lowborn ಅಪರಾಧ ಘಟನೆಗಳು 24-04-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ.16/08/2018 ತುಂಬೆ (ತುಮಕೂರು ಬೈಸಿಕಲ್ ಪೊಲೀಸ್)     ಜನಸ್ನೇಹಿ... >> :: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 24-04-18

ಜಯನಗರ ಪೊಲೀಸ್ ಠಾಣಾ ಮೊ ನಂ 65/2018 ಕಲಂ 454, 457, 380 ಐಪಿಸಿ

ದಿನಾಂಕ: 23-04-2018 ರಂದು ಸಂಜೆ 4-00 ಗಂಟೆಯಲ್ಲಿ ತುಮಕೂರು ಟೌನ್‌, ಯಾದವನಗರ, 4 ನೇ ಕ್ರಾಸ್‌ ವಾಸಿಯಾದ ಎಸ್.ಡಿ. ಗೋವಿಂದರಾಜು ಬಿನ್. ಲೇ|| ದೊಡ್ಡಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಮಧುಗಿರಿ ತಾಲ್ಲೂಕು ಬ್ಯಾಲ್ಯ ಗ್ರಾಮದಲ್ಲಿ ನಮ್ಮ ಅತ್ತೆಯವರ ತಿಥಿ ಕಾರ್ಯ ಇದ್ದರಿಂದ ನಿನ್ನೆ ದಿನ, ದಿನಾಂಕ: 22-04-2018 ರಂದು ಸಾಯಂಕಾಲ ಸುಮಾರು 4-00 ಗಂಟೆ ಸಮಯದಲ್ಲಿ ನಮ್ಮ ಮನೆಗೆ ಬೀಗ ಹಾಕಿಕೊಂಡು, ನಮ್ಮ ಸಂಸಾರ ಸಮೇತ ನಾವು ಮಧುಗಿರಿ ತಾಲ್ಲೂಕು ಬ್ಯಾಲ್ಯ ಗ್ರಾಮಕ್ಕೆ ಹೋಗಿದ್ದೆವು.  ಊರಿನಲ್ಲಿ ಕಾರ್ಯ ಮುಗಿಸಿಕೊಂಡು ಈ ದಿನ ದಿನಾಂಕ: 23-04-2018 ರಂದು ಬೆಳಿಗ್ಗೆ ಸುಮಾರು 8-30 ಗಂಟೆ ಸಮಯದಲ್ಲಿ ವಾಪಾಸ್ಸು ಮನೆಯ ಬಳಿಗೆ ಬಂದು, ಮನೆಯ ಮುಂದಿನ ಕಾಂಪೌಂಡ್‌‌ ಗೇಟ್‌‌ಗೆ ಹಾಕಿದ್ದ  ಬೀಗ ಹಾಗೂ ಮುಂಭಾಗಿಲಿಗೆ ಹಾಕಿದ್ದ ಬೀಗವನ್ನು ತೆಗೆದು ಮನೆಯ ಒಳಗೆ ಹೋಗಿ ನೋಡಲಾಗಿ, ಯಾರೋ ಕಳ್ಳರು ನಮ್ಮ ಮನೆಯ ಹಿಂಭಾಗಿಲನ್ನು ಮೀಟಿ, ಮನೆಯೊಳಗೆ ಪ್ರವೇಶ ಮಾಡಿ, ಮನೆಯ ರೂಮಿನಲ್ಲಿ ಇಟ್ಟಿದ್ದ ಗಾಡ್ರೇಜ್‌‌‌ ಬೀರುವನ್ನು ರೂಮಿನಲ್ಲಿಯೇ ಇದ್ದ ಮಂಚದ ಮೇಲೆ ಅಂಗಾತ ಮಲಗಿಸಿ ಯಾವುದೋ ಆಯುಧದಿಂದ ಬೀರುವಿನ ಬಾಗಿಲನ್ನು ಮೀಟಿ ತೆಗೆದು, ಬೀರುವಿನ ಒಳಗೆ ಇಟ್ಟಿದ್ದ ಸೀಕ್ರೇಟ್‌‌ ಲಾಕರ್‌‌‌‌ ಕೀ ನಿಂದ ಸೀಕ್ರೇಟ್‌‌ ಲಾಕರ್‌‌ ಡೋರನ್ನು ತೆಗೆದು, ಅದರಲ್ಲಿ ಇಟ್ಟಿದ್ದ 1) ಎರಡು ಚಿನ್ನದ ಬಳೆಗಳು ಸುಮಾರು 20 ಗ್ರಾಂ 2) ಒಂಟಿ ಎಳೆಯ ಚಿನ್ನದ ಕೊರಳ ಚೈನು ಇದರಲ್ಲಿ ಡಿಸೈನ್‌‌ ಡಾಲರ್‌‌ ಇರುತ್ತೆ.  ತೂಕ  ಸುಮಾರು 15 ಗ್ರಾಂ  3) ಒಂದು ಒಂಟಿ ಎಳೆಯ ಚಿನ್ನದ ಕೊರಳ ಚೈನು ತೂಕ ಸುಮಾರು 13 ಗ್ರಾಂ  4) ಒಂದು ಮೂರು ಕಲ್ಲಿನ ಚಿನ್ನದ ಉಂಗುರ ತೂಕ ಸುಮಾರು 5 ಗ್ರಾಂ  5) ಒಂದು ಪ್ಲೈನ್ ಡಿಸೈನ್‌‌ ಉಂಗುರ ತೂಕ ಸುಮಾರು 5 ಗ್ರಾಂ 6) 3 ಚಿಕ್ಕ ಮಕ್ಕಳ ಉಂಗುರ ತೂಕ ಸುಮಾರು 3 ಗ್ರಾಂ 7) ಒಂದು ಜೊತೆ ಚಿನ್ನದ ವಾಲೆ- ಜುಂಕಿ ತೂಕ ಸುಮಾರು 3 ಗ್ರಾಂ  8) ಒಂದು ಜೊತೆ ಕೆಂಪು ಕಲ್ಲಿನ ಓಲೆ  ತೂಕ ಸುಮಾರು 3 ಗ್ರಾಂ  9) ಒಂದು ಜೊತೆ ಚಿನ್ನದ ಹ್ಯಾಂಗೀಸ್‌‌‌ ತೂಕ ಸುಮಾರು 3 ಗ್ರಾಂ 10) ಒಂದು ಜೊತೆ ಬಿಳಿಯ ಕಲ್ಲಿನ ಓಲೆ ತೂಕ ಸುಮಾರು 4 ಗ್ರಾಂ  ಮೇಲ್ಕಂಡ ಚಿನ್ನದ ವಡವೆಗಳೆಲ್ಲಾ ಸೇರಿ ಒಟ್ಟು ಸುಮಾರು 74 ಗ್ರಾಂ ತೂಕವಿದ್ದು ಬೆಲೆ ಸುಮಾರು 1,10,000/- ರೂ. ಆಗುತ್ತದೆ. ಇದರ ಜೊತೆಯಲ್ಲಿಯೇ ಬೆಳ್ಳಿಯ ವಡವೆಗಳಾದ 11) ಒಂದು ಬೆಳ್ಳಿಯ ಲೋಟ, 12) ಒಂದು ಬೆಳ್ಳಿಯ ಲಕ್ಷ್ಮಿ ಮುಖವಾಡ  13) ಬೆಳ್ಳಿಯ ವೆಂಕಟೇಶ್ವರಸ್ವಾಮಿ ವಿಗ್ರಹ 14) 4 ಜೊತೆ ಚಿಕ್ಕ ಬೆಳ್ಳಿಯ ದೀಪಲೆ ಕಂಭ 15) 4 ಜೊತೆ ಬೆಳ್ಳಿಯ ಕುಂಕುಮದ ಬಟ್ಟಲು,  ಬೆಳ್ಳಿಯ ವಡವೆಗಳು ಒಟ್ಟು ½ ಕೆ.ಜಿ. ತೂಕವಿದ್ದು ಬೆಲೆ ಸುಮಾರು 20,000/- ರೂ.ಗಳಾಗುತ್ತೆ.   ಯಾರೋ ಕಳ್ಳರು ನಿನ್ನೆ ದಿನ ದಿನಾಂಕ: 22-04-2018 ರಂದು ರಾತ್ರಿ ವೇಳೆಯಲ್ಲಿ ನಮ್ಮ ಮನೆಯ ಹಿಂಭಾಗಿಲನ್ನು ಮೀಟಿ ತೆಗೆದು, ಹಿಂಬಾಗಿಲಿನಿಂದ ಮನೆಯೊಳಗೆ ಪ್ರವೇಶ ಮಾಡಿ, ಮನೆಯ ರೂಮಿನಲ್ಲಿ ಬೀರುವಿನಲ್ಲಿ ಇಟ್ಟಿದ್ದ ಮೇಲ್ಕಂಡ ಚಿನ್ನದ ಹಾಗೂ ಬೆಳ್ಳಿಯ ವಡವೆಗಳನ್ನು ಬೀರುವನ್ನು ಮೀಟಿ ತೆಗೆದು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ವಸ್ತುಗಳ ಬಗ್ಗೆ ನಾವು ನಮ್ಮ ಮನೆಯಲ್ಲಿ ಕೂಲಂಕುಶವಾಗಿ ಪರಿಶೀಲಿಸಿ, ಕಳುವಾಗಿರುವ ವಿಚಾರವನ್ನು ನಮ್ಮ ಸಂಬಂಧಿಕರಿಗೆ ತಿಳಿಸಿ ಈಗ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ.  ತಾವು ದಯಮಾಡಿ ಕಳುವಾಗಿರುವ ಮೇಲ್ಕಂಡ ಚಿನ್ನ-ಬೆಳ್ಳಿಯ ವಡವೆಗಳನ್ನು ಪತ್ತೆ ಮಾಡಿ ಕಳವು ಮಾಡಿರುವ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಅಮೃತೂರು ಪೊಲೀಸ್ ಠಾಣಾ ಮೊನಂ-89/2018 ಕಲಂ-341, 324, 504, 506 ರೆ/ವಿ 34 ಐಪಿಸಿ.

ದಿನಾಂಕ: 21-04-2018 ರಂದು ರಾತ್ರಿ 8-10 ಗಂಟೆಯಲ್ಲಿ ಪಿರ್ಯಾದಿ ಎಂ.ವಿ.ಕೆಂಪಯ್ಯ ಬಿನ್ ಲೇಟ್ ವೆಂಕಟೇಗೌಡ, 58 ವರ್ಷ, ಒಕ್ಕಲಿಗರು, ಜಿರಾಯ್ತಿ, ಮಂಟ್ಯಾ ಗ್ರಾಮ, ಎಡೆಯೂರು ಹೋಬಳಿ, ಕುಣಿಗಲ್ ತಾಲ್ಲೂಕ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ,       ಕುಣಿಗಲ್ ತಾಲ್ಲೂಕ್, ಎಡೆಯೂರು ಹೋಬಳಿ, ಮಂಟ್ಯಾ ಗ್ರಾಮದ ಸರ್ವೆ ನಂ-53/2, 52/2 ರಲ್ಲಿ ನನ್ನ ವ್ಯವಸಾಯದ ಜಮೀನು ಇದ್ದು, ಈ ನನ್ನ ಜಮೀನಿಗೆ ನಾವು ಮತ್ತು ನಮ್ಮ ಗ್ರಾಮಸ್ಥರುಗಳು ಅವರವರ ಜಮೀನುಗಳಿಗೆ ಓಡಾಡಲು ಸರ್ಕಾರಿ ನಕಾಶೆಯಂತೆ ಇದ್ದ ಬಂಡಿ ಜಾಡನ್ನು ತೂಬಿನಕೆರೆ ಗ್ರಾಮದ ಹನುಮೇಗೌಡ ಬಿನ್ ಚಿಕ್ಕಹನುಮಯ್ಯ ಮತ್ತು ಆತನ ಹೆಂಡತಿ ಬೋರಮ್ಮ ಹಾಗೂ ಆತನ ತಮ್ಮಂದಿರಾದ ಕೃಷ್ಣ, ಲಕ್ಷ್ಮಣ ರವರುಗಳು ತಕರಾರು ಮಾಡಿ ತೊಂದರೆಕೊಡುತ್ತಿದ್ದುದ್ದರಿಂದ ನಾವು ಕಾನೂನು ಬದ್ದವಾಗಿ ಹೋಗಿದ್ದರಿಂದ ದಿ: 16-08-2017 ರಂದು ಮಾನ್ಯ ಕುಣಿಗಲ್ ತಹಶೀಲ್ದಾರ್ ರವರ ಆದೇಶದಂತೆ ತಾಲ್ಲೂಕ್ ಸವೇಯರ್ ಮತ್ತು ಆರ್.ಐ. ರವರುಗಳು ಸರ್ವೆ ಮಾಡಿ ಸರ್ಕಾರಿ ನಕಾಶೆಯಲ್ಲಿದ್ದಂತೆ ಬಂಡಿ ಜಾಡನ್ನು ಸಾರ್ವಜನಿಕರ ಸಂಚಾರಕ್ಕಾಗಿ ಅವರ ಸಮುಖದಲ್ಲೇ ಮುಕ್ತಗೊಳಿಸಿಕೊಟ್ಟರು. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟು ಕೊಂಡಿದ್ದ  ಮೇಲಿನ ನಾಲ್ಕೂ ಜನರು ಸೇರಿ ತೆರುವಾಗಿದ್ದ ಬಂಡಿ ಜಾಡಿನಲ್ಲಿ ನಾವುಗಳು ತಿರುಗಾಡದಂತೆ ದಾರಿಗೆ ಗುಂಡಿಗಳನ್ನು ಹೊಡೆದು ನೀರನ್ನು ಬಿಟ್ಟು ಕೆಸರು ಮಾಡಿ ಅಡ್ಡಿ ಪಡಿಸಿದ್ದು, ನಾನು ಮತ್ತು ನಮ್ಮ ಅಣ್ಣ ಚೌಡಯ್ಯ ರವರು ನಮ್ಮ ಜಮೀನಿಗೆ ಹೋಗಲು ಈ  ದಿನ ಅದರೆ ದಿ: 21-04-2018 ರಂದು ಬಂಡಿ ಜಾಡಿನಲ್ಲಿದ್ದ ಗುಂಡಿಗಳನ್ನು ಮುಚ್ಚಿಸಲು ಸರ್ಕಾರಿ ಗೋಮಾಳದ ಬಳಿ ಇರುವ ಬಂಡಿ ಜಾಡಿಗೆ ಹೋದಾಗ ಮೇಲಿನ ಎಲ್ಲರೂ ಏಕಾಏಕಿ ನನ್ನ ಬಳಿಗೆ ಬಂದು ಬೋಳಿ ಮಗನೇ, ಸೂಳೇ ಮಗನೇ, ನಿಮ್ಮಪ್ಪನದೇನೋ ಜಾಗ, ನೀನಾರಾ ಇಲ್ಲಗೆ ಬರೋಕೆ ಎಂದು ಕೆಟ್ಟ ಕೆಟ್ಟದಾಗಿ ನನ್ನನ್ನು ಬೈದು, ಹನುಮೇಗೌಡನು ತಂದಿದ್ದ ಒಂದು ದೊಣ್ಣೆಯಿಂದ ನನ್ನ ಹೊಟ್ಟೆಗೆ ಹೊಡೆದನು. ಆಗ ನಾನು ನೋವಾಗಿ ಕೂಗಿಕೊಂಡು ನೆಲದ ಮೇಲೆ ಕುಳಿತುಕೊಂಡೆನು. ನನ್ನನ್ನು ಬಿಡಿಸಲು ಬಂದ ನಮ್ಮ ಅಣ್ಣ ಚೌಡಯ್ಯ ರವರನ್ನು ಎಲ್ಲರೂ ಹಿಡಿದುಕೊಂಡು ಕೈಗಳಿಂದ ಹೊಡೆದು, ನೆಲಕ್ಕೆ ಕೆಡವಿಕೊಂಡು ಕಾಲಿನಿಂದ ತಿಳಿದು, ನಮ್ಮನ್ನು ಕುರಿತು ಎಲ್ಲರೂ ಸೇರಿ ಇನ್ನೋಂದು ಸಾರಿ ಇಲ್ಲಿಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವೆಂತ ಪ್ರಾಣ ಬೆದರಿಕೆ ಹಾಕಿ ಹೊರಟು ಹೋದರು. ಹೋಗುವಾಗ  ಹನುಮೇಗೌಡನು ತನ್ನ ಕೈಯಲ್ಲಿದ್ದ ದೊಣ್ಣೆಯನ್ನು ನಮ್ಮ ಕಡೆಗೆ ಎಸೆದು ನಿಮಗೊಂದು ಗತಿ ಕಾಣಿಸುತ್ತೇನೆಂದು ಹೇಳಿಕೊಂಡು ಹೋದನು. ನಂತರ ನಾನು ಮತ್ತು ನಮ್ಮ ಅಣ್ಣ ಚೌಡಯ್ಯ ರವರು ನಮಗಾದ ಗಾಯಗಳಿಗೆ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಈ ಬಂದು ದೂರು ನೀಡುತ್ತಿದ್ದೇವೆ. ಆದ್ದರಿಂದ ನಮ್ಮ ಮೇಲೆ ಹಲ್ಲೆ ಮಾಡಿರುವ ತೂಬಿನಕೆರೆ ಗ್ರಾಮದ ಹನುಮೇಗೌಡ ಬಿನ್ ಚಿಕ್ಕಹನುಮಯ್ಯ ಮತ್ತು ಆತನ ಹೆಂಡತಿ ಬೋರಮ್ಮ ಹಾಗೂ ಆತನ ತಮ್ಮಂದಿರಾದ ಕೃಷ್ಣ, ಲಕ್ಷ್ಮಣ ರವರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್  ಠಾಣಾ ಮೊ ನಂ 33/2018 ಕಲಂ 279,337,304(a) IPC ಮತ್ತು  187 IMV Act

ದಿನಾಂಕ 23/04/2018 ರಂದು ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ದಯಾನಂದ,ಪಟ್ರೇಹಳ್ಳಿ,ಹೊನ್ನವಳ್ಳಿ ಹೋಬಳಿ,ತಿಪಟೂರು ತಾ,ರವರು ಬೆಳಿಗ್ಗೆ 06:15 ರಿಂದ 6:45 ಗಂಟೆಯವರೆಗೆ ನೀಡಿದ ಹೇಳಿಕೆಯ ಅಂಶವೇನೆಂದರೆ,ದಿನಾಂಕ 22/04/2018 ರಂದು ನಾನು ಮತ್ತು ವಿಠ್ಠಲಾಪುರದ ದಿಲೀಪ್ ,ನನ್ನ ಮಾವ ಚಂದ್ರಶೇಖರ ರವರನ್ನು ತಿಪಟೂರಿಗೆ ಕರೆಸಿಕೊಂಡು ಅವರ ಬೈಕ್ ಆದ KA 44 R 6098 ನೇ ಬಜಾಜ್ ಸಿ.ಟಿ.100 ದ್ವಿಚಕ್ರ ವಾಹನದಲ್ಲಿ ಮಂಜುನಾಥ ನಗರದ ಹತ್ತಿರ ರಸ್ತೆಯ ಎಡಭಾಗದಲ್ಲಿ ಹೋಗುತ್ತಿರುವಾಗ ರಾತ್ರಿ 11:50 ಗಂಟೆ ಸಮಯದಲ್ಲಿ ಹಿಂದಿನಿಂದ ಯಾವುದೋ  ಅಪರಿಚಿತ ಕಾರು ಅದರ ಚಾಲಕ ಅತಿವೇಗೆ ಮತ್ತು  ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ್ದರಿಂದ ನಾವುಗಳು ಬೈಕ್ ಸಮೇತ ಕೆಳಕ್ಕೆ ಬಿದ್ದೆವು ಈ ಅಪಘಾತದಲ್ಲಿ ನನಗೆ ಮತ್ತು ದಿಲೀಪ ಮತ್ತು ಚಂದ್ರಶೇಖರರವರಿಗೆ ಪೆಟ್ಟು ಬಿದ್ದಿರುತ್ತದೆ, ,ದಿಲೀಪ್ ರವರಿಗೆ ತಲೆಗೆ ಪಟ್ಟು ಬಿದ್ದು ತೀವ್ರ ರಕ್ತ ಸ್ರಾವ ವಾದ್ದರಿಂದ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ, , ಎಂತ ನೀಡಿದ ಹೇಳಿಕೆ ಮೇರೆಗೆ ಠಾಣಾ ಮೊ ನಂ 33/2018 ಕಲಂ 279,337,304(a) IPC ಮತ್ತು  187 IMV Act ರೀತ್ಯಾ ಪ್ರಕರಣ ದಾಖಲಿಸಿರುತ್ತದೆ.

ಕಳ್ಳಂಬೆಳ್ಳ  ಪೊಲೀಸ್‌ ಠಾಣಾ ಮೊ.ನಂ: 108/2018. ಕಲಂ-279, 304(ಎ) ಐಪಿಸಿ

ದಿನಾಂಕ:23/04/2018 ರಂದು 4-00 ಎ.ಎಂ. ಗಂಟೆಗೆ ಈ ಕೇಸಿನ ಪಿರ್ಯಾದಿ ಧನಲಕ್ಷ್ಮೀ ಕೋಂ ಸಿದ್ದಗಂಗಪ್ಪ, 37 ವರ್ಷ, ಬೋವಿ ಜನಾಂಗ, ಅಜ್ಜೇನಹಳ್ಳಿ ಕಾಲೋನಿ, ಕಳ್ಳಂಬೆಳ್ಳ ಹೋಬಳಿ, ಸಿರಾ ತಾಲ್ಲೂಕ್ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,  ನನಗೆ ಅಜ್ಜೇನಹಳ್ಳಿ ಕಾಲೋನಿಯ ಸಿದ್ದಗಂಗಪ್ಪ ರವರೊಂದಿಗೆ ಮದುವೆಯಾಗಿದ್ದು, 16 ವರ್ಷದ ತರುಣೇಶ್ , 15 ವರ್ಷದ ಪ್ರಭು ಎಂಬ ಇಬ್ಬರು ಗಂಡು ಮಕ್ಕಳಿರುತ್ತಾರೆ. ನಾನು ದಿನಾಂಕ: 19/04/2018 ರಂದು ನನ್ನ ಮಕ್ಕಳೊಂದಿಗೆ ನನ್ನ ತವರು ಮನೆಯಾದ ದಾಬಸ್ ಪೇಟೆ ಹತ್ತಿರ ಇರುವ ಬಾಪೂಜಿ ನಗರಕ್ಕೆ ಹೋಗಿದ್ದೆನು.  ದಿನಾಂಕ: 22/04/2018 ರಂದು ರಾತ್ರಿ ಸುಮಾರು 9-00 ಗಂಟೆ ಸಮಯದಲ್ಲಿ ನಾನು ನನ್ನ ತವರು ಮನೆಯಲ್ಲಿದ್ದಾಗ ನನ್ನ ಅಕ್ಕನ ಮಗ ಪವನ್ ನನಗೆ ಪೋನ್ ಮಾಡಿ ನಾನು ಮತ್ತು ಅಜ್ಜೇನಹಳ್ಳಿಯ ಮಂಜುನಾಥರವರೊಂದಿಗೆ ಈದಿನ ರಾತ್ರಿ ಸುಮಾರು 8-30 ಗಂಟೆಯಲ್ಲಿ ಕಳ್ಳಂಬೆಳ್ಳ ಬಸ್ ನಿಲ್ದಾಣದ ಹತ್ತಿರ ಮಾತನಾಡುತ್ತಾ ನಿಂತಿದ್ದೆವು, ಅದೇ ಸಮಯಕ್ಕೆ ಚಿಕ್ಕಪ್ಪ ಸಿದ್ದಗಂಗಪ್ಪರವರು ಸಹ ಅಲ್ಲಿಗೆ ಬಂದರು, ನಾನು ಎಲ್ಲಿಗೆ ಹೋಗುತ್ತಿಯಾ ಎಂತ ಕೇಳಿದೆ ಅದಕ್ಕೆ ಚಿಕ್ಕಪ್ಪ ನಿಮ್ಮ ಚಿಕ್ಕಮ್ಮ ಮತ್ತು ಮಕ್ಕಳನ್ನು ನೋಡಲು ಬಾಪೂಜಿನಗರಕ್ಕೆ ಹೋಗುತ್ತಿದ್ದೇನೆ ಎಂತ ತಿಳಿಸಿ ಬಾಪೂಜಿನಗರಕ್ಕೆ ಹೋಗಲು ಕಳ್ಳಂಬೆಳ್ಳ ಬಸ್ ನಿಲ್ದಾಣದ ಹತ್ತಿರ ಬಸ್ ಗಾಗಿ ರಸ್ತೆಯ ಬದಿ ಕಾಯ್ಯುತ್ತಾ ಚಿಕ್ಕಪ್ಪ ನಿಂತಿರುವಾಗ್ಗೆ, ಒಂದು ಕೆಎಸ್‌ಆರ್‌ಟಿಸಿ ಬಸ್ಸನ್ನು ಅದರ ಚಾಲಕ ಸಿರಾ ಕಡೆಯಿಂದ ಸಿರಾ-ತುಮಕೂರು ಎನ್.ಹೆಚ್.48 ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ಬಸ್ ಗಾಗಿ ಕಾಯ್ಯುತ್ತಾ ರಸ್ತೆಯ ಎಡ ಬದಿಯಲ್ಲಿ ನಿಂತಿದ್ದ ಚಿಕ್ಕಪ್ಪನಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ, ಈ ಡಿಕ್ಕಿ ಹೊಡೆದ ರಭಸಕ್ಕೆ ಚಿಕ್ಕಪ್ಪ ಎಗರಿ ಎಡಬದಿಯ ಸರ್ವಿಸ್ ರಸ್ತೆಯ ಮೇಲೆ ಬಿದ್ದರು.  ಇದನ್ನು ನೋಡಿದ ನಾನು ಮತ್ತು ಮಂಜುನಾಥ ಹತ್ತಿರ ಹೋಗಿ ನೋಡಲಾಗಿ, ಚಿಕ್ಕಪ್ಪ ಸಿದ್ದಗಂಗಪ್ಪ ರವರ ತಲೆಗೆ, ಮುಖಕ್ಕೆ, ಮೈಕೈಗೆ ಇತರೆ ಕಡೆ ಬಸ್ ಅಪಘಾತದಿಂದ ಪೆಟ್ಟುಬಿದ್ದು ರಸ್ತೆಯ ಮೇಲೆ ಒದ್ದಾಡುತ್ತಾ ಸ್ಥಳದಲ್ಲಿಯೇ ಮೃತಪಟ್ಟರು, ನಂತರ ಅಪಘಾತದ ವಿಚಾರ ತಿಳಿದು ಅಪಘಾತ ಸ್ಥಳಕ್ಕೆ ಬಂದ ಪೊಲೀಸ್ ನವರು ಹೈವೇ ಆಂಬ್ಯುಲೆನ್ಸ್ ನಲ್ಲಿ ಚಿಕ್ಕಪ್ಪನ ಶವವನ್ನು ಸಿರಾ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ತೆಗೆದುಕೊಂಡು ಹೋದರು, ಚಿಕ್ಕಪ್ಪನಿಗೆ ಅಪಘಾತ ಪಡಿಸಿದ ಕೆಎಸ್‌ಆರ್‌ಟಿ ಬಸ್ ನಂ. KA-17-F-1574 ಆಗಿದ್ದು, ಈ ಬಸ್ ಚಾಲಕನ ಹೆಸರು ದ್ಯಾಮಪ್ಪ ಬಿ ತಮ್ಮಣ್ಣನವರ್ ಆಗಿರುತ್ತೆ ಎಂತ ತಿಳಿಸಿದ,  ನಂತರ ನಾನು ನನ್ನ ತಂದೆ ತಾಯಿಯವರಿಗೆ ನಮ್ಮ ಯಜಮಾನರಿಗಾದ ಅಪಘಾತದ ವಿಚಾರತಿಳಿಸಿ ನಮ್ಮ ತವರು ಮನೆಯಿಂದ ಹೊರಟು ಅಜ್ಜೇನಹಳ್ಳಿಗೆ ಬಂದು ನಮ್ಮ ಸಂಬಂದಕರೊಂದಿಗೆ ಚರ್ಚಿಸಿ ಈಗ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ನಮ್ಮ ಯಜಮಾನರಾದ ಸಿದ್ದಗಂಗಪ್ಪರವರಿಗೆ ಅಪಘಾತಪಡಿಸಿ ಅವರ ಸಾವಿಗೆ ಕಾರಣನಾದ KA-17-F-1574 ನೇ ನಂಬರಿನ ಕೆಎಸ್‌ಆರ್‌ಟಿಸಿ ಬಸ್ ಚಾಲಕ ದ್ಯಾಮಪ್ಪ ಬಿ ತಮ್ಮಣ್ಣನವರ್ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸ ಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ನಂ. 108/2018, ಕಲಂ- 279, 304(ಎ) ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡು ಪ್ರಥಮ ವರ್ತಮಾನ ವರದಿಯನ್ನು ಘನ ನ್ಯಾಯಾಲಯಕ್ಕೆ ಹಾಗೂ ತುರ್ತು ವರ್ತಮಾನ ವರದಿಯನ್ನು ಇಲಾಖಾ ಮೇಲಾಧಿಕಾರಿಯವರಿಗೆ ಇ-ಮೇಲ್‌ ಮೂಲಕ ನಿವೇದಿಸಿಕೊಂಡಿರುತ್ತೆ.

ತಿಪಟೂರು ಗ್ರಾಮಾಂತರ ಠಾಣಾ ಮೊ ನಂ 34/2018 ಕಲಂ 279,337,ಐ.ಪಿ.ಸಿ

ದಿನಾಂಕ23/04/2018 ರಂದು ಮದ್ಯಾಹ್ನ 12-15 ಗಂಟೆಗೆ ಎಂ ಎಸ್  ಮಾದಿಹಳ್ಳಿ,ಕಸಬಾ ಹೋಬಳಿ,ತಿಪಟೂರು ತಾಲ್ಲೋಕು,ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,ದಿನಾಂಕ-22-04-2018 ರಂದು ನನ್ನ ತಮ್ಮನ ಮಗನಾದ ಧನಂಜಯ್ಯ ಬಿನ್ ರವೀಶರವರು ಮಾದಿಹಳ್ಳಿ ಹಾಲಿನ ಡೈರಿಗೆ ಹಾಲು ಹಾಕಿ ವಾಪಸ್ ಮನೆಗೆ ಹೋಗಲು ತನ್ನ ಬಾಬ್ತು KA-06 EC-5335 ನೇ ದ್ವಿಚಕ್ರ ವಾಹನದಲ್ಲಿ ರಾತ್ರಿ 07-30 ಗಂಟೆ ಸಮಯದಲ್ಲಿ ಮಾದಿಹಳ್ಳಿ ಗ್ರಾಮದಿಂದ ಎನ್ ಹೆಚ್ 206 ರಸ್ತೆಗೆ ಬಂದು ರಸ್ತೆಯ ಎಡ ಭಾಗ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಅಂದರೆ ಅರಸೀಕೆರೆ ಕಡೆಯಿಂದ ಬಂದು KA-18 F-765 ನೇ ಕೆ ಎಸ್ ಆರ್ ಟಿ ಸಿ ಬಸ್ ಚಾಲಕ  ತನ್ನ ವಾಹನವನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಹೊಡಸಿದಾಗ ಧನಂಜಯ್ಯರವರು ದ್ವಿಚಕ್ರವಾಹನ ಸಮೇತ ಕೆಳಕ್ಕೆ ಬಿದ್ದರು, ತಲೆಗೆ ಪೆಟ್ಟು ಬಿದ್ದಿರುತ್ತೆ. ಎಂತ ನೀಡಿದ ದೂರಿನ ಮೇರೆಗೆ ಠಾಣಾ ಮೊ ನಂ 34/2018 ಕಲಂ 279,337 ಐ.ಪಿ.ಸಿ ರೀತ್ಯಾ ಕೇಸು ದಾಖಲಿಸಿರುತ್ತದೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 79 guests online
Content View Hits : 322831