lowborn ಅಪರಾಧ ಘಟನೆಗಳು 08-06-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

:: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 08-06-18

ಜಯನಗರ ಪೊಲೀಸ್ ಠಾಣಾ ಮೊ.ನಂ. 83/2018 ಕಲಂ 341, 323, 504 r/w 34 IPC

ದಿನಾಂಕ: 07-06-2018 ರಂದು ಸಂಜೆ 5-30 ಗಂಟೆಗೆ ತುಮಕೂರು ಟೌನ್, ಗೋಕುಲ 2 ನೇ ಹಂತ, 6 ನೇ ಕ್ರಾಸ್ ವಾಸಿ  ಎ.ವಿ ಮಾಲಿನಿ ಬಿನ್ ವೀರಭದ್ರಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ,   ದಿನಾಂಕ: 05-06-2018 ರಂದು ಸುಮಾರು 10 ಗಂಟೆ ಸಮಯದಲ್ಲಿ ನಮ್ಮ ಸಂಬಂಧಿಕರೊಬ್ಬರು ತೀರಿಕೊಂಡ ವಿಚಾರ ತಿಳಿದು, ತಕ್ಷಣ ನಾನು ನನ್ನ ತಾಯಿಯನ್ನು ಕರೆದುಕೊಡು ನನ್ನ ನ್ಯಾನೋ ಕಾರಿನಲ್ಲಿ ಮಾರುತಿನಗರ ಮಾರ್ಗವಾಗಿ ಜಯನಗರ ಮುಖ್ಯರಸ್ತೆಯ ಎಸ್.ಎಸ್. ಪುರಂ ಕಡೆ ಹೋಗುತ್ತಿದ್ದು, ಶೆಟ್ಟಿಹಳ್ಳಿ ಅಂಡರ್‌‌ಪಾಸ್‌‌ ಸಮೂಪ ಒಂದು ಬಿಳಿ ಸ್ವಿಪ್ಟ್‌‌‌ ಕಾರಿನ ನಂ ಕೆ.ಎ-06-ಎಂ-9174 ನೇ ಚಾಲಕ ಮತ್ತು ಅವರ ಜೊತೆಯಲ್ಲಿದ್ದ ಹೆಂಗಸು ಏಕಾಏಕಿ ನನ್ನ ವಾಹನಕ್ಕೆ ಅಡ್ಡಹಾಕಿ ನನ್ನ ವಾಹ ನಿಲ್ಲಿಸಿದನು.  ಆ ಚಾಲಕ ಮತ್ತು ಆತನ ಜೊತೆಯಲ್ಲಿದ್ದ ಹೆಂಗಸು ನನ್ನ ಮೇಲೆ ಜಗಳ ತೆಗೆದು ನನ್ನನ್ನು ಏಕವಚನದಲ್ಲಿ ಭೈದು ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ ಹಾಗೂ ನನ್ನ ಕೋಟನ್ನು ಎಳೆದಾಡಿ ನನ್ನ ಬಲಗೈ ಅನ್ನು ತಿರುಚಿರುತ್ತಾರೆ.  ಕಾರಿನ ಚಾಕ ನನ್ನ ಹಲ್ಲೆ ಮಾಡಲು ಕೂಡ ಪ್ರಯತ್ನಿಸಿದ್ದಾನೆ ಹಾಗೂ ಹಲ್ಲೆ ಮಾಡಿದ್ದಾರೆ ಹೋಗಿ ಸಾಯೇ ಸತ್ತು ಹೋಗು ಎಂದು ಕೆಟ್ಟದಾಗಿ ಅಸಹ್ಯವಾಗಿ ಭೈದು ಅವನು ಮತ್ತು ಆತನ ಜೊತೆಯಲ್ಲಿದ್ದ ಹೆಂಗಸು ಕಾರಣವಿಲ್ಲದೆ ಬೀದಿಯಲ್ಲಿ ನನ್ನ ಮಾನಹಾನಿ ಮಾಡಿ ಮರ್ಯಾದೆ ಹಾಳು ಮಾಡಿದ್ದಾರೆ.   ನನ್ನ ತಾಯಿಯನ್ನು ಸಹಾ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ.  ಕಾರಣವಿಲ್ಲದೆ ನನ್ನನ್ನು ಮತ್ತು ನನ್ನ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ಮಾಡಿದ್ದಾರೆ.  ನನ್ನ ಸಂಬಂಧಿಕರು ತೀರಿಕೊಂಡ ಪ್ರಯುಕ್ತ ನನ್ನ ತಾಯಿಯನ್ನು ಬಿಟ್ಟು ಅಲ್ಲಿ ಕೆಲವು ಕೆಲಸಗಳಲ್ಲಿ ನಾನು ಭಾಗವಹಿಸಿ ಈಗ ಸ್ವಲ್ಪ ತಡವಾಗಿ ಬಂದು ಈ ದೂರು ಕೊಡುತ್ತಿದ್ದೇನೆಂತಾ ಇತ್ಯಾದಿಯಾಗಿ ನೀಡಿರುವ ದೂರಿನ ಅಂಶವಾಗಿರುತ್ತೆ.

ಜಯನಗರ ಪೊಲೀಸ್ ಠಾಣಾ ಮೊ.ನಂ. 84/2018 ಕಲಂ 504, 114, 427 ರೆ.ವಿ 34 ಐಪಿಸಿ

ದಿನಾಂಕ: 07-06-2018 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ಠಾಣಾ ಕೋರ್ಟ್‌ ಪಿಸಿ 384 ರವರು ಅಸಂಜ್ಞೆಯ ದೂರಿನಲ್ಲಿ ಪ್ರಕರಣ ದಾಖಲಿಸಲು ಘನ ನ್ಯಾಯಾಲಯದ ಅನುಮತಿ ಪಡೆದು ಠಾಣೆಗೆ ತಂದು ಹಾಜರುಪಡಿಸಿದ್ದು, ದೂರಿನ ಅಂಶವೇನೆಂದರೆ, ತುಮಕೂರು ಟೌನ್‌, ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ ಕೈಲಾಸಾಶ್ರಮ ಮಠದದಲ್ಲಿ ವಾಸವಿರುವ ಆದಿದೇವಾನಂದ ಸ್ವಾಮಿಜಿ ರವರು ದಿನಾಂಕ: 28-05-2018 ರಂದು ಮಾನ್ಯ ಪೊಲೀಸ್ ಅಧೀಕ್ಷಕರಿಗೆ ನೀಡಿರುವ ಅರ್ಜಿಯಾಗಿದ್ದು, ನಾನು ಮಠವನ್ನು ಕಟ್ಟಿ ಸುಮಾರು 30 ವರ್ಷಗಳಿಂದ ಮಠದಲ್ಲಿದ್ದು, ಮಠದ ಖರ್ಚಿಗೆ ಹಣ ಬಂದಿತೆಂದು ಅಂಗಡಿ ಮಳಿಗೆಗಳನ್ನು ಕಟ್ಟಿಸಿ ನಾಗಪ್ಪನ ಮಗನಾದ ಶಿವಕುಮಾರನೆಂಬುವರಿಗೆ ಮತ್ತು ನಂದಶ್ರೀ ರೆಡ್ಡಿಯೆಂಬುವರಿಗೆ ಬಾಡಿಗೆಗೆ ಕೊಟ್ಟು ಸುಮಾರು 6 ವರ್ಷಗಳಾಗಿವೆ ಒಂದೆರಡು ವರ್ಷ ಬಾಡಿಗೆ ಕೊಟ್ಟಂತೆ ಮಾಡಿದರು ಬಾಡಿಗೆ ಕೊಡದಿದ್ದರೆ ಅಂಗಡಿಯನ್ನು ಖಾಲಿ ಮಾಡಿ ನಮ್ಮ ಸುಪರ್ದಿಗೆ ಬಿಟ್ಟು ಕೊಡಿರೆಂದು ಹೇಳಿದ್ದಕ್ಕೆ ನಮ್ಮ ಮೇಲೆ ಇವರು ಅಕ್ರಮವಾಗಿ ಹೊರಗೆ ಹಾಕುತ್ತಾರೆಂದು ಹೇಳಿ ಸ್ಟೇ ಆರ್ಡರನ್ನು ತಂದರು ನಾವು ಖಾಲಿ ಮಾಡಿಸಿಕೊಡಿರೆಂದು ನಾವು ಕೇಸನ್ನು ಹಾಕಿದ್ದೇವೆ ಕೇಸು 5 ವರ್ಷದಿಂದ ನಡೆಯುತ್ತದೆ ನಮ್ಮ ಲಾಯರುಗಳಿಗೆ ಒಳಗೊಳಗೆ ಹಣವನ್ನು ಕೊಟ್ಟು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ ಇದನ್ನು ತಿಳಿದ ನಾವು ನಾಲ್ಕೈದು ಲಾಯರಗಳನ್ನು ಬದಲು ಮಾಡಿ ಬೇರೆಯವರಿಗೆ ಕೇಸನ್ನು ಕೊಟ್ಟರೂ ಅವರಿಗೂ ದುಡ್ಡನ್ನು ಕೊಟ್ಟು ತಮ್ಮ ಕಡೆಗೆ ಮಾಡಿಕೊಳ್ಳುತ್ತಿದ್ದಾರೆ ಈ ದುಃಖವನ್ನು ತಮ್ಮ ಹತ್ತಿರ ಹೇಳಿಕೊಂಡಿದ್ದೇನೆ ಇದೆಲ್ಲವನ್ನೂ ಹೇಗೋ ಸಹನೆ ಮಾಡಿಕೊಂಡಿದ್ದೆವು ಆದರೆ ಈಗ ಆರು ತಿಂಗಳಿನಿಂದ ಮಠಕ್ಕೆ ಕಲ್ಲು ಹೊಡೆಸುತ್ತಿದ್ದಾರೆ ಇದಕ್ಕೆ ಶಿವಕುಮಾರನ ತಂದೆಯಾದ ನಾಗಪ್ಪರೆಂಬುವರು ಪೂರ್ಣ ಬೆಂಬಲವಾಗಿದ್ದಾರೆ ಮಠಕ್ಕೆ ಕಲ್ಲು ಹೊಡೆದಾಗ ಅದನ್ನು ಕಂಡು ಸಂತೋಷಪಡುತ್ತಿರುತ್ತಾನೆ ಮತ್ತು ಬ್ಯೂಟಿ ಪಾರ್ಲರ್ ನಡೆಸುತ್ತಿರುವ ನಂದಶ್ರೀ ರೆಡ್ಡಿ ನಾಗವೇಣಿ ಎಂಬುವಳು ಕಲ್ಲು ಹೊಡಿಸುವುದಕ್ಕೆ ಗುಂಡಾಗಳಿಗೆ ಹಣವನ್ನು ಕೊಟ್ಟು ಕಲ್ಲು ಹೊಡಿಸಿ ಮಜಾ ಮಾಡುತ್ತಿದ್ದಾರೆ ಇವತ್ತಿನವರೆಗೆ ಒಂದು ರೂಪಾಯಿ ಬಾಡಿಗೆಯನ್ನು ಕೊಟ್ಟಿರುವುದಿಲ್ಲ.  ಕೊಟ್ಟಿದ್ದರೆ ದಾಖಲೆಯನ್ನು ತೋರಿಸಲಿ ಸುಮ್ಮನೆ ಕೋರ್ಟಿಗೆ ಕಟ್ಟಿದ್ದೇವೆಂದು ಸುಳ್ಳು ಹೇಳುತ್ತಿದ್ದಾರೆ ನಾನು ತೋಟದ ಕಡೆಗೆ ಹೋದಾಗ ಗುಂಡಾಗಳು ಬಂದು ಮಠದ ಹಾಲಿನ ಮೇಲೆ ದೊಡ್ಡ ದೊಡ್ಡ ಕಲ್ಲುಗಳನ್ನು ಎಸೆಯುತ್ತಾರೆ.  ಮತ್ತು ಮಠದಲ್ಲಿದ್ದ ಅಡುಗೆ ಮಾಡುವ ಪೊಲೀಯೋ ಹೊಡೆದ ಗಂಗಮ್ಮ ಎಂವುವರಿಗೆ ಬಾಯಿಗೆ ಬಂದಂತೆ ಕೆಟ್ಟದ್ದಾಗಿ ಬೈಯುತ್ತಾರೆ ಮಠದ ಹಾಲಿನ ಷೀಟುಗಳು ಒಡೆದು ಹೋಗಿ ಮಳೆಯ ನೀರು ಮಠದಲ್ಲಿ ಬೀಳುತ್ತಿವೆ ಅವರ ಮೂವರ ಮೇಲೆ ಕ್ರಿಮಿನಲ್ ಕೇಸು ಹಾಕಿಸಿ ರಕ್ಷಣೆ ಮತ್ತು ನ್ಯಾಯ ಒದಗಿಸಿಕೊಡಬೇಕೆಂತಾ ಇತ್ಯಾದಿಯಾಗಿ ಕೊಟ್ಟ ದೂರರ್ಜಿಯ ಮೇರೆಗೆ ಠಾಣಾ GSC No 2119180600207 ( 207/2018 )  ರೀತ್ಯಾ ದಾಖಲಿಸಿಕೊಂಡು ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ ನಂ 130/2018, ಕಲಂ: 454 457 380  ಐ ಪಿಸಿ

ದಿನಾಂಕ: 07-06-2018 ರಂದು ಬೆಳಿಗ್ಗೆ 11-30 ಗಂಟೆಗೆ ರವಿಕುಮಾರ ಬಿನ್ ರಾಮಣ್ಣ, ದೊಡ್ಡಮಾವತ್ತೂರು, ಹುಲಿಯೂರುದುರ್ಗ ಹೋಬಳಿ, ಕುಣಿಗಲ್ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ಪಿರ್ಯಾದಿಯು ಅವರ ಸ್ವಂತ ಕೆಲಸದ ನಿಮಿತ್ತ ಮನೆಗೆ ಬೀಗ ಹಾಕಿಕೊಂಡು ದಿನಾಂಕ: 05-06-2018 ರಂದು ಬೆಂಗಳೂರಿಗೆ ಹೋಗಿದ್ದು ದಿನಾಂಕ: 06-06-2018 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿಯು ಬೆಂಗಳೂರಿನಲ್ಲಿದ್ದಾಗ ಅವರ ಅವರ ಪಕ್ಕದ ಮನೆಯ ವಾಸಿಯಾದ ನಿಂಗಮ್ಮ ರವರು ಪಿರ್ಯಾದಿಗೆ ಕರೆ ಮಾಡಿ “ನಿಮ್ಮ ಮನೆ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಕಳ್ಳತನವಾಗಿರುವ ಹಾಗೆ ಕಾಣಿಸುತ್ತಿದೆ ಬೇಗ ಬನ್ನಿ” ಎಂದು ತಿಳಿಸಿದರು. ಆಗ ಪಿರ್ಯಾದಿಯು ಬೆಂಗಳೂರಿನಿಂದ ತಮ್ಮ ಗ್ರಾಮಕ್ಕೆ ಬಂದು ನೋಡಿದಾಗ ಪಿರ್ಯಾದಿಯವರ ಮನೆಯ ಬೀಗ ಮುರಿದು ಬೀರುವಿನ ಲಾಕ್ ಹೊಡೆದು ಹಾಕಿ ಅದರಲ್ಲಿದ್ದ ಒಂದು ಜೊತೆ ಓಲೆ, ಒಂದು ಜೊತೆ ಮಾಟಿ, ಮತ್ತು ಪಿರ್ಯಾದಿಯ ತಾಯಿಯ ಮಾಂಗಲ್ಯ ಸರ (ಮೂರು ಹಣ) , ಮಾಂಗಲ್ಯದ ಜೊತೆ ಇದ್ದ 04 ಚಿನ್ನದ ಗುಂಡುಗಳು, ಹಾಗೂ 02 ಸಾವಿರ ರೂ ಹಣ ಕಳ್ಳತನ ಮಾಡಿರುತ್ತಾರೆ. ಹಾಗೂ ಹಿಂದಿನ ದಿನ ರಾತ್ರಿ ಕೆಂಪನಹಳ್ಳಿ ಗ್ರಾಮದಲ್ಲಿ ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿರುವ ಕಳ್ಳರನ್ನು ಗ್ರಾಮಸ್ಥರು ಹಿಡಿದು ಠಾಣೆಗೆ ಒಪ್ಪಿಸಿರುತ್ತಾರೆ. ಇವರೇ ಪಿರ್ಯಾದಿಯ ಮನೆಯನ್ನೂ ಸಹ ಕಳ್ಖತನ ಮಾಡಿರುತ್ತಾರೆಂಬ ಬಗ್ಗೆ ಅನುಮಾನ ಇರುತ್ತೆ. ಕಳುವಾಗಿರುವ ಚಿನ್ನದ ವಡವೆಗಳು 18 ಗ್ರಾಂ ಆಗಿರುತ್ತೆ . ಇವುಗಳ ಒಟ್ಟು ಮೌಲ್ಯ 18 ಸಾವಿರ ರೂ ಆಗಿರುತ್ತೆ. ಆದ್ದರಿಂದ ಸ್ಥಳ ಪರಿಶೀಲನೆ ಮಾಡಿ ಕಳವು ಮಾಡಿರುವ ಅಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.62/2018, ಕಲಂ:279.337 ಐಪಿಸಿ ರೆ/ವಿ 134(ಎ&ಬಿ) 187 ಐಎಂವಿ ಆಕ್ಟ್

ದಿನಾಂಕ:07/06/2018 ರಂದು ಸಂಜೆ 5:30 ಗಂಟೆಗೆ ಪಿರ್ಯಾದಿ ಗೌರಮ್ಮ ಕೋಂ ತಮ್ಮಣ್ಣ, ಬ್ರಹ್ಮಸಮುದ್ರ ಹಳೇಗೊಲ್ಲರಹಟ್ಟಿ, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ:02/06/2018 ರಂದು ರಾತ್ರಿ ಸುಮಾರು 7:30 ಗಂಟೆ ಸಮಯದಲ್ಲಿ ಬ್ರಹ್ಮಸಮುದ್ರ ಗ್ರಾಮದ ಮಾರಮ್ಮನ ದೇವಸ್ಥಾನದ ಬಳಿ ರಸ್ತೆಯಲ್ಲಿ ಕೆಎ-06-ಟಿಎ-9172-9173 ನೇ ಟ್ರ್ಯಾಕ್ಟರ್ ಚಾಲಕ ತನ್ನ ಟ್ರ್ಯಾಕ್ಟರನ್ನು ಅತಿ ಜೋರಾಗಿ ಮತ್ತು ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದು ನನ್ನ ಗಂಡ ಬರುತ್ತಿದ್ದ ಕೆಎ-64-ಹೆಚ್-4243 ನೇ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವುಂಟು ಮಾಡಿದ ಪರಿಣಾಮ ನನ್ನ ಗಂಡ ತಮ್ಮಣ್ಣನವರ ತಲೆಗೆ,  ಎರಡು ಭುಜಗಳಿಗೆ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿದ್ದರಿಂದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ  ದಿನಾಂಕ:02/06/2018 ರಂದು ರಾತ್ರಿ  ಸುಮಾರು 07:30 ಗಂಟೆಯ ಸಮಯದಲ್ಲಿ ನನ್ನ ಗಂಡ ಓಡಿಸುತ್ತಿದ್ದ್ದ ಕೆಎ-64-ಹೆಚ್-4243 ನೇ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿರುವ ಕೆಎ-06-ಟಿಎ-9172-9173 ನೇ ಟ್ರ್ಯಾಕ್ಟರ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 85 guests online
Content View Hits : 321524