lowborn Crime Incidents 17-03-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 17-03-17

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ ನಂ. 63/2017 ಕಲಂ 302, 34 ಐಪಿಸಿ

ದಿನಾಂಕ: 16/03/2017 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ತುಮಕೂರಿನ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಮೈಕೋ ಫ್ಯಾಕ್ಟರಿ ರಸ್ತೆಯಲ್ಲಿರುವ ಬೇಬಿ ರೈಸ್ ಮಿಲ್ ನಲ್ಲಿ ಹಮಾಲಿ ಕೆಲಸ ಮಾಡಿಕೊಂಡಿರುವ ಬಿಪಿನ್ ಸಿಂಗ್ ಬಿನ್ ಲೇಟ್ ಕೈಲಾಸ್ ಸಿಂಗ್, 38 ವರ್ಷ, ರಾಜಪೂತ್ ಜನಾಂಗ, ಸ್ವಂತ ಊರು ಸಿಹುಲಿಯಾ ಗ್ರಾಮ, ಸುರಾನ್ ಪೋಸ್ಟ್, ಮುಪಾಸಿಲ್ ಮತಿಯಾರಿ ತಾಣಾ (ಪೊಲೀಸ್ ಠಾಣಾ ಸರಹದ್ದು), ಪೂರ್ವಿ ಚಂಪಾರನ್ ತಾಲ್ಲೋಕು, ಪಟ್ನಾ ಜಿಲ್ಲೆ, ಬಿಹಾರ ರಾಜ್ಯ ಇವರು ಹಿಂದಿಯಲ್ಲಿ ಹೇಳಿದ್ದನ್ನು ಕನ್ನಡದಲ್ಲಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಹೆಚ್,ಸಿ 429 ನಯಾಜ್ ಪಾಷ ರವರ ಮುಖಾಂತರ ಭಾಷಾಂತರಿಸಿ ತಿಳಿಸಿ ಟೈಪ್ ಮಾಡಿಸಿಕೊಟ್ಟ ದೂರಿನ ಅಂಶವೇನೆಂದರೆ, ನಮ್ಮ ತಂದೆ ಕೈಲಾಸ್ ಸಿಂಗ್ ರವರು ಈಗ್ಗೆ 10 ವರ್ಷಗಳ ಹಿಂದೆ ಮೃತ ಪಟ್ಟಿದ್ದು, ತಾಯಿಯಾದ ರಾಣಿದೇವಿ ಇದ್ದು, ನಾನು ತಾಯಿಯೊಂದಿಗೆ ವಾಸವಿದ್ದು, ನನ್ನ ಸಹೋದರಿ ಸಂಗೀತಾದೇವಿ ಮದುವೆ ಆಗಿ ಗಂಡನ ಮನೆಯಲ್ಲಿದ್ದು, ನಾನು ನಮ್ಮ ತಾಯಿ ಇಬ್ಬರೇ ಇದ್ದೆವು. ನಮ್ಮ ತಾಯಿಗೆ ವಯಸ್ಸಾಗಿದ್ದು, ನಾನು ಊರಿನಲ್ಲಿ ಕೂಲಿಕೆಲಸ ಮಾಡಿಕೊಂಡಿದ್ದೆನು. ನಮ್ಮ ಊರಿನಲ್ಲಿ ಪ್ರತಿ ದಿನ ಕೂಲಿಕೆಲಸ ಸಿಗದೇ ಇದ್ದುದ್ದರಿಂದ ಈಗ್ಗೆ ಸುಮಾರು 3 ತಿಂಗಳ ಹಿಂದೆ ನಮ್ಮ ಗ್ರಾಮದ ಪಕ್ಕದ ಬಳರಾವ ಗ್ರಾಮದ ಸಿಖಂದರ್ ಸಹಾನಿ ಎಂಬುವರು ಕೂಲಿಕೆಲಸಕ್ಕೆಂದು ಕರ್ನಾಟಕ ರಾಜ್ಯ ತುಮಕೂರು ಜಿಲ್ಲೆಯ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಬೇಬಿ ರೈಸ್  ಮಿಲ್‌ಗೆ ಕರೆದುಕೊಂಡು ಬಂದು ಹಮಾಲಿ ಕೆಲಸಕ್ಕೆ ಸೇರಿಸಿ, ಅವರೂ ಸಹ ನಮ್ಮ ಜೊತೆಯಲ್ಲಿ ಇದ್ದು ಕೆಲಸ ಮಾಡಿಸುತ್ತಿದ್ದರು. ಬೇಬಿ ರೈಸ್ ಮಿಲ್‌ನಲ್ಲಿ ನಮ್ಮ ರಾಜ್ಯದ ಸುಮಾರು 10 ಜನರು ಹಮಾಲಿ ಕೆಲಸ ಮಾಡುತ್ತಿದ್ದು, ನಾನು ಸಹ ಅವರ ಜೊತೆ ಸೇರಿಕೊಂಡು ಹಮಾಲಿ ಕೆಲಸ ಮಾಡಿಕೊಂಡಿರುತ್ತೇನೆ. ಎಲ್ಲರೂ ರೈಸ್ ಮಿಲ್ಲಿನಲ್ಲಿರುವ ಒಂದು ರೂಮಿನಲ್ಲಿ ವಾಸವಾಗಿದ್ದುಕೊಂಡು ಅಲ್ಲೆ ಅಡಿಗೆ ಮಾಡಿಕೊಂಡು ಮಲಗುತ್ತೇವೆ.  ದಿನಾಂಕ;15-03-2017 ರಂದು ಎಂದಿನಂತೆ ರೈಸ್ ಮಿಲ್‌ನಲ್ಲಿ ಸಂಜೆ 06-00 ಗಂಟೆಯವರೆಗೆ ಹಮಾಲಿ ಕೆಲಸ ಮಾಡಿ, ನಂತರ ಸ್ನಾನ ಮಾಡಿಕೊಂಡು ಅಡಿಗೆ ಮಾಡಲು ತರಕಾರಿಯನ್ನು ಶ್ರೀ ದೇವಿ ಕಾಲೇಜ್ ಮುಂಭಾಗ ತೆಗೆದುಕೊಂಡು ಬರೋಣ ಎಂದು ನಮ್ಮ ಜೊತೆಯಲ್ಲಿ ಕೆಲಸ ಮಾಡುವ ರಾಜ್ಯದ ಮೊತಿಹಾರಿ ಜಿಲ್ಲೆಯ ಹರ್ಸೀದಿ ತಾಣಾ, ಪನ್ನಾಪುರ್ ಜೋಗಿಯಾ ಗ್ರಾಮದ ವಾಸಿಯಾದ ಸುಮಾರು 30 ವರ್ಷದ ರಮಾಕಾಂತ್ ಸಹಾನಿ ಬಿನ್ ಶಿರಿಸಹಾನಿ ಇಬ್ಬರು ರೈಸ್ ಮಿಲ್‌ನಿಂದ ಹೊರಟು ಕಾಳೇಶ್ವರಿ ರಸ್ತೆಯಲ್ಲಿ ಪಿ.ಜಿ.ಮಾರ್ಗೋ ಫ್ಯಾಕ್ಟರಿ ಹತ್ತಿರ ರಾತ್ರಿ ಸುಮಾರು 08-45 ಗಂಟೆ ಸಮಯದಲ್ಲಿ ನಡೆದುಕೊಂಡು ಬರುತ್ತಿದ್ದೆವು. ರಮಾಕಾಂತ್ ಸಹಾನಿ ತನ್ನ ಮೊಬೈಲ್‌ನಲ್ಲಿ ತನ್ನ ಹೆಂಡತಿಯ ಜೊತೆ ಮಾತನಾಡುತ್ತಿದ್ದನು. ಅದೇ ಸಮಯಕ್ಕೆ ಮೂರು ಜನ ಆಸಾಮಿಗಳು ಒಂದು ದ್ವಿಚಕ್ರ ವಾಹನದಲ್ಲಿ ನಮ್ಮ ಹಿಂಬದಿಯಿಂದ ಬಂದು ನಮ್ಮ ಮುಂದೆ ದ್ವಿಚಕ್ರ ವಾಹನವನ್ನು ನಿಲ್ಲಿಸಿದರು. ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತ್ತಿದ್ದವನು ದ್ವಿಚಕ್ರ ವಾಹನದಿಂದ ಇಳಿದು ಏಕಾಏಕಿ ರಮಾಕಾಂತ್ ಸಹಾನಿ ರವರ ಕೈಲ್ಲಿದ್ದ ಮೊಬೈಲ್ ಮತ್ತು ಜೇಬಿನಲ್ಲಿದ್ದ ಹಣವನ್ನು ಕಿತ್ತುಕೊಳ್ಳಲು ಹೋದನು. ಆಗ ರಮಾಕಾಂತ್ ಸಹಾನಿ ರವರು ಕೊಡಲು ನಿರಾಕರಿಸಿ ಕೂಗಾಡಿದಾಗ ದ್ವಿಚಕ್ರ ವಾಹನದ ಮದ್ಯದಲ್ಲಿ ಕುಳಿತ್ತಿದ್ದ ಆಸಾಮಿಯು ತನ್ನ ಶರ್ಟಿನ ಒಳಗಡೆ ಇಟ್ಟುಕೊಂಡಿದ್ದ ಉದ್ದನೆಯ ಚಾಕುವನ್ನು ತೆಗೆದು ಏಕಾಏಕಿ ರಮಾಕಾಂತ್ ಸಹಾನಿ ಹೊಟ್ಟೆಗೆ ತಿವಿದನು. ಆಗ ರಮಾಕಾಂತ್ ಸಹಾನಿ ರವರ ಹೊಟ್ಟೆಯಿಂದ ರಕ್ತ ಬಂದಿತು. ಆಗ ದ್ವಿಚಕ್ರ ವಾಹನದಿಂದ ಮೊದಲೇ ಇಳಿದು ನಿಂತಿದ್ದವನು ರಮಾಕಾಂತ್ ಸಹಾನಿ ಕೈಯಲ್ಲಿದ್ದ ಮೊಬೈಲ್‌ನ್ನು ಕಿತ್ತುಕೊಂಡನು. ಆಗ ನಾನು ಮತ್ತು  ರಮಾಕಾಂತ್ ಸಹಾನಿ  ಇಬ್ಬರು ಕಿರುಚಿಕೊಂಡು ಹಿಂದಕ್ಕೆ ಓಡಲು ಪ್ರಾರಂಭಿಸಿದೆವು. ದ್ವಿಚಕ್ರ ವಾಹನದಲ್ಲಿ ಬಂದಿದ್ದ ಮೂರು ಜನರು ದ್ವಿಚಕ್ರ ವಾಹನವನ್ನು ಹತ್ತಿಕೊಂಡು ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ಕಡೆಗೆ ವೇಗವಾಗಿ ಹೋದರು. ಹೊಟ್ಟೆಗೆ ರಕ್ತಗಾಯವಾಗಿದ್ದ ರಮಾಕಾಂತ್ ಸಹಾನಿ ರವರು ಹೊಟ್ಟೆಯನ್ನು ಬಿಗಿಯಾಗಿ ಹಿಡಿದುಕೊಂಡು ಕಾಳೇಶ್ವರಿ ಫ್ಯಾಕ್ಟರಿ ಮುಂಭಾಗದ ಗೇಟ್ ಹತ್ತಿರವರೆಗೂ ಪ್ರಾಯಸದಿಂದ ಓಡಿದನು. ನಾನು ರೈಸ್ ಮಿಲ್ ನಿಂದ ಹುಡುಗರನ್ನು ಕರೆದುಕೊಂಡು ಬರೋಣ ಎಂದು ಓಡಿ ಹೋಗುತ್ತಿದ್ದೆನು. ಅಷ್ಟರಲ್ಲಿ ನಮ್ಮ ರೈಸ್ ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದ ರಾಜ್ ಕುಮಾರ್ ಮತ್ತು ಸಿಖಂದರ್  ಸಹಾನಿ ದ್ವಿಚಕ್ರ ವಾಹನದಲ್ಲಿ ಬಂದರು. ಎಲ್ಲರೂ ಕಾಳೇಶ್ವರಿ ಫ್ಯಾಕ್ಟರಿ ಗೇಟ್ ಮುಂಭಾಗ ಬಂದು ನೋಡಿದಾಗ ರಸ್ತೆ ಬದಿಯಲ್ಲಿ ರಮಾಕಾಂತ್ ಸಹಾನಿ ರವರು ಮಲಗಿದ್ದು, ನೋವಿನ ಭಾದೆಯಲ್ಲಿ ಕಿರುಚಿಕೊಳ್ಳುತ್ತಿದ್ದನು. ಆತನ ಹೊಟ್ಟೆಯ ಭಾಗದಲ್ಲಿ ಕರಳುಗಳು ಹೊರಕ್ಕೆ ಕಾಣುತ್ತಿದ್ದವು. ತಕ್ಷಣ ಅಂಬುಲೆನ್ಸ್ ಗೆ ಪೋನ್ ಮಾಡಿದಾಗ ಆಂಬುಲೆನ್ಸ್ ಬಾರದೆ ಇದ್ದುದ್ದರಿಂದ ರಾಜ್ ಕುಮಾರ್ ಮತ್ತು ಸಿಖಂದರ್ ಸಹಾನಿ ರವರು ದ್ವಿಚಕ್ರ ವಾಹನದಲ್ಲಿ ತೊಡೆಯ ಮೇಲೆ ಹಾಕಿಕೊಂಡು ಸಿರಾ ಗೇಟ್‌ನ ಶ್ರೀದೇವಿ ಮೆಡಿಕಲ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ನಾನು ಹಾಗೂ ಇತರರು ಹಿಂದಿನಿಂದ ಯಾವುದೋ ಒಂದು ವಾಹನದಲ್ಲಿ ಹೋದೆವು. ಗಾಯಗೊಂಡಿದ್ದ ರಮಾಕಾಂತ್ ಸಹಾನಿ ರವರಿಗೆ ಶ್ರೀದೇವಿ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ, ಗಾಯಗೊಂಡಿದ್ದ ರಮಾಕಾಂತ್ ಸಹಾನಿ ರವರನ್ನು ಆಂಬುಲೆನ್ಸ್‌ ನಲ್ಲಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದೆವು. ಚಿಕಿತ್ಸೆ ಪಡೆಯುತ್ತಿದ್ದ ರಮಾಕಾಂತ್ ಸಹಾನಿ ರವರು ದಿನಾಂಕ:15/16-03-2017 ರಂದು ರಾತ್ರಿ ಸುಮಾರು 01-00 ಗಂಟೆ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟರು. ದ್ವಿಚಕ್ರ ವಾಹನದಲ್ಲಿ ಬಂದ ಮೂರು ಜನ ಆಸಾಮಿಗಳು ಅಪರಿಚಿತರಾಗಿದ್ದು, ಇವರು ಮೊಬೈಲ್ ಮತ್ತು ಹಣ ದೋಚಿ ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ತಿವಿದು ಮೊಬೈಲ್ ಕಿತ್ತುಕೊಂಡು ಕೊಲೆ ಮಾಡಿದ್ದು, ಅವರುಗಳನ್ನು ಮತ್ತು ದ್ವಿಚಕ್ರ ವಾಹನವನ್ನು ನೋಡಿರುತ್ತೇನೆ. ನೋಡಿದರೆ ಗುರ್ತಿಸುತ್ತೇನೆ. ಈ ವಿಚಾರವನ್ನು ನಮ್ಮ ರೈಸ್ ಮಿಲ್ಲಿನ ಮಾಲೀಕರಿಗೆ ಮತ್ತು ಮೃತ ರಮಾಕಾಂತ್ ಸಹಾನಿ ರವರ ಸಂಬಂದಿಕರಿಗೆ ತಿಳಿಸಿ ಈ ದಿನ ತಡವಾಗಿ ಬಂದು ಕಾನೂನು ರೀತಿ ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

 

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  29/2017   ಕಲಂ: 32(3)K E Act

ದಿನಾಂಕ:16/03/2017  ರಂದು ಮದ್ಯಾಹ್ನ 2:30 ಗಂಟೆಗೆ  ವೈ.ಎನ್ ಹೊಸಕೋಟೆ ಠಾಣಾ ಪಿ.ಸಿ:724 ರವರು ಠಾಣೆಗೆ ಹಾಜರಾಗಿ ತಿರುಮಣಿ ವೃತ್ತದ ಸಿ.ಪಿ.ಐ ರವರಾದ ಶ್ರೀ ಜಿ.ಟಿ ಶ್ರೀಶೈಲಮೂರ್ತಿ  ರವರು ನೀಡಿದ ರಿಪೋರ್ಟನ್ನು   ಹಾಜರುಪಡಿಸಿದ್ದು ವರದಿ ಅಂಶವೇನೆಂದರೆ ಈ ದಿನ ದಿನಾಂಕ:16/03/2017 ರಂದು ಮದ್ಯಾಹ್ನ 1:00 ಗಂಟೆ ಸಮಯದಲ್ಲಿ  ನಾನು ವೈ.ಎನ್ ಹೊಸಕೋಟೆ ಠಾಣೆಯಲ್ಲಿರುವಾಗ್ಗೆ ಠಾಣಾ ಸರಹದ್ದು ವೈ ಎನ್ ಹಳ್ಳಿ  ಗ್ರಾಮದ ದುರಗಪ್ಪ ಬಿನ್ ಹನುಮಂತಪ್ಪ  60 ವರ್ಷ, ಪ.ಜಾತಿ. ಅಂಗಡಿ ವ್ಯಾಪಾರ ವೈ ಎನ್ ಹಳ್ಳಿ ,ಪಾವಗಡ ತಾ|| ಈತನು ಜನರಿಗೆ ಮಧ್ಯಸೇವನೆ ಮಾಡಲು ತನ್ನ ಅಂಗಡಿ ಬಳಿ ಅಕ್ರಮವಾಗಿ  ಸ್ಥಳಅವಕಾಶ ಮಾಡಿಕೊಟ್ಟಿದ್ದಾನೆಂತ ಖಚಿತ ಮಾಹಿತಿ ಬಂದಿದ್ದರಿಂದ ಪಂಚಾಯ್ತುದಾರರಾದ ಅಂಜಿನಪ್ಪ ಬಿನ್ ಹನುಮಂತಪ್ಪ, 63 ವರ್ಷ, ವೈ ಎನ್ ಹಳ್ಳಿ, ನಾಗರಾಜ ಬಿನ್ ತಿಮ್ಮಪ್ಪ, 27 ವರ್ಷ, ಪ.ಜಾತಿ ಗೌಡತಿಮ್ಮನಹಳ್ಳಿ ರವರ   ಸಮಕ್ಷಮ ಮೇಲ್ಕಂಡ ಸ್ಥಳಕ್ಕೆ ಹೋಗಿದ್ದು ಸ್ಥಳದಲ್ಲಿ ಇದ್ದ ಜನರು ಓಡಿ ಹೋಗಿರುತ್ತಾರೆ, ಸ್ಥಳದಲ್ಲಿ ಪ್ಲಾಸ್ಟಿಕ್ ಗ್ಲಾಸ್ ಮತ್ತು 04 ರಾಜಾ ವಿಸ್ಕಿ 90 ಎಂ.ಎಲ್  ಟೆಟ್ರಾ ಪ್ಯಾಕೆಟ್ ಬಿದ್ದಿದ್ದು ಈ ಸ್ಥಳದಲ್ಲಿ ಕುಡಿಯಲು ಸ್ಥಳ ಅವಕಾಶ ಮಾಡಿಕೊಟ್ಟಿದ್ದ   ದುರಗಪ್ಪ ಬಿನ್ ಹನುಮಂತಪ್ಪ  60 ವರ್ಷ, ಪ.ಜಾತಿ. ಅಂಗಡಿ ವ್ಯಾಪಾರ ವೈ ಎನ್ ಹಳ್ಳಿ ,ಪಾವಗಡ ತಾ||ರವರ ವಿಚಾರಣೆ ಮಾಡಿ ಕ್ರಮ ಕೈಗೊಳ್ಳಬೇಕಾಗಿರುತ್ತದೆ ಆದ್ದರಿಂದ ಮೇಲ್ಕಂಡ   ದುರಗಪ್ಪ ಬಿನ್ ಹನುಮಂತಪ್ಪ, ವೈ ಎನ್ ಹಳ್ಳಿ ಗ್ರಾಮ, ರವರ ಮೇಲೆ ಕ್ರಮ ಕೈಗೊಳ್ಳಬೇಕೆಂತ ಇತ್ಯಾದಿಯಾಗಿ ಕಳುಹಸಿಕೊಟ್ಟ ವರದಿಯನ್ನು ಪಡೆದು ಪ್ರಕರಣ ದಾಖಲಿಸಿದೆ.

 

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ. 39/2017 ಕಲಂ 379 ಐಪಿಸಿ.

ದಿನಾಂಕ: 16/03/2017 ರಂದು ಸಂಜೆ 5-45 ಗಂಟೆಗೆ ಪಿರ್ಯಾದಿ ಟಿ.ಎಸ್.ಮೈತ್ರಮ್ಮ ಕೊಂ ಹೆಚ್.ಎಸ್. ಸೋಮಶೇಖರಯ್ಯ ,46 ವರ್ಷ, ಸಹ ಶಿಕ್ಷಕಿ, ಜಿ.ಹೆಚ್.ಪಿ.ಎಸ್. ದಸರಿಘಟ್ಟ, ವಾಸ ಶ್ರೀ ಮಲ್ಲೇಶ್ವರ  ಸ್ವಾಮಿ   ನಿಲಯ, ಬಾಲಾಜಿ ಕಲ್ಯಾಣ ಮಂಟಪ, ಹಾಸನ ಸರ್ಕಲ್, ತಿಪಟೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,  ದಿನಾಂಕ:11/03/2017 ರಂದು ನಾನು ಮತ್ತು ನನ್ನ ಪತಿರವರು ತಿಪಟೂರು ತಾಲ್ಲೋಕ್ ಕೆರೆಗೋಡಿ ಶ್ರೀ ಶಂಕರೇಶ್ವರ ಸ್ವಾಮಿ ಜಾತ್ರೆ ಮತ್ತು ರಥೋತ್ಸವಕ್ಕೆ ಹೋಗಿದ್ದು, ಮದ್ಯಾಹ್ನ ಸುಮಾರು 2-30 ಗಂಟೆ ಸಮಯದಲ್ಲಿ ನಾನು ರಥವನ್ನು ಎಳೆಯುವ ಸಮಯದಲ್ಲಿ ವಿಪರೀತ ಜನಸಂದಣಿಯಿದ್ದು ನಾನು ಜನರ ಮದ್ಯದಲ್ಲಿ ರಥೋತ್ಸವವನ್ನು ನೋಡುತ್ತಾ ನಿಂತಿದ್ದಾಗ ನೂಕು ನುಗ್ಗಲಲ್ಲಿ ನನ್ನ ಸೀರೆಯ ನರಿಗೆಯನ್ನು ಎಳೆದಂತಾಗಿ ನಾನು ನನ್ನ ಸೀರೆಯ ನರಿಗೆಗಳನ್ನು ಎರಡೂ ಕೈಗಳಿಂದ ಸರಿಪಡಿಸಿಕೊಳ್ಳಲು ಬಾಗಿದೆನು. ನಂತರ ನಾನು ನನ್ನ ಕುತ್ತಿಗೆಯಲ್ಲಿ ಇದ್ದ ಮಾಂಗಲ್ಯ ಸರವು 2 ಎಳೆಯದಾಗಿದ್ದು, ಈ ಚಿನ್ನದ ಸರವನ್ನು ನೋಡಿಕೊಂಡಾಗ ಕೊರಳಲ್ಲಿ ಇರಲಿಲ್ಲ. ಯಾರೋ ಕಳ್ಳರು ನನ್ನ ಸೀರೆಯ ನರಿಗೆಯನ್ನು ಎಳೆದಂತೆ ಮಾಡಿ ನನ್ನ ಗಮನವನ್ನು ಬೇರೆಡೆಗೆ ಸೆಳೆದು ನನ್ನ ಕೊರಳಿನಲ್ಲಿದ್ದ ಸುಮಾರು 60 ಗ್ರಾಂ ಚಿನ್ನದ ಮಾಂಗಲ್ಯದ (ಸರವು ಬಲ್ಪ್ ಮಿಕ್ಸ್‌ ಡಿಸೈನ್ ) ಸರವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾನು ಈ ವಿಚಾರವನ್ನು ನಮ್ಮ ಮನೆಯವರಿಗೆ ತಿಳಿಸಿ ಈ ದಿವಸ ತಡವಾಗಿ ಬಂದು ದೂರನ್ನು ನೀಡುತ್ತಿದ್ದು ನನ್ನ ಮಾಂಗಲ್ಯ ಸರವನ್ನು ಪತ್ತೆ ಮಾಡಿಕೊಡಬೇಕೆಂದು, ಮಾಂಗಲ್ಯ ಸರದ ಅಂದಾಜು ಬೆಲೆ 1,28,000/- ರೂ (ಒಂದು ಲಕ್ಷದ ಇಪ್ಪತ್ತೆಂಟು ಸಾವಿರ ರೂ) ಆಗಿರುತ್ತೆ. ಎಂತಾ ಇತ್ಯಾದಿ.

ಸಿ.ಎಸ್.ಪುರ ಪೊಲೀಸ್  ಠಾಣಾ ಮೊ.ನಂ:18/2017. ಕಲಂ: 323. 324. 354. 504 ಐಪಿಸಿ

ದಿನಾಂಕ:16.03.2017 ರಂದು ಬೆಳಗ್ಗೆ 11.00 ಗಂಟೆಗೆ ಎ.ಎಸ್.ಐ-ಶಿವಕುಮಾರ್ ರವರು ಠಾಣೆಗೆ ಹಾಜರಾಗಿ  ತುಮಕೂರಿನ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ  ಗಾಯಾಳು ಶಾರದಮ್ಮ ಕೊಂ ರಾಜೇಶ, 24 ವರ್ಷ, ನಾಯಕ ಜನಾಂಗ, ವೀರಣ್ಣನ ಗುಡಿ , ಗುಬ್ಬಿ ತಾಲ್ಲೂಕು ರವರ ಹೇಳಿಕೆ ಪಡೆದುಕೊಂಡು ಬಂದು  ಹೇಳಿಕೆ ಪ್ರತಿ ಹಾಜರುಪಡಿಸಿದ್ದು, ಗಾಯಾಳು ಶಾರದಮ್ಮರವರು ನೀಡಿದ ಹೇಳಿಕೆ ಸಾರಾಂಶವೆಂದರೆ, ನನಗೆ ಈಗ್ಗೆ 11 ವರ್ಷಗಳ ಹಿಂದೆ  ಬುಕ್ಕಸಾಗರದ ರಂಗಪ್ಪರವರ ಹಿರಿಯ ಮಗನಾದ ರಾಜೇಶರವರ  ಜೊತೆ ಮದುವೆಯಾಗಿದ್ದು, 2 ನೇಯವನು ಬಿ.ಆರ್ ಮೂರ್ತಿ, 3 ನೇಯವನು ಸುರೇಶ ಆಗಿದ್ದು, ನಮ್ಮ ಯಜಮಾನರನ್ನು ನಮ್ಮ ಅತ್ತೆಯ ತಾಯಿಯಾದ ರಂಗಮ್ಮರವರಿಗೆ ಗಂಡು ಮಕ್ಕಳಿಲ್ಲದ ಕಾರಣ ಮಗಳ ಮಗನಾದ ಅಂದರೆ, ನನ್ನ  ಗಂಡ ರಾಜೇಶನನ್ನು ದತ್ತು ತೆಗೆದುಕೊಂಡಿದ್ದು, ವೀರಣ್ಣನ ಗುಡಿಯಲ್ಲಿ ವಾಸವಾಗಿದ್ದೆವು, ನಾನು ಸಹ ನನ್ನ ಗಂಡ ಮಕ್ಕಳೊಂದಿಗೆ ಅಜ್ಜಿಯ ಯೋಗ ಕ್ಷೇಮ ನೋಡಿಕೊಂಡು ವೀರಣ್ಣನ ಗುಡಿಯಲ್ಲಿ ವಾಸವಾಗಿದ್ದೆವು, ಅಜ್ಜಿಯ ಆಸ್ತಿಯನ್ನೆಲ್ಲಾ  ನಾವೇ ನೋಡಿಕೊಂಡಿದ್ದೆವು, ಈಗ್ಗೆ 2 ತಿಂಗಳ ಹಿಂದೆ ರಂಗಮ್ಮರವರು ತನ್ನ ಎಲ್ಲಾ ಆಸ್ತಿಯನ್ನು ರಾಜೇಶರವರ ಹೆಸರಿಗೆ ವಿಲ್ ಮಾಡಿದ್ದು, ಈ ವಿಷಯ ಬುಕ್ಕಸಾಗರದಲ್ಲಿರುವ ನನ್ನ ಮೈದುನರಿಗೆ ಗೊತ್ತಾಗಿ ಹಾಗೂ ಈಗ್ಗೆ 3 ದಿನಗಳಿಂದ ನಮ್ಮ ಅಅಜ್ಜಿ ರಂಗಮ್ಮನಿಗೆ ಹುಷಾರಿಲ್ಲದೇ ಮಾತು ನಿಂತು ಹೋಗಿದ್ದು, ಈ ವಿಚಾರ ನನ್ನ ಮೈದುನ  ಮೂರ್ತಿಗೆ  ಗೊತ್ತಾಗಿ, ದಿನಾಂಕ:15.03.2017 ರಂದು  ಬೆಳಗ್ಗೆ 8.30 ಗಂಟೆ ಸಮಯದಲ್ಲಿ  ನನ್ನ ಗಂಡ ಮನೆಯಲ್ಲಿ ಇರದೇ ಅಂಕಳಕೊಪ್ಪದ ಹಾಲಿನ ಡೈರಿಯಲ್ಲಿ ಹಣ ತರಲು ಹೋಗಿದ್ದ ಸಂಧರ್ಭದಲ್ಲಿ ಮನೆಗೆ ಬಂದು  ಒಂದು ಖಾಲಿ ಹಾಳೆ ಹಾಗೂ ಪೆನ್ನನ್ನು ತಂದು ಜ್ಷಾನ ಇಲ್ಲದ ಮುದುಕಿ ರಂಗಮ್ಮನ ಬಳಿ ಬಂದು ಹೆಬ್ಬೆಟ್ಟನ್ನು  ಖಾಲಿ ಹಾಳೆಗೆ ಒತ್ತಿಸಿಕೊಳ್ಳಲು  ಪ್ರಯತ್ನ ಮಾಡುತಿದ್ದಾಗ ನಾನು ನೋಡಿ ಯಾಕೆ ಈ ರೀತಿ  ಖಾಲಿ ಹಾಳೆಗೆ ಹೆಬ್ಬೆಟ್ಟನ್ನು ಒತ್ತಿಸಿಕೊಳ್ಳುತಿದ್ದೀಯಾ, ನನ್ನ ಗಂಡ ಬರುವವರೆಗೆ ಏನು ಮಾಡಬೇಡ ಎಂದು ಹೇಳಿದ್ದಕ್ಕೆ, ಅದಕ್ಕೆ ಕೋಪಗೊಂಡ ನನ್ನ ಮೈದುನ  ಮೂರ್ತಿ  ಬಾಯಿಗೆ ಬಂದಂತೆ  ಬೈದು, ಮನೆಯ ಹೊರಾಂಡದಲ್ಲಿ ಇಟ್ಟಿದ್ದಂತಹ ಎಡೆ ಮೊಟ್ಟೆಯಿಂದ  ತಲೆಗೆ ಹೊಡೆದು ನಂತರ ಕೈಯಿಂದ  ನನ್ನ ಮೈಕೈಗೆ ಹೊಡೆದು ನೋವುಂಟುಮಾಡಿ, ಜುಟ್ಟು  ಹಿಡಿದು ಎಳೆದಾಡಿ  ಕೈಯಿಂದ ಎದೆಯ ಭಾಗ ಪರಚಿರುತ್ತಾನೆ, ಮತ್ತೆ ಕೆಳಗೆ ಕೆಡವಿಕೊಂಡು ಕಾಲಿನಿಂದ ತುಳಿದಿರುತ್ತಾನೆ, ಆ ಸಮಯಕ್ಕೆ ನಮ್ಮ ಮನೆಯ ಬಳಿ  ಇರುವ  ಸಿದ್ದಮ್ಮ ಕೊಂ ಮೂಡ್ಲಪ್ಪ ರವರು ಹಾಗೂ ಭದ್ರಯ್ಯರವರು  ಬಂದು ಜಗಳ ಬಿಡಿಸಿರುತ್ತಾರೆ ಎಂದು ಇತ್ಯಾದಿಯಾಗಿ  ನೀಡಿದ  ಹೇಳಿಕೆ ಯನ್ನು ಪಡೆದು ಸಿ ಪ್ರಕರಣ ದಾಖಲಿಸಿರುತ್ತೆ.

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  28/2017   ಕಲಂ: 32(3)K E Act

ದಿನಾಂಕ:16/03/2017 ರಂದು ಬೆಳಿಗ್ಗೆ 9:15 ಗಂಟೆಗೆ ವೈ.ಎನ್ ಹೊಸಕೋಟೆ ಠಾಣಾ ಪಿ.ಸಿ:724 ರವರು ಠಾಣೆಗೆ ಹಾಜರಾಗಿ ವೈ.ಎನ್ ಹೊಸಕೋಟೆ ಠಾಣಾ ಪಿ.ಎಸ್ ಐ ಅಬ್ದುಲ್ ನಬೀ ಸಾಬ್ ರವರು ನೀಡಿದ ರಿಪೋರ್ಟ ನ್ನು   ಹಾಜರುಪಡಿಸಿದ್ದು ವರದಿ ಅಂಶವೇನೆಂದರೆ   ನಾನು ವೈ.ಎನ್ ಹೊಸಕೋಟೆ  ಠಾಣಾ ಸರಹದ್ದು ಗಸ್ತು ಮಾಡುತ್ತಿರುವಾಗ್ಗೆ  ಇದೇ ದಿನ ಬೆಳಿಗ್ಗೆ 9:00 ಗಂಟೆಯಲ್ಲಿ ಠಾಣಾ ಸರಹದ್ದು ವೈ ಎನ್ ಹೊಸಕೋಟೆ  ಗ್ರಾಮದ ವಾಸಿ ಜಗನ್ನಾಥ ಬಿನ್ ಲೇ|| ಅಂಜಪ್ಪ,32 ವರ್ಷ,ತೊಗಟ ಜನಾಂಗ,ವೈ ಎನ್ ಹೊಸಕೋಟೆ ಟೌನ್  ,ಪಾವಗಡ ತಾ||  ಈತನು ಜನರಿಗೆ ಮಧ್ಯಸೇವನೆ ಮಾಡಲು ತನ್ನ ಅಂಗಡಿ ಬಳಿ ಸ್ಥಳಾವಕಾಶ ಮಾಡಿಕೊಟ್ಟಿದ್ದಾನೆಂತ ಖಚಿತ ಮಾಹಿತಿ ಬಂದಿದ್ದರಿಂದ ಪಂಚಾಯ್ತುದಾರರಾದ ಗುಜ್ಜಾರಪ್ಪ ಬಿನ್ ಹನುಮಂತರಾಯ , ಜೆ ಅಚ್ಚಮ್ಮನಹಳ್ಳಿ ಗ್ರಾಮ ಮತ್ತು ಶಿವಣ್ಣ ಬಿನ್ ಮಹದೇವಪ್ಪ, 44 ವರ್ಷ ,ನಾಯಕ ಜನಾಂಗ, ಕೋಟಗುಡ್ಡ   ಗ್ರಾಮ  ರವರ ಸಮಕ್ಷಮ ಮೇಲ್ಕಂಡ ಸ್ಥಳಕ್ಕೆ ಹೋಗಿದ್ದು ಸ್ಥಳದಲ್ಲಿ ಇದ್ದ ಜನರು ಓಡಿ ಹೋಗಿರುತ್ತಾರೆ, ಸ್ಥಳದಲ್ಲಿ ಪ್ಲಾಸ್ಟಿಕ್ ಗ್ಲಾಸ್ ಮತ್ತು 05 ರಾಜಾ ವಿಸ್ಕ ಟೆಟ್ರಾ ಪ್ಯಾಕೆಟ್ ಬಿದ್ದಿದ್ದು ಈ ಸ್ಥಳದಲ್ಲಿ ಕುಡಿಯಲು ಸ್ಥಳ ಅವಕಾಶ ಮಾಡಿಕೊಟ್ಟಿದ್ದ  ಜಗನ್ನಾಥ ಬಿನ್ ಲೇ|| ಅಂಜಪ್ಪ,32 ವರ್ಷ,ತೊಗಟ ಜನಾಂಗ,ವೈ ಎನ್ ಹೊಸಕೋಟೆ ಟೌನ್ ,ಪಾವಗಡ ತಾ|| ರವರ ವಿಚಾರಣೆ ಮಾಡಿ ಕ್ರಮ ಕೈಗೊಳ್ಳಬೇಕಾಗಿರುತ್ತದೆ ಆದ್ದರಿಂದ ಮೇಲ್ಕಂಡ ಜಗನ್ನಾಥ ಬಿನ್ ಲೇ|| ಅಂಜಪ್ಪ ರವರ ಮೇಲೆ ಕ್ರಮ ಕೈಗೊಳ್ಳಬೇಕೆಂತ ಇತ್ಯಾದಿಯಾಗಿ ಕಳುಹಸಿಕೊಟ್ಟ ವರದಿಯನ್ನು ಪಡೆದು ಪ್ರಕರಣ ದಾಖಲಿಸಿದೆ

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ. 62/2017 ಕಲಂ 143,147,323,447,427,504,506,149 ಐಪಿಸಿ

ದಿನಾಂಕ:15/03/2017 ರಂದು ಸಂಜೆ 5-00 ಗಂಟೆಗೆ ತುಮಕೂರು ತಾಲ್ಲೋಕ್ ಬೆಳ್ಳಾವಿ ಹೋಬಳಿ ಬಳ್ಳಾಪುರ ವಾಸಿ ಕೃಷ್ಣಪ್ಪ.ಬಿ.ಸಿ ಬಿನ್ ಚನ್ನಯ್ಯ ಲೇಟ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಬುಗುಡನಹಳ್ಳಿ ಗ್ರಾಮ ಪಂಚಾಯ್ತಿಗೆ ಸೇರಿದ ಹನುಮಂತಪುರ ಗ್ರಾಮಕ್ಕೆ ಸೇರಿದ ಸರ್ವೆ ನಂ 14/1ಎ1 ರಲ್ಲಿ 2 ಎಕರೆ 18 ಗುಂಟೆಯಲ್ಲಿ ದಿನಾಂಕ:07/03/1990ರಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಂದ ಎ.ಎಲ್.ಎನ್.ಎಸ್.ಆರ್ ನಂಬರ್ 191/1989-90 ರಲ್ಲಿ ವಾಸದ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾಗಿ ಮಂಜೂರು ಆಗಿರುತ್ತದೆ. ಅದರಲ್ಲಿ 62 ಸೈಟುಗಳು ವಿಂಗಡಣೆಯಾಗಿದ್ದು ಸದರಿ ಸೈಟನ್ನು ರಾಮಕೃಷ್ಣಯ್ಯ ಬಿನ್ ಬಿ.ವಿ.ಲಿಂಗಪ್ಪ ದಾಸರಹಳ್ಳಿ ಗ್ರಾಮ, ಕೊರಟಗೆರೆ ತಾಲ್ಲೋಕ್ ಮತ್ತು ಜಿ ರವಿಪ್ರಕಾಶ ಬಿನ್ ಜಿ.ಆರ್ .ರಾಮಶೆಟ್ಟಿ ಮಿಡಿಗೇಶಿ ಮಧುಗಿರಿ ತಾಲ್ಲೋಕ್ ರವರ ಜಿಪಿಎ ಹೋಲ್ಡರ್ ಆಗಿ ವೆಂಕಟಾಚಲಶೆಟ್ಟಿಯವರ ಮಗ ವಿ.ಗಿರೀಶ್ 32ವರ್ಷ, ಮಧುಗಿರಿ ಇವರಿಂದ ದಿನಾಂಕ:20/02/2006 ರಂದು ತುಮಕೂರು ತಾಲ್ಲೋಕ್ ಸಬ್ ರಿಜಿಸ್ಟಾರ್ ಕಛೇರಿಯಲ್ಲಿ ಕ್ರಯ ಮಾಡಿಸಿಕೊಂಡಿರುತ್ತೇನೆ. ಸೈಟ್ ನಂ 31 ಮತ್ತು 32ರ ನಂಬರ್ ಆಗಿದ್ದು ಇದುವರೆಗೂ ಎಲ್ಲಾ ಖಾತೆ ಮತ್ತು ಕಂದಾಯ ಕಟ್ಟಿಕೊಂಡು ನಮ್ಮ ಅನುಭವದಲ್ಲಿರುತ್ತದೆ. ಖಾತಾ ನಂ 576, 580 ಆಗಿರುತ್ತದೆ. ಆದರೆ ದಿ:03/03/2017 ರಂದು ಮದ್ಯಾಹ್ನ 2-20 ಗಂಟೆ ಸಮಯದಲ್ಲಿ 1) ಭಾಗ್ಯರತ್ನಮ್ಮ ಬಿನ್ ಲೇಟ್ ಡ್ಯಾನಿಯಲ್ ಜೋಸೆಫ್, 2) ಹನುಂತರಾಯಪ್ಪ, 3) ಮಧು ಬಿನ್ ಹನುಮಂತರಾಯಪ್ಪ, 4) ಅನಿತಾ ಕುಮಾರಿ ಬಿನ್ ಲೇಟ್ ಡ್ಯಾನಿಯಲ್ ಜೋಸೆಫ್, 5) ಸರಳಮ್ಮ ಕೋಂ ಲೇಟ್ ಡ್ಯಾನಿಯಲ್ ಜೋಸೆಫ್, 6) ಸತ್ಯ ಪ್ರೀತಿ ಸೌಭಾಗ್ಯ ಡ್ಯಾನಿಯಲ್ ಜೋಸೆಫ್, 7) ಮನುಕುಮಾರಿ ಬಿನ್ ಲೇಟ್ ಡ್ಯಾನಿಯಲ್ ಜೋಸೆಫ್, 8) ಜಾನ್ ಪ್ರದೀಪ, 9) ಫ್ಲಾರೇನ್ಸ್ ಪದ್ಮಲತಾ ಕೋಂ ಲೇಟ್ ಅನೋಕ್ ರವಿಕುಮಾರ್, 10) ಸಂದೀಪ್ ಲೇಟ್ ಅನೋಕ್ ಕುಮಾರ್ ಇವರುಗಳು ನಮ್ಮಗಳ ಒಟ್ಟು 62 ಸೈಟುಗಳು ಆಗಿದ್ದು ಅತಿಕ್ರಮಣ ಪ್ರವೇಶ ಮಾಡಿ ಜೆ.ಸಿ.ಬಿ ಯಂತ್ರದಿಂದ ನಂಬರ್ ಕಲ್ಲುಗಳನ್ನು ಕಿತ್ತುಹಾಕಿರುತ್ತಾರೆ. ಆದರೆ ನಾವು ನಮಗೆ ಯಾರೋ ಪೋನ್ ಮುಖಾಂತರ ತಿಳಿಸಿದರು. ಆಗ ನಾವುಗಳು ಸೈಟಿನ ಹತ್ತಿರ ಹೋದಾಗ ನಮ್ಮ ಮೇಲೆ ಯಾರು ನೀವು ಎಂದು ಕೇಳಿದರು ಸೈಟ್‌ನ ಮಾಲಿಕರು ಎಂದು ಹೇಳಿದ್ದೆವು. ಆಗ ಅವರಿಗೂ ನಮ್ಮಗೂ ಮಾತಿಗೆ ಮಾತು ಬೆಳೆಯಿತು. ಆಗ ಮೇಲ್ಕಂಡ ಸುಮಾರು 10-12 ಜನ ನಮ್ಮ ಮೇಲೆ ಹಲ್ಲೆ ಮಾಡಿ ಮಾರಕಾಸ್ತ್ರ ಮತ್ತು ಕಬ್ಬಿಣದ ರಾಡು ಹಿಡಿದುಕೊಂಡು ಹಲ್ಲೆ ಮಾಡಲು ಮುಂದಾಗಿ ನಮಗೆ ತಳ್ಳಿ ಕೆಳಗೆ ಬೀಳಿಸಿದರು. ಎಡಗಾಲಿನಿಂದ ತುಳಿದರು ನನಗೆ ಏನು ತೋಚದಂತೆ ಆಯಿತು. ಆಗ ನನ್ನ ಹೆಂಡತಿ ಸಹ ನನ್ನ ಜೊತೆಯಲ್ಲಿದ್ದ ಕಾರಣ ಅವರಿಗೂ ಸಹ ಬೆದರಿಸಿ ಕೊಲೆ ಮಾಡುತ್ತೇನೆಂದು ಮಾನಸಿಕವಾಗಿ ಮಾಡಬಾರದಂತೆ ಮಾತುಗಳನ್ನು ಆಡಿ ನನ್ನ ಬಟ್ಟೆ ಹರಿದುಹಾಕಿದರು. ಹಾಗೂ ಈಗಾಗಲೇ ಆ ಸೈಟಿನಲ್ಲಿ ಸುಮಾರು 10-15 ಮನೆಗಳು ವಾಸ ಮಾಡುತ್ತಿದ್ದು ಅದರಲ್ಲಿ ವಿದ್ಯುತ್ ಸಂಪರ್ಕವಿದ್ದು ಸರ್ಕಾರದಿಂದ ಮಾಡಿರುವ ರಸ್ತೆಯನ್ನು ಹಾಳುಮಾಡಿ ಸಾರ್ವಜನಿಕ ನೀರಿನ ನಲ್ಲಿಗಳನ್ನು ಸಹ ಹಾಳು ಮಾಡಿ ಸಾರ್ವಜನಿಕರಿಗೂ ಸಹ ತೊಂದರೆ ಕೊಟ್ಟಿರುತ್ತಾರೆ. ಪಂಚಾಯ್ತಿಯಿಂದ ಮತ್ತು ಸರ್ಕಾರದಿಂದ ರಸ್ತೆಗಳನ್ನು ಚರಂಡಿಗಳನ್ನು ಹಾಳು ಮಾಡಿರುತ್ತಾರೆ. ಸರ್ಕಾರದ ಅಧಿಕಾರಿಗಳು ಬಂದಾಗ ಅವರನ್ನು ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಮೇಲ್ಕಂಡ ಸ.ನಂ ಸೈಟಿನ ಬಗ್ಗೆ ಇವರಿಗೆ ಯಾವುದೇ ದಾಖಲಾತಿ ಇರುವುದಿಲ್ಲ. ಆದರೂ ಸಹ ಇವರು ಒಂದು ದೊಡ್ಡ ಗೂಂಡಾಗಿರಿಯನ್ನು ಮಾಡಲು ಕೆಲವರನ್ನು ಕರೆದುಕೊಂಡು ಬಂದು ನಮಗೆ ಮಾನಸಿಕ ತೊಂದರೆ ಮಾಡಿರುತ್ತಾರೆ. ಒಟ್ಟು 62 ಸೈಟುಗಳ ಮಾಲಿಕರಾದ ಜಯ ಬಿನ್ ದೊಡ್ಡತಿಮ್ಮಯ್ಯ, ಹೆಚ್ ಎಸ್ ಶಿವಶಂಕರಯ್ಯ ಬಿನ್ ಹೆಚ್.ಜಿ. ಶಂಕರಲಿಂಗಯ್ಯ, ಹೆಚ್.ಆರ್.ಕೃಷ್ಣ ಬಿನ್ ಲೇಟ್ ರಾಮಯ್ಯ, ಮೂಡಲಗಿರಿಯಪ್ಪ ಬಿನ್ ವೆಂಕಟರಾಮಯ್ಯ, ಕೃಷ್ಣಪ್ಪ ಬಿನ್ ಚನ್ನಯ್ಯ, ಹೆಚ್.ಜಿ.ಮಾಲಿನಿ ಕೋಂ ಶಿವಕುಮಾರ್, ದಿನೇಶ್ ಕುಮಾರ್ ಬಿನ್ ಎಂ.ಎಸ್.ರಂಗಪ್ಪ, ಮಂಜುಳಾ ಕೋಂ ಉಮೇಶ್, ಪಿ.ಟಿ.ಮಹಾದೇವಪ್ಪ ಬಿನ್ ಲೇಟ್ ತಿಮ್ಮಣ್ಣ, ಮಹೇಶ್ ಬಿನ್ ರಾಜಣ್ಣ, ಶೈಲಜ ಕೋಂ ರಮೇಶ್ ಕುಮಾರ್, ಕಾಂತರಾಜು, ದೇವರಾಜು, ಬಾಬು, ಮೋಹನ್, ರಮೇಶ್, ಮಹಾದೇವಪ್ಪ, ಸೈಯದ್ ಇಬ್ರಾಹಿಂ ಪಾಷಾ ಇತರರಾದ ನಮಗೆ ನ್ಯಾಯ ದೊರಕಿಸಿ ಹಾಗೂ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

ತುಮಕೂರು  ಸಂಚಾರಿ ಪೊಲಿಸ್‌ ಠಾಣೆ ಮೊ.ಸಂ 49/2017 ಕಲಂ 279,  337, 304[]

ದಿನಾಂಕ 16.03.2017 ರಂದು ರಾತ್ರಿ 9-00 ಗಂಟೆಯಲ್ಲಿ ಕೆಎ.44.1949 ನೇ ಟ್ಯಾಂಕರ್ ಲಾರಿ ಚಾಲಕ ಲಾರಿಯನ್ನು  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಭೀಮಸಂದ್ರ ಆರ್ ಪಿ ವೈನ್ಸ್ ಮುಮಭಾಗ ರಾ.ಹೆದ್ದಾರಿ 206 ರಸ್ತೆಯಲ್ಲಿ ಕೆಎ.06.ಇಎ.6300 ನೇ  ಬೈಕಿಗೆ ಡಿಕ್ಕಿ ಹೊಡೆಸಿದ್ದರಿಂದ ಬೈಕ್ ಬೈಕ್ ಸವಾರ   ಜಬೀವುಲ್ಲಾ ರವರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮೃತಪಟ್ಟಿರುತ್ತಾರೆ.   ಅದೇ ಸಮಯಕ್ಕೆ ಸದರಿ ಟ್ಯಾಂಕರ್ ಲಾರಿ ಚಾಲಕ   ಮತ್ತೊಂದು ಕೆಎ.06.ಆರ್.5561 ನೇ ದ್ವಿಚಕ್ರ ವಾಹನಕ್ಕೂ ಅಪಘಾತಪಡಿಸಿದ್ದರಿಂದ,   ಆತನಿಗೂ ಪೆಟ್ಟು ಬಿದ್ದು ರಕ್ತಗಾಯಗಳಾಗಿರುತ್ತವೆ. ಈ ಬಗ್ಗೆ   ಮುಂದಿನ  ಕಾನೂನು ರೀತ್ಯಾ  ಕ್ರಮ ಜರುಗಿಸಬೇಕೆಂತ  ನೀಡಿದ ಪಿರ್ಯಾದನ್ನು ಪಡೆದು   ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ 58/2017 ಕಲಂ; 323, 324, 307 ರೆ/ವಿ 34 ಐಪಿಸಿ.

ದಿನಾಂಕ-16-03-2017 ರಂದು ರಾತ್ರಿ 11-30 ಗಂಟೆ ಸಮಯದಲ್ಲಿ ಪಿರ್ಯಾದಿ ಕಪನಯ್ಯ ಬಿನ್‌ ನಂಜುಂಡಯ್ಯ, 37 ವರ್ಷ, ವಕ್ಕಲಿಗರು, ಜಿರಾಯ್ತಿ, ಸಿಂಗೋನಹಳ್ಳಿ ಗ್ರಾಮ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-16-03-2017 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ನನ್ನ ಚಿಕ್ಕಪ್ಪನ ಮಗನಾದ ನಂಜೇಗೌಡನಿಗೆ ಸಿಂಗೋನಹಳ್ಳಿ ಸರ್ಕಾರಿ ಶಾಲೆಯ ಹತ್ತಿರ ಹಳೇ ದ್ವೇಶದ ಹಿನ್ನೆಲೆಯಲ್ಲಿ ಇದೇ ಗ್ರಾಮದ ವಾಸಿಗಳಾದ ಹರೀಶ್‌ ಬಿನ್‌ ಲೇಟ್‌ ಕುಂಟಯ್ಯ, ನಾಗರಾಜು ಬಿನ್‌ ವೈರಮುಡಿ, ಪ್ರಕಾಶ್‌ ಬಿನ್‌ ಶಿವಣ್ಣ ಮತ್ತು ವೈರಮುಡಿ ಬಿನ್‌ ಲೇಟ್‌ ದಾಸಪ್ಪ ಎಂಬುವವರುಗಳು ಸೇರಿ ಗುಂಪು ಕಟ್ಟಿಕೊಂಡು ಮಚ್ಚು  ಮತ್ತು ದೊಣ್ಣೆಗಳೀಂದ ಮಾರಣಾಂತಿಕವಾಗಿ ಹೊಡೆದು ತಲೆಗೆ ತೀವ್ರತರವಾದ ರಕ್ತಗಾಯ ಮಾಡಿರುತ್ತರೆ. ಹರೀಶ ಎಂಬುವವನು ಮಚ್ಚಿನಿಂದ ತಲೆಗೆ ಹೊಡೆದು ಮತ್ತು ನಾಗರಾಜು ಎಂಬುವವರು ದೊಣ್ಣೆಯಿಂದ ಹೊಡೆದು, ವೈರಮುಡಿ ಮತ್ತು ಪ್ರಕಾಶ ಎಂಬುವವರು ಹಿಗ್ಗಾಮುಗ್ಗಾ ಕೈಯಿಂದ ಹೊಡೆದು ಮೈಗೆ ಗಾಯಮಾಡಿರುತ್ತಾರೆ. ಇದೇ ಗ್ರಾಮದ ಗಂಗರಾಜು ಬಿನ್‌ ಲೇಟ್ ನಿಂಗಯ್ಯ ಮತ್ತು ಉಮೇಶ್‌ ಬಿನ್‌ ಸಿದ್ದಯ್ಯ ರವರುಗಳು  ಇವರು ಜಗಳವಾಡುತ್ತಿದ್ದುದ್ದನ್ನು ಬಿಡಿಸಿ ನಂತರ ಹುಲಿಯೂರುದುರ್ಗ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಆಂಬುಲೆನ್ಸ್‌ ನಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಆದ್ದರಿಂದ ಸದರಿ ರವರ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ನೀಡಿದ ದೂರಿನ ಅಂಶವಾಗಿರುತ್ತೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 70 guests online
Content View Hits : 274837