lowborn ಅಪರಾಧ ಘಟನೆಗಳು 04-06-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

:: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 04-06-18

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 68/2018, ಕಲಂ: 87 KP Act.

ದಿನಾಂಕ 03/06/2018 ರಂದು ರಾತ್ರಿ 09-30 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಬಂದು ನೀಡಿದ ಜ್ಞಾಪನದ ಅಂಶವೇನೆಂದರೆ, ದಿನಾಂಕ:-03.06.2018 ರಂದು ಸಂಜೆ 06:30 ಗಂಟೆಗೆ ಹುಳಿಯಾರು ಠಾಣಾ ಸರಹದ್ದು ಹುಳಿಯಾರು ಹೋಬಳಿ ಕೆರೆಸೂರಗೊಂಡನಹಳ್ಳಿ ಗ್ರಾಮದಲ್ಲಿರುವ ಭೂತಪ್ಪನ ಗುಡಿ ಮುಂಭಾಗ ದೇವಸ್ಥಾನದ ವಿದ್ಯುತ್ ದೀಪದ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಕಾನೂನು ಬಾಹಿರ ಅಂದರ್ - ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿ  ಮೇರೆಗೆ  ದಾಳಿ ಮಾಡುವ ಬಗ್ಗೆ ನ್ಯಾಯಾಲಯದಿಂದ ಅನುಮತಿ ಪಡೆದಿದ್ದು, ಠಾಣೆಗೆ ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ಸಿಬ್ಬಂದಿಯವರನ್ನು ಕರೆದುಕೊಂಡು ಇಲಾಖಾ ಜೀಪಿನಲ್ಲಿ ಸಂಜೆ 07:30 ಗಂಟೆಗೆ ಹುಳಿಯಾರು ಹೋಬಳಿ ಕೆರೆಸೂರಗೊಂಡನಹಳ್ಳಿ ಗ್ರಾಮದ ಸಮೀಪ ಹೋಗಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ಭೂತಪ್ಪನಗುಡಿ ಬಳಿ ಹೋಗಿ ನೋಡಲಾಗಿ ಭೂತಪ್ಪನಗುಡಿ ಮುಂಭಾಗ ದೇವಸ್ಥಾನದ ವಿದ್ಯುತ್ ದೀಪದ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ 06 ಜನ ಅಸಾಮಿಗಳು ನೆಲದ ಮೇಲೆ ವೃತ್ತಾಕಾರವಾಗಿ ಕುಳಿತುಕೊಂಡು ಮದ್ಯದಲ್ಲಿ ಒಂದು ಪ್ಲಾಸ್ಟಿಕ್ ಚೀಲವನ್ನು ಹಾಕಿಕೊಂಡು ಹಣವನ್ನು ಪಣಕ್ಕೆ ಕಟ್ಟಿಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ – ಬಾಹರ್ ಎಂತ ಹೇಳುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದು, ಸದರಿಯವರನ್ನು ಸುತ್ತುವರೆದು ದಾಳಿ ಮಾಡಲಾಗಿ ಒಬ್ಬ ಆಸಾಮಿ ಓಡಿ ಹೋಗಿದ್ದು ಉಳಿದ 5 ಜನರನ್ನು ಹಿಡಿದುಕೊಂಡಿದ್ದು ಅಸಾಮಿಗಳ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ 1) ಲೋಕೇಶ ಕೆ.ಎನ್ ಬಿನ್ ನಾಗಣ್ಣ, 39 ವರ್ಷ, ಎಲೆಕ್ಟ್ರಾನಿಕ್ ಕೆಲಸ, ಲಿಂಗಾಯತ ಜನಾಂಗ, ಕೆರೆಸೂರಗೊಂಡನಹಳ್ಳಿ, ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ಎಂತ ತಿಳಿಸಿದ್ದು ಈತನ ಮುಂಭಾಗ 2500/- ರೂ ನಗದು ಹಣ ಇರುತ್ತೆ 2) ರಾಮ್ ರಾವ್ ಬಿನ್ ಹುಮ್ಮೋಜಿರಾವ್, 38 ವರ್ಷ, ಮರಾಠಿ ಜನಾಂಗ, ಕೂಲಿಕೆಲಸ, ಹೊಸಹಳ್ಳಿ, ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ಎಂತ ತಿಳಿಸಿದ್ದು ಈತನ ಮುಂಭಾಗ 2300/- ರೂ ನಗದು ಹಣ ಇರುತ್ತೆ 3) ನಾಗೇಶ್ ರಾವ್ ಬಿನ್ ನರಸಿಂಹರಾವ್, 35 ವರ್ಷ, ಕೂಲಿಕೆಲಸ, ಮರಾಠಿ ಜನಾಂಗ, ವಳಗೇರಹಳ್ಳಿ, ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ಎಂತ ತಿಳಿಸಿದ್ದು ಈತನ ಮುಂಭಾಗ 1200/-ರೂ ನಗದು ಹಣ ಇರುತ್ತೆ 4) ಸೈಯದ್ ತಾಜ್ ಹುಸೇನ್ ಬಿನ್ ಸೈಯದ್ ಆಲಿ ಸಾಬ್, 33 ವರ್ಷ, ವ್ಯವಸಾಯ, ಮುಸ್ಲಿಂ ಜನಾಂಗ, ಅಬೂಬ್ ಸಾಬರ ಪಾಳ್ಯ, ಹುಳಿಯಾರು ಹೋಬಳಿ, ಚಿ.ನಾ ಹಳ್ಳಿ ತಾಲ್ಲೂಕು ಎಂತ ತಿಳಿಸಿದ್ದು ಈತನ ಮುಂಭಾಗ 520/- ರೂ ನಗದು ಹಣ ಇರುತ್ತೆ 5) ರಂಗಧಾಮಯ್ಯ ಬಿನ್ ಲೇಟ್ ತಿಮ್ಮಯ್ಯ, 48 ವರ್ಷ, ಉಪ್ಪಾರ ಜನಾಂಗ, ವಾಟರ್ ಮೆನ್ ಕೆಲಸ, ಕೆರೆಸೂರಗೊಂಡನಹಳ್ಳಿ,  ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ಎಂತ ತಿಳಿಸಿದ್ದು ಈತನ ಮುಂಭಾಗ 800/- ರೂ ನಗದು ಹಣ ಇರುತ್ತೆ ಅಖಾಡದಲ್ಲಿ 1000 ರೂ ನಗದು ಹಣ ಇರುತ್ತೆ. ನಂತರ ಸದರಿಯವರಿಗೆ ಓಡಿ ಹೋದ ಆಸಾಮಿಯ ಹೆಸರು ವಿಳಾಸ ತಿಳಿಯಲಾಗಿ ಕೆ.ಎಂ ರಾಜಣ್ಣ ಬಿನ್ ಲೇಟ್ ಮಲ್ಲಪ್ಪ, 40 ವರ್ಷ, ಉಪ್ಪಾರ ಜನಾಂಗ, ಕೂಲಿಕೆಲಸ, ಕೆರೆಸೂರಗೊಂಡನಹಳ್ಳಿ, ಹುಳಿಯಾರು ಹೋಬಳಿ, ಚಿ. ನಾ ಹಳ್ಳಿ ತಾಲ್ಲೂಕು ತಿಳಿಸಿದರು. ಸದರಿ ಆಸಾಮಿಗಳನ್ನು ಹಾಗೂ ಕಾನೂನು ಬಾಹಿರ ಇಸ್ಪೀಟ್ ಜೂಜಾಟಕ್ಕೆ ಪಣವಾಗಿ ಕಟ್ಟಿಕೊಂಡಿದ್ದ ಒಟ್ಟು 8320/- ರೂ ನಗದು ಹಣವನ್ನು, ಇಸ್ಪೀಟ್ ಜೂಜಾಟಕ್ಕೆ ಬಳಸಿದ್ದ 52 ಇಸ್ಪೀಟ್ ಎಲೆಗಳನ್ನು ಹಾಗೂ ನೆಲಕ್ಕೆ ಹಾಸಿಕೊಂಡಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು, ಪಂಚರ ಸಮಕ್ಷಮ ಸಂಜೆ 07:45 ಗಂಟೆಯಿಂದ ರಾತ್ರಿ 08:45  ಗಂಟೆಯವರೆಗೆ ಸರ್ಚ್ ಲೈಟ್ ಬೆಳಕಿನಲ್ಲಿ ಹಾಗೂ ದೇವಸ್ಥಾನದ ವಿದ್ಯುತ್ ದೀಪದ ಕೆಳಗೆ ಲ್ಯಾಪ್ ಟಾಪ್ ಮೂಲಕ ಪಂಚನಾಮ ಕ್ರಮ ಜರುಗಿಸಿ ವಶಕ್ಕೆ ಪಡೆದು ಮೇಲ್ಕಂಡ ಆಸಾಮಿಗಳು ಮತ್ತು ಮಾಲಿನೊಂದಿಗೆ ವಾಪಸ್ ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸಲು ಸೂಚಿಸಿ ನೀಡಿದ ಜ್ಞಾಪನದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ

 

ತಿಪಟೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್.ನಂ - 13/2018 ಕಲಂ: 174 ಸಿ.ಆರ್.ಪಿ.ಸಿ

ದಿನಾಂಕ:03/06/2018 ರಂದು ಬೆಳಿಗ್ಗೆ 10-15 ಗಂಟೆಗೆ ಪಿರ್ಯಾದಿ ಪುನಿತ್ ಬಿನ್ ಜಗಧೀಶ್ 28 ವರ್ಷ, ಖಾಸಗಿ ಬಸ್ ನಿಲ್ದಾಣದಲ್ಲಿ ಡೈರಿ ವ್ಯಾಪಾರ, ವಾಸ: ಎಂ.ಆರ್ ರಾಮಣ್ಣ ಲೇಔಟ್, ಇಂದಿರಾನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ; 03/06/2018 ರಂದು ಬೆಳಿಗ್ಗೆ 8-00 ಗಂಟೆಯ ಸಮಯದಲ್ಲಿ ನಾನು ಎಂದಿನಂತೆ ತಿಪಟೂರು ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ವ್ಯಾಪಾರಕ್ಕೆಂದು ಬಂದಾಗ ಬಸ್ ನಿಲ್ದಾಣದ ಪ್ಯಾಸೇಜ್ ಒಳಗಡೆ ಗೋಡೆಯ ಬಳಿ ಸುಮಾರು 50 ರಿಂದ 60 ವರ್ಷ ವಯಸ್ಸಿನ ಒಬ್ಬ ಗಂಡಸು ಮಲಗಿದ್ದವನನ್ನು ನೋಡಲಾಗಿ ಸತ್ತುಹೋಗಿರುತ್ತಾನೆ. ನಾನು ಈತನನ್ನು ಇದೇ ಮೊದಲು ನೋಡಿದ್ದು, ಎಲ್ಲೋ ಭಿಕ್ಷೆಬೇಡಿಕೊಂಡು ಬಂದು ಮಧ್ಯಪಾನ ಮಾಡಿಯೋ ಅಥವಾ ಇನ್ನಾವುದೋ ಖಾಯಿಲೆಯಿಂದಲೋ ನೆನ್ನೆ ರಾತ್ರಿ ಮಲಗಿದ್ದವನು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ಈತನ ಹೆಸರು ವಿಳಾಸ ಗೊತ್ತಿರುವುದಿಲ್ಲ. ಈತನ ಮೈಮೇಲೆ ಕೆಂಪು ನೀಲಿ ಬಣ್ಣದ ತುಂಬುತೋಳಿನ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಹಾಕಿದ್ದು, ಹರಿದಿರುತ್ತವೆ. ಆದ್ದರಿಂದ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್‌‌ ನಂ 08/2018 ಕಲಂ 174 ಸಿ.ಆರ್‌.ಪಿ.ಸಿ

ದಿನಾಂಕ:03/06/2018 ರಂದು ಬೆಳಗ್ಗೆ 11-30 ಗಂಟೆಗೆ ಪಿರ್ಯಾದಿ ಬೆಲ್ಲದಮಡುಗು ವಾಸಿ ಎಂ ನಾಗರಾಜು ರವರು  ಠಾಣೆಗೆ ಹಾಜರಾಗಿ, ನಾವುಗಳು ನಮ್ಮ ತಂದೆ ತಾಯಿಗೆ 3 ಜನ ಗಂಡು ಮಕ್ಕಳು ಮತ್ತು 4 ಜನ ಹೆಣ್ಣು ಮಕ್ಕಳು ಇದ್ದು ಎಲ್ಲರಿಗೂ ಮದುವೆಯಾಗಿದ್ದು ಎಲ್ಲರೂ ಅವರವರ ಸಂಸಾರದೊಂದಿಗೆ ವಾಸವಿರುತ್ತಾರೆ. ನಮ್ಮ ತಂದೆ ಮೃತಪಟ್ಟಿದ್ದು ತಾಯಿ ನಾಗಮ್ಮ ಬೇರೆ ವಾಸವಿರುತ್ತಾರೆ. ನನ್ನ ತಮ್ಮ ರಂಗಧಾಮಯ್ಯನಿಗೆ ಸುಮಾರು 50 ವರ್ಷ ವಯಸ್ಸಾಗಿದ್ದು ಆತನಿಗೆ ಬಂದ್ರೇಹಳ್ಳಿಯ ಬಿದರಮ್ಮ ಎಂಬುವವರನ್ನು ಮದುವೆ ಮಾಡಿಕೊಂಡು ಬಂದಿದ್ದು ಅವರಿಗೆ ರಂಗನಾಥ ರವಿ ರಕ್ಷಿತ ಎಂಬ ಮಕ್ಕಳಿರುತ್ತಾರೆ. ನನ್ನ ತಮ್ಮ ರಂಗಧಾಮಯ್ಯ ವಿಪರೀತ ಕುಡಿತದ ಚಟಕ್ಕೆ ಬಿದ್ದಿದ್ದು ಯಾವಾಗಲೂ ಕುಡಿದು ಎಲ್ಲಂದರಲ್ಲಿ ಮಲಗುವುದು ಬೀಳುವುದು ಮಾಡುತ್ತಿದ್ದ ದಿ:01/06/2018 ರಂದು ಸಂಜೆ ಬಿದರಮ್ಮ ರವರ ತವರು ಮನೆಯವರ ಜೊತೆ ತಿರುಪತಿಗೆ ಹೊರಟಿದ್ದು ಈತನನ್ನು ಕರೆಯಲಾಗಿ ರಂಗಧಾಮಯ್ಯ ಹಸು ನೋಡಿಕೊಂಡು ಇಲ್ಲೇ ಇರುತ್ತೇನೆ ಎಂದು ಹೇಳಿ ಇಲ್ಲೇ ಉಳಿದುಕೊಂಡಿದ್ದ ಬಿದರಮ್ಮ ಮತ್ತು 3 ಜನ ಮಕ್ಕಳು ಅವರ ತವರು ಮನೆಯವರ ಜೊತೆ ತಿರುಪತಿಗೆ ಹೋಗಿದ್ದರು ಹೀಗಿರುವಾಗ್ಗೆ ದಿ:03/06/18 ರಂದು ಬೆಳಗ್ಗೆ ಸುಮಾರು 10-00 ಗಂಟೆಯಲ್ಲಿ ನಮ್ಮೂರಿನ ಸಿದ್ದೇಶ ಮತ್ತು ರಾಜಪ್ಪ ರವರ ಜಮೀನಿನ ಮಧ್ಯೆ ಸರ್ಕಾರಿ ಹಳ್ಳಕ್ಕೆ ಬೆಲ್ಲದಮಡುಗು-ದಾಸೇನಹಳ್ಳಿ ರಸ್ತೆಗೆ ಹೊಂದಿಕೊಂಡಂತೆ ರಸ್ತೆಗೆ ಕಟ್ಟಿರುವ ಸೇತುವೆ ಕೆಳಗೆ ಯಾವುದೋ ಹೆಣ ಬಿದ್ದಿದೆ ಎಂದು ಯಾರೋ ತಿಳಿಸಿದ ಮೇರೆಗೆ  ಬಂದು ನೋಡಲಾಗಿ ಅದು ನನ್ನ ತಮ್ಮ ರಂಗಧಾಮಯ್ಯನ ಹೆಣವಾಗಿದ್ದು ನನ್ನ ತಮ್ಮ ದಿ:01/06/18 ರ ರಾತ್ರಿ 6-00 ಗಂಟೆಯಿಂದ ದಿ:03/06/18 ರ ಬೆಳಗ್ಗೆ 10-00 ಗಂಟೆಯೊಳಗಿನ ಅವದಿಯಲ್ಲಿ ಯಾವಾಗಲೋ ವಿಪರೀತ ಕುಡಿದ ಮತ್ತಿನಲ್ಲಿ ಸೇತುವೆ ಕೆಳಗೆ ಹೋಗಿ ಮಲಗಿದ್ದವನು ಅಲ್ಲಿಯೇ  ಮೃತಪಟ್ಟಿರುತ್ತಾನೆ. ನನ್ನ ತಮ್ಮ ವಿಪರೀತ ಕುಡಿದು ಮೃತಪಟದಟಿರುತ್ತಾನೆ ವಿನಃ ಅವನ ಸಾವಿನಲ್ಲಿ ಬೇರೆ ಅನುಮಾನವಿಲ್ಲ. ಆದರೂ ಸಹ ಈ ಬಗ್ಗೆ ತಾವು ಮುಂದಿನ ಕ್ರ ಜರುಗಿಸಬೇಕೆಂದು ಕೋರುತ್ತೇನೆ. ನನ್ನ ತಮ್ಮನ ಹೆಂಡತಿ ಮಕ್ಕಳು ತಿರುಪತಿಗೆ ಹೋಗಿದ್ದವರು ಊರಿಗೆ ವಾಪಾಸ್‌ ಬರಲು ಬೆಳಗ್ಗೆ ತಿರುಪತಿ ಬಿಟ್ಟಿದ್ದರೆಂದು ತಿಳಿದು ಅವರಿಗೆ ಫೋನ್‌ ಮೂಲಕ ವಿಚಾರ ತಿಳಿಸಿ ಠಾಣೆಗೆ ಬಂದು ನೀಡಿದ ದೂರಿನ ಅಂಶವಾಗಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 88 guests online
Content View Hits : 321526