lowborn ಅಪರಾಧ ಘಟನೆಗಳು 23-04-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 23-04-18

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್ ನಂ 05/2018 ಕಲಂ 174 ಸಿ.ಆರ್.ಪಿ.ಸಿ.

 

ದಿನಾಂಕ:22-04-17 ರಂದು ಮಧ್ಯಾಹ್ನ 1-30 ಗಂಟೆಗೆ ಈ ಕೇಸಿನ ಪಿರ್ಯಾದಿ  ಶ್ರೀಮತಿ ನಂದಿನಿ ಕೋಂ  ಜಯರಾಮ್, ಟಿ.ಎಂ. ಮಂಜುನಾಥ ನಗರ, ರವರು  ಠಾಣೆಗೆ ಹಾಜರಾಗಿ ನೀಡಿದ  ಅರ್ಜಿಯ ಅಂಶವೆನೆಂದರೆ  ನಾನು ಈಗ್ಗೆ  10 ವರ್ಷಗಳ ಹಿಂದೆ  ಹಾಸನ ಜಿಲ್ಲೆಯ ಗುಂಡಕನಹಳ್ಳಿ ಗ್ರಾಮದ  ನಂಜುಂಡೇಗೌಡರ ಮಗ ಜಯರಾಮ್ ವರೊಂದಿಗೆ   ವಿವಾಹವಾಗಿದ್ದು  ಮನಗೆ 09 ವರ್ಷದ ಕುಂದನ  ಎಂಬ ಮಗಳಿರುತ್ತಾಳೆ. ಮದುವೆಯಾದಗಿನಿಂದಲೂ ನಾವಿಬ್ಬರೂ ಅನ್ಯೂನ್ಯವಾಗಿರುತ್ತೇವೆ. ನಾನು ನನ್ನ ತವರು ಮನೆ ಮಂಜುನಾಥ ನಗರದಲ್ಲಿ ಮಗ್ಗದ ಕೆಲಸಕ್ಕೆ  ಹೋಗುತ್ತಿರುತ್ತೇನೆ ನಮ್ಮ ಯಜಮಾನರು  ಸ್ವಲ್ಪ ದಿನ   ಕಾಯಿ ಫ್ಯಾಕ್ಟರಿಯಲ್ಲಿ  ಕೆಲಸ ಮಾಡುತ್ತಿದ್ದೆವು. ಹೀಗಿರುವಾಗ ನಮ್ಮ  ಯಜಮಾನರಿಗೆ  ಸುಮಾರು  06 ವರ್ಷಗಳಿಂದ ಬಿ.ಪಿ., ಷುಗರ್, & ಲಿವರ್  ಸಮಸ್ಯೆ ಇದ್ದು , ಈಗ್ಗೆ  04 ವರ್ಷಗಳಿಂದ ಅವರು ಸರಿಯಾಗಿ  ಮಾತನಾಡದೆ ಸಮಸ್ಯೆಯಾಗಿದ್ದು ಈ ಬಗ್ಗೆ  ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಕೊಡಿಸಿದ್ದೆವು  ನಮ್ಮ  ಅವರು  ಮಾನಸಿಕವಾಗಿ ಕೊರಗಿ ಮಾತಿನ ಮೇಲೆ ಹಿಡಿತವಿರಲಿಲ್ಲ ನಾವು ಅವರನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದೆವು  ಅವರ  ಸಂಬಧಿಕರು ಸಹ ಬಂದು ಹೋಗುತ್ತಿದ್ದರು. ಹೀಗಿರುವಾಗ  ದಿ:22-04-18 ರಂದು  ನಾನು & ನಮ್ಮ  ತಂದೆ ತಾಯಿ  ನನ್ನ ಮಗಳು  ಹಾಗೂ  ನನ್ನ  ತಮ್ಮನ  ಸಂಸಾರ  ಸಮೇತ  ಸಂಬಂಧಿಕರ ಮದುವೆಗೆ  ಚನ್ನರಾಯಪಟ್ಟಣ ತಾ. ನಾಗರನವಿಲೆಗೆ  ಬೆಳಿಗ್ಗೆ  9-30 ಗಂಟೆಗೆ ಹೊರೆಟೆವು ನಮ್ಮ  ಯಜಮಾನರು ಮನೆಯಲ್ಲೆ ಇದ್ದರು ನಾನು  ಸುಮಾರು 12-30 ಗಂಟೆ ಸಮಯದಲ್ಲಿ   ನನ್ನ  ತಮ್ಮ ಮುತ್ತುರಾಜ್  ಗೆ ಪೋನ್ ಮಾಡಿದಾಗ  ಆತನು ನನ್ನನ್ನು ಬೇಗ ಬಾ  ಎಂತಾ ಹೇಳಿದ  ನಾನು ವಿಚಾರ  ಮಾಡಲಾಗಿ  ಸದರಿ ವಿಚಾರ  ತಿಳಿಸಿದ್ದು  ನಾವೆಲ್ಲಾರೂ ನಮ್ಮ ಮನೆಗೆ  ಬಂದು ನೋಡಿದಾಗ ನಮ್ಮ ಯಜಮಾನರಾದ ಜಯರಾಮ್ ರವರು  ಮನೆಯ ತೊಲೆಗೆ  ನೇಣು ಹಾಕಿಕೊಂಡು ಆತ್ಮಹತ್ಯೆ  ಮಾಡಿಕೊಂಡು  ಮೃತಪಟ್ಟಿದ್ದರು  ನಮ್ಮ ಯಜಮಾನರು  ಮಾನಸಿಕವಾಗಿ ಕುಗ್ಗಿದ್ದರು ಅಲ್ಲದೆ  ಅವರಿಗೆ  ಆರೋಗ್ಯದ  ಸಮಸ್ಯೆಯಿಂದ  ಚಿಕಿತ್ಸೆ  ಪಡೆಯುತ್ತಿದ್ದು  ಇದರಿಂದ  ಜೀವನದಲ್ಲಿ ಜಿಗುಪ್ಸೆ ಹೊಂದಿ  ಚಿಂತೆ ಮಾಡಿಕೊಂಡು ತನ್ಮೂಲಕ ತಾನೇ  ನೇಣು ಹಾಕಿಕೊಂಡು  ಮೃತಪಟ್ಟಿರುತ್ತಾರೆ  ಇವರ   ಸಾವಿನಲ್ಲಿ ಯವುದೇ ಅನುಮಾವಿರುವುದಿಲ್ಲ ಮುಂದಿನ ಕಾನೂನು ಕ್ರಮ ಜರುಗಿಸಿ ಎಂತಾ ನೀಡಿದ  ದೂರಿನ ಪ್ರಕರಣ ದಾಖಲಿಸಿರುತ್ತೆ.

 

ತಿಪಟೂರು ನಗರ ಪೊಲೀಸ್ ಠಾಣಾ ಮೊ. ನಂ - 54/2018 ಕಲಂ:342,504,506,509, 420 ರೆ/ವಿ 34 ಐ.ಪಿ.ಸಿ.

ದಿನಾಂಕ:22/04/2018 ರಂದು ರಾತ್ರಿ 7-00 ಗಂಟೆಗೆ ತಿಪಟೂರು ಡಿ.ವೈ.ಎಸ್.ಪಿ ಕಛೇರಿಯಿಂದ ಟಪಾಲು ಮೂಲಕ ತಂದು ಹಾಜರುಪಡಿಸಿದ ಜ್ಞಾಪನವನ್ನು ಪಡೆದಿದ್ದು, ಸದರಿ ಜ್ಞಾಪನದ ಅಂಶವೇನೆಂದರೆ, ದಿನಾಂಕ:05/04/2018 ರಂದು ಪಿರ್ಯಾದಿ ಮಹೇಶ್ ರವರು ನೀಡಿರುವ ದೂರಿನ ಮೇರೆಗೆ ತಿಪಟೂರು ನಗರ ಠಾಣೆಯಲ್ಲಿ ಠಾಣಾ ಮೊ.ನಂ 41/2018 ಕಲಂ; 323,504,506,448,363 ರೆ/ವಿ 34 ಐ.ಪಿ.ಸಿ ಮತ್ತು 3(1) (r), 3(1) (s), 3(2) (Va) SC/ST (PA) Act-2015 ರೀತ್ಯಾ ಪ್ರಕರಣ ದಾಖಲು ಮಾಡಿದ್ದು, ಸದರಿ ಪ್ರಕರಣದಲ್ಲಿನ ಅಪಹರಣಕ್ಕೊಳಗಾದ ಎನ್ನಲಾದ ಸಂತ್ರಸ್ತೆ ಶೀತಲ್ ಪುರೋಹಿತ್ ರವರರಿಂದ ತುಮಕೂರು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿ.ಜೆ.ಎಂ ನ್ಯಾಯಾಲಯದಲ್ಲಿ ಕಲಂ; 164 ರೀತ್ಯಾ ಹೇಳಿಕೆಯನ್ನು ಪಡೆದಿದ್ದು, ಸದರಿ ಹೇಳಿಕೆಯ ಅಂಶವೇನೆಂದರೆ, ಮಹೇಶ್ ಹೆಚ್,ಎಂ ಎಂಬುವರ ಅಂಗಡಿಗೆ ಮೊಬೈಲ್ ರೀಚಾರ್ಜ ಮಾಡಿಸಲು ಹೋಗುತ್ತಿದ್ದು, ಆತನು ನನಗೆ ಕಳೆದ ಒಂದು ವರ್ಷದಿಂದ ಪರಿಚಯವಿರುತ್ತಾನೆ. ಆತನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ಮದುವೆಯಾಗಬೇಕೆಂದು ಪೀಡಿಸುತ್ತಿದ್ದ. ನಾನು ನಮ್ಮ ಮನೆಯಲ್ಲಿ ಒಪ್ಪುವುದಿಲ್ಲ ಎಂದು ಹೇಳುತ್ತಿದ್ದೆ. ಆದರೆ ಆತನು ಮದುವೆ ಮಾಡಿಕೊಳ್ಳದಿದ್ದರೆ ನಾನು ಸಾಯುತ್ತೇನೆಂದು ಬ್ಲೇಡಿನಿಂದ ಕೈಯನ್ನು ಕೊಯ್ದುಕೊಳ್ಳುತ್ತಿದ್ದ. ಮತ್ತು ನಾನು ಗೌಡ ಜನಾಂಗಕ್ಕೆ ಸೇರಿದವನೆಂದು ನನ್ನಲ್ಲಿ ಎರಡು ಕಾರುಗಳಿವೆ 10 ಎಕರೆ ಜಮೀನು ಇದೆ ಮತ್ತು ಎಂ.ಎ ಡಿಗ್ರಿ ಮಾಡಿದ್ದೇನೆ ಎಂದು ಹೇಳಿದ್ದನು. ದಿನಾಂಕ: 22/02/2018 ರಂದು ಮಹೇಶನು ಏನೋ ಮಾತನಾಡಬೇಕೆಂದು ಅವರ ಮನೆಗೆ ಕರೆದುಕೊಂಡು ಹೋಗಿದ್ದು, ನನ್ನ ಕೂಡಿ ಹಾಕಿ ನಂತರ ಮೊಬೈಲ್ ಕಿತ್ತುಕೊಂಡು ಹಾಸನದ ಶೆಟ್ಟಿಹಳ್ಳಿಯಲ್ಲಿರುವ ಅವರ ಅತ್ತೆಯ ಮನೆಗೆ ಕರೆದುಕೊಂಡು ಹೋಗಿ ಆ ಮನೆಯಲ್ಲಿದ್ದ ಅವರ ಅಣ್ಣ, ಅತ್ತಿಗೆ, ಮತ್ತು ಇನ್ನೊಬ್ಬ ಸಂಬಂದಲ್ಲಿ ತಮ್ಮ ಎಲ್ಲರೂ ನನ್ನನ್ನು ಎಲ್ಲಿಯೂ ಹೋಗದ ಹಾಗೆ ನಿರ್ಬಂಧ ವಿಧಿಸಿದರು. ನಂತರ ಹೊಸಹಳ್ಳಿ ಧರ್ಮಸ್ಥಳ, ಬೆಂಗಳೂರಿನ ರಾಜಗೋಪಾಲನಗರ ಮತ್ತು ತಿರುಪತಿಗೆ ಕರೆದುಕೊಂಡು ಹೋಗಿದ್ದು, ನಂತರ ದಿನಾಂಕ: 09/03/2018 ರಂದು ಬೆಂಗಳೂರಿನಲ್ಲಿ ರಘುರಾಮ್ ಎಂಬ ನ್ಯಾಯವಾದಿಯಿಂದ ಹಣ ಕೊಟ್ಟು, ಮಹೇಶನ ಅತ್ತಿಗೆ ರಾಧ ಮತ್ತು ಅಣ್ಣ ಧರ್ಮ ಎಂಬುವರು ನನ್ನ ಅಕ್ಕ ಭಾವ ಎಂದು ನಟಿಸಿ ವಿವಾಹ ನೊಂದಣಿ ಮಾಡಿಸಿ ಅದೇ ದಿನ ದೃಡೀಕರಣ ಪತ್ರ ತೆಗೆದುಕೊಂಡಿರುತ್ತಾರೆ. ಮತ್ತು ನಿಮ್ಮ ಮನೆಯವರ ಜೊತೆ ಮಾತನಾಡಿ ನಿನ್ನ ಕುಟುಂಬದವರ ಜೊತೆ ಹೋದರೆ ಸಾಯುತ್ತೇನೆಂದು ಬೆದರಿಕೆಯನ್ನು ಹಾಕಿದ್ದು, ತಿಪಟೂರು ನಗರ ಠಾಣೆಗೆ ಬಂದು ಹೇಳಿಕೆಯನ್ನು ನೀಡಿ ನಂತರ ಮಹೇಶನ ಜೊತೆಯಲ್ಲಿ ಅವರ ಮನೆಗೆ ಹೋಗಿದ್ದೆನು. ಮಹೇಶನು ಕುಡಿದುಕೊಂಡು ಮನೆಗೆ ಬಂದು ಹೊಡೆಯುವುದು ಬಡಿಯುವುದು ಮಾಡುತ್ತಾ ಕೋಣೆಯ ಒಳಗೆ ಕೂಡಿ ಹಾಕಿರುತ್ತಾನೆ.ನಂತರ ನನ್ನ ಅಣ್ಣ ಮತ್ತು ಚಿಕ್ಕಪ್ಪ ಕೌನ್ಸಿಲರ್ ಪ್ರಸನ್ನಕುಮಾರ್ ಜೊತೆ ಮನೆಗೆ ಬಂದಿದ್ದು, ಆ ವೇಳೆಯಲ್ಲಿ ಎಲ್ಲಾ ವಿಚಾರವನ್ನು ತಿಳಿಸಿ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಹೇಳಿದ್ದೆ. ದಿನಾಂಕ: 03/04/2018 ರಂದು ಮಹೇಶನು ಇನ್ನು ಸಾಂಪ್ರದಾಯವಾಗಿ ಮದುವೆಯಾಗಿಲ್ಲದೇ ಇದ್ದುದರಿಂದ ದಿನಾಂಕ: 20/04/2018 ಮದುವೆ ನಿಶ್ಚಯ ಮಾಡಿಕೊಂಡು ಮದುವೆಯ ಕರೆಯೋಲೆ ಮಾಡಿಸಲು ಹೋಗಿದ್ದು, ತಂಗಿ ಸ್ನಾನ ಮಾಡಲು ಹೋಗಿದ್ದು, ಈ ಸಮಯದಲ್ಲಿ ನಾನು ಮನೆಯಿಂದ ತಪ್ಪಿಸಿಕೊಂಡು ನಮ್ಮ ಮನೆಗೆ ಹೋಗಿದ್ದು, ನಮ್ಮ ಅಣ್ಣ ನನ್ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲು ಹೋಗುತ್ತಿರುವಾಗ ಮಹೇಶ್ ಕಾರಿನಲ್ಲಿ ಬಂದವನೆ ನನ್ನನ್ನು ಎಳೆದುಕೊಂಡು ಹೋಗಲು ಪ್ರಯತ್ನ ಪಟ್ಟಾಗ ನಾವು ವಾಹನದಿಂದ ಬಿದ್ಗದಿರುತ್ತೇವೆ. ಆಗ ಮಹೇಶ ಅಣ್ಣನನ್ನು ಮತ್ತು ನನ್ನನ್ನು ಕೆಟ್ಟ ಕೆಟ್ಟ ಮಾತುಗಳಿಂದ ಬೈಯುತ್ತಾ ಬಂದುಬಿಟ್ಟಿದ್ದೀಯಾ ನಿನ್ನನ್ನು ಬಿಡುವುದಿಲ್ಲ ಎಂದು ಹೇಳಿದ್ದು, ನಂತರ ಅಲ್ಲಿ ಜನ ಸೇರಿದ್ದು  ಹೊರಟು ಹೋಗಿರುತ್ತಾನೆ. ಮಹೇಶನು ಪರಿಶಿಷ್ಟ ಜಾತಿಗೆ ಸೇರಿದವನೆಂದು ನನ್ನ ಶಾಲಾ ವರ್ಗಾವಣೆಯ  ಪ್ರ.ಪ್ರತ್ರವನ್ನು ಕೇಳಿದಾಗ ಗೊತ್ತಾಗಿರುತ್ತೆ. ಮತ್ತು ಅದಕ್ಕೋಸ್ಕರವೇ ಮದುವೆ ನೋಂದಣಿ ಮಾಡಿಸಿರುತ್ತಾರೆಂದು ಗೊತ್ತಾಗಿರುತ್ತೆ. ಎಂದು ಹೇಳಿಕೆಯನ್ನು ನೀಡಿದ್ದು, ಸದರಿ ಹೇಳಿಕೆಯ ಮೇರೆಗೆ ಮುಂದಿನ ಕ್ರಮದ ಬಗ್ಗೆ ನೀಡದ ಜ್ಞಾಪನವನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 71 guests online
Content View Hits : 272938