lowborn ಅಪರಾಧ ಘಟನೆಗಳು 01-07-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 01-07-18

ಹುಳಿಯಾರು ಪೊಲೀಸ್ ಠಾಣಾ ಯು.ಡಿ.ಆರ್ ನಂ:11/2018, ಕಲಂ: 174 ಸಿ.ಆರ್.ಪಿ.ಸಿ.

ದಿನಾಂಕ:-01/07/2018 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದುದಾರರಾದ ನಳಿನಾಕ್ಷಿ ಕೋಂ ಕಲ್ಲೇಗೌಡ, 43 ವರ್ಷ, ಲಿಂಗಾಯತರು, ಭಟ್ಟರಹಳ್ಳಿ, ಹುಳಿಯಾರು ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನನ್ನ ಗಂಡ ಕಲ್ಲೇಗೌಡ ಬಿನ್ ವೀರಭದ್ರಯ್ಯ ( 46 ವರ್ಷ) ರವರು ವ್ಯವಸಾಯ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇವೆ. ನಮಗೆ ಜೀವಿತಾ ಎಂಬ 13 ವರ್ಷದ ಹೆಣ್ಣು ಮಗಳು ಇರುತ್ತಾಳೆ. ನಮ್ಮ ಮನೆಯಲ್ಲಿ ನಾನು, ನನ್ನ ಗಂಡ, ನನ್ನ ಮಗಳು, ಹಾಗೂ ನನ್ನ ಅತ್ತೆ ಲಕ್ಷ್ಮಿದೇವಮ್ಮ ರವರು ವಾಸವಿರುತ್ತೇವೆ, ನನ್ನ ಗಂಡ ಕಲ್ಲೇಗೌಡ ರವರು ಈಗ್ಗೆ ಸುಮಾರು 3 ವರ್ಷಗಳ ಹಿಂದೆ ಕಾವೇರಿ ಗ್ರಾಮೀಣ ಬ್ಯಾಂಕ್‌ ನಲ್ಲಿ 3 ಲಕ್ಷ ಬೆಳೆಸಾಲ, ಸುಮಾರು 1 ವರ್ಷದ ಹಿಂದೆ ಒಡವೆಗಳನ್ನು ಇದೆ ಬ್ಯಾಂಕಿನಲ್ಲಿ ಇಟ್ಟು 2 ಲಕ್ಷ ಸಾಲವನ್ನು ತೆಗೆದು ಕೊಂಡಿದ್ದರು. ಈ ಸಾಲವನ್ನು ತೀರಿಸಲು ಹಲವಾರು ಕಡೆ ಕೈಸಾಲವನ್ನು ಮಾಡಿಕೊಂಡಿದ್ದರು ಸಹ ಸಾಲವನ್ನು ತೀರಿಸಲು ಸಾಧ್ಯವಾಗಿರುವುದಿಲ್ಲ. ಏನಾದರೂ ಮಾಡಿ ಸಾಲವನ್ನು ತೀರಿಸೋಣವೆಂತಾ ಈಗ್ಗೆ ಸುಮಾರು 8 ತಿಂಗಳ ಹಿಂದೆ ತಿಪಟೂರು ಚೋಳನ್ ಪೈನಾನ್ಸ್ ನಿಂದ ಟ್ರ್ಯಾಕ್ಟರ್ ತೆಗೆದುಕೊಂಡಿದ್ದು, ಟ್ಯ್ರಾಕ್ಟರನಲ್ಲಿ ಕೆಲಸ ಮಾಡಿಸಲು ಮಳೆಗಾಲ ಇಲ್ಲದರಿಂದ ಇದರಿಂದ ಯಾವುದೇ ಆದಾಯ ಬರದೇ ಇದ್ದು ಸಾಲ ಹೆಚ್ಚಾಗಿದ್ದು ಯಾವುದೇ ಸಾಲವನ್ನು  ತೀರಿಸಲು ಆಗಿರುವುದಿಲ್ಲ. ನನ್ನ ಗಂಡ ಕಲ್ಲೇಗೌಡ ರವರು ಹೀಗೆ ಸುಮಾರು ದಿನಗಳ ಹಿಂದೆ ನನಗೆ ಸಾಲವನ್ನು ತೀರಿಸಲು ಆಗುತ್ತಿಲ್ಲ ಬಡ್ಡಿ ಹೆಚ್ಚಾಗುತ್ತಿದ್ದು ಸಂಸಾರ ನಡೆಸಲು ಆಗುತ್ತಿಲ್ಲ. ನಾನು ಸಾಯುತ್ತೇನೆ ಎಂತಾ ಆಗಾಗ್ಗೆ ಹೇಳುತ್ತಿದ್ದರು. ನಾನು ಅವರಿಗೆ ಸಮಾಧಾನ ಮಾಡುತ್ತಿದ್ದೆನು. ದಿನಾಂಕ  30-06-2018 ರಂದು ಬೆಳಗ್ಗೆ ಸುಮಾರು 11-30 ಗಂಟೆ ಸಮಯದಲ್ಲಿ ನನ್ನ ಗಂಡ ಕಲ್ಲೇಗೌಡ ರವರು ಯಾವೂದೂ ಕೆಲಸಕ್ಕಾಗಿ ಯಳನಡುವಿಗೆ ಹೋಗುತ್ತೇನೆಂದು ಮನೆಯಿಂದ ಹೋಗಿದ್ದರು. ಆ ದಿನ ರಾತ್ರಿಯಾದರು ಸಹ ನನ್ನ ಗಂಡ ಮನೆಗೆ ಬಂದಿರುವುದಿಲ್ಲ. ನಾನು ಈ ವಿಚಾರವನ್ನು ನಾನು ನನ್ನ ಸಂಬಂದಿಕರಿಗೆ ತಿಳಿಸಿದ್ದೆನು. ದಿನಾಂಕ 01-07-2018 ರಂದು ಬೆಳಗ್ಗೆ ಸುಮಾರು 08-00 ಗಂಟೆ ಸಮಯದಲ್ಲಿ ಮನೆಯ ಬಳಿ ಇದ್ದಾಗ, ನಮ್ಮ ಗ್ರಾಮದ ಜಗದೀಶ ರವರು ಮನೆ ಬಳಿ ಬಂದು ನಿನ್ನ ಗಂಡ ಕಲ್ಲೇಗೌಡ ರವರು ಊರ ಪಕ್ಕ ಇರುವ ನಿಮ್ಮ ಜಮೀನಿನಲ್ಲಿ ಸತ್ತು ಹೋಗಿದ್ದಾರೆ ಅಂತಾ ತಿಳಿಸಿದ್ದರು. ನಾನು ತಕ್ಷಣ ನನ್ನ ಸಂಬಂದಿಕರೊಂದಿಗೆ ಜಮೀನಿಗೆ ಹೋಗಿ ನೋಡಲಾಗಿ ನನ್ನ ಗಂಡ ಮೃತಪಟ್ಟಿದ್ದು, ಶವದ ಮೇಲೆ ಯಾವುದೇ ಗಾಯಗಳು ಕಂಡು ಬಂದಿರುದಿಲ್ಲ. ನನ್ನ ಗಂಡ ಕಲ್ಲೇಗೌಡ ರವರು ದಿನಾಂಕ 30-06-2018 ರಂದು ಬೆಳಗ್ಗೆ ಮನೆಯಿಂದ ಹೋದವರು ಎಲ್ಲಿಯೋ ಯಾವುದೋ ಸಮಯದಲ್ಲಿ ತನಗೆ ಇದ್ದ ಸಾಲವನ್ನು ತೀರಿಸಲು ಸಾದ್ಯವಾಗದೇ ಜಿಗುಪ್ಸೆಗೊಂಡು ಸಾಯಲು ತಿರ್ಮಾನಿಸಿ ಯಾವುದೋ ವಿಷವನ್ನು ಕುಡಿದು ಮೃತಪಟ್ಟಿರುತ್ತಾರೆ. ನನ್ನ ಗಂಡನ ಸಾವಿನಲ್ಲಿ ಬೇರೆ ಯಾವುದೇ ಅನುಮಾನಗಳು ಇರುವುದಿಲ್ಲ. ಆದ್ದರಿಂದ ತಾವುಗಳು ಮುಂದಿನ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ ಎಂತಾ ನೀಡಿದ ದೂರಿನ ಮೇರೆಗೆ ಯು.ಡಿ ಪ್ರಕರಣ ದಾಖಲಿಸಿರುತ್ತೆ.  .

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ - 101/2018 ಕಲಂ: 279,304(A) IPC

ದಿನಾಂಕ: 01/07/2018 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿ ಹರೀಶ್‌ ಟಿ.ಎನ್‌ ಬಿನ್‌ ಕೆ.ಪಿ ನಾಗರಾಜಶೆಟ್ಟಿ, 48 ವರ್ಷ, ಅರ್ಯವೈಶ್ಯ ಜನಾಂಗ, ದಿನಸಿ ಅಂಗಡಿ ವ್ಯಾಪಾರ, ಸಿ.ಬಿ ಕಾಂಪೌಂಡ್‌, ಸಂತೆಪೇಟೆ, ತಿಪಟೂರು ಟೌನ್‌ ರವರು ನೀಡಿರುವ ದೂರಿನ ಅಂಶವೇನೆಂದರೆ, ನನ್ನ ಚಿಕ್ಕಪ್ಪ ಕೆ.ಪಿ ವೆಂಕಟೇಶ್‌‌ಬಾಬು ರವರಿಗೆ ಸಂಜಯ್‌ ಎಂಬ ಮಗ, ಮತ್ತೊಬ್ಬ ಹಿರಿಯ ಮಗ ಸುಜಯ್‌ ಇದ್ದು, ಸಂಜಯ್‌ ಎಲೆಕ್ಟ್ರಾನಿಕ್ಸ್‌ ವ್ಯಾಪಾರ ಮಾಡುತ್ತಿದ್ದ, ದಿನಾಂಕ:23-06-2018 ರಂದು ತನ್ನ ಬಾಬ್ತು DUKE KTM BIKE ನಲ್ಲಿ ಕೊನೆಹಳ್ಳಿಗೆ ಒಬ್ಬನೆ ಹೋಗಿ ವಾಪಸ್‌ ಬರುವಾಗ ಬೆಳಗ್ಗೆ ಸುಮಾರು 10-15 ಗಂಟೆ ಸಮಯದಲ್ಲಿ ತಿಪಟೂರು - ಅರಸಿಕೆರೆ ರಸ್ತೆಯ ಉತ್ಸವ ಡಾಬಾ ದಿಂದ ಸ್ವಲ್ಪ ಮುಂದೆ ಸೇತುವೆ ಹತ್ತಿರ ಸಂಜಯ್‌‌ ತನ್ನ ಬೈಕ್‌ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯ ಲೈಟ್‌ ಕಂಬಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ತಲೆಗೆ ಪೆಟ್ಟು ಬಿದ್ದು ಹೆಚ್ಚಿನ ರಕ್ತ ಸ್ರಾವವಾಗಿ ಚಿಕಿತ್ಸೆಗಾಗಿ ಅದೇ ದಿನ ತುಮಕೂರಿನ ಸಿದ್ದಗಂಗಾ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 01/07/2018 ರಂದು ಬೆಳಗಿನ ಜಾವ ಸುಮಾರು 03 ಗಂಟೆ ಸಮಯದಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಈ ಅಪಘಾತಕ್ಕೆ ಆತನ ನಿರ್ಲಕ್ಷ ಚಾಲನೆಯೆ ಕಾರಣವಾಗಿರುತ್ತೆ. ಆದ್ದರಿಂದ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಡವಾಗಿ ಬಂದು ದೂರು ನೀಡಿರುತ್ತೇನೆ. ಬೈಕ್‌ಗೆ ರಿಜಿಸ್ಟ್ರೇಷನ್‌ ಆಗಿದ್ದು, ನಂಬರ್‌ ಬರೆಸಿರಲಿಲ್ಲ ಎಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 138/2018 ಕಲಂ 323, 354(ಎ), 504, 506 ರೆ/ವಿ 34 ಐ,ಪಿ,ಸಿ

ದಿನಾಂಕ: 01-07-2018 ರಂದು ಮದ್ಯಾಹ್ನ 12-30 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಹೊನ್ನಮ್ಮ ಕೋಂ ವೀರಣ್ಣ,ಆರ್, 65 ವರ್ಷ, ಲಿಂಗಾಯಿತರು, ತೊಂಡಗೆರೆ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಮ್ಮ ಗ್ರಾಮದ ವಾಸಿಗಳೇ ಆದ ಮಂಗಳಪ್ರಭ ರವರ ತಂದೆ ಚಂದ್ರಶೇಖರಯ್ಯ ರವರಿಗೂ ನಮಗೂ ಆಸ್ತಿ ವಿಚಾರವಾಗಿ ದಾವೆಗಳು ಸಿವಿಲ್ ನ್ಯಾಯಾಲಯದಲ್ಲಿದ್ದು, ಮಂಗಳಪ್ರಭ ರವರ ತಮ್ಮನಾದ ಗುರುಪ್ರಸಾದ್ ರವರು ಪ್ರತಿಯೊಂದು ದಾವೆಯಲ್ಲೂ ಒಂದೊಂದು ಹೆಸರನ್ನು ಕೊಟ್ಟಿರುತ್ತಾರೆ. ಈ ವಿಷಯವಾಗಿ ಸದರಿ ಗುರುಪ್ರಸಾದ್ ರವರು ಶಾಲಾ ದಾಖಲೆಯಲ್ಲಿ ಯಾವ ಹೆಸರನ್ನು ಕೊಟ್ಟಿದ್ದಾರೆಂದು ತಿಳಿದುಕೊಳ್ಳಲು ದಿನಾಂಕ: 29-06-2018 ರಂದು ಮದ್ಯಾಹ್ನ ಸುಮಾರು 12-00 ಗಂಟೆ ಸಮಯದಲ್ಲಿ ನನ್ನ ಗಂಡ ವೀರಣ್ಣ ನಮ್ಮ ಗ್ರಾಮದ ಸರ್ಕಾರಿ ಶಾಲೆಯ ಬಳಿ ಹೋದಾಗ ಸೋಮಶೇಖರ್‌, ಮಂಗಳಪ್ರಭ ಮತ್ತು ಬೋಜರಾಜು ರವರುಗಳು ನನ್ನ ಗಂಡ ವೀರಣ್ಣ ರವರಿಗೆ ಹೊಡೆಯುತ್ತಿದ್ದಾರೆಂದು ನರಸಿಂಹಮೂರ್ತಿ ನಮ್ಮ ಮನೆಯ ಬಳಿ ಬಂದು ತಿಳಿಸಿದರು. ನಾನು ಕೂಡಲೇ ನಮ್ಮ ಗ್ರಾಮದ ಸರ್ಕಾರಿ ಶಾಲೆಯ ಬಳಿ ಹೋಗಿ ನೋಡಲಾಗಿ ಸೋಮಶೇಖರ್‌, ಮಂಗಳಪ್ರಭ ರವರುಗಳು ನನ್ನ ಗಂಡ ವೀರಣ್ಣ ರವರನ್ನು ನೆಲಕ್ಕೆ ಕೆಡವಿಕೊಂಡು ಕಾಲಿನಿಂದ ಒದೆಯುತ್ತಿದ್ದರು. ಅಲ್ಲಿಗೆ ಹೋದ ನನ್ನನ್ನು ಕಂಡ ಕೂಡಲೇ ಮಂಗಳಪ್ರಭ ರವರು ನನ್ನನ್ನು ಕುರಿತು ಇವಳಿಗೆ ಕಲ್ಲು ಎತ್ತಿ ಹಾಕಿ ಸಾಯಿಸೋ ಎಂದು ಅವರ ಮಗ ಬೋಜರಾಜು ನಿಗೆ ಹೇಳಿದಳು. ಸೋಮಶೇಖರ್‌ ನನ್ನ ಸೀರೆ ಎಳೆದು ಹರಿದರು. ಅಷ್ಟರಲ್ಲಿ ಬೋಜರಾಜು ಒಂದು ಸೈಜು ಕಲ್ಲನ್ನು ಎತ್ತಿಕೊಂಡು ಓಡಿ ಬರುತ್ತಿದ್ದ. ಆಗ ಅಲ್ಲಿಯೇ ಇದ್ದ ಸದರಿ ಗಲಾಟೆಯನ್ನು ಕಣ್ಣಾರೆ ಕಂಡ ತಿಮ್ಮಾಚಾರ್‌,ಟಿ,ಆರ್ ಹಾಗೂ ನರಸಿಂಹಮೂರ್ತಿ ಎಂಬುವರು ಬೋಜರಾಜು ಬಳಿ ಇದ್ದ ಸೈಜು ಕಲ್ಲನ್ನು ಕಿತ್ತುಕೊಂಡರು. ನನ್ನ ಗಂಡನಿಗೆ ಕೈಗಳಿಂದ ಹೊಡೆದು, ಕಾಲಿನಿಂದ ಒದ್ದಿದ್ದರಿಂದ ಅವರಿಗೆ ಎದೆಯ ಭಾಗಕ್ಕೆ, ಬೆನ್ನಿಗೆ ಮತ್ತು ತಲೆಗೆ ಏಟು ಬಿದ್ದಿದ್ದರಿಂದ ತಕ್ಷಣ ಹೆಬ್ಬೂರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಿದೆವು. ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿರುತ್ತೇವೆ. ಈ ಕಾರಣಕ್ಕಾಗಿ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ಆದ್ದರಿಂದ ಮೇಲ್ಕಂಡವರುಗಳ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ. 101/2018 ಕಲಂ : 279, 304(A) IPC

ದಿನಾಂಕ: 01/07/2018 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿ ಹರೀಶ್‌ ಟಿ.ಎನ್‌ ಬಿನ್‌ ಕೆ.ಪಿ ನಾಗರಾಜಶೆಟ್ಟಿ, 48 ವರ್ಷ, ಅರ್ಯವೈಶ್ಯ ಜನಾಂಗ, ದಿನಸಿ ಅಂಗಡಿ ವ್ಯಾಪಾರ, ಸಿ.ಬಿ ಕಾಂಪೌಂಡ್‌, ಸಂತೆಪೇಟೆ, ತಿಪಟೂರು ಟೌನ್‌ ರವರು ನೀಡಿರುವ ದೂರಿನ ಅಂಶವೇನೆಂದರೆ, ನನ್ನ ಚಿಕ್ಕಪ್ಪ ಕೆ.ಪಿ ವೆಂಕಟೇಶ್‌‌ಬಾಬು ರವರಿಗೆ ಸಂಜಯ್‌ ಎಂಬ ಮಗ, ಮತ್ತೊಬ್ಬ ಹಿರಿಯ ಮಗ ಸುಜಯ್‌ ಇದ್ದು, ಸಂಜಯ್‌ ಎಲೆಕ್ಟ್ರಾನಿಕ್ಸ್‌ ವ್ಯಾಪಾರ ಮಾಡುತ್ತಿದ್ದ, ದಿನಾಂಕ:23-06-2018 ರಂದು ತನ್ನ ಬಾಬ್ತು DUKE KTM BIKE ನಲ್ಲಿ ಕೊನೆಹಳ್ಳಿಗೆ ಒಬ್ಬನೆ ಹೋಗಿ ವಾಪಸ್‌ ಬರುವಾಗ ಬೆಳಗ್ಗೆ ಸುಮಾರು 10-15 ಗಂಟೆ ಸಮಯದಲ್ಲಿ ತಿಪಟೂರು - ಅರಸಿಕೆರೆ ರಸ್ತೆಯ ಉತ್ಸವ ಡಾಬಾ ದಿಂದ ಸ್ವಲ್ಪ ಮುಂದೆ ಸೇತುವೆ ಹತ್ತಿರ ಸಂಜಯ್‌‌ ತನ್ನ ಬೈಕ್‌ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯ ಲೈಟ್‌ ಕಂಬಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ತಲೆಗೆ ಪೆಟ್ಟು ಬಿದ್ದು ಹೆಚ್ಚಿನ ರಕ್ತ ಸ್ರಾವವಾಗಿ ಚಿಕಿತ್ಸೆಗಾಗಿ ಅದೇ ದಿನ ತುಮಕೂರಿನ ಸಿದ್ದಗಂಗಾ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 01/07/2018 ರಂದು ಬೆಳಗಿನ ಜಾವ ಸುಮಾರು 03 ಗಂಟೆ ಸಮಯದಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಈ ಅಪಘಾತಕ್ಕೆ ಆತನ ನಿರ್ಲಕ್ಷ ಚಾಲನೆಯೆ ಕಾರಣವಾಗಿರುತ್ತೆ. ಆದ್ದರಿಂದ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಡವಾಗಿ ಬಂದು ದೂರು ನೀಡಿರುತ್ತೇನೆ. ಬೈಕ್‌ಗೆ ರಿಜಿಸ್ಟ್ರೇಷನ್‌ ಆಗಿದ್ದು, ನಂಬರ್‌ ಬರೆಸಿರಲಿಲ್ಲ ಎಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 90 guests online
Content View Hits : 304508