lowborn ಅಪರಾಧ ಘಟನೆಗಳು 25-05-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

:: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 25-05-18

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ - 78/2018 ಕಲಂ: 143, 323, 324, 354, 504, 506 ರೆ/ವಿ 149 ಐಪಿಸಿ

ದಿನಾಂಕ:24/05/2018 ರಂದು ರಾತ್ರಿ 11-00 ಗಂಟೆಯಿಂದ 11-30 ಗಂಟೆಯವರೆಗೆ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು  ಆಲಿಂಪಾಷ ಬಿನ್‌ ಸಲೀಂಪಾಷ, 24 ವರ್ಷ, ಕೂಲಿ ಕೆಲಸ, ಮುಸ್ಲಿಂ ಜನಾಂಗ, ಬೋವಿಕಾಲೋನಿ, 1ನೇ ಕ್ರಾಸ್‌, ಗಾಂಧಿನಗರ,  ತಿಪಟೂರು ಟೌನ್‌ ರವರು ನೀಡಿದ ಲಿಖಿತ ಹೇಳಿಕೆ ಅಂಶವೇನೆಂದರೆ, ಈ ದಿನ ದಿನಾಂಕ:24-05-2018 ರಂದು ಸಂಜೆ 04 ಗಂಟೆ ಸಮಯದಲ್ಲಿ ಕರಿಬಸಪ್ಪ ಕಾಲೋನಿ ಬಳಿ ಯೂಸಫ್‌‌ ರವರಿಗೂ  ಅಝಗರ್‌, ಖುದ್ದೂಸ್‌, ಇಮ್ರಾನ್‌, ಅಪ್ಪು, ದಸ್ತಗಿರ್‌ ಇತರೆಯವರ ಜೊತೆ ಸೇರಿಕೊಂಡು ಗಲಾಟೆ ಮಾಡಿದ್ದು, ಇದೇ ಗಲಾಟೆ ದ್ವೇಷದಿಂದ ಈ ದಿನ ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಗಾಂಧಿನಗರದ ಬೋವಿಕಾಲೋನಿ 2ನೇ ಕ್ರಾಸ್‌ನಲ್ಲಿ ಇರುವ ನಮ್ಮ ತಂದೆಯ ತಂಗಿ ಹಸೀನಾಬಾನುರವರ ಮನೆಯ ಬಳಿ ಮೇಲ್ಕಂಡ 5 ಜನ ಅಸಾಮಿಗಳು ಇತರೆಯವರೊಂದಿಗೆ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಬಂದು ನಮ್ಮ ಅಪ್ಪನ ತಂಗಿ ಹಸೀನಾಬಾನು ರವರನ್ನು ಲೋಫರ್‌ಮುಂಡೆ, ಸುವರ್‌ಮುಂಡೆ ಎಂತ ಕೆಟ್ಟ ಮಾತುಗಳಿಂದ ಬೈದು ಅವರು ಕೇಳಿದ್ದಕ್ಕೆ ಅವರನ್ನು ಮೇಲ್ಕಂಡ 5 ಜನರು ಹಿಡಿದುಕೊಂಡು ಬಟ್ಟೆಯನ್ನು ಹಿಡಿದು ಎಳೆದಾಡಿ ಮಾನಭಂಗಕ್ಕೆ ಪ್ರಯತ್ನಿಸಿದರು. ಅಷ್ಟರಲ್ಲಿ ನಾನು ನಮ್ಮ ತಂದೆ ಹೋಗಿ ಕೇಳಲು ಹೋದಾಗ ದಸ್ತಗಿರ್‌ ಎಂಬುವನು ಕಬ್ಬಿಣದ ರಾಡಿನಿಂದ ನನ್ನ ಹಣೆಗೆ ಹೊಡೆದು ರಕ್ತಗಾಯಪಡಿಸಿದ ನಂತರ ನಮ್ಮ ತಂದೆಗೆ ಅಝಗರ್, ಇಮ್ರಾನ್‌, ಖುದ್ದೂಸ್‌ ರವರು ಸಹ ಕಬ್ಬಿಣದ ರಾಡಿನಿಂದ ನಮ್ಮ ತಂದೆ ಸಲೀಂಪಾಷ ರವರಿಗೆ ತಲೆಗೆ, ಮೈ ಕೈಗೆ ಹೊಡೆದು ಗಾಯಪಡಿಸಿರುತ್ತಾರೆ.ನಂತರ ಅಲ್ಲಿಗೆ ಬಂದ ಯೂಸಫ್‌ ಹಾಗೂ ಶಬ್ಬೀರ್ ಮತ್ತು ಬಿಲಾಲ್‌ ಇತರೆಯವರು ಈ ಗಲಾಟೆಯನ್ನು ಬಿಡಿಸಿದರು. ನಂತರ ಮೇಲ್ಕಂಡ 5 ಜನರು ಹೋಗುವಾಗ ನಿಮ್ಮನ್ನು ಇಷ್ಟಕ್ಕೆ ಬಿಡುವುದಿಲ್ಲ ಕೊಲೆ ಮಾಡುತ್ತೇನೆಂತ ಕೊಲೆ ಬೆದರಿಕೆ ಹಾಕಿದರು, ನಂತರ ಬಿಲಾಲ್‌ ಹಾಗೂ ಯೂಸಫ್‌ ರವರು ನಮ್ಮನ್ನು ಚಿಕಿತ್ಸೆಗೆ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಸಿದರು. ಆದ್ದರಿಂದ ಈ ಗಲಾಟೆ ಮಾಡಿದ ಮೇಲ್ಕಂಡ 5 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕಂತ ನೀಡಿದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ - 79/2018 ಕಲಂ:323,324,354504,506 R/W 34 IPC

ದಿನಾಂಕ:24/25-05-2018 ರಂದು ರಾತ್ರಿ 11-30 ಗಂಟೆಯಿಂದ 00-10 ಗಂಟೆಯವರೆಗೆ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು  ಶ್ರೀಮತಿ ಶಬೀನಾತಾಜ್‌ ಕೋಂ ಇಮ್ರಾನ್‌‌ಖಾನ್‌, 23 ವರ್ಷ, ಗೃಹಿಣಿ, ಮುಸ್ಲಿಂ ಜನಾಂಗ, 2ನೇ ಕ್ರಾಸ್‌, ಬೋವಿಕಾಲೋನಿ, ಗಾಂಧಿನಗರ,  ತಿಪಟೂರು ಟೌನ್‌ ರವರು ನೀಡಿದ ಲಿಖಿತ ಹೇಳಿಕೆ ಅಂಶವೇನೆಂದರೆ, ದಿನಾಂಕ:24-05-2018 ರಂದು ಮಧ್ಯಾನ್ಹ ಸುಮಾರು 4 ಗಂಟೆ ಸಮಯದಲ್ಲಿ ಗಾಂಧಿನಗರದ ಕರಿಬಸಪ್ಪ ಕಾಲೋನಿ ಬಳಿ ಯೂಸಫ್‌, ನನ್ನ ಗಂಡ ಇಮ್ರಾನ್‌ಖಾನ್‌ ಹಾಗೂ ಇತರೆಯವರಿಗೂ ಗಲಾಟೆಯಾಗಿದ್ದು, ಇದೇ ವಿಚಾರವಾಗಿ ಅದೇ ದ್ವೇಷವನ್ನು ಇಟ್ಟುಕೊಂಡು ಈ ದಿನ ರಾತ್ರಿ ಸುಮಾರು 10-15 ಗಂಟೆ ಸಮಯದಲ್ಲಿ ಮನೆಗೆ ಬಳಿ ಇದ್ದಾಗ ಗಾಂಧಿನಗರದ ಯೂಸಫ್‌, ಬಿಲಾಲ್‌, ಸಲೀಂ ಹಾಗೂ ಹಸೀನಾ ಬಾನು ಇರವರುಗಳು ನಮ್ಮ ಮನೆಯ ಬಳಿ ಬಂದು ಏಕಾಏಕೀ ಜಗಳ ತೆಗೆದು ಲೋಫರ್‌ ಮುಂಡೇರ, ಸುವರ್‌ ಮುಂಡೇರ ಅಂತ ಕೆಟ್ಟ ಮಾತುಗಳಿಂದ ಬೈದರು. ಆಗ ನಾನು ಶಾಕೀರಾಬೀ, ಶಬೀನಬಾನು ಹಾಗೂ ಫಾತಿಮಾ ಖಾನಂ ರವರುಗಳು ಏಕೆ ಜಗಳ ಮಾಡುತ್ತೀರ ಎಂದು ಕೇಳಿದಾಗ ಯೂಸಫ್‌ ರವರು ಒಂದು ಕಲ್ಲಿನಿಂದ ಮೂಗಿನ ಮೇಲ್ಬಾಗಕ್ಕೆ ಹೊಡೆದು ರಕ್ತಗಾಯಪಡಿಸಿದರು, ನಂತರ ನಮ್ಮ ಜೊತೆ ಯಲ್ಲಿದ್ದ ಶಾಕೀರಾಬೀ ರವರಿಗೆ ಹಸೀನಾಬಾನು ಪರಕೆಯಿಂದ ಪಕ್ಕೆಗೆ ಹೊಡೆದು ನೊವುಂಟು ಮಾಡಿದರು ಹಾಗೂ ಶಬೀನಾಖಾನಂ ಹಾಗೂ ಫರ್ಹತ್‌ಖಾನಂ ರವರಿಗೆ ಯೂಸಫ್‌‌, ಸಲೀಂ, ಹಸೀನಾಬಾನು ಹಾಗೂ ಬಿಲಾಲ್‌ ರವರು ಕೈಯಿಂದ ಮೈಕೈಗೆ ಹೊಡೆದು ಕಾಲಿನಿಂದ ಒದ್ದು ನೋವುಂಟು ಮಾಡಿದರು. ಹಾಗಗೂ ಬಿಡಿಸಲು ಬಂದ ಅಝಗರ್‌ ರವರಿಗೆ ಯೂಸಫ್‌‌, ಬಿಲಾಲ್‌ ರವರು ನೆಲಕ್ಕೆ ಕೆಡವಿ ದೊಣ್ಣೆಯಿಂದ ಕೈ ಮತ್ತು ಮೈಗೆ ಹೊಡೆದು ನೋವುಂಟು ಮಾಡಿದರು. ಯೂಸಫ್‌, ಸಲೀಂ ರವರು ನನಗೆ ಮತ್ತು ಶಾಕೀರಾಬೀ ಹಾಗೂ ಶಬನಾಖಾನಂ ರವರನ್ನು ಹಿಡಿದು ಎಳೆದಾಡಿ ಮಾನಭಂಗಕ್ಕೆ ಪ್ರಯತ್ತಿಸಿದರು. ನಂತರ ಅಲ್ಲಿಗೆ ಬಂದ ಫಾತಿಮಾಖಾನಂ ಕೋಂ ಇರ್ಫಾನ್‌, ಇರ್ಫಾನ್‌ ಬಿನ್‌ ಮಹಮ್ಮದ್‌ಗೌಸ್‌ ಹಾಗೂ ಇತರೆಯವರು ಸೇರಿಕೊಂಡು ಗಲಾಟೆ ಬಿಡಿಸಿ ನಮ್ಮನ್ನು ಚಿಕಿತ್ಸೆಗಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಸಿರುತ್ತಾರೆ. ಆದ್ದರಿಂದ ಈ ಗಲಾಟೆ ಮಾಡಿದ ಮೇಲ್ಕಂಡ ಯೂಸಫ್‌, ಹಸೀನಾಬಾನು, ಸಲೀಂ ಹಾಗೂ ಬಿಲಾಲ್‌ ರವರ  ಮೇಲೆ ಕಾನೂನು ರೀತಿಯಕ್ರಮ ಜರುಗಿಸಬೇಕಂತ ನೀಡಿದ ಹೇಳಿಕೆಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 63/2018, ಕಲಂ: 279, 304(A) IPC.

ದಿನಾಂಕ 24/05/2018 ರಂದು ಸಂಜೆ 07-00 ಗಂಟೆಗೆ ಪಿರ್ಯಾದುದಾರರಾದ ಅನಂತಕುಮಾರ್ ಬಿನ್ ಲಕ್ಷ್ಮಯ್ಯ, ವಿಜಯನಗರ ಬಡಾವಣೆ, ಹುಳಿಯಾರು ಟೌನ್, ಚಿಕ್ಕನಾಯಕನಹಳ್ಳಿ ತಾಲ್ಲೂಕು ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಮ್ಮ ತಂದೆ ಲಕ್ಷ್ಮಯ್ಯ ಸುಮಾರು 58 ಇವರು ದಿನಾಂಕ:24/05/2018 ರಂದು ಸಂಜೆ 05-00 ಗಂಟೆ ಸಮಯದಲ್ಲಿ ಕೆ.ಎ-44 ಕ್ಯೂ-1445 ನೇ ಟಿ.ವಿ.ಎಸ್ ಎಕ್ಸ್.ಎಲ್ ಹೆವಿಡ್ಯೂಟಿ ದ್ವಿಚಕ್ರ ವಾಹನದಲ್ಲಿ ತರಕಾರಿ ತರಲು ಮನೆಯಿಂದ ಹೋಗಿದ್ದು, ಇದೇ ದಿನ ಸಂಜೆ 05-45 ಗಂಟೆ ಸಮಯದಲ್ಲಿ ನಮ್ಮ ಚಿಕ್ಕಪ್ಪರವರಾದ ಶಂಕರಪ್ಪ ರವರು ನನಗೆ ಫೋನ್ ಮಾಡಿ ನಿಮ್ಮ ತಂದೆ ಲಕ್ಷ್ಮಯ್ಯ ರವರು ಹುಳಿಯಾರು ಟೌನ್ ಐ.ಬಿ ಕಡೆಯಿಂದ ಹುಳಿಯಾರು ಬಸ್ ನಿಲ್ದಾಣದ ಕಡೆಗೆ ಸಂಜೆ ಸುಮಾರು 05-30 ಗಂಟೆ ಸಮಯದಲ್ಲಿ ಹೋಗುವಾಗ ಪೆಟ್ರೋಲ್ ಬಂಕ್ ಕಡೆಯಿಂದ ಬಂದ ಕೆ.ಎ 02 ಎ.ಇ 9144 ನೇ ಟ್ಯಾಂಕರ್ ಲಾರಿಯ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು, ಮುಂದೆ ಹೋಗುತ್ತಿದ್ದ ಲಕ್ಷ್ಮಯ್ಯ ರವರ ಟಿ.ವಿ.ಎಸ್ ಎಕ್ಸ್.ಎಲ್ ಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿ ಲಕ್ಷ್ಮಯ್ಯನವರ ತಲೆಯ ಮೇಲೆ ಲಾರಿ ಚಕ್ರ ಹತ್ತಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಫೋನ್ ಮೂಲಕ ತಿಳಿಸಿದರು. ನಾನು ತಕ್ಷಣ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ತಂದೆಯ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ನಂತರ ಸ್ಥಳದಲ್ಲಿ ನನ್ನ ಚಿಕ್ಕಪ್ಪ ಮತ್ತು ನನಗೆ ಪರಿಚಯವಿದ್ದ ಹುಳಿಯಾರಿನ ವೆಂಕಟೇಶ್ ಬಿನ್ ರಾಮಣ್ಣ ಹಾಗೂ ಇತರರು ನನ್ನ ತಂದೆಯ ಶವವನ್ನು ಹುಳಿಯಾರು ಆಸ್ಪತ್ರೆಯ ಶವಗಾರದಲ್ಲಿಟ್ಟು, ನಮ್ಮ ತಂದೆಗೆ ಅಪಘಾತ ಪಡಿಸಿದ ಕೆ.ಎ-02 ಎ.ಇ-9144 ನೇ ಟ್ಯಾಂಕರ್ ಲಾರಿ ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಅಮೃತೂರು ಪೊಲೀಸ್‌ ಠಾಣಾ ಮೊನಂ-101/2018, ಕಲಂ-392 ಐಪಿಸಿ

ದಿನಾಂಕ: 24-05-2018 ರಂದು ಮದ್ಯಾಹ್ನ 3-05 ಗಂಟೆಯಲ್ಲಿ ಪಿರ್ಯಾದಿ ಶ್ರೀಮತಿ ವೆಂಕಟಲಕ್ಷ್ಮಮ್ಮ ಕೋಂ ಲೇಟ್ ಎ.ಟಿ.ಗೋಪಾಲ, 47 ವರ್ಷ, ಒಕ್ಕಲಿಗರು, ಜಿರಾಯ್ತಿ, ಪೇಟೆ ಬೀದಿ, ಅಮೃತೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ: 24-05-2018 ರಂದು ನಾನು ಅಮೃತೂರಿನಿಂದ ಶಾನುಬೋಗನಹಳ್ಳಿ ಗ್ರಾಮದ ರಸ್ತೆಯ ಪಕ್ಕದಲ್ಲಿ ಇರುವ ಅಮೃತೂರು ಟೌನ್‌‌ನ ಮರಳೂರಪ್ಪ ರವರ ತೆಂಗಿನ ತೋಟದ ಪಕ್ಕದಲ್ಲಿ ನಮ್ಮ ಹಸುಗಳನ್ನು ಮೇಹಿಸುತ್ತಿದ್ದಾಗ ಮದ್ಯಾಹ್ನ ಸುಮಾರು 2-00 ಗಂಟೆ ಸಮಯದಲ್ಲಿ ಯಾರೋ ಇಬ್ಬರು ಹುಡುಗರು ಒಂದು ಬೈಕಿನಲ್ಲಿ ಅಮೃತೂರು ಕಡೆಯಿಂದ ಬಂದು ರಸ್ತೆಯ ಪಕ್ಕದಲ್ಲಿದ್ದ ನನ್ನ ಮುಂದೆ ಸ್ವಲ್ಪ ದೂರದಲ್ಲಿ ಬೈಕನ್ನು ನಿಲ್ಲಿಸಿ, ಹಿಂದೆ ಕುಳಿತಿದ್ದವನು ಬೈಕಿನಿಂದ ಕೆಳಗಿಳಿದು ನನ್ನ ಬಳಿ ಬಂದು ಏಕಾ ಏಕಿ ನನ್ನನ್ನು ನೆಲದ ಮೇಲೆ ತಳ್ಳಿ ಬೀಳಿಸಿ ನನ್ನ ಕೊರಳಲ್ಲಿದ್ದ ಸುಮಾರು 50 ಗ್ರಾಂ ತೂಕದ 1,15,000/- ಬೆಲೆ ಬಾಳುವ ಎರಡು ಎಳೆ ಚಿನ್ನದ ಸರವನ್ನು ಕಿತ್ತುಕೊಂಡು, ಆತನು ಓಡಿಹೋಗಿ ಬೈಕಿನಲ್ಲಿ ಹತ್ತಿಕೊಂಡು ಇಬ್ಬರೂ ವೇಗವಾಗಿ ಶಾನುಬೋಗನಹಳ್ಳಿ ಗ್ರಾಮದ ಕಡೆಗೆ ಹೊರಟು ಹೋದರು. ಅವರು ನನ್ನ ಚಿನ್ನದ ಸರವನ್ನು ಕಿತ್ತುಕೊಳ್ಳುವಾಗ ಏನನ್ನೂ ಮಾತನಾಡಲಿಲ್ಲ, ಅವರು ಸುಮಾರು 30 ರಿಂದ 35 ವರ್ಷ ವಯಸ್ಸಿನವರಾಗಿದ್ದು, ನನ್ನ ಚಿನ್ನದ ಸರವನ್ನು ಕಿತ್ತು ಕೊಂಡವನು ಕಪ್ಪು ಪಟ್ಟೆಗಳುಳ್ಳ ಹಳದಿ ಬಣ್ಣದ ಟೀ ಶರ್ಟ ಮತ್ತು ಕಪ್ಪು ಅಥವಾ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದನು. ನನ್ನ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುವ ಆ ಇಬ್ಬರು ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಿ ನನ್ನ ಚಿನ್ನದ ಸರವನ್ನು ನನಗೆ ಕೊಡಿಸಿಕೊಡಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 95 guests online
Content View Hits : 321529