lowborn ಅಪರಾಧ ಘಟನೆಗಳು 16-05-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ.16/08/2018 ತುಂಬೆ (ತುಮಕೂರು ಬೈಸಿಕಲ್ ಪೊಲೀಸ್)     ಜನಸ್ನೇಹಿ... >> :: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 16-05-18

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ ನಂ 41/2018 ಕಲಂ 279,337,304(ಎ) ಐ.ಪಿ.ಸಿ.

ದಿನಾಂಕ16/05/2018 ರಂದು ಬೆಳಿಗ್ಗೆ 11-15 ಗಂಟೆಗೆ  ಮಹೇಶ  ಬಿನ್ ಕೆಂಡನಾಯಕ,ವಯಸ್ಸು 38 ವರ್ಷ, ಬೆಂಗಳೂರು ನಗರ, ರವರು ನೀಡಿದ ಮುದ್ರಿತ ದೂರಿನ ಅಂಶವೇನೆಂದರೆ ದಿನಾಂಕ-16/05/2018 ರಂದು ನನ್ನ ಕುಟುಂಬ ಮತ್ತು ನನ್ನ ಅತ್ತಿಗೆ ಗಂಡ ಬಿ.ಪುರುಷೋತ್ತಮ ರವರ ಕುಟುಂಬ ತರೀಕೆರೆಯಿಂದ  ಬೆಂಗಳೂರುಗೆ ಹೋಗಲು  ಎರಡು ಕಾರುಗಳಲ್ಲಿ  ಹೋಗುತ್ತಿದ್ದು  ಪುರುಷೋತ್ತಮರವರ ಕೆಎ-05, ಪಿ-8362 ಕಾರಿನಲ್ಲಿ ಕಾರಿನ ಚಾಲಕನಾಗಿ  ಅವರ ಜೋತೆ ಅವರ ಹೆಂಡತಿ ಶ್ರೀಮತಿ ಸ್ಮೀತಾ,35 ವರ್ಷ, ಮಗ ರಚಿತ 14 ವರ್ಷ, ಅತ್ತಿಗೆ ಮಗಳಾದ ಕು|| ಸಿಂಚನಾ ಹೋಗುತ್ತಿದ್ದರು. ನನ್ನ ಕುಟುಂಬ ಮತ್ತೊಂದು ಕಾರಿನಲ್ಲಿ ಹಿಂಬದಿಯಲ್ಲಿ ಹೋಗುತ್ತಿರುವಾಗ ಬೆಳಿಗ್ಗೆ ಸುಮಾರು 07-45 ಗಂಟೆ ಸಮಯದಲ್ಲಿ , ತಿಪಟೂರು ತಾಲ್ಲೋಕ್, ಮಡೆನೂರು ಭೋವಿಕಾಲೋನಿ ಗೇಟ್ ಬಿಟ್ಟು ಸ್ವಲ್ಪ ಮುಂದೆ ಎನ್ ಹೆಚ್ 206 ರಸ್ತೆಯಲ್ಲಿ ಬಿ.ಪುರುಷೋತ್ತಮ ರವರು ತನ್ನ ಕಾರನ್ನು   ಅತೀವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು  ಹೋಗಿ ರಸ್ತೆಯ ಬಲಭಾಗದ  ನೀಲಿಗಿರಿ ಮರಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ ಸ್ಮೀತ ರವರಿಗೆ ತಲೆಗೆ ಪೆಟ್ಟು ಬಿದ್ದಿರುತ್ತೆ, ರಚಿತ ರವರಿಗೆ    ತಲೆಗೆ ಮತ್ತು ಬಲ ಕಾಲಿಗೆ ಪೆಟ್ಟು ಬಿದ್ದರುತ್ತೆ, ಸಿಂಚನಾಳಗೆ ಎಡಕೈ ಮತ್ತು ಕುಂಡಿಗಳಿಗೆ ಪೆಟ್ಟು ಬಿದ್ದಿರುತ್ತೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಾಗ ಚಿಕಿತ್ಸೆ ಫಲಕಾರಿಯಾಗದೇ ಬಿ.ಪುರುಷೋತ್ತಮ ರವರು ಮೃತಪಟ್ಟರು. ನಂತರ, ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ  ತಿಪಟೂರು ತಾಲ್ಲೋಕ್, ಬಿಳಿಗೆರೆ ಹತ್ತಿರ ಶ್ರೀಮತಿ ಸ್ಮಿತಾ ರವರೂ ಸಹಾ ಮೃತಪಟ್ಟಿರುತ್ತಾರೆ. ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು ಪಡೆದು ಠಾಣಾ ಮೊ ನಂ 41/2018 ಕಲಂ 279,337,304(ಎ) ಐ.ಪಿ.ಸಿ.ರೀತ್ಯಾ ಕೇಸು ದಾಖಲಿಸಿರುತ್ತದೆ..

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ- 47/2018 ಕಲಂ: 379 IPC

ದಿನಾಂಕ:16/05/2018 ರಂದು ಬೆಳಿಗ್ಗೆ 10:30 ಗಂಟೆಗೆ ಪಿರ್ಯಾದಿ ಬಾಲಾಜಿ.ಟಿ.ವಿ ಬಿನ್ ಟಿ.ವಿ.ವೆಂಕಟಪತಿ, 23 ವರ್ಷ, ವೈಶ್ಯ  ಜನಾಂಗ, ವ್ಯಾಪಾರ ವೃತ್ತಿ, ವೈ.ಎನ್. ಹೊಸಕೋಟೆ ಗ್ರಾಮ ಪಾವಗಡ ತಾ ರವರು ನೀಡಿದ ದೂರಿನ ಅಂಶವೇನೆಂದರೆ ನಾನು  ವೈ.ಎನ್ ಹೊಸಕೋಟೆ ಗ್ರಾಮದಲ್ಲಿ ನಮ್ಮ ಕುಟುಟಂಬದೊಂದಿಗೆ ವಾಸವಾಗಿರುತ್ತೇನೆ, ನಾನು 2016 ನೇ ಫೆಬ್ರವರಿ ಸಾಲಿನಲ್ಲಿ ಬೆಂಗಳೂರಿನ ಲಾಲ್ ಬಾಗ್ ಬಳಿ ಇರುವ ಫರ್ಪೆಕ್ಟ್ ರೈಡರ್ಸ್ ಎಂಬ ಶೋರೂಂ ನಲ್ಲಿ ಯಮಹಾ -ಆರ್.15 ಬೈಕ್ ನ್ನು ಖರೀದಿಸಿದ್ದು,ಇದರ ರಿಜಿಸ್ಟರ್ ನಂ:ಕೆ.ಎ-05-ಜೆ.ಎಸ್-3184 ಆಗಿರುತ್ತದೆ. ಇದರ ಇಂಜಿನ್ ನಂ: G3C7E0058953 ಮತ್ತು ಚಾರ್ಸಿ ನಂ: ME1RG0611G0050077 ಆಗಿರುತ್ತದೆ, ಈ ವಾಹನವನ್ನು ವೈ ಎನ್ ಹೊಸಕೋಟೆಯಲ್ಲಿ ನನ್ನ ಹತ್ತಿರ ಇಟ್ಟುಕೊಂಡಿರುತ್ತೇನೆ, ದಿನಾಂಕ:06/05/2018 ರಂದು ಸಂಜೆ 8:000 ಗಂಟೆಗೆ ನಾನು ಕೆಲಸ ಮುಗಿಸಿಕೊಂಡು ನನ್ನ  ಬೈಕ್ ನ್ನು ನಮ್ಮ ಮನೆಯ ಮುಂದೆ ನಿಲ್ಲಿಸಿದ್ದೆನು, ಮರು ದಿನ ಬೆಳಿಗ್ಗೆ 6:00 ಗಂಟೆಗೆ ಎದ್ದು ನೋಡಲಾಗಿ ನಮ್ಮ ಮನೆಯ ಬಳಿ ನಿಲ್ಲಿಸಿದ್ದ ನನ್ನ ಬೈಕ್ ಕಾಣಲಿಲ್ಲ, ನಾನು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಲಿಲ್ಲ, ನನ್ನ ಬೈಕ್ ನ್ನು  ಯಾರೋ ಕಳ್ಳರು ದಿನಾಂಕ:06/05/2018ರಂದು ರಾತ್ರಿ ವೇಳೆಯಲ್ಲಿ ಕಳುವುಮಾಡಿಕೊಂಡು ಹೋಗಿರುತ್ತಾರೆ, ಕಳುವಾಗಿರುವ ನನ್ನ ಬಾಬ್ತು ಬೈಕ್ ನ ಅಂದಾಜು ಬೆಲೆ 49.000/- ಆಗಿರುತ್ತದೆ, ನಾನು ಈ ವರೆವಿಗೂ ಹುಡುಕಾಡಿ ನನ್ನ ಸ್ನೇಹಿತರಿಗೆ ಹಾಗೂ ಸಂಬಂದಿಕರಿಗೆ ವಿಚಾರ ತಿಳಿಸಿ  ಹುಡುಕಾಡಿದರೂ ಪತ್ತೇಯಾಗದೇ ಇದ್ದುದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ, ಆದ್ದರಿಂದ ಕಳುವಾಗಿರುವ ನನ್ನ ಬಾಬ್ತು ಯಮಹಾ ಆರ್-15ನೇ ಬೈಕ್ ನ್ನು ಪತ್ತೆ ಮಾಡಿಕೊಡಬೇಕೆಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತದೆ.

ಮಿಡಿಗೇಶಿ ಪೊಲೀಸ್ ಠಾಣಾ ಯುಡಿಆರ್.ನಂ.04/2018, ಕಲಂ:174 ಸಿ.ಆರ್.ಪಿ.ಸಿ.

ದಿನಾಂಕ:15/04/2018 ರಂದು ಬೆಳಿಗ್ಗೆ 07:30 ಗಂಟೆಗೆ ಪಿರ್ಯಾದಿ ಸವಿತ ಕೋಂ ಶ್ರೀನಿವಾಸ, 30 ವರ್ಷ, ವಕ್ಕಲಿಗರು, ಬ್ರಹ್ಮದೇವರಹಳ್ಳಿ ಕಾವಲ್, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಈಗ್ಗೆ 12 ವರ್ಷಗಳ ಹಿಂದೆ ಮೇಲ್ಕಂಡ ಶ್ರೀನಿವಾಸ ರವರೊಂದಿಗೆ ನನ್ನ ಮದುವೆ ಆಗಿದ್ದು, ನಮಗೆ 11 ವರ್ಷದ ಕೃಷ್ಣ, ಮತ್ತು 07 ವರ್ಷದ ಮಂಜುನಾಥ ಎಂಬ ಇಬ್ಬರು ಗಂಡು ಮಕ್ಕಳು ಇದ್ದು, ಮದುವೆ ಆದಾಗಿನಿಂದ ನಾನು ಮತ್ತು ನನ್ನ ಗಂಡ ಶ್ರೀನಿವಾಸ ಬಿನ್ ಗೋವಿಂದಪ್ಪ, 32 ವರ್ಷ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನ ಯಶವಂತಪುರದ ಬಿ.ಕೆ.ನಗರದಲ್ಲಿ ವಾಸವಿದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆವು. ಈಗಿರುವಾಗ ನಮ್ಮ ಇಬ್ಬರು ಮಕ್ಕಳನ್ನು ಈ ವರ್ಷದ ಶಾಲೆಗೆ ಸೇರಿಸಲು ಹಣದ ಅವಶ್ಯಕತೆ ಇತ್ತು, ಆದ್ದರಿಂದ ನನ್ನ ಗಂಡ ಶ್ರೀನಿವಾಸರವರು, ಅವರ ಊರಿಗೆ ಹೋಗಿ ಹಣವನ್ನು ಹೊಂದಿಸಿಕೊಂಡು ಬರುತ್ತೇನೆ, ನಂತರ ಮಕ್ಕಳನ್ನು ಶಾಲೆಗೆ ಸೇರಿಸೋಣ ಎಂದು ನನಗೆ ಹೇಳಿ ಹೀಗೆ 15 ದಿನಗಳ ಹಿಂದೆ ಬೆಂಗಳೂರಿನಿಂದ ನಮ್ಮ ಸ್ವಂತ ಊರಾದ ಬ್ರಹ್ಮದೇವರಹಳ್ಳಿ ಕಾವಲ್ ಗೆ ಬಂದಿದ್ದರು. ದಿನಾಂಕ:14/05/2018 ರಂದು ರಾತ್ರಿ ಸುಮಾರು 11:00 ಗಂಟೆಗೆ ನನ್ನ ಮಾವನಾದ ಗೋವಿಂದಪ್ಪನವರು ನನಗೆ ಪೋನ್ ಮಾಡಿ ನಿನ್ನ ಗಂಡ ಶ್ರೀನಿವಾಸನು ರಾತ್ರಿ ಮನೆಯಲ್ಲಿ ಊರ ಮಾಡಿ ಮಲಗಿದ್ದವನು ರಾತ್ರಿ 09:00 ಗಂಟೆಯಿಂದ 10:00 ಗಂಟೆಯ ನಡುವೆ ಯಾವುದೇ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಿ ಹುಲ್ಲಿ ಬಣವೆ ಹತ್ತಿರ ಯಾವುದೋ ವಿಷ ಸೇವನೆ ಮಾಡಿ ಮೃತಪಟ್ಟಿರುತ್ತಾನೆ, ನೀನು ಕೂಡಲೇ ಊರಿಗೆ ಬಾ ಎಂದು ವಿಷಯ ತಿಳಿಸಿದರು. ತಕ್ಷಣ ಬೆಂಗಳೂರಿನಿಂದ ಊರಿಗೆ ಬಂದು ನೋಡಲಾಗಿ ವಿಚಾರ ನಿವಾಗಿರುತ್ತೆ. ನಂತರ ನನ್ನ ಮಾವನವರನ್ನು ವಿಚಾರ ಮಾಡಲಾಗಿ ಶ್ರೀನಿವಾಸನು ಮಕ್ಕಳನ್ನು ಶಾಲೆಗೆ ಸೇರಿಸಲು ಹಣಬೇಕು ಎಂದು ತಿಳಿಸಿದ್ದನು. ಈ ವಿಚಾರವಾಗಿ ಅವನು ಮನಸ್ಸಿಗೆ ತುಂಬಾ ಬೇಸರ ಮಾಡಿಕೊಂಡಿದ್ದ ಎಂದು ತಿಳಿಸಿದರು. ನನ್ನ ಗಂಡ ಶ್ರೀನಿವಾಸನು ಮಕ್ಕಳನ್ನು ಶಾಳೆಗೆ ಸೇರಿಸಲು ನನಗೆ ಹಣ ಹೊಂದಿಸಲು ಸಾಧ್ಯವಾಗಲಿಲ್ಲ ಎಂದು ಮನಸ್ಸಿಗೆ ಬೇಜಾರು ಮಾಡಿಕೊಂಡು ದಿ:14/05/2018 ರಂದು ರಾತ್ರಿ 09:00 ಗಂಟೆಯಿಂದ 10:00 ಗಂಟೆಯ ನಡುವೆ ಯಾವುದೋ ಸಮಯದಲ್ಲಿ ತನ್ನ ಮೂಲಕ ತಾನೇ ಯಾವುದೋ ವಿಷ ಸೇವನೆ ಮಾಡಿ ಮೃತಪಟ್ಟಿರುತ್ತಾರೆ. ನನ್ನ ಗಂಡನ ಸಾವಿನಲ್ಲಿ ಬೇರೆ ಯಾವುದೇ ಅನುಮಾನವಿಲ್ಲ. ಆಧ್ದರಿಂದ ತಾವುಗಳು ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತಾ, ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆಂತ ಪಿರ್ಯಾದು ಅಂಶವಾಗಿರುತ್ತೆ

ಹೊನ್ನವಳ್ಳಿ ಪೊಲೀಸ್‌  ಠಾಣೆ ಯು,ಡಿ,ಆರ್ ನಂ-10/2018 ಕಲಂ 174 ಸಿ,ಆರ್,ಪಿ,ಸಿ

ದಿನಾಂಕ:15.05.2018 ರಂದು  ಮದ್ಯಾಹ್ನ 3-30 ಗಂಟೆಗೆ  ತಿಪಟೂರು ತಾ: ಹೊನ್ನವಳ್ಳಿ ಹೋಬಳಿ, ಚೌಲಿಹಳ್ಳಿ ಕಾಲೋನಿ  ವಾಸಿ  ರಂಗಸ್ವಾಮಿ ಬಿನ್ ಲೇಟ್ ಕರಿಯಪ್ಪ ಸುಮಾರು 52 ವರ್ಷ ಆದಿಕರ್ನಾಟಕ ಜನಾಂಗ ಆದ ನಾನು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೆನೆಂದರೆ. ನನಗೆ 3 ಜನ ಮಕ್ಕಳಿದ್ದು ಮೊದಲನೆಯವನು ಪರಮೇಶ ಎರಡನೆಯಳು ಮಂಗಳಮ್ಮ ಮೂರನೆಯವನು ಕರಿಯಪ್ಪ ಆಗಿದ್ದು. ಈ ದಿನ ದಿನಾಂಕ 15.05.2018 ರಂದು ನನ್ನ ಮಗ ಕರಿಯಪ್ಪ ಮದ್ಯಾಹ್ನ 1 ಗಂಟೆಯಲ್ಲಿ ಮನೆಯಲ್ಲಿದ್ದ ಮೂರು ಕುರಿಗಳನ್ನು ಮೇಯಿಸಿಕೊಂಡು ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದನು, ಮದ್ಯಾಹ್ನ ಸು, 1-30 ರಲ್ಲಿ ನಮ್ಮೂರಿನ ಜಯಣ್ಣನವರ ಮಗ ಕಂಠಿ ನಮ್ಮ ಮನೆಯ ಹತ್ತಿರ ಬಂದು ಕರಿಯಪ್ಪ ದಾರ್ಮೊದನಾಯ್ಕ ರವರ ಜಮೀನಿನಲ್ಲಿರುವ ಕೃಷಿಹೊಂಡದಲ್ಲಿರುವ ನೀರಿಗೆ ಈಜಾಡಲು ಹೊದವನು ನೀರಿನಲ್ಲಿ ಮುಳಿಗಿಕೊಂಡಿದ್ದಾನೆ ಎಂದು ತಿಳಿಸಿದ ತಕ್ಷಣ ನಾನು ಮತ್ತು ನನ್ನ ಹೆಂಡತಿ ಚಂದ್ರಮ್ಮ, ಮಗಳು ಅಲ್ಲಿಗೆ ಹೋಗಿ ನೋಡಿದಾಗ ನನ್ನ ಮಗನ ಬಟ್ಟೆ ಕೃಷಿ ಹೊಂಡದ ದಡದ ಮೇಲಿದ್ದವು. ನನ್ನ ಮಗ ನೀರಿನಲ್ಲಿ ಮುಳಿಗಿಕೊಂಡಿದ್ದು ಚೌಲೀಹಳ್ಳಿಯ ಆನಂದ ಬಿನ್‌ ರಂಗಸ್ವಾಮಿ ನೀರಿನಲ್ಲಿ ಮುಳುಗಿ ನನ್ನ ಮಗನನ್ನು ಮೇಲಕ್ಕೆ ತಂದರು ನಾವು ಜೀವವಿರಬಹುದೆಂದು ತಕ್ಷಣ 108 ಆಂಬುಲೇನ್ಸ್ ನಲ್ಲಿ ಕರೆದುಕೊಂಡು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಬಂದಾಗ ವೈದ್ಯರು ನೋಡಿ ಮೃತಪಟ್ಟಿರುವುದಾಗಿ  ಹೇಳಿದರು. ನನ್ನ ಮಗ ಕೃಷಿಹೊಂಡದಲ್ಲಿದ್ದ ನೀರಿನಲ್ಲಿ ಈಜಾಡಲು ಹೋಗಿ ಈಜು ಬಾರದೇ ಇದ್ದುದರಿಂದ ನೀರಿನಲ್ಲಿ ಮುಳಿಗೆ ಉಸಿರು ಕಟ್ಟಿ ಮೃತ ಪಟ್ಟಿರುತ್ತಾನೆ.ನನ್ನ ಮಗನ  ಮರಣದ ವಿಚಾರದಲ್ಲಿ ನನಗೆ ಯಾವುದೇ ಅನುಮಾನ ಇಲ್ಲ. ಆದ್ದರಿಂದ ಕರಿಯಪ್ಪ  ಮೃತಪಟ್ಟಿರುವ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೋರುತ್ತೇನೆ. ಎಂದು ನೀಡಿದ ಪಿರ್ಯಾದಿಯನ್ನು  ಪಡೆದು  ಪ್ರಕರಣ ದಾಖಲಿಸಿರುತ್ತೇನೆ,

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 64 guests online
Content View Hits : 322826