lowborn ಅಪರಾಧ ಘಟನೆಗಳು 20-05-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

:: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 20-05-18

ಹುಳಿಯಾರು ಪೊಲೀಸ್ ಠಾಣಾ ಮೊ.ನಂ 60/2018, ಕಲಂ: 44 KMMCR, 21(1) MMDR Act & 379 IPC,

ದಿನಾಂಕ 19-05-2018 ರಂದು ಸಂಜೆ 06-30 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಅಂಶವೇನೆಂದರೆ, ನಾನು ದಿನಾಂಕ:-19-05-2018 ರಂದು ಹುಳಿಯಾರು ಠಾಣಾ ವ್ಯಾಪ್ತಿಯಲ್ಲಿ ಗಸ್ತು ಮಾಡಿಕೊಂಡು ಹುಳಿಯಾರು ಕಡೆ ಬರುತ್ತಿದ್ದಾಗ ಸಂಜೆ 05:30 ಗಂಟೆ ಸಮಯದಲ್ಲಿ ಹುಳಿಯಾರು ಹೋಬಳಿ ಹೊಸಹಳ್ಳಿ ಕೈಮರದ ಬಳಿ ಬರುತ್ತಿದ್ದಾಗ ಯಳನಡು ಕಡೆಯಿಂದ ಬಂದ ಒಂದು ಟ್ರಾಕ್ಟರ್ ಟ್ರೈಲರ್ ಚಾಲಕ ಪೊಲೀಸ್ ವಾಹನವನ್ನು ನೋಡಿ ಕೈಮರದ ಬಳಿ ತನ್ನ ಟ್ರಾಕ್ಟರ್ ಟ್ರೈಲರ್ ಅನ್ನು ನಿಲ್ಲಿಸಿ ಓಡಿ ಹೋಗಿದ್ದು ನಾನು ಮತ್ತು ನನ್ನ ಜೊತೆಯಲ್ಲಿದ್ದ ಠಾಣಾ ಸಿಬ್ಬಂದಿ ಸಿ.ಪಿ.ಸಿ 506 ನಾಗರಾಜು ರವರು ಆತನನ್ನು ಹಿಡಿಯಲು ಪ್ರಯತ್ನಿಸಿದ್ದು ಚಾಲಕ ಸಿಗದೇ ತಪ್ಪಿಸಿಕೊಂಡು ಓಡಿಹೋಗಿದ್ದು, ನಂತರ ಟ್ರಾಕ್ಟರ್ ಟ್ರೈಲರ್ ಅನ್ನು ಪರಿಶೀಲಿಸಲಾಗಿ FARMTRAC ಕಂಪನಿಯ ಕೆಎ 44 ಎಂ 2144 ನೇ ಟ್ರಾಕ್ಟರ್ ಆಗಿದ್ದು ಇದರ ಟ್ರೈಲರ್ ನಂಬರ್ ನೋಡಲಾಗಿ ನೊಂದಣಿ ಸಂಖ್ಯೆ ಇರುವುದಿಲ್ಲ. ಈ ಟ್ರೈಲರ್ ತುಂಬಾ ಮರಳನ್ನು ತುಂಬಿದ್ದು ಇದರ ಮೇಲೆ 3 ಸಲ್ಕೆ ಹಾಗೂ 3 ಪ್ಲಾಸ್ಟಿಕ್ ಬಾಂಡ್ಲಿಗಳು ಇರುತ್ತವೆ. ಸದರಿ ಟ್ರಾಕ್ಟರ್ ಟ್ರೈಲರ್ ನ ಚಾಲಕ ಮರಳನ್ನು ತುಂಬಲು ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೆ, ಸರ್ಕಾರಕ್ಕೆ ಯಾವುದೇ ರೀತಿಯ ಹಣವನ್ನು ಪಾವತಿ ಮಾಡದೇ ಎಲ್ಲಿಯೋ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಸಾಗಿಸುತ್ತಿರುವುದಾಗಿ ತಿಳಿದು ಬಂದ ಮೇರೆಗೆ ಭಾತ್ಮೀದಾರರ ಸಹಾಯದಿಂದ ಟ್ರಾಕ್ಟರ್ ಟ್ರೈಲರ್ ಅನ್ನು ಮತ್ತು ಮೇಲ್ಕಂಡ ಮಾಲುಗಳನ್ನು ಪೊಲೀಸ್ ಠಾಣೆಗೆ ತಂದು ಓಡಿ ಹೋದ ಕೆಎ 44 ಎಂ 2144 ನೇ ಟ್ರಾಕ್ಟರ್ ಟ್ರೈಲರ್ ಮಾಲೀಕ/ಚಾಲಕನ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ನೀಡಿದ ಜ್ಞಾಪನದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಚೇಳೂರು  ಪೊಲೀಸ್  ಠಾಣಾ ಮೊ. ನಂ 96/2018 ಕಲಂ 457.380  ಐ.ಪಿ.ಸಿ.

ದಿನಾಂಕ;19/05/2018 ರಂದು  ಸಂಜೆ 5-30  ಗಂಟೆಗೆ  ಪಿರ್ಯಾದಿ  ಗಿರೀಶ್  ರವರು  ಠಾಣೆಗೆ  ಹಾಜರಾಗಿ  ನೀಡಿದ  ಪಿರ್ಯಾದು ಅಂಶವೇನಂದರೆ, ನಾನು  ಈಗ್ಗೆ   ಸುಮಾರು 02  ವರ್ಷಗಳ  ಹಿಂದೆ  ಬೆಂಗಳೂರು  ಕೋರಮಂಗಲದಲ್ಲಿ ಇರುವ  ನಿಸಾ ಸೆಕ್ಯುರಿಟೀಸ್ ಲಿಮಿಟೆಡ್ ನಲ್ಲಿ ಸೂಪರ್ ವೈಜರ್ ಕೆಲಸಕ್ಕೆ ಸೇರಿಕೊಂಡು ನಮ್ಮ ಕಂಪನಿಯಿಂದ ತುಮಕೂರು ಜಿಲ್ಲೆಗೆ ಮ್ಯಾನೇಜರ್ ಆಗಿ ಶಿವಕುಮಾರ್  ಎಂಬುರವನ್ನು ನೇಮಕ ಮಾಡಿದ್ದು, ನಾನು ಅವರ ಕೈ ಕೆಳಗೆ  ತುಮಕೂರು ಜಿಲ್ಲೆಯಲ್ಲಿ ಇರುವ ಮೊಬೈಲ್ ಟವರ್ ಗಳ    ಸೆಕ್ಯೂರಿಟಿ   ಸೂಪರ್  ವೈಸರ್  ಆಗಿ    ಕೆಲಸ  ಮಾಡುತ್ತಿರುತ್ತೇನೆ  ನಮ್ಮ  ಕಂಪನಿಗೆ  ಗುಬ್ಬಿ  ತಾಲ್ಲೋಕ್,  ನಿಟ್ಟೂರು  ಹೋ,  ಕೋಡಿನಾಗೇನಹಳ್ಳಿ  ಗೇಟ್  ನಲ್ಲಿ  ಏರ್  ಟೆಲ್ ಟವರ್ ಗೆ   ನೀಸಾ  ಕಂಪನಿಯಿಂದ  ಸೂಪರ್  ವೈಸರ್   ಆಗಿ    ನನ್ನನ್ನು  ನೇಮಕ  ಮಾಡಿದ್ದು,  ಅದರಂತೆ  ನಾನು  ಕರ್ತವ್ಯ  ನಿರ್ವಹಿಸುತ್ತಿರುತ್ತೇನೆ.   ನಾನು   ದಿನಾಂಕ; 16/05/2018   ರಂದು   ಸಂಜೆ  6-00  ಗಂಟೆ  ಸಮಯದಲ್ಲಿ   ಕೊಡಿನಾಗೇನಹಳ್ಳಿ  ಗೇಟ್  ನಲ್ಲಿ  ಇರುವ  ಟವರ್  ನನ್ನು  ಚೆಕ್  ಮಾಡಿಕೊಂಡು  ಸದರಿ  ಟವರ್  ನ  ಬೀಗ  ಹಾಕಿಕೊಂಡು   ಹೊರಟು  ಹೋಗಿದ್ದು,   ದಿನಾಂಕ; 17/05/2018  ರಂದು   ಬೆಳಗ್ಗೆ  7-00  ಗಂಟೆ  ಸಮಯದಲ್ಲಿ  ನನ್ನ  ಕಂಪನಿಯ   ಟೆಕ್ನೀಷಿಯನ್   ಆದ   ವಿನಾಯಕ್  ರವರು  ನನಗೆ  ಪೋನ್  ಮಾಡಿ  ನಮ್ಮ  ಕಂಪನಿಯವರು  ಹಾಕಿರುವ  ಕೋಡಿನಾಗೇನಹಳ್ಳಿಯ  ಗೇಟ್  ಬಳಿ  ಇರುವ   ಮೊಬೈಲ್  ಟವರ್ ನ   ಬ್ಯಾಟರಿ  ರೂಂ  ಶೆಲ್ಟರ್ ಗೆ  ಹಾಕಿದ್ದ  ಬೀಗವನ್ನು  ಮುರಿದು  ರೂಂ ( ಶೆಲ್ಟರ್  )   ನಲ್ಲಿ  ಇದ್ದ  ಬ್ಯಾಟರಿಗಳನ್ನು  ಕಳ್ಳತನ  ಮಾಡಿಕೊಂಡು  ಹೋಗಿರುತ್ತಾರೆಂದು   ತಿಳಿಸಿದರು.  ಆಗ  ನಾನು   ಕೋಡಿನಾಗೇನಹಳ್ಳಿ  ಬಳಿಗೆ   ನಮ್ಮ  ಏರ್  ಟೆಲ್   ಟವರ್  ಬಳಿಗೆ  ಬಂದು  ನೋಡಿದೆ  ವಿಚಾರ  ನಿಜವಾಗಿತ್ತು.   ಆಗ  ನಾನು  ನೋಡಲಾಗಿ  ನನ್ನ    ಟವರ್  ನ  ಶೆಲ್ಟರ್  ನಲ್ಲಿ  ಇದ್ದ  55   ಬ್ಯಾಟರಿಗಳನ್ನು   ಯಾರೋ  ಕಳ್ಳರು  ಕಳ್ಳತನ  ಮಾಡಿಕೊಂಡು  ಹೋಗಿದ್ದು,  ಬ್ಯಾಟರಿಗಳ  ನಂಬರ್  1) IN  1096998,  2) IN  1236081   3)  IN  1301190 4)  IN  1119835    5) IN  1020549 ಆಗಿದ್ದು,   ಇವುಗಳನ್ನು  ದಿನಾಂಕ 16/05/2018 ರಂದು  ಸಂಜೆ 6-00 ಗಂಟೆಯಿಂದ   ದಿನಾಂಕ 17/05/2018  ರಂದು   ಬೆಳಗ್ಗೆ 6-00  ಗಂಟೆಯ  ಒಳಗೆ  ಯಾವುದೋ   ವೇಳೆಯಲ್ಲಿ  ಯಾರೋ  ಕಳ್ಳರು  ಕಳ್ಳತನ  ಮಾಡಿಕೊಂಡು  ಹೋಗಿರುತ್ತಾರೆ. ಕಳ್ಳತನ  ವಾಗಿರುವ    ಟವರ್  ಬ್ಯಾಟರಿಗಳ   ಬೆಲೆ  ಸುಮಾರು 3.00.000 ರೂ  ಗಳಾಗಿರುತ್ತವೆ.  ಈ ವಿಚಾರವನ್ನು  ನಮ್ಮ  ಕಂಪನಿಯ  ಮೇಲಾಧಿಕಾರಿಗಳಿಗೆ  ತಿಳಿಸಿ   ಈ  ದಿನ  ತಡವಾಗಿ  ಠಾಣೆಗೆ  ಬಂದು   ದೂರು  ನೀಡಿರುತ್ತೇನೆ.   ಆದ್ದರಿಂದ   ನಮ್ಮ  ಬ್ಯಾಟರಿಗಳನ್ನು  ಕಳ್ಳತನ  ಮಾಡಿರುವವರ  ಮೇಲೆ  ಕಾನೂನು  ರೀತ್ಯ  ಕ್ರಮ  ಜರುಗಿಸಲು   ಕೋರಿ  ಇತ್ಯಾದಿಯಾದ  ಪಿರ್ಯಾದು  ಅಂಶ.

ತಿಪಟೂರು ನಗರ ಪೊಲೀಸ್ ಠಾಣಾ ಮೊ. ನಂ - 76/2018 ಕಲಂ: 323. 324, 427, 504 r/w 149 IPC

ದಿನಾಂಕ:19/05/2018 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದುದಾರರಾದ ಅಬ್ದುಲ್‌ ಅಜೀಮ್‌ @ ಮುನ್ನಾ ಬಿನ್‌ ಮಹಮದ್ ಯೂಸಫ್‌, 48 ವರ್ಷ, ಮುಸ್ಲಿಂ, ಮರದ ವ್ಯಾಪಾರ, 6ನೇ ಕ್ರಾಸ್‌, ಚಾಮುಂಡೇಶ್ವರಿ ಬಡಾವಣೆ, ಗಾಂಧಿನಗರ, ತಿಪಟೂರು ಟೌನ್‌ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ ಮಗ ನದೀಮ್‌ ರವರಿಗೂ ಚಾಮುಂಡಿ ಬಡಾವಣೆಯ ಕುಬೇಬ್‌ ರವರಿಗೂ ನನ್ನ ನಾದಿನಿ ಮಗಳ ವಿಚಾರದಲ್ಲಿ ದ್ವೇಷವಿದ್ದು, ಈ ದ್ವೇಷದಿಂದ ನನ್ನ ಮಗ ದಿನಾಂಕ:18-05-2018 ರಂದು ರಾತ್ರಿ 9-15 ಗಂಟೆ ಸಮಯದಲ್ಲಿ ಬೋವಿ ಕಾಲೋನಿ ಮುಖ್ಯರಸ್ತೆಯ ಅಂಗಡಿ ಬಳಿ ಕುಳಿತ್ತಿದ್ದಾಗ, ಇದೇ ಸಮಯಕ್ಕೆ ಅಲ್ಲಿಗೆ ಬಂದ ಕುಬೇಬ್‌ ನನ್ನ ಮಗನ ಮೇಲೆ ಜಗಳ ತೆಗೆದು ಯಾವುದೋ ಆಯುಧದಿಂದ ಎದೆಗೆ ಹೊಡೆದು ರಕ್ತಗಾಯಪಡಿಸಿ ಮತ್ತು ಕೈಗಳಿಂದ ತಲೆಗೆ ಹೊಡೆದು ಗಾಯಪಡಿಸಿದರು. ಆಗ ಮನೆಯಲ್ಲಿ ಇದ್ದ ನನಗೆ ಈ ವಿಚಾರವನ್ನು ತಿಳಿಸಿದಾಗ ನಾನು ಮತ್ತು ನನ್ನ ದೊಡ್ಡ ಮಗ ಖಾಲಿದ್‌ ಕೂಡಲೇ ಸ್ದಳಕ್ಕೆ ಹೋದಾಗ ಅಲ್ಲಿ ಇದ್ದ ಪಾಜೀಲ್‌ ಈ ಗಲಾಟೆ ವಿಚಾರ ತಿಳಿಸಿದರು. ನಂತರ ನಮ್ಮನ್ನು ಈ ಗಲಾಟೆ ವಿಚಾರದ ಬಗ್ಗೆ ಮಸೀದಿ ಬಳಿ ಮಾತನಾಡಲು ಹೇಳಿದ್ದರಿಂದ ನಾನು ಮತ್ತು ನನ್ನ ಮಗ ದೊಡ್ಡ ಮಸೀದಿ ಬಳಿ ಹೋದಾಗ, ಮಸೀದಿ ಗೇಟ್‌ ಬಳಿ ಇದ್ದ ಅತೀಕ್‌ ಬಿನ್‌ ಮಹಬೂಬ್‌, ಅಜಗರ್‌, ಹಫೀಜ್‌ ಖುದ್ದಸ್‌, ನಯಾಜ್‌ ರವರುಗಳು  ಸುವಾರ್‌ ನನ್ನ ಮಗನೆ ಎಂತ ಕೆಟ್ಟ ಮಾತುಗಳಿಂದ ಬೈದು 4 ಜನ ಸೇರಿ ಕೈನಿಂದ ನನಗೆ ಮತ್ತು ನನ್ನ ಮಗನಿಗೆ ಹೊಡೆದರು. ಈ ಗಲಾಟೆಯು ರಾತ್ರಿ 10 ಗಂಟೆಗೆ ನಡೆದಿತ್ತು, ಅಲ್ಲೆ ಇದ್ದ ಬಾಬು ಹಾಗೂ ಇತರೆಯವರು ಗಲಾಟೆ ಬಿಡಿಸಿದರು. ನಾವು ಮನೆಗೆ ಹೊದೆವು. ಆಗ ಮೇಲ್ಕಂಡವರು ಮನೆಯ ಬಳಿ ಬಂದು ಕಲ್ಲಿನಿಂದ ಕಿಟಕಿಗೆ ಹೊಡೆದು ನಷ್ಟ ಉಂಟು ಮಾಡಿರುತ್ತಾರೆ. ನನ್ನ ಮಗನಿಗೆ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಬೇಕಂತ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಚೇಳೂರು ಪೊಲೀಸ್ ಠಾಣಾ ಮೊ.ನಂ 96 /2018, ಕಲಂ:457.380. ಐ.ಪಿ.ಸಿ

ದಿನಾಂಕ;19/05/2018 ರಂದು  ಸಂಜೆ 5-30  ಗಂಟೆಗೆ  ಪಿರ್ಯಾದಿ  ಗಿರೀಶ್  ಬಿನ್  ಮಹದೇವಯ್ಯ, 24ವರ್ಷ, ಲಿಂಗಾಯ್ತರು  ಜನಾಂಗ,  ಸೂಪರ್ ವೈಜರ್  ಕೆಲಸ, ನಿಸಾ ಸೆಕ್ಯುರಿಟೀಸ್ ಲಿಮಿಟೆಡ್, ಕೋರಮಂಗಲ, ಬೆಂಗಳೂರು. ಸ್ವಂತ ಊರು ನಾಗವಲ್ಲಿ, ಹೆಬ್ಬೂರು ಗ್ರಾಮ,  ಹೋಬಳಿ, ತುಮಕೂರು  ತಾಲ್ಲೋಕ್. ರವರು  ಠಾಣೆಗೆ  ಹಾಜರಾಗಿ  ನೀಡಿದ  ಪಿರ್ಯಾದು ಅಂಶವೇನಂದರೆ, ನಾನು  ಈಗ್ಗೆ   ಸುಮಾರು 02  ವರ್ಷಗಳ  ಹಿಂದೆ  ಬೆಂಗಳೂರು  ಕೋರಮಂಗಲದಲ್ಲಿ ಇರುವ  ನಿಸಾ ಸೆಕ್ಯುರಿಟೀಸ್ ಲಿಮಿಟೆಡ್ ನಲ್ಲಿ ಸೂಪರ್ ವೈಜರ್ ಕೆಲಸಕ್ಕೆ ಸೇರಿಕೊಂಡು ನಮ್ಮ ಕಂಪನಿಯಿಂದ ತುಮಕೂರು ಜಿಲ್ಲೆಗೆ ಮ್ಯಾನೇಜರ್ ಆಗಿ ಶಿವಕುಮಾರ್  ಎಂಬುರವನ್ನು ನೇಮಕ ಮಾಡಿದ್ದು, ನಾನು ಅವರ ಕೈ ಕೆಳಗೆ  ತುಮಕೂರು ಜಿಲ್ಲೆಯಲ್ಲಿ ಇರುವ ಮೊಬೈಲ್ ಟವರ್ ಗಳ    ಸೆಕ್ಯೂರಿಟಿ   ಸೂಪರ್  ವೈಸರ್  ಆಗಿ    ಕೆಲಸ  ಮಾಡುತ್ತಿರುತ್ತೇನೆ  ನಮ್ಮ  ಕಂಪನಿಗೆ  ಗುಬ್ಬಿ  ತಾಲ್ಲೋಕ್,  ನಿಟ್ಟೂರು  ಹೋ,  ಕೋಡಿನಾಗೇನಹಳ್ಳಿ  ಗೇಟ್  ನಲ್ಲಿ  ಏರ್  ಟೆಲ್ ಟವರ್ ಗೆ   ನೀಸಾ  ಕಂಪನಿಯಿಂದ  ಸೂಪರ್  ವೈಸರ್   ಆಗಿ    ನನ್ನನ್ನು  ನೇಮಕ  ಮಾಡಿದ್ದು,  ಅದರಂತೆ  ನಾನು  ಕರ್ತವ್ಯ  ನಿರ್ವಹಿಸುತ್ತಿರುತ್ತೇನೆ.   ನಾನು   ದಿನಾಂಕ; 16/05/2018   ರಂದು   ಸಂಜೆ  6-00  ಗಂಟೆ  ಸಮಯದಲ್ಲಿ   ಕೊಡಿನಾಗೇನಹಳ್ಳಿ  ಗೇಟ್  ನಲ್ಲಿ  ಇರುವ  ಟವರ್  ನನ್ನು  ಚೆಕ್  ಮಾಡಿಕೊಂಡು  ಸದರಿ  ಟವರ್  ನ  ಬೀಗ  ಹಾಕಿಕೊಂಡು   ಹೊರಟು  ಹೋಗಿದ್ದು,   ದಿನಾಂಕ; 17/05/2018  ರಂದು   ಬೆಳಗ್ಗೆ  7-00  ಗಂಟೆ  ಸಮಯದಲ್ಲಿ  ನನ್ನ  ಕಂಪನಿಯ   ಟೆಕ್ನೀಷಿಯನ್   ಆದ   ವಿನಾಯಕ್  ರವರು  ನನಗೆ  ಪೋನ್  ಮಾಡಿ  ನಮ್ಮ  ಕಂಪನಿಯವರು  ಹಾಕಿರುವ  ಕೋಡಿನಾಗೇನಹಳ್ಳಿಯ  ಗೇಟ್  ಬಳಿ  ಇರುವ   ಮೊಬೈಲ್  ಟವರ್ ನ   ಬ್ಯಾಟರಿ  ರೂಂ  ಶೆಲ್ಟರ್ ಗೆ  ಹಾಕಿದ್ದ  ಬೀಗವನ್ನು  ಮುರಿದು  ರೂಂ ( ಶೆಲ್ಟರ್  )   ನಲ್ಲಿ  ಇದ್ದ  ಬ್ಯಾಟರಿಗಳನ್ನು  ಕಳ್ಳತನ  ಮಾಡಿಕೊಂಡು  ಹೋಗಿರುತ್ತಾರೆಂದು   ತಿಳಿಸಿದರು.  ಆಗ  ನಾನು   ಕೋಡಿನಾಗೇನಹಳ್ಳಿ  ಬಳಿಗೆ   ನಮ್ಮ  ಏರ್  ಟೆಲ್   ಟವರ್  ಬಳಿಗೆ  ಬಂದು  ನೋಡಿದೆ  ವಿಚಾರ  ನಿಜವಾಗಿತ್ತು.   ಆಗ  ನಾನು  ನೋಡಲಾಗಿ  ನನ್ನ    ಟವರ್  ನ  ಶೆಲ್ಟರ್  ನಲ್ಲಿ  ಇದ್ದ  55   ಬ್ಯಾಟರಿಗಳನ್ನು   ಯಾರೋ  ಕಳ್ಳರು  ಕಳ್ಳತನ  ಮಾಡಿಕೊಂಡು  ಹೋಗಿದ್ದು,  ಬ್ಯಾಟರಿಗಳ  ನಂಬರ್  1) IN  1096998,  2) IN  1236081   3)  IN  1301190 4)  IN  1119835    5) IN  1020549 ಆಗಿದ್ದು,   ಇವುಗಳನ್ನು  ದಿನಾಂಕ 16/05/2018 ರಂದು  ಸಂಜೆ 6-00 ಗಂಟೆಯಿಂದ   ದಿನಾಂಕ 17/05/2018  ರಂದು   ಬೆಳಗ್ಗೆ 6-00  ಗಂಟೆಯ  ಒಳಗೆ  ಯಾವುದೋ   ವೇಳೆಯಲ್ಲಿ  ಯಾರೋ  ಕಳ್ಳರು  ಕಳ್ಳತನ  ಮಾಡಿಕೊಂಡು  ಹೋಗಿರುತ್ತಾರೆ. ಕಳ್ಳತನ  ವಾಗಿರುವ    ಟವರ್  ಬ್ಯಾಟರಿಗಳ   ಬೆಲೆ  ಸುಮಾರು 3.00.000 ರೂ  ಗಳಾಗಿರುತ್ತವೆ.  ಈ ವಿಚಾರವನ್ನು  ನಮ್ಮ  ಕಂಪನಿಯ  ಮೇಲಾಧಿಕಾರಿಗಳಿಗೆ  ತಿಳಿಸಿ   ಈ  ದಿನ  ತಡವಾಗಿ  ಠಾಣೆಗೆ  ಬಂದು   ದೂರು  ನೀಡಿರುತ್ತೇನೆ.   ಆದ್ದರಿಂದ   ನಮ್ಮ  ಬ್ಯಾಟರಿಗಳನ್ನು  ಕಳ್ಳತನ  ಮಾಡಿರುವವರ  ಮೇಲೆ  ಕಾನೂನು  ರೀತ್ಯ  ಕ್ರಮ  ಜರುಗಿಸಲು   ಕೋರಿ  ಇತ್ಯಾದಿಯಾದ  ಪಿರ್ಯಾದು  ಪಿರ್ಯಾದು  ಮೇರೆಗೆ  ಠಾಣಾ   ಮೊ. ನಂ 96/2018 ಕಲಂ 457.380. ಐ.ಪಿ.ಸಿ  ರೀತ್ಯ  ಪ್ರಕರಣ  ಪ್ರಕರಣ ದಾಖಲಿಸಿಕೊಂಡು  ಅಸಲು ಪ್ರ.ವ.ವರದಿಯನ್ನು ಘನ ನ್ಯಾಯಾಲಯಕ್ಕೂ ಹಾಗೂ ನಕಲುಗಳನ್ನು ತುರ್ತು ಈ-ಮೇಲ್ ಸಂದೇಶದೊಂದಿಗೆ   ಇಲಾಖಾ  ಮೇಲಾಧಿಕಾರಿಗಳಿಗೆ  ರವಾನಿಸಿಕೊಂಡಿರುತ್ತೆ.

 

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ. 122/2018, ಕಲಂ: 279 337 ಐಪಿಸಿ

ದಿನಾಂಕ: 19-05-2018 ರಂದು ಸಂಜೆ 04-00 ಗಂಟೆಗೆ ಪುನೀತ್ ಕುಮಾರ್ ಬಿನ್ ಬಲರಾಮ್, ಸುಮಾರು 24 ವರ್ಷ, ವಕ್ಕಲಿಗರು, ಕೂಲಿಕೆಲಸ, ಜಿನ್ನಾಗರ, ಅಮೃತೂರು ಹೋಬಳಿ, ಕುಣಿಗಲ್ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ: 11-05-2018 ರಂದು ಪಿರ್ಯಾದಿ ಮತ್ತು ಅವರ ತಂದೆಯಾದ ಬಲರಾಮ್ ಬಿನ್ ಲೇಟ್ ಗುಂಡಪ್ಪ, ಸುಮಾರು 48 ವರ್ಷ, ಇವರು ಸಣಭ ಗ್ರಾಮದ ಬಳಿ ಇರುವ ತಮ್ಮ ಗದ್ದೆಗೆ ಹೋಗಿ ವಾಪಸ್ ತಮ್ಮ ಗ್ರಾಮಕ್ಕೆ ಬರಲೆಂದು ಸಣಭ ಗ್ರಾಮದ ಬಳಿ ರಾತ್ರಿ ಸುಮಾರು 07-30 ಗಂಟೆಯಲ್ಲಿ ಆಟೋ ಕಾಯುತ್ತಾ ರಸ್ತೆಯ ಎಡಬದಿಯಲ್ಲಿ ನಿಂತಿರುವಾಗ್ಗೆ ಯಡವಾಣಿ ಕಡೆಯಿಂದ ಅಮೃತೂರು ಕಡೆಗೆ ಹೋಗಲು ಬಂದ ಒಬ್ಬ ಬೈಕಿನ ಚಾಲಕನು ತನ್ನ ಬೈಕನ್ನು ಅತಿವೇಗ & ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ನಿಂತಿದ್ದ ಪಿರ್ಯಾದಿಯ ತಂದೆಯವರಿಗೆ ಡಿಕ್ಕಿಪಡಿಸಿ ಅಪಘಾತವುಂಟುಮಾಡಿದ್ದು, ಪರಿಣಾಮ ಪಿರ್ಯಾದಿಯ ತಂದೆಗೆ ಬಲಕಾಲು, ಮೈ ಕೈ ಗೆ ಪೆಟ್ಟು ಬಿದ್ದಿರುತ್ತೆ. ನಂತರ ಅಪಘಾತಪಡಿಸಿದ ಬೈಕ್ ನಂಬರ್ ನೋಡಲಾಗಿ KA02-EY-3570 ಆಗಿರುತ್ತೆ. ಇದರ ಚಾಲಕ ಶಿವಣ್ಣ ಬಿನ್ ಗಂಗಣ್ಣ, ಮಣೆಕುಪ್ಪೆ, ಗುಬ್ಬಿ ತಾ. ಆಗಿದ್ದು, ನಂತರ ಅಲ್ಲಿಯೇ ಇದ್ದ ಸಣಭ ಗ್ರಾಮದ ರಾಮಚಂದ್ರಪ್ಪ ಎಂಬುವವರ ಸಹಾಯದಿಂದ 108 ವಾಹನದಲ್ಲಿ ಪಿರ್ಯಾದಿಯ ತಂದೆಯನ್ನು ಕುಣಿಗಲ್ ನ ಎಂ.ಎಂ ಆಸ್ಪತ್ರೆಗೆ ಕರೆದುಕೊಂಡು ಬಂದು  ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ಅಪಘಾತಪಡಿಸಿದ ಬೈಕಿನ ಚಾಲಕ ಶಿವಣ್ಣ ರವರು ಆಸ್ಪತ್ರೆಯ ಚಿಕಿತ್ಸಾ ವೆಚ್ವವನ್ನು ಕೊಡುವುದಾಗಿ ಹೇಳಿ ಈ ವರೆಗೂ ಬಂದಿರುವುದಿಲ್ಲ. ಪಿರ್ಯಾದಿಯು ಆಸ್ಪತ್ರೆಯಲ್ಲಿಯೇ ಇದ್ದು ತಮ್ಮ ತಂದೆಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು, ಅಪಘಾತಪಡಿಸಿದ  KA02-EY-3570 ನೇ ಬೈಕಿನ ಚಾಲಕ ಶಿವಣ್ಣ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 97 guests online
Content View Hits : 321531