lowborn Crime Incidents 11-03-17 | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ಜಯನಗರ ಪೊಲೀಸ್ ಠಾಣಾ ಮೊ.ನಂ. 156/2017 ಕಲಂ 20 (ಬಿ) ಎನ್‌.ಡಿ.ಪಿ.ಎಸ್ ಆಕ್ಟ್‌ ದಿನಾಂಕ: 25-11-2017 ರಂದು... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >> NEW BEAT BEST STAFF AND BEST CRIME DETECTION STAFF >> ಶಿರಾ ಗೇಟ್ ರಸ್ತೆಯ ಆಗಲೀಕರಣ ಹಿನ್ನಲೆ ಸಂಚಾರ ಮಾರ್ಗದಲ್ಲಿ ಬದಲಾವಣೆ. >> ಪತ್ರಿಕಾ ಪ್ರಕಟಣೆ ದಿನಾಂಕ:19-11-2017. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ:17-11-2017. ಮೂರು ಜನ ಅಂತರ ರಾಜ್ಯ ಕಳ್ಳರ ಬಂಧನ : 8 ಲಕ್ಷದ 50 ಸಾವಿರ... >> ದಿನಾಂಕ.17.11.2017. ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಪೊಲೀಸ್... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 11-03-17

ಸಂಚಾರಿ ಪೊಲೀಸ್ ಠಾಣಾ ಮೊ.ನಂ: 44/2017 ಕಲಂ 279,304() ಐಪಿಸಿ &  134(&ಬಿ) 187 ಐಎಂವಿ ಆಕ್ಟ್.

ದಿನಾಂಕ 10.03.2017 ರಂದು  ಮದ್ಯಾಹ್ನ 12-30  ಗಂಟೆಗೆ ಪಿರ್ಯಾದಿ ಉಮೇಶಯ್ಯ, ಸಿಹೆಚ್.ಸಿ. 282, ತುಮಕೂರು ನಗರ ಪೊಲೀಸ್ ಠಾಣೆ ಇವರು    ಜಿಲ್ಲಾ ಆಸ್ಪತ್ರೆಯಲ್ಲಿ ಹಾಜರುಪಡಿಸಿದ ಡೆತ್ ಮೆಮೋ & ವರಧಿ ಅಂಶವೇನೆಂದರೆ  ದಿನಾಂಕ 14.02.2017 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಅಂತರಸನಹಳ್ಳಿ ಬೈಪಾಸ್ ಸಮೀಪ ಎನ್.ಹೆಚ್.48 ರಸ್ತೆಯಲ್ಲಿ ಯಾವೊದೋ ವಾಹನದ ಚಾಲಕ ವಾಹವನ್ನು ಅತಿವೇಗ & ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ  ಸುಮಾರು 25 ವರ್ಷದ ಅಪರಿಚಿತ ಬಿಕ್ಷುಕ ಮಹಿಳೆಗೆ  ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದರಿಂದ    ಅಪರಿಚಿತ ಮಹಿಳೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ದಿನಾಂಕ 10.03.2017 ರಂದು ಬೆಳಿಗ್ಗೆ 7-05 ಗಂಟೆ ಸಮಯದಲ್ಲಿ   ಮೃತಪಟ್ಟಿರುತ್ತಾರೆಂತ  ಪಿರ್ಯಾದು.

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್ ನಂ:03/2017 ಕಲಂ 174 ಸಿ ಆರ್ ಪಿ ಸಿ .

ದಿನಾಂಕ:10/03/2017 ರಂದು ಬೆಳಿಗ್ಗೆ 08:30 ಗಂಟೆಗೆ ಸಿರಾ ತಾಲ್ಲೂಕ್ ಕಾಡಜ್ಜನ ಪಾಳ್ಯ ಗ್ರಾಮದ ವಾಸಿ ಅಣ್ಣಪ್ಪ ಬಿನ್ ಜಯರಾಮಯ್ಯರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ಪಿರ್ಯಾದಿರವರ ತಂಗಿ ಅನ್ನಪೂರ್ಣಮ್ಮರವರನ್ನು ಈಗ್ಗೆ ಸುಮಾರು 17ವರ್ಷಗಳ ಹಿಂದೆ ಹೆಂದೊರೆ ಗ್ರಾಮದ ವಾಸಿ ಮಂಜುನಾಥ ಬಿನ್ ಭೀಮಣ್ಣರವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಅವರ ಸಂಸಾರದಲ್ಲಿ ಸೌಂದರ್ಯ ಎಂಬ ಹೆಣ್ಣ ಮಗಳಿರುತ್ತಾಳೆ. ದಿನಾಂಕ: 04/03/2017ರಂದು ನನ್ನ ಭಾವ ಮಂಜುನಾಥರವರು ನನಗೆ ಫೋನ್ ಮಾಡಿ ನಿನ್ನ ತಂಗಿ ಅನ್ನಪೂರ್ಣಮ್ಮ ನೀರು ಕಾಯಿಸಲು ಹೋದಾಗ ಬೆಳಿಗ್ಗೆ ಸುಮಾರು 08:30 ಗಂಟೆಗೆ ಮೈಮೇಲೆ ಬೆಂಕಿ ಬಿದ್ದು ಸುಟ್ಟ ಗಾಯಗಳಾಗಿರುತ್ತವೆ ಎಂದು ವಿಷಯ ತಿಳಿಸಿದರು ಸಿರಾ ಆಸ್ಪತ್ರೆಯಲ್ಲಿದ್ದ ಪಿರ್ಯಾದಿರವರ ತಂಗಿಯನ್ನು ನೋಡಲಾಡಿ ಮೈಕೈಯಲ್ಲಿ ಸುಟ್ಟ ಗಾಯಗಳಾಗಿದ್ದವು. ಅಲ್ಲಿನ ವೈದ್ಯರ ಸಲಹೆಯಂತೆ ತುಮಕೂರು ಜಿಲ್ಲಾ ಆಸ್ಪತ್ರೆಗೆ ಅದೇ ದಿನ ಮಧ್ಯಾಹ್ನ ಸುಮಾರು 01.30 ಗಂಟೆಯಲ್ಲಿ ದಾಖಲಿಸಿದೆವು. ವಿಷಯ ತಿಳಿಯಲಾಗಿ ಆ ದಿನ ಪಿರ್ಯಾದಿರವರ ಭಾವ ಮಂಜುನಾಥ ಮತ್ತು ಅನ್ನಪೂರ್ಣಮ್ಮರವರ ಮಗಳು ಸೌಂದರ್ಯ ಸ್ನಾನ ಮಾಡಿಕೊಂಡು ಬೆಳಗಿನ ಶಾಲೆಗೆ, ಗಂಡ ಕೂಲಿಗಾಗಿ ಬೆಳಗ್ಗೆ ಸುಮಾರು 08.00 ಗಂಟೆಗೆ ಮನೆ ಬಿಟ್ಟು ಹೋಗಿರುತ್ತಾರೆ. ಮನೆಯ ಕೆಲಸ ಮುಗಿದ ನಂತರ ಪಿರ್ಯಾದಿರವರ ತಂಗಿ ಸ್ನಾನ ಮಾಡಲು ಹೋದಾಗ ಒಲೆ ಆರಿತ್ತು ಬೆಂಕಿ ಹತ್ತಿಸಲು ಕ್ಯಾನಿನಲ್ಲಿದ್ದ ಸೀಮೆಎಣ್ಣೆಯನ್ನು ಹಾಕಿದಾಗ ಒಲೆಯ ಕಾವಿಗೆ ದಗ್ಗನೆ ಬೆಂಕ ಹತ್ತಿ ರಭಸವಾಗಿ ಬೆಂಕಯ ಜ್ವಾಲೆ ವಾಪಸ್ಸು ಬಂದು ಅನ್ನಪೂರ್ಣರವರ ಬಟ್ಟೆಗೂ ಕೈಯ್ಯಲ್ಲಿದ್ದ ಸೀಮೇಎಣ್ಣೆ ಕ್ಯಾನಿಗೂ ಬೆಂಕಿ ಜ್ವಾಲೆ ತಗುಲಿ ಅನ್ನಪೂರ್ಣ ಕಿರುಚಿದಾಗ ಅಕ್ಕಪಕ್ಕದವರು ಬೆಂಕಿಯನ್ನು ನಂದಿಸಿ ಆಂಬುಲೆನ್ಸ್ ನಲ್ಲಿ ಸಿರಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು  ನಂತರ ಪಿರ್ಯಾದಿರವರು ತುಮಕೂರು ಜಿಲ್ಲಾ ಆಸ್ಪತ್ರೆಗೂ ಸೇರಿಸಿರುತ್ತೇವೆ. ಬೆಂಕಿ ಆರಿಸುವಷ್ಟರಲ್ಲಿ ಪಿರ್ಯಾದಿರವರ  ತಂಗಿಯ ಮುಖ ಎದೆ ಹೊಟ್ಟೆ, ಕೈಕಾಲುಗಳು ಸುಟ್ಟು ಮೈಯ್ಯೆಲ್ಲಾ ಕೆಂಪಾಗಿರುತ್ತದೆ. ಅಂದಿನಿಂದ ದಿನಾಂಕ:09/03/2017 ರ ತನಕ ಚಿಕಿತ್ಸೆ ನೀಡಿದ್ದು ಫಲಕಾರಿಯಾಗದೇ  ಮಧ್ಯಾಹ್ನ 03.30 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ. ಮೃತಳ ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿರುವುದಿಲ್ಲ ಆದ್ದರಿಂದ ತಾವುಗಳು ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ-34/2017 ಕಲಂ: 323,324,504,506 ಐ.ಪಿ.ಸಿ

ದಿನಾಂಕ: 10/03/2017 ರಂದು ಬೆಳಿಗ್ಗೆ 10-30 ಗಂಟಗೆ ಪಿರ್ಯಾದಿ ಸಣ್ಣಮಲ್ಲಯ್ಯ ಬಿನ್ ಲಿಂಗಪ್ಪ, 70ವರ್ಷ, ಪೌಂಡ್ ರಸ್ತೆ, ಕೋಟೆ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಮ್ಮ ಮನೆಯ ಪಕ್ಕದ ವಾಸಿ ದಾಸಪ್ಪನವರ ಮಗ ಮಂಜುನಾಥ್ ರವರು ಹೊಸ ಮನೆಯನ್ನು ಕಟ್ಟುತ್ತಿದ್ದು, ನಮ್ಮ ಮನೆಯ ಸ್ವಂತ ಜಾಗದಲ್ಲಿ ನಾವು ಮನೆಯ ಪೂರ್ವದ ಕಡೆಗೆ 2 ಅಡಿ ಜಾಗವನ್ನು ಬಿಟ್ಟಿರುತ್ತೇವೆ. ಆದರೆ ಮಂಜುನಾಥ್ ರವರು ಜಾಗವನ್ನು ಬಿಡದೇ ಹಾಗೂ ಮನೆಗೆ ಕಿಟಕಿಯನ್ನು ಇಡಲು ಜಾಗವನ್ನು ಬಿಟ್ಟು ಕಟ್ಟುತ್ತಿದ್ದು, ಅವರ ತಂದೆ ದಾಸಪ್ಪನವರು ನಾವು ಹೊಸದಾಗಿ ಮನೆಯನ್ನು ಕಟ್ಟುವಾಗ ಕಿಟಕಿ ಇಡುವುದಿಲ್ಲ ಹಾಗೂ 2 ಅಡಿ ಜಾಗವನ್ನು ಬಿಟ್ಟು ಕಟ್ಟುತ್ತೇವೆಂದು ದಿನಾಂಕ: 18/07/1989 ರಲ್ಲಿ ಅಗ್ರಿಮೆಂಟ್ ಮಾಡಿಕೊಟ್ಟಿರುತ್ತಾರೆ. ದಿನಾಂಕ: 09/03/2017 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ನಾನು ಮಂಜುನಾಥ್ ನನ್ನು ಸದರಿ ವಿಚಾರವನ್ನು ಕೇಳಿ ಅವರ ತಂದೆಯವರು ಬರೆದುಕೊಟ್ಟ ಪತ್ರವನ್ನು ತೋರಿಸಿದಾಗ ಮಂಜುನಾಥ್ ರವರು ನನಗೆ ಲೋಫರ್ ನನ್ನ ಮಗನೆ ನಮ್ಮ ತಂದೆಯಿಂದ ಇಲ್ಲಸಲ್ಲದನ್ನು ಬರೆಸಿಕೊಂಡಿದ್ದೀರಾ ಎಂದು ಪತ್ರವನ್ನು ನನ್ನಿಂದ ಪಡೆದುಕೊಂಡು ನನ್ನನ್ನು ಕೈಹಿಡಿದು ಎಳೆದಾಡಿ, ಮೈಕೈ ಹೊಡೆದು ಕಲ್ಲಿನಿಂದ ನನ್ನ ಎದೆಗೆ ಹೊಡೆದು ರಕ್ತಗಾಯ ಬರುವ ಹಾಗೆ ಹೊಡೆದಿದ್ದು, ಅಲ್ಲೇ ಇದ್ದ ಗಂಗಾಧರ್ ಟಿ.ಎನ್ ಎಂಬುರವರು ಗಲಾಟೆಯನ್ನು ಬಿಡಿಸಿರುತ್ತಾರೆ. ನಂತರ ಮಂಜುನಾಥ್ ರವರು ನಿನ್ನನ್ನು ಇಷ್ಟಕ್ಕೆ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆಯನ್ನು ಹಾಕಿ ಹೋಗಿದ್ದು, ಸದರಿಯವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ,ನಾನು ಇ್ಲಲಿಯವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ ಎಂದು ದೂರು ನೀಡಿದ್ದು, ಸದರಿ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ

ಹೊನ್ನವಳ್ಳಿ  ಪೊಲೀಸ್‌ ಠಾಣೆ ಮೊ,ನಂ-28/2017 ಕಲಂ 379 ಐಪಿಸಿ 21 ಎಂ,ಎಂ,ಆರ್,ಡಿ, ಆಕ್ಟ್ ಮತ್ತು 44 ಕೆ,ಎಂ,ಎಂ,ಸಿ,ಆರ್

ದಿನಾಂಕ-10/03/2017 ರಂದು ಬೆಳಗ್ಗಿನ ವೇಳೆಯಲ್ಲಿ ಠಾಣೆಯಲ್ಲಿದ್ದಾಗ ನನಗೆ ಬಂದ ಮಾಹಿತಿ ಏನೆಂದರೆ ಆದಿನಾಯಕನಹಳ್ಳಿ  ಗ್ರಾಮದ ಬಳಿ ಒಬ್ಬನು ಒಂದು ಟ್ರಾಕ್ಟರ್‌ನಲ್ಲಿ ಅಕ್ರಮವಾಗಿ ಸಾರ್ವಜನಿಕ ಮರಳನ್ನು ಕಳ್ಳತನದಿಂದ ಇಲಾಖಾ ಪರವಾನಗಿ ಇಲ್ಲದೆ ತಿಪಟೂರು ಕಡೆಗೆ ಸಾಗಾಣೆ ಮಾಡುತ್ತಿರುತ್ತಾನೆಂದು ಬಂದ ಮಾಹಿತಿ ಮೆರೆಗೆ ನಾನು ಠಾಣಾ ಪಿಸಿ 306 ಮತ್ತು ಹೆಚ್,ಸಿ-403  ಹಾಗು ತುಮಕೂರು ಜಿಲ್ಲಾ ಅಪರಾಧ ವಿಶೇಷ ಪೊಲೀಸ್ ಠಾಣೆಯ ಹೆಚ್,ಸಿ-48 ರವರುಗಳನ್ನು ಇಲಾಖಾ ಜೀಪಿನಲ್ಲಿ ಕರೆದುಕೊಂಡು ಆದಿನಾಯಕನಹಳ್ಳಿ  ಗ್ರಾಮದ ದೇವಾಲಯದ ಬಳಿ ಹೋದಾಗ ಅಲ್ಲೇ ಇದ್ದ ಪಂಚರುಗಳಾದ 1)ದೊಡ್ಡಯ್ಯ ಬಿನ್ ರಾಮನಾಯ್ಕ ಕಲ್ಕೆರೆ 2)ಯತೀಶ ಬಿನ್ ಲೇಟ್ ಪುಟ್ಟಯ್ಯ ಕಲ್ಕೆರೆ ರವರುಗಳಿಗೆ ದಾಳಿ ಮಾಡುವ ಮಾಹಿತಿ ತಿಳಿಸಿ ಪಂಚರಾಗುವಂತೆ ಕೇಳೀಕೊಂಡಿದ್ದು ಅವರು ಒಪ್ಪಿದ್ದರಿಂದ ನಾನು ನನ್ನ ಸಿಬ್ಬಂದಿ ಮತ್ತು ಪಂಚರೊಂದಿಗೆ ಆದಿನಾಯಕನಹಳ್ಳಿ ಹರಿಜನ ಕಾಲೋನಿಯ ಬಳಿ ಹೋಗಿ ಕಾಯುತ್ತಿರುವಾಗ ಕೆಎ 44 ಎಂ 3804/ಕೆಎ 13 0203 ನೇ ಟ್ರಾಕ್ಟರ್ ಚಾಲಕ ಟ್ರಾಕ್ಟರ್‌ ನಲ್ಲಿ ಮರಳನ್ನ ತುಂಬಿಕೊಂಡು ಬರುತ್ತಿದ್ದವನನ್ನು ನಾವುಗಳು ತಡೆದಾಗ ಆತ ಟ್ರಾಕ್ಟರ್‌ನ್ನು ನಿಲ್ಲಿಸಿ ಓಡಿಹೋಗಿದ್ದು ಟ್ರಾಕ್ಟರ್‌ನ್ನು ಪರಿಶೀಲನೆ ಮಾಡಲಾಗಿ ಕೆಎ 44 ಎಂ 3804/ಕೆಎ 13 0203 ಟ್ರಾಕ್ಟರ್ ಆಗಿದ್ದು ಅದರ ಟ್ರಾಲಿಯಲ್ಲಿ ಪೂರಾ ಮರಳಿದ್ದು ಈ ಮರಳಿನಲ್ಲಿ ತಜ್ಞರ ಪರೀಕ್ಷೆಗೆ 5 ಕೆಜಿಯಷ್ಟನ್ನು ತೆಗೆದು ಪ್ಲಾಸ್ಟಿಕ್ ಕವರ್‌ಗೆ ಹಾಕಿ ಎಂ ಎಂದು ಸೀಲ್ ಮಾಡಿರುತ್ತೆ ಟ್ರಾಕ್ಟರ್‌ನ ಚಾಲಕ ಮಾಲಿಕರ ಸಹಕಾರದೊಂದಿಗೆ ಮರಳನ್ನು ಸಾಗಾಣೆ ಮಾಡುತ್ತಿದ್ದು ಕಂಡುಬಂದಿದ್ದರಿಂದ ಸದರಿ ಟ್ರಾಕ್ಟರ್‌ ಮತ್ತು ಮರಳನ್ನು ಪಂಚನಾಮೆಯನ್ನು ಬೆಳಿಗ್ಗೆ 03-30 ಗಂಟೆಯಿಂದ 04-14 ಗಂಟೆವರೆಗೆ ಬರೆದು ಅಮಾನತ್ತು ಪಡಿಸಿಕೊಂಡು ಬೆಳಿಗ್ಗೆ 05-00 ಗಂಟೆಗೆ ಮಾಲು ಮತ್ತು ಪಂಚನಾಮೆಯೊಂದಿಗೆ ಬಂದು ಪ್ರಕರಣ ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 17/2017 ಕಲಂ 379 ಐಪಿಸಿ ಮತ್ತು 42 ,44 ಕೆ.ಎಂ.ಎಂ.ಆರ್‌.ಸಿ ಆಕ್ಟ್‌‌ 1994  ಮತ್ತು 4(1ಎ),21(1), 21(2), 21(3), 21(4), 21(5), 22 ಎಂಎಂಡಿಆರ್‌ಆಕ್ಟ್‌.

 

ದಿನಾಂಕ:10/03/2017 ರಂದು ಬೆಳಿಗ್ಗೆ 5-30 ಗಂಟೆಗೆ  ಠಾಣಾ ಪಿ.ಐ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ನಾನು ದಿನಾಂಕ  09/03/2017 ರಂದು ರಾತ್ರಿ 11-00 ಗಂಟೆಗೆ ರೌಂಡ್ಸ್ ಕರ್ತವ್ಯಕ್ಕಾಗಿ ಪಿ.ಸಿ 949 ರವರೊಂದಿಗೆ ಠಾಣೆಯಿಂದ ಹೊರಟು ಬಡವನಹಳ್ಳಿ ಚೆಕ್ ಪೋಸ್ಟ್, ಶನಿಮಹಾತ್ಮ ದೇವಸ್ಥಾನ, ದಂಡಿನದಿಬ್ಬ, ದೊಡ್ಡೇರಿ, ಕೈಮರ, ತಿಮ್ಲಾಪುರ, ಕವಣದಾಲ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ರಾತ್ರಿ 4-00 ಗಂಟೆ ಸಮಯದಲ್ಲಿ ಹನುಮನಹಳ್ಳಿ ಗೇಟಿನ ಬಳಿ ವಾಹನ ತಪಾಸಣೆ ಮಾಡುತ್ತಿದ್ದಾಗ ಅಲ್ಲಿಗೆ ಬಂದ ತುಮಕೂರು ಡಿ.ಸಿ.ಬಿ ವಿಭಾಗ ಸಿಬ್ಬಂದಿಗಳಾದ ಮಲ್ಲೇಶ ಮತ್ತು ಯೋಗೀಶ ರವರುಗಳು ಯಾವುದೋ ಮಾಹಿತಿ ಮೇರೆಗೆ ಸದರಿ ಸ್ಥಳಕ್ಕೆ ಬಂದು ನಮ್ಮೊಂದಿಗೆ ಇದ್ದಾಗ ಕೈಮರ ಕಡೆಯಿಂದ ಬಂದ ಒಂದು ಲಾರಿಯನ್ನು ತಡೆದು ನಿಲ್ಲಿಸಿ ಪರಿಶೀಲಿಸಲಾಗಿ ಲಾರಿಯಲ್ಲಿ ಗ್ರಾನೈಟ್ ಆಲಂಕಾರಿಕ ಶಿಲೆಗಳ ಸಣ್ಣ ಸಣ್ಣ ದಿಮ್ಮಿಗಳು ಕಂಡು ಬಂದಿದ್ದು, ಲಾರಿಯ ಚಾಲಕನನ್ನು ಪರವಾನಿಗೆ ಇದೆಯೆ ಎಂದು ಕೇಳಿದಾಗ ಯಾವುದೇ ಪರವಾನಿಗೆ ಇರುವುದಿಲ್ಲ ಎಂತಾ ತಿಳಿಸಿ ಚಾಲಕ ಲಾರಿಯನ್ನು ಬಿಟ್ಟು ಕತ್ತಲೆಯಲ್ಲಿ ಓಡಿ ಹೋಗಿರುತ್ತಾನೆ. ಲಾರಿಯ ನಂಬರ್ ನೋಡಲಾಗಿ ಕೆಎ 12 ಎ 1555 ಆಗಿದ್ದು, ಕ್ಯಾಬೀನ್ ಮೇಲೆ BABA FAKRUDDIN ಎಂತ ಬರೆದಿರುತ್ತೆ. ಸದರಿ ಲಾರಿಯು  ಸರ್ಕಾರದಿಂದ ಪಡೆದಿರುವ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸರ್ಕಾರಿ ಸ್ವತ್ತು ಗ್ರಾನೈಟ್ ಆಲಂಕಾರಿಕ ಶಿಲೆಗಳನ್ನು ತುಂಬಿ ಸಾಗಿಸುತ್ತಿರುವುದು ಕಂಡು ಬಂದಿದ್ದರಿಂದ ಸದರಿ ಲಾರಿಯನ್ನು ವಶಕ್ಕೆ ತೆಗೆದುಕೊಂಡು, ಸ್ಥಳಕ್ಕೆ ದೊಡ್ಡೇರಿಯ ಸತೀಶ ಎಂಬ ಲಾರಿ ಚಾಲಕರನ್ನು ಕರೆಯಿಸಿ, ಅವರ ಮೂಲಕ ಲಾರಿಯನ್ನು ಚಾಲನೆ ಮಾಡಿಸಿಕೊಂಡು ದಿ:10/03/2013 ರಂದು ಬೆಳಗಿನ ಜಾವ 5-30 ಗಂಟೆಗೆ ಠಾಣೆಯ ಮುಂದೆ ಲಾರಿಯನ್ನು ನಿಲ್ಲಿಸಿ, ಯಾವುದೇ ಪರವಾನಗಿ ಇಲ್ಲದೆ ಲಾರಿಯಲ್ಲಿ ಗ್ರಾನೈಟ್ ಆಲಂಕಾರಿಕ ಶಿಲೆಗಳನ್ನು ಸಾಗಿಸುತ್ತಿದ್ದ ಕೆಎ 12 ಎ 1555 ನೇ ಲಾರಿ ಚಾಲಕ ಮತ್ತು ಮಾಲೀಕರ ವಿರುದ್ದ ಮುಂದಿನ ಕ್ರಮ ಜರುಗಿಸಿ ಎಂತಾ ನೀಡಿದ ವರದಿಯನ್ನು ಪಡೆದು ಬೆಳಿಗ್ಗೆ 5-40 ಗಂಟೆಗೆ ಪ್ರಕರಣ ದಾಖಲಿಸಿರುತ್ತೆ.

 

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ ನಂ. 58/2017 ಕಲಂ 21(1) ಎಂ.ಎಂ.ಆರ್.ಡಿ ಆಕ್ಟ್, 44(1) ಕೆ.ಎಂ.ಎಂ.ಸಿ.ಆರ್, 379 ಐಪಿಸಿ

ದಿನಾಂಕ:09/10-03-2017 ರಂದು ರಾತ್ರಿ 1-55 ಗಂಟೆಗೆ ತುಮಕೂರು ಗ್ರಾಮಾಂತರ ವೃತ್ತದ ಸಿಪಿಐ ರವರರಾದ ಶ್ರೀ ಎ.ಕೆ. ತಿಮ್ಮಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ದಿನಾಂಕ:09/10-03-2017 ರಂದು ರಾತ್ರಿ ಕರ್ತವ್ಯದಲ್ಲಿ ಗಸ್ತು ಮಾಡುತ್ತಾ ವಕ್ಕೋಡಿ ರಸ್ತೆಯ ಹೊಸಬಡಾವಣೆಯ ಮುಖ್ಯ ರಸ್ತೆಯಲ್ಲಿಗೆ ರಾತ್ರಿ 00-05 ಗಂಟೆಯಲ್ಲಿಗೆ ಬೆಳ್ಳವಿ ಕ್ರಾಸ್‌ನ ಗೊಲ್ಲರಹಟ್ಟಿ ರಸ್ತೆಯಿಂದ ಹೆಗ್ಗೆರೆ ಮುಖ್ಯ ರಸ್ತೆ ಕಡೆ ಬರುತ್ತಿದ್ದಾಗ ಬೈರವ ಮೆಡಿಕಲ್ ಸ್ಟೋರ್ ಬಳೀಗೆ ಬಂದಾಗ ಎದುರಿನಿಂದ ಬರುತ್ತಿದ್ದ ಒಂದು ಲಾರಿಯಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿದ್ದುದನ್ನು ಗಮನಿಸಿ ನಿಲ್ಲಿಸುವಂತೆ ಚಾಲಕನಿಗೆ ತಿಳಿಸಿದಾಗ ಲಾರಿಯನ್ನು ಚಾಲನಾ ಸ್ಥಿತಿಯಲ್ಲಿಯೇ ನಿಲ್ಲಿಸಿ ಇಳಿದು ಓಡಿಹೋಗಿರುತ್ತಾರೆ. ಕೂಡಲೇ ನಮ್ಮ ಜೀಪಿನಿಂದ ಇಳೀದು ನಮ್ಮ ಚಾಲಕ ಜೊತೆಯಲ್ಲಿದ್ದ ಹೆಚ್ ಜಿ 517 ರವರು ಸೇರಿ ಲಾರಿಯನ್ನು ಸುತ್ತುವರಿಯುತ್ತಿದ್ದಂತೆ ಅದೇ ಲಾರಿ ನಂ KA-02-AB-7372 ರಲ್ಲಿನ ಕ್ಯಾಬಿನ್ ನಲ್ಲಿ ಕುಳಿತಿದ್ದ 4 ಜನರನ್ನು ಹಿಡಿದು ವಿಚಾರಿಸಲಾಗಿ ತೋವಿನಕೆರೆಯಿಂದ ಲಾರಿಯಲ್ಲಿ ಸುನಿಲ್ ಬಿನ್ ಶ್ರೀನಿವಾಸ, 27 ವರ್ಷ, ತುಮಕೂರು ವಾಸಿ ಪೋನ್ ನಂ 9620401794 ಎಂಬುವರು ಮರಳನ್ನು ತುಂಬಿಸಿ ಮಾರಾಟ ಮಾಡಲು ಕಳುಹಿಸಿರುತ್ತಾರೆ. ಇದಕ್ಕೆ ಯಾವುದೇ ಪರ್ಮಿಟ್ ಇರುವುದಿಲ್ಲವೆಂದು ನುಡಿದಿರುತ್ತಾರೆ ಇವರ ಹೆಸರು ವಿಳಾಸ ಕೇಳಲಾಗಿ 1) ಚಿಕ್ಕಣ್ಣ ಬಿನ್ ಹನುಮಂತರಾಯಪ್ಪ, 33 ವರ್ಷ, ಕೂಲಿಕೆಲಸ, ದೇವಲಾಪುರ ಗ್ರಾಮ, ಕೋರಾ ಹೋಬಳಿ, ತುಮಕೂರು ತಾಲ್ಲೋಕ್, 2) ಅರುಣ್ ಕುಮಾರ್ ಬಿನ್ ಸಿದ್ದರಾಜು, 21ವರ್ಷ, ದೇವಲಾಪುರ ಗ್ರಾಮ 3) ಮಂಜುನಾಥ ಬಿನ್ ತರಗಯ್ಯ, 25ವರ್ಷ, ದೇವಲಾಪುರ ಗ್ರಾಮ, 4) ದೊಡ್ಡಯ್ಯ ಬಿನ್ ಲಕ್ಷ್ಮಯ್ಯ, 35ವರ್ಷ, ಕೂಲಿಕೆಲಸ, ದೇವಲಾಪುರ ಗ್ರಾಮ, ಎಲ್ಲರೂ  ಕೋರಾ ಹೋಬಳಿ, ತುಮಕೂರು ತಾಲ್ಲೋಕ್ ಎಂದು ನುಡಿದು ನಾವೆಲ್ಲರೂ ಈ ಮರಳು ತುಂಬಿ ನಂತರ ಅನ್ ಲೋಡ್ ಮಾಡಲು ಸುನಿಲ್ ರವರಿಗೆ ಸಹಕರಿಸಿರುತ್ತೇವೆ ಎಂದು ನುಡಿದಿರುತ್ತಾರೆ. ಈ ರೀತಿ ಸದರಿ ಲಾರಿಯಲ್ಲಿ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡಿ ಹಣ ಗಳಿಸಲು ಸಾಗಾಟ ಮಾಡುತ್ತಿದ್ದ, ಲಾರಿಯ ಚಾಲಕ ರವಿ ಎಂಬುವನು ಓಡಿ ಹೋಗಿರುತ್ತಾನೆ ಎಂದು ತಿಳಿಸಿದಂತೆ ಇವರುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿ, ಆರೋಪಿಗಳ ಸಮೇತ ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿದೆ.

 

ಹುಳಿಯಾರು ಪೊಲೀಸ್ ಠಾಣಾ ಮೊ.ನಂ. 36/2017, ಕಲಂ 279, 337  ಐ.ಪಿ.ಸಿ.

ದಿನಾಂಕ: 10.03.2017 ರಂದು ಬೆಳಗ್ಗೆ 10:00 ಗಂಟೆಯಲ್ಲಿ ಪಿರ್ಯಾದಿ ಜಯಸ್ವಾಮಿ ಬಿ ಆರ್ ಬಿನ್ ರಾಜಶೇಖರಯ್ಯ ,ಬಿ ಎಸ್ ,ಕೆ ಎಸ್ ಆರ್ ಟಿ ಸಿ ಚಾಲಕರು, ಬಿಲ್ಲೆ ಸಂಖ್ಯೆ 119, ತಿಪಟೂರು ಘಟಕ, ತುಮಕೂರು ವಿಭಾಗ  ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ  ದಿನಾಂಕ: 08.03.2017 ರಂದು ಕೆಎ-06-ಎಫ್-1042 ನೇ ಬಸ್ಸಿಗೆ ಹೋಗಲು ನಾನು ಹಾಗೂ ಮಲ್ಲಿಕಾರ್ಜುನ  ನಿರ್ವಾಹಕ ನೇಮಿಸಿ ಬೆಂಗಳೂರಿನಿಂದ ಹೊಸದುರ್ಗ  ಮಾರ್ಗವಾಗಿ ಬರಲು ಬೆಂಗಳೂರಿನಿಂದ ಮದ್ಯಾಹ್ನ 12.45 ಗಂಟೆಗೆ  ತುಮಕೂರು ಮಾರ್ಗವಾಗಿ ಹೊಸದುರ್ಗ ಹೋಗಲು ಹುಳಿಯಾರು ಸಮೀಪ ಕೇಶವಾಪುರ ಗ್ರಾಮದ ಬಳಿ ಸಂಜೆ ಸುಮಾರು 05.15 ಗಂಟೆಯಲ್ಲಿ ಹೋಗುವಾಗ ಎದುರುಗಡೆಯಿಂದ ಕೆಎ-01-ಇಜೆ-72 ನೇ ಬೈಕ್ ಸವಾರ ಬೈಕ್ ನ ಹಿಂಬದಿಯಲ್ಲಿ ಒಬ್ಬನನ್ನು ಕೂರಿಸಿಕೊಂಡು ತನ್ನ ಬೈಕ್ ಅನ್ನು ಹೊಸದುರ್ಗ  ಕಡೆಯಿಂದ  ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಮ್ಮ ಬಸ್ಸಿನ ಮುಂಬಾಗ ಬಲಗಡೆಗೆ ಡಿಕ್ಕಿ ಹೊಡೆದು  ಆ ವ್ಯಕ್ತಿಯು ನನ್ನ ಬಸ್ಸಿನ ಮುಂಭಾಗದಲ್ಲಿ ರಸ್ತೆ ಮೇಲೆ ಬಿದ್ದಿರುತ್ತಾನೆ. ಆ ಬೈಕ್ ಸವಾರನಿಗೆ ಸ್ವಲ್ಪ ಪೆಟ್ಟಾಗಿದ್ದು ಹಾಗೂ ಬೈಕ್ ಹಿಂಬದಿಯ ಸವಾರನಿಗೂ ಪೆಟ್ಟಾಗಿದ್ದು ರಕ್ತಗಾಯಗಳಾಗಿರುತ್ತವೆ, ನಾನು ಹಾಗೂ ನಮ್ಮ ನಿರ್ವಾಹಕ ಹಾಗೂ ನನ್ನ ಬಸ್ಸಿನಲ್ಲಿದ್ದ ಪ್ರಯಾಣಿಕರು ಅವನಿಗೆ ಪ್ರಥಮ ಚಿಕಿತ್ಸೆ ಮಾಡಿ ಆಸ್ಪತ್ರೆಗೆ ಕಳುಹಿಸಿಕೊಟ್ಟೆವೆ, ನಾನು ನಂತರ ನಮ್ಮ ಬಸ್ಸನ್ನು  ವಾಪಸ್  ಹುಳಿಯಾರಿಗೆ ತಂದು ಪ್ರಯಾಣಿಕರನ್ನು ಬೇರೆ ವಾಹನಕ್ಕೆ ಕಳುಹಿಸಿ ನನ್ನ ವಾಹನವನ್ನು ಪೊಲೀಸ್ ಠಾಣೆ ಬಳಿ ತಂದಿರುತ್ತೇನೆ, ತದ ನಂತರ ನಮ್ಮ ಘಟಕ ವ್ಯವಸ್ಥಾಪಕರಿಗೆ ವಿಷಯ ತಿಳಿಸಿರುತ್ತೇನೆ, ಬಸ್ಸಿನ ದಾಖಲಾತಿ ಹಾಗೂ ಹಿರಿಯ ಅಧಿಕಾರಿಗಳ ಮೌಖಿಕ ಅನುಮತಿ ಪಡೆದು ತಡವಾಗಿ ಠಾಣೆಗೆ ಬಂದು ಮೇಲ್ಕಂಡ ಬೈಕ್ ಸವಾರ ನಮ್ಮ ಬಸ್ಸಿಗೆ ಅಪಘಾತಪಡಿಸಿದ ಕೆಎ-01-ಇಜೆ-72 ನೇ ಬೈಕ್ ಸವಾರನ ಮೇಲೆ   ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು  ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ

Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 77 guests online
Content View Hits : 212385