Crime Incidents 16-03-17
ಬಡವನಹಳ್ಳಿ ಪೊಲೀಸ್ ಠಾಣೆ ಮೊ.ಸಂ 19/2017 ಕಲಂ 143, 147, 148, 323, 324, 427, 448, 504, 506 ರೆ/ವಿ 149 ಐಪಿಸಿ
ದಿನಾಂಕ:-15/03/2017 ರಂದು ಸಂಜೆ 7-10 ಗಂಟೆಗೆ ಪಿರ್ಯಾದಿ ಮಂಜುನಾಥ ಬಿನ್ ವೆಂಕಟರಮಣಪ್ಪ, 34 ವರ್ಷ, ಭೋವಿ ಜನಾಂಗ, ಬಿ.ಎಂ ಪಾಳ್ಯ, ದೊಡ್ಡೇರಿ ಹೋ, ಮಧುಗಿರಿ ತಾ ರವರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಮ್ಮ ಗ್ರಾಮದಲ್ಲಿ ನನ್ನ ಅಜ್ಜಿ ಯಲ್ಲಮ್ಮ ನವರಿಗೆ 2016-17 ನೇ ಸಾಲಿನಲ್ಲಿ ಮನೆ ಮಂಜೂರಾಗಿದ್ದು, ನಿವೇಶನ ಸಂಖ್ಯೆ 89 ಆಗಿದ್ದು, ಇದಕ್ಕೆ ಚಂದ್ರಗಿರಿ ಗ್ರಾಮ ಪಂಚಾಯ್ತಿಗೆ ಮನೆ ಕಂದಾಯ ಕಟ್ಟಿದ್ದು, ಪಂಚಾಯ್ತಿಯಿಂದ ಮನೆ ಕಟ್ಟಲು ಅನುಮತಿ ಪತ್ರ ಸಹ ನೀಡಿರುತ್ತಾರೆ. ಮನೆಯು ಕಿಟಕಿಯ ವರೆಗೆ ಕಟ್ಟಿದ್ದು, ತಳಪಾಯದ 37.300 ರೂ ಬಿಲ್ ಸಹ ಪಡೆದಿರುತ್ತಾರೆ. ದಿನಾಂಕ 13/03/2017 ರಂದು ಸಂಜೆ 6-30 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ವಾಸಿಗಳಾದ ಗೋವಿಂದಪ್ಪ ಬಿನ್ ಮಾಳಿಗೆ ವೆಂಕಟಪ್ಪ, ಎ.ವಿ ನಾಗರಾಜು ಬಿನ್ ಮಾಳಿಗೆ ವೆಂಕಟಪ್ಪ, ಸಂತೋಷ ಬಿನ್ ಗೋವಿಂದಪ್ಪ, ರಂಗನಾಥ ಬಿನ್ ಗೋವಿಂದಪ್ಪ, ರಘು ಬಿನ್ ಗೋವಿಂದಪ್ಪ, ಗೋವಿಂದಪ್ಪ ಬಿನ್ ಮೀಸೆ ವೆಂಕಟಪ್ಪ, ರಮೇಶ ಬಿನ್ ಗೋವಿಂದಪ್ಪ, ಆನಂದಮ್ಮ ಕೊಂ ರಮೇಶ, ಜಯಮ್ಮ ಕೊಂ ಗೋವಿಂದಪ್ಪ, ಸಿದ್ದಗಂಗಮ್ಮ ಕೊಂ ಗೋವಿಂದಪ್ಪ ರವರು ಸೇರಿಕೊಂಡು ನನ್ನ ಅಜ್ಜಿ ಮನೆಗೆ ಅಕ್ರಮ ಪ್ರವೇಶ ಮಾಡಿ ಹಾರೆಕೋಲು, ಗುದ್ದಲಿ, ಚಮಟಿಕೆಯಿಂದ ಮನೆಯನ್ನು ನೆಲಸಮ ಮಾಡಿರುತ್ತಾರೆ. ಇದನ್ನು ಕೇಳಲು ನನ್ನ ಚಿಕ್ಕಪ್ಪ ಗಂಗಾಧರಯ್ಯ ಮತ್ತು ನಮ್ಮ ಚಿಕ್ಕಮ್ಮ ಸತ್ಯಮ್ಮ ರವರು ಕೇಳಲು ಹೋದಾಗ ಅವಾಚ್ಯ ಶಬ್ದಗಳಿಂದ ಬೈದು, ನನ್ನ ಚಿಕ್ಕಮ್ಮನಿಗೆ ರಂಗನಾಥ ಇಟ್ಟಿಗೆ ಯಿಂದ ಕೈ ಮತ್ತು ಕಾಲುಗಳಿಗೆ ಹೊಡೆದು ರಕ್ತ ಗಾಯಪಡಿಸಿದ. ಮತ್ತು ಎಲ್ಲರು ಪ್ರಾಣ ಬೆದರಿಕೆ ಹಾಕಿರುತ್ತಾರೆ. ನನ್ನ ಚಿಕ್ಕಪ್ಪನ ಪಲ್ಸರ್ ಗಾಡಿಯಾದ ಕೆಎ 41 ಇ ಎಲ್ 8047 ಅನ್ನು ಮತ್ತು ನನ್ನ ಕೆಎ 06 ಡಿ 0623 ನೇ ಲಗೇಜ್ ಆಟೋವನ್ನು ಸಂತೋಷ, ರಘು, ರಂಗನಾಥ, ರಮೇಶ ರವರು ಸೇರಿಕೊಂಡು ಜಖಂಗೊಳಿಸಿರುತ್ತಾರೆ. ನಾನು ನನ್ನ ಚಿಕ್ಕಮ್ಮನನ್ನು ಮಧುಗಿರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಠಾಣೆಗೆ ಬಂದಿರುತ್ತೇನೆ. ಮೇಲ್ಕಂಡವರಿಂದ ಸುಮಾರು 4 ಲಕ್ಷ ನಷ್ಟ ಉಂಟಾಗಿರುತ್ತೆ. ಮೇಲ್ಕಂಡವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಅಂಶದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ
ಸಿ.ಎಸ್.ಪುರ ಠಾಣಾ ಯು.ಡಿ.ಆರ್ ನಂ:05/2017. ಕಲಂ: 174 ಸಿ.ಆರ್.ಪಿ.ಸಿ
ದಿನಾಂಕ:15.03.2017 ರಂದು ಪಿರ್ಯಾದುದಾರರಾದ ಲಕ್ಷ್ಮಿದೇವಮ್ಮ ಕೊಂ ರಾಜಣ್ಣ, 43 ವರ್ಷ, ಬೋವಿ ಜನಾಂಗ, ಗುಬ್ಬಿ ಟೌನ್ ರವರು ಮಧ್ಯಾಹ್ನ 1.00 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆಂದರೆ, ನಮಗೆ 25 ವರ್ಷದ ರವಿಕುಮಾರ್ , 23 ವರ್ಷದ ಜಯಶೀಲಾ ಹಾಗೂ 21 ವರ್ಷದ ಗೌರಮ್ಮ ಎಂದ ಮೂರು ಜನ ಮಕ್ಕಳಿರುತ್ತಾರೆ. ಈಗ್ಗೆ ಮೂರು ವರ್ಷಗಳಿಂದ ನಮ್ಮ ಹೆಣ್ಣು ಮಕ್ಕಳ ಜೊತೆ ಬೆಂಗಳೂರಿನಲ್ಲಿ ನಾನು & ನನ್ನ ಮಗ ಒಟ್ಟಿಗೆ ಕೂಲಿ ಕೆಲಸ ಮಾಡಿಕೊಂಡು ಜೀವನಮಾಡುತಿದ್ದು, ಈಗ್ಗೆ 20 ವರ್ಷಗಳಿಂದ ನಮ್ಮ ಯಜಮಾನರಾದ ರಾಜಣ್ಣ ನಮ್ಮನ್ನು ಬಿಟ್ಟು ಗುಬ್ಬಿ ತಾಲ್ಲೂಕು ಸಿ.ಎಸ್.ಪುರದ ಹತ್ತಿರ ಕೂಲಿ ಕೆಲಸ ಮಾಡಿಕೊಂಡು ಇದ್ದರು, ಆಗಾಗ್ಗೆ ಒಂದು ಅಥವಾ ಎರಡು ತಿಂಗಳಿಗೊಮ್ಮೆ ಬಂದು ಯೋಗ ಕ್ಷೇಮ ವಿಚಾರ ಮಾಡಿಕೊಂಡು ಹೋಗುತ್ತಿದ್ದರು, ಆದರೆ ಯಾವುದೇ ದುಡ್ಡು, ವಗೈರೆ ಕೊಡುತ್ತಿರಲಿಲ್ಲಾ, ನಮ್ಮ ಯಜಮಾನರು ಮದುವೆಯಾದಗಿನಿಂದ ಮಧ್ಯವ್ಯಸನಿಯಾಗಿದ್ದರು, ಈಗಿರುವಾಗ್ಗೆ ಸಿ.ಎಸ್.ಪುರ ಗ್ರಾಮದ ರಾಮಲಿಂಗೇಗೌಡರವರು ದಿನಾಂಕ:15.03.2017 ರಂದು ಬೆಳಗ್ಗೆ 10.00 ಗಂಟೆಗೆ ನನ್ನ ಮಗಳಾದ ಜಯಶೀಲಾರವರ ಮೊಬೈಲ್ ನಂಬರ್ ಗೆ ಪೋನ್ ಮಾಡಿ ನಿಮ್ಮ ತಂದೆ ನಮ್ಮ ಮನೆಯಲ್ಲಿ ಕೆಲಸಮಾಡಿಕೊಂಡಿದ್ದು, ನಿಮ್ಮ ತಂದೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ ಎಂದು ತಿಳಿಸಿದರು, ಈ ವಿಷಯ ತಿಳಿದು ನಾನು & ನನ್ನ ಮೂರು ಮಕ್ಕಳೊಂದಿಗೆ ಮಧ್ಯಾಹ್ನ 12.30 ಕ್ಕೆ ಸಿ.ಎಸ್.ಪುರಕ್ಕೆ ಬಂದಿದ್ದು, ಸಿ.ಎಸ್.ಪುರ ಸರ್ಕಾರಿ ಆಸ್ಪತ್ರೆಯ ಹತ್ತಿರ ಹೋಗಿ ನೋಡಲಾಗಿ ನನ್ನ ಗಂಡನ ಮೃತದೇಹ ಇತ್ತು. ನನ್ನ ಗಂಡ 25 ವರ್ಷಗಳಿಂದಲೂ ನನ್ನನ್ನು & ನನ್ನ ಮಕ್ಕಳನ್ನು ನೋಡಿಕೊಳ್ಳದೇ, ತನ್ನ ಸಂಸಾರ ವಿಚಾರದಲ್ಲಿ ಬೇಜಾರುಮಾಡಿಕೊಂಡು ತನ್ಮೂಲಕ ತಾನೇ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ನನ್ನ ಗಂಡನ ಮರಣದ ಬಗ್ಗೆ ಯಾವುದೇ ಅನುಮಾನವಿರುವುದಿಲ್ಲಾ ಎಂಧು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಸಿ.ಎಸ್.ಪುರ ಠಾಣಾ ಯು.ಡಿ.ಆರ್ ನಂ:05/2017. ಕಲಂ: 174 ಸಿ.ಆರ್.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.
ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯ ಮೊ.ನಂ. 36/2017 ಕಲಂ : 379 ಐ.ಪಿ.ಸಿ.
ದಿನಾಂಕ: 15/03/2017 ರಂದು ಬೆಳಗ್ಗೆ 10-30 ಗಂಟೆಗೆ ಪಿರ್ಯಾದಿ ಸ್ವಾಮಿ.ಎಸ್. ಬಿನ್ ಆರ್.ಸಿದ್ದರಾಮಣ್ಣ, 41ವರ್ಷ, ಲಿಂಗಾಯಿತರು, ಬೆಳ್ಳಿಬೆಡಗು ಮನೆ, ಸಪ್ತಗಿರಿ ಬಡಾವಣೆ, ತುಮಕೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ತಿಪಟೂರು ಟೌನ್ ಹಾಸನ ರಸ್ತೆ ಜೆ.ಎಸ್.ಲೇಔಟ್ ನಲ್ಲಿ ವಾಸವಾಗಿರುವ ಪವತಿ ಡಿ.ಶಿವಣ್ಣಗೌಡರ ಮಗನಾದ ಕೆ.ಎಸ್.ಕೃಷ್ಣ ರವರಿಂದ ತಿಪಟೂರು ತಾಲ್ಲೋಕ್ ಕಸಬಾ ಹೋಬಳಿ ಕಂಚಾಘಟ್ಟ ಗ್ರಾಮದ (ಮಂಜುನಾಥನಗರ) ಸ.ನಂ. 165/1 ರ ಆಸ್ತಿಯನ್ನು ಅಭಿವೃದ್ದಿಪಡಿಸಿ ಭೂ-ಪರಿವರ್ತನೆ ಮಾಡಲು ಹಾಗೂ ಲೇ ಔಟ್ ನಿರ್ಮಿಸಲು ದಿ:12/12/2014ರಂದು ನಮ್ಮಿಬ್ಬರ ಮದ್ಯೆ ಒಡಂಬಡಕೆ ಆಗಿದ್ದು ಸದರಿ ಒಡಂಬಡಿಕೆಯಂತೆ ಮಾನ್ಯ ಜಿಲ್ಲಾದಿಕಾರಿಗಳು ತುಮಕೂರು ಮತ್ತು ನಗರ ಪ್ರಾಧಿಕಾರ ತಿಪಟೂರು ಇವರುಗಳಿಂದ ಅನುಮೋದನೆ ಪಡೆದುಕೊಂಡು ಭೂ–ಪರಿವರ್ತನೆ ಹಾಗೂ ಲೇಔಟ್ ನ್ನು ಅಭಿವೃದ್ದಿಪಡಿಸಿರುತ್ತೇನೆ. ಸುಮಾರು 20 ದಿನಗಳ ಹಿಂದೆ ಸದರಿ ಲೇಔಟ್ ನಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ ಎಲೆಕ್ಟ್ರಿಕ್ ಕಂಟ್ರಾಕ್ಟರ್ ಶಿವರಾಜು ಮತ್ತು ಅವರ ಸಹಾಯಕ ಗಣೇಶ್ ಮತ್ತು ಇತರೆ ಕೆಲಸಗಾರರ ಕಡೆಯಿಂದ ಲೇಔಟ್ ನಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿ ಈ ಕಂಬಗಳಿಗೆ ಅಲ್ಯೂಮಿನಿಯಂ ತಂತಿ/ವೈರ್ ನ್ನು ಅಳವಡಿಸಿದ್ದು ವಿದ್ಯುತ್ ಚಾರ್ಜ್ ಮಾಡಿಸಿರಲಿಲ್ಲ. ಹೀಗಿರುವಾಗ ದಿ:07/03/2017 ರಂದು ರಾತ್ರಿ ಯಾರೋ ಕಳ್ಳರು ನಮ್ಮ ಲೇಔಟ್ ನಲ್ಲಿ ಅಳವಡಿಸಿದ್ದ ವಿದ್ಯುತ್ ಸಂಪರ್ಕದ ಅಲ್ಯೂಮಿನಿಯಂ ತಂತಿ/ವೈರ್ ಗಳ ಪೈಕಿ ಕೆಲವು ವಿದ್ಯುತ್ ತಂತಿಗಳನ್ನು ಕತ್ತರಿಸಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಎಂಬ ವಿಚಾರವನ್ನು ಫೋನ್ ಮೂಲಕ ತಿಳಿದ ನಾನು ಸ್ಥಳಕ್ಕೆ ಬಂದು ನೋಡಲಾಗಿ ನಮ್ಮ ಲೇಔಟ್ ನಲ್ಲಿ ಅಳವಡಿಸಿದ್ದ ವಿದ್ಯುತ್ ಕಂಬದಲ್ಲಿನ ಕೆಲವು ಲೈನ್ ಗಳ ಅಲ್ಯೂಮಿನಿಯಂ ತಂತಿಗಳನ್ನು ಕತ್ತರಿಸಿ ಕಳ್ಳತನ ಮಾಡಿಕೊಂಡು ಹೋಗಿದ್ದು ಕೆಲವು ಲೈನ್ ಗಳನ್ನು ಹಾಗೆ ಬಿಟ್ಟಿರುತ್ತಾರೆ. ಕಳ್ಳತನವಾಗಿರುವ ಸದರಿ ವೈರ್ ನ ಮೌಲ್ಯವು ಸುಮಾರು ರೂ.1,00,000/- ಆಗಿರುತ್ತದೆ. ಸದರಿ ವಿಚಾರವಾಗಿ ನಾನು ಅಕ್ಕಪಕ್ಕದವರನ್ನು ಹಾಗೂ ನಮ್ಮ ಲೇಔಟ್ ನಲ್ಲಿ ವಿದ್ಯುತ್ ಸಂಪರ್ಕದ ಕೆಲಸ ಮಾಡಿದ್ದ ಕಂಟ್ರಾಕ್ಟರ್ ಮತ್ತು ಕಾರ್ಮಿಕರನ್ನು ವಿಚಾರಿಸಲಾಗಿ ಅವರು ಈ ವಿಚಾರದ ಬಗ್ಗೆ ನಮಗೇನು ತಿಳಿದಿಲ್ಲವೆಂದು ಹೇಳಿರುತ್ತಾರೆ. ಆದುದರಿಂದ ನಾನು ಮೇಲ್ಕಂಡವರನ್ನು ವಿಚಾರಿಸಿಕೊಂಡು ಈ ದಿವಸ ತಡವಾಗಿ ಬಂದು ದೂರು ನೀಡುತ್ತಿರುತ್ತೇನೆ. ನನ್ನ ಆಸ್ತಿಯಲ್ಲಿ ಕಳ್ಳತನ ಮಾಡಿರುವವರ ವಿರುದ್ದ ಕಾನೂನು ಕ್ರಮ ಕೈಗೊಂಡು ಹಾಗೂ ನನ್ನ ಸ್ವತ್ತನ್ನು ಹುಡುಕಿಕೊಟ್ಟು ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ದಾಖಲಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ
ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಯು.ಡಿ. ನಂ. 08/2017 ಕಲಂ 174 ಸಿಆರ್ಪಿಸಿ
ದಿನಾಂಕ:15/03/2017 ರಂದು ಬೆಳಿಗ್ಗೆ 10-45 ಗಂಟೆಗೆ ತುಮಕೂರು ತಾಲ್ಲೋಕ್ ಕೋರಾ ಹೋಬಳಿ ಜಕ್ಕೇನಹಳ್ಳಿ ಗ್ರಾಮದ ಸುಂಚಯ್ಯ ಬಿನ್ ಬೈರಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನನ್ನು ನಮ್ಮ ಚಿಕ್ಕಪ್ಪ ರಾಮಯ್ಯ ರವರು ತಮಗೆ ವಿವಾಹವಾಗದೇ ಇದ್ದುದರಿಂದ ಸುಮಾರು 5ವರ್ಷಗಳ ಹಿಂದೆ ದತ್ತುಪುತ್ರರಾಗಿ ಸ್ವೀಕರಿಸಿರುತ್ತಾರೆ. ನಮ್ಮ ಚಿಕ್ಕಪ್ಪ ರಾಮಯ್ಯ ರವರಿಗೆ ಆಗಾಗ್ಗೆ ಪೀಡ್ಸ್ ಮತ್ತು ಹೊಟ್ಟೆನೋವು ಬರುತ್ತಿದ್ದು ವೈದ್ಯರಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ಗುಣಮುಖವಾಗಿರಲಿಲ್ಲ. ಇದರಿಂದ ಮನನೊಂದ ಚಿಕ್ಕಪ್ಪ ರಾಮಯ್ಯ ರವರು ದಿ:08/03/17 ರಂದು ರಾತ್ರಿ ಯಾವುದೋ ವೇಳೆಯಲ್ಲಿ ಕ್ರಿಮಿನಾಶಕ ಔಷಧಿ ಸೇವಿಸಿದ್ದು ಚಿಕಿತ್ಸೆ ಬಗ್ಗೆ ದಿ:09/03/17 ರಂದು ಬೆಳಿಗ್ಗೆ ತುಮಕೂರು ಜಿಲ್ಲಾ ಅಸ್ಪತ್ರೆಗೆ ಸೇರಿಸಿ ಕೊಡಿಸುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 14/03/2017 ರಂದು ರಾತ್ರಿ 8-45 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ. ರಾಮಯ್ಯರವರು ಕ್ರಿಮಿನಾಶಕವನ್ನು ಸೇವನೆ ಮಾಡಿ ಮೃತಪಟ್ಟಿದ್ದು ಯಾವುದೇ ಅನುಮಾನ ಇರುವುದಿಲ್ಲ ಮುಂದಿನ ಕ್ರಮ ಜರುಗಿಸಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ
ತುರ್ತು ಸಹಾಯವಾಣಿ
![]() 100 |
![]() 0816-2278000 |
![]() 108 |
![]() 101 |
![]() 1912 |
![]() 1090 |
![]() 1091 |
![]() 1098 |
![]() 0816-2275451 |
![]() 0816-2274130 |
![]() 0816-2272480 |
![]() 0816-2278377 |
![]() 0816-2278473 |
![]() |
ವಿಪಿನ್ ರಾಯ್ ಪ್ರಜ್ವಲ್ ಗುಂಡಪ್ಪ ತಿಲಕ್ ನಂದೀಶ್ ಪಾಷ ಹೈದರ್
|