lowborn ಅಪರಾಧ ಘಟನೆಗಳು 21-04-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ.16/08/2018 ತುಂಬೆ (ತುಮಕೂರು ಬೈಸಿಕಲ್ ಪೊಲೀಸ್)     ಜನಸ್ನೇಹಿ... >> :: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 21-04-18

ಹೊನ್ನವಳ್ಳಿ ಪೊಲೀಸ್ ಠಾಣೆ      ಮೊ ನಂ 22/2018 ಕಲಂ:87 ಕೆ ಪಿ ಆಕ್ಟ್

ದಿನಾಂಕ:20.04.2018 ರಂದು ಸಾಯಂಕಾಲ 4-30 ಗಂಟೆ ಸಮಯದಲ್ಲಿ ಹೊನ್ನವಳ್ಳಿ ಪೊಲೀಸ್‌ ಠಾಣಾ ಪಿ.ಎಸ್.ಐ.ರವರಾದ ಶ್ರೀ ಪ್ರದೀಪ್‌‌ಸಿಂಗ್‌ರವರು ಪಿ.ಸಿ.676 ರಂಗಸ್ವಾಮಿ‌‌‌ರವರೊಂದಿಗೆ ಠಾಣೆಗೆ ಕಳುಹಿಸಿಕೊಟ್ಟ ಜ್ಞಾಪನ ಪತ್ರವನ್ನು ಪರಿಶೀಲಿಸಲಾಗಿ ನಾನು ಸಾಯಂಕಾಲ 4 ಗಂಟೆ ಸಮಯದಲ್ಲಿ ಠಾಣೆಯಲ್ಲಿರುವಾಗ ನನಗೆ ಬಂದ ಮಾಹಿತಿ ಮೇರೆಗೆ ನಾನು, ಪಿ.ಸಿ.975 ಭೈರೇಶ್‌‌‌‌, ಮತ್ತು ಪಿ.ಸಿ.676 ರಂಗಸ್ವಾಮಿ, ಮತ್ತು ಪಿ.ಸಿ.686 ಪ್ರಶಾಂತ್‌‌‌ರವರೊಂದಿಗೆ ಮಾಹಿತಿ ಬಂದ ಸ್ಥಳವಾದ ತಿಪಟೂರು ತಾ: ಹೊನ್ನವಳ್ಳಿ ಹೋಬಳಿ, ಆಲೂರು ಕೆರೆಯ ಸಮೀಪ ಬಾರೆ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಸುಮಾರು 08 ರಿಂದ 10 ಜನರು ವೃತ್ತಾಕಾರವಾಗಿ ಕುಳಿತುಕೊಂಡು ಕೈಗಳಲ್ಲಿ ಇಸ್ಟೀಟ್‌ ಎಲೆಗಳನ್ನು ಹಿಡಿದುಕೊಂಡು ಒಳಗೆ ಹೊರಗೆ ಎಂದು ಜೋರಾಗಿ ಹೇಳಿಕೊಳ್ಳುತ್ತಾ ಹಣವನ್ನು ಪಣವಾಗಿ ಕಟ್ಟಿಕೊಂಡು ಅಕ್ರಮವಾದ ಅಂದರ್‌ ಬಾಹರ್‌‌ ಎಂಬ  ಇಸ್ಪೀಟ್‌ ಜೂಜಾಟ ಆಡುತ್ತಿರುವುದು ಕಂಡು ಬಂದಿರುತ್ತೆ.  ಆದ್ದರಿಂದ ಸದರಿ ಇಸ್ಪೀಟ್‌‌ ಜೂಜಾಟದ ಮೇಲೆ ಧಾಳಿ ಮಾಡಿ ಇಸ್ಪೀಟ್‌‌ ಜೂಜಾಟ ಆಡುತ್ತಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾಗಿರುವುದರಿಂದ ನೀವು ಸದರಿ ಜ್ಞಾಪನವನ್ನು ಪಡೆದು ದೂರು ದಾಖಲಿಸಿ, ಧಾಳಿ ಮಾಡಲು ಘನ ನ್ಯಾಯಾಲಯದ ಅನುಮತಿ ಕೋರಿಕೊಳ್ಳಲು ನಿಮಗೆ ಸೂಚಿಸಲಾಗಿದೆ ಎಂಬುದಾಗಿ ಇದ್ದ ಮೇರೆಗೆ ಠಾಣಾ ಎನ್.ಸಿ.ಆರ್. ನಂ.77/2018 ದಿನಾಂಕ:20.04.2018 ರಲ್ಲಿ ನೊಂದಾಯಿಸಿಕೊಂಡಿರುತ್ತೆ. ಘನ ನ್ಯಾಯಾಲಯದಲ್ಲಿ  ಪ್ರಕರಣ ದಾಖಲಿಸಿ ಆರೋಪಿತರುಗಳ ಮೇಲೆ ದಾಳಿ ಮಾಡಲು  ಅನುಮತಿ ಕೋರಿದ್ದು ಘನ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ಸಂಜೆ 7-00 ಗಂಟೆಗೆ ಠಾಣಾ ಮೊ ನಂ 22/2018 ಕಲಂ:87 ಕೆ ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 96/2018 ಕಲಂ 87ಕೆ.ಪಿ.ಆಕ್ಟ್

ದಿನಾಂಕ-20/04/2018 ರಂದು ರಾತ್ರಿ 7-30 ಗಂಟೆಗೆ ಘನ ನ್ಯಾಯಾಲಯದಿಂದ ಹೆಚ್ ಸಿ 37 ರವರು ಎನ್‌,ಸಿ,ಆರ್‌ ನಂ-157/2018 ನ್ನು ಎಫ್ ಐ  ಆರ್ ಆಗಿ ದಾಖಲಿಸಲು ಅನುಮತಿಯನ್ನು ಪಡೆದು ಠಾಣೆಗೆ ಹಾಜರುಪಡಿಸಿದ ಅಂಶವೇನೆಂಧರೆ ಹೆಬ್ಬೂರು ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ರವರಾದ ಶ್ರೀ ಮುರುಳಿ,ಟಿ ರವರು ತಮ್ಮ ಸಿಬ್ಬಂದಿಯವರೊಂದಿಗೆ ಒಂದು ಖಾಸಗಿ ವಾಹನದಲ್ಲಿ ನಮ್ಮ ಬಳಿಗೆ ಬಂದು ತಮ್ಮ ಠಾಣೆಯ ಸದರಿ ಎನ್ ಸಿ ಆರ್ ನ ವಿಚಾರವನ್ನು ನಮಗೆ ತಿಳಿಸಿ, ಸಾಯಂಕಾಲ ಸುಮಾರು 04-00 ಗಂಟೆಗೆ ಹೆಬ್ಬೂರಿನ ಗಾಯಿತ್ರಿ ಕಲ್ಯಾಣ ಮಂಟಪದ ಹಿಂಭಾಗದಲ್ಲಿರುವ ಗದ್ದೆ ಬೈಲಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ವೆಂಕಟೇಶ್‌, ಮನೋಹರ್ ಹಾಗೂ ಇತರರು ಅಕ್ರಮವಾಗಿ ಹಣವನ್ನು ಸಂಪಾದನೆ ಮಾಡುವ ಉದ್ದೇಶದಿಂದ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಎಂಬ ಇಸ್ಪೀಟು ಜೂಜಾಟವಾಡುತ್ತಿರುತ್ತಾರೆ ಎಂತಾ ಖಚಿತ ಮಾಹಿತಿ ಬಂದಿದ್ದು, ನಾವುಗಳು ದಾಳಿ ನಡೆಸಿ ಅವರುಗಳನ್ನು ಹಿಡಿಯಬೇಕು ಆ ಸಮಯದಲ್ಲಿ ನೀವುಗಳು ಪಂಚರಾಗಿ ಬಂದು ಸಹಕರಿಸಬೇಕೆಂತಾ ಕೇಳಿಕೊಂಡಿದ್ದರ ಮೇರೆಗೆ ನಾವುಗಳು ಒಪ್ಪಿ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಖಾಸಗಿ ವಾಹನದಲ್ಲಿ ಹೊರಟು ಹೆಬ್ಬೂರಿನ ಗಾಯಿತ್ರಿ ಕಲ್ಯಾಣ ಮಂಟಪದ ಬಳಿ ವಾಹನವನ್ನು ನಿಲ್ಲಿಸಿ, ಎಲ್ಲರೂ ಕೆಳಗೆ ಇಳಿದು ಕಲ್ಯಾಣ ಮಂಟಪದ ಮರೆಯಲ್ಲಿ ನಿಂತು ನೋಡಲಾಗಿ, 04 ಜನ ಆಸಾಮಿಗಳು ವೃತ್ತಾಕಾರವಾಗಿ ಕುಳಿತುಕೊಂಡು ಇಸ್ಪೀಟು ಜೂಜಾಟ ಆಡುತ್ತಿದ್ದು, ಒಳಗೆ 100 ರೂಪಾಯಿ, ಹೊರಗೆ 100 ರೂಪಾಯಿ ಎಂತಾ ಕೂಗಾಡುತ್ತಿದ್ದವರನ್ನು ಸಬ್ ಇನ್ಸ್‌ಪೆಕ್ಟರ್‌ ರವರು ಹಾಗೂ ಸಿಬ್ಬಂದಿಯವರು ಸುತ್ತುವರೆಯುತ್ತಿದ್ದಂತೆ ಒಬ್ಬ ಆಸಾಮಿಯು ಸ್ಥಳದಿಂದ ಓಡಿ ಹೋಗಿದ್ದು, ನಂತರ ಉಳಿಕೆ ಮೂರು ಜನರನ್ನು ಮೇಲಕ್ಕೆ ಏಳದಂತೆ ತಾಕೀತು ಮಾಡಲಾಗಿ, 03 ಜನ ಆಸಾಮಿಗಳ ಪೈಕಿ ಒಬ್ಬ ಆಸಾಮಿಯ ಕೈಯಲ್ಲಿ ಇಸ್ಪೀಟು ಎಲೆಗಳಿದ್ದು, ಆತನ ಹೆಸರು ವಿಳಾಸ ಕೇಳಲಾಗಿ 1) ವೆಂಕಟೇಶ್‌ ಬಿನ್ ಗೋವಿಂದಶೆಟ್ಟಿ, 52 ವರ್ಷ, ಬಲಜಿಗರು, ಬಸ್‌ ಏಜೆಂಟ್‌, ಹೆಬ್ಬೂರು, ತುಮಕೂರು ತಾಲ್ಲೂಕು & ಜಿಲ್ಲೆ ಎಂತಾ ತಿಳಿಸಿದನು. ಆತನ ಬಲಮಗ್ಗುಲಲ್ಲಿ ಕುಳಿತ್ತಿದ್ದವರ ಹೆಸರು ವಿಳಾಸವನ್ನು ಕ್ರಮವಾಗಿ ಕೇಳಲಾಗಿ, 2) ಮನೋಹರ್‌ ಬಿನ್ ಕೃಷ್ಣಪ್ಪ, 35 ವರ್ಷ, ಬಲಜಿಗರು, ಬಾಳೆಕಾಯಿ ಮಂಡಿಯಲ್ಲಿ ಕೆಲಸ, ನಾಡ ಕಛೇರಿ ರಸ್ತೆ, ಹೆಬ್ಬೂರು, ತುಮಕೂರು ತಾಲ್ಲೂಕು & ಜಿಲ್ಲೆ 3) ಹರ್ಷ ಬಿನ್ ಲೇ|| ಅಲ್ಲಾಭರಮಯ್ಯ, 40 ವರ್ಷ, ಒಕ್ಕಲಿಗರು, ವ್ಯವಸಾಯ, ಹೆಬ್ಬೂರು, ತುಮಕೂರು ತಾಲ್ಲೂಕು & ಜಿಲ್ಲೆ ಎಂತಾ ತಿಳಿಸಿದರು. ನಂತರ ಓಡಿ ಹೋದ ಆಸಾಮಿಯ ಹೆಸರು ವಿಳಾಸ ತಿಳಿಯಲಾಗಿ 4) ಅಸ್ಲಾಂ, ಮಾರುತಿ ಚೌಕ, ಹೆಬ್ಬೂರು ಎಂತಾ ತಿಳಿಸಿದರು. ನಂತರ ಆಸಾಮಿಗಳು ಅಖಾಡದಲ್ಲಿ ಪಣವಾಗಿಟ್ಟಿದ್ದ ಹಣವನ್ನು ಎಣಿಸಲಾಗಿ 2,600/- ರೂಗಳಿದ್ದವು, ಆಟಕ್ಕೆ ಉಪಯೋಗಿಸಿದ್ದ ಇಸ್ಪೀಟು ಎಲೆಗಳನ್ನು ಎಣಿಸಲಾಗಿ 52 ಇಸ್ಪೀಟು ಎಲೆಗಳಿದ್ದವು. ನಂತರ ಸಬ್‌ ಇನ್ಸ್‌ಪೆಕ್ಟರ್‌ ರವರು ಜೂಜಾಟವಾಡಲು ಪಣವಾಗಿಟ್ಟಿದ್ದ 2,600/- ರೂಗಳನ್ನು, ಆಟಕ್ಕೆ ಉಪಯೋಗಿಸಿದ್ದ 52 ಇಸ್ಪೀಟು ಎಲೆಗಳನ್ನು ಹಾಗೂ ಆಟಕ್ಕೆ ಉಪಯೋಗಿಸಿದ್ದ ಒಂದು ಹಳೆಯ ನ್ಯೂಸ್‌ ಪೇಪರ್‌ ಅನ್ನು ಪಂಚನಾಮೆ ಕ್ರಮ ಜರುಗಿಸಿ ಅಮಾನತ್ತು ಪಡಿಸಿಕೊಂಡು, ಸದರಿ 03 ಜನ ಆಸಾಮಿಗಳನ್ನು ವಶಕ್ಕೆ ಪಡೆದು ಠಾಣೆಗೆ ಬಂದು ನ್ಯಾಯಾಲಯ ಅನುಮತಿ ಪಡೆದು ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಯು.ಡಿ.ಆರ್ ನಂ-10/2018 ಕಲಂ; 174 ಸಿ.ಆರ್.ಪಿ.ಸಿ

ದಿನಾಂಕ:20/04/2018 ರಂದು ಸಂಜೆ 5-15 ಗಂಟೆಗೆ ಪಿರ್ಯಾದಿ ಗಿರಿಯಪ್ಪ ಬಿನ್ ಲೇಟ್ ಸಣ್ಣಪ್ಪ ತಮಿಳ್ ಕಾಲೋನಿ, ಅಲ್-ಅಮೀನ್ ನಗರ, ಎಸ್.ಆರ್ ಗುರುರಾಜು ರವರ ತೋಟದ ಮನೆ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಮಗೆ 19 ವರ್ಷದ ಒಬ್ಬಳು ಲೀಲಾ ಎಂಬ ಮಗಳು ಹಾಗೂ 11 ವರ್ಷದ ಭರತ್ ಎಂಬ ಇಬ್ಬರು ಮಕ್ಕಳಿದ್ದು, ಮಗಳು ಗಂಡನ ಮನೆಯಲ್ಲಿ ಇದ್ದು, ಭರತ್ ಈ ವರ್ಷ 6ನೇ ತರಗತಿ. ಈ ದಿನ ದಿನಾಂಕ: 20/04/2018 ರಂದು ಬೆಳಿಗ್ಗೆ 11-00 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ವೇದಾವತಿ ಇಬ್ಬರು ತಿಪಟೂರಿನ ಜೆ.ಡಿ.ಎಸ್ ಪಕ್ಷದ ನಾಮಪತ್ರ ಸಲ್ಲಿಸುವ ಸಂಬಂಧ ಮೆರವಣಿಗೆ ಹೋಗಲು ಮನೆ ಬಿಟ್ಟಿದ್ದು, ನನ್ನ ಮಗ ಮನೆಯಲ್ಲಿ ಒಬ್ಬನೆ ಇದ್ದನು. ಹೋಗುವಾಗ ಮಗನು ಹೊಟ್ಟೆನೋವು ಬರುತ್ತಿದೆ ಎಂದು ಹೇಳುತ್ತಿದ್ದು, ಮಧ್ಯಾಹ್ನ ಆಸ್ಪತ್ರೆಗೆ ತೋರಿಸುವುದಾಗಿ ತಿಳಿಸಿ ಹೋಗಿದ್ದೆವು. ನಂತರ ಮೆರವಣಿಗೆ ಮುಗಿಸಿ ಮಧ್ಯಾಹ್ನ 3-00 ಗಂಟೆಗೆ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲು ಹಾಕಿದ್ದು, ಕೂಗಿದರೂ ಸಹ ಬಾಗಿಲು ತೆಗೆಯಲಿಲ್ಲ. ನಂತರ ನಾನು ಮತ್ತು ಗುರುರಾಜು ಇಬ್ಬರು ಆರೆಯಿಂದ ಬಾಗಿಲನ್ನು ಮೀಟಿ ಒಳಗಡೆ ನೋಡಲಾಗಿ ನನ್ನ ಮಗ ಭರತ್ ಮನೆಯ ಸಿಮೆಂಟಿನ ಸೀಟಿನ ತೀರಿಗೆ ಸೀರೆಯಿಂದ ಬಿಗಿದು ನೇಣು ಹಾಕಿಕೊಂಡು ಸತ್ತುಹೋಗಿರುತ್ತಾನೆ. ನನ್ನ ಮಗನಿಗೆ ಹೊಟ್ಟೆನೋವು ಜಾಸ್ತಿಯಾಗಿದ್ದರಿಂದ ನೋವು ತಾಳಲಾರದೆ ಆತನೇ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಇವನ ಸಾವಿನಲ್ಲಿ ಯಾವುದೇ ಅನುಮಾನ ಇರುವುದಿಲ್ಲ. ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಯು.ಡಿ.ಆರ್ ಪ್ರಕರಣ ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 77 guests online
Content View Hits : 322830