lowborn ಅಪರಾಧ ಘಟನೆಗಳು 6-05-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ.16/08/2018 ತುಂಬೆ (ತುಮಕೂರು ಬೈಸಿಕಲ್ ಪೊಲೀಸ್)     ಜನಸ್ನೇಹಿ... >> :: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 6-05-18

ತಿಪಟೂರು ನಗರ ಪೊಲೀಸ್ ಠಾಣಾ ಮೊ. ನಂ - 71/2018 ಕಲಂ:279,337 ಐ.ಪಿ.ಸಿ.

ದಿನಾಂಕ:05-05-2018 ರಂದು ಬೆಳಗ್ಗೆ 11-15 ಗಂಟೆಗೆ ಪಿರ್ಯಾದಿ ನಾರಾಯಣ ಬಿನ್ ಲೇಟ್ ರಂಗಪ್ಪ ಅಣ್ಣಾಪುರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ:04-05-2018 ರಂದು ನಾನು ಮತ್ತು ನಮ್ಮ ಗ್ರಾಮದ ವಾಸು ಬಿನ್ ಲೇಟ್ ನಾರಾಯಣಪ್ಪ ರವರು ಮಗ್ಗದ ಕೆಲಸ ಮಾಡುತ್ತಿಇದ್ದು ನಿದ್ದೆ ಬಂದಿದ್ದರಿಂದ ಟೀ ಕುಡಿದು ಬರಲು ರೈಲ್ವೆ ಸ್ಟೇಶನ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಎಸ್‌ಬಿಎಂ ಬಿಟ್ಟು ಮುಂದೆ ರಿಯಲ್ ಬಜಾರ್ ಮುಂಭಾಗ ಹೋಗುತ್ತಿದ್ದಾಗ 12-50 ಎ.ಎಂ ನಲ್ಲಿ ನಮಗಿಂತ ಮುಂಚೆ ರೈಲ್ವೆ ಸ್ಟೇಶನ್ ರಸ್ತೆಯಲ್ಲಿ ಪೈ ಸರ್ಕಲ್ ಕಡೆಯಿಂದ ಒಬ್ಬ ವ್ಯಕ್ತಿ ತನ್ನ ಬೈಕನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹಾಗೂ ರೈಲ್ವೆ ಸ್ಟೇಶನ್ ಕಡೆಯಿಂದ ಒಬ್ಬ ವ್ಯಕ್ತಿ ತನ್ನ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಇಬ್ಬರೂ ಪರಸ್ಪರ ಡಿಕ್ಕಿ ಹೊಡೆಸಿಕೊಂಡು ಅಪಘಾತ ಮಾಡಿಕೊಂಡರು. ನಾವೂ ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ಪೈ ಸರ್ಕಲ್ ಕಡೆಯಿಂದ ದ್ವಿಚಕ್ರ ವಾಹನದ ನಂ ಕೆಎ-44-ಕೆ-9973 ನೇ ಹೀರೋ ಹೋಂಡಾ ಸ್ಪ್ಲೆಂಡರ್ ಪ್ರೋ ಬೈಕಾಗಿದ್ದು ಅಣ್ಣಾಪುರದ ನಾರಾಯಣಪ್ಪ ರವರು ಚಾಲನೆ ಮಾಡುತ್ತಿದ್ದು ಇವರಿಗೆ ತಲೆಗೆ ಹಣೆಗೆ ಪೆಟ್ಟಾಗಿದ್ದವು. ರೈಲ್ವೆ ಸ್ಟೇಶನ್ ಕಡೆಯಿಂದ ಬಂದ ಬೈಕ್ ಕೆಎ-44-ಹೆಚ್‌-1893 ಹೀರೋ ಹೋಂಡಾ ಬೈಕಾಗಿದ್ದು ಚಾಲಕ ತಿಮ್ಮಲಾಪುರದ ಕೈಲಾಸ್ ಎಂತ ತಿಳಿಯಿತು. ಈತನಿಗೆ ತಲೆಗೆ ಕಿವಿಗೆ, ಮತ್ತು ಮೈಕೈಗೆ ಪೆಟ್ಟಾಗಿ ರಕ್ತಗಾಯವಾಗಿದ್ದು ಇವರನ್ನು ಕೂಡಲೇ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿ ಗಾಯಾಳುಗಳ ಸಂಬಂದಿಕರಿಗೆ ವಿಚಾರವನ್ನು ತಿಳಿಸಿದ್ದು ಅವರು ಆಸ್ಪತ್ರೆ ಬಳಿ ಬಂದು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕೈಲಾಸ್ ರವರನ್ನು ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಹಾಗೂ ನಾರಾಯಣಪ್ಪ ರವರನ್ನು ತುಮಕೂರು ಸಿದ್ದಗಂಗಾ ಆಸ್ಪತ್ರೆಗೆ ಕರೆದುಕೊಂಡು ಹೋದರು. ಈ ಅಪಘಾತ ಇಬ್ಬರು ಬೈಕಿನ ಚಾಲಕರುಗಳು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿದ್ದರಿಂದ ಪರಸ್ಪರ ಡಿಕ್ಕಿ ಹೊಡೆದುಕೊಂಡಿದ್ದರಿಂದ ಉಂಟಾಗಿದ್ದು ಸ್ಥಳ ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಿ ಎಂತ ಇತ್ಯಾದಿ ನೀಡಿದ ಪಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಮಿಡಿಗೇಶಿ ಪೊಲೀಸ್ ಠಾಣಾ ಮೊ.ನಂ.48/2018, ಕಲಂ: 279, 337 IPC

ದಿನಾಂಕ:05/05/2018 ರಂದು ಬೆಳಿಗ್ಗೆ 10:30 ಗಂಟೆಗೆ ಪಿರ್ಯಾದಿ ಗೋವಿಂದರಾಜು.ಸಿ.ಟಿ. ಬಿನ್ ಲೇ||ತಿಮ್ಮಪ್ಪ, 42 ವರ್ಷ, ನಾಯಕ ಜನಾಂಗ, ವ್ಯವಸಾಯ, ಚಿನ್ನೇನಹಳ್ಳಿ ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಗಿ ನೀಡಿದ ದೂರಿನ ಅಂಶವೇನೆಂದರೆ, ನನ್ನ ಖಾಸ ಅಣ್ಣನಾದ ನಾರಾಯಣಪ್ಪ ರವರ ಮಗನಾದ 22 ವರ್ಷ ವಯಸ್ಸಿನ ಎನ್.ಗಿರೀಶ ಎಂಬುವನು ನಮ್ಮ ಜೊತೆ ನಮ್ಮ ಮನೆಯಲ್ಲಿಯೇ ವಾಸವಾಗಿದ್ದನು. ದಿನಾಂ:03/05/2018 ರಂದು ಬೆಳಿಗ್ಗೆ ಕೆಲಸದ ನಿಮಿತ್ತಾ ಮಿಡಿಗೇಶಿಗೆ ಹೋಗಿ ಬರುತ್ತೇನೆಂತ ಮನೆಯಲ್ಲಿ ಹೇಳಿ ಕೆಎ-06-ಇ.ಆರ್-6813 ನೇ ಬೈಕ್ ನಲ್ಲಿ ಹೋಗಿದ್ದನು. ಅದೇ ದಿನ ಬೆಳಿಗ್ಗೆ ನಮ್ಮ ಗ್ರಾಮದ ಈರಣ್ಣನು ನನಗೆ ಪೋನ್ ಮಾಡಿ  ನಿಮ್ಮ ಅಣ್ಣನ ಮಗನಾದ ಗಿರೀಶನಿಗೆ ಮಿಡಿಗೇಶಿಯಿಂದ ಊರಿಗೆ ಬೈಕ್ ನಲ್ಲಿ ಬರುತ್ತಿದ್ದಾಗ ಬೆಳಿಗ್ಗೆ 09:30 ಗಂಟೆಯ ಸಮಯದಲ್ಲಿ ಮಿಡಿಗೇಶಿ ಗ್ರಾಮದ ಹತ್ತಿರ ಮಧುಗಿರಿ-ಪಾವಗಡ ಮುಖ್ಯ ರಸ್ತೆಯಲ್ಲಿರುವ ಕನಕ ಸಮುದಾಯ ಭವನದ ಬಳಿ ರಸ್ತೆಯಲ್ಲಿ ಅಪಘಾತವಾಗಿದೆ ಬೇಗ ಬಾ ಎಂತ ತಿಳಿಸಿದ. ನಾನು ಕೂಡಲೇ ಅಪಘಾತವಾಗಿದ್ದ ಸ್ಥಳಕ್ಕೆ ಹೋಗಿ ನೋಡಲಾಗಿ ಗಿರೀಶನಿಗೆ ಅಪಘಾತವಾಗಿ ಗಿರೀಶನ ಎರಡೂ ಕಾಲುಗಳಿಗೆ ತುಂಬಾ ಪೆಟ್ಟುಗಳು ಬಿದ್ದು ರಕ್ತಗಾಯಗಳಾಗಿದ್ದು ರಸ್ತೆಯ ಬದಿಯಲ್ಲಿ ಮಲಗಿಸಿದ್ದರು. ನಂತರ ಗಿರೀಶನನ್ನು ವಿಚಾರ ಮಾಡಲಾಗಿ ನಾನು ಕೆಎ-06-ಇ.ಆರ್-6813 ನೇ ಬೈಕ್ ನಲ್ಲಿ ಬೆಳಿಗ್ಗೆ ಮಿಡಿಗೇಶಿಗೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ಸ್ ಬೆಳಿಗ್ಗೆ ಸುಮಾರು 09:30 ಗಂಟೆಯಲ್ಲಿ ಚಿನ್ನೇನಹಳ್ಳಿಗೆ ಬರುತ್ತಿದ್ದಾಗ, ಅದೇ ಸಮಯಕ್ಕೆ ಅದೇ ರಸ್ತೆಯಲ್ಲಿ ಮಧುಗಿರಿ ಕಡೆಯಿಂದ ಬಂದ ಕೆಎ-51-ಎಂ.ಎಫ್-1424 ನೇ ಕಾರನ್ನು ಅದರ ಚಾಲಕ ತುಂಬಾ ಸ್ಪೀಡಾಗಿ, ಅಡ್ಡದಿಡ್ಡಿಯಾಗಿ ಓಡಿಸಿಕೊಂಡು ಬಂದು ಎದುರಿಗೆ ಕೆಎ-06-ಇ.ಆರ್-6813 ನೇ ಬೈಕ್ ನಲ್ಲಿ ಬರುತ್ತಿದ್ದ ನನಗೆ ಡಿಕ್ಕಿ ಹೊಡೆಸಿ ಅಪಘಾತ ಉಂಟುಮಾಡಿದ್ದರಿಂದ ಬೈಕ್ ಮತ್ತು ನಾನು ತಲೆಗೆ ಹಾಕಿಕೊಂಡಿದ್ದ ಹೆಲ್ಮೆಟ್ ಜಖಂಗೊಂಡು ನನ್ನ ಎಡ ಕಿವಿಯ ಮೇಲ್ಭಾಗ ತಲೆಗೆ, ಬಲಗಾಲಿನ ತೊಡೆಗೆ, ಎಡಗಾಲಿನ ಮೊಣಕಾಲಿಗೆ ತುಂಬಾ ಜೋರಾಗಿ ಪೆಟ್ಟುಗಳು ಬಿದ್ದು ರಕ್ತಗಾಯಗಳಾದವು ಆಗ ಅಲ್ಲಿಯೇ ಕನಕ ಭವನದ ಬಳಿಯಿದ್ದ ಈರಣ್ಣ ಬಿನ್ ರಂಗಧಾಮಪ್ಪ ಮತ್ತು ಅಪಘಾತಪಡಿಸಿದ ಕಾರಿನ ಡ್ರೈವರ್ ಇಬ್ಬರು ಸೇರಿ ನನ್ನನ್ನು ಉಪಚರಿಸಿದರೆಂತ ತಿಳಿಸಿದನು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಯಾವುದೋ ವಾಹನದಲ್ಲಿ ಗಾಯಾಳು ಗಿರೀಶ ನನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿಕೊಂಡು, ನಂತರ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ನಲ್ಲಿ ತುಮಕೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಅಲ್ಲಿ ಚಿಕಿತ್ಸೆ ಕೊಡಿಸಿಕೊಂಡು ನಂತರ ಅಲ್ಲಿಂದ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ದಾಖಲಿಸಿ ಇಲ್ಲಿಯವರೆಗೆ ಗಿರೀಶನ ಯೋಗಕ್ಷೇಮ ನೋಡಿಕೊಂಡು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು. ಗಿರೀಶ.ಎನ್. ಬಿನ್ ನಾರಾಯಣಪ್ಪ ರವರಿಗೆ ಅಪಘಾತಪಡಿಸಿದ ಮೇಲ್ಕಂಡ ಕೆಎ-51-ಎಂ.ಎಫ್-1424 ನೇ ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆ. ಅಪಘಾತಪಡಿಸಿದ ಮೇಲ್ಕಂಡ ಕಾರು ಮತ್ತು ಅಪಘಾತಕೀಡಾಗಿರುವ ಬೈಕ್ ಅಪಘಾತ ನಡೆದ ಸ್ಥಳದಲ್ಲಿ ರಸ್ತೆಯ ಪಕ್ಕದಲ್ಲಿಯೇ ಇರುತ್ತವೆಂತ ನೀಡಿ ಪಿರ್ಯಾದು ಅಂಶವಾಗಿರುತ್ತೆ.

ಹುಲಿಯೂರುದುರ್ಗ ಪೊಲೀಸ್ಠಾಣಾ ಮೊ.ನಂ. 113/2018, ಕಲಂ: 279 337 ಐಪಿಸಿ

ದಿನಾಂಕ: 05/05/2018 ರಂದು ಸಂಜೆ 04-30 ಗಂಟೆಗೆ ರಾಮಚಂದ್ರಯ್ಯ ಟಿ ಆರ್ ಬಿನ್ ಲೇಟ್ ಪಟೇಲ್ ರಾಜಯ್ಯ, ಸುಮಾರು 50 ವರ್ಷ, ವಕ್ಕಲಿಗರು, ಜಿರಾಯ್ತಿಕೆಲಸ, ಸಣಭ ಗ್ರಾಮ, ಅಮೃತೂರು ಹೋಬಳಿ, ಕುಣಿಗಲ್ ತಾ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ಪಿರ್ಯಾದುದಾರರ ಮಗನಾದ ಆರ್,ಸುಧಾಕರಗೌಡ, ಸುಮಾರು 19 ವರ್ಷ, ಎಲೆಕ್ಟ್ರಿಕಲ್ ಕೆಲಸ, ಇವರು ದಿನಾಂಕ: 03/05/2018 ರಂದು ಕೆಎ53-ಇ-3455 ನೇ ಬೈಕಿನಲ್ಲಿ ಯಡವಾಣಿ ಗ್ರಾಮಕ್ಕೆ ಹೋಗಿ ನಂತರ ಸಂಜೆ 06-30 ಗಂಟೆಯಲ್ಲಿ ಯಡವಾಣಿ ಗ್ರಾಮದ ರಾಮಲಿಂಗಯ್ಯ ರವರ ರೈಸ್ ಮಿಲ್ ಹತ್ತಿರ ರಸ್ತೆಯ ಎಡಭಾಗದಲ್ಲಿ ಬೈಕನ್ನು ನಿಲ್ಲಿಸಿಕೊಂಡು ಅದೇ ಗ್ರಾಮದ ವೆಂಕಟೇಶ್ ಬಿನ್ ರಾಮಣ್ಣ, ಸುಮಾರು 40 ವರ್ಷ, ಪ.ಜಾತಿ,  ಎಂಬುವವರೊಂದಿಗೆ ಮಾತನಾಡುತ್ತಾ ನಿಂತಿರುವಾಗ್ಗೆ ಅದೇ ಸಮಯಕ್ಕೆ  ಅಮೃತೂರು ಕಡೆಯಿಂದ ಅರ್ಜುನಹಳ್ಳಿ ಕಡೆಗೆ ಹೋಗಲು ಬಂದ ಕೆಎ04-ಹೆಚ್.ಯು-0490 ನೇ ಬೈಕಿನ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಪಿರ್ಯಾದಿಯ ಮಗನ ಬೈಕಿಗೆ ಮತ್ತು ವೆಂಕಟೇಶ ರವರಿಗೆ ಡಿಕ್ಕಿ ಪಡಿಸಿ ಅಪಘಾತಪಡಿಸಿದ್ದು, ಸುಧಾಕರಗೌಡ ಮತ್ತು ವೆಂಕಟೇಶ ರವರಿಗೆ ಇಬ್ಬರಿಗೂ ಮೈ, ಕೈ, ಕಾಲು, ತಲೆಗೆ ಪೆಟ್ಟು ಬಿದ್ದಿದ್ದು, ನಂತರ ಗಾಯಗೊಂಡಿದ್ದ ಇವರನ್ನು ಅಲ್ಲಿಯೇ ಇದ್ದ ಸಾರ್ವಜನಿಕರ ಸಹಾಯದಿಂದ ಅಮೃತೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ಪಿರ್ಯಾದಿಗೆ ಪೋನ್ ಮಾಡಿ ವಿಚಾರ ತಿಳಿಸಿದ್ದು ನಂತರ ಪಿರ್ಯಾದಿಯು ಅಮೃತೂರು ಸರ್ಕಾರಿ ಆಸ್ಪತ್ರೆಗೆ ಬಂದು ವೈದ್ಯರ ಸಲಹೆ ಮೇರೆಗೆ ತನ್ನ ಮಗ ಸುಧಾಕರಗೌಡ ನನ್ನು ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ಚಿಕಿತ್ಸಗೆ ಸೇರಿಸಿ ಇಲ್ಲಿಯವೆರೆಗೆ ಅಲ್ಲಿಯೇ ಇದ್ದು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತಾರೆ. ಗಾಯಾಳು ವೆಂಕಟೇಶ ರವರು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿರುತ್ತೆ. ಅಪಘಾತಕ್ಕೀಡಾದ ಎರಡೂ ವಾಹನಗಳು ಯಡವಾಣಿ ಗ್ರಾಮದ ರೈಸ್ ಮಿಲ್ ಬಳಿಯೇ ಇರುತ್ತವೆ. ಆದ್ದರಿಂದ ಅಪಘಾತಕ್ಕೆ ಕಾರಣವಾದ ಕೆಎ04-ಹೆಚ್.ಯು-0490 ನೇ ಬೈಕಿನ ಚಾಲಕನ ಮೇಲೆ ಕಾನೂನು  ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 61 guests online
Content View Hits : 322824