lowborn Press Note 10-02-17 | Tumakuru District Police | Tumkur Police | Karnataka Police

Smt. ISHA PANT IPS,
Superintendent of Police,
Tumakuru Dt., Karnataka.

Message from SP

Press Note 10-02-17

:: ಪತ್ರಿಕಾ ಪ್ರಕಟಣೆ. ::

ತಿಲಕ್ ಪಾರ್ಕ್‌  ವೃತ್ತ ಪೊಲೀಸರ ಕಾರ್ಯಾಚರಣೆ.

 

ಮಂಜೇಶ್ ನ ಭೀಕರ ಹತ್ಯೆ ಪ್ರಕರಣ: ಸಂಬಂಧೀಕರು ಸೇರಿ 05 ಮಂದಿ ಹಂತಕರ ಬಂಧನ.

 

 

ದಿನಾಂಕ :23-01-2017 ರ ಬೆಳಿಗ್ಗೆ ತುಮಕೂರು ನಗರ ತಿಲಕ್ ಪಾರ್ಕ್‌  ಪೊಲೀಸ್ ಠಾಣೆ ಸರಹದ್ದು ಮೇಳೆಕೋಟೆ ಕೆರೆಯ ನೀರಿನಲ್ಲಿ ಸುಮಾರು 35-40 ವರ್ಷ ವಯಸ್ಸಿನ ಗಂಡಸಿನ ಶವ ತೇಲುತ್ತಿರುತ್ತೆಂದು ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ತಿಲಕ್ ಪಾರ್ಕ್‌  ರವರು ಸ್ಥಳಕ್ಕೆ ಹೋಗಿ ಶವವನ್ನು ನೀರಿನಿಂದ ಹೊರತೆಗೆಸಿದ್ದು, ಶವವು ನೀರಿನಲ್ಲಿ ಊತಬಂದಿದ್ದು ಹರಿತವಾದ ಆಯುಧಗಳಿಂದ ತಲೆಗೆ, ಕೈಗಳಿಗೆ ಎದೆಗೆ ಹೊಡೆದು ಎಲ್ಲಿಯೋ ಯಾವುದೋ ಉದ್ದೇಶಕ್ಕಾಗಿ ಕೊಲೆ ಮಾಡಿ ಶವವನ್ನು ತಂದು ಕೆರೆಗೆ ಎಸೆದಿರುವ ರೀತಿ ಕಂಡು ಬಂದಿದ್ದು, ಈ ಬಗ್ಗೆ ತಿಲಕ್ ಪಾರ್ಕ್‌  ಪೊಲೀಸ್ ಠಾಣೆಯಲ್ಲಿ ಮೊಕ್ಕದ್ದಮೆ ನಂ 07/2017 ಕಲಂ 302-201 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.

 

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಶ್ರೀಮತಿ ಇಶಾಪಂತ್ ಐ.ಪಿ.ಎಸ್. ರವರು ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶ್ರೀ. ಜಿ.ಬಿ ಮಂಜುನಾಥ್ ರವರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ಪತ್ತೆಗಾಗಿ ಒಂದು ವಿಶೇಷ ತಂಡವನ್ನು ರಚಿಸಿದ್ದರು. ಈ ತಂಡವು ಈ ಪ್ರಕರಣವನ್ನು ಭೇಧಿಸಿ ಈ ಕೆಳಕಂಡ 5 ಜನ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

 

1]  ಶ್ರೀ ಹೇಮಂತ್ ಕುಮಾರ್ ಬಿನ್ ಕೆಂಪೇಗೌಡ, 23 ವರ್ಷ, ವಕ್ಕಲಿಗ ಜನಾಂಗ, ಡ್ರೈವರ್ ಕೆಲಸ, ವಾಸ ನಂ 367, 10ನೇ ಕ್ರಾಸ್, ಮಂಜುನಾಥ ನಗರ, ಗಣಪತಿ ದೇವಸ್ಥಾನದ ಹತ್ತಿರ, ಬೆಂಗಳೂರು ಸ್ವಂತ ಊರು ವಡಕೆಘಟ್ಟ, ದಬ್ಬೇಘಟ್ಟ ಹೋಬಳಿ, ತುರುವೇಕೆರೆ ತಾಲ್ಲೋಕ್,

 

2]  ಶ್ರೀ ಲೋಕೇಶ @ ಲೋಕಿ ಬಿನ್ ಗೋಪಾಲ್ ರಾಜ್, 27 ವರ್ಷ, ವಕ್ಕಲಿಗ ಜನಾಂಗ, ವ್ಯವಸಾಯ, ವಾಸ ಕೊತ್ತಿಹಳ್ಳಿ, ಕಸಬಾ ಹೋಬಳಿ, ತುಮಕೂರು ತಾಲ್ಲೋಕ್,

 

3]  ಶ್ರೀ ನವೀನ ಕೆ.ಸಿ ಬಿನ್ ಲೇಟ್ ಚಂದ್ರಶೇಖರ್, 27 ವರ್ಷ, ವಕ್ಕಲಿಗ ಜನಾಂಗ, ಕಂಬಿಕಟ್ಟುವ ಕೆಲಸ, ವಾಸ ಕೊತ್ತಿಹಳ್ಳಿ, ಕಸಬಾಹೋಬಳಿ, ತುಮಕೂರು ತಾಲ್ಲೋಕ್

 

4]  ಶ್ರೀ ಪ್ರೇಮ್ ಸಾಗರ್ ಎಸ್ @ ಅಮ್ಮು ಬಿನ್  ಶಂಕರ್.ಪಿ. 20 ವರ್ಷ, ವಕ್ಕಲಿಗ ಜನಾಂಗ, ರಿಲಯನ್ಸ್  ಜಿಯೋ ಕಂಪನಿಯಲ್ಲಿ ಫೀಲ್ಡ್ ಕೆಲಸ, ವಾಸ ಕೊತ್ತಿಹಳ್ಳಿ, ಕಸಬಾ ಹೋಬಳಿ, ತುಮಕೂರು ತಾಲ್ಲೋಕ್

 

5]  ಶ್ರೀ ಹೆಚ್.ಆರ್ ರಾಘವೇಂದ್ರ @ ರಘು ಬಿನ್ ರಮೇಶ್. ಎಂ. 30 ವರ್ಷ, ವಕ್ಕಲಿಗ ಜನಾಂಗ, ಕಾರ್ ಡ್ರೈವರ್ ಕೆಲಸ ವಾಸ ಅಂಚೆಪಾಳ್ಯ, ಮಾದಾವಾರ, ಬೆಂಗಳೂರು ತಾಲ್ಲೋಕ್ ಸೊರವನಹಳ್ಳಿ, ಮಾಯಸಂದ್ರ ಹೋಬಳಿ, ತುರುವೇಕೆರೆ ತಾಲ್ಲೋಕ್,

 

ತನಿಖೆ ಕಾಲದಲ್ಲಿ ಮೃತ ವ್ಯಕ್ತಿಯನ್ನು ಮಂಜೇಶ್.ಆರ್. ಬಿನ್ ಲೇ ರಾಜೇಗೌಡ  32 ವರ್ಷ, ವಡಕೆಘಟ್ಟ, ತುರುವೇಕೆರೆ ತಾಲ್ಲೂಕು ಹಾಲಿ ಬಗಲಗುಂಟೆ ಬೆಂಗಳೂರು, ಈತನು ಒಬ್ಬನೇ ಬಗಲಗುಂಟೆಯಲ್ಲಿ ಮನೆ ಮಾಡಿಕೊಂಡು ಫೈನಾನ್ಸ್ ಮಾಡಿಕೊಂಡು ಇದ್ದನೆಂತ ತಿಳಿದುಬಂದಿರುತ್ತದೆ. ನಂತರ ಆರೋಪಿಗಳ ಬಗ್ಗೆ ಮಾಹಿತಿ ಕಲೆಹಾಕಿ  ದಿನಾಂಕ:07/02/17 ರಂದು ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ದಸ್ತಗಿರಿ ಮಾಡಿದ ನಂತರ ತನಿಖೆಯಲ್ಲಿ ಕೊಲೆಗೆ ಕಾರಣ ತಿಳಿದುಕೊಂಡಿದ್ದರಲ್ಲಿ ಮಂಜೇಶನ ಕಾರಿನ ಚಾಲಕನಾಗಿದ್ದ ಮಂಜೇಶನ ಸಂಬಂಧಿ  ಆರೋಪಿ ಹೇಮಂತ ಎಂಬುವನು ಈತನ ಚಲನ ವಲನಗಳನ್ನು ಗಮನಿಸಿ, ಮಂಜೇಶನ ಮೈಮೇಲೆ ಚಿನ್ನದ ಸರ, ಕೈನಲ್ಲಿ ಚಿನ್ನದ ಕಡಗ, ಕೈಗಳಲ್ಲಿ ಉಂಗುರ, ಹಾಗೂ ಫೈನಾನ್ಸ್ ಹಣ ಇರುತ್ತಿದ್ದುದ್ದನ್ನು ಗಮನಿಸಿ ಹೇಮಂತನು ಹಾಗೂ ಈತನ ಸಂಬಂಧೀಕರಾದ ನವೀನ, ರಾಘವೇಂದ್ರ@ ರಘು, ಸ್ನೇಹಿತರಾದ ಲೋಕೇಶ@ ಲೋಕಿ, ಪ್ರೇಮ್ ಸಾಗರ್ @ಅಮ್ಮು, ರವರುಗಳು ಸೇರಿಕೊಂಡು ಮಂಜೇಶನನ್ನು ಕೊಲೆ ಮಾಡುವ  ಸಂಚು ರೂಪಿಸಿ ದಿನಾಂಕ:20/01/2017 ರಂದು ರಾತ್ರಿ ಹಂದಿ ಮಾಂಸದ ಪಾಟರ್ಿ ಮಾಡೋಣಾವೆಂದು ಹೇಮಂತನು ತನ್ನ ಕಾರಿನಲ್ಲಿ ಮಂಜೇಶನನ್ನು ಹಾಗೂ ಆರೋಪಿಗಳಾದ ಲೋಕಿ, ಪ್ರೇಮ್ ಸಾಗರ್, ನವೀನನ್ನು ಕರೆದುಕೊಂಡು ಹೆಸರುಘಟ್ಟದ ಮದುರೈ ಮೈನ್ ರಸ್ತೆಯಲ್ಲಿ ಸಿಗುವ ತೊಟಗೆರೆಯ ಬಳಿ ಒಂದು ಹೊಸ ಲೇಔಟ್ ಗೆ ಕರೆದುಕೊಂಡು ಹೋಗಿ ಮಂಜೇಶ್ ನಿಗೆ ಕುಡಿಸಿ, ತಿನ್ನಿಸಿ ಪೂರ್ವಯೋಜಿತದಂತೆ ಆರೋಪಿಗಳೆಲ್ಲರೂ ಕಾರಿನಲ್ಲಿ ತೆಗೆದುಕೊಂಡು ಹೋಗಿದ್ದ ಆಯುಧಗಳಿಂದ ಹೊಡೆದು ಕೊಲೆ ಮಾಡಿ ಆತನ ಬಳಿ ಇದ್ದ 5 ಮೊಬೈಲ್ ಗಳು, ಚಿನ್ನದ ಸರ, ಚಿನ್ನದ ಕಡಗ, ಚಿನ್ನದ ಉಂಗುರ, ಗಳನ್ನು ಮನೆಯ ಬೀಗದ ಕೀಯ್ನು ತೆಗೆದುಕೊಂಡು ಶವವನ್ನು ಕಾರಿನಲ್ಲಿದ್ದ ಬೆಡ್ ಶೀಟ್ ನಿಂದ ಜಕರ್ೀನ್ ಗಳಿಂದ ಸುತ್ತಿ ಹೇಮಂತನ ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಅಲ್ಲಿಂದ ತುಮಕೂರು ಮಾರ್ಗವಾಗಿ ಹೆಗ್ಗೆರೆ ಮೂಲಕ ಕೊತ್ತಿಹಳ್ಳಿಗೆ ಬಂದು ಮಂಜೇಶನ ಬಾಡಿಯು ಯಾರಿಗೂ ಸಿಗಬಾರದೆಂದು ಮೆಳೆಕೋಟೆ ಕೆರೆಯ ನೀರಿಗೆ ಹಾಕಿರುವುದಾಗಿ ತನಿಖೆಯಿಂದ ತಿಳಿದುಬಂದಿರುತ್ತೆ. ಆರೋಪಿಗಳು ಮೃತನ ಕಡೆಯಿಂದ ದೋಚಿದ್ದ ಚಿನ್ನದ ಸರ, ಕಡಗ, ಉಂಗುರ, ಕೃತ್ಯಕ್ಕೆ ಬಳಸಿದ್ದ ಕಾರು, ಮೋಟಾರ್ ಸೈಕಲ್ಲನ್ನು, ಮತ್ತು ಮೃತನ 4 ಮೊಬೈಲ್ ಗಳನ್ನು ವಶಪಡಿಸಿಕೊಂಡಿರುತ್ತೆ.

 

ಈ ಕಾರ್ಯಾಚರಣೆಯನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಶ್ರೀಮತಿ ಇಶಾಪಂತ್ ಐ.ಪಿ.ಎಸ್.ರವರ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶ್ರೀ. ಜಿ.ಬಿ ಮಂಜುನಾಥ್ ರವರ ಮಾರ್ಗದರ್ಶನದಲ್ಲಿ ತುಮಕೂರು ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ಶ್ರೀ ಕೆ.ಎಸ್. ನಾಗರಾಜ್ ರವರ ನೇತೃತ್ವದಲ್ಲಿ ತಿಲಕ್ ಪಾರ್ಕ್‌  ವೃತ್ತದ ಸಿಪಿಐ ರವರಾದ ಶ್ರೀ ಕೆ.ಆರ್. ರಾಘವೇಂದ್ರ, ಪಿ.ಎಸ್.ಐ ರವರುಗಳಾದ ಶ್ರೀ ಡಿ.ಎಲ್ ರಾಜು ಶ್ರೀ ಜಿ.ಪಿ.ರಾಜು ಹಾಗೂ ಸಿಬ್ಬಂದಿಗಳಾದ ಶ್ರೀ ಶಿವಣ್ಣ, ಶ್ರೀ ಮುನಾವರ್ ಪಾಷ ಶ್ರೀ ಸಿದ್ಧಪ್ಪ, ಶ್ರೀ ನರಸಿಂಹರಾಜು, ಶ್ರೀ ರಮೇಶ್, ಶ್ರೀ ಸುರೇಶ್ ನಾಯ್ಕ, ಶ್ರೀ ಸೈಮನ್ ವಿಕ್ಟರ್, ಶ್ರೀ ಕೆ.ಟಿ. ನಾರಾಯಣ, ಶ್ರೀ ಹನುಮರಂಗಯ್ಯ, ಶ್ರೀ ಸತ್ಯನಾರಾಯಣ, ಶ್ರೀ ಫಯಾಜ್ ಶ್ರೀ ರಘು ರವರುಗಳು ಆರೋಪಿಗಳನ್ನು ಹಿಡಿಯುವಲ್ಲಿ ಶ್ರಮಿಸಿದ್ದು, ಈ ಗಂಬೀರ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು  ಜಿಲ್ಲಾ ಎಸ್.ಪಿ. ರವರು ಶ್ಲಾಘಿಸಿರುತ್ತಾರೆೆ.

Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 21 guests online
Content View Hits : 112012