lowborn ಅಪರಾಧ ಘಟನೆಗಳು 13-05-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 13-05-18

ಬಡವನಹಳ್ಳಿ ಪೊಲೀಸ್ ಠಾಣೆ ಮೊ.ಸಂ 76/18 ಕಲಂ  143,144,324,504,506 ರೆ/ವಿ  149 ಐಪಿಸಿ

ದಿ:13/05/2018 ರಂದು  ಸಂಜೆ 5-00 ಗಂಟೆಗೆ ಪಿರ್ಯಾದಿ  ಗುಜ್ಜಾರಪ್ಪ ಬಿನ್‌ ಹನುಮಂತಯ್ಯ, ಸಜ್ಜೆಹೊಸಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಸಜ್ಜೆಹೊಸಹಳ್ಳಿ ಗ್ರಾಮದ ಖಾತೆ ನಂಬರ್‌ 73 ರಲ್ಲಿ 25 x 23ರ ನಿವೇಶನದಲ್ಲಿ ಈಗ್ಗೆ 2 ವರ್ಷಗಳ ಹಿಂದೆ ಪಾಯ ಹಾಕಿ  ಟಾಪ್‌ ಲೆವೆಲ್‌ ವರೆಗೆ ಮೇಲ್ಚಾವಣಿಯನ್ನು ಹಾಕಿರುತ್ತೇವೆ. ಮನೆಯ ಸುತ್ತಾ ಕಾಂಪೌಂಡ್‌ ಗೋಡೆಯನ್ನು  ಕಟ್ಟಿದ್ದು, ಈ ಜಾಗ ನಮಗೆ ಸೇರಿರುತ್ತೆಂದು ದಿ:13/05/2018 ರಂದು ಈ ದಿನ ಬೆಳಗ್ಗೆ 8-30 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ಜಗಧೀಶ ಬಿನ್ ಪರಮೇಶಪ್ಪ , ಪರಮೇಶಪ್ಪ ಬಿನ್ ಲೇಟ್‌ ಬಾಣಪ್ಪ, ಲಿಂಗರಾಜು ಬಿನ್‌ ಗುರುಲಿಂಗಪ್ಪ, ಆಯತಾರ ಲಿಂಗಪ್ಪ ಬಿನ್‌ ಲೇಟ್‌ ಮಹಾಲಿಂಗಪ್ಪ , ಪಾಂಡುರಂಗಪ್ಪ ಬಿನ್‌ ಪಾಂಡಪ್ಪ ಮತ್ತು ಲಕ್ಷ್ಮಮ್ಮ ಕೊಂ ಪರಮೇಶಪ್ಪ ಹಾಗೂ ಮಹೇಶ ಬಿನ್ ಸೋಮಣ್ಣ ಈ ಏಳು ಜನರು ಬಂದು ನಮ್ಮನ್ನ ಅವಾಚ್ಯ ಮತ್ತು ಅಶ್ಲೀಲ  ಪದಗಳಿಂದ ಬೈದು ಪಾಂಡುರಂಗಪ್ಪ , ಜಗದೀಶ ಮತ್ತು ಪರಮೇಶಪ್ಪ ರವರು ಒಂದು ದೊಣ್ಣೆಯಿಂದ ನನಗೆ ಹೊಡೆದು ನನ್ನ ಬಟ್ಟೆಯನ್ನೆಲ್ಲಾ ಹರಿದು ಹಾಕಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಈ ಜಾಗದ ಬಗ್ಗೆ ಕೋರ್ಟಿನಲ್ಲಿ ದಾವೆ ಹೂಡಿದ್ದು, ನಮ್ಮಂತೆ ಆಗಿರುತ್ತೆ . ದಯಮಾಡಿ ಸ್ಥಳ ಪರಿಶೀಲನೆ ಮಾಡಿ ದಾಖಲಾತಿಗಳನ್ನು ಪರಿಶೀಲಿಸಿ ನಮಗೆ ನ್ಯಾಯ ದೊರಕಿಸಿಕೊಟ್ಟು,  ಮೇಲ್ಕಂಡವರ ಮೇಲೆ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.

ಮಿಡಿಗೇಶಿ  ಪೊಲೀಸ್ ಠಾಣಾ ಮೊ.ನಂ.53/2018, ಕಲಂ: 323,324,504,506 R/W 34 IPC

ದಿನಾಂಕ:13-05-2018ರಂದು ಮದ್ಯಾಹ್ನ  02:00 ಗಂಟೆಗೆ ಪಿರ್ಯಾದಿ ಲಕ್ಷ್ಮೀರಂಗಪ್ಪ ಬಿನ್ ಲೇಟ್ ಸಿ.ಭೂತಪ್ಪ,45 ವರ್ಷ, ಎ.ಕೆ ಜನಾಂಗ,ಜಿರಾಯ್ತಿ, ಪುಲಮಾಚಿ ಗ್ರಾಮ, ಐ.ಡಿ ಹಳ್ಳಿ, ಮಧುಗಿರಿ ತಾಲ್ಲುಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ:12-05-2018 ರಂದು ಸಂಜೆ 05:30 ಗಂಟೆಯ ಸುಮಾರಿನಲ್ಲಿ ನಾನು ಸಂಬಂಧಿಕರಾದ ರಂಗಶಾಮಯ್ಯ ಹಾಗೂ ಇತರರು ನನ್ನ ಅಣ್ಣ ರಂಗನಾಥ ರವರ ಮನೆಯ ಮುಂದೆ ನಿಂತುಕೊಂಡಿದ್ದಾಗ ನಮ್ಮ ಗ್ರಾಮದವರೇ ಆದ ರಂಗನಾಥ ಬಿನ್ ರಂಗಧಾಮಯ್ಯ ಹಾಗೂ  ರಂಗಧಾಮಯ್ಯ ಬಿನ್ ಮುದ್ದರಂಗಪ್ಪ ಏಕಾಏಕಿ ನನ್ನ ಅಣ್ಣನಾದ ರಂಗಧಾಮಯ್ಯರವರ ಮೇಲೆ ಏನಲೋ ಲೋಫರ್ ನನ್ನ ಮಗನೇ, ಸೂಳೇ ಮಗನೇ ಕಾಂಗ್ರೆಸ್ ಗೆ ಓಟು ಹಾಕುತ್ತೀಯೇನೋ ಅಂತಾ ಅವಾಚ್ಯ ಶಬ್ದಗಳಿಂದ ಬೈದು ರಂಗನಾಥ ಬಿನ್ ರಂಗಧಾಮಯ್ಯನು ಅಲ್ಲಿಯೇ ಬಿದ್ದಿದ್ದ ದೊಣ್ಣೆಯಿಂದ ನನ್ನ ಅಣ್ಣ ರಂಗನಾಥರವರ ತಲೆಗೆ ಹೊಡೆದು ರಕ್ತ ಗಾಯ ಪಡಿಸಿದರು. ಬಿಡಿಸಿಕೊಳ್ಳಲು ಬಂದ ನಮ್ಮ ಸಂಬಂದಿ ರಂಗಶಾಮಯ್ಯನಿಗೆ ರಂಗಧಾಮಯ್ಯ ಬಿನ್ ಮುದ್ದರಂಗಪ್ಪ ಹಾಗೂ ಭೂತರಾಜು ಬಿನ್  ರಂಗದಾಮಯ್ಯ ರವರು ಕೈಗಳಿಂದ ಎಡಭುಜಕ್ಕೆ ಗುದ್ದಿ ನೋವುಂಟು ಮಾಡಿದರು ರಂಗಧಾಮಯ್ಯ ಬಿನ್ ಬರಡ ರಂಗಪ್ಪ  ಹಾಗೂ ಲಕ್ಷ್ಮ್ಮ ಕೋಂ ರಂಗಧಾಮಯ್ಯರವರು  ಈ ನನ್ನ ಮಕ್ಕಳನ್ನು ಸುಮ್ಮನೇ ಬಿಡಬಾರದು ಇವರಿಗೆ ಒಂದು ಗತಿ ಕಾಣಿಸಬೇಕೆಂದು ತಳ್ಳಾಡಿ ನೂಕಾಡಿದರು. ನನ್ನ ಅಣ್ಣ  ರಂಗನಾಥರವರು ಕುಸಿದು ಬಿದ್ದರು. ಅಲ್ಲಿಯೇ ಇದ್ದಂತಹ ನಾನು ಮತ್ತು ಮೂರ್ತಿ ಬಿನ್ ನರಸಪ್ಪರವರು ಗಲಾಟೆ ಬಿಡಿಸಿ ರಂಗನಾಥರವರನ್ನು ಉಪಚರಿಸಿದೆವು. ಅಷ್ಟಕ್ಕೂ ಸುಮ್ಮನಾಗದೆ ಮೇಲ್ಕಂಡ ಎಲ್ಲರೂ ಸಹ ಈ ದಿನ ಬದುಕಿಕೊಂಡಿದ್ದೀರಿ ನನ್ನ ಮಕ್ಕಳ ಮುಂದೊಂದು ದಿನ ನಿಮಗೆ ಒಂದು ಗತಿ ಕಾಣಿಸುತ್ತೇವೆ ಎಂದು ಪ್ರಾಣಬೆದರಿಕೆ ಹಾಕಿ ರಂಗನಾಥ ಬಿನ್ ರಂಗಧಾಮಯ್ಯನು ತನ್ನ ಕೈಯ್ಯಲ್ಲಿದ್ದ ದೊಣ್ಣೆಯನ್ನು ಅಲ್ಲಿಯೇ ಬಿಸಾಕಿ ಹೋದನು. ನಂತರ ನಾವು ನನ್ನ ಅಣ್ಣ ಹಾಗೂ ರಂಗಶಾಮಯ್ಯರವರನ್ನು ಯಾವುದೋ ವಾಹನದಲ್ಲಿ ಮಿಡಿಗೇಶಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ,ನಂತರ ಹೆಚ್ಚಿನ ಚಿಕಿತ್ಸೆಗೆ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿ ಈ ದಿನ ತಡವಾಗಿ ಬಂದು ದೂರು ನೀಡಿತ್ತಿದ್ದೇನೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 45 guests online
Content View Hits : 272926