lowborn Crime Incidents 14-03-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

  ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 14-03-17

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-37/2017 ಕಲಂ: 363 ಐಪಿಸಿ.

ದಿನಾಂಕ: 13/03/2017 ರಂದು ಮಧ್ಯಾಹ್ನ 03-30 ಗಂಟೆಗೆ ಪಿರ್ಯಾದಿ ನಾಗರಾಜು ಬಿನ್ ಸತ್ಯನಾರಾಯಣ, ಹಳೇಪಾಳ್ಯ ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ ತಮ್ಮ ಗೋಪಾಲಕೃಷ್ಣನಿಗೆ ಗಿರೀಶ ಮತ್ತು ಹೇಮಂತ ಎಂಬ ಇಬ್ಬರು ಗಂಡು ಮಕ್ಕಳಿದ್ದು, ಅವರನ್ನು ತಂದೆ- ತಾಯಿ ಇಲ್ಲದ ಕಾರಣ ನಾವೇ ನೋಡಿಕೊಂಡು ವಿದ್ಯಾಭ್ಯಾಸ ಮಾಡಿಸುತ್ತಿದ್ದೆನು. ಗಿರೀಶನು ಪ್ರಥಮ ಪಿ.ಯು.ಸಿ ಓದುತ್ತಿದ್ದು, ಕಾಲೇಜಿನಲ್ಲಿ ಬುಕ್ ಕಳೆದು ಕೊಂಡು ಬಂದು, ನಾನು ಕಾಲೇಜಿಗೆ ಹೋಗುವುದಿಲ್ಲ ಎಂದು ಮನೆಯಲ್ಲಿ ಇದ್ದನು. ಆಗಾಗ್ಗೆ ನಾನು ಎಲ್ಲಿಯಾದರೂ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳುತ್ತಿದ್ದನು. ನಾನು ಈಗಲೇ ಬೇಡ ನೀನು ಕಾಲೇಜಿಗೆ ಹೋಗು ಎಂದು ಹೇಳುತ್ತಿದ್ದೆ. ಆದರೂ ಮನೆಯಲ್ಲಿಯೇ ಇದ್ದು, ದಿನಾಂಕ; 27/02/2017 ರಂದು ನಾನು ತಿಪಟೂರು ಟೌನ್ ಒಳಗೆ ಬಂದಾಗ ಬೆಳಿಗ್ಗೆ 11-30 ಗಂಟೆಯಲ್ಲಿ ಮನೆ ಬಿಟ್ಟು ಹೋಗಿರುತ್ತಾನೆ. ಒಂದೆರಡು ಬಾರಿ ಈಗೆ ಮನೆ ಬಿಟ್ಟು ಹೋಗಿ 15 ದಿನಗಳ ನಂತರ ಮನೆಗೆ ಬರುತ್ತಿದ್ದನು. ಆದರೆ ಈ ಬಾರಿ ಇದುವರೆವಿಗೂ ತನ್ನ ತಮ್ಮನ ಮಗ ಗಿರೀಶ್ ಮನೆ ಬಂದಿರುವುದಿಲ್ಲ. ಆತನೇ ಮನೆ ಬಿಟ್ಟು ಹೋಗಿರುತ್ತಾನೋ ಅಥವಾ ಯಾರೋ ಅಪಹರಿಸಿಕೊಂಡು ಹೋಗಿರಬಹುದೆಂದು ಅನುಮಾನವಿರುತ್ತೆ. ಆದ್ದರಿಂದ ಪತ್ತೆ ಮಾಡಿಕೊಡಬೇಕೆಂದು ಕೋರಿ ಈ ದಿನ ತಡವಾಗಿ ಬಂದು ದೂರು ನೀಡಿದ್ದು, ಪ್ರಕರಣ ದಾಖಲಿಸಿರುತ್ತೆ.

 

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.22/2017, ಕಲಂ:87 K.P.Act .

ದಿ:12/03/2017 ರಂದು ಮದ್ಯಾಹ್ನ ಠಾಣಾ ಪಿ.ಎಸ್.ಐ-ಹನುಮಂತರಾಯಪ್ಪ.ಹೆಚ್‌.ಜಿ. ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶವೇನೆಂದರೆ, ನನಗೆ ದಿನಾಂಕ:12/03/2017 ರಂದು ಮದ್ಯಾಹ್ನ 04:00 ಗಂಟೆಯಲ್ಲಿ ಠಾಣೆಯಲ್ಲಿರುವಾಗ್ಗೆ ಮಿಡಿಗೇಶಿ ಪೊಲೀಸ್ ಠಾಣಾ ಸರಹದ್ದು ಐ.ಡಿ.ಹಳ್ಳಿ ಹೋಬಳಿ, ಪುಲುಮಾಚಿ ಗ್ರಾಮದ ಕೆರೆ ಕೋಡಿಯಲ್ಲಿ ಹುಣಸೆ ಮರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎಂತ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಸಿಬ್ಬಂದಿಯೊಂದಿಗೆ ಪುಲುಮಾಚಿ ಗ್ರಾಮಕ್ಕೆ ಹೋಗಿ ಅಲ್ಲಿಂದ ಪಂಚಾಯ್ತುದಾರರನ್ನು ಜೊತೆಯಲ್ಲಿ ಕರೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಜನರು ಗುಂಡಾಕಾರವಾಗಿ ಕುಳಿತು ಒಳಗೆ-ಹೊರಗೆ ಎಂತ ಜೋರಾಗಿ ಹೇಳುತ್ತಾ ಅಂದರ್-ಬಾಹರ್ ಇಸ್ಪಿಟ್ ಜೂಜಾಟ ಆಡುತ್ತಿದ್ದುದ್ದನ್ನು ಖಚಿತಪಡಿಸಿಕೊಂಡು ಜೂಜಾಟವಾಡುತ್ತಿದ್ದ ಆಸಾಮಿಗಳ ಮೇಲೆ ಸಿಬ್ಬಂದಿಯೊಂದಿಗೆ ದಾಳಿಮಾಡಿ ಜೂಜಾಟದಲ್ಲಿ ತೊಡಗಿದ್ದ ಆಸಾಮಿಗಳನ್ನು ಹಿಡಿದುಕೊಂಡು ವಿಚಾರ ಮಾಡಿ ಹೆಸರು ವಿಳಾಸ ತಿಳಿಯಲಾಗಿ 1)ಹುಲ್ಲಪ್ಪ ಬಿನ್ ಲೇ||ತಿಪ್ಪೇನಾಗಪ್ಪ, 43 ವರ್ಷ, ಗೊಲ್ಲರು, ಜಿರಾಯ್ತಿ, ಪುಲುಮಾಚಿ ಗ್ರಾಮ, ಐ.ಡಿ.ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೋಕು, 2)ಶಿವಲಿಂಗಯ್ಯ ಬಿನ್ ಲಿಂಗಪ್ಪ, 30 ವರ್ಷ, ಎ.ಕೆ.ಜನಾಂಗ, ಕೂಲಿ ಕೆಲಸ, ಗರಣಿ ಗ್ರಾಮ, ಐ.ಡಿ.ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೋಕು, 3)ಶ್ರೀರಾಮ್ ಬಿನ್ ಲೇ||ರಾಮಪ್ಪ, 22 ವರ್ಷ, ಭೋವಿ ಜನಾಂಗ, ಗಾರೆಕೆಲಸ, ಕ್ಯಾಂಪುರ ಗ್ರಾಮ, ಮಡಕಶಿರಾ ಮಂಡಲ್, ಮಡಕಶಿರಾ ತಾಲ್ಲೋಕು, 4)ಈರಣ್ಣ ಬಿನ್ ಲೇ||ನರಸಿಂಹಪ್ಪ, 32 ವರ್ಷ, ಗೊಲ್ಲರು, ಜಿರಾಯ್ತಿ, ಪುಲುಮಾಚಿ ಗ್ರಾಮ, ಐ.ಡಿ.ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೋಕು, 5)ನರಸಿಂಹಯ್ಯ ಬಿನ್ ಈರಣ್ಣ, 68 ವರ್ಷ, ಗೊಲ್ಲರು, ಜಿರಾಯ್ತಿ, ಶ್ರೀನಿವಾಸಪುರ ಗ್ರಾಮ, ಐ.ಡಿ.ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೋಕು, 6)ರಂಗಧಾಮಪ್ಪ ಬಿನ್ ಲೇ||ನೆರೆಯಣ್ಣ, 50 ವರ್ಷ, ವ್ಯವಸಾಯ, ಪುಲುಮಾಚಿ ಗ್ರಾಮ, ಐ.ಡಿ.ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೋಕು, 7)ಹನುಮಂತರಾಯಪ್ಪ ಬಿನ್ ಲೇ||ಗಂಗಪ್ಪ, 36 ವರ್ಷ, ಬುಡಬುಡಿಕೆ ಜನಾಂಗ, ಕೂಲಿ ಕೆಲಸ, ಗರಣಿ ಗ್ರಾಮ, ಐ.ಡಿ.ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೋಕು, 8)ನಾಗರಾಜಪ್ಪ ಬಿನ್ ಲೇ||ಗೋವಿಂದಪ್ಪ, 58 ವರ್ಷ, ವಕ್ಕಲಿಗರು, ಜಿರಾಯ್ತಿ, ಪುಲುಮಾಚಿ ಗ್ರಾಮ, ಐ.ಡಿ.ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೋಕು ಎಂತ ತಿಳಿಸಿರುತ್ತಾರೆ. ನಂತರ ಅಖಾಡದಲ್ಲಿ ಜೂಜಾಟಕ್ಕೆ ಪಣವಾಗಿ ಕಟ್ಟಿಕೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 1)1650/-ರೂ ನಗದು ಹಣ,  2)52 ಇಸ್ಪೀಟ್ ಎಲೆಗಳು, 3)ಎರಡು ಹಳೆಯ ನ್ಯೂಸ್ ಪೇಪರ್ ಇವುಗಳನ್ನು ಪಂಚರ ಸಮಕ್ಷಮ ಸಂಜೆ 05:30 ಗಂಟೆಯಿಂದ 06:30 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ವಶಕ್ಕೆ ತೆಗೆದುಕೊಂಡು ಪ್ರಕರಣ  ದಾಖಲಿಸರುತ್ತೆ,

ಸಿ.ಎಸ್.ಪುರ ಠಾಣಾ ಯು.ಡಿ.ಆರ್ ನಂ:04/2017. ಕಲಂ:174 ಸಿ.ಆರ್.ಪಿ,.ಸಿ

ದಿನಾಂಕ:13.03.2017 ರಂದು ಪಿರ್ಯಾದುದಾರರಾದ ಎಸ್. ಸವಿತಾ ಕೊಂ  ಮೂರ್ತಿ @ ಮೋಹನ ಮೂರ್ತಿ, 29 ವರ್ಷ, ಕುರುಬ ಜನಾಂಗ, ಬೇಲೂರು ಮಜರೆ, ಹೊಸಪಾಳ್ಯ, ಕಡಬಾ ಹೋಬಳಿ, ಗುಬ್ಬಿ ತಾಲ್ಲೂಕು ರವರು  ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಶವೆಂದರೆ, ನನಗೆ ಈಗ್ಗೆ 8 ವರ್ಷಗಳಿಂದೆ  ಬೇಲೂರು ಹೊಸಪಾಳ್ಯ ಗ್ರಾಮದ ಯಲ್ಲಪ್ಪನ ಮಗನಾದ ಮೂರ್ತಿ @ ಮೋಹನ್ ಮೂರ್ತಿರವರ ಜೊತೆ ವಿವಾಹವಾಗಿದ್ದು, 6 ವರ್ಷದ ಭವ್ಯ ಹಾಗೂ 3 ವರ್ಷದ ಚಂದನ್ ಎಂಬ ಎರಡು ಮಕ್ಕಳಿರುತ್ತಾರೆ. ನಾವು ಈಗ್ಗೆ 6 ತಿಂಗಳ ಹಿಂದೆ ಗುಬ್ಬಿಯ ಗ್ರಾಮಶಕ್ತಿ ಸಂಘದಲ್ಲಿ  50 ಸಾವಿರ  ರೂಗಳನ್ನು  ಸೀಮೆ ಹಸು  ತೆಗೆದುಕೊಳ್ಳಲು ಸಾಲವನ್ನು  ತೆಗೆದುಕೊಂಡಿದ್ದು, ಸಾಲವ್ನನು ತೀರಿಸಲು ಸಾದ್ಯವಾಗದೇ ಈ ಬಗ್ಗೆ ಯೋಚನೆ ಮಾಡುತಿದ್ದು, ದಿನಾಂಕ:12.03.2017 ರಂದು  ಹೇಮಾವತಿ ನೀರು ಶುದ್ದೀಕರಣ ಘಟಕದ ಬಳಿ ಕೆಲಸಕ್ಕೆ ಹೋಗಿದ್ದು, ಸಂಜೆ 4 ಗಂಟೆಗೆ ಪೋನ್ ನಲ್ಲಿ ನನ್ನ  ಜೊತೆ  ಮಾತನಾಡಿದ್ದು, ರಾತ್ರಿ ಶಿಫ್ಟ್ ಇದ್ದುದರಿಂದ ರಾತ್ರಿ ಅಲ್ಲಿಯೇ ತಂಗಿದ್ದು, ದಿನಾಂಕ:13.03.2017 ರಂದು  ಬೆಳಗ್ಗೆ ಹೇಮಾವತಿ ಶುದ್ದೀಕರಣ  ಘಟಕದಲ್ಲಿ ಕೆಲಸ ಮಾಡುತ್ತಿರುವ ಸುರೇಶ್  ಎಂಬುವರು ಶುದ್ದೀಕರಣ ಘಟಕದ ಬಳಿ  ಬಂದು ವಸತಿ ಗೃಹದ ಬಾಗಿಲು ತಟ್ಟಿದ್ದು, ಬಾಗಿಲು ತೆಗೆದಯದೇ ಇದ್ದುದರಿಂದ  ಮತ್ತೊಬ್ಬ ಶುದ್ದೀಕರಣ  ಘಟಕದಲ್ಲಿ ಕೆಲಸ ಮಾಡುತ್ತಿರುವ ಅಶ್ವಥ್ ಎಂಬುವರಿಗೆ ಪೋನ್ ಮಾಡಿ  ತಿಳಿಸಿದ್ದು, ಅಶ್ವಥ್ ರವರು  ನಮ್ಮ ಮನೆಗೆ ಪೋನ್ ಮಾಡಿ ಶುದ್ದೀಕರಣ  ಘಟಕದ ಬಳಿ ಬರುವಂತೆ ತಿಳಿಸಿದ್ದಿದರಿಂದ , ನಾನು & ನನ್ನ ನಾದಿನಿ ಗಂಡನಾದ ಚಿತ್ರಲಿಂಗಯ್ಯ ಇಬ್ಬರು  ನೀರು ಶುದ್ದೀಕರಣ ಘಟಕದ ಬಳಿ ಬಂದು ನೋಡಲಾಗಿ ವಸತಿ ಗೃಹದ ಬಾಗಿಲು ಹಾಕಿದ್ದು, ನಾವುಗಳು ಬೆಳಗ್ಗೆ 8.30 ಗಂಟೆ ಸಮಯದಲ್ಲಿ ಬಾಗಿಲು ತೆಗೆಸಲು ಎಷ್ಟೆ ಪ್ರಯತ್ನ ಪಟ್ಟರೂ  ಸಹ ಬಾಗಿಲು ತೆಗೆಯದೇ ಇದ್ದುದರಿಂದ ,ಚಿತ್ರಲಿಂಗಯ್ಯರವರು ಬಾಗಿಲನ್ನು  ಕಾಲಿನಿಂದ ಒದ್ದು, ಬಾಗಿಲನ್ನು ತೆಗೆದು ಒಳಗೆ ನೋಡಲಾಗಿ ವಸತಿ ಗೃಹದ ಹಾಲ್ ನಲ್ಲಿ ಇದ್ದಂತಹ ಫ್ಯಾನ್ ಗೆ ನನ್ನ  ಗಂಡನು ಹಗ್ಗವನ್ನು ಕಟ್ಟಿ, ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಾ ಮೃತಪಟ್ಟಿರುತ್ತಾರೆ, ನನ್ನ ಗಂಡನಾದ ಮೂರ್ತಿಯು  ನಾವು ಮಾಡಿದಂತಹ ಸಾಲವನ್ನು  ತೀರಿಸಲಾಗದೇ ನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ , ಈ ಬಗ್ಗೆ ಯಾರ ಮೇಲೂ ಅನುಮಾನವಿರುವುದಿಲ್ಲಾ. ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿರುತ್ತೆ

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 77 guests online
Content View Hits : 287589