lowborn ಅಪರಾಧ ಘಟನೆಗಳು 11-07-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 11-07-18

ಸಿ.ಎಸ್.ಪುರ ಪೊಲೀಸ್ ಠಾಣಾ ಮೊ.ನಂ:76/2018. ಕಲಂ:87 ಕೆ.ಪಿ ಆಕ್ಟ್

ದಿನಾಂಕ:10.07.2018 ರಂದು ಠಾಣೆಯ  ಗುಪ್ತಮಾಹಿತಿ ಸಿಬ್ಬಂದಿಯಾದ ಸಿಪಿಸಿ-799 ರಾಜಣ್ಣರವರು ಕಲ್ಲೂರು  ಗ್ರಾಮದ ಹತ್ತಿರ, ಕಲ್ಲೂರು ಕೆರೆ ನೀರು ಹೋಗುವ ತೊರೆಯ ಹಳ್ಳದಲ್ಲಿ  ಕೆಲವು ಆಸಾಮಿಗಳು  ಇಸ್ಪೀಟು ಎಲೆಗಳಿಂದ ಜೂಜಾಟ ಆಡುತ್ತಿರುವ ಬಗ್ಗೆ ನೀಡಿದ ಖಚಿತ ಮಾಹಿತಿ  ಮೇರೆಗೆ,ಠಾಣಾ ಎನ್.ಸಿ.ಆರ್ ನಂ. 37/18 ನಲ್ಲಿ ದಾಖಲಿಸಿಕೊಂಡು, ಜೂಜಾಟದ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಲು  ಘನ ನ್ಯಾಯಾಲಯದ ಅನುಮತಿ ಪಡೆದು, ಪಂಚರು & ನನ್ನ  ಸಿಬ್ಬಂದಿಗಳೊಂದಿಗೆ  ಹೋಗಿ ಸದರಿ ಸ್ಥಳಕ್ಕೆ ಹೋಗಿ ಜೂಜಾಟ ಆಡುತ್ತಿದ್ದವರ ದಾಳಿ ಮಾಡಿ , ಸ್ಥಳದಲ್ಲಿ ಜೂಜಾಡಲು ಪಣಕ್ಕಿಟ್ಟಿದ್ದ 6320 ರೂ ನಗದು ಹಣ , 52 ಇಸ್ಪೀಟು ಎಲೆಗಳು ಹಾಗೂ ಒಂದು ಹಳೆಯ ನ್ಯೂಸ್ ಪೇಪರ್ & 12 ಜನ  ಆಸಾಮಿಗಳಲ್ಲಿ ಇಬ್ಬರೂ ಆಸಾಮಿಗಳು ತಪ್ಪಿಸಿಕೊಂಡು ಹೋಗಿದ್ದು, ಸಿಕ್ಕಿರುವ 10 ಜನ ಆಸಾಮಿಗಳು & ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಬಂದು ಠಾಣಾ ಮೊ.ನಂ:76/2018.ಕಲಂ:87ಕೆ.ಪಿ ಆಕ್ಟ್  ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 80/2018, ಕಲಂ: 87 ಕೆ.ಪಿ ಆಕ್ಟ್

ದಿನಾಂಕ:10-07-2018 ರಂದು ಸಂಜೆ 06-00 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಅಂಶವೇನೆಂದರೆ, ದಿನಾಂಕ:-10-07-2018 ರಂದು ಮದ್ಯಾಹ್ನ 3.00 ಗಂಟೆಗೆ ನಾನು ಹುಳಿಯಾರು ಪೊಲೀಸ್ ಠಾಣೆಯಲ್ಲಿದ್ದಾಗ ಹುಳಿಯಾರು ಠಾಣಾ ಸರಹದ್ದು ಹುಳಿಯಾರು ಹೋಬಳಿ ಬರಕನಹಾಳ್ ಗ್ರಾಮದ ರಸ್ತೆಯ ಎಡಭಾಗದಲ್ಲಿರುವ ಶ್ರೀ ಕರಿಯಮ್ಮ ದೇವಸ್ಥಾನದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿ ಕಟ್ಟಿಕೊಂಡು ಕಾನೂನು ಬಾಹಿರ ಅಂದರ್ - ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅಕ್ರಮ ಜೂಜಾಟದ  ಮೇಲೆ   ದಾಳಿ  ಮಾಡುವ  ಬಗ್ಗೆ  ನ್ಯಾಯಾಲಯದಿಂದ  ಅನುಮತಿ ಪಡೆದಿದ್ದು, ಠಾಣೆಗೆ ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ಸಿಬ್ಬಂದಿಯವರನ್ನು ಕರೆದುಕೊಂಡು ಇಲಾಖಾ ಜೀಪಿನಲ್ಲಿ ಸಂಜೆ 4.15  ಗಂಟೆಗೆ ಹೋಬಳಿ ಬರಕನಹಾಳ್ ಗ್ರಾಮದ ರಸ್ತೆಯ ಎಡಭಾಗದಲ್ಲಿರುವ ಶ್ರೀ ಕರಿಯಮ್ಮ ದೇವಸ್ಥಾನದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ 9 ಜನ ಅಸಾಮಿಗಳು ನೆಲದ ಮೇಲೆ ವೃತ್ತಾಕಾರವಾಗಿ ಕುಳಿತುಕೊಂಡು ಮದ್ಯದಲ್ಲಿ ಒಂದು ಪ್ಲಾಸ್ಟಿಕ್ ಚೀಲವನ್ನು ಹಾಕಿಕೊಂಡು  ಹಣವನ್ನು ಪಣಕ್ಕೆ ಕಟ್ಟಿಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ – ಬಾಹರ್ ಎಂತ ಹೇಳುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದು, ಸದರಿಯವರನ್ನು ಸುತ್ತುವರೆದು ದಾಳಿ ಮಾಡಿ ಮೇಲೆ ಹೇಳದಂತೆ ತಿಳಿಸಿದಾಗ್ಯೂ ಒಬ್ಬ ಆಸಾಮಿಯು ನಮ್ಮಿಂದ ತಪ್ಪಿಸಿಕೊಂಡು ಓಡಿಹೋಗಿದ್ದು, ಸ್ಥಳದಲ್ಲಿದ್ದ ಅಸಾಮಿಗಳ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ 1) ಕುಮಾರ ಬಿನ್ ಮುದ್ದಪ್ಪ, 33 ವರ್ಷ, ಕೂಲಿ, ಉಪ್ಪಾರರು, ಸಂಗೇನಹಳ್ಳಿ, ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ಎಂತ ತಿಳಿಸಿದ್ದು ಈತನ ಮುಂಭಾಗ 1700/- ರೂ ನಗದು ಹಣ ಇರುತ್ತೆ 2)ಕುಮಾರ ಬಿನ್ ಎಂಜಯ್ಯ, 33 ವರ್ಷ, ಬೇಸಾಯ, ಉಪ್ಪಾರರು, ಸಂಗೇನಹಳ್ಳಿ,  ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ಎಂತ ತಿಳಿಸಿದ್ದು ಈತನ ಮುಂಭಾಗ 700/- ರೂ ನಗದು ಹಣ ಇರುತ್ತೆ. 3) ನಾಗರಾಜು ಬಿನ್ ಮುದ್ದಯ್ಯ, 50 ವರ್ಷ, ಕೂಲಿ, ಉಪ್ಪಾರರು, ಸಂಗೇನಹಳ್ಳಿ, ಹುಳಿಯಾರು ಹೋಬಳಿ, ಚಿಕ್ಕನಾಯ್ಕನಹಳ್ಳಿ ತಾಲ್ಲೋಕು, ಈತನ ಮುಂಭಾಗ  250/- ರೂ ನಗದು ಹಣ ಇರುತ್ತೆ. 4) ಪ್ರಕಾಶ ಬಿನ್ ದೊಡ್ಡಹನುಮಂತಯ್ಯ, 36 ವರ್ಷ, ಬೇಸಾಯ, ಸಂಗೇನಹಳ್ಳಿ, ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ಎಂತ ತಿಳಿಸಿದ್ದು ಈತನ ಮುಂಭಾಗ 800/- ರೂ ನಗದು ಹಣ ಇರುತ್ತೆ. 5) ನಟರಾಜು ಬಿನ್ ಮೋಹನ್ ಕುಮಾರ್, 26 ವರ್ಷ, ಬೇಸಾಯ, ಕೂಲಿ, ನಂದೀಹಳ್ಳಿ, ಹುಳಿಯಾರು ಹೋಬಳಿ,  ಚಿಕ್ಕನಾಯ್ಕನಹಳ್ಳಿ ತಾಲ್ಲೋಕು, ಎಂತ ತಿಳಿಸಿದ್ದು ಈತನ ಮುಂಭಾಗ 200/- ರೂ ನಗದು ಹಣ ಇರುತ್ತೆ. 6) ಚಿದಾನಂದ ಬಿನ್ ರಾಮಕೃಷ್ಣಯ್ಯ, 29 ವರ್ಷ, ಕೂಲಿ, ಉಪ್ಪಾರರು, ಸಂಗೇನಹಳ್ಳಿ, ಹುಳಿಯಾರು ಹೋಬಳಿ, ಚಿಕ್ಕನಾಯ್ಕನಹಳ್ಳಿ, ಈತನ ಮುಂಭಾಗ 100/- ರೂ ನಗದು ಹಣ ಇರುತ್ತೆ. 7) ದೇವರಾಜು ಬಿನ್ ಕೆಂಚಪ್ಪ,  30 ವರ್ಷ, ಕೂಲಿ, ನಾಯಕರು, ಕುಶಾಲಪುರ, ಹುಳಿಯಾರು ಹೋಬಳಿ, ಚಿಕ್ಕನಾಯ್ಕನಹಳ್ಳಿ, ಈತನ ಮುಂಭಾಗ 100/- ರೂ ನಗದು ಹಣ ಇರುತ್ತೆ. 8) ರಘು ಬಿನ್ ಬಿ ಎಂ ದೇವರಾಜು. 27 ವರ್ಷ, ಬೇಸಾಯ, ಲಿಂಗಯ್ತರು, ಬರಕನಹಾಳ್ ಗ್ರಾಮ, ಹುಳಿಯಾರು ಹೋಬಳಿ, ಚಿಕ್ಕನಾಯ್ಕನಹಳ್ಳಿ, ಈತನ ಮುಂಭಾಗ 400/- ರೂ ನಗದು ಹಣ ಇರುತ್ತೆ.  & ಓಡಿ ಹೋದ ಆಸಾಮಿಯ ಹೆಸರು  ನರಸಿಂಹ @ ಉಗ್ರ, ಕೇಬಲ್ ಆಪರೇಟರ್ ಕೆಲಸ, ಬರಕನಹಾಳ್ ಗ್ರಾಮ ಎಂದು ಬಾತ್ಮಿದಾರರರಿಂದ ತಿಳಿದುಬಂದಿದ್ದು, ಸದರಿ ಆಸಾಮಿಗಳನ್ನು ಹಾಗೂ ಕಾನೂನು ಬಾಹಿರ ಇಸ್ಪೀಟ್ ಜೂಜಾಟಕ್ಕೆ ಪಣವಾಗಿ ಕಟ್ಟಿಕೊಂಡಿದ್ದ ಒಟ್ಟು 4250/- ರೂ ನಗದು ಹಣವನ್ನು ಇಸ್ಪೀಟ್ ಜೂಜಾಟಕ್ಕೆ ಬಳಿಸಿದ್ದ 52 ಇಸ್ಪೀಟ್ ಎಲೆಗಳನ್ನು ಹಾಗೂ ನೆಲಕ್ಕೆ ಹಾಸಿಕೊಂಡಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ಪಂಚರ ಸಮಕ್ಷಮ ಸಂಜೆ 4.30 ಗಂಟೆಯಿಂದ 5.30 ಗಂಟೆಯವರೆಗೆ ಲ್ಯಾಪ್ ಟಾಪ್ ಮೂಲಕ ಪಂಚನಾಮ ಕ್ರಮ ಜರುಗಿಸಿ ವಶಕ್ಕೆ ಪಡೆದು ಮೇಲ್ಕಂಡ ಆಸಾಮಿಗಳು ಮತ್ತು ಮಾಲಿನೊಂದಿಗೆ ವಾಪಸ್ ಠಾಣೆಗೆ ಬಂದು ಠಾಣಾಧಿಕಾರಿಯವರಿಗೆ ಪ್ರಕರಣ ದಾಖಲಿಸಲು  ಸೂಚಿಸಿ ನೀಡಿದ ಜ್ಞಾಪನದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಮಿಡಿಗೇಶಿ  ಪೊಲೀಸ್ ಠಾಣಾ ಮೊ.ನಂ-71/2018, ಕಲಂ: 78 ಕೆ.ಪಿ.ಆಕ್ಟ್.

ದಿನಾಂಕ:10/07/2018 ರಂದು ಠಾಣಾ ಸರಹದ್ದು ಗ್ರಾಮಗಳಲ್ಲಿ ಗುಪ್ತ ಮಾಹಿತಿ ಹಾಗೂ ಮಟ್ಕಾ, ಇಸ್ಪೀಟ್ ಜೂಜಾಟಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ನೇಮಿಸಿದ್ದ ಠಾಣಾ ಸಿಪಿಸಿ-288 ಪ್ರಕಾಶ್‌ ಜಿ.ಆರ್. ರವರು ಇದೇ ದಿನ ಸಂಜೆ 05:30 ಗಂಟೆಗೆ ವಾಪಸ್ಸ್ ಠಾಣೆಗೆ ಹಾಜರಾಗಿ, ಈ ದಿನ ಠಾಣಾಧಿಕಾರಿಯವರು ನನಗೆ ಮಿಡಿಗೇಶಿ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಗುಪ್ತ ಮಾಹಿತಿ ಹಾಗೂ ಮಟ್ಕಾ ಮತ್ತು ಇಸ್ಪೀಟ್ ಜೂಜಾಟಗಳ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡು ಬರುವಂತೆ ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ನಾನು ಮಿಡಿಗೇಶಿ, ನಲ್ಲೇಕಾಮನಹಳ್ಳಿ, ನಾರಪ್ಪನಹಳ್ಳಿ, ಬಿದರೆಕೆರೆ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ನಂತರ ಸಂಜೆ 05:00 ಗಂಟೆಯ ಸಮಯದಲ್ಲಿ ಮಿಡಿಗೇಶಿ ಹೋಬಳಿ, ಬೇಡತ್ತೂರು ಗ್ರಾಮಕ್ಕೆ ಹೋಗಿ ಗಸ್ತಿನಲ್ಲಿರುವಾಗ್ಗೆ, ಸದರಿ ಗ್ರಾಮದ ಸ್ಕೂಲ್‌ ಹತ್ತಿರ ಇರುವ ಜಗುಲಿಕಟ್ಟೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕರನ್ನು ಗುಂಪು  ಸೇರಿಸಿಕೊಂಡು 01  ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಇದು ಮಟ್ಕಾ ಜೂಜಾಟ ಬನ್ನಿ ಬನ್ನಿ ನಿಮ್ಮ ನಿಮ್ಮ ಅದೃಷ್ಟದ ನಂಬರ್‌ಗಳನ್ನು ಬರೆಸಿಕೊಳ್ಳಿ ಎಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ನಂಬರ್‌ ಬರೆದುಕೊಳ್ಳುತ್ತಾ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಸುತ್ತಿದ್ದಾನೆಂತ ಮಾಹಿತಿ ಬಂದಿರುತ್ತೆ ಆದ್ದರಿಂದ ಮುಂದಿನ ಕ್ರಮಕ್ಕಾಗಿ ಠಾಣೆಗೆ ವಾಪಸ್ಸಾಗಿ ನೀಡಿದ ವರದಿಯ ಅಂಶವಾಗಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 145/2018 ಕಲಂ 279,337 ಐಪಿಸಿ

 

ದಿನಾಂಕ:10-07-2018 ರಂದು ರಾತ್ರಿ 7-20 ಗಂಟೆಗೆ ಪಿರ್ಯಾದಿಯಾದ ನರಸಿಂಹಮೂರ್ತಿ,ಹೆಚ್ ಬಿನ್ ಲೇ|| ದಬಾಣ ನರಸಯ್ಯ, 65 ವರ್ಷ, ಆದಿ ಕರ್ನಾಟಕ ಜನಾಂಗ, ರಿಟೈರ್ಡ್‌ಟೀಚರ್‌, ಹೆಬ್ಬಾಕ, ಕಸಬಾ ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೇಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ದಿನಾಂಕ: 08-07-2018 ರಂದು ಬೆಳಗಿನ ಜಾವ ಸುಮಾರು 12-30 ಗಂಟೆ ಸಮಯದಲ್ಲಿ ನನ್ನ ಮಗನ ಸ್ನೇಹಿತನಾದ ಹನುಮಂತರಾಜು,ಕೆ,ಬಿ ರವರು ನನಗೆ ಪೋನ್‌ಮಾಡಿ ನಿಮ್ಮ ಮಗ ಚೇತನ್‌ಕುಮಾರ್‌,ಹೆಚ್,ಎನ್ ರವರಿಗೆ ಅಫಘಾತವಾಗಿದೆ. ತುಮಕೂರು ಹೇಮಾವತಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದೇವೆ ಎಂದು ತಿಳಿಸಿದರು. ನಂತರ ನಾನು ತುಮಕೂರಿನ ಹೇಮಾವತಿ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ಮಗ ಚೇತನ್‌ಕುಮಾರ್, ಹೆಚ್,ಎನ್ ರವರು ಅಫಘಾತವಾಗಿ ಎಡಗಾಲಿಗೆ ತೀವ್ರ ಸ್ವರೂಪದ ಗಾಯವಾಗಿರುವುದು ನಿಜವಾಗಿತ್ತು. ನಂತರ ನನ್ನ ಮಗ ಚೇತನ್‌ಕುಮಾರ್,ಹೆಚ್,ಎನ್ ರವರನ್ನು ಸದರಿ ಅಪಘಾತದ ಬಗ್ಗೆ ವಿಚಾರ ಮಾಡಲಾಗಿ, ದಿನಾಂಕ: 07-07-2018 ರಂದು ನನ್ನ ಮಗ ಚೇತನ್‌ಕುಮಾರ್‌,ಹೆಚ್,ಎನ್‌ ಹಾಗೂ ಆತನ ಸ್ನೇಹಿತನಾದ ಹನುಮಂತರಾಜು,ಕೆ,ಬಿ ಇಬ್ಬರೂ ಕೆಎ-06-ಇ.ಎನ್‌ 0376 ನೇ ದ್ವಿಚಕ್ರ ವಾಹನದಲ್ಲಿ ಹೆಬ್ಬೂರಿಗೆ ಮದುವೆಗೆಂದು ಹೋಗಿದ್ದು, ನಂತರ ವಾಪಸ್ ಹೆಬ್ಬೂರಿನಿಂದ ಹೆಬ್ಬಾಕ ಗ್ರಾಮಕ್ಕೆ ಬರಲು ದ್ವಿಚಕ್ರ ವಾಹನವನ್ನು ಹನುಮಂತರಾಜು,ಕೆ,ಬಿ ರವರು ಓಡಿಸಿಕೊಂಡು ರಾತ್ರಿ ಸುಮಾರು 11-00 ಗಂಟೆ ಸಮಯದಲ್ಲಿ ಬಾಣಾವರ ಗೇಟ್ ಬಳಿ ಬರುತ್ತಿರುವಾಗ್ಗೆ, ಹನುಮಂತರಾಜು,ಕೆ,ಬಿ ರವರು ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಬಾಣಾವರ ಗೇಟ್‌ನ ರಸ್ತೆಯ ತಿರುವಿನಲ್ಲಿ ಬೀಳಿಸಿ ಅಪಘಾತಪಡಿಸಿದನು. ಆಗ ಅಲ್ಲಿಯೇ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಹೆಬ್ಬೂರಿನ ಕಣಕುಪ್ಪೆ ಗ್ರಾಮದ  ಕೆ,ಸಿ,ನಾರಾಯಣಪ್ಪ ಹಾಗೂ ಹನುಮಂತರಾಜು,ಕೆ,ಬಿ ಇಬ್ಬರೂ ನನ್ನನ್ನು ಉಪಚರಿಸಿದ್ದು, ಹನುಮಂತರಾಜು,ಕೆ,ಬಿ ರವರಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದು ಯಾವುದೇ ಚಿಕಿತ್ಸೆಯನ್ನು ಪಡೆದಿರುವುದಿಲ್ಲ. ನಂತರ ಹನುಮಂತರಾಜು,ಕೆ,ಬಿ ನನ್ನನ್ನು ಸ್ಥಳಕ್ಕೆ ಬಂದ ಯಾವುದೋ ಒಂದು ವಾಹನದಲ್ಲಿ ತುಮಕೂರಿನ ಹೇಮಾವತಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದನೆಂದು ನನ್ನ ಮಗ ನನಗೆ ತಿಳಿಸಿದನು. ಆದ್ದರಿಂದ ಕೆಎ-06-ಇ.ಎನ್‌-0376 ನೇ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಈ ಅಪಘಾತಕ್ಕೆ ಕಾರಣನಾದ ಹನುಮಂತರಾಜು,ಕೆ,ಬಿ ರವರ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಾನು ನನ್ನ ಮಗನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರನ್ನು ನೀಡುತ್ತಿದ್ದೇನೆ. ಅಫಘಾತಕ್ಕೀಡಾದ ದ್ವಿಚಕ್ರ ವಾಹನವು ಬಾಣಾವರ ಗೇಟ್‌ನ ಬಳಿ ಇರುವ ಟೀ ಅಂಗಡಿಯ ಬಳಿ ನಿಲ್ಲಿಸಿರುತ್ತೆ ಎಂದು ನೀಡಿದ ದೂರನ್ನು ಪಡೆದು ಠಾಣಾ ಮೊ ನಂ 145/2018 ಕಲಂ 279,337 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಅಮೃತೂರು ಪೊಲೀಸ್ ಠಾಣಾ ಮೊನಂ-127/2018 ಕಲಂ-279, 337 ಐಪಿಸಿ

ದಿನಾಂಕ: 10-07-2018 ರಂದು ಸಂಜೆ 6-15 ಗಂಟೆಗೆ ಪಿರ್ಯಾದಿ ಪುಟ್ಟಸ್ವಾಮಿ ಬಿನ್ ಬೈರಯ್ಯ, 42 ವರ್ಷ, ಎ.ಕೆ ಜನಾಂಗ, ರಮೇಶ್ ಕುಮಾರ್ ಕೊಥಾರಿ ರವರ ಬಳಿ ರೈಟರ್ ಕೆಲಸ, ಸ್ವಂತ ಊರು: ಹುಣಸಿನಕೆರೆ ರಸ್ತೆ, ಮಿರ್ಜಾ ಮೊಹಲ್ಲಾ, 4ನೇ ಕ್ರಾಸ್, ಹಾಸನ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಈಗ್ಗೆ ಸುಮಾರು 15 ವರ್ಷಗಳಿಂದ ರಮೇಶ್ ಕುಮಾರ್ ಕೊಥಾರಿ ರವರು ಕಂಟ್ರಾಕ್ಟ್ ಕೆಲಸ ಮಾಡಿಸುವವರಾಗಿದ್ದು, ಅವರ ಬಳಿ ರೈಟರ್ ಕೆಲಸ ಮಾಡಿಕೊಂಡು ಇರುತ್ತೇನೆ. ದಿನಾಂಕ: 08-07-2018 ರಂದು ನಾನು ಮತ್ತು ನಮ್ಮ ಮಾಲಿಕ ರಮೇಶ್ ಕುಮಾರ್ ಕೊಥಾರಿ ರವರು ಅವರ ಬಾಬ್ತು ಕೆಎ-13, ಪಿ-198 ನೇ ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ಚಾಲಕನಾಗಿ ವಸಂತ್ ಕುಮಾರ್ ಬಿ ರವರೊಂದಿಗೆ ಹಾಸನದಿಂದ ಬೆಂಗಳೂರು ನಾರಾಯಣ ಹೃದಯಾಲಯಕ್ಕೆ ಹೋಗಿ ನಮ್ಮ ಮಾಲಿಕರಿಗೆ ಚಿಕಿತ್ಸೆ ಕೊಡಿಸಿ ಮರುದಿನ ದಿನಾಂಕ: 09-07-2018 ರಂದು ಸುಮಾರು ಮದ್ಯಾಹ್ನ 2-15 ಗಂಟೆಗೆ ಬೆಂಗಳೂರು ಬಿಟ್ಟು ಹಾಸನಕ್ಕೆ ಹೋಗಲು ಸಂಜೆ ಸುಮಾರು 4-15 ಗಂಟೆ ಸಮಯದಲ್ಲಿ ಎಡೆಯೂರು ಬಳಿ ಇರುವ ಬೆಂಗಳೂರು-ಹಾಸನ ಎನ್.ಹೆಚ್-75 ರಸ್ತೆಯಲ್ಲಿ ಶ್ರೀಸಿದ್ದಲಿಂಗೇಶ್ವರ ಪ್ಯೂಯೆಲ್ ಸ್ಟೇಶನ್ ಮುಂಭಾಗ ರಸ್ತೆಯಲ್ಲಿ ನಮ್ಮ ಕಾರಿನ ಚಾಲಕ ಅತಿವೇಗವಾಗಿ ಕಾರನ್ನು ಚಾಲನೆ ಮಾಡಿಕೊಂಡು ಹಾಸನ ಕಡೆ ಹೋಗುತ್ತಿದ್ದಾಗ ಕಾರಿನ ಹಿಂಭಾಗದ ಎಡಭಾಗದ ಚಕ್ರ ಬರಸ್ಟ್ ಆಗಿ ಕಾರು ನಿಯಂತ್ರಣಕ್ಕೆ ಸಿಗದೆ ರಸ್ತೆಯ ಎಡ ಪಕ್ಕ ಅಳವಡಿಸಿರುವ ಗ್ರಿಲ್ ಗಳಿಗೆ ಹೊಡೆದುಕೊಂಡು ಪಲ್ಟಿಯಾಗಿ ಕಾರು ಪೂರಾ ಜಖಂ ಆಗಿದ್ದು, ನಾನು ಕಾರಿನಿಂದ ಕೆಳಗಿಳಿದು ಚಾಲಕ ವಸಂತ್ ಕುಮಾರ್.ಬಿ ಮತ್ತು ನಮ್ಮ ಮಾಲಿಕ ರಮೇಶ್ ಕುಮಾರ್ ಕೊಥಾರಿರವರಿಗೆ ನೋಡಲಾಗಿ ಕಾರಿನ ಮುಂಭಾಗದ ಎಡಪಕ್ಕದ ಸೀಟಿನಲ್ಲಿ ಕುಳಿತಿದ್ದ ರಮೇಶ್ ಕುಮಾರ್ ಕೊಥಾರಿರವರಿಗೆ ಎಡಗಾಲಿನ ಮೊಣಕಾಲಿನ ಕೆಳಭಾಗದಲ್ಲಿ ಮೂಳೆ ಮುರಿದಿದ್ದು ಚಾಲಕ ವಸಂತ್ ಕುಮಾರ್.ಬಿ ರವರಿಗೆ ಎಡಕಣ್ಣಿನ ಹುಬ್ಬಿಗೆ ಎಡಕೆನ್ನೆಗೆ ಎದೆಯ ಮದ್ಯಭಾಗಕ್ಕೆ ಬಲಕೈ ಮೊಣಕೈಗೆ ಬಲಗಾಲ ಮಂಡಿಗೆ ತರಚಿದ ಗಾಯಗಳಾಗಿ ಮೂಗೇಟಾಗಿತ್ತು. ನನಗೆ ಯಾವುದೇ ಗಾಯಗಳಾಗಿರುವುದಿಲ್ಲ. ಆಗ ಅಲ್ಲಿನ ಸಾರ್ವಜನಿಕರ ಸಹಾಯದಿಂದ 108 ಅಂಬ್ಯುಲೆನ್ಸ್ ನಲ್ಲಿ ಎ.ಸಿ ಗಿರಿ ಆಸ್ಪತ್ರೆಗೆ ಹೋಗಿ ಕಾರಿನ ಚಾಲಕ ಮತ್ತು ಮಾಲಿಕರಿಗೆ ಪ್ರಥಮ ಚಿಕಿತ್ಸೆ ಕೊಡಿಸಿಕೊಂಡು ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಹೋಗಿ ನಮ್ಮ ಮಾಲಿಕರಿಗೆ ಚಿಕಿತ್ಸೆಗೆ ದಾಖಲಿಸಿ ಈ ದಿನ ತಡವಾಗಿ ಠಾಣೆಗೆ ಬಂದು ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ದೂರನ್ನು ನೀಡಿರುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ

ಹಂದನಕೆರೆ ಪೊಲೀಸ್ ಠಾಣಾ ಮೊ ನಂ:60/2018 ಕಲಂ 379  ಐಪಿಸಿ

ದಿನಾಂಕ:10/07/2018 ರಂದು ಬೆಳಗಿನ ಜಾವ 04.15 ಗಂಟೆಗೆ  ಪಿಸಿ-194 ಬಸವರಾಜುರವರು ಠಾಣೆಗೆ ಹಾಜರಾಗಿ ಕಂಪ್ಯೂಟರ್ ನಲ್ಲಿ ಟೈಪ್ ಮಾಡಿಕೊಟ್ಟ ವರದಿಯ ಸಾರಾಂಶವೇನೆಂದರೆ ದಿನಾಂಕ:09/07/2018 ರಂದು ಪಿರ್ಯಾದಿರವರು ಮತ್ತು ಪಿ.ಸಿ-373 ಶಂಕರಯ್ಯ ರವರು ರಾತ್ರಿ ಕರ್ತವ್ಯಕ್ಕೆ ರಾತ್ರಿ 8-00 ಗಂಟೆಗೆ ಠಾಣೆಗೆ ಹಾಜರಾಗಿ ಎಸ್‌‌.ಹೆಚ್‌.ಓ ರವರ ಆದೇಶದಂತೆ ನಡುವನಹಳ್ಳಿ ಕೆರೆ ಪಾಯಿಂಟ್‌ ಕರ್ತವ್ಯಕ್ಕೆ ನೇಮಕಗೊಂಡು ಸದರಿ ನಡುವನಹಳ್ಳಿ ಕೆರೆ ಹತ್ತಿರ ಹೋಗಿ ಗಸ್ತು ಮಾಡುತ್ತಿರುವಾಗ ದಿ:10/07/2018 ರಂದು ಸುಮಾರು ರಾತ್ರಿ 3-00 ಗಂಟೆಯಲ್ಲಿ ಕೆರೆಯ ಮದ್ಯಭಾಗದಲ್ಲಿ ಒಂದು ಟ್ರಾಕ್ಟರ್‌ ಮತ್ತು ಟ್ರೈಲರ್‌ ಗೆ ಯಾರೋ ಮರಳನ್ನು ತುಂಬುತ್ತಿರುವ ರೀತಿಯಲ್ಲಿ ಕಂಡು ಬಂದಿದ್ದರಿಂದ ಪಿರ್ಯಾದಿರವರು ಮತ್ತು ಪಿ.ಸಿ-373 ರವರು ಹತ್ತಿರ ಹೋಗಿ ನೋಡಲಾಗಿ ಮರಳು ತುಂಬುತ್ತಿದ್ದ ಟ್ರಾಕ್ಟರ್‌ ಮತ್ತು ಟ್ರೈಲರ್ ನ್ನು ಅದರ ಚಾಲಕ ಟ್ರಾಕ್ಟರ್ ನನ್ನು ಸ್ಪಾರ್ಟ್ ಮಾಡುತ್ತಿದ್ದರಿಂದ ನಾನು ಮತ್ತು ಪಿಸಿ-373 ರವರು  ಟ್ರಾಕ್ಟರ್ ಚಾಲಕನನ್ನು ಅಡ್ಡ ಗಟ್ಟಿ ನಿಲ್ಲಿಸಿ ಓಡಿ ಹೋಗಲು ಪ್ರಯತ್ನಪಟ್ಟ ಚಾಲಕನನ್ನು ಹಿಡಿದು ವಿಚಾರ ಮಾಡಲಾಗಿ ಹೆಸರು ದೇವರಾಜು ಬಿನ್ ಓಬ್ಯನಾಯ್ಕ್, 37 ವರ್ಷ, ಡ್ರೈವರ್ ಕೆಲಸ, ಲಂಬಾಣಿ ಜನಾಂಗ, ಕಿಡುಕನಹಳ್ಳಿ ಎಂದು ತಿಳಿಸಿದ್ದು ಟ್ರಾಕ್ಟರ್‌ ಮಾಲೀಕನ ಬಗ್ಗೆ ಕೇಳಲಾಗಿ ನಮ್ಮ ತಂದೆಯಾದ  ಓಬ್ಯನಾಯ್ಕ್  ಬಿನ್ ತೇಜ್ಯನಾಯ್ಕ್, ಕಿಡುಕನಹಳ್ಳಿ ಎಂದು ತಿಳಿಸಿದರು. ನಂತರ ದೇವರಾಜು ರವರಿಗೆ ನಿನ್ನ ಟ್ರಾಕ್ಟರ್ ಗೆ  ಮರಳು ತುಂಬಲು ಯಾವುದೇ ಪರವಾನಗಿ ಇದ್ದರೆ ತೋರಿಸಲು ನಾವುಗಳು ಕೇಳಲಾಗಿ ದೇವರಾಜು ರವರು ಯಾವುದೇ ಪರವಾನಗಿ ಇಲ್ಲವೆಂದು ಮತ್ತು ನೆನ್ನೆ ದಿನ ಅಂದರೆ ದಿ:09/07/2018 ರಂದು ಸಂಜೆ ಸುಮಾರು 7-00 ಗಂಟೆಯಲ್ಲಿ  ನಾನು ಮತ್ತು ನನ್ನ ತಂದೆಯವರು ನಡುವನಹಳ್ಳಿ ಕೆರೆಗೆ ಬಂದು ಯಾರಿಗೂ ಗೊತ್ತಿಲ್ಲದಂತೆ ಕೆರೆಯ ಮರಳನ್ನು ಮಣ್ಣಿನಿಂದ ಬೇರ್ಪಡಿಸಿ ಒಂದಂಡೆಗೆ ಸಂಗ್ರಹಿಸಿ ಹೋಗಿದ್ದನ್ನು ಈ ದಿನ ರಾತ್ರಿ ನಾನು ಮತ್ತು ನಮ್ಮ ತಂದೆಯವರು ಬಂದು ಟ್ರಾಕ್ಟರ್‌ ಮತ್ತು ಟ್ರೈಲರ್ ಗೆ ತುಂಬಿ ತೆಗೆದುಕೊಂಡು ಹೊರಟಿದ್ದು ನಮ್ಮ ತಂದೆಯವರು ತಾವುಗಳು ಬರುವುದಿಕ್ಕಿಂತ ಮುಂಚೆ ಗುದ್ದಲಿ ಬಾಲ್ಡಿ ತೆಗೆದುಕೊಂಡು ಹೋದರು ಎಂದು ತಿಳಿಸಿದ ಮೇರೆಗೆ ಟ್ರಾಕ್ಟರ್ ಮತ್ತು ಟ್ರೈಲರ್‌ ನೋಡಲಾಗಿ ಕೆಎ-44 ಟಿಎ-0770 ಮತ್ತು ಕೆಎ-44 ಟಿಎ-0771 ನೇ ನೋಂದಣಿ ಸಂಖ್ಯೆ ಇರುವ  ನೀಲಿ ಬಣ್ಣದ ಪವರ್ ಟ್ರಕ್ ಟ್ರಾಕ್ಟರ್ ಮತ್ತು ನೀಲಿ ಬಣ್ಣದ ಟ್ರೈಲರ್ ಗೆ ಬಾಡಿ ಲೇವಲ್ ಗೆ ಮರಳು ತುಂಬಿರುತ್ತೆ. ಆದ್ದರಿಂದ  ಸದರಿಯವರು ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೇ ಕಳ್ಳತನದಿಂದ ಅಕ್ರಮ ಹಣ ಸಂಪಾದನೆಗಾಗಿ ತಮ್ಮ ತಂದೆ ಓಬ್ಯನಾಯ್ಕ್ ರವರ ಮಾಲೀಕತ್ವದ ಕೆಎ-44 ಟಿಎ-0770 ಟ್ರಾಕ್ಟರ್‌ ಮತ್ತು ಕೆಎ-44 ಟಿಎ-0771 ನೇ ಟ್ರೈಲರ್‌ ಗೆ ನಡುವನಹಳ್ಳಿ ಕೆರೆಯಲ್ಲಿ ಮರಳು ತುಂಬಿರುವುದರಿಂದ ಮೇಲ್ಕಂಡ ಟ್ರಾಕ್ಟರ್ ಚಾಲಕ ದೇವರಾಜು ನಾಯ್ಕ್, ಮರಳು ತುಂಬಿದ ಟ್ರಾಕ್ಟರ್ ಮತ್ತು ಟ್ರೈಲರ್ ನ್ನು ಠಾಣೆಗೆ ಹಾಜರುಪಡಿಸಿ ನೀಡಿದ  ವರದಿ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತದೆ.

ಹಂದನಕೆರೆ ಪೊಲೀಸ್ ಠಾಣಾ ಮೊ ನಂ:60/2018 ಕಲಂ 323,324,504,506 rw 34 IPC

ದಿನಾಂಕ:10/07/2018 ರಂದು  ಸಂಜೆ 05.15 ಗಂಟೆಗೆ ಪಿರ್ಯಾದಿ  ಚಿ.ನಾ ಹಳ್ಳಿ ತಾಲ್ಲೂಕ್ ಕಂದಿಕೆರೆ ಗ್ರಾಮದ ವಾಸಿ ಶಾಂತಮ್ಮ ಕೋಂ ತೀರ್ಥಕುಮಾರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು 03 ತಿಂಗಳ ಹಿಂದೆ ಕಂದಿಕೆರೆ ವಾಸಿ  ತೀರ್ಥಕುಮಾರ್ ರವರನ್ನು ಮದುವೆಯಾಗಿದ್ದು ಈ ಮದುವೆ ನಮ್ಮ ಮನೆಯವರಿಗೆ ಇಷ್ಟ ಇಲ್ಲದಿದ್ದುದರಿಂದ ತನ್ನ ಗಂಡನೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿರುತ್ತಾರೆ ಪಿರ್ಯಾದಿರವರಿಗೆ ಅಂಕಪಟ್ಟಿಯ /ಅವಶ್ಯಕತೆಯಿದ್ದುದರಿಂದ ಅಂಕಪಟ್ಟಿ ತರಲು ತವರು ಮನೆಗೆ ದಿನಾಂಕ:05/07/2018 ರಂದು ರಾತ್ರಿ ಸುಮಾರು 09.30 ರ ಸಮುಯದಲ್ಲಿ ಮಾದಾಪುರದ ತಮ್ಮ ಮನೆಯ ಬಳಿ  ಹೋಗಿದ್ದಾಗ ಪಿರ್ಯಾದರಿವರ ಅಕ್ಕನ ಗಂಡ ಬಿ.ಸಿ ತಿಮ್ಮರಾಜು ಪಿರ್ಯಾದಿರವರನ್ನು ಒಳಕ್ಕೆ ಬರಬೇಡ ಎಂದು ತಡೆದಾಗ ಪಿರ್ಯಾದಿರವರ  ತಂದೆ ಈಶ್ವರಯ್ಯ ನೀನು  ಯಾಕೆ ಇಲ್ಲಿಗೆ ಬಂದೆ ಸೂಳೆ ಮುಂಡೆ, ನನ್ನ ಮರ್ಯಾದೆ ತೆಗೆದು ಹೋದೆ ಎಂದು ಅವಾಚ್ಯ ಶಬ್ದಗಳಿಂದ  ಬೈಯ್ಯುತ್ತಿದ್ದಾಗ ಪಿರ್ಯಾದಿರವರ ಅಕ್ಕ ಜ್ಯೋತಿ ಎಡಮಟ್ಟೆಯಿಂದ ಬೆನ್ನಿಗೆ ಹೊಡೆದರು. ಪಿರ್ಯಾದಿರವರ ಅಕ್ಕ ಪುಷ್ಪಾವತಿ ಕೈಯ್ಯಿಂದ ಹೊಡೆಯುವಾಗ ಭಾವ ತಿಮ್ಮರಾಜು ಸಹ ಪಿರ್ಯಾದಿರವರ ಮೈಕೈಗೆ ಕೈಗಳಿಂದ ಹೊಡೆದು ನೋವುಂಟು ಮಾಡಿದರು. ನಂತರ ಎಲ್ಲರೂ ಸೇರಿ ನೀನು ಬೆಂಗಳೂರಿಗೆ ಹೋದರು ಸರಿ ನಿನ್ನನ್ನು ಇಷ್ಟಕ್ಕೆ ಬಿಡುವುದಿಲ್ಲ ಒಂದು ಗತಿ ಕಾಣಿಸುತ್ತೇವೆ ಎಂದು ಎಲ್ಲರೂ ಜೀವ ಬೆದರಿಕೆ  ಹಾಕಿದ್ದು ಅಷ್ಟರಲ್ಲಿ  ಪಿರ್ಯಾದಿರವರ ತಾಯಿ ಶಿವಲಿಂಗಮ್ಮ ಮತ್ತು ಪಿರ್ಯಾದಿರವರ ಚಿಕ್ಕಪ್ಪ ನಿಂಗರಾಜು ಬಂದು ಕೆಳಗೆ ಬಿದ್ದಿದ್ದ ಪಿರ್ಯಾದಿರವರನ್ನು ಉಪಚರಿಸಿ ತಕ್ಷಣ ಬೆಂಗಳೂರಿಗೆ ಕಳುಹಿಸಿಕೊಟ್ಟರು. ಪಿರ್ಯಾದಿರವರ ಸಂಬಂಧಿಕರು ತಂದೆ ಮಕ್ಕಳಾಗಿದ್ದರಿಂದ ರಾಜಿ ಮಾಡೋಣ ಎಂದು ತಿಳಿಸಿದ್ದರಿಂದ ಸುಮ್ಮನಿದ್ದು ನಂತರ ಪಿರ್ಯಾದಿರವರಿಗೆ ನೋವಾಗಿದ್ದರಿಂದ ಚಿಕ್ಕನಾಯಕನಹಳ್ಳಿ  ಆಸ್ಪತ್ರೆಯಲ್ಲಿ ತೋರಿಸಿ ತಮ್ಮ ತಂದೆಯವರ ಕಡೆಯವರು ನ್ಯಾಯಕ್ಕೆ  ಬಾರದೇ ಇದ್ದುದರಿಂದ ಮುಖಂಡರ ಸಲಹೆಯಂತೆ  ತನ್ನ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುವ  ಮೇಲ್ಕಂಡವರ ಮೇಲೆ  ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರಕರಣ.

ಜಯನಗರ ಪೊಲೀಸ್ ಠಾಣಾ ಮೊ.ನಂ.97/2018 ಕಲಂ 379 ಐಪಿಸಿ

ದಿನಾಂಕ: 10-07-2018 ರಂದು ಮದ್ಯಾಹ್ನ 12-00  ಗಂಟೆಗೆ ತುಮಕೂರು, ದೇವನೂರು ವಾಸಿ ಮನೋಜ್‌ ಕುಮಾರ್ ಬಿನ್ ಚಿಟ್ಟಿಬಾಬು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ: 02/07/2018 ರಂದು ರಾತ್ರಿ ನನ್ನ ದ್ವಿಚಕ್ರ ವಾಹನ KA06EL5680 Honda Activa  ರಲ್ಲಿ ಊಟ ಮಾಡಲು ಉಪ್ಪಾರಹಳ್ಳಿ ಮುಖ್ಯರಸ್ತೆಯಲ್ಲಿ ಇರುವ ಶ್ರೀ ಶ್ರೀನಿವಾಸ ಬಾರ್ & ರೆಸ್ಟೋರೆಂಟ್ ಗೆ ರಾತ್ರಿ 8-00 ಗಂಟೆ ಸಮಯದಲ್ಲಿ ನನ್ನ ವಾಹನವನ್ನು ಬಾರ್‌ ಮತ್ತು ರೆಸ್ಟೋರೆಂಟ್ ಮುಂದೆ ನಿಲ್ಲಿಸಿ ಒಳಗಡೆ ಊಟಕ್ಕೆ ಹೋಗಿ ಊಟ ಮುಗಿಸಿಕೊಂಡು ರಾತ್ರಿ ಸುಮಾರು 9-30 ಗಂಟೆ ಸುಮಾರಿನಲ್ಲಿ ನಾನು ನಿಲ್ಲಿಸಿದ್ದ ವಾಹನದ ಬಳಿ ಹೋಗಿ ನೋಡಲಾಗಿ ವಾಹನವು ಇರಲಿಲ್ಲ.  ನಾನು ಮತ್ತು ಸ್ನೇಹಿತರು ಎಲ್ಲಾ ಕಡೆಯಲ್ಲಿ ಹುಡುಕಾಡಿದ್ದು ಪತ್ತೆಯಾಗಲಿಲ್ಲ.  ನಂತರ ವಾಹನವನ್ನು ಬೇರೆ ಯಾರಾದರೂ ತೆಗೆದುಕೊಂಡು ಹೋಗಿರಬಹುದು ಎಂದು ರಾತ್ರಿ 11-00 ಗಂಟೆವರೆಗೂ ನೋಡಿದೆವು. ವಾಹನ ಪತ್ತೆಯಾಗಿರುವುದಿಲ್ಲ.  ವಾಹನದ ಬೆಲೆ ಸುಮಾರು 20,000 ರೂ ಆಗಿದ್ದು, ಕಳುವಾಗಿರುವ ನನ್ನ ವಾಹನವನ್ನು ಪತ್ತೆ ಮಾಡಿಕೊಡಲು ಕೋರಿ ನೀಡಿರುವ ದೂರಿನ ಅಂಶವಾಗಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 81 guests online
Content View Hits : 304500