lowborn Crime Incidents 18-03-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

  ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 18-03-17

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 492017 ಕಲಂ 87 ಕೆ,ಪಿ,ಆಕ್ಟ್‌

ದಿನಾಂಕ: 16-03-2017 ರಂದು ಸಾಯಂಕಾಲ 04-00 ಗಂಟೆ ಸಮಯದಲ್ಲಿ ಮಾನ್ಯ ಪಿ,ಎಸ್,ಐ ರವರು  ಗ್ರಾಮಗಳ ಗಸ್ತಿಗಾಗಿ ಹೊನ್ನುಡಿಕೆ, ಕೋಡಿಹಳ್ಳಿ, ಬನದಪಾಳ್ಯ, ತಾವರೇಕೆರೆ, ಬೇಗೂರು ಕಡೆಗಳಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ್ಗೆ, ಅನುಪನಹಳ್ಳಿ ಗ್ರಾಮದ ಲಕ್ಷೀ ದೇವಸ್ಥಾನದ ಅಶ್ವಥಕಟ್ಟೆಯ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಗಿರೀಶ್‌, ತಿಮ್ಮೇಗೌಡ ಹಾಗೂ ಇತರೆಯವರು ಅಂದರ್‌ ಬಾಹರ್‌ ಎಂಬ ಜೂಜಾಟವಾಡುತ್ತಿದ್ದಾರೆಂತಾ ಖಚಿತ ಮಾಹಿತಿ ಬಂದ ಮೇರೆಗೆ ನಾನು ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ದಾಳಿ ನಡೆಸಿ ಸ್ಥಳದಲ್ಲಿ ಅಂದರ್‌ ಬಾಹರ್‌ ಎಂಬ ಇಸ್ಪೀಟು ಜೂಜಾಟವಾಡುತ್ತಿದ್ದ 11 ಜನ ಆಸಾಮಿಗಳನ್ನು ವಶಕ್ಕೆ ಪಡೆದು, ಜೂಜಾಟವಾಡಲು ಪಣವಾಗಿಟ್ಟಿದ್ದ 7,300/- ರೂಪಾಯಿ ನಗದು ಹಣವನ್ನು, ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಒಂದು ಪ್ಲಾಸ್ಟಿಕ್‌ನಂತಹ ಟಾರ್ಪಲ್‌, ಸ್ಥಳದಲ್ಲಿ ದೊರೆತ 8 ಮೊಬೈಲ್‌ಗಳನ್ನು ಹಾಗೂ 8 ದ್ವಿಚಕ್ರ ವಾಹನಗಳನ್ನು ಸಾಯಂಕಾಲ 04-30 ಗಂಟೆಯಿಂದ 05-30 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ವಶಕ್ಕೆ ಪಡೆದು ನಂತರ ಸಾಯಂಕಾಲ 06-00 ಠಾಣೆಗೆ ವಾಪಸ್‌ ಬಂದು 11 ಆಪಾದಿತರುಗಳನ್ನು ಹಾಗೂ ಮೇಲ್ಕಂಡ ಮಾಲುಗಳನ್ನು ನನ್ನ ವಶಕ್ಕೆ ನೀಡಿ ಮುಂದಿನ ಕ್ರಮ ಜರುಗಿಸುವಂತೆ ಆದೇಶಿಸಿ ನೀಡಿದ ವರಧಿಯನ್ನು ಪಡೆದು ಠಾಣಾ ಎನ್ ಸಿ ಆರ್ ನಂ 60/2017 ರಲ್ಲಿ ದಾಖಲಿಸಿರುತ್ತೇನೆ. ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದು ಠಾಣಾ ಎನ್,ಸಿ,ಆರ್ ನಂ 60/2017 ಅನ್ನು ಪರಿವರ್ತಿಸಿ ಕಲಂ 87 ಕೆ,ಪಿ ಆಕ್ಟ್‌ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಘನ ನ್ಯಾಯಾಲಯದಲ್ಲಿ ಅನುಮತಿಗಾಗಿ ಕೋರಿದ್ದು, ಸದರಿ ಠಾಣಾ ಎನ್,ಸಿ,ಆರ್‌ 60/2017 ರಲ್ಲಿ ಠಾಣಾ ಹೆಚ್,ಸಿ-37 ಶ್ರೀ ದೇವರಾಜು ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ದಿನಾಂಕ:17-03-2017 ರಂದು ಬೆಳಿಗ್ಗೆ 09-30 ಗಂಟೆಗೆ ಹಾಜರ್‌ಪಡಿಸಿದ ವರದಿಯನ್ನು ಪಡೆದು ಠಾಣಾ ಪ್ರಕರಣವನ್ನು ದಾಖಲಿಸಿರುತ್ತೆ.

ತಾವರೆಕೆರೆ ಪೊಲೀಸ್ ಠಾಣಾ  ಮೊ.ನಂ-42/2017 ಕಲಂ-   279, 304(A) IPC R/W 134(A)&(B), 187 IMV Act

ದಿನಾಂಕ:17-03-2017 ರಂದು ಬೆಳಿಗ್ಗೆ 10-10 ಗಂಟೆಗೆ ಪಿರ್ಯಾದಿ ನರಸಿಂಹಮೂರ್ತಿ ಬಿನ್‌ ನಿಂಗಪ್ಪ, 27 ವರ್ಷ, ಆದಿ ಕರ್ನಾಟಕ ಜನಾಂಗ, ಉಜ್ಜನಕುಂಟೆ, ಸಿರಾ ತಾಲ್ಲೋಕ್. ಮೊಬೈಲ್‌ ನಂ: 9986234038 ಎಂಬುವರು ಕೊಟ್ಟ ದೂರಿನ ಸಾರಾಂಶವೇನೆಂದರೆ, ದಿನಾಂಕ:16-03-2017 ರಂದು ಸಂಜೆ ಸುಮಾರು 7-15 ಗಂಟೆಯಲ್ಲಿ ಪಿರ್ಯಾದಿಯ ತಂದೆಯಾದ ನಿಂಗಪ್ಪ, ಸುಮಾರು 50 ವರ್ಷ, ರವರು ಉಜ್ಜನಕುಂಟೆಯಿಂದ ರೊಳ್ಳೆಗೆ ದೇವಸ್ಥಾನಕ್ಕೆ ಹೋಗಲು ಉಜ್ಜನಕುಂಟೆ ಐಜಿ ಡಾಬಾ ಹೋಟೆಲ್‌ ಮುಂಭಾಗ ಎನ್‌ಹೆಚ್‌-48 ರಸ್ತೆ ದಾಟುತ್ತಿರುವಾಗ ಹಿರಿಯೂರು-ಸಿರಾ ಕಡೆಯಿಂದ ಬಂದ ಯಾವುದೋ ಕಾರನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆ ದಾಟುತಿದ್ದ ನಿಂಗಪ್ಪರವರಿಗೆ ಡಿಕ್ಕಿ ಹೊಡೆಸಿ ನಿಲ್ಲಿಸದೇ ಹೊರಟು ಹೋಗಿದ್ದು, ಅಪಘಾತದಲ್ಲಿ ನಿಂಗಪ್ಪರವರ ತಲೆಗೆ, ಮೈಕೈ-ಕಾಲುಗಳಿಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಸತ್ತುಬಿದ್ದಿದ್ದವರನ್ನು ಐಆರ್‌ಬಿ ಆಂಬ್ಯೂಲೆನ್ಸ್‌ ವಾಹನದಲ್ಲಿ ಸಿರಾ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿರುತ್ತೆಂತ  ಇತ್ಯಾದಿಯಾಗಿ ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.25/2017, ಕಲಂ:323, 324, 504, 506 ರೆ/ವಿ 34 ಐಪಿಸಿ.

ದಿನಾಂಕ:17/03/2017 ರಂದು ರಾತ್ರಿ 07:45 ಗಂಟೆಗೆ ಪಿರ್ಯಾದಿ ಸುನಂದಮ್ಮ ಕೋಂ ರಾಮಚಂದ್ರ, 28 ವರ್ಷ, ಎ.ಕೆ.ಜನಾಂಗ, ನೀರಕಲ್ಲು ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೆನೆಂದರೆ ದಿನಾಂಕ:17/03/2017 ರಂದು ಬೆಳಿಗ್ಗೆ ಸುಮಾರು 07:30 ಗಂಟೆಯ ಸಮಯದಲ್ಲಿ ನನ್ನ ಮಗನಾದ ಅಜಿತ್‌‌ ಎಂಬುವವನು ಲಕ್ಷ್ಮೀನರಸಪ್ಪರವರ ಪಾಯದ ಹತ್ತಿರ ಕುಳಿತು ಆಟವಾಡುತ್ತಿರುವಾಗ್ಗೆ ನಮ್ಮ ಗ್ರಾಮದ ಲಕ್ಷ್ಮೀನರಸಪ್ಪನ ಮಗಳಾದ ಚಂದನ ಎಂಬುವವರು ನಾನು ಮನೆಯಲ್ಲಿ ಇದ್ದಾಗ ಬಾರೇ ಬೋಸೂಡಿ ಮುಂಡೆ, ಸೂಳೆ ಮುಂಡೆ, ಲೋಫರ್‌ ಮುಂಡೆ, ನಿನ್ನ ಮಗನನ್ನು ನಮ್ಮ ಮನೆಯ ಹತ್ತಿರ ಏಕೆ ಆಟವಾಡುಲು ಬಿಟ್ಟದ್ದೀಯ ಎಂತಾ ಅವಾಚ್ಯ ಶಬ್ದಗಳಿಂದ ಬಾಯಿಗೆ ಬಂದಂತೆ ಬೈದಳು, ಅಷ್ಟುರಲ್ಲಿ ಚಂದನರವರ ತಾಯಿ ಜಯಲಕ್ಷ್ಮಮ್ಮ ಎಂಬುವವಳು ಬಂದು ನನ್ನ ಜುಟ್ಟು ಹಿಡಿದು ಎಳೆದಾಡಿ ಕೈ ಕಾಲುಗಳಿಂದ ಒದ್ದು ನೆಲಕ್ಕೆ ಉರುಳಿಸಿ ಮೈ ಕೈ ನೋವುಂಟು ಮಾಡಿದಳು ನಂತರ ಚಂದನ ಎಂಬುವವಳು ಕಲ್ಲಿನಿಂದ ನನ್ನ ಬೆನ್ನಿಗೆ ಹೊಡೆದು ನೋವುಂಟು ಮಾಡಿದಳು ಮತ್ತು ಗೋವಿಂದಮ್ಮ ಕೊಂ ನಾಗರಾಜು ಎಂಬುವವರು ನಿನ್ನನ್ನು ಇಷ್ಠಕ್ಕೆ ಬಿಡುವುದಿಲ್ಲ ಮುಗಿಸಿಯೇ ತೀರುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿದಳು ಅಷ್ಟರಲ್ಲಿ ನಮ್ಮ ಗ್ರಾಮದ ರಾಮಾಂಜಿನಮ್ಮ ಕೋಂ ತಿಪ್ಪಯ್ಯ, ಉಮಕ್ಕ ಕೋಂ ಲೇಟ್‌ ನರಸಿಂಹಯ್ಯ, ಕೆಂಪಯ್ಯ ಬಿನ್‌ ನರಸಪ್ಪ, ಇವರುಗಳು ಬಂದು ನಮ್ಮಿಬ್ಬರಿಗೂ ಗಲಾಟೆ ಬಿಡಿಸಿ ಸಮದಾನ ಪಡಿಸಿ ಕಳಿಸಿದರು, ನಂತರ ನಾನು ಮಿಡಿಗೇಶಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ನಂತರ ಠಾಣೆಗೆ ಬಂದು ನನ್ನ ಮೇಲೆ ಗಲಾಟೆ ಮಾಡಿ ಹೊಡೆದಿರುವ ಚಂದನ, ಜಯಲಕ್ಷ್ಮಮ್ಮ ಮತ್ತು ಗೋವಿಂದಮ್ಮ ರವರುಗಳ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳ ಬೇಕೆಂದು  ನೀಡಿದ ಪಿರ್ಯಾದು ಅಂಶವಾಗಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 59/2017 ಕಲಂ; 143,341,324,504,506, ರೆ/ವಿ 149 ಐಪಿಸಿ.

ದಿನಾಂಕ-17-03-2017 ರಂದು ರಾತ್ರಿ 7-15 ಗಂಟೆ ಸಮಯದಲ್ಲಿ ಪಿರ್ಯಾದಿ ಜಯಲಕ್ಷ್ಮಮ್ಮ ಕೋಂ ವೈರಮುಡಿ, ಸುಮಾರು 40 ವರ್ಷ, ವಕ್ಕಲಿಗರು, ಜಿರಾಯ್ತಿ, ಸಿಂಗೋನಹಳ್ಳಿ ಗ್ರಾಮ, ಡಿ.ಹೊಸಹಳ್ಳಿ ದಾಖಲೆ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-16-03-2017 ರಂದು ಸಂಜೆ 7-00 ಗಂಟೆ ಸಮಯದಲ್ಲಿ ನನ್ನ ಮಗ ನಾಗರಾಜು ಬಿನ್‌ ವೈರಮುಡಿ ಮತ್ತು ಸ್ನೇಹಿತ ಪ್ರಕಾಶ್‌ ಬಿನ್‌ ಶಿವಣ್ಣ ರವರು ಉಜ್ಜಿನಿ ಗ್ರಾಮಕ್ಕೆ ಸಂಭಂದಿಕರ ಸಾವಿಗೆ ಹೋಗಿ ನಂತರ ಹಿಂದಿರುಗಿ ವಾಪಾಸ್ ಬರುತ್ತಿರುವಾಗ್ಗೆ ಇದೇ ಹುಲಿಯೂರುದುರ್ಗ ಟೌನ್‌ ಗಣಪತಿ ಪೆಟ್ರೋಲ್‌ ಬಂಕ್‌ ಹತ್ತಿರ ಇದೇ ಸಿಂಗೋನಹಳ್ಳಿ ಗ್ರಾಮದ ವಾಸಿಗಳಾದ 1.ಉಮೇಶ್‌ ಬಿನ್‌ ಸಿದ್ದಯ್ಯ, 2. ನಂಜ ಬಿನ್‌ ಕಪನಯ್ಯ, 3. ಕುಮಾರ ಬಿನ್‌ ಕೂರ್ಲಯ್ಯ, 4. ಶಿವ ಬಿನ್‌ ನಿಂಗಯ್ಯ ಎಂಬುವವರು ನಮ್ಮಗಳ ಹಿಂದಿನ ಹಳೇ ದ್ವೇಶಕ್ಕೆ ನನ್ನ ಮಗ ನಾಗರಾಜ ಮತ್ತು ಸ್ನೇಹಿತ ಪ್ರಕಾಶನನ್ನು ಅಡ್ಡಗಟ್ಟಿ ಲಾಂಗ್‌, ಮಚ್ಚು, ದೊಣ್ಣೆ, ಕಾರದ ಪುಡಿ ಗಳನ್ನು ಬಳಸಿಕೊಂಡು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಆಗ ನನ್ನ ಮಗ ಗ್ರಾಮಕ್ಕೆ ಬನ್ನಿ ಎಂದಾಗ ಸದರಿ 04 ಜನರು ಸೇರಿಕೊಂಡು ದೊಣ್ಣೆಯಿಂದ ನನ್ನ ಮಗ ನಾಗರಾಜುವಿ ಮತ್ತು ಸ್ನೇಹಿತ ಪ್ರಕಾಶ್‌ ರವರಿಗೆ ಮೈಕೈ ಮೇಲೆ ಭಲವಾಗಿ ಹೊಡೆದು, ನಡಿರಲಾ ಬೋಳಿಮಕ್ಕಳಾ, ಸೂಳೇಮಕ್ಕಳಾ ಎಲ್ಲಿಗೆ ಬರಬೇಕು, ನಿಮ್ಮ ಗ್ರಾಮಕ್ಕೆ ಬರಬೇಕಾ ಎಂದು ಬೆದರಿಕೆ ಹೊಡ್ಡಿ ನಮ್ಮ ಗ್ರಾಮಕ್ಕೆ ರಾತ್ರಿ 8-30 ಗಂಟೆ ಬಂದಾಗ ನನ್ನ ಮಗ ನಾಗರಾಜು ಮತ್ತು ಸ್ನೇಹಿತ ಪ್ರಕಾಶ್‌ ನಮಗೆ ವಿಚಾರವನ್ನು ತಿಳಿಸಿದರು. ನಂತರ ಅದೇ ಸಮಯಕ್ಕೆ ಬಂದ ಸದರಿ 04 ಜನರು ನಮ್ಮ ಮನೆಯ ಬಳಿಗೆ ಬಂದು ಏನ್ರೋ ಬೋಳಿಮಕ್ಕಳಾ, ದುರ್ಗದಲ್ಲಿ ಬಚಾವ್‌ ಆದಿರಿ ಹೊರಗಡೆ ಬರ್ರೋ, ಈ ದಿವಸ ನಿಮ್ಮನ್ನು ಕೊಲೆ ಮಾಡದೆ ಬಿಡುವುದಿಲ್ಲವೆಂತ ತಮ್ಮಲ್ಲಿದ್ದ ಮಾರಕಾಸ್ರ್ತಗಳಾದ ಮಚ್ಚು, ಲಾಂಗ್‌, ದೊಣ್ಣೆ ಮತ್ತು ಕಾರದಪುಡಿಯನ್ನು ತೆಗೆದುಕೊಂಡು ಬಂದಿದ್ದು ಶಾರದಮ್ಮ ಕೋಂ ಕಪನಯ್ಯ ಎಂಬುವವರು ಏಕಾಏಕಿ ನಮ್ಮ ಮಗ ನಾಗರಾಜ ಮತ್ತು ಸ್ನೇಹಿತ ಪ್ರಕಾಶ್ ರವರಿಗೆ ದೊಣ್ಣೆಯಿಂದ ಹಲ್ಲೆ ಮಾಡಿ, ಕೊಲೆ ಮಾಡಲು ಮುಂದಾಗಿದ್ದು, ಇಬ್ಬರಿಗೂ ರಕ್ತ ಹೆಪ್ಪುಗಟ್ಟುವಂತೆ  ಹೊಡೆದು ನೋವುಂಡುಮಾಡಿರುತ್ತಾರೆ. ಅದೇ ಸಮಯಕ್ಕೆ ಜಗಳ ಬಿಡಿಸಲು ಬಂದಂತ ಗ್ರಾಮದ ಹರೀಶ್‌ ಎಂಬುವವರು ಬಂದಾಗ ಅವರಿಗೂ ಸಹ ದೊಣ್ಣೆಯಿಂದ ಹೊಡೆದಿದ್ದು ಅವರು ಭಯಗೊಂಡು ಹೊರಟುಹೋಗಿರುತ್ತಾರೆ. ನಂತರ ರಾಜಮುಡಿ ಬಿನ್‌ ಸಣ್ಣಮರಿಯಪ್ಪ, ನಾಗರಾಜು ಬಿನ್‌ ಸೊಬಗಯ್ಯ ಎಂಬುವವರು ನಮ್ಮ ಮುಂದೆಯೇ ಜಗಳವನ್ನು ಬಿಡಿಸಿ ಸಮಾದಾನಪಡಿಸಿದರು. ಸದರಿ ಮೇಲ್ಕಂಡವರ ಮೇಲೆ ನಮಗೆ ಪ್ರಾಣ ಭಯವಿದ್ದು ಯಾವ ಕ್ಷಣದಲ್ಲಾದರೂ ಸಹ ನಮ್ಮನ್ನು ಕೊಲೆ ಮಾಡಬಹುದು ಎಂಬ ಭಯವಿರುತ್ತದೆ. ಆದ್ದರಿಂದ ಸದರಿ ರವರ ಮೇಲೆ ಕಾನೂನು ಕ್ರಮವನ್ನು ಕೈಗೊಂಡು ನನ್ನ ಮಗ ನಾಗರಾಜು ಮತ್ತು ಸ್ನೇಹಿತ ಪ್ರಕಾಶ್‌ ರವರಿಗೆ ರಕ್ಷಣೆಯನ್ನು ಒದಗಿಸುವಂತೆ ನೀಡಿದ ಅರ್ಜಿಯ ಅಂಶವಾಗಿರುತ್ತೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 80 guests online
Content View Hits : 287593