lowborn Press Note 23-02-17 | Tumakuru District Police | Tumkur Police | Karnataka Police

Smt. ISHA PANT IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ ದಿನಾಂಕ: 27-09-2017   ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಈ ಮೂಲಕ... >> ಕ್ರಿಮಿನಲ್ ಮೊಕದ್ದಮೆಗಳ ತನಿಖೆಯ ಬಗ್ಗೆ  ಕಾರ್ಯಾಗಾರ   >> >> ಪತ್ರಿಕಾ  ಪ್ರಕಟಣೆ ತುಮಕೂರು  ಜಿಲ್ಲಾ  ಪೋಲಿಸ್ ಹಾಗೂ ಜನ ಶಿಕ್ಷಣ ಸಂಸ್ಥೆ, ತುಮಕೂರು... >>   ದಿನಾಂಕ 20 /03/17 ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ 53 ನೇ ತಂಡದ  ನಾಗರೀಕ  ಬಂದೂಕು... >> ಅಮೃತೂರು ಪೊಲೀಸರ ಕಾರ್ಯಾಚರಣೆ. ಹೆದ್ದಾರಿ ಸುಲಿಗೆ ಕೋರರ ಬಂಧನ, ಕಾರು ಮತ್ತು ಮಾಲು ವಶ. ... >> Date: 15-03-17 ಪತ್ರಿಕಾ ಪ್ರಕಟಣೆ   ಇತ್ತೀಚೆಗೆ ತುಮಕೂರು ಜಿಲ್ಲೆಯಲ್ಲಿ ಅನಧಿಕೃತವಾಗಿ... >>   ಕುಣಿಗಲ್  ಪೊಲೀಸರ ಕಾರ್ಯಾಚರಣೆ.   ಕೊಲೆ ಮಾಡಿದ ಆರೋಪಿಗಳ ಬಂಧನ , ಕೊಲೆ ಮಾಡಲು ಬಳಸಿದ... >>   ದಿನಾಂಕ: 27/02/2017 ರಂದು ಶ್ರೀ ಸಿದ್ದಗಂಗಾ ಮಹಿಳಾ ಕಾಲೇಜು ಸಭಾಂಗಣದಲ್ಲಿ ಮಹಿಳೆಯರ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ: 25/02/2017 ದಿನಾಂಕ: 27/02/2017 ರಂದು ಮತ್ತು ದಿನಾಂಕ: 28/02/2017 ರಂದು ಶ್ರೀ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Press Note 23-02-17

 

ಪ್ರತಿಕಾ ಪ್ರಕಟಣೆ.

ದಿನಾಂಕ: 23/2/2017

ಕುಣಿಗಲ್ ವೃತ್ತ ಪೊಲೀಸರ ಕಾರ್ಯಾಚರಣೆ.

 

04 ಜನ ಅಂತರಾಜ್ಯ ಡಕಾಯಿತಿ ಆರೋಪಿಗಳ ಬಂಧನ, ನಗದು ಮತ್ತು ಕಾರು ವಶ.

ದಿನಾಂಕ: 01/02/2017  ರಂದು ಕೀರ್ತಿಕುಮಾರ್ ಎಂಬುವರು ಕೆಎಸ್‌ಆರ್‌‌ಟಿಸಿ ಬಸ್‌ ನಲ್ಲಿ 22,00,000=00 ರೂಗಳನ್ನು ಬೆಂಗಳೂರಿನಿಂದ ಮಂಗಳೂರಿಗೆ ತೆಗೆದುಕೊಂಡು ಹೋಗುವಾಗ ಕೀರ್ತಿಕುಮಾರ್‌ ನನ್ನು ಜಿಜೆ-24-ಎ-5210 ಕೆಂಪು  ಕಲ್ಲರ್‌ ನ ಕ್ಲೈಲೋ ಕಾರಿನಲ್ಲಿ ಹಿಂಭಾಲಿಸಿದ 6 ಜನ ಆರೋಪಿತರು ಎನ್‌‌ಹೆಚ್‌‌-75 ರಸ್ತೆಯಲ್ಲಿ ಕುಣಿಗಲ್ ಎಡೆಯೂರು ನಡುವೆ ಸಾಗರ್‌ ಹೋಟೆಲ್ ಬಳಿ ಕೆಎಸ್‌‌‌ಆರ್‌‌ಟಿಸಿ ಬಸ್‌ ನವರು ಕಾಫಿ/ಟೀ ಕುಡಿಯಲು ನಿಲ್ಲಿಸಿದಾಗ ಬಸ್‌ ನಿಂದ ಕೆಳಗಿಳಿದ ಕೀರ್ತಿಕುಮಾರ್‌ ರವರನ್ನು 6 ಜನ ಆರೋಪಿತರು ಹೊಂಚು ಹಾಕಿ ಬಲವಂತವಾಗಿ ಕಾರಿನಲ್ಲಿ ಹಾಕಿಕೊಂಡು ಕೀರ್ತಿಕುಮಾರ್‌ನಲ್ಲಿದ್ದ 22,03,000=00 ರೂ ನಗದು ಹಾಗೂ ಪರ್ಸ್ ನಲ್ಲಿ ದಾಖಲೆಗಳನ್ನು ಕಿತ್ತುಕೊಂಡು ಗುಜರಾತ್‌ ರಾಜ್ಯಕ್ಕೆ ಹೋಗಿದ್ದು ಈ ಸಂಬಂಧ ಅಮೃತೂರು ಪೊಲೀಸ್ ಠಾಣೆಯಲ್ಲಿ ಮೊ.ನಂ: 17/2017 ಕಲಂ: 395, 363 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತೆ.

ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಬಗ್ಗೆ ತುಮಕೂರು ಜಿಲ್ಲೆಯ ಮಾನ್ಯ ಎಸ್‌.ಪಿ ಮೇಡಮ್‌ರವರಾದ ಶ್ರೀಮತಿ ಇಶಾ ಪಂತ್‌, ಐ.ಪಿ.ಎಸ್‌‌. ರವರು ಒಂದು ವಿಶೇಷ ತಂಡವನ್ನು ರಚಿಸಿದ್ದು,  ಈ ತಂಡವು ಗುಜರಾತ್‌, ಮಹರಾಷ್ಟ್ರ ರಾಜ್ಯಕ್ಕೆ ತೆರಳಿ ಈ ಕೆಳಕಂಡ ಆರೋಪಿಗಳನ್ನು ಬಂದಿಸುವಲ್ಲಿ ಯಶ್ವಸಿಯಾಗಿರುತ್ತಾರೆ.

ಎ-1 ಹಿತೇಶ್‌ ಪಟೇಲ್‌ @ ಹಿತೇಶ್‌‌, @ ಹಿತೇಶ್‌‌ಕುಮಾರ್ ಬಿನ್ ಮನೋಜ್‌ಬಾಯ್‌‌, 25 ವರ್ಷ, ಪಟೇಲ್ ಜನಾಂಗ, ಹಣ ವರ್ಗಾವಣೆ ಕೆಲಸ, ನಂ:9, ಎಂ.ಎಂ. ಬೀದಿ, 1ನೇ ಮಹಡಿ, ರಾಮ್‌ ಮೆಡಿಕಲ್ಸ್ ಬಳಿ, ನಗರಪೇಟೆ, ಬೆಂಗಳೂರು ಸ್ವಂತ ಊರು: ಮಿಟಿಗಾರಿಯಾಲ್‌, ಚೆನಾಸ್ಮಾ ತಾಲ್ಲೋಕು, ಪಠಣ್‌ ಜಿಲ್ಲೆ,  ಗುಜರಾತ್‌ ರಾಜ್ಯ,

ಎ-2  ಅಶ್ವಿನ್‌ @ ಅಶ್ವಿನ್‌ ಕುಮಾರ್‌ ಬಿನ್ ಅಮೃತ್‌ಬಾಯ್‌, 40 ವರ್ಷ, ಪಟೇಲ್ ಜನಾಂಗ, ಹಣ ವರ್ಗಾವಣೆ ಕೆಲಸ, ನಂ:8, ಬಿಆರ್‌‌ಲೇನ್, 3ನೇ ಮಹಡಿ,  ಕುಂಬಾರ್ ಪೇಟೆ, ಎಸ್‌‌.ಪಿ ರೋಡ್‌,  ಬೆಂಗಳೂರು ಸ್ವಂತ ಊರು: ಕಂತರಾವಿ ಗ್ರಾಮ, ಹುಂಜಾ ತಾಲ್ಲೋಕು, ಮೈಸಾನ ಜಿಲ್ಲೆ, ಗುಜರಾತ್‌ ರಾಜ್ಯ,

ಎ-3 ವಿಷ್ಣುದೇಸಾಯಿ @ ವಿಷ್ಣು ಬಿನ್ ಮಾಣಿಕ್ ಲಾಲ್‌‌, 26 ವರ್ಷ, ದೇಸಾಯಿ ಜನಾಂಗ, ಜಮೀನು ಕೆಲಸ,   ಮಿಟಿಗಾರಿಯಾಲ್‌, ಚೆನಾಸ್ಮಾ ತಾಲ್ಲೋಕು, ಪಠಾಣ್‌ ಜಿಲ್ಲೆ,  ಗುಜರಾತ್‌ ರಾಜ್ಯ,

ಎ-4 Kಕಿಶನ್‌ @ ದುಬೈಕಿಶನ್‌‌ @ ಮಹರಾಜ್‌ ಬಿನ್ ಲೇಟ್ ಪ್ರವೀಣ್‌ ಬಾಯ್‌, 42 ವರ್ಷ, ಬ್ರಾಹ್ಮಣ  ಜನಾಂಗ, ಡ್ರೈವರ್ ಕೆಲಸ, ಮೋಟೆರಾ ಗ್ರಾಮ,(ಸನ್‌ ಟೆಂಪಲ್‌‌), ಬೆಚರಾಜಿ ತಾಲ್ಲೋಕು, ಮೈಸಾನ ಜಿಲ್ಲೆ,  ಗುಜರಾತ್‌ ರಾಜ್ಯ,

ಆರೋಪಿಗಳ ವಿಚಾರಣೆ ಕಾಲದಲ್ಲಿ ಈ ಆರೋಪಿಗಳು ಇತರೆ ಮೂರು ಜನ ಆರೋಪಿತರಾದ ರಘುಬಾಯಿ, ಸಿಬಿ, ಮತ್ತು ಬಾಬು ಇವರ ಜೊತೆ ಸೇರಿ ದರೋಡೆ ಮಾಡುವ ಸಂಬಂಧವಾಗಿ ಗುಜರಾತ್‌ ರಾಜ್ಯದಲ್ಲಿ ಸಂಚು ರೂಪಿಸಿ ಕ್ಲೈಲೋ ಕಾರಿನಲ್ಲಿ ಗುಜರಾತ್‌ ರಾಜ್ಯದಿಂದ ಬೆಂಗಳೂರಿಗೆ ಬಂದು ಕೀರ್ತಿಕುಮಾರ್ ಎಂಬುವರು ಬೆಂಗಳೂರಿನಿಂದ ಮಂಗಳೂರಿಗೆ ಹಣ ತೆಗೆದುಕೊಂಡು ಹೋಗುವ ಬಗ್ಗೆ ಮಾಹಿತಿ ಸಂಗ್ರಹಿಸಿ ಕೀರ್ತಿಕುಮಾರ್ ರವರು ಕೆಎಸ್‌ಆರ್‌‌ಟಿಸಿ ಬಸ್ಸಿನಲ್ಲಿ ಹಣದೊಂದಿಗೆ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವಾಗ ಬಸ್ಸನ್ನು ಹಿಂಬಾಲಿಸಿ ಕುಣಿಗಲ್ –ಯಡೆಯೂರು ಮಧ್ಯ ಸಾಗರ್‌ ಹೋಟೆಲ್ ಬಳಿ ಬಸ್ಸನ್ನು ನಿಲ್ಲಿಸಿದಾಗ ಆರೋಪಿತರು ಕೀರ್ತಿಕುಮಾರ್‌ ನಿಂದ ಹಣವನ್ನು ದರೋಡೆಮಾಡಿರುವುದಾಗಿ ಒಪ್ಪಿಕೊಂಡು ತನಿಖಾ ಸಮಯದಲ್ಲಿ ಆರೋಪಿತರಿಂದ 6 ಲಕ್ಷ ರೂ ನಗದು ಹಣ ಮತ್ತು ನಾಲ್ಕು ಮೊಬೈಲ್ ಗಳನ್ನು ಅಮಾನತ್ತುಪಡಿಸಿಕೊಂಡು ಇತರೆ ಮೂರು ಜನ ಆರೋಪಿತರು ತಲೆ ಮರೆಸಿಕೊಂಡಿರುತ್ತಾರೆ.

ಈ ಕಾರ್ಯಚಾರಣೆಯನ್ನು ತುಮಕೂರು ಜಿಲ್ಲೆಯ ಆರಕ್ಷಕ ಅಧೀಕ್ಷಕರವರಾದ ಶ್ರೀಮತಿ ಇಶಾಪಂತ್ ರವರ ನಿರ್ದೇಶನದಲ್ಲಿ, ಅಡಿಷನಲ್ ಎಸ್‌.ಪಿ ಶ್ರೀ ಜಿ.ಬಿ ಮಂಜುನಾಥ ಹಾಗೂ ಶ್ರೀ ಚಂದ್ರಶೇಖರ್‌, ಡಿವೈಎಸ್‌ಪಿ, ರವರ ಮಾರ್ಗದರ್ಶನದಲ್ಲಿ. ಶ್ರೀ ಬಾಳೇಗೌಡ, ಸಿಪಿಐ, ಪಿಎಸ್‌ಐರವರಾದ ಶ್ರೀ ಕೇಶವಮೂರ್ತಿ ಹಾಗೂ ಸಿಬ್ಬಂದಿಗಳಾದ ರವಿ, ಸೈಯದ್‌ ವಾಸೀಂ ಜಬಿ, ಮಲ್ಲೇಶ, ತಾಂತ್ರಿಕ ಸಿಬ್ಬಂದಿ ನರಸಿಂಹರಾಜು, ರಂಗೇಗೌಡ, ದೇವರಾಜು, ಪ್ರಕಾಶ, ಪುಟ್ಟರಾಮು ರವರುಗಳು ನಡೆಸಿರುತ್ತಾರೆ.

Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 63 guests online
Content View Hits : 89359