lowborn Crime Incidents 12-03-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 12-03-17

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ ನಂ. 60/2017 ಕಲಂ 324, 504, 506 r/w 34 ಐಪಿಸಿ

ದಿನಾಂಕ:11/03/2017 ರಂದು ರಾತ್ರಿ 11-20 ಗಂಟೆ ಸಮಯದಲ್ಲಿ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ತುಮಕೂರು ತಾಲ್ಲೋಕ್ ಕಸಬಾ ಹೋಬಳಿ, ಹೆಗ್ಗೆರೆ ಗ್ರಾಮದ ಆದಿಕರ್ನಾಟಕ ಜನಾಂಗದ ಶ್ರೀನಿವಾಸಮೂರ್ತಿ.ಹೆಚ್.ಎನ್ ಬಿನ್ ಲೇಟ್ ನರಸಿಂಹಯ್ಯ ರವರು ನೀಡಿದ ಹೇಳಿಕೆಯ ಅಂಶವೇನೆಂದರೆ, ದಿನಾಂಕ:11/03/2017 ರಂದು ಸಂಜೆ ಸುಮಾರು 7-00 ಗಂಟೆಯಿಂದ 7-30 ಗಂಟೆಯ ಸಮಯದಲ್ಲಿ ನಾನು ಮತ್ತು ನನ್ನ ಹೆಂಡತಿ ಗೌರಮ್ಮ ಹಾಗೂ ಮಕ್ಕಳೊಂದಿಗೆ ದೇವಸ್ಥಾನಕ್ಕೆ ಹೋಗಲು ಸಿದ್ದವಾಗುತ್ತಿರುವಾಗ್ಗೆ ನನ್ನ ಅಣ್ಣ ನರಸಿಂಹರಾಜು ಹೆಚ್.ಎನ್ ಮತ್ತು ಆತನ ಹೆಂಡತಿ ಮಂಜುಳಾ ರವರು ಏಕಾಏಕಿ ನಮ್ಮ ಮನೆಯ ಬಳಿ ಬಂದು ನನ್ನ ಹೆಂಡತಿ ಗೌರಮ್ಮ ರವರಿಗೆ ಅವಾಚ್ಯ ಶಬ್ದಗಳಿಂದ ಏನೇ ಸೂಳೆ ಮುಂಡೆ ನಮ್ಮ ವಿಚಾರವಾಗಿ ಏನೇನೋ ಮಾತನಾಡಿಕೊಳ್ಳುತ್ತೀದ್ದೀಯಾ? ಎಂತಾ ಬೈಯ್ಯುತ್ತಿದ್ದು ಇದನ್ನು ಕೇಳಿಸಿಕೊಂಡ ನಾನು ಯಾಕಪ್ಪಾ ಹೀಗೆಲ್ಲಾ ಬೈಯ್ಯುತ್ತಿರುವೆ ಎಂತಾ ಕೇಳಿದಾಗ ನನ್ನನ್ನು ಅವಾಚ್ಯ ಶಬ್ದಗಳಿಂದ ಬೋಳಿ ಮಗನೇ ಎಂತಾ ಬೈದರು. ಆದರೂ ಸಹ ದೇವಾಲಯಕ್ಕೆ ಹೋಗುವವರನ್ನು ಗಲಾಟೆ ಮಾಡುತ್ತೀರಾ ಎಂದು ಕೇಳಲು ನನ್ನ ಪತ್ನಿಗೆ ಬಲಗೈಯ ಮೊಣಕೈಗೆ ಮಚ್ಚಿನಿಂದ ನರಸಿಂಹರಾಜು ಹೊಡೆದನು ಅಗ ನಾನು ನನ್ನ ಹೆಂಡತಿಯನ್ನು ರಕ್ಷಿಸಲು ಹೋದಾಗ ಆತನ ಹೆಂಡತಿ ಮಂಜುಳಾ ರವರು ತನ್ನ ಜೊತೆಯಲ್ಲಿ ತಂದಿದ್ದ ಚಾಕುವಿನಿಂದ ನನ್ನ ಬಲಕೆನ್ನೆಗೆ ಕುಯ್ದು ರಕ್ತಗಾಯ ಪಡಿಸಿದಳು. ಅಷ್ಟರಲ್ಲಿ ನಮ್ಮ ಗ್ರಾಮದ ರವಿ ಬಿನ್ ಸಿದ್ದಪ್ಪ ಮತ್ತು ನರಸಿಂಹಮೂರ್ತಿ ಬಿನ್ ರಂಗಯ್ಯ ರವರು ಗಲಾಟೆಯನ್ನು ಬಿಡಿಸಿ ಅಸ್ಪತ್ರೆಗೆ ಆಟೋದಲ್ಲಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿರುತ್ತಾರೆ. ನಾವು ಈಗ ಚಿಕಿತ್ಸೆ ಪಡೆಯುತ್ತಿದ್ದು ವಿನಾಕಾರಣ ನಮ್ಮ ಮನೆಯ ಹತ್ತಿರ ಬಂದು ನನ್ನ ಹೆಂಡತಿಗೆ ನರಸಿಂಹರಾಜು ಹೊಡೆದಿದ್ದು ಹಾಗೂ ಆತನ ಹೆಂಡತಿ ಮಂಜುಳಾ ರವರು ಚಾಕುವಿನಿಂದ ನನ್ನ ಕೆನ್ನೆಗೆ ಕುಯ್ದು ಗಲಾಟೆ ಮಾಡಿರುವ ಹಾಗೂ ಕೊಲೆ ಬೆದರಿಕೆ ಹಾಕಿರುವ ಇವರುಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ವೈದ್ಯರ ಸಮಕ್ಷಮ ನೀಡಿದ ಹೇಳಿಕೆಯನ್ನು ಪಡೆದು ವಾಪಸ್ ಠಾಣೆಗೆ ರಾತ್ರಿ 11-45 ಗಂಟೆಗೆ ಬಂದು ಪ್ರಕರಣ ದಾಖಲಿಸಿದೆ.

ಹೊಸಬಡಾವಣೆ ಪೊಲೀಸ್ ಠಾಣಾ ಮೊ.ಸಂ 25/2017 u/s 323, 324, 504, 506 R/W 34 IPC

ದಿನಾಂಕ : 11-03-2017 ರಂದು ರಾತ್ರಿ 10-15 ಗಂಟೆಗೆ ಪಿರ್ಯಾದಿ ಎನ್.ಆರ್ ಜಗದೀಶ್ ಬಿನ್ ರಂಗಯ್ಯ, 50 ವರ್ಷ, ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಕೀಲರು, ವಾಸ ಶಾಂತಿನಗರ, ತುಮಕೂರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯು ಈ ದಿವಸ ಕೆಲಸ ಮುಗಿಸಿಕೊಂಡು ರಾತ್ರಿ ಸುಮಾರು 8-30 ಗಂಟೆ ಸಮಯದಲ್ಲಿ ರೈಲ್ವೇ ಸ್ಟೇಷನ್ ರಸ್ತೆಯ ಪ್ರವಾಸಿ ಮಂದಿರದ ಮುಂದೆ ನಡೆದುಕೊಂಡು ಹೋಗುತ್ತಿರುವಾಗ್ಗೆ ಅಡುಗೆ ಸಹಾಯಕನಾದ ಮಾರನರಸಯ್ಯ ಹಾಗೂ ಅವರ ಮಗ ಜೊತೆಗೆ ಇನ್ನಿಬ್ಬರನ್ನು ಜೊತೆಯಲ್ಲಿ ಕರೆದುಕೊಂಡು ಪಿರ್ಯಾದಿ ಬಳಿ ಬಂದು ಏಕಾಏಕಿ ಜಗಳ ತೆಗೆದು ಲೋಫರ್ ನನ್ನ ಮಗನೇ, ಬೋಳಿಮಗನೇ ನನ್ನ ಅಳಿಯನ ಬಗ್ಗೆ ಅವರ ಮಾವಂದಿರ ಬಳಿ ಏನೋ ಹೇಳಿದ್ದೀಯಾ ಎಂದು ಜಗಳ ತೆಗೆದು ಎರಡು ಕೆನ್ನೆಗಳಿಗೆ ಬಲವಾಗಿ ಹೊಡೆದು ಕೈಗಳಿಂದ ಮೈಕೈಗೆ ಹೊಡೆದು ನೋವುಂಟು ಮಾಡಿದ್ದಲ್ಲದೆ ಮಾರನರಸಯ್ಯ ರವರು ಪಿರ್ಯಾದಿ ಮರ್ಮಾಂಗಕ್ಕೆ ಕಾಲಿನಿಂದ ಹೊಡೆದು ನೋವುಂಟು ಮಾಡಿದ್ದು  ನೀನು ಏನಾದರೂ ಅಳಿಯನ ಬಗ್ಗೆ ಮಾತನಾಡಿದರೆ ಜೀವ ಸಹಿತ ಉಳಿಸುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾರೆ ಈ ಬಗ್ಗೆ ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ

 

ಹೊನ್ನವಳ್ಳಿ ಪೊಲೀಸ್ ಠಾಣೆ ಮೊ,ನಂ-29/2017 ಕಲಂ-279 337 ಐಪಿಸಿ

ದಿನಾಂಕ-11/03/2017 ರಂದು ರಾತ್ರಿ 08-15 ಗಂಟೆಗೆ ಪಿರ್ಯಾದುದಾರರಾದ ಶ್ರೀಮತಿ ಜ್ಯೋತಿ ಕೊಂ ಬಿಬಿ ಶೇಖರ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ಪಿರ್ಯಾದುದಾರರು ದಿನಾಂಕ-08/03/2017 ರಂದು ತನ್ನ ಗಂಡ ಬಿಬಿ ಶೇಖರನ ಜೊತೆ ಕೆಎ 06 ಎಕ್ಸ್ 8354 ನೇ ಬೈಕಿನಲ್ಲಿ ಕುಳಿತುಕೊಂಡು ಊರಿನಿಂದ ಹೊಸಪಟ್ನ ಜಾತ್ರೆಗೆ ಬರಲು ಹೊನ್ನವಳ್ಳಿಗೆ ಬಂದಿದ್ದು ಹೊನ್ನವಳ್ಳಿಯಿಂದ ಪೆಟ್ರೋಲ್ ಬಂಕ್‌ಗೆ ಪಿರ್ಯಾದು ದಾರರು ಸಂಜೆ 04-00 ಗಂಟೆ ಸುಮಾರಿನಲ್ಲಿ ಹೊನ್ನವಳ್ಳಿ ಬಸ್ ನಿಲ್ದಾಣದ ಬಳಿ ರಸ್ತೆಯ ಎಡಬದಿಯಲ್ಲಿ ಹೋಗುವಾಗ ಇವರ ಎದುರಿಗೆ ಹೊಸ ಬಿಳಿ ಬಣ್ಣದ ಅಪಾಚಿ ಬೈಕನ್ನು ಅದರ ಚಾಲಕನಾದ ರಮೇಶ ಬಿನ್ ಕೆಂಚಪ್ಪನವರು ಹಿಂಬದಿಯಲ್ಲಿ ಚಂದ್ರಶೇಖರ ಬಿನ್ ಸಿದ್ದೇಗೌಡರವರನ್ನು ಕೂರಿಸಿಕೊಂಡು ಅತೀಜೋರಾಗಿ ಮತ್ತು ನಿರ್ಲಕ್ಷತೆಯಿಂದ ಓಡಿಸಿಕೊಂಡು ಬಂದು ಪಿರ್ಯಾದಿಯ ಬೈಕಿಗೆ ಗುದ್ದಿಸಿದ ಪರಿಣಾಮ ಇಬ್ಬರುಗಳು ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದಾಗ ಶೇಖರ್ ರವರ ಬಲಗಾಲಿಗೆ ಬಲವಾದ ಪೆಟ್ಟು ಬಿದ್ದು ಮೂಳೆ ಮುರಿದಿದ್ದು ಮತ್ತು ಚಂದ್ರಶೇಖರ್ ರವರ ಬಲಭುಜ ಮತ್ತು ಬಲಪಾದಕ್ಕೆ ಪೆಟ್ಟು ಬಿದ್ದಿದ್ದು ಈ ಇಬ್ಬರು ಗಾಯಾಳುಗಳನ್ನು ಕೆರೆಬಂಡಿಪಾಳ್ಯದ ಚಂದ್ರಶೇಖರ್ ರವರು 108 ವಾಹನದಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು ಪಿರ್ಯಾದು ದಾರರು ತನ್ನ ಗಂಡನನ್ನು ಹೇಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಪರೇಷನ್ ಮಾಡಿಸಿ ತಡವಾಗಿ ಠಾಣೆಗೆ ಬಂದು ಅಪಾಚಿ ಹೊಸ ಬೈಕ್‌ನ ಚಾಲಕ ರಮೇಶನ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಪಡೆದು ಠಾಣಾ ಮೊ,ನಂ-29/2017 ಕಲಂ-279 337 ಐಪಿಸಿ ರಿತ್ಯಾ ಪ್ರಕರಣ ದಾಖಲಿಸಿರುತ್ತೇನೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-35/2017 ಕಲಂ: 279 ಐ.ಪಿ.ಸಿ

ದಿನಾಂಕ:11-03-2017 ರಂದು ಸಂಜೆ 6-30 ಗಂಟೆಗೆ ಪಿರ್ಯಾಧಿ ಆರ್ ದೇವರಾಜು ಬಿನ್ ರಾಮಲಿಂಗಯ್ಯ, 48 ವರ್ಷ, ಲಿಂಗಾಯಿತರು, ಟ್ರಾಕ್ಟರ್ ಚಾಲಕ, ಬೊಮ್ಮೇನಹಳ್ಳಿ, ಕಸಬಾ ಹೋಬಳಿ, ತಿಪಟೂರು ತಾಲ್ಲೋಕ್ ರವರು ನೀಡಿದ ದೂರಿನ ಅಂಶವೇನೆಂದರೆ ದಿನಾಂಕ:11-03-2017 ರಂದು ತನ್ನ ತಂಗಿಯ  ಟ್ರಾಕ್ಟರ್ ನಂ- ಕೆ.ಎ-18 ಟಿ-2206 ನೇ ವಾಹನಕ್ಕೆ ಡೀಸಲ್ ಹಾಕಿಸಿಕೊಂಡು ಬರಲು ತಿಪಟೂರಿನ ವಿಜಯಲಕ್ಷ್ಮೀ ಪೆಟ್ರೋಲ್ ಬಂಕ್ ಮುಂಭಾಗ ಎನ್ ಹೆಚ್ 206 ರಸ್ತೆಯಲ್ಲಿ ಗಣೇಶ ಥೀಯೇಟರ್ ಬಳಿ ರಸ್ತೆ ಡಿವೈಡರ್ ಬಳಿ ವಾಹನವನ್ನು ಬಲಕ್ಕೆ ತಿರುಗಿಸುತ್ತಿದ್ದಾಗ ತುಮಕೂರು ಕಡೆಯಿಂದ ಕೆ ಎ 06 ಡಿ 4139 ನೇ ಕಾರಿನ ಚಾಲಕ ವೇಗವಾಗಿ ಕಾರನ್ನು ಓಡಿಸಿಕೊಂಡು ಬಂದು ಟ್ರಾಕ್ಟರ್ ಹಿಂಭಾಗದ ಟ್ಯಾಂಕರ್ ಗೆ ಢಿಕ್ಕಿ ಹೊಡೆಸಿದ್ದರಿಂದ ಕಾರಿನ ಮುಂಭಾಗ ಜಖಂ ಅಗಿರುತ್ತದೆ. ಬೇರೆ ಯಾರಿಗೂ ಗಾಯಗಳಾಗಿರುವುದಿಲ್ಲ. ಕಾರಿನ ಚಾಲಕ ಕುಮಾರಸ್ವಾಮಿ ರವರ ಮೇಲೆ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ. 35/2017 ಕಲಂ 323, 324, 504, ರೆ/ವಿ 34 ಐಪಿಸಿ.

ದಿನಾಂಕ: 11/03/2017 ರಂದು ಮದ್ಯಾಹ್ನ 2-45   ಗಂಟೆಗೆ ಪಿರ್ಯಾದಿ ಕುಮಾರ್ ಬಿನ್ ಬಸವರಾಜು, ತಡಸೂರು, ಕಸಬಾ ಹೋಬಳಿ, ತಿಪಟೂರು ತಾಲ್ಲೋಕ್  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು  ದಿ:10/03/2017 ರಂದು ಆಟೋ ಡ್ರೈವಿಂಗ್ ಕೆಲಸ ಮುಗಿಸಿಕೊಂಡು ರಾತ್ರಿ 8-00 ಗಂಟೆಗೆ ಮನೆಗೆ ಹೋಗಿದ್ದಾಗ ನಮ್ಮ ಮನೆಯ ಪಕ್ಕದ ಅಣ್ಣನ ಹೆಂಡತಿಯಾದ ಹೇಮಲತ ರವರ ಮನೆಗೆ ಯಾವುದೋ ಆಟೋರಿಕ್ಷಾಗಳು ಬಂದು ಹೋಗುತ್ತಿದ್ದವು. ಆಗ ನಮ್ಮ ಸಂಬಂದಿಕರು ನಮ್ಮ ಅತ್ತಿಗೆ ಬಗ್ಗೆ ಇಲ್ಲಸಲ್ಲದ ಅನೈತಿಕ ಸಂಬಂದಗಳ ವಿಚಾರಗಳ ಸಂಬಂದವಾಗಿ ಮಾತನಾಡಿಕೊಳ್ಳುತ್ತಿದ್ದರು. ಈ ದಿನವು ಸಹ ಮಾದೇಶ ಎಂಬುವನು ಬಂದು ಅತ್ತಿಗೆ ಮನೆಯಲ್ಲಿ ಗಲಾಟೆ ಮಾಡುತ್ತಿದ್ದನು. ಆದ್ದರಿಂದ ಅಲ್ಲಿಗೆ ನಾನು ಹೋಗಿ ವಿಚಾರ ಮಾಡಿದ್ದರಿಂದ  ನೀನು ಯಾರು ಕೇಳುವುದಕ್ಕೆ ಎಂದು  ಅವಾಚ್ಯ ಶಬ್ದದಿಂದ ಬೈಯ್ಯುತ್ತ  ಮಾದೇಶ ಎಂಬುವರು ದೊಣ್ಣೆಯಿಂದ ನನ್ನ ಭುಜಕ್ಕೆ ಅಣೆ ಬೆನ್ನಿಗೆ  ಎರಡು ಕೈ ತೊಡೆಗಳಿಗೆ ಹೊಡೆಯುತ್ತಿದ್ದಾಗ ಆ ಸಮಯಕ್ಕೆ ನಮ್ಮ ತಾಯಿಯಾದ ಶಿವಗಂಗಮ್ಮ  ನನ್ನ ಹೆಂಡತಿ ಕೋಮಲ ಬಿಡಿಸುವುದಕ್ಕೆ ಬಂದಾಗ ಹೇಮಲತಾ ಉಮಾದೇವಿ ರಮೇಶ, ಎಂಬುವರು ದೊಣ್ಣೆಯಿಂದ ಬೆನ್ನಿಗೆ  ಎರಡೂ ಕೈಗಳಿಗೆ ಹೊಡೆದರು ನನ್ನ ಹೆಂಡತಿಗೆ ಮಾದೇಶ ಹೇಮಲತಾ ಎಲ್ಲ ಸೇರಿ ಬೆನ್ನಿಗೆ ಎರಡು ಕೈಗಳಿಂದ  ದೊಣ್ಣೆಯಿಂದ ಕುಡುಗೋಲಿನಿಂದ ಹೊಡೆಯುತ್ತಿದ್ದಾಗ ನಮ್ಮ ಊರಿನ ಕುಮಾರ ಬಿನ್ ಶಿವಲಿಂಗಯ್ಯ ರವರು ಬಂದು ಜಗಳ ಬಿಡಿಸಿ ತಿಪಟೂರು ಜನರಲ್ ಆಸ್ಪತ್ರೆಗೆ ಬಂದು ಜಗಳ ಬಿಡಿಸಿ ತಿಪಟೂರು ಜನರಲ್ ಆಸ್ಪತ್ರೆಗೆ ಟಾಟಾ ಎಸಿ ವಾಹನದಲ್ಲಿ  ಕರೆತಂದು ಹೊರರೋಗಿಯಾಗಿ ಚಿಕಿತ್ಸೆ ಪಡೆದು  ಈ ದಿನ ತಡವಾಗಿ ಬಂದು ದೂರು ಅರ್ಜಿ ನೀಡಿದ್ದು ಸದರಿಯವರ ಮೇಲೆ  ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 67 guests online
Content View Hits : 274861