lowborn ಅಪರಾಧ ಘಟನೆಗಳು 4-05-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 4-05-18

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-107/2018 ಕಲಂ 457,380 ಐಪಿಸಿ

ದಿನಾಂಕ:03-05-2018 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿಯಾದ ಹನುಮಯ್ಯ‌ ಬಿನ್‌ ಲೇ|| ಗೋವಿಂದಯ್ಯ, 72 ವರ್ಷ, ಒಕ್ಕಲಿಗ ಜನಾಂಗ, ನೀವೃತ್ತ ನೌಕರ, ಬಳ್ಳಗೆರೆ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ಬಳ್ಳಗೆರೆ ಮಜರೆ ಹನುಮಂತನಗರದಲ್ಲಿರುವ ಶ್ರೀ ಕೋಡಿ ಆಂಜನೇಯ ಸ್ವಾಮಿ ದೇವಸ್ಥಾನದ ಜೀರ್ಣೋಧ್ದಾರ ಸಮಿತಿಯ(ರಿ) ಅಧ್ಯಕ್ಷನಾಗಿದ್ದು, ಸದರಿ ದೇವಸ್ಥಾನದ ಕಟ್ಟಡದ ನಿರ್ಮಾಣ ಪೂರ್ಣಗೊಂಡು ದಿನಾಂಕ 22-04-2018 ರಂದು ಮೇಲ್ಕಂಡ ದೇವಸ್ಥಾನದಲ್ಲಿ ಶ್ರೀ ಕೋಡಿ ಆಂಜನೇಯ ಸ್ವಾಮಿಯ ಪ್ರತಿಷ್ಟಾಪನೆ ಮಾಡಿ ಲೋಕಾರ್ಪಣೆ ಮಾಡಲಾಗಿತ್ತು. ಸದರಿ  ದೇವಸ್ಥಾನಕ್ಕೆ ಭದ್ರತೆಗೆ ಕಬ್ಬಿಣದ ಹಾಗೂ ಮರದ ಬಾಗಿಲನ್ನು ಅಳವಡಿಸಲಾಗಿತ್ತು. ಸದರಿ ದೇವಸ್ಥಾನಕ್ಕೆ  ವಿಷ್ಣು ಬಿನ್‌‌ ತಿರುಮಲಯ್ಯ ರವರು ಅರ್ಚಕರಾಗಿದ್ದು, ಪ್ರತಿದಿನ ಪೂಜೆ ಮುಗಿಸಿಕೊಂಡು ದೇವಸ್ಥಾನದ ಬಾಗಿಲನ್ನು ಹಾಕಿಕೊಂಡು ಅವರೇ ದೇವಸ್ಥಾನವನ್ನು ನೋಡಿಕೊಳ್ಳುತ್ತಿದ್ದರು. ಅದರಂತೆ ದಿನಾಂಕ 02-05-2018 ರಂದು ಸಂಜೆ ಪೂಜೆ ಮುಗಿಸಿಕೊಂಡು ರಾತ್ರಿ 09-00 ಗಂಟೆ ಸಮಯದಲ್ಲಿ ದೇವಸ್ಥಾನದ ಬಾಗಿಲುಗಳಿಗೆ ಬೀಗ ಹಾಕಿ ಮನೆಗೆ ಹೋಗಿದ್ದರು. ನಂತರ ದಿನಾಂಕ 03-05-2018 ರಂದು ದೇವಸ್ಥಾನದ ಪಕ್ಕದಲ್ಲಿರುವ ರೇಷ್ಮೇ ಇಲಾಖೆಯ ಸಿಬ್ಬಂದಿಯಾದ ಶ್ರೀ ಹೆಚ್‌‌ ಶಂಕರಪ್ಪ ನವರು ಬೆಳಗ್ಗೆ 07-00 ಗಂಟೆ ಸಮಯಕ್ಕೆ ಆಫೀಸಿಗೆ ಹೋದಾಗ ದೇವಸ್ಥಾನದ ಕಡೆ ನೋಡಲಾಗಿ ದೇವಸ್ಥಾನದ ಬಾಗಿಲು ತೆರೆದಿರುವುದನ್ನು ಕಂಡು ಆತಂಕಗೊಂಡು ನನಗೆ ಫೋನ್‌ ಮಾಡಿ ದೇವಸ್ಥಾನದ ಬಾಗಿಲು ತೆರೆದಿರುವ ಬಗ್ಗೆ ವಿಚಾರ ತಿಳಿಸಿದರು. ತಕ್ಷಣ ನಾನು ಮತ್ತು ನಮ್ಮ ಗ್ರಾಮದ ಮೂಡ್ಲಗಿರಿಯಪ್ಪ ಹಾಗೂ ಸಂಜೀವಯ್ಯ ರವರು ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಕಳ್ಳರು ದಿನಾಂಕ 02-05-2018 ರಂದು ರಾತ್ರಿ ಯಾವುದೋ ವೇಳೆಯಲ್ಲಿ ದೇವಸ್ಥಾನಕ್ಕೆ ಅಳವಡಿಸಿದ್ದ ಬೀಗಗಳನ್ನು ಹೊಡೆದು ಬಾಗಿಲನ್ನು ತೆಗೆದು ದೇವಸ್ಥಾನದ ಒಳಗೆ ಹೋಗಿ ದೇವಸ್ಥಾನದಲ್ಲಿದ್ದ ದೇವರ ಹುಂಡಿಯನ್ನು ಹೊಡೆದು ಅದರಲ್ಲಿದ್ದ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ಕಳ್ಳತನ ಮಾಡಿ ಹುಂಡಿಯಲ್ಲಿದ್ದ ಹಣವನ್ನು ಕಳವು ಮಾಡಿಕೊಂಡು ಹೋಗಿರುವ ಆಸಾಮಿಗಳು ಯಾರೆಂಬುದನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂತಾ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಯುಡಿಆರ್ .ನಂ. 07/2018, ಕಲಂ: 174 ಸಿ ಆರ್ ಪಿ ಸಿ

ದಿನಾಂಕ: 03-05-2018 ರಂದು ಮಧ್ಯಾಹ್ನ 03-30 ಗಂಟೆಗೆ ಕುಣಿಗಲ್ ತಾಲೋಕು, ಹುಲಿಯೂರು ದುರ್ಗ ಹೋಬಳಿ , ಚೌಡನಕುಪ್ಪೆ ಗ್ರಾಮದ ವಾಸಿ ಹುಚ್ಚಣ್ಣಶೆಟ್ಟಿ ಬಿನ್ ಲೇಟ್ ಹುಚ್ಚಶೆಟ್ಟಿ, 60 ವರ್ಷ, ಗಾಣಿಗಶೆಟ್ಟರು, ವ್ಯವಸಾಯ ಕೆಲಸ ರವರು ಠಾಣೆಗೆ ಹಾಜರಾಗಿ  ನೀಡಿದ ದೂರಿನ ಅಂಶವೇನೆಂದರೆ ಪಿರ್ಯಾದುದಾರರಿಗೆ ಮೂರು ಜನ ಮಕ್ಕಳಿದ್ದು ಎರಡನೆ ಮಗಳದ ಭಾಗ್ಯಮ್ಮಳನ್ನು ನೆಲಮಂಗಲ ತಾಲೋಕು ಸೋಮಪುರ ಹೋಬಳಿ ಗಾಣಿಗರಪಾಳ್ಯದ ವಾಸಿಯಾದ ಶ್ರೀನಿವಾಸ ಬಿನ್ ತಿರುಮಲಯ್ಯ ರವರಿಗೆ ಕೊಟ್ಟು ಮದುವೆ ಮಾಡಿದ್ದು ಅವರಿಗೆ ಒಂದು ಹೆಣ್ಣು ಮಗು ಇರುತ್ತೆ, ಪಿರ್ಯಾದಿಯ ಅಳಿಯ ಶ್ರಿನಿವಾಸರವರಿಗೆ ಈಗ್ಗೆ ಮೂರು ವರ್ಷಗಳಿಂದ ಮದುಮೇಹ ಖಾಯಿಲೆ ಇದ್ದು ಆಸ್ಪತ್ರೆಗಳಿಗೆ ತೋರಿಸಿ ಚಿಕಿತ್ಸೆ ಪಡೆಯುತ್ತಿದ್ದರು. ದಿನಾಂಕ: 30-4-2018 ರಂದು ಪಿರ್ಯಾದಿಯ ಅಳಿಯ ತನ್ನ ಮಗಳೊಂದಿಗೆ ಪಿರ್ಯಾದಿಯವರ ಮನೆಗೆ ಚೌಡನಕುಪ್ಪೆಗೆ ಬಂದಿದ್ದು ವಿಚಾರ ಮಾಡಲಾಗಿ ಮಧುಮೇಹ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದರು. ಈ ದಿನ ದಿನಾಂಕ: 03-05-2018 ರಂದು ಬೆಳಿಗ್ಗೆ 11-15 ಗಂಟೆ ಸಮಯದಲ್ಲಿ ಪಿರ್ಯಾದಿಯ ಅಳಿಯ ಹೊಲದ ಕಡೆ ಹೋಗಿ ಬರುತ್ತೇನೆಂದು ಹೇಳಿ ಹೋದರು. ನಂತರ ಪಿರ್ಯಾದಿ ಹೆಂಡತಿ ಗಂಗಮ್ಮರವರು ಮಧ್ಯಾಹ್ನ 12-00 ಗಂಟೆಗೆ ಹೊಲದ ಹತ್ತಿರ ಹೋಗಿ ಬರುತ್ತೆನೆಂದು ಹೇಳಿ ಹೋಗಿದ್ದು, ವಾಪಸ್ಸು 12.30 ಗಂಟೆಗೆ ಮನೆಗೆ ಬಂದು ಅಳಿಯ ಶ್ರೀನಿವಾಸ ರವರು ಮಾವಿನ ಮರಕ್ಕೆ ಸುಮಾರು 12-00 ಗಂಟೆ ಸಮಯದಲ್ಲಿ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾರೆಂದು ತಿಳಿಸಿದರು. ನಂತರ ಪಿರ್ಯಾದಿಯು ಅವರ ಗ್ರಾಮದ ವಾಸಿಗಳಾದ ವಸಂತ ಬಿನ್ ಕೆಂಪಣ್ಣ ಮತ್ತು ಹನುಮಂತರಾವ್ ರವರೊಂದಿಗೆ ಸ್ಥಳಕ್ಕೆ ಹೋಗಿ ನೋಡಿ ಮೃತ ದೇಹವನ್ನು ಕೆಳಗೆ ಇಳಿಸಿರುತ್ತಾರೆ.  ಪಿರ್ಯಾದಿಯ ಅಳಿಯ ಶ್ರಿನಿವಾಸನಿಗೆ ಈಗ್ಗೆ 03 ವರ್ಷಗಳಿಂದ ಮಧುಮೇಹ ಖಾಯಿಲೆ ಇದ್ದು ಅವರು ಆಸ್ಪತ್ರೆಗೆ ತೋರಿಸಿಕೊಂಡರೂ ಸಹ ಖಾಯಿಲೆ ಗುಣಮುಖವಾಗದ್ದಿದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ತನ್ಮೂಲಕ ತಾನೆ ಹಗ್ಗದಿಂದ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಮೃತ ಪಟ್ಟಿರುತ್ತಾರೆ ವಿನಃ ಅವನ ಸಾವಿಗೆ ಯಾವುದೆ ಅನುಮಾನವಿರುವುದಿಲ್ಲ. ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

ತುಮಕೂರು ಸಂಚಾರ ಪೊಲೀಸ್ ಠಾಣಾ ಮೊ.ಸಂಖ್ಯೆ 95/2018 ಕಲಂ 279,304(ಎ) ಐಪಿಸಿ

ದಿನಾಂಕ 03.05.2018 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿ ಧನಂಜಯ ಬಿನ್ ಲೇ.ಬೋರಣ್ಣ, 44ವರ್ಷ, ಲಿಂಗಾಯಿತರು, ಶಿರಾಗೇಟ್, ತುಮಕೂರು ಇವರು ನೀಡಿದ ದೂರಿನ ಅಂಶವೇನೆಂದರೆ  ದಿನಾಂಕ  26.04.2018 ರಂದು ಸಂಜೆ 4-20 ಗಂಟೆ   ಸಮಯದಲ್ಲಿ   ಕೆಎ.06.ಎಎ.1211 ನೇ ಟಾಟಾ ಏಸ್ ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು  ಬಂದು, ವೆಂಕಟೇಶಪುರದ ವೆಂಕಟೇಶ್ವರ ದೇವಸ್ಥಾನದ ಹತ್ತಿರ ತುಮಕೂರು ಮಧುಗಿರಿ ರಸ್ತೆ ದಾಟಲು ನಿಂತಿದ್ದ  ನನ್ನ  ಅಕ್ಕ ಗಂಗಮ್ಮ, 70 ವರ್ಷ, ಗೃಹಿಣಿ, ಶಿರಾಗೇಟ್, ತುಮಕೂರು ರವರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದರಿಂದ ಕೈಕಾಲುಗಳಿಗೆ ಹಾಗೂ ತಲೆಗೆ  ಪೆಟ್ಟು  ರಕ್ತಗಾಯಗಳಾಗಿ, ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೇ  ಈ ದಿವಸ ದಿನಾಂಕ 03.05.2018 ರಂದು   ಮದ್ಯಾಹ್ನ 2-00 ಗಂಟೆಯಲ್ಲಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಾಯಾಳು ಗಂಗಮ್ಮ ರವರು ಮೃತಪಟ್ಟಿರುತ್ತಾರೆಂತ ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 51 guests online
Content View Hits : 272928