lowborn ಅಪರಾಧ ಘಟನೆಗಳು 18-05-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

:: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 18-05-18

ಹೊನ್ನವಳ್ಳಿ ಪೊಲೀಸ್‌  ಠಾಣೆ ಠಾಣಾ ಮೊ ನಂ 29/2018 ಕಲಂ:279 ಐಪಿಸಿ

ದಿನಾಂಕ 06/05/2018 ರಂದು ಸಂಜೆ 6-30 ಗಂಟೆಗೆ ಉಡುಪಿ ಜಿಲ್ಲೆ ಮತ್ತು ತಾಲ್ಲೂಕು, ಕಾಪು ಹೋಬಳಿ, ಪಡುಬಿದ್ರೆ ಗ್ರಾಮದ ವಾಸಿ ಲೇಟ್‌‌ ಪಿ ಹರಿದಾಸ್‌‌ ಚಾರ್ಯರವರ ಮಗನಾದ ಮುರಳೀಧರ್‌‌ ಆಚಾರ್ಯ, ಸುಮಾರು 49 ವರ್ಷ, ಬ್ರಾಹ್ಮಣ ಜನಾಂಗದವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೆಂದರೆ,ನಿನ್ನೆ ದಿನ ದಿನಾಂಕ:16.05.2018 ರಂದು ನಾನು ಮತ್ತು ನನ್ನ ಹೆಂಡತಿ ಸುಶ್ಮಾ ಎಂ. ಆಚಾರ್ಯರವರೊಂದಿಗೆ ತುಮಕೂರಿನಲ್ಲಿರುವ ನಮ್ಮ ಮಾವ ಹೆಚ್.ಎಸ್.ನರಸಿಂಹಮೂರ್ತಿರವರ ಮನೆಗೆ ನಮ್ಮದೇ ಆದ ಕೆ.ಎ.20ಎಂ.ಎ.8878 ನೇ Maruti Eco ಕಾರಿನಲ್ಲಿ ಹೋಗಿದ್ದು, ಅಲ್ಲಿಯೇ ಉಳಿದುಕೊಂಡಿದ್ದೆವು. ಈ ದಿನ ದಿನಾಂಕ:17.05.2018 ರಂದು ಅದೇ ಕಾರಿನಲ್ಲಿ ನಾವಿಬ್ಬರು ತುಮಕೂರಿನಿಂದ ವಾಪಾಸ್‌ ನಮ್ಮೂರಿಗೆ ಹೋಗಲು, ಕೆ.ಬಿ.ಕ್ರಾಸ್, ತಿಪಟೂರು ಮಾರ್ಗವಾಗಿ ಬಂದು ಸಾಯಂಕಾಲ ಸುಮಾರು 4-15 ಗಂಟೆ ಸಮಯದಲ್ಲಿ ತಿಪಟೂರು ತಾ: ಕಸಬಾ ಹೋಬಳಿ, ಶಂಕರಿಕೊಪ್ಪಲು ಗೇಟ್‌‌ ಹತ್ತಿರ ಬೆಂಗಳೂರು-ಶಿವಮೊಗ್ಗ ರಸ್ತೆಯಲ್ಲಿ ರಸ್ತೆಯ ಎಡಭಾಗದಲ್ಲಿ ಹೋಗುತ್ತಿದ್ದೆವು. ಕಾರನ್ನು ನಾನೇ ಓಡಿಸಿಕೊಂಡು ಹೋಗುತ್ತಿದ್ದೆನು. ಆ ಸಮಯದಲ್ಲಿ ನಮ್ಮ ಕಾರಿನ ಎದುರಿಗೆ ಅಂದರೆ ಅರಸೀಕೆರೆ ಕಡೆಯಿಂದ ಬರುತ್ತಿದ್ದ ಕೆ.ಎ.16.ಪಿ.5000 ನೇ ಟಾಟಾ ಇಂಡಿಗೋ ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಆತನ ಮುಂದೆ ಬರುತ್ತಿದ್ದ ಯಾವುದೋ ಒಂದು ಕಾರನ್ನು ಓವರ್‌ ಟೇಕ್‌ ಮಾಡಿಕೊಂಡು ಮುಂದೆ ಹೋಗಲು ಬಂದವನು ರಸ್ತೆಯ ಬಲಭಾಗಕ್ಕೆ (ನಮ್ಮ ಕಡೆಗೆ) ಬಂದು ನಮ್ಮ ಕಾರಿಗೆ ಡಿಕ್ಕಿ ಹೊಡೆಸಿರುತ್ತಾನೆ. ಇದರಿಂದ ಎರಡೂ ಕಾರುಗಳು ಜಖಂಗೊಂಡಿರುತ್ತವೆ. ಕಾರಿನಲ್ಲಿದ್ದ ನಮಗೆ ಯಾವುದೇ ಗಾಯಗಳಾಗಿರುವುದಿಲ್ಲ. ಎದುರು ಕಾರಿನಲ್ಲಿ 04 ಜನರಿದ್ದು ಅವರಿಗೂ ಸಹ ಯಾವುದೇ ಪೆಟ್ಟಾಗಿರುವುದಿಲ್ಲ. ನಮ್ಮ ಕಾರಿಗೆ ಡಿಕ್ಕಿ ಹೊಡೆಸಿದ ಕಾರಿನ ಡ್ರೈವರ್‌ ಹೆಸರು ಮತ್ತು ವಿಳಾಸ ಗೊತ್ತಾಗಿರುವುದಿಲ್ಲ. ಈ ಅಪಘಾತಕ್ಕೆ ಕಾರಣವಾಗಿರುವ ಕೆ.ಎ.16.ಪಿ.5000 ನೇ ಟಾಟಾ ಇಂಡಿಗೋ ಕಾರಿನ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು  ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 77/2017  - ಕಲಂ 279-337 ಐಪಿಸಿ 187 ಐ ಎಂ ವಿ ಆಕ್ಟ್‌ .

ದಿ:17/05/2018 ರಂದು ಸಂಜೆ  5-15 ಗಂಟೆಗೆ ಕವಣದಾಲ ಗ್ರಾಮದ ವಾಸಿ ರಾಜಣ್ಣ ಬಿನ್‌ ಲೇಟ್‌ ಚಿಕ್ಕಹನುಮಂತಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದು ಅಂಶವೇನೆಂದರೆ,  ನಾನು ದಿ:11/05/2018 ರಂದು  ಸಂಜೆ 5-45 ಗಂಟೆ ಸಮಯದಲ್ಲಿ ನನ್ನ ಬಾಬ್ತು ಕೆಎ-64-ಕ್ಯೂ-2765 ನೇ ನಂಬರಿನ ಬೈಕ್‌‌ ನ ಹಿಂಬದಿಯ ಸೀಟಿನಲ್ಲಿ ನನ್ನ ಮಗ ಸ್ವಾಮಿನಾಥನನ್ನು ಕೂರಿಸಿಕೊಂಡು ಕವಣದಾಲದಿಂದ ಕೈಮರಕ್ಕೆ ಬರುವಾಗ ಮಾರ್ಗಮದ್ಯೆ  ಕವಣದಾಲ ಗ್ರಾಮದ ವೈನ್‌ ಶಾಪ್‌ ನಿಂದ ಸ್ವಲ್ಪ ಮುಂದೆ ಬಂದಾಗ ಎದುರಿಗೆ ಕೈಮರದ ಕಡೆಯಿಂದ ಕೆಎ-06-ಪಿ-1400 ನೇ ನಂಬರಿನ ಕಾರಿನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ  ನನ್ನ ಮಗನಿಗೆ  ತಲೆ ಮತ್ತು ಹಣೆಗೆ ಪೆಟ್ಟು ಬಿದ್ದು,  ಕೈ ಮತ್ತು ಕಾಲುಗಳಿಗೆ  ಗಾಯಗಳಾಗಿರುತ್ತೆ. ನನ್ನ  ದ್ವಿಚಕ್ರ ವಾಹನ ಮತ್ತು ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿರುತ್ತೆ. ನನಗೆ ಯಾವುದೇ ಗಾಯಗಳಾಗಿರುವುದಿಲ್ಲ. ಸ್ಥಳದಲ್ಲಿ ಇದ್ದ ನಮ್ಮ ಗ್ರಾಮದ ಮಂಜುನಾಥ ಬಿನ್‌ ಹನುಮಂತರಾಯಪ್ಪ  ಮತ್ತು ನಾನು ಸೇರಿಕೊಂಡು ನನ್ನ ಮಗನನ್ನು ಉಪಚರಿಸಿ ಯಾವುದೋ ಒಂದು ವಾಹನದಲ್ಲಿ  ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು,  ನಂತರ ವೈದ್ಯರ ಸಲಹೆ ಮೇರಗೆ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಈ ದಿನ ತಡವಾಗಿ ಬಂದು ಅಪಘಾತ ಉಂಟು ಮಾಡಿದ ಕೆಎ-06-ಪಿ-1400 ನೇ ನಂಬರಿನ ಕಾರಿನ ಚಾಲಕ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಿ ಎಂತಾ ನೀಡಿದ ಪಿರ್ಯಾದು ಅಂಶ

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.54/2018, ಕಲಂ:279, 337 ಐಪಿಸಿ ರೆ/ವಿ 134(ಎ & ಬಿ), 187 ಐಎಂವಿ ಆಕ್ಟ್.

ದಿನಾಂಕ:17/05/2018 ರಂದು ಸಾಯಂಕಾಲ 03:30 ಗಂಟೆಗೆ ಪಿರ್ಯಾದಿ ಸಂತೋಷ್‌ ‌ಕುಮಾರ್‌ ಬಿನ್ ಕೋಟೆಕಲ್ಲಪ್ಪ 28 ವರ್ಷ, ನಾಯಕ ಜನಾಂಗ, ಡ್ರೈವರ್‌ ಕೆಲಸ, ಹರಿಹರಪುರ ಗ್ರಾಮ, ದೊಡ್ಡೇರಿ ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೆಂದರೆ ನಾನು, ನಮ್ಮ ತಂದೆ-ತಾಯಿ, ಅಣ್ಣ-ಅತ್ತಿಗೆ ಎಲ್ಲರೂ ಒಟ್ಟಿಗೆ ವಾಸವಾಗಿರುತ್ತೇನೆ, ಮಡಕಶಿರಾ ತಾಲ್ಲೂಕು ರಂಗನಹಳ್ಳಿ ಗ್ರಾಮದ ವಾಸಿಯಾದ ನಮ್ಮ ಸಂಬಂಧಿಯಾದ ರಾಜಣ್ಣ ಬಿನ್ ಲೇ||ತಿಮ್ಮಣ್ಣ, 40 ವರ್ಷ ರವರು ದಿನಾಂಕ:14/05/2018 ರಂದು ನಮ್ಮ ಊರಿಗೆ ಬಂದಿದ್ದು, ಉಕ್ಕಡ ಜಾತ್ರೆಗೆ ಹೋಗಿ ಬರೋಣ ಬಾ ಎಂತ ಹೇಳಿ ನಮ್ಮ ತಂದೆಯಾದ ಕೋಟೆಕಲ್ಲಪ್ಪ ಬಿನ್ ಲೇ||ರಂಗಪ್ಪ, 45 ವರ್ಷ ರವರನ್ನು ಕರೆದುಕೊಂಡು ರಾಜಣ್ಣನವರು ಅವರ ಬಾಬ್ತು ಕೆಎ-03-ಹೆಚ್.ಇ-350 ನೇ ಬೈಕಿನಲ್ಲಿ ನಮ್ಮ ತಂದೆಯನ್ನು ಬೈಕಿನ ಹಿಂಬದಿಯಲ್ಲಿ ಕೂರಿಸಿಕೊಂಡು ದಿ:14/05/2018 ರಂದು ಸಂಜೆ ಸುಮಾರು 06:00 ಗಂಟೆಗೆ ನಮ್ಮ ಊರಾದ ಹರಿಹರಪುರ ಗ್ರಾಮದಿಂದ ಹೊರಟು ಬಂದರು. ನಮ್ಮ ತಂದೆ ಮತ್ತು ರಾಜಣ್ಣ ನಮ್ಮ ಮನೆಯಿಂದ ಹೊರಟು ಬಂದ ಸುಮಾರು ಒಂದು ಗಂಟೆಯ ನಂತರ ನಮ್ಮ ಸಂಬಂಧಿ ರಾಜಣ್ಣ ರವರು ನನಗೆ ಪೋನ್ ಮಾಡಿ ನಾನು ಮತ್ತು ನಿಮ್ಮ ತಂದೆ ನನ್ನ ಬೈಕಿನಲ್ಲಿ ಹರಿಹರಪುರದಿಂದ ಹೊರಟು ಮಧುಗಿರಿ ಮಾರ್ಗವಾಗಿ ನಮ್ಮ ಊರಾದ ರಂಗನಹಳ್ಳಿಗೆ ಹೋಗಲು ಸಂಜೆ ಸುಮಾರು 07:00 ಗಂಟೆಯ ಸಮಯದಲ್ಲಿ ಹೊಸಕೆರೆ ಗ್ರಾಮದಲ್ಲಿರುವ ಹಾಲಿನ ಡೈರಿಯ ಬಳಿ ಮಧುಗಿರಿ-ಪಾವಗಡ ಮುಖ್ಯ ರಸ್ತೆಯಲ್ಲಿ ರಸ್ತೆಯ ಎಡ ಬದಿಯಲ್ಲಿ ಮಧುಗಿರಿ ಕಡೆಯಿಂದ ಕೆಎ-03-ಹೆಚ್.ಇ-350 ನೇ ಬೈಕಿನಲ್ಲಿ ಬರುತ್ತಿದ್ದಾಗ ಅದೇ ಸಮಯಕ್ಕೆ ಅದೇ ರಸ್ತೆಯಲ್ಲಿ ಪಾವಗಡ ಕಡೆಯಿಂದ ಮಧುಗಿರಿ ಕಡೆಗೆ ಹೋಗಲು ಬಂದ ಒಂದು ಕಾರನ್ನು ಅದರ ಚಾಲಕ ತುಂಬಾ ಸ್ಪೀಡಾಗಿ, ಅಡ್ಡದಿಡ್ಡಿಯಾಗಿ ಓಡಿಸಿಕೊಂಡು ಬಂದು ಕೆಎ-03-ಹೆಚ್.ಇ-350 ನೇ ಬೈಕ್ ನಲ್ಲಿ ಬರುತ್ತಿದ್ದ ನಮಗೆ ಡಿಕ್ಕಿ ಹೊಡೆಸಿ ಅಪಘಾತ ಉಂಟುಮಾಡಿದ್ದರಿಂದ ಬೈಕನ್ನು ಓಡಿಸುತ್ತಿದ್ದ ನನ್ನ ತಲೆಗೆ, ಬೆನ್ನಿಗೆ ಗಾಯಗಳಾಗಿರುತ್ತವೆ, ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ನಿಮ್ಮ ತಂದೆ ಕೋಟೆಕಲ್ಲಪ್ಪನವರ ಬಲಗಾಲಿಗೆ ಮತ್ತು ಬಲಗಾಲಿನ ರೊಂಡಿಗೆ ಗಾಯಗಳಾಗಿರುತ್ತವೆ. ನಮಗೆ ಡಿಕ್ಕಿ ಪಡಿಸಿದ ಕಾರಿನ ನಂಬರ್ ನೋಡಲಾಗಿ ಕೆಎ-06-ಎನ್-2898 ಆಗಿರುತ್ತದೆ ಕಾರಿನ ಚಾಲಕ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಹೊರಟು ಹೊದನು, ಅಪಘಾತದಿಂದ ನಮ್ಮ ಬೈಕ್ ಮತ್ತು ಕಾರು ಜಖಂ ಆಗಿರುತ್ತವೆ. ನೀನು ಇಲ್ಲಿಗೆ ಬೇಗ ಬಾ ಎಂತ ಹೇಳಿದರು. ಕೂಡಲೇ ನಾನು ನಮ್ಮ ಊರಿನಿಂದ ಅಪಘಾತ ನಡೆದ ಸ್ಥಳಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿತ್ತು. ನಾನು ಕೂಡಲೇ ಅಪಘಾತದಿಂದ ಗಾಯಗೊಂಡಿದ್ದ ನಮ್ಮ ತಂದೆ ಕೋಟೆಕಲ್ಲಪ್ಪನನ್ನು ಮತ್ತು ನಮ್ಮ ಸಂಬಂಧಿ ರಾಜಣ್ಣನನ್ನು ಯಾವುದೋ ಒಂದು ವಾಹನದಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿರುತ್ತಾರೆ. ಇಲ್ಲಿಯವರೆಗೆ ನಮ್ಮ ತಂದೆ ಮತ್ತು ರಾಜಣ್ಣನ ಯೋಗಕ್ಷೇಮವನ್ನು ನೋಡಿಕೊಂಡು, ಈ ದಿನ ಅಂದರೆ ದಿ:17/05/2018 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ದಿನಾಂಕ:14/05/2018 ರಂದು ಸಂಜೆ ಸುಮಾರು 07:00 ಗಂಟೆಯ ಸಮಯದಲ್ಲಿ ನಮ್ಮ ತಂದೆ ಮತ್ತು ರಾಜಣ್ಣ ಬರುತ್ತಿದ್ದ ಕೆಎ-03-ಹೆಚ್.ಇ-350 ನೇ ಬೈಕಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆಸಿ ಅಪಘಾತಪಡಿಸಿರುವ ಕೆಎ-06-ಎನ್-2898 ನೇ ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆ, ಅಪಘಾತಕ್ಕೆ ಸಂಬಂಧಿಸಿದ ಮೇಲ್ಕಂಡ ಕಾರು ಮತ್ತು ಬೈಕ್ ಅಪಘಾತ ನಡೆದ ಸ್ಥಳದಲ್ಲಿ ರಸ್ತೆಯ ಬದಿಯಲ್ಲಿ ಇರುತ್ತವೆ ಎಂತಾ ನೀಡಿದ ಪಿರ್ಯಾದು ಅಂಶವಾಗಿರುತ್ತೆ.

ಹುಳಿಯಾರು ಪೊಲೀಸ್ ಠಾಣಾ ಯು.ಡಿ.ನಂ 08/2018, ಕಲಂ: 174 ಸಿ.ಆರ್.ಪಿ.ಸಿ.

ದಿನಾಂಕ:-17/05/2018 ರಂದು ಬೆಳಿಗ್ಗೆ 08-30 ಗಂಟೆಗೆ ಪಿರ್ಯಾದುದಾರರಾದ ರವಿರಾಜ್ ಬಿನ್ ವರದರಾಜು, ಹೊನ್ನಯ್ಯನಹಟ್ಟಿ, ಸೋಮನಹಳ್ಳಿ ಮಜರೆ, ಹುಳಿಯಾರು ಹೋಬಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಮ್ಮ ತಂದೆ ವರದರಾಜು, 54 ವರ್ಷ ಇವರು ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಇವರಿಗೆ ಈಗ್ಗೆ 5-6 ತಿಂಗಳುಗಳಿಂದ ಹೊಟ್ಟೆನೋವು ಬರುತ್ತಿದ್ದು, ಹಲವಾರು ಆಸ್ಪತ್ರೆಗೆ ತೋರಿಸಿದರೂ ಹೊಟ್ಟೆನೋವು ಗುಣಮುಖವಾಗದೇ ಇದ್ದುದರಿಂದ ಮದ್ಯಪಾನ ಮಾಡುವ ಹವ್ಯಾಸವನ್ನು ರೂಡಿಸಿಕೊಂಡಿದ್ದು, ದಿನಾಂಕ 16/05/2018 ರಂದು ಮಧ್ಯಪಾನ ಮಾಡಿ ಸಂಜೆ ಸುಮಾರು 05-45 ಗಂಟೆ ಸಮಯದಲ್ಲಿ ನಮ್ಮ ಮನೆಯ ಹಿಂಭಾಗ ದನದ ಕೊಟ್ಟಿಗೆಯಲ್ಲಿ ನಮ್ಮ ತಂದೆ ವರದರಾಜುರವರು ಹೊಟ್ಟೆನೋವನ್ನು ತಾಳಲಾರದೆ ಮದ್ಯಪಾನದ ಜೊತೆ ಯಾವುದೋ ವಿಷವನ್ನು ಸೇವಿಸಿದ್ದು, ಇದನ್ನು ನೋಡಿದ ನಮ್ಮ ತಾಯಿ ಶಿವಮ್ಮ, ನಮ್ಮ ಚಿಕ್ಕಪ್ಪ ಕರಿಯಪ್ಪರವರು ಬೈಕಿನಲ್ಲಿ ಹುಳಿಯಾರು ಸರ್ಕಾರಿ ಆಸ್ಪತ್ರೆಗೆ ಬರುವಾಗ ಮಾರ್ಗಮದ್ಯೆ ಸುಮಾರು 06-30 ಗಂಟೆ ಸಮಯದಲ್ಲಿ ನಮ್ಮ ತಂದೆ ಮೃತಪಟ್ಟಿದ್ದಾರೆ ಎಂದು ನಮ್ಮ ತಾಯಿ ಶಿವಮ್ಮ ನಮಗೆ ತಿಳಿಸಿದರು. ನಂತರ ನಮ್ಮ ತಂದೆಯ ಶವವನ್ನು ಹುಳಿಯಾರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುವುದಾಗಿ ತಿಳಿಸಿದ್ದು, ಈ ವಿಚಾರವನ್ನು ನಮ್ಮ ಸಂಬಂಧಿಕರಿಗೆ ತಿಳಿಸಿ ರಾತ್ರಿಯಾಗಿದ್ದರಿಂದ  ದಿನ ತಡವಾಗಿ ಠಾಣೆಗೆ ಬಂದು ಮೃತಪಟ್ಟಿರುವ ನಮ್ಮ ತಂದೆಯ ಅಂತ್ಯಕ್ರಿಯೆ ಮಾಡಲು ಮುಂದಿನ ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಯು.ಡಿ.ಆರ್ ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 95 guests online
Content View Hits : 321530