ನನ್ನ ಗಂಡನ ಬಾಬ್ತು 4:39 ಗುಂಟೆ ಜಮೀನಿನ ಮೇಲೆ 02 ಲಕ್ಷ ರೂ ಸಾಲ ಪಡೆದಿದ್ದು ಹಾಗೂ ಕೈ ಸಾಲವಾಗಿ ಒಂದು ಲಕ್ಷ ರೂ ಸಾಲಪಡೆದಿರುತ್ತೇವೆ, ನಮ್ಮ ಅತ್ತೆ ಲಕ್ಷ್ಮಮ್ಮ ಹೆಸರಿನಲ್ಲಿ ಸ.ನಂ: 109/02ರಲ್ಲಿನ 03 ಎಕರೆ ಜಮೀನಿನ ಮೇಲೆ ಒಂದು ಲಕ್ಷ ರೂ ಸಾಲ ಪಡೆದಿದ್ದು ಸಾಲ ತೀರಿಸಲಾಗದೇ ಜೀವನದಲ್ಲಿ ಜಿಗುಪ್ಸೆ ಹೊಂದಿ ಮೃತಪಟ್ಟಿದ್ದು ನನ್ನ ಗಂಡನ ಶವ ಪಾವಗಡ ಸರ್ಕಾರಿ ಆಸ್ಪತ್ರೆ ಶವಗಾರದಲ್ಲಿದ್ದು ಮುಂದಿನ ಕಾನೂನು ರೀತ್ಯಾ ಕ್ರಮ ಕೈಗೊಳ್ಳ ಬೇಕೆಂತ ಇತ್ಯಾದಿಯಾಗಿ ನೀಡಿದ ಲಿಖಿತ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತದೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 71/2017 ಕಲಂ; 323, 324, 504, 506 R/w 34 ಐಪಿಸಿ.

ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಎಸ್‌ಐ-ನಾರಾಯಣ ವೈ.ಟಿ  ಆದ ನಾನು ದಿನಾಂಕ-03-04-2017 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಕುಣಿಗಲ್‌ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರೇಮ ಕೋಂ ಬಿಳಿಯಪ್ಪ, 46 ವರ್ಷ, ಕೆಂಬಾರೆಪಾಳ್ಯ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ-03-04-2017 ರಂದು ಸಂಜೆ 6-30 ಗಂಟೆ ಸಮಯದಲ್ಲಿ ನಮ್ಮ ಯಜಮನರಾದ ಬಿಳಿಯಪ್ಪ ರವರು ಗೊಲ್ಲರಹಟ್ಟಿಗೆ ಹೋಗಲು ನಮ್ಮ ಗ್ರಾಮದ ಶಾಂತಮ್ಮ ರವರ ಮನೆಯಮುಂದೆ ಹೋಗುತ್ತಿರುವಾಗ್ಗೆ ಶಾಂತಮ್ಮ ರವರು ಯಾವುದೋ ಹಳೆಯ ದ್ವೇಶದಿಂದ ನಮ್ಮ ಯಜಮಾನರನ್ನು ಕುರಿತು, ಈ ಲೋಪರ್ ನನ್ನ ಮಗನಿಂದ ನಮ್ಮ ಮನೆ ಹಾಳಾಯ್ತು, ಈ ಸೂಳೇ ಮಗ ಎಂದು ಸಾಯುತ್ತಾನೋ ಅಂದು ನಾನು ನೆಮ್ಮದಿಯಿಂದ ಇರುತ್ತೇನೆಂದು ಅವಾಚ್ಯಶಬ್ದಗಳಿಂದ ಬೈಯ್ಯುತ್ತಿರುವಾಗ್ಗೆ, ನಾನು ನಮ್ಮ ಯಜಮಾನರಿದ್ದ ಸ್ಥಳಕ್ಕೆ ಬಂದೆನು. ಆಗ ನಮ್ಮ ಯಜಮಾನರು ಶಾಂತಮ್ಮ ರವರಿಗೆ ಏಕೆ ಹೀಗೆ ಕೆಟ್ಟಮಾತುಗಳಿಂದ ನನ್ನನ್ನು ಬೈಯ್ಯುತ್ತಿರುವೆ ಎಂದು ಕೇಳಿದ್ದಕ್ಕೆ, ಶಾಂತಮ್ಮ ನಿನ್ನನ್ನು ಉಳಿಸೋದಿಲ್ಲ ಸಾಯುಸುತ್ತೇನೆಂದು ಹೋಟೆನಲ್ಲಿ ಟೀ ಕುಡಿಯುತ್ತಿದ್ದ ಬೊಮ್ಮನಹಳ್ಳಿ ವಾಸಿ ಲೊಕೇಶ್‌, ಸಿಂಗೋನಹಳ್ಳಿ ಗ್ರಾಮದ ವಾಸಿ ಶಿವಲಿಂಗಯ್ಯ, ಶಾಂತಮ್ಮ ರವರ ತಂದೆ ವೆಂಕಟೇಶ್‌ ರವರನ್ನು ಕರೆದು, ಈ ನನ್ನ ಮಗ ನನ್ನ ಮೇಲೆ ಪದೇ ಪದೇ ಗಲಾಟೆಗೆ ಬರುತ್ತಾನೆ ಒಡೆಯಿರಿ ಎಂದು ಹೇಳಿದಳು. ಆಗ ಲೊಕೇಶ್‌ ಶಾಂತಮ್ಮನ ಮನೆಯಿಂದ ಮಚ್ಚನ್ನು ತಂದು ನನ್ನ ಯಜಮನ ಬಿಳಿಯಪ್ಪ ರವರಿಗೆ ತಲೆಗೆ ಹೊಡೆದು ರಕ್ತಗಾಯಪಡಿಸಿದನು. ಶಿವಲಿಂಗಯ್ಯ ನನ್ನ ಯಜಮಾನರಿಗೆ ದೊಣ್ಣೆಯಿಂದ ಬಲಗೈ ಮಣಕೈಗೆ ಮತ್ತು ಎಡಗಾಲಿನ ಮಂಡಿಯ ಕೆಳಭಾಗಕ್ಕೆ ಹೊಡೆದು ರಕ್ತಗಾಯಪಡಿಸಿದನು. ವೆಂಕಟೇಶನು ನನ್ನ ಯಜಮಾನರನ್ನು ಕೆಳಕ್ಕೆ ಕೆಡವಿಕೊಂಡು ಕೈಗಳಿಂದ ಹೊಡೆದು ಕಾಲಿನಿಂದ ತುಳಿದನು. ಶಾಂತಮ್ಮ ನಮ್ಮ ಯಮಾನರನ್ನು ಹೊಡೆದು ಸಾಯಿಸಿರಿ ಎಂದು ಪ್ರಾಣಬೆದರಿಕೆ ಹಾಕಿದಳು. ಆಗ ನಮ್ಮ ಗ್ರಾಮದ ಸುರೇಶ್‌ ಬಿನ್‌ ನಾಗಣ್ಣ, ಮಾದಪ್ಪನಹಳ್ಳಿ ಗ್ರಾಮದ ವಾಸಿ ಆನಂದ ರವರು ಮತ್ತು ನಾನು ನಮ್ಮ ಯಜಮಾನರನ್ನು ಬಿಡಿಸಿಕೊಂಡೆವು. ನಂತರ ನಮ್ಮ ಯಜಮಾನರಿಗೆ ತಲೆಗೆ ಏಟು ಬಿದ್ದು ರಕ್ತಗಾಯವಾಗಿದ್ದರಿಂದ ಯಾವುದೋ ಒಂದು ಆಟೋದಲ್ಲಿ ಕುಣಿಗಲ್‌ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲಿಸಿದೆವು. ನಮ್ಮ ಯಜಮಾನರಿಗೆ ಹೊಡೆದು ಗಲಾಟೆ ಮಾಡಿದ ಈ ಮೇಲ್ಕಂಡವರ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ನೀಡಿದ ದೂರಿನ್ನು ಸ್ವೀಕರಿಸಿ ದಿನಾಂಕ-03-04-2017 ರಂದು ರಾತ್ರಿ 11-30 ಗಂಟೆಗೆ ಠಾಣೆಗೆ ಹಾಜರಾಗಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 28/2017 ಕಲಂ 420,447,465,468,469,470 ಐಪಿಸಿ

ದಿ:03/04/2017  ರಂದು ಮದ್ಯಾಹ್ನ 1-30 ಗಂಟೆಗೆ ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿ ಪಿಸಿ 161 ರೂಪ್ಲಾನಾಯಕ ರವರು ನ್ಯಾಯಾಲಯದಿಂದ ಉಲ್ಲೇಖಿತಗೊಂಡು ಬಂದಿದ್ದ ಪಿಸಿಆರ್ ನಂ 03/2017 ಅನ್ನು ಪಡೆದಿದ್ದು,  ಬಡವನಹಳ್ಳಿ ಗ್ರಾಮದ ಲೇಟ್‌‌ ಲಿಂಗಣ್ಣ ರವರ ಮಗ ರಾಮಣ್ಣರವರಿಗೆ ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ, ಎ ಎಂ ಕಾವಲ್‌ ಸರ್ವೆ ನಂ 1/159 ರಲ್ಲಿ  4 ಎಕರೆ 35 ಕುಂಟೆ ಜಮೀನಿದ್ದು, ಇವರ ಹೆಸರಿಗೆ ಖಾತೆ ಪಹಣಿ ಸಹ ಇರುತ್ತೆ. ಮತ್ತು ಈರಮಲ್ಲಯ್ಯ ಬಿನ್‌ ಲೇಟ್ ಮಲ್ಲಯ್ಯ ಇವರಿಗೆ ಸೆರ್ವ ನಂ 38/1 ರಲ್ಲಿ ಜಮೀನಿರುತ್ತೆ. ನಮ್ಮ  ಜಮೀನಿನಲ್ಲಿ 765/400 ಕೆವಿಯ ವಸಂತ ನರಸಾಪುರ ವಿದ್ಯುತ್‌‌ ಕೇಂದ್ರದಿಂದ 220/66 ಕೆವಿಯ ಮಧುಗಿರಿ ವಿದ್ಯುತ್‌ ಕೇಂದ್ರದವರೆವಿಗೂ 220 ಕೆವಿಯ ಜೋಡಿಯ ವಿದ್ಯುತ್‌ ಮಾರ್ಗವು ಹಾದು ಹೋಗಿದ್ದು, ಸದರಿ ಪ್ರಸರಣ ಮಾರ್ಗದ ನಿರ್ಮಾಣ ಕಾರ್ಯಕ್ಕೆ ಅಡ್ಡಿ ಬಂದ ಗಿಡಮರಳನ್ನು ಮತ್ತು  ಜಮೀನುಗಳಲ್ಲಿ ಗೋಪುರ ನಿರ್ಮಾಣಕ್ಕೆ ಪರಿಹಾರ ವನ್ನು ನೀಡಿರುತ್ತಾರೆ.  ಪಿರ್ಯಾದಿ ಜಮೀನಿನಲ್ಲಿ ಗೋಪುರ ನಿರ್ಮಾಣ ಮಾಡಿ, ಜಮೀನಿನ ಮರಗಿಡಗಳನ್ನು ಕಡಿದು ಬೆಳೆ ನಷ್ಟ ಮಾಡಿದ್ದರೂ ಯಾವುದೇ ಪರಿಹಾರ ನೀಡಿರುವುದಿಲ್ಲ. ಆದರೆ ಒಂದನೇ ಆರೋಪಿ ಈರಮಲ್ಲಯ್ಯ ರವರು ತನ್ನ ಜಮೀನಿನಲ್ಲಿ ಯಾವುದೇ ಗೋಪುರವಾಗಲೀ, ಗಿಡಮರಗಳನ್ನು ಕಡಿಯದೇ ಇದ್ದರೂ 2,3 ಮತ್ತು 4 ನೇ ಆರೋಪಿತರೊಂದಿಗೆ ಸೇರಿ ಚೆಕ್ ನಂ 243624 ಸ್ಟೇಟ್ ಬ್ಯಾಂಕ್‌ ಆಫ್‌ ಮೈಸೂರು 2.000.000/- ರೂಗಳನ್ನು ಪರಿಹಾರ ರೂಪದಲ್ಲಿ ಪಡೆದಿರುತ್ತಾರೆ.  ಇದನ್ನು ಕೇಳಲು ಹೋದ ಪಿರ್ಯಾದಿ ಡಿ ಎಲ್‌ ರಾಮಣ್ಣ  ರವರಿಗೆ 2,3 ಮತ್ತು 4 ಆರೋಪಿಗಳು ನ್ಯಾಯಾಲಯಕ್ಕೆ ಬೇಕಾದರೂ ಹೋಗಿ ನಮ್ಮನ್ನು ಏನೂ ಮಾಡಲಿಕ್ಕೆ ಆಗುವುದಿಲ್ಲ ಎಂತಾ ಹೆದರಿಸಿರುತ್ತಾರೆ. ಹಾಗೂ 1 ನೇ ಆರೋಪಿಯನ್ನು ಕೇಳಲಾಗಿ ಆತನೂ ಸಹ ಏನು ಬೇಕಾದರೂ ಮಾಡಿಕೋ ಎಂತಾ ಹೆದರಿಸಿರುತ್ತಾನೆ. ಇತ್ಯಾದಿಯಾಗಿ ದೂರಿನ ಅಂಶವಾಗಿರುತ್ತೆ.

ತುರುವೇಕೆರೆ ಪೊಲೀಸ್ ಠಾಣಾ ಮೊ ನಂ: 114/2017.ಕಲಂ:379,406, ಐ.ಪಿ.ಸಿ

ದಿನಾಂಕ: 03/04/2017 ರಂದು ತುರುವೇಕೆರೆ ಟೌನ್ ಸಿಡಿಯರ ಬೀದಿಯಲ್ಲಿ ವಾಸವಾಗಿರುವ ಮುಕೇಶ್ ಕುಮಾರ್ ಬಿನ್ ಸೋಹನ್ ಲಾಲ್ ಜೀ, 30 ವರ್ಷ, ಮಾರವಾಡಿ ಜನಾಂಗ ರವರು ಟೈಪ್ ಮಾಡಿಸಿದ ದೂರಿನ ಸಾರಾಂಶವೆನೆಂದರೆ ನಾನು ತುರುವೇಕೆರೆ ನಗರದ ಬಿರ್ಲಾ ಕಾರ್ನರ್ ನಲ್ಲಿ ಈಗ್ಗೆ ಸುಮಾರು 10 ವರ್ಷಗಳಿಂದ ಮಾರುತಿ ಜ್ಯೂಯಲರಿ ಮತ್ತು ಬ್ಯಾಂಕರ್ಸ್ ಅಂಗಡಿ ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದು, ನಮ್ಮ ಅಂಗಡಿಯಲ್ಲಿ ಕೆಲಸಕ್ಕೆ ನೇಮಿಸಿಕೊಂಡಿದ್ದ ನಮ್ಮ ಸಂಬಂಧಿಯಾದ ಸುರೇಶ್ ಬಿನ್ ಸೋಹನ್ ಲಾಲ್ ಜಿ  ಎಂಬುವರು ಸುಮಾರು 4 ತಿಂಗಳಿಂದ ಕೆಲಸ ಮಾಡುತ್ತಿದ್ದು, ದಿನಾಂಕ: 06/03/2017 ರಂದು ಊರಿಗೆ ಹೋಗುವುದಾಗಿ ತಿಳಿಸಿ ಸ್ವಂತ ಊರಾದ ಬಗಾಡಿ ಗ್ರಾಮ, ರಾಜಸ್ಥಾನ್ ರಾಜ್ಯಕ್ಕೆ ಹೋಗಿದ್ದು, ಹೋಗುವಾಗ ನಮ್ಮ ಅಂಗಡಿಯಲ್ಲಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗಿರುತ್ತಾರೆ. ಇದರ ಬಗ್ಗೆ ನಮಗೆ ಕುಮಾರಸ್ವಾಮಿ ಬಿನ್ ನಿಂಗಪ್ಪ, ಅರಕೆರೆ ಇವರು 17 ಸಾವಿರ ರೂಪಾಯಿಗೆ 9.500 ಗ್ರಾಂ ತೂಕದ ಚಿನ್ನದ ಉಂಗುರವನ್ನು ಬಿಡಿಸಿಕೊಂಡು ಹೋಗಲು ಬಂದಾಗ ಅವರ ಬಾಬ್ತು ರಸೀದಿ ನಂಬರ್  2683 ರಲ್ಲಿನ ವಡವೆಯನ್ನು ಪರಿಶೀಲಿಸಿದಾಗ ಉಂಗುರವು ಕಳವಾಗಿರುವುದು ನನ್ನ ಗಮನಕ್ಕೆ ಬಂದಿದ್ದು ನನಗೆ ಗಾಬರಿಯಾಗಿರುತ್ತೆ. ನಂತರ ಉಂಗುರ ಗಿರವಿ ಇಟ್ಟಿದ್ದವರಿಗೆ ಅವರ ಬಾಬ್ತು ಹಣವನ್ನು ನೀಡಿ ವ್ಯವಹಾರವನ್ನು ಮುಕ್ತಾಯ ಮಾಡಿರುತ್ತೇನೆ, ನಂತರ ನಮ್ಮದಾಖಲೆಗಳನ್ನು ಪರಿಶೀಲಿಸಿದಾಗ ರಶೀದಿ ನಂಬರ್ ಗಳಾದ 1757,3341,1863,1939,4202,2683,2695,4038,4039,3555,3661,3842, ರ ಬಾಬ್ತು ವಡವೆಗಳನ್ನು ಕಳ್ಳತನವಾಗಿದ್ದು, ಇವುಗಳನ್ನು ನಮ್ಮ ಸಂಬಂಧಿಯಾದ ಸುರೇಶ ಬಿನ್ ಸೋಹನ ಲಾಲ್ ಜಿ ರವರು ನಂಬಿಕೆ ದ್ರೋಹ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಅಂದಾಜು ತೂಕ 220 ಗ್ರಾಮ್ ಆಗಿದ್ದು ಇದರ ಅಂದಾಜು ಬೆಲೆ ಸುಮಾರು 6 ಲಕ್ಷ ರೂಪಾಯಿಗಳು ಆಗಿರುತ್ತದೆ. ಇವುಗಳನ್ನು ಪತ್ತೆ ಮಾಡಿ ನಮ್ಮ ಬಾಬ್ತು ಆಭರಣ ವಡವೆಗಳನ್ನು ಪತ್ತೆ ಮಾಡಿ ಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇವೆಂತಾ ಇತ್ಯಾದಿ ಪಿರ್ಯಾದನ್ನು ಪಡೆದು ಠಾಣಾ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತೆ .

ಪಾವಗಡ ಪೊಲೀಸ್‍ ಠಾಣಾ ಮೊ.ಸಂ:75/2016, ಕಲಂ:143,147, 323, 324, 418, 504 R/w 149 IPC ಹಾಗೂ 3(1)(r)(s) SC/ST Amendment Act-2015

ದಿನಾಂಕ:03.04.2017 ರಂದು ಮಧ್ಯಾಹ್ನ 12-00 ಗಂಟೆಯಲ್ಲಿ ಪಿರ್ಯಾದುದಾರರಾದ ಶ್ರೀಮತಿ ಗೀತಮ್ಮ ಕೋಂ ಮಂಜುನಾಥ,ಟಿ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ಬ್ಯಾಡನೂರು ವಡ್ಡರಹಟ್ಟಿ ಗ್ರಾಮದ ಗೊಲ್ಲರ ಜನಾಂಗದ ಬೋರಪ್ಪನ ಮಗನಾದ ಪರಮೇಶ ಮತ್ತು ಕೆಂಪಣ್ಣ, ತಿಮ್ಮಣ್ಣನ ಮಗನಾದ ರವಿ, ಗಿರಿಯಪ್ಪನ ಮಗನಾದ ಮೂಡ್ಲಗಿರಿ, ಕೆಂಪಣ್ಣನ ಮಗನಾದ ಸಿದ್ದಲಿಂಗ, ತಿಮ್ಮಪ್ಪನ ಮಗನಾದ ಚಿಕ್ಕೇಗೌಡ, ವದ್ದಿಕೇರಪ್ಪನ ಮಗ ರಾಮಲಿಂಗಪ್ಪ, ಕೊರಸಪ್ಪನ ಮಗನಾದ ಸಿದ್ದಪ್ಪ, ಬೋರಪ್ಪ ಮಗ ನಾಗೇಂದ್ರ ಇವರೆಲ್ಲರೂ ಗುಂಪು ಕಟ್ಟಿಕೊಂಡು ದಿನಾಂಕ:01/04/2017 ರಂದು ರಾತ್ರಿ 7-00 ಗಂಟೆಯಿಂದ 8-00 ಗಂಟೆಯ ಒಳಗೆ ನಮ್ಮ ಮನೆಗೆ ಏಕಾ ಏಕಿ ನುಗ್ಗಿ ಮಂಜುನಾಥ,ಟಿ, ತೇಜೇಶ್ ಮತ್ತು ಮಾರುತಿ ಇವರುಗಳನ್ನು ಮೇಲ್ಕಂಡವರೆಲ್ಲರೂ ಹಲ್ಲೆ ಮಾಡಿರುತ್ತಾರೆ.ಅವ್ಯಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ನೆಡೆಸಿರುತ್ತಾರೆ. ಮಂಜುನಾಥ ರವರಿಗೆ ತಲೆಗೆ, ತೇಜಸ್ ರವರಿಗೆ ತಲೆಗೆ, ಮಾರುತಿ ಎಂಬುವರಿಗೆ ಕೈಗೆ ಪೆಟ್ಟುಗಳಾದಾಗ ನಮ್ಮ ಗ್ರಾಮದ ವೆಂಕಟಪ್ಪನ ಮಗ ಗೋವಿಂದರಾಜು ಆಂಬ್ಯುಲೆನ್ಸ್ ಗೆ ಫೊನ್ ಮಾಡಿ ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತೆ. ನಮ್ಮ ಮೇಲೆ ಜಾತಿ ನಿಂದನೆ ಮಾಡಿ ನಮ್ಮ ಮೇಲೆ ಹಲ್ಲೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಜಯನಗರ ಪೊಲೀಸ್ ಠಾಣಾ ಮೊ.ನಂ. 52/2017 ಕಲಂ 379  ಐಪಿಸಿ.

ದಿನಾಂಕ: 03-04-2017 ರಂದು ರಾತ್ರಿ 8-10 ಗಂಟೆಗೆ ತುಮಕೂರು ನಗರ, ಜಯನಗರ ಪಶ್ಚಿಮ, ಶೆಟ್ಟಿಹಳ್ಳಿ ಮುಖ್ಯರಸ್ತೆ, ಕೆನರಾ ಬ್ಯಾಂಕ್ ಪಕ್ಕ, ಮಾರುತಿಕೃಪ ದಲ್ಲಿ ವಾಸವಾಗಿರುವ ಎಮ್‌.ಎನ್‌ ಕೃಷ್ಣಪ್ರಸಾದ್ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್‌ ಮುದ್ರಿತ ದೂರಿನ ಅಂಶವೇನೆಂದರೆ, ನನ್ನ ಬಾಬ್ತು KA06 EN-8791 ನೇ ಹೋಂಡಾ ಯುನಿಕಾನ್‌ ಮೋಟಾರ್ ಸೈಕಲ್‌ ನ್ನು ದಿನಾಂಕ: 31-03-2017  ರಂದು ರಾತ್ರಿ 8-15 ಗಂಟೆ ಸಮಯದಲ್ಲಿ ಸಪ್ತಗಿರಿ ಬಡಾವಣೆಯ ಎಸ್‌.ಬಿ.ಎಂ ಬ್ಯಾಂಕ್ ರಸ್ತೆಯಲ್ಲಿ ಮಾರುತಿ ಕೇಬಲ್ ಆಫೀಸ್ ಮುಂದೆ ನಿಲ್ಲಿಸಿದ್ದು, ಕಾಲು ಗಂಟೆ ಬಳಿಕ ಅಂದರೆ 8-30 ಗಂಟೆಯಲ್ಲಿ ಬಂದು ನೋಡಲಾಗಿ ನಾನು ನಿಲ್ಲಿಸಿದ್ದ ಜಾಗದಲ್ಲಿ ಮೋಟಾರ್ ಸೈಕಲ್‌ ಕಳ್ಳತನವಾಗಿರುತ್ತೆ.  ನಾನು ಈ ವಾಹನ ಎಲ್ಲಾದರೂ ಸಿಗಬಹುದೆಂತ ಈವರೆವಿಗೂ ಹುಡುಕಾಡಿ ನೋಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಮತ್ತು ನನ್ನ ಕೆಲಸದ ಒತ್ತಡದಲ್ಲಿ ಪೊಲೀಸ್ ಠಾಣೆಗೆ ಬಂದು ದೂರನ್ನು ನೀಡಲು ಸಾಧ್ಯವಾಗಿರುವುದಿಲ್ಲ.  ಆದ್ದರಿಂದ ಈ ದಿನ ತಡವಾಗಿ ಬಂದು ದೂರನ್ನು ಸಲ್ಲಿಸಿಕೊಂಡಿರುತ್ತೇನೆ.  ದಯಮಾಡಿ ಕಳ್ಳತನವಾಗಿರುವ ನನ್ನ ಬಾಬ್ತು ಸದರಿ ಮೋಟಾರ್ ಸೈಕಲ್‌ ನ್ನು ಪತ್ತೆ ಮಾಡಿಕೊಡಬೇಕೆಂತ ಇತ್ಯಾದಿ ಅಂಶವಾಗಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 55 guests online
Content View Hits : 321500