lowborn ಅಪರಾಧ ಘಟನೆಗಳು 10-06-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

:: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 10-06-18

ಅಮೃತೂರು ಪೊಲೀಸ್‌ ಠಾಣಾ ಮೊನಂ-109/2018, ಕಲಂ-279, 337, 304(ಎ)

ದಿನಾಂಕ: 09-06-2018 ರಂದು  22-40 ಗಂಟೆಗೆ ಪಿರ್ಯಾದಿ ರಂಗೇಗೌಡ ಜಿ.ಕೆ ಬಿನ್ ಕಾಂತರಾಜು,  23 ವರ್ಷ, ಗುನ್ನಾಗರೆ, ಕೊತ್ತಗೆರೆ ಹೋಬಳಿ, ಕುಣಿಗಲ್ ತಾಲ್ಲೂಕ್ ತುಮಕೂರು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ-09-06-2018 ನೇ ಶನಿವಾರ ಸುಮಾರು 1:30 ಗಂಟೆ ಮದ್ಯಾಹ್ನ ನನ್ನ ಮಾವ ವೆಂಕಟೇಶ ಬಿನ್ ವೆಂಕಟರಾಯಪ್ಪ ಮತ್ತು ನನ್ನ ಅಜ್ಜಿ ಕೆಎ-04 ಇಜೆ-9369 ಹೊಂಡಾ ಆಕ್ಟಿವಾ ದ್ವಿ ಚಕ್ರ ವಾಹನವನ್ನು ನನ್ನ ಮಾವ ವೆಂಕಟೇಶ ಚಲಾಯಿಸುತ್ತಿದ್ದು ನಂತರ ನನ್ನ  ಮಾವ ಅಜ್ಜಿ ಭಾಗ್ಯ ಕೋಂ ಲೇಟ್ ನಾಗರಾಜು,  #424, 23ನೇ ಅಡ್ಡ ರಸ್ತೆ, ರವೀಂದ್ರ ನಗರ, ಪೈಪ್ ಲೈನ್ ರೋಡ್, ಟಿ ದಾಸರಹಳ್ಳಿ, ಬೆಂಗಳೂರು-57, ಸುಮಾರು 56 ವರ್ಷ ಇವರು ಹಿಂಬದಿಯಲ್ಲಿ ಕುಳಿತಿದ್ದು ಇಬ್ಬರು ಅಗ್ರಹಾರ ಸಿಂಗೋನಹಳ್ಳಿ ಶನಿ ಮಹಾತ್ಮ ದೇವಸ್ಥಾನಕ್ಕೆ ಪೂಜೆ ಮುಗಿಸಿಕೊಂಡು ಬರುತ್ತಿರುವಾಗ ಅಗ್ರಹಾರ ಗೇಟ್ ಮೇನಕ ಡಾಬ ಹತ್ತಿರ ಎಡಭಾಗದಲ್ಲಿ ಚಲಿಸುತ್ತಿರುವಾಗ ಕುಣಿಗಲ್ ಕಡೆ ಚಲಿಸುತ್ತಿರುವಾಗ ಎಡೆಯೂರು ಮಾರ್ಗವಾಗಿ ಕೆಎ-13 ಎನ್-5347 ಸ್ವಿಪ್ಟ್ ವಿಡಿಐ ಕಾರಿನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದು ಡಿಕ್ಕಿ ಹೊಡೆಸಿದ ಪರಿಣಾಮ ವೆಂಕಟೇಶ ಬಿನ್ ವೆಂಕಟರಾಯಪ್ಪ, ಸುಮಾರು 55 ವರ್ಷ, ಗುನ್ನಾಗರೆ, ಕೊತ್ತಗೆರೆ ಹೋಬಳಿ, ಕುಣಿಗಲ್ ತಾಲ್ಲೂಕ್, ತುಮಕೂರು ಜಿಲ್ಲೆ ಇವರಿಗೆ ತಲೆಗೆ ತೀವ್ರ ಸ್ವರೂಪದ ಗಾಯ ಉಂಟಾಗಿ ಮತ್ತು ಬಲಗೈ ಮತ್ತು ಬಲಗಾಲಿಗೆ ತೀವ್ರ ಸ್ವರೂಪದ ಗಾಯ ಉಂಟಾಗಿದ್ದು ಮತ್ತು ಭಾಗ್ಯ ರವರಿಗೆ ತಲೆಗೆ ತೀವ್ರ ಸ್ವರೂಪದ ಗಾಯ ಉಂಟಾಗಿ ಇಬ್ಬರನ್ನು ಸಾರ್ವಜನಿಕರು ತಮ್ಮ ವಾಹನದಲ್ಲಿ ಕರೆ ತಂದು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಭಾಗ್ಯರವರು ಮೃತಪಟ್ಟಿದ್ದು ಅವರನ್ನು ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ವೆಂಕಟೇಶ ರವರನ್ನು ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಾರ್ಡ್ ರೋಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಾರವನ್ನು ಗಾಯಾಳು ವೆಂಕಟೇಶರವರ ಮಗ ಜಿ.ವಿ. ವೆಂಕಟೇಶ ಪೋನ್ ಮುಖಾಂತರ ನನಗೆ ತಿಳಿಸಿದ್ದು, ಅವರು ಮೃತ ದೇಹದ ಹತ್ತಿರ ಮತ್ತು ಗಾಯಾಳು ಹತ್ತಿರ ಇರುವ ಕಾರಣ ನಾನು ದೂರನ್ನು ನೀಡಿರುತ್ತೇನೆ. ಆದುದರಿಂದ ಮೇಲ್ಕಂಡ ವಾಹನ ಚಾಲಕ ಕೆಎ-13 ಎನ್-5347 ನ ವಿರುದ್ದ ಮೊಕದೊಮ್ಮೆ ದಾಖಲಿಸಿ ಕಾನೂನು ರೀತಿ ಕ್ರಮ ಜರುಗಿಸಿ ನ್ಯಾಯ ದೊರಕಿಸಿಕೊಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ಜಯನಗರ ಪೊಲೀಸ್ ಠಾಣಾ ಯುಡಿಆರ್ ನಂ. 05/2018 ಕಲಂ 174 ಸಿಆರ್‌ಪಿಸಿ

ದಿನಾಂಕ: 09-06-2018 ರಂದು ಸಂಜೆ 4-00 ಗಂಟೆಗೆ ಬಳ್ಳಾರಿ ಜಿಲ್ಲೆ, ಹೊಸಪೇಟೆ ತಾಲ್ಲೂಕು, ಗಾಧಿಗನೂರು ಗ್ರಾಮದ ವಾಸಿ ವಿರುಪಾಕ್ಷಪ್ಪ ಬಿನ್ ಲೇಟ್ ದೊಡ್ಡಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನನ್ನ 3 ನೇ ಮಗಳಾದ ಸಾವಿತ್ರಿಯನ್ನು ತುಮಕೂರು ಟೌನ್ ವಾಸಿ ಕೆ.ಎನ್ ರಾಘವರೆಡ್ಡಿ ರವರಿಗೆ ಈಗ್ಗೆ ಸುಮಾರು 11 ವರ್ಷಗಳ ಹಿಂದೆ ಕೊಟ್ಟು ಮದುವೆ ಮಾಡಿದ್ದು, ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡಿದ್ದು, ನನ್ನ ಮಗಳು ಸಾವಿತ್ರಿ ಚಿಕ್ಕಂದಿನಿಂದಲೂ ಬಹಳ ದುಡುಕಿನ ಸ್ವಭಾವದವಳಾಗಿದ್ದು ಮುಂಗೋಪಿಯಾಗಿರುತ್ತಾಳೆ. ಸಣ್ಣಪುಟ್ಟ ವಿಚಾರಗಳಿಗೆ ಬಹಳ ತಲೆಕೆಡೆಸಿಕೊಳ್ಳುತ್ತಿದ್ದು,  ನನ್ನ ಅಳಿಯ ಹಾಗೂ ಮಗಳು ಈಗ್ಗೆ 3 ವರ್ಷಗಳಿಂದ ತುಮಕೂರು ಟೌನ್ ಯಾದವನಗರದಲ್ಲಿ ಹೊಸದಾಗಿ ಮನೆಯನ್ನು ಕಟ್ಟಿಕೊಂಡು ಅತ್ತೆ ಮಾವ ರವರ ಜೊತೆಯಲ್ಲಿ ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡಿದ್ದರು.  ನಮ್ಮ ಮೊಮ್ಮಕ್ಕಳಿಗೆ ಶಾಲೆಗೆ ರಜೆ ಇದ್ದರಿಂದ ಇತ್ತೀಚಿಗಷ್ಟೆ ಕುಟುಂಬ ಸಮೇತ ಗೋವಾ ಕಡೆಗೆ ಪ್ರವಾಸ ಹೋಗಿಬಂದಿದ್ದರು. ನಿನ್ನ ದಿನ ರಾತ್ರಿ ಅಡಿಗೆ ಮಾಡುವ ವಿಚಾರವಾಗಿ ಮನೆಯಲ್ಲಿ ನನ್ನ ಮಗಳು ಸ್ವಲ್ಪ ಕೋಪ ಮಾಡಿಕೊಂಡಿದ್ದು ಈ ವಿಚಾರವನ್ನು ನನ್ನ ಅಳಿಯ ರಾಘವರೆಡ್ಡಿ ನಿನ್ನೆ ರಾತ್ರಿಯೇ ಪೋನ್ ಮಾಡಿ ತಿಳಿಸಿದ್ದು, ನಾವು ನಮ್ಮ ಮಗಳಿಗೆ ಬುದ್ದಿ ಹೇಳಿದ್ದೆವು/  ಆದರೂ ಸಹ ನನ್ನ ಮಗಳು ಮನೆಯಲ್ಲಿ ನನ್ನದೇ ಮಾತು ನಡೆಯಬೇಕೆಂತಾ ಹಠ ಮಾಡುತ್ತಿದ್ದು, ಅಕ್ಕೆ ಆಕೆಯ ಗಂಡ ಹಾಗೂ ಅತ್ತೆ ಮಾವ ಅನುಸರಿಸಿಕೊಂಡು ಹೋಗುತ್ತಿದ್ದರು. ಈ ದಿನ ದಿನಾಂಕ: 09-06-2018 ರಂದು ಬೆಳಿಗ್ಗೆ ಸುಮಾರು 11-00 ಗಂಟೆಯಲ್ಲಿ ನನ್ನ ಅಳಿಯ ನಮಗೆ ಪೋನ್ ಮಾಡಿ ನಿಮ್ಮ ಮಗಳು ಸಾವಿತ್ರಿ ಮನೆಯಲ್ಲಿ ನಾನು ಕೆಲಸಕ್ಕೆ ಹೋದ ವೇಳೆಯಲ್ಲಿ ಮನೆಯ ಒಳಗೆ ರೂಮಿನ ಬಾಗಿಲನ್ನು ಹಾಕಿಕೊಂಡಿದ್ದು ಎಷ್ಟು ಬಡಿದರೂ ಬಾಗಿಲು ತೆಗೆಯುತ್ತಿಲ್ಲವೆಂದು ನಮ್ಮ ತಾಯಿ ಹಾಗೂ ನನ್ನ ಮಗಳು ನೀತು ಪೋನ್ ಮಾಡಿ ಬೆಳಿಗ್ಗೆ 10-00 ಗಂಟೆಯಲ್ಲಿ ತಿಳಿಸಿದಾಗ ನಾನು ಗಾಬರಿಯಾಗಿ ಮನೆಯ ಬಳಿಗೆ ಬಂದು ರೂಮಿನ ಬಾಗಿಲನ್ನು ಎಷ್ಟು ಬಡಿದರೂ ಸಹ ತೆಗೆಯದ ಕಾರಣ ಯಾವುದೋ ಆಯುಧದಿಂದ ಬಾಗಿಲನ್ನು ಮೀಟಿದಾಗ ಬೋಲ್ಟ್ ಕಿತ್ತುಕೊಂಡು ರೂಮಿನ ಬಾಗಿಲು ತೆರೆದುಕೊಂಡಿತು. ಒಳಗಡೆ ನನ್ನ ಹೆಂಡತಿ ಸಾವಿತ್ರಿ ಸೀರೆಯಿಂದ ಸೀಲಿಂಗ್ ಫ್ಯಾನ್ ಗೆ ಕಟ್ಟಿಕೊಂಡು ನೇಣು ಹಾಕಿಕೊಂಡು ನೇತಾಡುತ್ತಿದ್ದಳು.  ಇನ್ನೂ ಜೀವ ಇರಬೇಕೆಂದು ನಾನು ಹಾಗೂ ನನ್ನ ತಾಯಿ ಸೇರಿ ಚಾಕುವಿನಿಂದ ಸೀರೆಯನ್ನು ಕೂಯ್ದು ಕೆಳಕ್ಕೆ ಇಳಿಸಿಕೊಂಡಿದ್ದು ನನ್ನ ಹೆಂಡತಿ ತೀರಿ ಹೋಗಿದ್ದಳೆಂತ ವಿಚಾರ ತಿಳಿಸಿದರು.  ನಾವು ತಕ್ಷಣ ಗಾಬರಿಯಿಂದ ನಮ್ಮೂರಿನಿಂದ ಕೆಲವು ಸಂಬಂಧಿಕರೊಂದಿಗೆ ಹೊರಟು ಮದ್ಯಾಹ್ನ ಸುಮಾರು 3-30 ಗಂಟೆಗೆ ನನ್ನ ಅಳಿಯನ ಮನೆಯ ಒಳಗೆ ಹೋಗಿ ನೋಡಲಾಗಿ ವಿಚಾರ ಮಾಡಿ ಈಗ ಠಾಣೆಗೆ ಬಂದು ದೂರು ನೀಡುತ್ತಿದ್ದು, ನನ್ನ ಮಗಳು ಸಾವಿತ್ರಿಯ ಸಾವಿನಲ್ಲಿ ಯಾವುದೇ ಅನುಮಾನವಿರುವುದಿಲ್ಲ.  ನಮ್ಮ ಮಗಳು ಸಾವಿತ್ರಿ ಮುಂಗೋಪಿಯಾಗಿದ್ದು ಯಾವುದೋ ವಿಚಾರಕ್ಕಾಗಿ ತನ್ಮೂಲಕ ತಾನೇ ಜೀವನದಲ್ಲಿ ಬೇಜಾರು ಮಾಡಿಕೊಂಡು ಈ ರೀತಿ ದುಡುಕಿನಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ ಮುಂದಿನ ಕ್ರಮ ಜರುಗಿಸಬೇಕೆಂತ ಕೋರಿ ನೀಡಿರುವ ಪಿರ್ಯಾದು ಅಂಶವಾಗಿರುತ್ತೆ.

 

ಹೊಸಬಡಾವಣೆ ಪೊಲೀಸ್ ಠಾಣಾ ಮೊನಂ 105/2018 U/S 304A R/W 34 IPC

 

ದಿನಾಂಕ : 09-06-2018 ರಂದು ಮಧ್ಯಾಹ್ನ 3-00 ಗಂಟೆಗೆ ಪಿರ್ಯಾದಿ ಬಾಷಾ ಬಿನ್ ಹುಸೇನ್ ಸಾಬ್, 45 ವರ್ಷ, ಮುಸ್ಲಿಂ ಜನಾಂಗ, ಶಿರಾಣಿ ತೋಟ, ಉಪ್ಪಾರಹಳ್ಳಿ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ ಮೂರನೆ ಮಗನಾದ 18 ವರ್ಷದ ಮುಬಾರಕ್ ವಿದ್ಯಾನಗರದ ಆನಂದ ಎಂಬುವರ ಬಳಿ ಗಾರೆ ಕೆಲಸ ಮಾಡಿಕೊಂಡಿದ್ದು ದಿನಾಂಕ : 09-06-2018 ರಂದು ಬೆಳಗ್ಗೆ 8-30 ಗಂಟೆಯಲ್ಲಿ ಆನಂದ ರವರು ಪಿರ್ಯಾದಿ  ಮನೆಯ ಬಳಿ ಬಂದು ಬಿ.ಹೆಚ್ ರಸ್ತೆಯ ಶ್ರೀನಿವಾಸ ವೈನ್ಸ್ ಪಕ್ಕದ ಚಂದ್ರಮೂರ್ತಿ ಹಿರೇಮಠ್ ರವರ ಹಳೆ ಅಂಗಡಿಯು ಮಳೆಗೆ ಸೋರುತ್ತಿದ್ದು ಶೀಟ್‌‌ ಗಳಿಗೆ ಸಿಮೆಂಟ್ ಹಾಕಿ ಗಾರೆ ಕೆಲಸ ಮಾಡಿಕೊಡಬೇಕಾಗಿದ್ದು ಬರುವಂತೆ ಕರೆದುಕೊಂಡು ಹೋಗಿದ್ದು   ಮೇಸ್ತ್ರಿ ಆನಂದ ಹಾಗೂ ಕಟ್ಟಡದ ಮಾಲೀಕರಾದ ಚಂದ್ರಮೂರ್ತಿ ರವರಿಗೆ  ಕೆಲಸ ಮಾಡುವ ಕಟ್ಟಡವು ಹಳೆಯದಾಗಿದ್ದು ಶೀಟ್‌ ಗಳು ಜಾರುತ್ತಿರುವುದು ಗೊತ್ತಿದ್ದರೂ ಸಹಾ ತಮ್ಮ  ಮಗನಿಗೆ ಕೆಲಸ ಮಾಡುವ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ನೀಡದೆ ಮುಂಜಾಗ್ರತೆ ವಹಿಸದೆ ಅಲ್ಲಿಯೇ ಕೆಲಸ ಮಾಡಲು ಸೂಚಿಸಿ ನಿರ್ಲಕ್ಷ್ಯತೆ ವಹಿಸಿದ್ದರಿಂದಲೇ ಮುಬಾರಕ್ ಆಯತಪ್ಪಿ ಸಿಮೆಂಟ್ ಶೀಟ್  ಮುರಿದು ಕೆಳಗೆ ಬಿದ್ದು ಮೃತಪಡಲು ಕಾರಣರಾಗಿರುತ್ತಾರೆ ಈ ಬಗ್ಗೆ  ಮೇಲ್ಕಂಡ ಕಟ್ಟಡದ ಮಾಲೀಕರಾದ ಚಂದ್ರಮೂರ್ತಿ ಹಿರೇಮಠ್ ಹಾಗೂ ಮೇಸ್ತ್ರಿಯಾದ ಆನಂದ ರವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರನ್ನು ಸ್ವೀಕರಿಸಿ  ರೀತ್ಯಾ ಪ್ರಕರಣ ದಾಖಲಿಸಿದೆ

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.63/2018, ಕಲಂ:454,457,380,ಐಪಿಸಿ

ದಿ:09/06/18 ರಂದು ಬೆಳಿಗ್ಗೆ 11:50 ಗಂಟೆಗೆ ಪಿರ್ಯಾದಿ ರೂಪ.ಸಿ.ಹೆಚ್, ಭೂ ವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರೇನೆಂದರೆ ಮಧುಗಿರಿ ತಾಲ್ಲೂಕು, ಮಿಡಿಗೇಶಿ ಹೋಬಳಿ, ಚಂದ್ರಬಾವಿ ಗ್ರಾಮದ ವ್ಯಾಪ್ತಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯವತಿಯಿಂದ ಖನಿಜ ತನಿಖಾ ಠಾಣೆಯನ್ನು ಸ್ಥಾಪಿಸಿದ್ದು, ಸದರಿ ತನಿಖಾ ಠಾಣೆಗೆ Secure eye IP box (C.C camera)-03 nos, Network video recorder=1 nos, Monitor LCD 40inches full HD-01 nos, Converter BNC to RJ 45- 08 nos ಉಪಕರಣಗಳನ್ನು ಅಳವಡಿಸಲಾಗಿರುತ್ತದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಅಧಿಕಾರಿಗಳು/ ಸಿಬ್ಬಂದಿಯವರ ಕೊರತೆ ಇರುವ ಕಾರಣ ಸದರಿ ತನಿಖಾ ಠಾಣೆಗೆ ಗೃಹರಕ್ಷಕದಳ ಸಿಬ್ಬಂದಿಯವರನ್ನು ಹಗಲು ಮತ್ತು ರಾತ್ರಿ ಪಾಳೆಯಕ್ಕೆ ನಿಯೋಜಿಸಿ  ಮೇಲುಸ್ತುವಾರಿಯನ್ನು ಇಲಾಖೆಯ ತಾಂತ್ರಿಕ ಅಧಿಕಾರಿಗಳು/ ಹಿರಿಯ ಭೂವಿಜ್ಞಾನಿ (ಚಾಲಿತ ದಳ) ರವರಿಂದ ಪರಿಶೀಲನೆ ನಡೆಸಲಾಗುತ್ತಿರುತ್ತದೆ.ಸದರಿ ತನಿಖಾ ಠಾಣೆಗೆ 1) ಶ್ರೀ. ಸುಬ್ಬಣ್ಬ ಎನ್.ಬಿ. 2) ಚಂದ್ರಶೇಖರ್. ಎಂ.ಎನ್, 3) ರವಿಚಂದ್ರ ಮತ್ತು 4) ನಾಗಾರಾಜು ಎ.  ಎಂಬ ಗೃಹರಕ್ಷಕ ಸಿಬ್ಬಂದಿಯವರನ್ನು ಖನಿಜ ತನಿಖಾ ಠಾಣೆಗೆ ಎಪ್ರಿಲ್-2018ರ ಮಾಹೆಯಿಂದ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಮೇಲ್ಕಂಡ ನಾಲ್ಕು ಜನ ಸಿಬ್ಬಂದಿಯವರು ಎಪ್ರಿಲ್-2018 ರಿಂದ  ದಿನಾಂಕ: 31-05-2018ರವರೆಗೆ ತನಿಖಾ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ.ದಿನಾಂಕ:08-06-2018ರಂದು ಇಲಾಖಾವತಿಯಿಂದ 1) ಶ್ರೀ.ನಾಗಾಭೂಷಣ, 2) ಮಂಜುನಾಥ, 3) ರಾಮಚಂದ್ರಯ್ಯ ಮತ್ತು 4) ರಂಗಸ್ವಾಮಯ್ಯ ಗೃಹರಕ್ಷಕದಳ ಸಿಬ್ಬಂದಿಯವರನ್ನು ಖನಿಜ ತನಿಖಾ ಠಾಣೆಗೆ ನಿಯೋಜಿಸಲಾಗಿರುತ್ತದೆ. ದಿನಾಂಕ:08-06-2018 ರಂದು ಶ್ರೀ.ನಾಗಾಭೂಷಣ ಮತ್ತು  ಮಂಜುನಾಥರವರು ರಾತ್ರಿ ಪಾಳೆಯ ಕರ್ತವ್ಯಕ್ಕೆ ಹಾಜರಾಗಿದ್ದು, ದಿ:01-06-2018ರಂದು ಶ್ರೀ.ಸುಬ್ಬಣ್ಣ.ಎನ್.ಬಿ. ಮತ್ತು ಚಂದ್ರಶೇಖರ್.ಎಂ.ಎನ್. ರವರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಯವರ ಗಮನಕ್ಕೆ ತರದೇ ಸದರಿ ತನಿಖಾ ಠಾಣೆಗೆ ಬೀಗ ಹಾಕಿ ತನಿಖಾ ಠಾಣೆಯ ಪಕ್ಕದಲ್ಲಿ ವಾಸವಾಗಿರುವ ಶ್ರೀಮತಿ. ಲಕ್ಷ್ಮಮ್ಮ ಕೋಂ. ಸಿದ್ದಪ್ಪ, ಚಂದ್ರಬಾವಿ ರವರಿಗೆ ಕೀಯನ್ನು ನೀಡಿದ್ದು, ಸದರಿಯವರಿಂದ ಕೀಯನ್ನು ಪಡೆದು  ತನಿಖಾ ಠಾಣೆಯ ಬೀಗವನ್ನು ತೆಗೆಯಲು ಪ್ರಯತ್ನಿಸಿದ್ದು, ಬೀಗವನ್ನು ತೆಗೆಯಲು ಸಾದ್ಯವಾಗದೇ ಬೀಗವನ್ನು ಒಡೆದು ಹಾಕಿ ಸದರಿಯವರು ಒಳ ಹೋಗಿ ನೋಡಿದಾಗ C.C camera- 03 nos, Network video recorder=1 nos, Monitor LCD 40inches full HD-01 nos, Converter BNC to RJ 45- 08 nos ಮತ್ತು ಇತರೆ ಎಲ್ಲಾ ಉಪಕರಣಗಳು ಕಳ್ಳತನವಾಗಿರುವುದು ಕಂಡು ಬಂದಿರುತ್ತದೆ. ದಿ:01/06/2018 ರಿಂದ ದಿ:08/06/2018ರ ಯಾವುದೋ ಸಮಯದಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.ಸದರಿ ತನಿಖಾ ಠಾಣೆಯಲ್ಲಿದ್ದ ಉಪಕರಣಗಳ ಬೆಲೆ ಅಂದಾಜು ಮೌಲ್ಯ ರೂ-3,00,000/-ಗಳಾಗಿದ್ದು ಕಳ್ಳತನವಾಗಿರುವ ಉಪಕರಣಗಳನ್ನು ಪತ್ತೆ ಹಚ್ಚಿಕೊಡಬೇಕೆಂದು ಇತ್ಯಾದಿಯಾಗಿ  ನೀಡಿದ ಪಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 86 guests online
Content View Hits : 321525